Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 28 July 2008 10:36 PM

 ವಿಕ್ರಾಂತ ಕರ್ನಾಟಕದ ಎಂಟನೇ ಸಂಚಿಕೆಯಲ್ಲಿ:

 

8 th Issue of Vikranta Karnataka Weekly

ಸಂಪಾದಕೀಯ - ನಕಲಿಗೆ ಹಾಳಾದ ಅಸಲೀ ಸಮಯ

`ಗಡಿಯಲ್ಲಿರುವ ಶತ್ರುಗಳನ್ನು ಎದುರಿಸಬಹುದು; ಗಡಿ ಒಳಗಿನ ಶತ್ರುಗಳನ್ನು ನಾಶ ಮಾಡುವವರ್‍ಯಾರು?? ಯಾವುದೋ ಹಿಂದಿ ಚಿತ್ರದ ಸಂಭಾಷಣೆಯಿದು. ಜೀವದ ಹಂಗು ತೊರೆದು ಗಡಿಯಲ್ಲಿ ಹೋರಾಡುವ ಸೈನಿಕನೊಬ್ಬ ದೇಶದ . . .

ಓದುಗರ ಪತ್ರಗಳು

ಆತ್ಮೀಯ ರವಿಯವರೆ,

ನಿಮ್ಮ ಭೈರಪ್ಪನವರ ಭೈರಿಗೆ ಲೇಖನದಲ್ಲಿ, "ಈಗಿನ ಪ್ರಪಂಚವನ್ನೇ ನೋಡಿ. ಯಾವಾಗಲೂ ಸುಳ್ಳಿಗೇ ಜಯ" ಎಂಬ ಭೈರಪ್ಪನವರ ಹೇಳಿಕೆಗೆ ಏಕೆ ಇಂತಹ ಜೀವವಿರೋಧಿ ನಿರಾಶವಾದ? ಎಂದು ಟೀಕಿಸಿದ್ದೀರಿ.

ಅದೇ, "ಗೃಹ ಖಾತೆ ಎಂಬುದಿದೆಯೆ?" ಲೇಖನದಲ್ಲಿ "ನಮ್ಮ ಮಕ್ಕಳು ಮುಂದಕ್ಕೂ ನಿರಾಂತಕವಾಗಿ ಬದುಕುವ ಆಸೆ ಇದೆಯೆ?", "ಕರ್ನಾಟಕದಲ್ಲಿ ಕಾನೂನು, ನ್ಯಾಯ, ನೈತಿಕತೆ ಸತ್ತಿದೆ!", "ಕಾಲ ನಿಜವಾಗಿಯೂ ಕೆಟ್ಟಿದೆ" ಮುಂತಾದ ವಾಕ್ಯಗಳಲ್ಲಿ ನಿರಾಶವಾದವನ್ನು ನೀವು ತೋರ್ಪಡಿಸಿದ್ದೀರಿ!

ಮೇಲ್ನೋಟಕ್ಕೆ ಇದೆಂತಹ ವಿರೋಧಾಭಾಸ ಅನ್ನಿಸಿದರೂ ಇದು ಸುಸಂಸ್ಕೃತ ಭಾವಜೀವಿಯೊಬ್ಬ ಸಹನೆ ಕಳೆದುಕೊಂಡು ಆಡಿದ ಮಾತುಗಳೇ ಆಗಿವೆ. ಹೀಗೆ ಬರೆದೆ ಅಂತ ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ. "ವಿಕ್ರಾಂತ ಕರ್ನಾಟಕ" ಪತ್ರಿಕೆ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ಎಲ್ಲಾ ಕನ್ನಡಿಗರು ಈ ಪತ್ರಿಕೆಗೆ ಚಂದಾದಾರರಾಗಿ ಪ್ರೋತ್ಸಾಹಿಸಲಿ ಎಂದು ನನ್ನ ಹಾರೈಕೆ.

