ಎಲ್ಲ ತತ್ವದ ಎಲ್ಲೆ ಮೀರಿ...
(೨೯ ಸೆಪ್ಟೆಂಬರ್ ೨೦೦೬ರ ಸಂಚಿಕೆಯ ಸಂಪಾದಕೀಯ)

ಸತ್ಯಮೂರ್ತಿ ಆನಂದೂರು
ಬೆಂಗಳೂರು
smanandur@vikrantakarnataka.com
ನವೋದಯದ ಆ ಮನಸ್ಸುಗಳೇ ಹಾಗೆ.
ಕಟ್ಟುವ ಕ್ರಿಯೆಯಲ್ಲಿ ತೊಡಗಿಕೊಳ್ಳುವ, ಯುವ ಚೇತನಗಳಿಗೆ ಸ್ಫೂರ್ತಿ
ತುಂಬುವ ಮನಸ್ಸು. ಅಂಥ ಶ್ರೀಮಂತ ಮನಸ್ಸಿನ ಪ್ರೀತಿಯ ಕವಿ
ಜಿ.ಎಸ್. ಶಿವರುದ್ರಪ್ಪರವರನ್ನು ಇಲ್ಲಿ ದಾಖಲಿಸಲು ಕಾರಣಗಳಿವೆ.
ನವೆಂಬರ್ ತಿಂಗಳಿಗೆ ಕೆಲವೇ ದಿನಗಳಿವೆ. ಒಂದು
ವರ್ಷವೆಲ್ಲಾ
ಸುಮ್ಮನಿರುವ
ಭುವನೇಶ್ವರಿಯ ಫೋಟೋಗಳೆಲ್ಲ ಬೀದಿಗೆ ಬರುವ ತಿಂಗಳಿದು. ಹಾಗೆಯೇ
ಇದ್ದಕ್ಕಿದ್ದಂತೆ ಕನ್ನಡದ ಕಾಳಜಿ ಎಲ್ಲರಲ್ಲಿ ಎದ್ದು ಕುಣಿಯುತ್ತದೆ;
ಒಂದಷ್ಟು ರಂಪ, ರಗಳೆ, ಗದ್ದಲ; ಹಾಗೆಯೇ ಅಲ್ಲಿ ಇಲ್ಲಿ ಕನ್ನಡದ
ಹೆಸರಲ್ಲಿ ಕಮಾಯಿ, ಬೀದಿಗಳಲ್ಲಿ ಸಿನಿಮಾ ಹಾಡು, ಕುಣಿತ, ವಾದ್ಯಗೋಷ್ಠಿ...
ಹೀಗೆ ಒಂದಷ್ಟು ಕನ್ನಡ ಅಬ್ಬರಿಸುತ್ತದೆ. ಬಹುಶಃ ಈ ಕಾರಣದಿಂದಲೇ ನವೆಂಬರ್
ಕನ್ನಡಿಗ ಎಂಬ ಜನಪ್ರಿಯ ಹೆಸರೂ ಚಾಲ್ತಿಗೆ ಬಂದಿರುವುದು.
ಮೇಲೆ ಹೇಳಿದ್ದು ಒಂದು ಗುಂಪಿನ
ಕೆಲಸವಾದರೆ, ಇನ್ನೊಂದು ಗುಂಪಿನ ಕೆಲಸವೇ ಬೇರೆ. ಅದು ಕನ್ನಡದ
ಬುದ್ಧಿವಂತರ ಗುಂಪು. ಈಗಾಗಲೇ ಈ ಗುಂಪು ತಮ್ಮ
ಬಯೋಡೇಟಾಗಳನ್ನು ಅಪ್-ಟು-ಡೇಟ್ ಮಾಡಿಸಿಕೊಂಡು, ಕನ್ನಡದ ಈ
ನೆಲದಲ್ಲಿ ತಮ್ಮ ಸಾಧನೆಗಳನ್ನು ಪಟ್ಟಿಮಾಡಿಕೊಂಡು, ಅವರಿವರ
ಪತ್ರಗಳನ್ನು ಅದಕ್ಕೆ ಲಗತ್ತಿಸಿ ಕನ್ನಡ ಮತ್ತು ಸಂಸ್ಕೃತಿ
ಇಲಾಖೆಯ ಬಾಗಿಲಲ್ಲಿ ರಾಜ್ಯೋತ್ಸವ ಪ್ರಶಸ್ತಿಗಾಗಿ ಸುತ್ತಾಡುತ್ತಿದೆ. ಈ ಬಾರಿ
ಸುವರ್ಣ ಕರ್ನಾಟಕ ವರ್ಷವಾಗಿರುವುದರಿಂದ ಈ ಗುಂಪುಗಳ ಭರಾಟೆ
ಇನ್ನೂ ತಾರಕಕ್ಕೇರುವುದರಲ್ಲಿ ಅಚ್ಚರಿಯಿಲ್ಲ.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ
ಚಂದ್ರು, ಬಿ. ಸುರೇಶ್, ನಾಗರಾಜ
ಮೂರ್ತಿ
ಮತ್ತು ಗೆಳೆಯರು ಸುವರ್ಣ ಕರ್ನಾಟಕದ ಈ ಸಂದರ್ಭದಲ್ಲಿ ವಿಶಿಷ್ಟ
ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದಾರೆ. `ಕರ್ನಾಟಕದ
ಏಕೀಕರಣ' ವನ್ನು ಹೊಸ ರೀತಿಯಲ್ಲಿ ಆಚರಿಸುವ ಕಾರ್ಯಕ್ರಮ
ಅದು.
