ಫೋರ್ಬ್ಸ್ ಪಟ್ಟಿ: ಇಂದ್ರಾನೂಯಿ ನಂತರ ಸೋನಿಯಾ
ನವದೆಹಲಿ: ಪೆಪ್ಸಿಕೋ ಸಂಸ್ಥೆಯ ವ್ಯವಸ್ಥಾಪಕ
ನಿರ್ದೇಶಕಿ ಇಂದ್ರಾನೂಯಿಯನ್ನು ವಿಶ್ವದ ನಾಲ್ಕನೇ ಪ್ರಭಾವಿ
ಮಹಿಳೆಯೆಂದು ಫೋರ್ಬ್ ಪಟ್ಟಿಯಲ್ಲಿ ಬಣ್ಣಸಲಾಗಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿಶ್ವದ
ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ೧೩ ನೇ ಸ್ಥಾನದಲ್ಲಿದ್ದಾರೆ. ೨೦೦೫
ರಲ್ಲಿ ಈ ಪಟ್ಟಿಯಲ್ಲಿ ೨೮ ನೇ ಸ್ಥಾನದಲ್ಲಿದ್ದ ಭಾರತೀಯ ಸಂಜಾತೆ
ಇಂದ್ರಾನೂಯಿ ಈ ಬಾರಿ ಮೊದಲ ಹತ್ತು ಸ್ಥಾನದಲ್ಲಿ ಒಬ್ಬರಾಗಲು ಪೆಪ್ಸಿ ಸಂಸ್ಥೆಯ
ಅಧಿಪತ್ಯದ ಸಾರಥಿಯಾಗಿದ್ದೇ ಕಾರಣವೆನ್ನಲಾಗಿದೆ. ೧೯೭೮ ರಲ್ಲಿ ಭಾರತದಿಂದ
ಅಮೇರಿಕಾಕ್ಕೆ ವಲಸೆ ಹೋದ ಇಂದ್ರಾನೂಯಿಯ ಬಗ್ಗೆ ಫೋರ್ಬ್ ಪತ್ರಿಕೆ
ಪ್ರಶಂಸೆಯ ಮಳೆಗೆರೆದಿದೆ.
೨೦೦೪ರಲ್ಲಿ ೩ನೇ ಸ್ಥಾನದಲ್ಲಿದ್ದ ಸೋನಿಯಾಗಾಂಧಿ
ಮೊದಲ ಹತ್ತು ಸ್ಥಾನಗಳಲ್ಲಿ ಸ್ಥಾನಪಡೆಯುವಲ್ಲಿ ವಿಫಲವಾಗಿದ್ದಾರೆ.
ಕಳೆದ ಬಾರಿ ಪಟ್ಟಿಯಿಂದ ಹೊರಗಿದ್ದ ಜರ್ಮನ್
ದೇಶದ ಕುಲಪತಿ ಆಂಜೆಲ್ಲಾ ಮೆರ್ಕೆಲ್ ಈ ಬಾರಿ `ವಿಶ್ವದ ಅತ್ಯಂತ ಪ್ರಭಾವಿ
ಮಹಿಳೆ