- ಶೇಷಾದ್ರಿ ವಾಸು

`ಬರಹ' ತಂತ್ರಾಂಶದ ನಿರ್ಮಾತೃ

ಅಮೆರಿಕಾ

*

ಮಾನ್ಯರೆ,

ವಿಕ್ರಾಂತ ಕರ್ನಾಟಕ ವಾರ ಪತ್ರಿಕೆಯು ವಿನೂತನ ವಿಶಿಷ್ಟ ಪತ್ರಿಕೆಯಾಗಿದೆ. ಇಂಥ ಒಂದು ಪತ್ರಿಕೆ ಕನ್ನಡಕ್ಕೆ ಬಹಳ ಅಗತ್ಯವಾಗಿತ್ತು. ಕನ್ನಡ ಭಾಷೆ ಸಂಸ್ಕೃತಿಗಳ ಪ್ರಸಾರದೊಡನೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ವಸ್ತುನಿಷ್ಠ ಆಕರ್ಷಕ ಸುಂದರ ವಿಕ್ರಾಂತ ಕರ್ನಾಟಕವು ಹಾಗೂ ಕರ್ನಾಟತನವು ಸದಾ ವಿಕ್ರಾಂತವಾಗಿ ಕೆಚ್ಚೆದೆಯುಳ್ಳದ್ದಾಗಿ ವೈವಿಧ್ಯಮಯವಾಗಿ ಹೊರಹೊಮ್ಮಲಿ ಎಂದು ಆಶಿಸುತ್ತೇನೆ.

- ವಿದ್ವಾನ್ ಎಂ. ಆರ್. ದತ್ತಾತ್ರೇಯ

ಶಿವಮೊಗ್ಗ

*

ಸತ್ಯಮೂರ್ತಿಯವರಿಗೆ ಪ್ರೀತಿಪೂರ್ವಕ ವಂದನೆಗಳು.

ತಮ್ಮ ವಾರಪತ್ರಿಕೆ `ವಿಕ್ರಾಂತ ಕರ್ನಾಟಕ'ವನ್ನು ನೋಡಿ ಸಂತೋಷವಾಯಿತು. ಉತ್ತಮ ಗುಣಮಟ್ಟದ ವಾರಪತ್ರಿಕೆಯಾಗಿ ಹೊರಬರುತ್ತಿದೆ. ಅದಕ್ಕಾಗಿ ತಮಗೆ ಹೃತ್ಪೂರ್ವಕ ಅಭಿನಂದನೆಗಳು.

ಕನ್ನಡದ, ಕನ್ನಡಿಗರ, ಕರ್ನಾಟಕ ಹಿತರಕ್ಷಣೆಯೇ ತಮ್ಮ ಪ್ರಮುಖ ಧ್ಯೇಯವಾಗಿರಲೆಂದು ಆಶಿಸುತ್ತೇನೆ.

- ದೊ.ಅ. ಅಶೋಕ

ಬೆಂಗಳೂರು.

*

ಹೀಗೊಂದು ಫಿಲಾಸಫಿ

* ದುರಂತ: ನೀವು ಆಫೀಸಿಗೆ ಬೇಗ ಬಂದಾಗ ಬಾಸ್ ಲೇಟಾಗಿ ಬರುತ್ತಾರೆ. ಬಾಸ್ ಬೇಗ ಬಂದಾಗ ನೀವು ಲೇಟಾಗಿ ಹೋಗಿರುತ್ತೀರಿ.

* ಕ್ಯಾನ್‌ವಾಸ್ ಮೇಲೆ ಒಂದಷ್ಟು ಬಣ್ಣ ಚೆಲ್ಲಿ ಅದನ್ನು ಬಟ್ಟೆಯಿಂದ ಒರೆಸಿ, ಆ ಬಟ್ಟೆಯನ್ನು ಕೋಟಿ ರೂಪಾಯಿಗಳಿಗೆ ಮಾರುವವನು `ಮಾಡರ್ನ್ ಕಲಾವಿದ'!

