ವಿಕ್ರಾಂತ ಕರ್ನಾಟಕದ
ಒಂಬತ್ತನೇ ಸಂಚಿಕೆಯಲ್ಲಿ:

ಸಂಪಾದಕೀಯ - ಒಂದು ಆತ್ಮ ವಿಶ್ವಾಸದ ಕೋಲ್ಮಿಂಚು
ಕಡೆಗೂ ಸರ್ಕಾರ ಧೈರ್ಯವಾಗಿ ತೀರ್ಮಾನ ತೆಗೆದುಕೊಂಡಿದೆ.
ಕರ್ನಾಟಕದ ಶಾಲೆಗಳಲ್ಲಿ ಮಕ್ಕಳಿಗೆ ಒಂದನೇ ತರಗತಿಯಿಂದಲೇ
ಇಂಗ್ಲಿಷ್ ಹೇಳಿಕೊಡುವ ವಿಚಾರವಾಗಿ ಸುಮಾರು ಆರೇಳು ತಿಂಗಳಿಂದಲೂ
ಒಂದು ಬಗೆಯ ಬೇಕು-ಬೇಡಗಳ ವಾದವಿವಾದಗಳು ದೊಡ್ಡವರ
ಮಟ್ಟದಲ್ಲಿ ನಡೆಯುತ್ತಲೇ ಇತ್ತು. . .
ಓದುಗರ ಪತ್ರಗಳು
ಪ್ರಬುದ್ಧತೆಯತ್ತ `ವಿಕ್ರಾಂತ ಕರ್ನಾಟಕ'
ಮಾನ್ಯರೆ,
ಪ್ರಥಮ ಸಂಚಿಕೆಯಿಂದಲೂ `ವಿಕ್ರಾಂತ ಕರ್ನಾಟಕ' ವನ್ನು
ಗಮನಿಸುತ್ತಿರುವ ನನಗೆ ಪತ್ರಿಕೆ ಸಂಚಿಕೆಯಿಂದ ಸಂಚಿಕೆಗೆ ಹೆಚ್ಚು
ಪ್ರಬುದ್ಧಗೊಳ್ಳುತ್ತ ಸಾಗಿರುವುದನ್ನು ಕಂಡು ಅತೀವ
ಸಂತಸವಾಗುತ್ತದೆ. ಕೇವಲ ಹೊಸರುಚಿ, ಮೆಹಂದಿ, ಪ್ರವಾಸಿ ತಾಣಗಳ
ಪರಿಚಯದಲ್ಲೇ ಪುಟ ತುಂಬಿಸಿ ಕಳಿಸುತ್ತಿದ್ದ ಕನ್ನಡದ ಸಾಪ್ತಾಹಿಕ,
ಮಾಸಿಕಗಳ ನಡುವೆ ವೈಚಾರಿಕ, ಸಾಂಸ್ಕೃತಿಕ, ಸಾಮಾಜಿಕ
ಅಂಶಗಳನ್ನು ವಿಶೇಷ ರೀತಿಯಲ್ಲಿ ರೂಪುಗೊಳ್ಳುತ್ತಿರುವ `ವಿಕ್ರಾಂತ
ಕರ್ನಾಟಕ' ಎಲ್ಲಾ ಬಗೆಯ ಓದುಗರನ್ನು ತಲುಪಬೇಕಿದೆ- ಪತ್ರಿಕೆಯ
ಆಕರ್ಷಣೆ ನೋಡಿದರೆ ಅದು ಖಂಡಿತವಾಗಿಯೂ ಎಲ್ಲರನ್ನೂ ತಲುಪುತ್ತದೆ
ಎನ್ನುವ ಆಶಯ ನನ್ನದು.
- ಮಂಜುನಾಥ್ ಲತಾ
ಮಾನ್ಯರೆ,
`ವಿಕ್ರಾಂತ ಕರ್ನಾಟಕ'ದ ಸಂಚಿಕೆಗಳನ್ನು ತುಂಬಾ ಕುತೂಹಲದಿಂದ ಓದಿ
ಖುಷಿಪಟ್ಟಿದ್ದೇನೆ. ಹೊಸ ಬಗೆಯ ಸಾಪ್ತಾಹಿಕವೊಂದು ಕನ್ನಡ ನೆಲದ
ತೊಟ್ಟಿಲಲ್ಲಿ ಅರಳಿಕೊಳ್ಳುತ್ತಿರುವುದು ಆನಂದದ ಸಂಗತಿ.
ವಿಚಾರಗಳನ್ನು ನೇರವಾಗಿ, ಸರಳವಾಗಿ ಹೇಳುವ ನಿಮ್ಮ ಪರಿ
ಅನನ್ಯವಾದುದು. ಈ ಕೆಚ್ಚು, ಕಾವು, ಹೊಸನೋಟ, ಹುರುಪಿನ ಓಟ
ಸದಾ ಇರಲಿ. ಅನುಭವಿಗಳಾದ ನಿಮಗೆ ಸವಾಲು, ಸಂಕಟ, ಸಮಸ್ಯೆ,
ಸಾಹಸಗಳ ಅರಿವು ಇದ್ದೇ ಇದೆ. ಅವರಿವರ ಕಿವಿಮಾತು ಬುದ್ಧಿಮಾತು
ಬೇಕಾಗಿಲ್ಲ. ಯಾಕೆಂದರೆ- ಸೋತಾಗ ಯಾರಿಗೆ ಯಾರೂ ಇಲ್ಲ!
ಮುನ್ನುಗ್ಗಿ, ಮನ ಅರಳಿಸಿ, ಜನಕೋಟಿಯ ವಿಶ್ವಾಸ ಗೆಲ್ಲಿ. ಲೇಖಕ
ಬಳಗ, ವಾಚಕ ವೃಂದ, ಅಕ್ಷರ ಪ್ರೇಮಿಗಳ ಅಕ್ಕರೆ, ಸಾಹಿತ್ಯ
ಪ್ರೇಮಿಗಳ ಸೇವಂತಿ ಘಮಲು, ಚಿಂತನಶೀಲರ ಚೈತನ್ಯ ಚಿರಾಪುಂಜಿ,
ನೆಲದ ಮಕ್ಕಳ ನಲ್ಮೆಯ ನೈವೇದ್ಯ ಕ್ರಮೇಣ ವೃದ್ಧಿಸುವುದು
ಶತಃಸಿದ್ಧ. ಹೈಟೆಕ್ ಕಾಲದಲ್ಲಿ ಹತ್ತು ರೂಪಾಯಿ ಹೊರೆಯಲ್ಲ. ನಿಮ್ಮ
ತಂಡದ ಪರಿಶ್ರಮಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಶುಭವಾಗಲಿ.
- ಆರೂರು ಲಕ್ಷ್ಮಣ್ ಶೇಟ್
ಹುಬ್ಬಳ್ಳಿ
ಮಾನ್ಯರೆ,
ತಾವು ವಿಶ್ವಾಸವಿರಿಸಿ ಕಳುಹಿಸಿದ `ವಿಕ್ರಾಂತ ಕರ್ನಾಟಕ' ಪತ್ರಿಕೆಯ
ಬಿಡುಗಡೆ ಸಂಚಿಕೆ ಕೈಸೇರಿತು; ಕೃತಜ್ಞತೆಗಳು.
ಪತ್ರಿಕೆಯ ಶೀರೋನಾಮೆಗೆ ತಕ್ಕಂತೆ ಉತ್ತಮ ಲೇಖನಾದಿಗಳು
ಆಕರ್ಷಕವಾಗಿ ಪ್ರಕಟವಾಗಿವೆ. ಇಷ್ಟು ಆಕರ್ಷಕ ರೀತಿಯ ಮುದ್ರಣ
ಲೇಖನ ಚಿತ್ರಗಳಿಂದ ಕೂಡಿದ ಪತ್ರಿಕೆ ಪ್ರಾರಂಭಿಸಿದ ನಿಮಗೆ
ಶ್ರೇಯಸ್ಸು ಬಯಸುತ್ತೇನೆ. ವಿಕ್ರಾಂತ ಕರ್ನಾಟಕ
ಚಿರಾಯುವಾಗಲೆಂದು ಪ್ರಾರ್ಥನೆ.
