Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 28 July 2008 10:36 PM

ಮಾಗಿದ ಮನಸ್ಸು; ಹರೆಯದ ಹುಮ್ಮಸ್ಸು

(೨೨ ಸೆಪ್ಟೆಂಬರ್ ೨೦೦೬ರ ಸಂಚಿಕೆಯ ಸಂಪಾದಕೀಯ)

 

S.M. Anandu Editor, Vikranta Karnataka Weekly

ಸತ್ಯಮೂರ್ತಿ ಆನಂದೂರು

ಬೆಂಗಳೂರು

smanandur@vikrantakarnataka.com

`ಛೆ, ಮೂವತ್ತೈದು ವರ್ಷಗಳ ಹಿಂದೆ ಬರೆಯುತ್ತಿದ್ದ ಯುವ ಕವಿಗಳಿಗೆಲ್ಲ ಈಗ ಅರವತ್ತು ತುಂಬುತ್ತಿದೆ...' ಎಂದು ಕವಿಗೆಳೆಯರೊಬ್ಬರು ಇತ್ತೀಚೆಗೆ ಪೇಚಾಡಿಕೊಂಡರು. ಅರವತ್ತರ ಅಂಚು ದಾಟಿದ್ದು ಒಂದು ಬಗೆಯ ವಯಸ್ಸಾದ ಸಂಕೇತ ಎಂಬುದು ಅವರ ಮಾತಿನ ಧಾಟಿ... ಅದು ತಮಾಷೆಯೋ ಸ್ವವಿಮರ್ಶೆಯೋ ಅಥವಾ ವಯಸ್ಸನ್ನು ಹಿಡಿದಿಡಲಾಗದ ತಹತಹದ ಮನಸ್ಥಿತಿಯೋ... ಅವರ ಗೆಳೆಯ ಬಿ.ಆರ್. ಲಕ್ಷ್ಮಣರಾವ್ ಅವರಿಗೂ ಈಗ ಅರವತ್ತು ತುಂಬಿರುವುದರಿಂದ ಆ ಮನಸ್ಸು ತಣ್ಣಗಾಗಿರಬೇಕು.B.R Lakshman Rao

ಕವಿಗಳಿಗೆ ವಯಸ್ಸಿನ ಜೊತೆಗಿನ ಆತ್ಮೀಯತೆ ವಿಚಿತ್ರವಾದುದು, ತಮ್ಮ ಕೃತಿಗಳ ಜೊತೆಗೆ ತಮ್ಮ ಕಿರಿಯ ವಯಸ್ಸನ್ನು ಸಮೀಕರಿಸಿಕೊಂಡು ಸಂಭ್ರಮಿಸುವ ಅವರ ಖುಷಿಯ ಕ್ಷಣಗಳೇ ವಿಚಿತ್ರ. ಆದರೆ ಲಕ್ಷ್ಮಣರಾಯರಿಗೆ ಇದೀಗಲೂ `ಗೋಪಿ ಮತ್ತು ಗಾಂಡಲೀನ' ಬರೆದ ವಯಸ್ಸಿನಂತೆಯೇ ಪೋಲಿ ಗೆಳೆಯನಾಗಿ, ಕಣ್ಣಲ್ಲೇ ಮಾತಾಡುವ, ಕಪ್ಪು ಮೀಸೆಯ ತುದಿಯಲ್ಲೇ ತುಂಟನಗು ಚೆಲ್ಲುತ್ತಿದ್ದರೂ ಲಕ್ಷ್ಮಣರಾವ್‌ಗೆ `ಅಧಿಕೃತ' ವಾಗಿ ಅರವತ್ತು ತುಂಬಿರುವುದು, ಸಹಕವಿಗಳಿಗೆ ನಿಟ್ಟುಸಿರು ಬಿಡುವ ಸಮಯ ಆಗಿರಬಹುದಲ್ಲವೇ!

ಮೂರುವರೆ ದಶಕಗಳ ಹಿಂದೆ `ಫೋಟೋಗ್ರಾಫರ್' ಬರೆದಾಗ, `ಗೋಪಿ ಮತ್ತು ಗಾಂಡಲೀನ' ಪ್ರಕಟವಾದಾಗ, ನವ್ಯಪಂಥದ ಯುವಪಡೆಯ ಮುಂದಿನ ಸಾಲಿನಲ್ಲಿದ್ದವರು ಬಿಆರ್‌ಎಲ್. `ಯಾವ ಬಲಾತ್ಕಾರದ ಸಂಕೇತವೂ ಇಲ್ಲದೆ ಇಡೀ ಕವನ ತನ್ನ ಹಂದರಕ್ಕಿಂತ ಹೆಚ್ಚು ಹೇಳುತ್ತಿದೆ' ಎಂದು ಲಂಕೇಶ್ ಅಕ್ಷರ ಹೊಸ ಕಾವ್ಯದಲ್ಲಿ ಫೋಟೋಗ್ರಾಫರ್ ಕವಿತೆಯ ಬಗ್ಗೆ ಬರೆದಿದ್ದರು. ಗೋಪಿ ಮತ್ತು ಗಾಂಡಲೀನ ಕವನ ಸಂಕಲನಕ್ಕೆ ಅವರದ್ದೇ ಮುನ್ನುಡಿ.