ಬಿಟ್ಟು... ಬಿಟ್ಟು... ಓದುವುದು ಕಷ್ಟ `ನೀವೇಕೆ ಧಾರಾವಾಹಿ' ಹಾಕುತ್ತಿಲ್ಲ?

`ಧಾರಾವಾಹಿ ಬೇಡ ಸಾರ್, ನಮ್ಮ ಪತ್ರಿಕೆ ಬೇರೆ ಮ್ಯಾಗಜಿನ್‌ಗಳಂತೆ ಕಾಣುವುದು ಬೇಡ, ಈಗಿರುವುದೇ ಚೆನ್ನಾಗಿದೆ. ವಿಷಯ ವೈವಿಧ್ಯತೆ ಇದೆ... `ಧಾರಾವಾಹಿ ಕೂಡ ಓದಿನ ಒಂದು ಭಾಗವಲ್ಲವೇ? ಅದರಲ್ಲಿ ಮಡಿವಂತಿಕೆ ಏಕೆ? . . .

ಅತಿಥಿ ಅಂಕಣದಲ್ಲಿ ಆಲೂರು ಒಂದು ನೆನಪು...

೯೬ರ ಫೆಬ್ರವರಿ ಇರಬೇಕು. ಅದೊಂದು ದಿನ ಇಬ್ಬರೇ ಕೂತಿದ್ದೆವು. ಮಾತುಗಳೇ ಬರುತ್ತಿರಲಿಲ್ಲ. ಬೆನ್ನಿಗೆ ಕಟ್ಟಿಕೊಂಡಿದ್ದ ಪ್ರೀತಿಯ ಭಾರವನ್ನು ಕೆಳಗಿಳಿಸಲೇಬೇಕಿತ್ತು. ಯಾಕೆಂದರೆ ಆಗಲೇ ನಾವು ಸ್ನೇಹಿತರ ಘನಕಾರ್ಯಗಳಿಂದ ಪೂರ್ತಿ ಬಸವಳಿದಿದ್ದೆವು. ಪ್ರೀತಿಯಿಂದ ಕಟ್ಟಿದ್ದ ಪತ್ರಿಕೆಯನ್ನು ಆಗಲೇ ಎಲ್ಲರೂ ಸೇರಿ. . .

ಈ ಜನ

ಪುಟ್ಟಣ್ಣ

ಕುಮಾರಸ್ವಾಮಿ ಮತ್ತು ಯಡಿಯೂರಪ್ಪನವರ ಸಮ್ಮಿಶ್ರ ಸರ್ಕಾರ ಆರಂಭದಿಂದಲೂ ತಮ್ಮ ಪಕ್ಷದವರಿಂದಲೇ ಹೆಚ್ಚು ಸಂಕಷ್ಟಕ್ಕೆ ಸಿಲುಕಿದೆ...

ವೆಂಕಟೇಶ್

ಕಳೆದ ಚುನಾವಣೆಯಲ್ಲಿ ಹೆಗ್ಗಡದೇವನ ಕೋಟೆಯ ಮೀಸಲು ಕ್ಷೇತ್ರದಿಂದ ದಳದಿಂದ ಶಾಸನ ಸಭೆಗೆ ಆಯ್ಕೆಯಾದ ಎಂ.ಪಿ. ವೆಂಕಟೇಶ್ ಅವರನ್ನು ಹತ್ತಿರದವರು ಬುದ್ಧಿವಂತ ಎಂದು . . .

ಪ್ರಭಾಕರ ಬಿ. ಕೋರೆ

ಬೆಳಗಾವಿಯ ಕೆ.ಎಲ್.ಇ. ಸೊಸೈಟಿ ಉತ್ತರ ಕರ್ನಾಟಕದ ಬಹುದೊಡ್ಡ ವಿದ್ಯಾ ಸಂಸ್ಥೆ. ಉನ್ನತ ಶಿಕ್ಷಣದಲ್ಲಿ ದಕ್ಷತೆ ಮೆರೆದಿರುವ ಈ ಸಂಸ್ಥೆಯ ಅಧ್ಯಕ್ಷರಾಗಿ . . .