- ಕಯ್ಯಾರ ಕಿಞಿಣ್ಣ ರೈ
ಪೆಂಡಾಲ
ಮಾನ್ಯರೆ,
೫ ನೆಯ ಸಂಚಿಕೆ ಉತ್ತಮವಾಗಿ ಬಂದಿದೆ. ನಗರ ಸಂಚಾರಿಯಾದ ನಾನು
ಈ ವಾರ ಅತಿಹೆಚ್ಚು ಬಸ್ ಪ್ರಯಾಣಿಕರ ಬಳಿ ಈ ಪುಸ್ತಕ ಕಂಡೆ.
ಟಿವಿಯಲ್ಲಿ ಕ್ರೈಂ ಬಗ್ಗೆ ಬರುವ ಧಾರಾವಾಹಿಗಳು ಇವೆ. ಈ
ಪತ್ರಿಕೆಯಲ್ಲಿ ಕ್ರೈಂ ಬಗ್ಗೆ ವೈಭವೀಕರಣ ಲೇಖನಗಳು ಬೇಡ.
ಇದಕ್ಕಾಗಿ ಹಲವು ಕ್ರೈಂ ಪತ್ರಿಕೆಗಳಿವೆ. ಉತ್ತಮ ಲೇಖನಗಳು ಬರಲಿ.
ದಿ ವೀಕ್, ಇಂಡಿಯಾ ಟುಡೇಗಳು ೧-೩-೫ ವರ್ಷಗಳ ಚಂದಾವನ್ನು
ರಿಯಾಯಿತಿ ದರದಲ್ಲಿ ಪಡೆದಾಗ ನಮ್ಮ ಕನ್ನಡ ಪತ್ರಿಕೆಗಳು ಏಕೆ ಈ
ರೀತಿ ರಿಯಾಯಿತಿ ನೀಡುತ್ತಿಲ್ಲವೆಂಬ ನನ್ನ ಕೊರಗಿಗೆ ಈ ಪತ್ರಿಕೆ ಉತ್ತರ
ನೀಡಿದೆ. ಇದು ಕನ್ನಡದ ಸಾಪ್ತಾಹಿಕಗಳಲ್ಲಿ ಹೊಸದು. ಇದರ ಲಾಭ
ಕನ್ನಡಿಗರೆಲ್ಲ ಪಡೆಯಲಿ.
- ಎನ್. ಗೋಪಾಲರಾವ್
ಬೆಂಗಳೂರು
ಮಾನ್ಯರೆ,
ಅಬ್ಬಬ್ಬಾ ಅಲ್ಪ ಕಾಲದಲ್ಲಿಯೇ ಕನ್ನಡ ಪತ್ರಿಕಾರಂಗದಲ್ಲಿ ಕ್ರಾಂತಿಯ
ಅಲೆ ಎಬ್ಬಿಸಿದ ವಿಕ್ರಾಂತದ ವಿಕ್ರಮವನ್ನು ಹೊಗಳಿದಷ್ಟು
ಉಳಿಯುತ್ತದೆ. ಸುಧಾ, ತರಂಗ, ಕರ್ಮವೀರ, ಮಂಗಳಗಳನ್ನು
ನಾನು ಓದುವುದನ್ನು ನಿಲ್ಲಿಸಿ ಬಹಳ ಕಾಲವಾಯಿತು. ದಯವಿಟ್ಟು
ವಿಕ್ರಾಂತದಲ್ಲಿ ಗತಕಾಲದ ಬೇಡಿಕೆಯಾದ ಕತೆ ಕವನ
ಕಾದಂಬರಿಗಳನ್ನು ಹಾಕಬೇಡಿ! ಸದರಿ ಹಳಸಲು ಕೆಲಸ ಮಾಡಲು
ಸಾಕಷ್ಟು ಬೇರೆ ಪತ್ರಿಕೆಗಳಿವೆ! ಹೊಸ ಸೆನ್ಸೇಶನ್ ವಿಕ್ರಾಂತದಲ್ಲಿ
ಮಾತ್ರ ಬರಲಿ. ಆಧುನಿಕ ಕಾಲದ ಬೇಡಿಕೆಗಳಾದ ಗಾಸಿಪ್, ಗ್ಲಾಮರ್,
ರೂಮರ್, ವಿಮರ್ಶೆ, ವಿಶ್ಲೇಷಣೆ, ಸಂಶೋಧನೆ, ತನಿಖಾವರದಿ,
ಪ್ರವಾಸ ಕಥನ, ಹಾಸ್ಯ, ನಗೆ ಲೇಖನಗಳು, ಕಾರ್ಟೂನ್‌ಗಳು ಹೆಚ್ಚಾಗಿ
ಮೂಡಿ ಬರಲಿ. ಸುದ್ದಿಸ್ವಾರಸ್ಯದ ಮಸಾಲ ಮಿರ್ಚಿಗಳಿಂದ ಮಿಂಚಿ
ವಿಕ್ರಾಂತದ್ದು ತ್ರಿವಿಕ್ರಮನ ಹೆಜ್ಜೆಯಾಗಲಿ!
- ಮಾಧವಾಚಾರ್ಯ
ಹಿರಿಯಡ್ಕ
ಮಾನ್ಯರೆ,
ತಾವು ಬರೆದ ಪತ್ರಕ್ಕಾಗಿ ಜುಲೈ ೩೧ಕ್ಕೆ ಉತ್ತರವನ್ನು ತಮಗೆ
ಬರೆದೆ. ಇಷ್ಟು ಬೇಗ ಪತ್ರಿಕೆ ಹೊರಬರುತ್ತದೆಂದು ಭಾವಿಸಿರಲಿಲ್ಲ!
ಇನ್ನೂ ಒಂದಿಷ್ಟು ಕಾಲ ಹಿಡಿಯಬಹುದು ಅಂದುಕೊಂಡಿದ್ದೆ. ಆದರೆ ಇಂದು
ನಾನು `ವಿಕ್ರಾಂತ ಕರ್ನಾಟಕ'ವನ್ನು ಮಾರ್ಕೆಟ್ಟಿನಲ್ಲಿ ಕಂಡು
ಕುತೂಹಲಗೊಂಡೆ!
೭ನೇ ಸಂಚಿಕೆ ನೋಡಿ ತುಂಬ ಸಂತೋಷವಾಯಿತು. ಇದು ಪ್ರಯೋಗಶೀಲ
ಪತ್ರಿಕೆಯೆಂದಾಗಲಿ, ಹೊಸ ಪತ್ರಿಕೆಯೆಂದಾಗಲಿ ಏನೂ ಅನ್ನಿಸಲಿಲ್ಲ.
ನಿರಂತರ ಬರುತ್ತಿರುವ ಪತ್ರಿಕೆಯಂತೆಯೇ ಬಂದಿದೆ. ಸಕಲ
ದೃಷ್ಟಿಯಲ್ಲಿ ಆಪ್ಯಾಯವಾಗಿದೆ. ಅತ್ಯಂತ ಆಕರ್ಷಕವಾಗಿದೆ. ತುಂಬ
ಚೆಂದವಾದ ಕಾಗದವನ್ನು ಬಳಸಲಾಗಿದೆ. ಇದಕ್ಕಿಂತಲೂ ಹೆಚ್ಚಾಗಿ
ನಾವಿನ್ಯಕ್ಕೆ ತೆರೆದುಕೊಂಡಲ್ಲಿ ಇನ್ನೂ ಆಕರ್ಷಕವಾಗುವುದರಲ್ಲಿ
ಮತ್ತು ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯವಾಗುವುದರಲ್ಲಿ ಬಹಳ
ದಿನ ಬೇಕಾಗಿಲ್ಲ. ತುಂಬ ಸಂತೋಷ, ಅಭಿನಂದನೆಗಳು.
