ಬೆಂಗಳೂರು ಸಾರಿಗೆ ಸಂಸ್ಥೆಯಿಂದ ಹೆಚ್ಚಿನ ಪ್ರಯಾಣ
ಸೇವೆ
ಬೆಂಗಳೂರು: ಬೆಂಗಳೂರು ಮಹಾನಗರ
ಸಾರಿಗೆ ಸಂಸ್ಥೆಯು ೪೦೦ಕ್ಕೂ ಅಧಿಕ ನಿಗದಿತ ಪ್ರಯಾಣ ಸೇವೆಯನ್ನು
ನೀಡುವುದಾಗಿ ಸಾರಿಗೆ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದ್ದಾರೆ.
`ಜನದಟ್ಟಣೆ ಹೆಚ್ಚಾಗಿರುವ ಮಾರ್ಗಗಳಲ್ಲಿ
ಬಸ್‌ಗಳನ್ನು ಅಧಿಕವಾಗಿ ಸೇವೆಗೆ ಬಿಡಲಾಗುವುದು ಜೊತೆಗೆ ಬೆಳಗ್ಗೆ
೭, ೧೧ ಹಾಗೂ ಸಂಜೆ ೪, ರಾತ್ರಿ ೮ಕ್ಕೆ ಹೆಚ್ಚಿನ ಪ್ರಯಾಣ ಸೇವೆಯಾಗಿ
ಬಸ್‌ಗಳು ಹೊರಡಲಿದೆ
ಎಂದು ಸಚಿವರು ಹೇಳಿದ್ದಾರೆ.
ಮಹಿಳೆಯರಿಗೆ ಇರುವ ಪ್ರತ್ಯೇಕ ಬಸ್‌ಗಳನ್ನು
ಹೆಚ್ಚಿಸಲಾಗುವುದು. ರೋಗಿಗಳಿಗೆ ಇರುವ ವಿಶೇಷ ವಾಹನ ವ್ಯವಸ್ಥೆಯನ್ನು
ಸಮರ್ಪಕವಾಗಿ ಸಾರ್ವಜನಿಕರು ಬಳಸಿಕೊಳ್ಳಬೇಕೆಂದರು.
ಮುಂದಿನ ಯೋಜನೆಯಂತೆ ಶಾಂತಿನಗರದಲ್ಲಿರುವ
ಕೆಎಸ್‌ಆರ್‌ಟಿಸಿ ಮುಖ್ಯಕಚೇರಿ ಎದುರು ವಿವಿಧ ಉದ್ದೇಶಗಳಿಗಾಗಿ ವಾಣಿಜ್ಯ ಸಂಕೀರ್ಣವನ್ನು
ಸ್ಥಾಪಿಸಲಾಗುವುದು ಎಂದರು. ಮೈಸೂರು ನಗರದಲ್ಲಿ ಮೊದಲ ಬಾರಿಗೆ
ಎಲೆಕ್ಟ್ರಿಕ್ ಬಸ್ ಸೇವೆಯನ್ನು ಪ್ರಾರಂಭಿಸಲು ಸರ್ಕಾರವು ರೈಟ್ ಸಂಸ್ಥೆಯೊಡನೆ
ಚರ್ಚಿಸುತ್ತಿದೆ ಎಂದು ಸಾರಿಗೆ ಸಚಿವರು ಹೇಳಿದರು.
ಇನ್ನಷ್ಟು
ಪೆಪ್ಸಿ ಕೋಲಾಗಳಿಗೆ ಭಾಗಶಃ ತಡೆ
ಅಬು ಸಲೇಂಗೆ ರಾಜಕೀಯ ಸೆಳೆತ!
ಖ್ಯಾತ ಪರಿಸರವಾದಿ, ಪ್ರಾಣಿಗಳ ರಕ್ಷಕ `ಕ್ರೊಕೊ'
ಹತ
`ರಾಷ್ಟ್ರಕವಿ'
ಪ್ರಶಸ್ತಿ ಆಯ್ಕೆ ಸಮಿತಿಗೆ ದೇಜಗೌ ಮುಖ್ಯಸ್ಥ
ಯುಪಿಎಸ್‌ಸಿ ಅಭ್ಯರ್ಥಿಗಳಿಗೆ ಮಾಹಿತಿ ಹಕ್ಕು
ಚೆನ್ನೈನಲ್ಲಿ ಸೆಟೆಲೈಟ್ ಸಿಟಿ ನಿರ್ಮಾಣ ಇಲ್ಲ:
ಕರುಣಾನಿಧಿ
ಅಲ್-ಖೈದಾ ಪ್ರಮುಖ ನಾಯಕನ ಬಂಧನ