ಐತಿಹಾಸಿ ಅಧಿವೇಶನದ ವರದಿ

ಬೆಳಗಾವಿಗೆ ಹೋದರೂ ಬೆಂಗಳೂರು ಬಿಡಲಿಲ್ಲ

ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಅಧಿವೇಶನ ಐತಿಹಾಸಿಕ ಎಂಬುದೇನೋ ನಿಜ. ಆದರೆ ನಡೆಯಬೇಕಿದ್ದ ಹಲವು ಕೆಲಸಗಳು ಯಾವುದೋ ಕ್ಷುಲ್ಲಕ ವಿಷಯದ ಕಾರಣದಿಂದ ನಡೆಯಲಿಲ್ಲ. ಹಾಗೆಯೇ . . .

`ಗಡಿನಾಡಿನ ಅಲಕ್ಷ್ಯವೇ ಅಸಮಾಧಾನಕ್ಕೆ ಕಾರಣ'

ಬೆಳಗಾವಿಯ ಪ್ರಪ್ರಥಮ ಕನ್ನಡಿಗ ಮೇಯರ್ ಸಿದ್ಧನಗೌಡ ಪಾಟೀಲ್, ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿ ಪಕ್ಷದ ರೂವಾರಿ ಎಂದೇ ಪರಿಗಣಿಸಲ್ಪಟ್ಟಿರುವ `ತರುಣ ಭಾರತ? ಪತ್ರಿಕೆಯ. . .

ಬೆಳಗಾವಿ, ಹೊಸೂರು ಮತ್ತು ಅಯೋಗ್ಯ ಆಡಳಿತಗಾರರು

ನವೆಂಬರ್ ೫, ೨೦೦೩ರಂದು ದಟ್ಸ್‌ಕನ್ನಡ.ಕಾಮ್‌ನಲ್ಲಿ ಈ ಲೇಖನ ಪ್ರಕಟವಾದ ನಂತರದ ಮೂರು ವರ್ಷಗಳ ಅವದಿಯಲ್ಲಿ ರಾಜ್ಯದಲ್ಲಿ ಅನೇಕ ರೀತಿಯ ಮಹತ್ತರ ಬದಲಾವಣೆಗಳಾಗಿವೆ. ಹಾಗೆಯೆ ಕೆಲವೊಂದು ಸಮಸ್ಯೆಗಳು . . .

ಸೋಜಿಗದ ಜಗ

ಬರ್ಡ್ ಫ್ಲೂ ಡ್ಯಾನ್ಸ್!

ಇಲ್ಲಿರುವ ಯುವಕರು ಹೊಟ್ಟೆಗಿಲ್ಲದೆ ಧರೆಗುರುಳುತ್ತಿದ್ದಾರೆ ಎಂದುಕೊಂಡೀರಿ! ಐವರಿ ಕೋಸ್ಟ್‌ನಲ್ಲಿ ಮಾರಣಾಂತಿಕ ಬರ್ಡ್ ಫ್ಲೂ ಕಾಣಿಸಿಕೊಂಡ ಬಳಿಕ, ಇಂಥದೊಂದು ನೃತ್ಯ ಅಲ್ಲಿ . . .

ಜನಸಂಖ್ಯೆಗಿಂತಲೂ ಟಿವಿ ಸೆಟ್‌ಗಳೇ ಜಾಸ್ತಿ

ಇದನ್ನು ನಂಬಲೇಬೇಕು. ಅಮೆರಿಕಾದ ಜನಸಂಖ್ಯೆಗಿಂತಲೂ, ಅಲ್ಲಿ ಟಿ.ವಿ ಸೆಟ್‌ಗಳೇ ಜಾಸ್ತಿ ಇವೆ! ಇತ್ತೀಚಿನ ಸರ್ವೆ ಪ್ರಕಾರ, ಅಲ್ಲಿರುವ ಪ್ರತಿಯೊಬ್ಬ ಪ್ರಜೆಯೂ ಕುಳಿತು ಒಂದೊಂದು ಟಿವಿ. . .

