ಕೊಂಕಣಿಗರಿಗೆ ಗೋವಾ ಬೇಕು, ಕೊಡವರಿಗೆ ಸ್ವತಂತ್ರ
ಏಕತೆಯ ವಿರುದ್ಧ ಅಪಸ್ವರ !
ಕಾರವಾರ : ಮಹಾರಾಷ್ಟ್ರ ಗಡಿವಿವಾದ
ಕಾವೇರುತ್ತಿರುವಂತೆಯೇ ರಾಜ್ಯದ ಇತರೆಡೆಗಳಲ್ಲಿಯೂ
ಅಪಸ್ವರಗಳು ಕೇಳಿಬರುತ್ತಿವೆ.
ಅತ್ತ- ಕೊಡಗಿನ ಅಭಿವೃದ್ಧಿಯ ಕಡೆಗೆ ಗಮನ
ಹರಿಸದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮರ್ಜಿಯನ್ನು ವಿರೋಧಿಸಿ
ನವೆಂಬರ್ ಒಂದರಂದು ದೆಹಲಿಯ ಸಂಸತ್ ಭವನದ ಎದುರು
ಕೊಡವ ಸಮಾಜದವರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಅಲ್ಲದೆ ಸುವರ್ಣ ಕರ್ನಾಟಕ ವರ್ಷಾಚರಣೆಯನ್ನು ಧಿಕ್ಕರಿಸಿ ನವೆಂಬರ್
೧ನ್ನು ಕರಾಳ ದಿನವನ್ನಾಗಿ ಆಚರಿಸಲು ಕೊಡವ ನ್ಯಾಷನಲ್ ಕೌನ್ಸಿಲ್
ನಿರ್ಧರಿಸಿದೆ.
ಇತ್ತ- ಕಾರವಾರ ಹಾಗೂ ಜೋಯಿಡಾ
ತಾಲ್ಲೂಕುಗಳನ್ನು ಗೋವಾ ರಾಜ್ಯಕ್ಕೆ ಸೇರಿಸಬೇಕೆಂದು ಆಗ್ರಹಿಸಿ
ಗೋವಾದ ಕೊಂಕಣಿ ಮಂಚ್ ಹೋರಾಟ ಆರಂಭಿಸಿದೆ.
ಗೋವಾ ಕೊಂಕಣಿ ರಾಜ್ಯ ಏಕೀಕರಣ ಮಂಚ್
ಇತ್ತೀಚೆಗೆ ಸದಾಶಿವ ಘಡದಲ್ಲಿ ಸಭೆಯೊಂದನ್ನು ನಡೆಸಿದ್ದು ಹೋರಾಟ
ಮಂಚ್‌ನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅಭಿವೃದ್ಧಿ ಮತ್ತು
ಕೊಂಕಣಿಯ ಸಂಸ್ಕೃತಿಯ ರಕ್ಷಣೆಗಾಗಿ ಕಾರವಾರ ಮತ್ತು
ಜೋಯಿಡಾವನ್ನು ಗೋವಾ ರಾಜ್ಯಕ್ಕೆ ಸೇರಿಸಬೇಕಾಗಿದೆ ಎಂದು ಮಂಚ್
ಅಭಿಪ್ರಾಯಪಟ್ಟಿದೆ.
ಇನ್ನಷ್ಟು
ಹೈಟೆಕ್ ಓಣಂ: ಆನ್‌ಲೈನ್ ಹೂ ಜೋಡಣೆ ಸ್ಪರ್ಧೆ
ಗಡಿವಿವಾದ: ರಾಜ್ಯಕ್ಕೆ ಕೈ ಕೊಟ್ಟ ಕೇಂದ್ರಸರ್ಕಾರ
ರಾಜ್ಯದ ೧೪ ಮಂದಿ ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತಿ
ವಿಶ್ವಕನ್ನಡ ಸಮ್ಮೇಳನ - ೨೦೦೬
ಹುವೈ ಟೆಕ್ನಾಲಜಿಯಿಂದ ಹೊಸ ತಂತ್ರಜ್ಞಾನದ
ಕೊಡುಗೆ
ಫಾಲ್ಕೆ ಪ್ರಶಸ್ತಿಯಿಂದ ವಂಚಿತೆಯಾದ ಸುಚಿತ್ರ
ಸೇನ್
`ವಂದೇ ಮಾತರಂ' ಹಾಡಲು
ಸರ್ಕಾರದ ನಿರ್ದೇಶನ
ಅಕ್ಕ ಸಮ್ಮೇಳನ ಉದ್ಘಾಟನೆಗೆ ಬಾಲ್ಟಿಮೋರ್ ರೆಡಿ