|
ಸಂಪಾದಕರ ಮಾತುಗಳು
ಆತ್ಮೀಯರೆ,
ಒಂದು ಹೊಸ ತಲೆಮಾರಿನ ಕನ್ನಡ ವಾರಪತ್ರಿಕೆಯಾಗಲೆಂಬ
ಆಶಯದೊಂದಿಗೆ ಸೃಷ್ಟಿಸಲಾದ `ವಿಕ್ರಾಂತ ಕರ್ನಾಟಕ' ವಾರಪತ್ರಿಕೆಯ
ಗೌರವ ಸಂಪಾದಕನಾಗಿ ಈ ವಾರದಿಂದ ತೊಡಗಿಸಿಕೊಂಡಿದ್ದೇನೆಂದು
ತಮಗೆ ತಿಳಿಸಲು ಹರ್ಷಿಸುತ್ತೇನೆ.
ಮುಕ್ತಮಾರುಕಟ್ಟೆ ಹಾಗೂ ಜಾಗತೀಕರಣದ ಇಂದಿನ ಸ್ಪರ್ಧಾತ್ಮಕ
ಬದುಕಿನ ಪ್ರಖರತೆಯಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಶಿಕ್ಷಣ,
ರಾಜಕಾರಣ ಮತ್ತು ಒಟ್ಟಾರೆ ಆರ್ಥಿಕ - ಸಾಮಾಜಿಕ
ಪರಿಸರದಲ್ಲಾಗುತ್ತಿರುವ ಬದಲಾವಣೆಗಳು ಹಾಗೂ ಮನುಷ್ಯ
ಸಂಬಂಧಗಳ ನಡುವಿನ ತಲ್ಲಣಗಳಿಗೆ ಸಕಾರಾತ್ಮಕವಾಗಿ
ಸ್ಪಂದಿಸಬೇಕೆಂಬ ಹಂಬಲ `ವಿಕ್ರಾಂತ' ಪತ್ರಿಕೆಯ ಬಳಗದ್ದು...
ಪ್ರಚಲಿತ
ಸುವರ್ಣ ಕರ್ನಾಟಕ ವರ್ಷಾಚರಣೆ ಕೇವಲ ಸರಕಾರಿ
ಸಂಭ್ರಮವೆನಿಸಕೂಡದು... ಕೇವಲ ಅಧಿಕಾರಸ್ಥರ ಆಡಂಬೋಲಕ್ಕೆ
ಸೀಮಿತಗೊಳ್ಳಕೂಡದು... ಅದು ಕನ್ನಡ ನಾಡಿನ ಸಮಸ್ತ
ಜನಸಾಮಾನ್ಯರ ಕೌಟುಂಬಿಕ ಬದುಕಿನ ಸಡಗರವೆನ್ನಿಸಿಕೊಳ್ಳಬೇಕು...
ಎಲ್ಲ ಶೋಷಿತ ಸಮುದಾಯಗಳು ಹಾಗು ವಂಚಿತ ವರ್ಗಗಳಲ್ಲಿ ಹೊಸ
ಭರವಸೆ, ನೆಮ್ಮದಿ ಮೂಡಿಸಬಲ್ಲ ಹರ್ಷೋಲ್ಲಾಸದ
ಸಂದರ್ಭವಾಗಲೆಂಬ ತುಡಿತವೇ ಈ ವಾರಪತ್ರಿಕೆಯ ಜೀವಾಳವೆನಿಸಿದೆ.
ಪತ್ರಿಕೋದ್ಯಮದ ಇಂತಹ ಒಂದು ವಿನೂತನ ಪ್ರಯೋಗದಲ್ಲಿ ನಿಮ್ಮ
ಪ್ರತಿಭೆ, ಕ್ರಿಯಾಶೀಲತೆ, ಸಾಧನೆ ಮತ್ತು ಅನುಭವಗಳ ಬೆಂಬಲ
ಅಗತ್ಯವಿರುವುದರಿಂದ `ವಿಕ್ರಾಂತ ಕರ್ನಾಟಕ' ದ ಮುಂಬರುವ
ಸಂಚಿಕೆಗಳಲ್ಲಿ ತಮ್ಮ ಸಹಭಾಗಿತ್ವವನ್ನು ಕೋರುತ್ತೇನೆ.
ಕತೆ, ಕವನ,
ವೈಚಾರಿಕ ಬರಹ, ಹಾಸ್ಯಲೇಖನ, ಸಾಹಿತ್ಯಿಕ ರಾಜಕೀಯ - ಶೈಕ್ಷಣಿಕ
ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯೆ, ವಿಮರ್ಶೆ ಇತ್ಯಾದಿಗಳನ್ನು ತಮ್ಮ
ವ್ಯವಧಾನ ಹಾಗು ಸ್ಫೂರ್ತಿಗನುಸಾರವಾಗಿ ನಮ್ಮಲ್ಲಿ ಪ್ರಕಟಣೆಗೆ
ರವಾನಿಸಿ ಹುರಿದುಂಬಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.
ಹಾಗೆಯೇ
ಪತ್ರಿಕೆಯ ವಿನ್ಯಾಸ, ಹೂರಣ ಹಾಗೂ ಲೇಖನಗಳ ಗುಣಮಟ್ಟದ ಬಗ್ಗೆ
ತಮ್ಮ ಪ್ರತಿಸ್ಪಂದನವೂ ನಿರಂತರವಾಗಿ ಬರುತ್ತಿರಲೆಂದು ತಮ್ಮಲ್ಲಿ
ಅರಿಕೆ ಮಾಡಿಕೊಳ್ಳುತ್ತೇನೆ.
ಇಂತಿ ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ
(ರವೀಂದ್ರ ರೇಷ್ಮೆ)
ಗೌರವ ಸಂಪಾದಕ
ಇನ್ನಷ್ಟು
ನಿಮ್ಮ ಬರಹ-ಅನಿಸಿಕೆ
ಕಳಿಸಬೇಕೆ?
ಬರಹ ಕಳಿಸೋದು ಹೇಗೆ ಅಂತ
ಯೋಚಿಸುತ್ತಾ ಇದಿರಾ? ಇಲ್ಲಿದೆ ಸುಲಭ ಮಾರ್ಗ ನೋಡಿ. . .
ವಿಕ್ರಾಂತ
ಕರ್ನಾಟಕದ ಗೌರವ ಸಂಪಾದಕರಾಗಿ ರವೀಂದ್ರ ರೇಷ್ಮೆ
ಓದುಗರ
ಪತ್ರಗಳು
ನಿಮ್ಮ ಅನಿಸಿಕೆಗಳಿಗೆ ಸ್ವಾಗತ
|