- ಅರ್ಜುನ ತಾ. ಕೋರಟಕರ
ಜಮಖಂಡಿ
ಮಾನ್ಯ ಸಂಪಾದಕರಿಗೆ,
ಅನೇಕ ವಿವಿಧ ವಿಚಾರಗಳನ್ನೊಳಗೊಂಡ ವಿಕ್ರಾಂತ ಕರ್ನಾಟಕ ಪತ್ರಿಕೆ
ಚೆನ್ನಾಗಿ ಮೂಡಿಬರುತ್ತಿದೆ. ತಮಗೆ ಅಭಿನಂದನೆಗಳು. ತಮ್ಮ
ಪತ್ರಿಕೆಯಲ್ಲಿ ಹಾಸ್ಯ ಮತ್ತು ಉತ್ತಮ ವ್ಯಂಗ್ಯ ಚಿತ್ರಗಳಿಗೂ
ಪ್ರಾಧಾನ್ಯತೆ ನೀಡಬೇಕೆಂದು ನನ್ನ ವಿನಂತಿ.
- ಬಿ.ವಿ. ಪಾಂಡುರಂಗರಾವ್
ಬೆಂಗಳೂರು
ಕೆಲವು ಟಿಪ್ಪಣಿ
ನಂಬಿಕೆಯನ್ನೂ `ಲೂಟಿ' ಹೊಡೆದರಂತಲ್ಲವೆ?
`ನಿಮ್ಮ ಹತ್ತಿರ ಐದು ನಿಮಿಷ ಮಾತಾಡಬಹುದಾ ಸಾರ್? ಎನ್ನುವ
ಮಾತು ಕೇಳಿದಾಗ ಗಲಿಬಿಲಿಯಾಯ್ತು. ಆಕೆ ಯಾರೋ ಅಪರಿಚಿತ
ಹೆಣ್ಣುಮಗಳು. ಅದರಲ್ಲೂ ಅದೊಂದು ಅಫೀಷಿಯಲ್ ಕಾಲ್.
ಟೆಲಿಫೋನ್ ಕಚೇರಿಯ ಡೈರೆಕ್ಟರಿ ಎನ್‌ಕ್ವಯರಿಯ ವಿಭಾಗದ
ಹೆಣ್ಣುಮಗಳು. . .
ಈ ಜನ
ಶಬಾನಾ ಅಜ್ಮಿ
ಎಂಟು ವರ್ಷದ ಪುಟ್ಟ ಹುಡುಗಿಗೆ ಒಂದು ವಿಚಾರ ಅರ್ಥವಾಗಿರಲಿಲ್ಲ.
ಅದೇಕೆ ಎಲ್ಲರ ಅಪ್ಪಂದಿರು ದಿನಾ ಬೆಳಗ್ಗೆ ಊಟದ ಡಬ್ಬಿ ಹಿಡಿದು ಆಫೀಸ್‌ಗೆ
ಹೋಗುತ್ತಾರೆ; ನನ್ನ ಅಪ್ಪ ಮಾತ್ರ ಯಾವಾಗಲೂ ಮನೆಯಲ್ಲೇ
ಕುಳಿತಿರುತ್ತಾನೆ. ಎಲ್ಲರ ಅಪ್ಪಂದಿರು . . .
ರೂತ್ ಮನೋರಮಾ
ಇತ್ತೀಚೆಗೆ ಎಲ್ಲ ರಂಗಗಳಲ್ಲೂ ಮಾಧ್ಯಮದವರ ಮುಂದೆ
ತೋರಿಕೆಯ ಹೋರಾಟಗಾರರೇ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿರುವಾಗ,
ನೈಜ ಹೋರಾಟಗಾರ್ತಿಯೊಬ್ಬರಿಗೆ ಪರ್ಯಾಯ ನೊಬೆಲ್ ಪ್ರಶಸ್ತಿ ಎಂದು
ಹೆಸರಾಗಿರುವ `ರೈಟ್ ಲೈವ್ಲಿಹುಡ್'ಪ್ರಶಸ್ತಿ ದೊರಕಿರುವುದು . .
.
ಸಿ.ಟಿ. ರವಿ
ಕೆಲವರಿಗೆ ಜಗತ್ತೆಲ್ಲಾ ಶಾಂತ ಪ್ರಶಾಂತವಾಗಿದ್ದರೆ ತಳಮಳ
ಶುರುವಾಗುತ್ತದೆ. ತಿಳಿ ನೀರ ಕೊಳ ಕಂಡ ಕೂಡಲೆ ಕಲ್ಲೆಸೆದು ರಾಡಿ
ಎಬ್ಬಿಸಿ ಅದರ ಅಲೆಯಲ್ಲಿ ತಮ್ಮ ಬಿಂಬ ನೋಡಿ ಸಂತೋಷದಿದ್ದರೆ
ಸಮಾಧಾನವಿಲ್ಲ. ಅಂಥವರ ಪೈಕಿ ಈ ಬಾರಿ ಚಿಕ್ಕಮಗಳೂರಿನಿಂದ
ಆಯ್ಕೆಯಾಗಿ ಬಂದಿರುವ . . .
ಮುಖಪುಟ
`ನಾನು ಮಾಡಿದ ಅಪರಾಧವೇನು?'
`ಆಕೆಗೆ ಹುಚ್ಚು ಹಿಡಿದಿದೆ' ಎಂದು ಕೇರಳದ ಮಂತ್ರಿ ಸುಧಾಕರನ್
ಮೊನ್ನೆ ಕೇರಳದಲ್ಲಿ ಸಿಡಿಮಿಡಿಗೊಂಡು ಹೇಳಿದರು. ಸುಧಾಕರನ್ ಈ
ಬಗೆಯ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಕೆಲವು
ವಾರಗಳ ಹಿಂದೆ ಜಯಮಾಲಾ ಅನಗತ್ಯವಾಗಿ ಪ್ರಚಾರ ಪಡೆಯಲು . .
.
ಧಾರ್ಮಿಕ ಹಕ್ಕು-ಶೋಷಣೆ
ಒಂದು ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಒಂದು ದೇವಸ್ಥಾನ
`ಹುಯಿಲು' ಕೊಡುವುದಕ್ಕೆ ಪ್ರಸಿದ್ಧ. `ಹುಯಿಲು' ಅಂದರೆ ತಮಗೆ
ಆಗದವರ ವಿರುದ್ಧ ದೇವಸ್ಥಾನದಲ್ಲಿ ದೂರು ಕೊಡುವುದು.
ನ್ಯಾಯ ತೀರ್ಮಾನಕ್ಕೆ ಪ್ರಸಿದ್ಧವಾದ ಈ ದೇವಸ್ಥಾನದಲ್ಲಿ ಯಾರ
ವಿರುದ್ಧ. . .
ಕೋರ್ಟಿಗೆ ಹೋಗುವುದು ಅನಿವಾರ್ಯ
ಇದೆಲ್ಲ ಆರಂಭವಾಗುವ ಮೊದಲೇ ಜಯಮಾಲಾ ಈ ರಂಪಾಟಗಳಿಗೆ
ಕಾರಣರಾದವರ ಮೇಲೆ ಕೇಸು ಹಾಕಿದ್ದರೆ ಅದು ಇಲ್ಲಿಯವರೆಗೆ
ಬೆಳೆಯುತ್ತಲೇ ಇರಲಿಲ್ಲ. ಆದರೆ ದೇವರ ಭಯ, ನಂಬಿಕೆ, ಭಕ್ತಿ
ಅವರನ್ನು ಮೌನವಾಗಿರುವಂತೆ ಮಾಡಿತೆ? ಈಗಲೂ ಕಾಲ ಮಿಂಚಿಲ್ಲ. . .
ಮಿಂಚಿದ ಕಾಲದ ಅಂಚಿನಲ್ಲಿ...