ಕೀಳರಿಮೆ ಕೂಡದು!

ಚಿಕ್ಕ ವಯಸ್ಸಿನಲ್ಲಿ ಅವನ ಕಿವಿಯ ಮೇಲೆ ಯಾರೋ ಬಲವಾಗಿ ಹೊಡೆದುದರ ಪರಿಣಾಮವಾಗಿ ಅವನು ಕಿವುಡನಾದನಂತೆ. ಹಾಗಾಗಿ ಸ್ಟುಡಿಯೋ ಮಾಲೀಕರು ಅವನೊಡನೆ ....

ಚಿಂತಾಮಣಿ

ವಿಶ್ವಾಮಿತ್ರನ ಮಿಸ್ಟೀಕು

ಸರಿಯಿಲ್ಲ ಬಿಡಿ, ವಿಶ್ವಾಮಿತ್ರ ಮಾಡಿದ್ದು ಎಳ್ಳಷ್ಟೂ ಸರಿಯಿಲ್ಲ. ವಿಷಯ ಏನೂಂತ ಕೇಳಿದಿರಾ? ಅದೇ, ವಸಿಷ್ಠರ ಆಶ್ರಮದಲ್ಲಿದ್ದ ಕಾಮಧೇನೂನ್ನ ಕೇಳಿದ, ವಸಿಷ್ಠರು ತಗೊಂಡುಹೋಗು ಎಂದರು.

ದೇಶಾವರಿ

ಮೊದಲ ಸುತ್ತಿನ ರಾಣಿ: ಸಾನಿಯಾ

ಕಳೆದೆರಡು ವರ್ಷಗಳ ದಿನಪತ್ರಿಕೆಗಳ ಕ್ರೀಡಾ ಪುಟಗಳನ್ನು ಗಮನಿಸಿದರೆ ಅದರ ತುಂಬಾ `ಮೊದಲ ಸುತ್ತಿನಲ್ಲಿ? ಸಾನಿಯಾ ಗೆಲುವು `ಎರಡನೆ ಸುತ್ತಿಗೆ ಸಾನಿಯಾ,? ಮುಂತಾದ ಹೆಡ್‌ಲೈನುಗಳು . . .

ಸೈಬರ್ ಕೆಫೆಗಳಲ್ಲಿ ರೈಲ್ವೆ ಟಿಕೆಟ್

ಇನ್ನು ರೈಲ್ವೇ ಟಿಕೆಟ್‌ಗಾಗಿ ಗಂಟೆಗಟ್ಟಲೆ ಕಾಯುವ ಅವಶ್ಯಕತೆಯಿಲ್ಲ. ದೇಶದಾದ್ಯಂತ ಇರುವ ಐವೇ ಸೈಬರ್‌ಕೆಫೆಗಳಲ್ಲಿ ರೈಲ್ವೆ ಟಿಕೆಟ್‌ಗಳನ್ನು ಪಡೆದುಕೊಳ್ಳಬಹುದು. ಈ ಬಗ್ಗೆ . . .

ಕಾಗದದ ಬಾಣ

ಮೋಹನ ದಾಸನಿಗೆ ತಾಯಿಯ ಬಗ್ಗೆ ತುಂಬಾ ಪ್ರೀತಿ; ತಂದೆಯ ಬಗ್ಗೆ ಅಪಾರವಾದ ಗೌರವವಿತ್ತು. ಅವನು ಕಲಿಯುತ್ತಿದ್ದ ರಾಜಕೋಟೆಯ ಪ್ರೌಢಶಾಲೆಯ ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಓದು ಮತ್ತು ನಡತೆಯ ಬಗ್ಗೆ, ವಾರ್ಷಿಕ . . .

