Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 28 July 2008 10:36 PM

ಪುತ್ರ ವ್ಯಾಮೋಹದ ಪಿಡುಗು

(೧೦ ನವೆಂಬರ್ ೨೦೦೬ರ ಸಂಚಿಕೆಯ ಸಂಪಾದಕೀಯ)

 

S.M. Anandu Editor, Vikranta Karnataka Weekly

ಸತ್ಯಮೂರ್ತಿ ಆನಂದೂರು

ಬೆಂಗಳೂರು

smanandur@vikrantakarnataka.com

 

`ನನ್ನ ಮಗನನ್ನು ಬಂಧಿಸಿ ಇಡೀ ಬೆಂಗಳೂರಿಗೇ ಪೊಲೀಸರು ಅವಮಾನ ಮಾಡಿದ್ದಾರೆ' ಎಂದು ಪ್ರಸಾದ್ ಬಿದ್ದಪ್ಪ ಎಂಬ ವ್ಯಕ್ತಿ ಹೇಳಿಕೊಂಡಿರುವುದನ್ನು ನೋಡಿದರೆ ಈ ಮನುಷ್ಯ ಬೆಂಗಳೂರು ಎಂದರೆ ತನ್ನ ಪಾಳೆಪಟ್ಟು ಎಂದು ತಿಳಿದ ಹಾಗಿದೆ. ಅಷ್ಟಕ್ಕೂ ಪ್ರಸಾದ್ ಬಿದ್ದಪ್ಪ ಯಾರು ಎಂಬುದು ಬಹುತೇಕ ಜನರಿಗೆ ಗೊತ್ತಾದದ್ದೇ ಆತನ ಪುತ್ರ ಕುಡಿದು ಪೊಲೀಸರ ಮೇಲೆ ಕೈಮಾಡಿ ಕಂಬಿ ಎಣಿಸಿದ ಮೇಲೆ. ಹಾಗೆಯೇ ಪ್ರಸಾದ್ ಬಿದ್ದಪ್ಪ ಪತ್ನಿ ಜ್ಯೂಡಿತ್ ಎಂಬಾಕೆ ಪೊಲೀಸರ ಕಾಲರ್‌ಗೆ ಕೈಹಾಕಿ ರಂಪ ಮಾಡಿದ ಘಟನೆಯಿಂದಾಗಿ.
 

ಮಕ್ಕಳ ಹಗರಣಗಳು ದೊಡ್ಡದಾಗಬಾರದು; ಮಕ್ಕಳ ಜಗಳಕ್ಕೆ ದೊಡ್ಡವರು ಹೋಗಬಾರದು ಎಂಬುದು ಕಾಲದಿಂದಲೂ ಕೇಳಿಬರುತ್ತಿರುವ ಮಾತು. ಹಾಗೆಯೇ ಯೌವನದಲ್ಲಿ ಎಲ್ಲರೂ ಹಾದಿ ತಪ್ಪಬಹುದಾದ ಅವಕಾಶಗಳು ಬೆಂಗಳೂರಿನಂಥ ನಗರದಲ್ಲಿ ವಿಫುಲವಾಗಿರುವುದರಿಂದ ಅದರ ಬಗ್ಗೆ ಹಿರಿಯರನ್ನು ಬೇಕಾಬಿಟ್ಟಿ ತೆಗಳುವ ಅಥವಾ ಅದನ್ನೇ ನೆಪ ಮಾಡಿಕೊಂಡು, ಪೋಷಕರನ್ನು ಹೀಗಳೆಯುವ ಅಗತ್ಯವಿಲ್ಲ. ಆದರೆ ಪ್ರಸಾದ್ ಬಿದ್ದಪ್ಪ ಥರದವರು ತಮ್ಮ ಮಗ ಆಡಂನನ್ನು ಬೆಂಬಲಿಸಿ ಆಡಿರುವ ಮಾತುಗಳು ಬಹುಶಃ ಇಡೀ ಕನ್ನಡ ನಾಡಿಗೇ ಅವಮಾನ ತರುವಂಥದು.
ಈ ಪ್ರಸಾದ್ ಬಿದ್ದಪ್ಪ ಕನ್ನಡನಾಡಿಗೆ ನೀಡಿದ ಕೊಡುಗೆಯಾದರೂ ಏನು? ಇತ್ತೀಚೆಗೆ ತಾನೇ ವಿದೇಶದಲ್ಲಿ ಸಿಕ್ಕಿಹಾಕಿಕೊಂಡಾಗ ಪ್ರಸಾದ್ ಬಿದ್ದಪ್ಪ ಕನ್ನಡ ನಾಡಿಗೆ ಯಾವ ಬಗೆಯ ಮಾನ ತಂದಿದ್ದರು? ಕಡೆಯಪಕ್ಷ ಮಗ ಮಾಡಿತ ತಪ್ಪಿಗೆ ಬಹಿರಂಗವಾಗಿ ಕ್ಷಮೆ ಕೇಳಿದ್ದರೆ ಬಿದ್ದಪ್ಪನವರ ಮಾತಿಗಾದರೂ ಕೊಂಚ ಮಾನ ಬರುತ್ತಿತ್ತು!
 