ಜಯಮಾಲಾ ಶಬರಿಮಲೈಗೆ ೧೯೮೬ರಲ್ಲಿ ಹೋಗಿದ್ದ ಬಗ್ಗೆ ಆಕೆಯೇ
ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಲಂಕೇಶ್ ಪತ್ರಿಕೆಯ
ಸಂಪಾದಕರಾಗಿದ್ದ ಪಿ.ಲಂಕೇಶ್ ಮಾಡಿದ ಸಂದರ್ಶನದ ಮಧ್ಯದಲ್ಲಿ ಆ
ವಿವರಗಳು ಬರುತ್ತವೆ. ಈ ಲೇಖನ ಈಗಲೂ ಉಲ್ಲಾಸ ನೀಡುವಷ್ಟು ತಾಜಾ
ಆಗಿದೆ. . .
ಅಪಸ್ವರದ ಮಧ್ಯೆ ಕನ್ನಡ ಮಕ್ಕಳಿಗೆ ಎಬಿಸಿಡಿ
ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಒಂದನೇ ತರಗತಿಯಿಂದಲೇ
ಇಂಗ್ಲಿಷ್ ಕಲಿಸಬೇಕೆಂಬ ಪ್ರಸ್ತಾಪಿತ ಯೋಜನೆಗೆ ರಾಜ್ಯ ಸರ್ಕಾರ
ಇದೀಗ ಒಪ್ಪಿಗೆ ನೀಡಿದೆ. ಇದಕ್ಕೆ ಪರ-ವಿರೋಧ ಪ್ರತಿಕ್ರಿಯೆಗಳೂ
ವ್ಯಕ್ತವಾಗಿವೆ. ಕನಿಷ್ಠ ೪ನೇ ತರಗತಿಯವರಿಗಾದರೂ ಮಾತೃ
ಭಾಷೆಯಲ್ಲಿಯೇ ಶಿಕ್ಷಣ ನಡೆಯಬೇಕು. ಈಗ ೫ನೇ ತರಗತಿಯಿಂದ
ಇಂಗ್ಲಿಷ್ ಇರುವುದು ಸರಿಯಾದ ಕ್ರಮವಾಗಿದೆ. ಪ್ರಪಂಚದ ಯಾವ
ಭಾಷೆಯಾದರೂ ಮೊದಲು ಮಾತೃ ಭಾಷೆಗೆ ಆದ್ಯತೆ
ನೀಡಲಾಗುತ್ತದೆ. ಹೀಗಿರುವಾಗ ಕನ್ನಡದ ಮಕ್ಕಳಿಗೆ ಏಕೆ ಇಂಗ್ಲಿಷ್
ಎಂಬ ಪೆಡಂಭೂತವನ್ನು ಒಂದನೇ ತರಗತಿಯಿಂದಲೇ . . .
ಚಿಂತಾ-ಮಣಿ
ವಸಿಷ್ಠರು ಹೀಗೇಕೆ ಮಾಡಿದರು?
ನಮ್ಮ ಮಾನ್ಯ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಹೇಳಿರುವ
ಆಷಾಢಭೂತಿ ಬುದ್ಧಿಜೀವಿಗಳನ್ನುಳಿದು ಅಲ್ಪಸಂಖ್ಯಾತರೂ ಸೇರಿದಂತೆ
ಯಾರೇ ಭಾರತಿಯನೂ ನಮ್ಮ ಪುರಾಣಪುಣ್ಯಕತೆಗಳ ಬಗ್ಗೆ
ಅಷ್ಟಿಷ್ಟು ತಿಳಿದುಕೊಂಡೇ ಇರುತ್ತಾನೆ. ಅವರಲ್ಲಿ ಚಿಂತಕರಿಗೆ
ಎದುರಾಗುವ . . .
ಸೋಜಿಗದ ಜಗ
ಎತ್ತರದ ಮಹಿಳೆ
ಈಕೆ ಜಗತ್ತಿನ ಅತಿ ಎತ್ತರದ ಮಹಿಳೆ. ಇವಳೆದುರು ನಿಂತ ಗಂಡಸು
ಎಷ್ಟೊಂದು ಬಲಹೀನನಂತೆ ಕಾಣಿಸುತ್ತಿದ್ದಾನೆ ನೋಡಿ. ಇವಳು ಜನರ ಜತೆ
ಮಾತನಾಡುವಾಗ ಹೀಗೆ ಬಗ್ಗಿಯೇ ಮಾತನಾಡುತ್ತಾಳಂತೆ. ಈಕೆಯ
ಎತ್ತರ ಬರೀ ಏಳೂವರೆ ಅಡಿ! . . .
ಆಮೆ ಸಂರಕ್ಷಣೆಗೆ ಸುಂದರಿ
ಇಲ್ಲಿರುವ ರೂಪದರ್ಶಿ ಸಿನೆಮಾ ಅಥವಾ ಸೌಂದರ್ಯ ಸ್ಪರ್ದೆಗೆ ನೀಡಿದ
ಭಂಗಿಯಲ್ಲ ಇದು. ಮೆಕ್ಸಿಕೊದಲ್ಲಿ ಕಡಲಾಮೆ ಅಳಿವಿನಂಚಿನಲ್ಲಿದ್ದು
ಅವುಗಳ ಸಂರಕ್ಷಣೆಗೆ ಈ ರೂಪದರ್ಶಿಯ ನೆರವು
ಪಡೆಯಲಾಗುತ್ತಿದೆ. ಅಂದರೆ ಆಮೆ ಸಂರಕ್ಷಣೆಯ ಕ್ಯಾಂಪೈನ್‌ಗೆ
ಈಕೆ ರೂಪದರ್ಶಿ. ಎತ್ತಣಿಂದೆತ್ತಣ ಸಂಬಂಧ? . . .
ಹಸುಳೆಗೆ ಮ್ಯೂಸಿಕ್ ಥೆರಪಿ
ಮ್ಯೂಸಿಕ್ ಥೆರಪಿ ಬಗ್ಗೆ ನೀವು ಕೇಳಿರಬಹುದು. ಸಂಗೀತ
ಕೇಳುವುದರಿಂದ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ
ಎಂಬುದು ಈಗಾಗಲೇ ಸಾಬೀತಾಗಿದೆ. ಆದರೆ ಎಳೆಯ ಹಸುಳೆಗೆ
ಮಾನಸಿಕ ಒತ್ತಡ ಇರಲು ಸಾಧ್ಯವೇ? ಈ ಚಿತ್ರ ನೋಡಿ. ಇಲ್ಲಿರುವ
ಮಗುವಿನ ವಯಸ್ಸು ಕೇವಲ ಮೂರು ದಿನಗಳು. ಮಗುವಿನ
ಕಿವಿಗಳಿಗೆ ಹೆಡ್‌ಫೋನ್ . . .
ಜನಪದ ಹಾಡಿನ ಮಹಾಲಕ್ಷ್ಮಮ್ಮ ದೀಕ್ಷಿತ್
ನಮ್ಮ ಸಾಂಪ್ರದಾಯಿಕ ಕಲೆಗಳಾದ ಹಾಡು, ನೃತ್ಯ, ನಾಟಕ
ಇವುಗಳಿಗೂ ನಮ್ಮ ಸಂಸ್ಕೃತಿಗೂ ಹಾಗೂ ನಮ್ಮ ಪರಿಸರಕ್ಕೂ
ಅನ್ಯೋನ್ಯ ಸಂಬಂಧ ಬೆಸೆದಿರುತ್ತದೆ. ಮಲೆನಾಡಿನಲ್ಲಿ ಜನರ
ಶ್ರೀಮಂತ ಕಲೆ ಜಾನಪದ ಕಲೆ ಈ ಕಲೆಯನ್ನು ಹಾಡುವವರು,
ಓದು ಬರಹ ಬಾರದೇ. . .