ಇತ್ತೀಚೆಗೆ ಬೆಳಗಾವಿಯ ವಿಚಾರದಲ್ಲಿ
ಆದ ಗದ್ದಲಗಳು ಎಲ್ಲರಿಗೂ ನೆನಪಿದೆ. ಬೆಳಗಾವಿಯ ಮೇಯರ್ ಮುಖಕ್ಕೆ
ಮಸಿ ಬಳಿದ ಪ್ರಕರಣದಿಂದ ಆರಂಭವಾಗಿ ಇತ್ತೀಚೆಗೆ ಭಾವೋದ್ವೇಗದ
ಗದ್ದಲದವರೆಗೆ ಗಡಿಯ ಪ್ರದೇಶದಲ್ಲಿ ಹಲವು ಅಹಿತಕರ
ಕೆಲಸಗಳು ನಡೆಯುತ್ತಲೇ ಇವೆ. ನಮ್ಮ ಮುಖ್ಯಮಂತ್ರಿಗಳೇನೋ
ಮಹಾಜನ ವರದಿಯೇ ಅಂತಿಮ ಎಂದು ಹೇಳಿ ಕೈ ತೊಳೆದುಕೊಂಡರೂ
ಬೆಳಗಾವಿ ಬೇರೆ ರೀತಿಯಲ್ಲಿ ಒಳಗೊಳಗೇ ಕುದಿಯುತ್ತಿರುವುದನ್ನು
ಎಲ್ಲರೂ ಬಲ್ಲರು.
ಆದರೆ ಮುಖ್ಯಮಂತ್ರಿಯಲ್ಲದ
ಚಂದ್ರು ಮತ್ತು ಗೆಳೆಯರು ಅಕ್ಟೋಬರ್ ಒಂದರಿಂದಲೇ ತಮ್ಮ ಕನ್ನಡದ
ಕೆಲಸ ಆರಂಭಿಸಲಿದ್ದಾರೆ. ಇಪ್ಪತ್ಮೂರು ದಿನಗಳವರೆಗೆ ಕರ್ನಾಟಕದ
ಗಡಿ ಪ್ರದೇಶದ ಒಟ್ಟು ಐವತ್ತೆರಡು ತಾಲೂಕುಗಳಲ್ಲಿ ಸಂಚರಿಸಿ, ಕನ್ನಡದ
ಕಾರ್ಯಕ್ರಮಗಳನ್ನು ನೀಡಿ, ಅಲ್ಲಿನ ಜನರಿಗೆಲ್ಲ ಕನ್ನಡತನದ ಪ್ರೀತಿಯ
ಒರತೆಯನ್ನು ಚಿಮ್ಮಿಸಲಿದ್ದಾರೆ.
ಇದಕ್ಕಾಗಿ ಹಲವು
ಕಿರುತೆರೆಯ ನಟನಟಿಯರು, ಗಾಯಕರು, ಚಿತ್ರನಟರು ಹಾಗೂ
ಸಾಹಿತಿಗಳನ್ನು ತಮ್ಮೊಡನೆ ಕರೆದೊಯ್ಯಲಿದ್ದಾರೆ. ಬೆರಳೆಣಿಕೆಯ
ಕೆಲವು ಹಿರಿಯ ನಟರನ್ನು ಬಿಟ್ಟರೆ ಬಹುತೇಕ ಕಲಾವಿದರು ಇಲ್ಲಿಯ
ಜನರೆದುರು ಕನ್ನಡದ ಹಣತೆಯ ದೀಪವನ್ನು ಮಿನುಗಿಸಲಿದ್ದಾರೆ.
ಇಂಥ ಕೆಲಸದಲ್ಲಿ ತಮ್ಮನ್ನು
ತೊಡಗಿಸಿಕೊಂಡವರು ಹಿರಿಯ ಕವಿ ಎಪ್ಪತ್ತೆಂಟರ ಡಾ.ಜಿ.ಎಸ್.
ಶಿವರುದ್ರಪ್ಪನವರು. ಮುಖ್ಯಮಂತ್ರಿ ಚಂದ್ರು ಮತ್ತು ಗೆಳೆಯರ
ಕೆಲಸದಲ್ಲಿ ತಾವೂ ಭಾಗಿಯಾಗುವುದಾಗಿ ಜಿಎಸ್‌ಎಸ್ ಹೇಳಿರುವುದು
ಎಲ್ಲರ ಮನದಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಕನ್ನಡದ ಕೆಲಸ ಅನ್ನುವುದು
ಕನ್ನಡಿಗರಲ್ಲಿ ಆತ್ಮವಿಶ್ವಾಸ, ಸ್ವಾಭಿಮಾನ, ಪ್ರೀತಿ ತುಂಬುವ ಕೆಲಸ.
ಪ್ರೀತಿ ಇಲ್ಲದ ಮೇಲೆ
ಹೂವು ಅರಳೀತು ಹೇಗೆ?
ಅಲ್ಲವೇ?
ಇನ್ನಷ್ಟು
ಮಾಗಿದ
ಮನಸ್ಸು; ಹರೆಯದ ಹುಮ್ಮಸ್ಸು
ಸಿದ್ಧರಾಮಯ್ಯ
ಕಷ್ಟಗಳು ನೂರೆಂಟು...
ಹೊನ್ನ
ರಾಶಿಯಲ್ಲ; ಬೊಗಸೆ ಪ್ರೀತಿ
ನಿಮ್ಮ
ಪತ್ರಿಕೆಯ ಸ್ಪೆಷಾಲಿಟಿ ಏನು?
ಹಾರುವ
ಕುದುರೆಯ ಬೆನ್ನ ಏರಿ ...