ಭಯೋತ್ಪಾದಕರಿಗೆ ಪಾಠ

ಮುಂಬೈ ಸರಣಿ ಬಾಂಬ್ ಸ್ಫೋಟಗಳ ಕರಾಳ ನೆನಪುಗಳು ಮಾಸುವ ಮುಂಚೆಯೇ ಧಾರ್ಮಿಕ ಸೂಕ್ಷ್ಮ (communal sensitive) ಪ್ರದೇಶಗಳಲ್ಲೊಂದಾದ ಮಾಲೆಗಾಂವ್‌ನಲ್ಲಿ ಮಸೀದಿಯ . . .

ಮೋಹಕ ನಟಿ ಪದ್ಮಿನಿ ಇನ್ನು ನೆನಪು ಮಾತ್ರ

ಕಪ್ಪು ಬಿಳುಪಿನ ಯುಗದ ಕೊಂಡಿಯೊಂದು ಕಳಚಿ ಬಿದ್ದಿದೆ. ಚತುರ್ಭಾಷಾ ಮೋಹಕ ತಾರೆ ಪದ್ಮಿನಿ ಅಗಲಿಕೆ ತಮಿಳು ಚಿತ್ರರಂಗಕ್ಕಷ್ಟೇ ತುಂಬಲಾರದ ನಷ್ಟ ಎಂಬುದು ಕ್ಲೀಷೆಯ ಮಾತಾದೀತು ೭೪ ವರ್ಷದ ಜೀವಿತಾವಧಿಯ. . .

ಹೀಗೊಂದು ಸಂಸ್ಕಾರ...

ಒಮ್ಮೆ ಕಲ್ಪಿಸಿಕೊಳ್ಳಿ; ನಿಮ್ಮ ಅಪ್ತರ ಮೃತ ದೇಹವನ್ನು ಶೋಕದಿಂದ ಪರಿವಾರದವರೊಡನೆ ಸಂಸ್ಕಾರ ಮಾಡುವುದರ ಬದಲು, ತಾಜಾ ದೇಹ ಸಿಕ್ಕಿತೆಂದು ರಕ್ತ ಹೀರಲು ಕಾಯ್ದು ಕುಳಿತಿರುವ ರಣಹದ್ದುಗಳ ಬಾಯಿಗೆ ಹಾಕಿದರೆ ಹೇಗಿರುತ್ತದೆ. ನೋ ಚಾನ್ಸ್ ಅಂತಿರಾ, ವಿಚಿತ್ರ ಆದರೂ ಇದು ಸತ್ಯ. ಪಾರ್ಸಿ ಜನಾಂಗದಲ್ಲಿ ಈಗಲೂ ಆಚರಣೆಯಲ್ಲಿರುವ ಸಂಸ್ಕಾರದ ವಿಧಿ ಇದು!

ಆಹಾ ಪಿಜ್ಜಾ...

ಹೊಸದೊಂದು ಫುಡ್ ಕಲ್ಚರ್‌ಗೆ ಬೆಂಗಳೂರು ನಿಧಾನವಾಗಿ ಒಗ್ಗಿಕೊಳ್ಳುತ್ತಿರುವುದು ನಿಜ. ಒಂದೆಡೆ ತಳ್ಳುಗಾಡಿಯ ಮೂಲಕ ಲಕ್ಷಾಂತರ ಮಂದಿಗೆ ಊಟ ಪೂರೈಸುತ್ತಿರುವ ಬೆಂಗಳೂರೆಂಬ ಬೃಹನ್ನಗರ, ಇನ್ನೊಂದೆಡೆ . . .

ಬಾಂಬೆ ಮಸಾಲಾ

ರಂಗ್ ದೇ ಆಸ್ಕರ್!

`ವಿಜೇತರು ವಿಭಿನ್ನ ಕೆಲಸಗಳನ್ನು ಮಾಡುವುದಿಲ್ಲ. ಅವರು ಮಾಡುವ ಕೆಲಸಗಳೇ ವಿಭಿನ್ನವಾಗಿರುತ್ತದೆ'. ಎಸ್! ಮತ್ತೊಮ್ಮೆ ಆಸ್ಕರ್ ಪ್ರಶಸ್ತಿ ಬಾಲಿವುಡ್ ಬಾಗಿಲ ಬಳಿ ಬಂದು . . .

