ಕಾಂಗ್ರೆಸ್- ಪ್ರಗತಿಪರ ಜನತಾದಳ ವಿಲೀನ
ಬೆಂಗಳೂರು: ಭಾನುವಾರ ಅರಮನೆ ಮೈದಾನದಲ್ಲಿ
`ಕಾಂಗ್ರೆಸ್-ಅಖಿಲ ಭಾರತ ಪ್ರಗತಿಪರ ಜನತಾದಳ' ವಿಲೀನದ ಬೃಹತ್ ಸಮಾವೇಶ
ನಡೆಯಿತು.
ಆಡಳಿತ ಸರ್ಕಾರದ ಮೇಲೆ ವಾಗ್ದಾಳಿ ಮಾಡಿದ ಸೋನಿಯಾ
ಗಾಂಧಿ `ಬಿಜೆಪಿ ಮತ್ತು ಜೆಡಿಎಸ್ ಸರ್ಕಾರ ಮೈತ್ರಿ ಕೂಟ ಕೇವಲ ಅಧಿಕಾರದ
ಆಸೆಗಾಗಿ ಮಾಡಿಕೊಂಡಿರುವುದು. ಇದರ ವಿರುದ್ಧ ಹೋರಾಟ ನಡೆಸಬೇಕು'
ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಗಡಿ ವಿವಾದದ ಬಗ್ಗೆ ಜಾಣ ಮೌನ ತಳೆದ ಸೋನಿಯಾ
ತಮ್ಮ ೨೦ ನಿಮಿಷದ ಭಾಷಣವನ್ನು ರಾಜ್ಯದ ಅಭಿವೃದ್ದಿಗಾಗಿ ಮಾತ್ರ ಮೀಸಲಿಟ್ಟರು.
ಬರ, ಪ್ರವಾಹ, ರೈತರ ಬವಣೆ ನೀಗಿಸಲು ಆರ್ಥಿಕ ಪ್ಯಾಕೇಜ್ ಕೇಂದ್ರ ಸರ್ಕಾರ
ಸದ್ಯದಲ್ಲೆ ಘೋಷಿಸಲಿದೆ ಎಂದು ಹೇಳಿದರು.
ಸಿದ್ಧರಾಮಯ್ಯನವರು ಮಾತನಾಡಿ
`ಆಡಳಿತದಲ್ಲಿರುವ ಸರ್ಕಾರ ನೈತಿಕ ಅಧಃಪತನ ಹಿಡಿಯಲು
ದೇವೇಗೌಡರೇ ಕಾರಣ' ಎಂದು ತಮ್ಮ ಭಾಷಣದಾದ್ಯಂತ
ದೇವೇಗೌಡರ ಮೇಲೆ ವಾಗ್ದಾಳಿ ನಡೆಸಿದರು.
ಸೋನಿಯಾ ಗಾಂಧಿ ಭಾಷಣ ಪ್ರಾರಂಭಿಸಿದಾಗ ಮಹಾರಾಷ್ಟ್ರದ
ಪಕ್ಷಪಾತ ವಹಿಸುತ್ತಿರುವ ಶಿವರಾಜ ಪಾಟೀಲರನ್ನು ಕೂಡಲೆ ಸಂಪುಟದಿಂದ
ಕೈ ಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ
ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು.
ಇನ್ನಷ್ಟು
ಕೆಹೆಚ್‌ಬಿಯಿಂದ ಆನೇಕಲ್ ಬಳಿ ಸೂರ್‍ಯನಗರ
ಭಾರತೀಯ
ಯಾತ್ರಿಕರಿಗೆ ಇರಾಕ್‌ನಲ್ಲಿ ಗುಂಡು
`ಕೀಟನಾಶಕ ಇಲ್ಲದಿದ್ರೂ ಕೋಲ ಕುಡಿಯಬಾರದು
ದುಡ್ಡು ಉಳಿಸಲು ಇಂಟೆಲ್ ಕಂಪೆನಿ ಸಿಬ್ಬಂದಿ ಕಡಿತ
ಬೆಂಗಳೂರಿನಲ್ಲಿ ಜೆ.ಸಿ.ರಸ್ತೆಯಲ್ಲಿ ಟ್ರಾಫಿಕ್ ನಿಷೇಧ
ಕೊಂಕಣಿಗರಿಗೆ ಗೋವಾ ಬೇಕು, ಕೊಡವರಿಗೆ ಸ್ವತಂತ್ರ
ಹೈಟೆಕ್ ಓಣಂ: ಆನ್‌ಲೈನ್ ಹೂ ಜೋಡಣೆ ಸ್ಪರ್ಧೆ
ಗಡಿವಿವಾದ: ರಾಜ್ಯಕ್ಕೆ ಕೈ ಕೊಟ್ಟ ಕೇಂದ್ರಸರ್ಕಾರ