ಹೀಗೆ ನವ್ಯಪಂಥದ ಕವಿಯಾಗಿ ಉದ್ಭವಿಸಿ, ಭಾವಗೀತೆಗಳ ಲೋಕಕ್ಕೆ ಜಿಗಿದು, ನೂರಾರು ಕವಿತೆಗಳನ್ನು, ಗುನುಗುನಿಸುವ ಹಾಡುಗಳನ್ನು, ಹೃದಯ ಬೆಚ್ಚಗಾಗಿಸುವ ಸರಳ ಗೀತೆಗಳನ್ನು ನೀಡುತ್ತಲೇ ಇರುವ ಲಕ್ಷ್ಮಣ್‌ರಾವ್‌ಗೆ ಅರವತ್ತು ಕಾಣುವುದಿಲ್ಲ, ...ಅವರ ದೇಹ ಮನಸ್ಸಿಗೆ ಕೂಡ.

****

ಮೊದಲ ದಿನವೇ ಆ ಹುಡುಗ ದಾರ್ಷ್ಟ್ಯದಿಂದ ಮಾತಾಡುತ್ತಿದ್ದಾನೆ ಅನ್ನಿಸಿತ್ತು. ಆದರೆ ಆತನ ಖಚಿತ ಧ್ವನಿ, ಕೆಲಸದ ಬಗೆಗೆ ಕರಾರುವಕ್ಕಾಗಿ ಮಂಡನೆ ಬೇರೆಯವರಂRatnaja, Directorತಲ್ಲದ ಗುಣ ಎಲ್ಲರೂ ಆತನನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಿತ್ತು. ಎರಡು ವರ್ಷಗಳ ಹಿಂದೆ `ನೆನಪಿರಲಿ' ಎಂಬ ಚಿತ್ರವನ್ನು ಆರಂಭಿಸಿದಾಗ ಕಠಿಣ ಮಾತಿನ ಹುಡುಗನಂತೆ ಕಾಣಿಸಿದ್ದ ನಿರ್ದೇಶಕ ರತ್ನಜ ಈಗ ಎಲ್ಲರ ಹೆಮ್ಮೆಗೆ ಪಾತ್ರರಾಗುತ್ತಿದ್ದಾರೆ. ನೆನಪಿರಲಿ ಚಿತ್ರ ಈಗ ಎಲ್ಲ ಐದೂ ಫಿಲಂಫೇರ್ ಪ್ರಶಸ್ತಿಗಳನ್ನು ತನ್ನ ಯಶಸ್ಸಿನ ಗರಿಯಲ್ಲಿ ಸಿಕ್ಕಿಸಿಕೊಂಡಿದೆ. ನಿರ್ಮಾಪಕ, ನಿರ್ದೇಶಕ, ನಟ, ನಟಿಯರು ಎಲ್ಲರೂ ಹೊಸಬರೇ ಇದ್ದ `ನೆನಪಿರಲಿ' ತಂಡದಲ್ಲಿ ಯಜಮಾನರಾಗಿದ್ದವರು ಸಂಗೀತ ನಿರ್ದೇಶಕ ಹಂಸಲೇಖ ಒಬ್ಬರೇ. ಉತ್ತಮ ಚಿತ್ರ, ನಿರ್ದೇಶಕ, ನಟ, ಸಂಗೀತ ನಿರ್ದೇಶಕ ಹೀಗೆ ಎರಡನೇ ಬಾರಿಗೆ ಚಿತ್ರವೊಂದಕ್ಕೆ ಐದು ಪ್ರಶಸ್ತಿಗಳು ಬಂದಂತಾಗಿದೆ. ಕಳೆದ ವರ್ಷ `ಆಪ್ತಮಿತ್ರ' ಈ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಕನ್ನಡ ಚಿತ್ರರಂಗದಲ್ಲಿ ಹುಲುಸಾಗಿ ಬೆಳೆಯುತ್ತಿರುವ ಯೌವನಿಗರ ಅಪ್ರತಿಮ ಸಾಧನೆಗೆ ಹ್ಯಾಟ್ಸ್ ಆಫ್!

ಇನ್ನಷ್ಟು

ಸಿದ್ಧರಾಮಯ್ಯ ಕಷ್ಟಗಳು ನೂರೆಂಟು...

ಹೊನ್ನ ರಾಶಿಯಲ್ಲ; ಬೊಗಸೆ ಪ್ರೀತಿ

ನಿಮ್ಮ ಪತ್ರಿಕೆಯ ಸ್ಪೆಷಾಲಿಟಿ ಏನು?

ಹಾರುವ ಕುದುರೆಯ ಬೆನ್ನ ಏರಿ ...

 

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com