 

ಯಾರು ಸೆಕ್ಸಿ ನಮ್ಮೊಳಗೆ?

ಪಾಪ. ಇಲ್ಲಿ ಐಶ್ವರ್ಯ ನಕ್ಕಿದ್ದು ಲೆಕ್ಕಕ್ಕಿಲ್ಲ. ಮಲ್ಲಿಕಾ ಮೈ ಕುಣಿಸಿದ್ದನ್ನು ನೋಡೋರಿಲ್ಲ! ಜನರ ಟೇಸ್ಟೇ ಬೇರೆ ಇದೆ. ಈ ವಿಷಯ ಹೊರಬಿದ್ದಿದ್ದು ಮೊನ್ನೆ ಬ್ರಿಟನ್‌ನಿಂದ ಪ್ರಕಟಗೊಳ್ಳುವ . . .

 

ಕರೀನಾ ಕಾ ಕರಿಯರ್

ಮೊನ್ನೆಯಷ್ಟೇ ಗೋವಾದ ಸಮುದ್ರ ಕಿನಾರೆಯಲ್ಲಿ ಬಾಯ್ ಫ್ರೆಂಡ್ ಶಾಹಿದ್ ಕಪೂರ್ ಜೊತೆ ೨೬ನೇ ಬರ್ತ್‌ಡೇ ಆಚರಿಸಿದ ಕರಿನಾಗೆ ಸಿನಿಮಾ ಕರಿಯರ್‌ನದ್ದೇ ಚಿಂತೆ! . . .

 

ರಂಗು ರಂಗೀಲಾ

`ಶೋಲೆ' ಚಿತ್ರದ `ಮೆಹಬೂಬಾ... ಮೆಹಬೂಬಾ' ಐಟಂ ಸಾಂಗು ಯಾರಿಗೆ ನೆನಪಿಲ್ಲ ಹೇಳಿ? ಈಗಿನ ಶೋಲೆಗೆ ಈ ಐಟಂ ಯಾರಾಗಬಹುದು ಅಂತಾ ವರ್ಮಾ ತಲೆ ಕೆರೆದುಕೊಳ್ಳುತ್ತಿದ್ದಾಗ ತಟ್ಟನೆ ನೆನಪಾಗಿದ್ದು `ರಂಗೀಲಾರಾಣಿ?. . .

ಮುದುಕ ಮತ್ತು ಸಲೂನು -ಶ್ರೀವತ್ಸ ದುಗ್ಲಾಪುರ

ಪಕ್ಕದಲ್ಲೇ ಇದ್ದರೂ, ಸಲೂನಿನ ಬಾಗಿಲು ಹಿಂದಿನ ಗಲ್ಲಿಗೆ ಚಾಚಿದ್ದರಿಂದ, ಅದರ ಮಾಲೀಕನನ್ನು ನಾನು ಇದುವರೆಗೂ ಸರಿಯಾಗಿ ನೋಡಿದ್ದ ನೆನಪಿಲ್ಲ. ಆದರೆ ಅವನ ಗಂಟಲು ಗಟ್ಟಿಯಾಗಿರುವುದರಿಂದಲೋ ಅಥವಾ ದಿನದಿಂದ . . .

ಹಾಗಲ ಕಾಯಿ

ವರ್ಣನೆ: ಕನ್ನಡದಲ್ಲಿ ಹಾಗಲಕಾಯಿ ಎಂತಲೂ; ಸಂಸ್ಕೃತ: ಕಾರವಲ್ಲಿ ಕಠಿಲ್ಲ; ಹಿಂದಿ: ಕರೇಲಾ, ಕರೆಲೇ, ಕರ್‍ಬೆಲಾ; ತಮಿಳು: ಪಾವರ್ಕಾಯ್, ಪಾವಕ್ಕಾಯ್; ತೆಲಗು: ಕಾಕರಚಟ್ಟು, ಕರೀಲಾ; ಇಂಗ್ಲಿಷ್: bitter gourd (ಮಮಾರ್ಡಿಕಾ ಚರಂಟಿಯಾ ಎಂಬುದು ವೈಜ್ಞಾನಿಕ ಹೆಸರು).