ಸ್ವಲ್ಪವಾದರೂ ಮಾನವಂತರಾಗಿ ವರ್ತಿಸಿರುವುದು ಮುಖ್ಯಮಂತ್ರಿ ಕುಮಾರಸ್ವಾಮಿ. ಕಡೆಯಪಕ್ಷ ಈಗ ಹದಿಹರೆಯದ ಹುಡುಗರು ತಪ್ಪು ಮಾಡಿರಬಹುದು, ದಯವಿಟ್ಟು ಅದನ್ನೇ ದೊಡ್ಡದು ಮಾಡಬೇಡಿ ಎಂಬ ಮಾತನ್ನಾದರೂ ಹೇಳಿದ್ದಾರೆ. ಆದರೂ ಅವರು ಒಂದು ಸಂಗತಿಯನ್ನು ಅರಿಯಬೇಕಿತ್ತು. ಅಧಿಕಾರದ ಗದ್ದುಗೆಯಲ್ಲಿರುವಾಗ ಮನೆಯ ಮಕ್ಕಳು ಸಣ್ಣ ತಪ್ಪು ಮಾಡಿದರೂ ಅದೊಂದು ಸುದ್ದಿಯಾಗಲು ಕಾರಣವಿದೆ. ಮುಖ್ಯಮಂತ್ರಿ ಸ್ಥಾನ ಎಂಬುದು ಇಡೀ ಒಂದು ರಾಜ್ಯವನ್ನು ಆಳುವ ಜಾಗ. ಅಂಥ ಜಾಗದಲ್ಲಿರುವ ಜನ ತಮ್ಮ ಕುಟುಂಬವನ್ನು ಸಮರ್ಥವಾಗಿ ನೋಡಿಕೊಳ್ಳದಿದ್ದರೆ ರಾಜ್ಯವನ್ನೇನು ಕಾಪಾಡಿಯಾರು? ಎಂಬುದು ಜನಸಾಮಾನ್ಯರ ಎದುರು ನಿಲ್ಲುವ ಪ್ರಶ್ನೆ.
 

ಆದರೆ ದೇವೇಗೌಡರು ಹಾಗು ಕುಮಾರಸ್ವಾಮಿಯವರು ಹೇಳಿರುವ ಇನ್ನೊಂದು ಮಾತು ನಿಜಕ್ಕೂ ಆತಂಕ ಹುಟ್ಟಿಸುತ್ತದೆ. `ಈ ಪ್ರಕರಣದಲ್ಲಿ ಕಾಣದ ಕೈಗಳ ಕೈವಾಡವಿದೆ, ಸದ್ಯದಲ್ಲೇ ಅದು ಬಯಲಾಗಲಿದೆ' ಎಂದು ಇಬ್ಬರೂ ರಾಜಕಾರಣದ ಮಾತಾಡಿರುವುದು ನಿಜಕ್ಕೂ ದುರಂತ. ಸಿ.ಡಿ. ಹೊರಬಂದರೂ ಕಾಣದ ಕೈಗಳ ಕುತಂತ್ರ; ಮಗ ಮಧ್ಯರಾತ್ರಿ ಹೊಡೆದಾಡಿ ಬಂದರೂ ಅದು ಕಾಣದ ಕೈಗಳ ಕೈವಾಡ- ಹೀಗೆ ಸಮರ್ಥನೆ ಮಾಡಿಕೊಳ್ಳುತ್ತ ಹೋದರೆ ಅದು ಜನರಲ್ಲಿ ಅಸಹ್ಯ ಹುಟ್ಟಿಸುತ್ತದೆ.
 

ಪುತ್ಯವ್ಯಾಮೋಹ ರಾಜಕೀಯದ ಒಳಗೆ ಸುಳಿಯಬಾರದು; ಹಾಗೆಯೇ ಆಡಂ ಥರದವರನ್ನು ರಕ್ಷಿಸುವ ಹಂತ ತಲುಪಬಾರದು. ಬಹುಶಃ ತುಡುಗು ಮಕ್ಕಳಿಗಿಂತ ಮೊದಲು ಅಪ್ಪಂದಿರ ಈ ಪುತ್ರ ವ್ಯಾಮೋಹದ ಪಿಡುಗು ತೊಲಗದಿದ್ದರೆ ಅದು ಬೆಂಗಳೂರಿಗೆ ಮಾತ್ರವಲ್ಲ ಕರುನಾಡೆಂಬ ಈ ರಾಜ್ಯಕ್ಕೂ ಅವಮಾನ.

 

ಇನ್ನಷ್ಟು

ಎದೆ ತುಂಬಿ ಹಾಡಿದ `ರಾಷ್ಟ್ರಕವಿ'

ಹಣತೆ ಕಿರಿದಾದರೇನು ಬೆಳಕು ಕಿರಿದೆ?

ಒಂದು ಆತ್ಮ ವಿಶ್ವಾಸದ ಕೋಲ್ಮಿಂಚು

ನಕಲಿಗೆ ಹಾಳಾದ ಅಸಲೀ ಸಮಯ

ಇತಿಹಾಸದ ಗಾಯ ಕೆರೆಯುವ ಮುನ್ನ

ಎಲ್ಲ ತತ್ವದ ಎಲ್ಲೆ ಮೀರಿ...

ಮಾಗಿದ ಮನಸ್ಸು; ಹರೆಯದ ಹುಮ್ಮಸ್ಸು

ಸಿದ್ಧರಾಮಯ್ಯ ಕಷ್ಟಗಳು ನೂರೆಂಟು...

ಹೊನ್ನ ರಾಶಿಯಲ್ಲ; ಬೊಗಸೆ ಪ್ರೀತಿ

ನಿಮ್ಮ ಪತ್ರಿಕೆಯ ಸ್ಪೆಷಾಲಿಟಿ ಏನು?

ಹಾರುವ ಕುದುರೆಯ ಬೆನ್ನ ಏರಿ ...

 

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com