Fonts Problem?

Downloads

? Wallpapers

? Vikrantakarnataka Weekly

ಪತ್ರಿಕೆ ಬಿಡುಗಡೆ

DU8? 17 g?z? ????i? ?q?U??/span> ?*????s?/a>

Thursday, 21 September 2006 05:11 AM

ಆ.೧೭ರಂದು ವಿಕ್ರಾಂತ ಕರ್ನಾಟಕ ಪತ್ರಿಕೆ ಓದುಗರ ಬೊಗಸೆಗೆ

ಎಲ್ಲರ ಶ್ರಮದೊಂದಿಗೆ ವಿಕ್ರಾಂತ ಕರ್ನಾಟಕ ವಾರಪತ್ರಿಕೆ ಸಿದ್ಧವಾಗಿ ನಿಂತಿದೆ. ಬಹು ದಿನಗಳ ಆತಂಕ, ಏನಾಗುತ್ತೋ ಏನೋ ಎಂಬ ಕಳವಳಕ್ಕೆ ತೆರೆ ಬಿದ್ದಿದೆ. ಸುಂದರ ಪುಟಗಳ ಮ್ಯಾಗಜೀನ್ ತಯಾರಾಗಿ ಕೈಗೆ ಬಂದಾಗ ಎಲ್ಲರ ಮುಖದಲ್ಲೂ ಖುಷಿ.

 

ಪತ್ರಿಕೆಯನ್ನು ಆರಂಭಿಸುವಾಗ ಹಲವು ಮಂದಿ ಹಿರಿಯರು ಅನುಭವಸ್ಥರು ಹೇಳಿದ್ದು, ಓದುಗರು ದುಡ್ಡು ಕೊಟ್ಟು ಪತ್ರಿಕೆ ಕೊಳ್ಳುತ್ತಾರಾ...ಎಂಬುದನ್ನು ಸಾಕಷ್ಟು ಯೋಚನೆ ಮಾಡಿ ಎಂಬ ಕಿವಿಮಾತು.

 

ಇದು ನಿಜ ಕೂಡ. ಆದರೆ ಇಂದು ಕನ್ನಡದ ಕೆಲಸಗಳು ಸಾಕಷ್ಟು ನಡೀತಾ ಇವೆ. ಓದುಗರಿಲ್ಲ ಎನ್ನುವುದು ನೆಗೆಟಿವ್ ಯೋಚನೆ ಅಷ್ಟೆ. ಕೆ. ಎಸ್. ನಿಸಾರ್ ಅಹ್ಮದ್ ಹೇಳುವಂತೆ, `ಓದುಗರಿಲ್ಲ ಎಂಬುದು ಸುಳ್ಳು. ಓದುಗರಿಗೆ ಅನುಕೂಲವಾಗುವ, ಗುಣಮಟ್ಟದ ಮಾಹಿತಿಗಳನ್ನು ಕನ್ನಡಿಗರು ಸ್ವೀಕರಿಸುತ್ತಾರೆ.'

ಹೌದು.

 

ಬರಹಗಳಿಗೆ ಸಂಬಂಧಿಸಿದಂತೆ ಮಾತ್ರವಲ್ಲ ಬದುಕಿನ ಎಲ್ಲ ಆಯಾಮಗಳಲ್ಲಿಯೂ ನಮಗಿಂದು ಬೇಕಾಗಿರುವುದು ಗುಣಾತ್ಮಕ ಯೋಚನೆ. ದೊಂಬಿ ಗಲಾಟೆ, ಉಗ್ರರು, ನಕ್ಸಲೈಟ್‌ಗಳು ಜೊತೆಗೆ ಮುನಿದ ಪ್ರಕೃತಿ, ಹಳ್ಳಿ ಮತ್ತು ಪಟ್ಟಣಗಳ ನಡುವಿನ ಅಂತರ, ಉಸಿರುಗಟ್ಟಿಸುವ ನಗರ ಜೀವನದ ಕ್ಷಣಗಳು... ಈ ಎಲ್ಲದರ ನಡುವೆ ಒಂದಿಷ್ಟು ಭರವಸೆ, ಒಳ್ಳೆಯ ವಿಷಯಗಳ ಮಂಡನೆ ಜೀವನಕ್ಕೆ ಸ್ಫೂರ್ತಿ ಚಿಲುಮೆಯಾಗಬಲ್ಲದಲ್ಲವೇ ? ಆ ನಿಟ್ಟಿನಲ್ಲಿ ನಮ್ಮ ಪತ್ರಿಕೆ ದೃಢ ಹೆಜ್ಜೆಯಿಡಲಾರಂಭಿಸಿದೆ.