ಭ್ರಷ್ಟಾಚಾರದ ಬೇರುಗಳು - ಟಿ ಪ್ರಶಾಂತ್ ಬೀಚಿ, ತಾನ್ಜಾನಿಯ
ನಮ್ಮ ಪ್ರಜಾ-ಪ್ರಭುತ್ವದಲ್ಲಿ ಮಂತ್ರಿಗಳಿಗೆ ಏನು ಬೇಕಾದರೂ
ಅನ್ನಬಹುದು, ವಿಧಾನ ಸೌಧದಲ್ಲಿ ಕಲ್ಲೆಸೆದರೆ ಅದು ಒಬ್ಬ ಭ್ರಷ್ಟ
ರಾಜಕಾರಣಿಯ ಮೇಲೆ ಹೋಗಿ ಬೀಳುತ್ತದೆಯೆ? ರವಿ ಬೆಳೆಗೆರೆ
ಒಂದು ಸಾರಿ ಹೇಳಿದ್ದರು, ನಮ್ಮ ಕಾನೂನು ವ್ಯವಸ್ಥೆ
ಸರಿಪಡಿಸಬೇಕಾದರೆ . . .
ದೇಶಾವರಿ
ನಿರಾಸೆಗೊಳಿಸಿದ ತರೂರ್
ಒಂದೊಮ್ಮೆ ಆಯ್ಕೆಯಾಗುವ ಭರವಸೆ ಮೂಡಿಸುತ್ತಾ, ಮಗ
ದೊಮ್ಮೆ ನಿರಾಸೆ ಮೂಡಿಸುತ್ತಿದ್ದ ಭಾರತದ ವಿಶ್ವಸಂಸ್ಥೆ
ಮಹಾಕಾರ್ಯದರ್ಶಿ ಅಭ್ಯರ್ಥಿ ಶಶಿ ತರೂರ್, ಕೊನೆಗೂ ದಕ್ಷಿಣ
ಕೊರಿಯಾದ . . .
ಇಂದ್ರಾ ನೂಯಿ ಬಲಿಷ್ಠ ಮಹಿಳೆ
ಇತ್ತೀಚೆಗೆ ಪೆಪ್ಸಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ
ಆಯ್ಕೆಗೊಂಡ ಚೆನ್ನೈನ ಇಂದ್ರಾನೂಯಿ ಅವರನ್ನು ವಿಶ್ವದ ಅತ್ಯಂತ
ಬಲಿಷ್ಠ ವಾಣಿಜ್ಯ ಮಹಿಳೆ ಎಂದು `ಪಾರ್ಚ್ಯೂನ್' ಮ್ಯಾಗಜೀನ್ ಹೆಸರಿಸಿದೆ.
. .
ಗಾಂಧಿಗಿರಿ
ಸಂಜಯ್‌ದತ್ ಅಭಿನಯದ `ಲಗೇ ರಹೋ ಮುನ್ನಾಭಾಯಿ' ಸಿನೆಮಾ
ಕಳೆದೊಂದು ತಿಂಗಳಿನಿಂದ ಸುದ್ದಿಯಲ್ಲಿದೆ. `ಗಾಂಧಿಗಿರಿ' ಎಂಬ ಹೊಸ
ಶಬ್ದವೊಂದನ್ನು ಹುಟ್ಟುಹಾಕಿದ ಹೆಗ್ಗಳಿಕೆ ಈ ಸಿನೆಮಾದ್ದು.
ಪುಣೆಯಲ್ಲಿ ಗಾಂಧಿ ಜಯಂತಿಯಂದು ಸಂಚಾರ ನಿಯಮ ಉಲ್ಲಂಘಿಸಿದ
. . .
ಪಾಪುಗಾಂಧಿ ಗಾಂಧಿ ಬಾಪು ಆದ ಕತೆ
ಮುಟ್ಟುವ ಆಟ
ಮೋಹನದಾಸನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಶ್ರೀ
ದೊರಾಬ್ಜೀ ಎದುಲ್ಜೀ ಜಿಮಿ ಎಂಬವರು ತಮ್ಮ ಶಿಸ್ತು ಮತ್ತು ನಿಯಮ
ಪಾಲನೆಗೆ ಬಹಳ ಪ್ರಸಿದ್ಧ ರಾಗಿದ್ದರವರು. ತಪ್ಪು ಮಾಡಿದ
ವಿದ್ಯಾರ್ಥಿಗಳನ್ನು ಬೆಂಚಿನ ಮೇಲೆ ತಾಸುಗಟ್ಟಲೆ ನಿಲ್ಲಿಸುವುದು,
ಅಂತಹವರನ್ನು ಎಲ್ಲ ವಿದ್ಯಾರ್ಥಿಗಳ ಎದುರು ತರಗತಿಯ ಗೋಡೆಗೆ .
. .
ಹೀಗೊಂದು ಫಿಲಾಸಫಿ
* ಎಲ್ಲಾ ಗಂಡಂದಿರೂ ಮನೆಯಲ್ಲಿ ಬಾಸ್‌ಗಳೇ. ಆದರೆ
ನಿರ್ಣಯಗಳನ್ನು ಮಾತ್ರ ಹೆಂಡತಿಯರು ತೆಗೆದುಕೊಳ್ಳುತ್ತಾರೆ.
* ತೊಂದರೆಯಲ್ಲಿರುವ ಹುಡುಗಿಯರಿಗೆ ಸಹಾಯ ಮಾಡಿ. ಅವರು
ಇನ್ನೊಮ್ಮೆ ತೊಂದರೆಯಲ್ಲಿ ಸಿಲುಕುವ ತನಕ ನಿಮ್ಮನ್ನು
ಮರೆಯೋದಿಲ್ಲ.
ಕನ್ನಡಸಾಹಿತ್ಯ.ಕಾಂ ಕನ್ನಡದ ಕಣ್ಣಲ್ಲಿ ವಿಶ್ವದ ಕನಸು
ಅದೊಂದು ದೈತ್ಯ ಕಂಪನಿಗಳ ಸುಧೀರ್ಘ ಕಾನೂನು ಸಮರ. ೧೯೯೭,
ಅಕ್ಟೋಬರ್ ತಿಂಗಳಿನಲ್ಲಿ ಮೈಕ್ರೊಸಾಫ್ಟ್ ಕಂಪನಿ ತನ್ನ ಆಪರೇಟಿಂಗ್
ಸಿಸ್ಟಂ ವಿಂಡೋಸ್-೯೫ ರ ಜೊತೆಗೆ ಇಂಟರ್ನೆಟ್ ತಾಣಗಳನ್ನು
ಹುಡುಕಬಹುದಾದ ಬ್ರೌಸರ್(ತಾಣ ಶೋಧಕ) ಇಂಟರ್ನೆಟ್
ಎಕ್ಸ್‌ಪ್ಲೋರರ್ . . .
ಪಕ್ಕದ ಮನೆ
ರಂಜಾನ್: ಈಗ ಸರ್ವಧರ್ಮೀಯರ ಹಬ್ಬ
ಕೇರಳ ರಾಜ್ಯ ಯಾವಾಗಲೂ ಹೊಸ ತನಕ್ಕೆ ಪ್ರಗತಿಪರ
ಚಿಂತನೆಗಳಿಗೆ ಹೆಸರಾದ ರಾಜ್ಯ. ತನ್ನ ಹೆಸರಿಗೆ ತಕ್ಕಂತೆಯೇ
ಕೇರಳದಲ್ಲಿ ಕೆಲವಾರು ವರ್ಷಗಳಿಂದ ಮುಸಲ್ಮಾನರ ಪವಿತ್ರ
ಹಬ್ಬವೆಂದೇ ಪರಿಗಣಿಸಲ್ಪಟ್ಟಿರುವ ರಮ್ಜಾನ್ ಹಬ್ಬವನ್ನು . . .
ಕೇರಳದಲ್ಲಿ ಚಿಕೂನ್ ಗುನ್ಯಾ ಅಟ್ಟಹಾಸ
ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಚಿಕೂನ್ ಗುನ್ಯಾ ರೋಗ
ವ್ಯಾಪಕವಾಗಿ ಸಮುದ್ರ ತೀರ ಜಿಲ್ಲೆಯಾದ ಅಲಾಪುಜ್ಹಾಗೆ ಕಾಲಿಟ್ಟಿರುವ
ಹಿನ್ನೆಲೆಯಲ್ಲಿ ಸುಮಾರು ೬೫ ಜನರು ಸಾವನ್ನಪ್ಪಿದ್ದಾರೆ. ಇದರಿಂದ
ರಾಜ್ಯ ಸರ್ಕಾರ ಮತ್ತೊಮ್ಮೆ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ
. . .
