ಇನ್ಫಿ ಮೂರ್ತಿಗೂ ಕರೀನಾಗೂ ಒಂದೆ ನಮೂನಿ ಪ್ರಶಸ್ತಿ
ಮುಂಬಯಿ : ಹಿಂದಿ ಚಿತ್ರ ನಟಿ ಕರೀನಾ ಕಪೂರ್
ಮತ್ತು ಇನ್ಫೋಸಿಸ್ ರಾಜಗುರು ಎನ್. ಆರ್. ನಾರಾಯಣಮೂರ್ತಿ ಒಂದೇ
ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಶಸ್ತಿಯೊಂದು ಇಬ್ಬರನ್ನು
ಅರಸಿಕೊಂಡು ಬಂದಿದೆ ಎಂದರೆ ಅಚ್ಚರಿಪಡುತ್ತೀರಾ...
ಇದು ಸಾಫ್ಟ್‌ವೇರ್ ಪ್ರಶಸ್ತಿಯೂ ಅಲ್ಲ, ಫಿಲ್ಮ್‌ಫೇರ್
ಪ್ರಶಸ್ತಿಯೂ ಅಲ್ಲ. ಈ ಬಾರಿಯ ಪ್ರಿಯದರ್ಶಿನಿ ಪ್ರಶಸ್ತಿಗೆ ನಾರಾಯಣಮೂರ್ತಿ
ಮತ್ತು ಕರೀನಾ ಕಪೂರ್ ಆಯ್ಕೆಯಾಗಿದ್ದಾರೆ.
ಸಮಾಜದ ವಿವಿಧ ಸ್ತರಗಳಲ್ಲಿ ವಿಭಿನ್ನವಾಗಿ
ದುಡಿದ ಹಲವು ಗಣ್ಯರಿಗೆ ಈ ಪ್ರಶಸ್ತಿಯನ್ನು ಘೋಷಿಸಲಾಗಿದ್ದು ಕರ್ನಾಟಕದ
ನಾರಾಯಣಮೂರ್ತಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್,
ಮತ್ತು ಕೇಂದ್ರೀಯ ವಾಣಿಜ್ಯ ಮಂತ್ರಿ ಕಮಲ್‌ನಾಥ್ ಸೆ. ೧೯ರಂದು ಮುಂಬಯಿಯಲ್ಲಿ
ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.
ಇನ್ನಷ್ಟು
ವಂದೇಮಾತರಂ ಶತಮಾನೋತ್ಸವ
ಗೊಂದಲದಲ್ಲಿ
ನೂತನ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್
ಆಗ್ರಾದಲ್ಲಿ ವಿದೇಶಿ ಮಹಿಳೆಯರಿಗೆ ಕಿರುಕುಳ
ಹಾಗಿದ್ದರೆ ನಾವೆಲ್ಲಾ ಪೌರಾಣಿಕ ವಿಷಕನ್ಯೆಯರಾ ?
ಟಿಸಿಎಸ್ `ವಿಶೇಷ ಆರ್ಥಿಕ ವಲಯ'ಕ್ಕೆ
ಸರ್ಕಾರ ಅಸ್ತು
ಅಮೆರಿಕಾದಲ್ಲಿ ಭಾರತೀಯರ ಸಂಖ್ಯೆ ಗಣನೀಯ
ಹೆಚ್ಚಳ
೨೫೦ ಕೋಟಿ ರೂಪಾಯಿ ರಾಜ್ಯಕ್ಕೆ ಬರ ನೆರವು