 

ಅಡಿಗರು ಹೇಳಿದಂತೆ-

ಕೊಲ್ಲುವುದು ಮನುಷ್ಯ ಲಕ್ಷಣವಲ್ಲ, ಹೆಚ್ಚಳವಲ್ಲವೇ ಅಲ್ಲ

ಬದುಕುವುದು, ಬದುಕಬಿಡುವುದು, ಬೆಳೆವುದು-

ಮಾನವತ್ವದ ಮಹತ್ವ ಇಲ್ಲಿ ಇದೆ ತಿಳಿಯೋಣ:

ಒಂದು ಅಳಿದರೆ ಉಳಿದುದೆಲ್ಲ ಮುಕ್ಕು.

 

ಹೊಸ ಪತ್ರಿಕೆಯನ್ನು ಓದುಗರಿಗೆ ಅರ್ಪಿಸುವ ಸಮಾರಂಭ ಆಗಸ್ಟ್ ೧೭ರಂದು ಯವನಿಕಾದಲ್ಲಿ ನಡೆಯಲಿದೆ. ಸತ್ಯಮೂರ್ತಿ ಆನಂದೂರು ಅವರ ನೇತೃತ್ವದಲ್ಲಿ ಸಿದ್ಧಗೊಂಡ ಪತ್ರಿಕೆಯು ಅಂದು ಓದುಗನ ಬೊಗಸೆಗೆ ಬೀಳಲಿದೆ. ಮೊದಲ ಪ್ರತಿಯನ್ನು ಸ್ವೀಕರಿಸುವವರು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ. ಅಂದೇ ನಮ್ಮ ವೆಬ್‌ಸೈಟ್‌ನ ಉದ್ಘಾಟನೆ ನಡೆಯಲಿದೆ. ವೆಬ್‌ಸೈಟ್‌ಗೆ ಚಾಲನೆ ನೀಡುವವರು ನಟಿ ತಾರಾ. ಸಮಾರಂಭದ ಆಹ್ವಾನ ಪತ್ರಿಕೆ ಇಲ್ಲಿದೆ. ಕನ್ನಡಾಭಿಮಾನಿಗಳು ಈ ಸಮಾರಂಭಕ್ಕೆ ಬಂದು ಶುಭ ಹಾರೈಸಬೇಕೆಂಬುದು ನಮ್ಮ ಆಶಯ.

 

ನಮ್ಮ ಹೊಸ ಪತ್ರಿಕೆ ಮತ್ತು ವೆಬ್‌ಸೈಟ್‌ಗೆ ಸಾಕಷ್ಟು ಸಲಹೆ ಸೂಚನೆ, ಪ್ರೀತಿಯ ಮಾರ್ಗದರ್ಶನಗಳು ಬರುತ್ತಿವೆ. ಅದು ಓದುಗರು ನಮ್ಮ ಮೇಲೆ ತೋರಿರುವ ಕಾಳಜಿಯ ಪ್ರತೀಕ. ಹಿರಿಯರ ಹಾರೈಕೆ ಮತ್ತು ಸ್ವಾನುಭವಗಳ ಸಾಲುಗಳೇ ನಮ್ಮ ಬಳಿಯಿರುವ ಶಕ್ತಿಯಲ್ಲವೇ ?

 

ಈ ಸಂದರ್ಭದಲ್ಲಿ ಲಂಕೇಶರ ಕವನವೊಂದು ನೆನಪಾಗುತ್ತದೆ.

ನಿಮ್ಮ ನುಡಿಗುರುತುಗಳು ಕಾಲದೆದೆಯಲಿ ನಿಂತು

ನಮಗೆ ಗುರಿ ತೋರುತಿವೆ ತಪ್ಪದಂತೆ:

ನಿಮ್ಮ ಪದಚಿಹ್ನೆಗಳು ಶಾಂತಿಯನು ನುಡಿಯುತಿವೆ

ನೀಲಿಯಾಗಸದಲ್ಲಿ ವೇದದಂತೆ !

ಎನಿವೇ, ಆಗಸ್ಟ್ ೧೭ರ ಸಮಾರಂಭದಲ್ಲಿ ಸಿಗೋಣ !

 

-ರಾಜಲಕ್ಷ್ಮಿ

Print This PagePrint this page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com