ಇಂತಹ ತಾಯಿಯರ ಸಂತತಿ ಸಾವಿರವಾಗಲಿ
ನಾವೆಲ್ಲರೂ ನಮ್ಮ ಬದುಕಿನಲ್ಲಿ ತಾಯಿ ಪ್ರೀತಿಯನ್ನು ಬೊಗಸೆತುಂಬ
ಸವಿದಿದ್ದೇವೆ. ನಮ್ಮೆಲ್ಲರ ಮನೆಗಳಲ್ಲೂ ನಮ್ಮ ಸುಖದುಃಖಗಳನ್ನು
ಕಣ್ಣಾಗಿ ಗಮನಿಸುತ್ತಿದ್ದ ತಾಯಿಯನ್ನು, ಅಜ್ಜಿಯನ್ನು ಕಂಡಿದ್ದೇವೆ.
ಆಕೆಗೋ ಕುಟುಂಬದ ಹಿರಿ-ಕಿರಿ ಸದಸ್ಯರೆಲ್ಲರ ಬಗ್ಗೆ
ತುಡಿತವಿರುವುದನ್ನು . . .
ಮತ್ತೆ ಬಂದಳು ಮಾಧುರಿ
ಬಾಲಿವುಡ್‌ನ ಅನಭಿಷಿಕ್ತ ರಾಣಿ ಎನಿಸಿಕೊಂಡಿದ್ದ ಮಾದಕ ನಟಿ ಮಾಧುರಿ
ದೀಕ್ಷಿತ್ ಮತ್ತೆ ಬಾಲಿವುಡ್‌ಗೆ ಬಲಗಾಲಿಟ್ಟು ಬಂದಿದ್ದಾಳೆ. ಅಭಿಮಾನಿಗಳಿಂದ
ದೇವತೆ ಎಂದೇ ಗುರುತಿಸಲ್ಪಟ್ಟ ಮಾಧುರಿ ಮರಳಿ ಬಂದದ್ದು
ಎಲ್ಲರಿಗೂ ಅಚ್ಚರಿ! . . .
ಶಿಲ್ಪಾಗೆ ಶಾಕ್
ನಟಿ ಶಿಲ್ಪಾಶೆಟ್ಟಿಗೆ ಅಭಿಮಾನಿಗಳು ತನನ್ನು ಎಷ್ಟು ಇಷ್ಟ ಪಡುತ್ತಾರೆ
ಎಂದು ತಿಳಿದುಕೊಳ್ಳುವ ಕುತೂಹಲ. ಅದಕ್ಕೆ ಒಂದು ಸಣ್ಣ ಟೆಸ್ಟ್
ಮಾಡಿದಳು. ಅವಳು ಮಾಡಿದ್ದಿಷ್ಟೇ. ತನ್ನ ಇ-ಮೈಲ್ ಐಡಿಯನ್ನು
ನೆಟ್‌ನಲ್ಲಿ . . .
ಬಿಗ್‌ಬಿ ಬರ್ತ್‌ಡೇ
ಬಾಲಿವುಡ್‌ನ ಬಿಗ್ ಬಿ ಅಮಿತಾ ಬಚ್ಚನ್ ಸದ್ದಿಲ್ಲದೇ ತಮ್ಮ ೬೪ನೇ ಹುಟ್ಟು
ಹಬ್ಬವನ್ನು ಆಚರಿಸಿದ್ದೇ ದೊಡ್ಡ ಸುದ್ದಿ. ಅಲ್ಲಿ ಕೇವಲ ಅಮಿತಾಬ್
ಕುಟುಂಬದವರು ಮಾತ್ರ ಇರುತ್ತಾರೆ. ಪಾರ್ಟಿ ತೀರಾ ಸಿಂಪಲ್. ಸ್ವಲ್ಪ
ಡ್ಯಾನ್ಸ್, ಅಷ್ಟೇ ಪ್ರಮಾಣದ ಕೇಕ್. . .
ಜಾವೆದ್‌ಗೆ ಜಾಗವೆಲ್ಲಿದೆ?
ಹಾಲಿವುಡ್‌ಗೆ ಹಾರಬೇಕಿದ್ದ ಹುಡುಗ. ಪಾಪ! ಜಾಂಡೀಸ್ ಬಂದು
ಮಲಗಿಬಿಟ್ಟ. ಅಷ್ಟರಲ್ಲಿ ಟ್ರೈನ್ ಹೋಗಿಯಾಗಿತ್ತು. ಆಮೇಲೆ ಟಿಕೇಟ್
ಕೊಂಡರೆ ಏನು ಪ್ರಯೋಜನ? ಹೃತಿಕ್ ರೋಶನ್ ಭಾವ, ಸಂಜಯ್
ಖಾನ್‌ನ ಮಗ ಜಾವೇದ್ ಖಾನ್ ಕತೆ ಇದು. . .
ಸುಶ್ಮಿತಾ ರಾಕ್ಸ್!
`ಜಿಂದಗೀ ರಾಕ್ಸ್' ಹೌದು. ಕೆಲವೊಮ್ಮೆ ಬದುಕು ಜಿಲ್ಲೆನಿಸುತ್ತದೆ.
ಹಿಮದಂತೆ ಹೆಪ್ಪುಗಟ್ಟಿದ ಮೌನವೂ ಕೆಲವೊಮ್ಮೆ ಕರಗಿ
ನೀರಾಗುವುದುಂಟು. ನಟಿ, ಮಿಸ್ ಯೂವರ್ಸ್ ಸುಶ್ಮಿತಾ ಸೇನ್ ತನ್ನ
ಹೊಸ ಚಿತ್ರ . . .
ಸ್ಥಿತಿ - ಮಂಗಳಾ ಕುಮಾರ್ ರವರ ಕತೆ
ದುಡಿಯುವ ಉತ್ಸಾಹ, ಭವಿಷ್ಯದ ಕನಸಿನೊಂದಿಗೆ ಸಾಗರದಾಚೆ ಕಾಲಿಟ್ಟ
ಮಕ್ಕಳ ಜೊತೆ ಸಂಬಂಧಗಳು ಮುಗಿದೇ ಹೋಗುತ್ತದೆಯೇ?
ವಯಸ್ಸಾದ ತಂದೆ ತಾಯಿಯರ ಬವಣೆಗೆ ಸ್ಪಂದಿಸಲಾಗದಷ್ಟು
ಅಸಹಾಯಕತೆ ಅವರನ್ನು ಆವರಿಸುತ್ತದೆಯೇ?. . .

ಒಳಮನಸ್ಸು - ಐಡೆಂಟಿಟಿ ಕ್ರೈಸಿಸ್
ಎಲ್ಲರೂ ಐಡೆಂಟಿಟಿಗಾಗಿ ಚಡಪಡಿಸುವವರೇ. ಇದು ಮನುಷ್ಯ ಸಹಜ
ಗುಣ. ಆದರೆ ಇದು ಮಿತಿಯಲ್ಲಿರುವಷ್ಟು ದಿನ ಒಳ್ಳೆಯದೇ.
ಅತಿಯಾದ ಗುರುತಿಸುವಿಕೆಯ ಬಯಕೆ ಕೆಲವೊಮ್ಮೆ ನಮಗೇ
ತಿರುಬಾಣವಾಗುವುದಿದೆ. ರಾಜಕಾರಣಿಯೊಬ್ಬನ ಹುಟ್ಟುಹಬ್ಬಕ್ಕೆ ಸಾವಿರಾರು
ರೂಪಾಯಿ ಹಣ ಖರ್ಚುಮಾಡಿ ಬ್ಯಾನರ್ ಹಾಕುವ. . .
