Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Tuesday, 05 September 2006 04:36 PM

ಗಡಿವಿವಾದ: ಕೇಂದ್ರ ಸರ್ಕಾರದ ವಿರುದ್ಧ ಧರಣಿ

ಶ್ರೀರಂಗಪಟ್ಟಣ ಮತ್ತು ಬೆಂಗಳೂರು : ಕೇಂದ್ರ ಸರ್ಕಾರವು ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದಲ್ಲಿ ಮಹಾರಾಷ್ಟ್ರದ ಪರವಹಿಸುತ್ತಿದೆ ಎಂದು ಕರ್ನಾಟಕ ರಕ್ಷಣಾವೇದಿಕೆ ಆರೋಪಿಸಿದೆ.

ಕೇಂದ್ರ ಮತ್ತು ಮಹಾರಾಷ್ಟ್ರದ ಕಾರ್ಯವೈಖರಿಯನ್ನು ವಿರೋಧಿಸಲು ಮಂಡ್ಯ-ಮೈಸೂರು ರಸ್ತೆಯಲ್ಲಿ ವೇದಿಕೆ ಧರಣಿಯನ್ನು ಸೋಮವಾರ ಹಮ್ಮಿಕೊಂಡಿತ್ತು.

ಕನ್ನಡ ರಕ್ಷಣಾ ವೇದಿಕೆಯ ಉಪಾಧ್ಯಕ್ಷರಾದ ಸಿ. ಶಂಕರ್ `ಕೇಂದ್ರ ಸರ್ಕಾರವು ನಮ್ಮೊಂದಿಗೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಹೇಳಿದರು.

ಕರ್ನಾಟಕ ರಕ್ಷಣಾವೇದಿಕೆ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಅನೇಕ ಸ್ಥಳೀಯ ರಾಜಕೀಯ ಸಂಘಟನೆಗಳು ಭಾಗವಹಿಸಿದ್ದವು.

ಇತ್ತ ಬೆಂಗಳೂರಿನಲ್ಲಿ ಗಡಿ ವಿವಾದದ ವಿಷಯದಲ್ಲಿ ಕೇಂದ್ರದ ನಿಲುವನ್ನು ಖ್ಯಾತ ಕನ್ನಡ ಸಂಶೋಧಕ ಚಿದಾನಂದ ಮೂರ್ತಿ ಖಂಡಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ನಿರ್ಣಯದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

`ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ, ಮಹಾಜನ್ ವರದಿಯೇ ಅಂತಿಮ. ಕೇಂದ್ರ ವ್ಯತಿರಿಕ್ತವಾಗಿ ವರ್ತಿಸಿದರೆ ಮುಂದೆ ನಡೆಯುವ ಧರಣಿ, ಕೋಲಾಹಲಗಳಿಗೆ ಕೇಂದ್ರವೇ ಹೊಣೆ ಎಂದು ಚಿದಾನಂದಮೂರ್ತಿ ಸುದ್ದಿಗಾರರಿಗೆ ಹೇಳಿದ್ದಾರೆ.

ಕೇಂದ್ರದ ನಿಲುವು ಹಾಗೂ ಕೇಂದ್ರ ಸಚಿವ ಶಿವರಾಜ್ ಪಾಟೀಲ್ ವಿರುದ್ಧ ಅಖಿಲ ಭಾರತ ಪ್ರಜಾಪರಿಷತ್‌ನ ಸದಸ್ಯರು ಪರಕೆ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

ಇನ್ನಷ್ಟು

ಪೆಪ್ಸಿ ಕೋಲಾಗಳಿಗೆ ಭಾಗಶಃ ತಡೆ

ಅಬು ಸಲೇಂಗೆ ರಾಜಕೀಯ ಸೆಳೆತ!

ಖ್ಯಾತ ಪರಿಸರವಾದಿ, ಪ್ರಾಣಿಗಳ ರಕ್ಷಕ `ಕ್ರೊಕೊ' ಹತ

`ರಾಷ್ಟ್ರಕವಿ' ಪ್ರಶಸ್ತಿ ಆಯ್ಕೆ ಸಮಿತಿಗೆ ದೇಜಗೌ ಮುಖ್ಯಸ್ಥ

ಯುಪಿಎಸ್‌ಸಿ ಅಭ್ಯರ್ಥಿಗಳಿಗೆ ಮಾಹಿತಿ ಹಕ್ಕು

ಚೆನ್ನೈನಲ್ಲಿ ಸೆಟೆಲೈಟ್ ಸಿಟಿ ನಿರ್ಮಾಣ ಇಲ್ಲ: ಕರುಣಾನಿಧಿ

ಅಲ್-ಖೈದಾ ಪ್ರಮುಖ ನಾಯಕನ ಬಂಧನ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com