|
ಒಂದು ಬಾರಿಗೆ ಒಂದು ಶಾಲೆ
ಎನ್.ಆರ್.ಐ ಕನ್ನಡಿಗರ ಅನುಪಮ ಅಕ್ಷರ ಸೇವೆ
``ಕೆರೆಯ ನೀರನು ಕೆರೆಗೆ ಚೆಲ್ಲಿ...'' ಈ ಸಮಾಜಕ್ಕೆ ಏನಾದರೂ ಹಿಂದಿರುಗಿ
ಕೊಡಲೇಬೇಕಾದದ್ದು ನಮ್ಮ ಕರ್ತವ್ಯ. ಸರ್ಕಾರಿ ಶಾಲೆಗಳಿಗೆ ಸುಸಜ್ಜಿತ
ಕಟ್ಟಡಗಳನ್ನು ಕಟ್ಟಿಸಿಕೊಡುತ್ತಿರುವ ಕನ್ನಡಿಗ ಎನ್.ಆರ್.ಐ.ಗಳ ಅಕ್ಷರ ಸೇವೆ
ನಿಮಗೂ ಸ್ಫೂರ್ತಿ ನೀಡುವಂತಾಗಲಿ.
ಎನ್ನಾರೈಗಳೆಂದರೆ ತಮ್ಮದನ್ನು ಮಾತ್ರ ನೋಡಿಕೊಳ್ಳುವ, ವರ್ಷಕ್ಕೊಮ್ಮೆ
ಬಂದು ಹೋಗುವ ಶ್ರೀಮಂತ ಜನ, ತಮ್ಮ ತಾಯಿನಾಡಿನ ಬಗ್ಗೆ ಅಷ್ಟೇನೂ ಸ್ಪಂದಿಸದವರು
ಎಂಬ ಭಾವನೆ ಬಹುಪಾಲು ಜನರಲ್ಲಿ ಇರುವುದು ಸುಳ್ಳಲ್ಲ. ಆದರೆ ಅದಕ್ಕೆ ಅಪವಾದ
ಎಂಬಂತೆ, ಕನ್ನಡಿಗರೆ ಹುಟ್ಟುಹಾಕಿರುವ ಒಸ್ಯಾಟ್
(OSAAT
- One School At A Time) ಸಂಸ್ಥೆ ಅನಿವಾಸಿ ಕನ್ನಡಿಗರಲ್ಲೂ ಮಣ್ಣಿನ
ಕರೆಗೆ ಓಗೊಡುವವರು ಇದ್ದಾರೆ ಎನ್ನುವುದನ್ನು ತೋರಿಸುತ್ತದೆ.
ಒಸ್ಯಾಟ್ ಬಗೆಗಿನ ಒಂದು ಲೇಖನ ನಿಮಗಾಗಿ. ಉಚಿತ ಡೌನ್‌ಲೋಡ್‌ಗಾಗಿ ಇಲ್ಲಿ
ಕ್ಲಿಕ್ ಮಾಡಿ.
ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ
PDF ಆವೃತ್ತಿಯನ್ನು ನೀವು ಆನ್‌ಲೈನ್
ಮೂಲಕವೂ ಪಡೆಯಬಹುದು. ಹೆಚ್ಚಿನ ವಿವರಗಳಿಗೆ ಕ್ಲಿಕ್ ಮಾಡಿ.
http://www.vikrantakarnataka.com/magazine/index.htm
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆಗಳಿಗೆ ಸ್ವಾಗತ
|