ಮುಗಿಸದ ಕೆಲಸ - ಕವನ
ಆಟ ಆಡಲು ಬಾ ಎಂದು ಕರೆದಾಗ,
ತಾಳು ಮರಿ, ಕಾಯಲು ಕಲಿ,
ಕಸವ ಬಳಿದು, ಮುಸುರೆ ತೊಳೆದು,
ಜೂಟಾಟವಾಡುವೆನೆಂದೆ ನಾನಾಗ. . . .
ಈ ಸಂಚಿಕೆಯಿಂದ ಹೊಸ ಧಾರಾವಾಹಿ - ಜಾಣೆಯಾಗಿರು ನನ್ನ ಮಲ್ಲಿಗೆ!
ಮೀನಾ ಅವರ ಈ ಕಾದಂಬರಿಯ ಶೈಲಿ ಎಷ್ಟು ಮನಮೋಹಕವಾಗಿದೆ
ಎಂದರೆ ಮೊದಲ ಓದಿಗೇ ನಿಮಗೆ ತ್ರಿವೇಣಿ, ಕೊಡಗಿನ ಗೌರಮ್ಮನವರ
ಕತೆಗಳು ನೆನಪಿಗೆ ಬರುತ್ತವೆ. ಸರಳ ನಿರೂಪಣೆಯಲ್ಲಿ ಹದವಾಗಿ
ವಿಷಯಗಳನ್ನು ಬೆರೆಸುವ, ಬಿಡಿಸುವ ರೀತಿ ಅನನ್ಯವಾದುದು.
ರಮ್ಯ ನೀಳ್ಗತೆಯಂತೆ ಕಾಣುವ `ಜಾಣೆಯಾಗಿರು ನನ್ನ ಮಲ್ಲಿಗೆ'
ಮನುಷ್ಯರ ಆಪ್ತ ಸಂಬಂಧಗಳ ಹೊಸ ಮುಖಗಳನ್ನು
ತೆರೆದಿಡುತ್ತದೆ... ಅದೇ ಮೌನದ ಜೊತೆ ಮಾತನಾಡುವ
ಪ್ರಯತ್ನ; ಮಾತಿಗೂ ಮೀರಿದ ಮೌನದ ಅರ್ಥ.
ಆರೋಗ್ಯ - ಎಲೆ ಕೋಸು
ಸ್ಲಿಮ್ (slim)
ಆಗಿರಲು. ಮೈ ಸುಕ್ಕು ರಿಂಕಲ್ಸ್
(wrinkles)
ನಿವಾರಿಸಿಕೊಳ್ಳಲು, ವೃದ್ಧಾಪ್ಯವನ್ನು ಮುಂದೂಡಲು ಅದ್ಭುತ ಗುಣ
ಹೊಂದಿರುತ್ತದೆ. ವರ್ಣನೆ: ದಪ್ಪ ಅಗಲವಾದ ಎಲೆಗ ಳಿಂದ ಸುತ್ತಲ್ಟಟ್ಟು
ಗೆಡ್ಡೆಯಂತೆ ಕಾಣುವ ಈ ಎಲೆಕೋಸಿನಲ್ಲಿ ಆಶ್ಚರ್ಯಕರವಾದ
ಔಷಧೀಯ ಗುಣಗಳಿವೆ. ಎಲೆ ಕೋಸಿನಲ್ಲಿ ಅಧಿಕ ಆಹಾರ
ಪೋಷಕಾಂಶಗಳು ಇವೆ. ಇದನ್ನು ಪ್ರಪಂಚದ ಎಲ್ಲಾ ಭಾಗಗಳಲ್ಲೂ .
. .
ಪತ್ರಿಕಾ ಹೇಳಿಕೆಯ ಸಾರ
ಶಬರಿಮಲೈ ದೇವಸ್ವ ಮಂಡಳಿಯವರು ಮತ್ತು ಕೇರಳ
ಸರ್ಕಾರದ ಮುಜರಾಯಿ ಮಂತ್ರಿ ಸುಧಾಕರನ್ ಅವರು ನಿರಂತರವಾಗಿ
ನನ್ನ ಮೇಲೆ ಮಿಥ್ಯಾರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ ನಿಜವಾಗಿ
ನಡೆದದ್ದೇನು ಅನ್ನುವುದನ್ನು ಮಾಧ್ಯಮಗಳಿಗೆ ವಿವರಿಸಬೇಕಾದ
ಅನಿವಾರ್ಯ ಎದುರಾಗಿದೆ. ಇಲ್ಲಿಯವರೆಗೆ ನಾನು ಮೌನ
ವಹಿಸುವುದಕ್ಕೆ ಮುಖ್ಯಕಾರಣವೆಂದರೆ. . .
ಅತಿಥಿ ಅಂಕಣದಲ್ಲಿ ಪಿ.ಶೇಷಾದ್ರಿ
೧೭ ಸೆಕೆಂಡುಗಳ ರೋಮಾಂಚನ!
೨೦೦೧ ನೇ ಇಸವಿಯ ಡಿಸೆಂಬರ್ ತಿಂಗಳ ೧೨ ನೇ ದಿನದ ಸಂಜೆ. ಅದು
ನನ್ನ ಬದುಕಿನ ತುಂಬ ವಿಶೇಷವಾದ ದಿನ!
I was walking
on the ninth cloud!! ದೆಹಲಿಯ ಪ್ರತಿಷ್ಠ
ವಿಜ್ಞಾನಭವನದ ವಿಶಾಲವಾದ ಹಾಲ್‌ನಲ್ಲಿ, ಕಡು ನೀಲಿ
Velvet
ನ ಮೆತ್ತನೆಯ ಹಾಸ್ ಮೇಲೆ ಡಯಾಸ್‌ಗೆ ಹತ್ತುವ ಮೆಟ್ಟಿಲುಗಳ
ಕೆಳಗೆ ಒಂದು ಬದಿಯಲ್ಲಿ ನಾನು ನಿಂತಿದ್ದೆ. ನನಗೆ ಸುಮಾರು
ಇಪ್ಪತ್ತು ಅಡಿ ದೂರದಲ್ಲಿ ರಾಷ್ಟ್ರಪತಿ ಕೆ.ಆರ್.ನಾರಾಯಣನ್
ನಿಂತಿದ್ದರು. ಅವರಿಂದ ಪ್ರಶಸ್ತಿ ಸ್ವೀಕರಿಸಲು ನಾನು ನನ್ನ
ಸರದಿಯನ್ನು ಕಾಯುತ್ತಾ ನಿಂತಿದ್ದೆ...
ಕ್ರೀಡೆ - ಪೂರ್ತಿ ಹಳಿ ತಪ್ಪಿದ `ಇಂಡಿಯನ್ ಎಕ್ಸ್‌ಪ್ರೆಸ್'...!
ದೇಶವನ್ನು ಪ್ರತಿನಿಧಿಸುವುದು ಪ್ರತಿಯೊಬ್ಬ ಕ್ರೀಡಾಪಟುವಿನ
ಕನಸು. ಗೌರವ, ಹೆಮ್ಮೆ. ಅಂಥ ಅವಕಾಶ, ಅದೃಷ್ಟ ಎಲ್ಲಾ
ಕ್ರೀಡಾಪಟುಗಳಿಗೆ ಒಲಿಯುವುದಿಲ್ಲ. ಆದರೆ...
ಓದಿಗೊಂದು ಪುಸ್ತಕ - ಅನನ್ಯ ಬದುಕಿನ ಅದ್ಭುತ ಅಲಂಕಾರಗಳು
ಒಮ್ಮೆ ಒಬ್ಬ ಮನುಷ್ಯ ಅಂಗಡಿಯೊಂದಕ್ಕೆ ಹೋಗಿ `ನಿಮ್ಮಲ್ಲಿ ತೊಗಲು
ಸಿಗುತ್ತದೆಯೇ?' ಎಂದು ಮಾಲೀಕನನ್ನು ಕೇಳಿದ.
`ಸಿಗುತ್ತದೆ'
`ಮೊಳೆ?'
`ಇದೆ'
`ದಾರ?'
`ಇದೆ'
`ಸೂಜಿ'
`ಇದೆ'
ಹಾಗಾದರೆ ಅವನ್ನೆಲ್ಲ ಉಪಯೋಗಿಸಿ ನೀವೇ ಯಾಕೆ ಪಾದರಕ್ಷೆಗಳನ್ನು
ತಯಾರಿಸಬಾರದು? ಸೂಫಿ ಕತೆಗೆ ಇದೊಂದು ಸ್ಯಾಂಪಲ್. ಇಷ್ಟೇ
ಚಿಕ್ಕದಾದ ಅಥವಾ ಇದಕ್ಕಿಂತ ತುಸು ದೊಡ್ಡದಾದ ಸುಮಾರು ೪೦
ಕಥೆಗಳನ್ನು . . .
ಗಾಂಧಿನಗರದಾಚೆಗೂ ಹಬ್ಬಿದ ಅಪಸ್ವರ
ವಿಚಿತ್ರ ಆದರೂ ನಿಜ. ನಿರ್ಮಾಪಕರು ಇನ್ನುಮುಂದೆ ಅನಿರ್ಧಿಷ್ಟ ಕಾಲ
ಚಿತ್ರೋದ್ಯಮವನ್ನು ನಿಲ್ಲಿಸುವ ನಿರ್ಧಾರ ತೆಗೆದುಕೊಂಡ ನಂತರ
ಹೊಸ ಚಿತ್ರಗಳಾವೂ ಸೆಟ್ಟೇರಲಿಲ್ಲ ಎಂಬುದು ಒಂದು ಸಂಗತಿ. ಆದರೆ
ಅದೇ ಸಮಯಕ್ಕೆ ಬೇರೆ ಯಾವ ನಿರ್ಮಾಪಕರೂ ಚಿತ್ರ ನಿರ್ಮಾಣದ
ವಿಚಾರದಲ್ಲಿ ನಿರ್ಮಾಪಕರು ಹಾಕಿದ ಬೇಲಿ ಹಾರುವುದಿಲ್ಲ . . .
ಮುನಿರತ್ನ ಡಬ್ಬಿಂಗ್ ಮಾಡ್ತಾರಂತೆ! ಹುಶಾರ್!
ಮುನಿರತ್ನ ಎಂಬ ನಿರ್ಮಾಪಕರು ಈಗೀಗ ಕನ್ನಡದ ಚಿತ್ರರಸಿಕರಿಗೆ
ಪರಿಚಯ ಆಗುತ್ತಿದ್ದಾರೆ. `ರಕ್ತ ಕಣ್ಣೀರು, ಅದಕ್ಕು ಮುಂಚೆ
`ಆಂಟಿ ಪ್ರೀತ್ಸೇ' ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ಖ್ಯಾತಿಯ
ಮುನಿರತ್ನ ಅವತ್ತು ನಿರ್ಮಾಪಕರು ಕರೆದು ಪತ್ರಿಕಾಗೋಷ್ಠಿಯಲ್ಲಿ
ಯದ್ವಾತದ್ವಾ ಮಾತನಾಡಿ ಎಲ್ಲರಿಗೂ ಬೆವರು ಇಳಿಸಿದರು. ಅದರಲ್ಲೂ
ಪತ್ರಕರ್ತರಿಗೆ . . .
ಗೂಂಡಾ ಕಾಯ್ದೆ
ಕಡೆಗೂ ಕರ್ನಾಟಕ ಸರ್ಕಾರ ಗೂಂಡಾ ಕಾಯಿದೆಗೆ ಅನುಮತಿ ನೀಡಿದೆ.
ಇದುವರೆಗೆ ಚಿತ್ರಗಳ ಆಡಿಯೋ, ವಿಡಿಯೋಗಳನ್ನು ಕದ್ದು ಪ್ರಿಂಟ್
ಹಾಕಿಸಿ, ಮಾರುವುದೇ ಒಂದು ದೊಡ್ಡ ದಂಧೆಯಾಗಿತ್ತು. ಕಳೆದ
ವಾರ ತಾನೆ ಬಿಸಿಪಿ ಶಿವರಾಂ ಅವರು ಈ ರೀತಿಯ ನಕಲಿ ಮಾಡಿದ
ವ್ಯಕ್ತಿಯೊಬ್ಬನ ಮಳಿಗೆಯ ಮೇಲೆ ದಾಳಿ ಮಾಡಿ ಸಾಕಷ್ಟು ನಕಲಿ ಸಿಡಿ,
ಕ್ಯಾಸೆಟ್‌ಗಳನ್ನು ವಶಪಡಿಸಿಕೊಂಡಿದ್ದರು. . .
ಸ್ಟಾಲಿನ್ ಹಂಚಿಕೆ ಯಾರದ್ದು ಹೇಳಿ?
ಮೊನ್ನೆ ನಿರ್ಮಾಪಕರು ಬಹುತೇಕವಾಗಿ ಕೂಗಾಡಿದ್ದು ಎರಡು ವಿಚಾರದ
ಬಗ್ಗೆ: ತಾರೆಗಳ ಸಂಭಾವನೆ ಹಾಗೂ ಸ್ಟಾಲಿನ್ ಸಿನಿಮಾ ೩೫ ಪ್ರಿಂಟ್
ಕರ್ನಾಟಕದ ಒಳಗೆ ಬಂದಿದೆ ಎಂದು. ಅಂದರೆ ಕಳೆದ ಬಾರಿ ಆದ
ಒಪ್ಪಂದದ ಪ್ರಕಾರ ಯಾವುದೇ ಪರಭಾಷೆಯ ಚಿತ್ರವಾದರೂ
ಹತ್ತು ಪ್ರಿಂಟ್‌ಗಳು ಮಾತ್ರ ಕರ್ನಾಟಕದ ಒಳಗೆ ಬರಬೇಕೆನ್ನುವ .
. .
ಅಮೆರಿಕಾದಿಂದ ರವಿ
ಆಮಿಷಕ್ಕೊಳಗಾಗದ ಆಮಿಷರು
ಅಂದು ಗಾಂಧಿ ಜಯಂತಿ. ಬೆಳಗಿನಿಂದ ಅಲ್ಲಲ್ಲಿ ಕೇಳಿಬಂದ ಗಾಂಧಿಯನ್ನು
ನೆನಪಿಸಿಕೊಳ್ಳುತ್ತ ಭಾರತದಲ್ಲಿನ ಮಕ್ಕಳು ಇನ್ನೇನು ನಿದ್ದೆಯ
ಸೆರಗಿಗೆ ಜಾರಿಕೊಳ್ಳಬೇಕು ಎನ್ನುವ ಸಮಯದಲ್ಲಿ ಅಮೇರಿಕದ
ಪೆನ್‌ಸಿಲ್ವೇನಿಯ ರಾಜ್ಯದಲ್ಲಿ ಬೆಳ್ಳನೆ ಬೆಳಗು. ಅಲ್ಲಿಯ
ಏಕೋಪಾಧ್ಯಾಯ ಶಾಲೆಯೊಂದರಲ್ಲಿ ಹಿರಿಕಿರಿಯ ಮಕ್ಕಳು ಒಂದೇ
ಕೋಣೆಯಲ್ಲಿ ಪಾಠಕ್ಕೆ ಸೇರಿದ್ದರು! ಹೌದು, ಎಲ್ಲಾ ವಯಸ್ಸಿನ ಎಲ್ಲಾ
ತರಗತಿಯ . . .

ಇಂದೇ ಚಂದಾದಾರರಾಗಿ
ವಿಕ್ರಾಂತ ಕರ್ನಾಟಕದ
ಎಂಟನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಏಳನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಆರನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಐದನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ನಾಲ್ಕನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಮೂರನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ದ್ವಿತೀಯ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ ಪ್ರಥಮ ಸಂಚಿಕೆಯಲ್ಲಿ
. . .