ಒಳಮನಸ್ಸು

ಸಮ್ಮೋಹನ ಎಂಬ ಮಾಯೆ

ಬಹುಶಃ ಸಮ್ಮೋಹನದ ಬಗ್ಗೆ ಇರುವಷ್ಟು ತಪ್ಪು ಕಲ್ಪನೆಗಳು ಇನ್ಯಾವ ವಿಷಯದ ಬಗ್ಗೆಯೂ ಇರ ಲಿಕ್ಕಿಲ್ಲ. ಸಮ್ಮೋಹನ ಅಥವಾ ಹಿಪ್ನಾಟಿಸಂ ಒಂದು ಬ್ರಹ್ಮವಿದ್ಯೆ, ಸಮ್ಮೋಹನ ತಜ್ಞನಿಗೆ (ಹಿಪ್ನಾಟಿಸ್ಟ್) ಅಗೋಚರ ಶಕ್ತಿ ಇರುತ್ತದೆ, ಅವನು ಯಾರನ್ನು ಬೇಕಾದರೂ ವಶೀಕರಣ ಮಾಡಿ, ತನಗಿಷ್ಟ ಬಂದಂತೆ ಅವರನ್ನು ಮಾಡಬಹುದು, ಮಾಟ-ಮಂತ್ರಕ್ಕೂ ಇದಕ್ಕೂ ವ್ಯತ್ಯಾಸವೇನಿಲ್ಲ- ಹೀಗೆ. . .

ಅದು ಹೂವಿನ ಹಾರ; ನೇಣಲ್ಲ!

ಉದ್ಯೋಗದಲ್ಲಿದ್ದವರು ಸಾಮಾನ್ಯವಾಗಿ ನಿವೃತ್ತಿಯ ನಂತರ ನಗರಗಳಲ್ಲಿ ನೆಲೆಸಿದರೆ ನಮ್ಮ ತಂದೆಯವರು ಹುಟ್ಟಿದ ಹಳ್ಳಿಗೆ ಮರಳಬೇಕಾಯ್ತು. ಅಲ್ಲಿ ಹೋಗಿ, ತಮ್ಮಂದಿರ ಮನೆಯಲ್ಲಿ ಪುಟ್ಟ ಕೋಣೆಯಲ್ಲಿ . . .

ಮುಳ್ಳಿನ ಸಿಂಹಾಸನದ ಮೇಲೆ ವೆಂಗ್‌ಸರ್ಕರ್

ಹಾಗೆ ನೋಡಿದರೆ, ಭಾರತೀಯ ಕ್ರಿಕೆಟ್‌ಗೆ ವಿಶ್ವಮಟ್ಟದಲ್ಲಿ ಮಾನ್ಯತೆ ಸಿಗುವಂತೆ ಮಾಡಲು ದಾಲ್ಮಿಯ ಅವರ ಕಾಣಿಕೆ ಅಪಾರ. ಇಂದು ಭಾರತೀಯ ಕ್ರಿಕೆಟ್ ಮಂಡಳಿ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎಂಬ . . .

ಹೀಗೊಬ್ಬ ಕವಿ - ಕವಿ ಐರಸಂಗರವರ ಪರಿಚಯಾತ್ಮಕ ಲೇಖನ

೭೬ ವರ್ಷ ವಯಸ್ಸಿನ ಸರಳ ಜೀವಿ ವೀರಭದ್ರಪ್ಪ ಚನ್ನಪ್ಪ ಐರಸಂಗ ಧಾರವಾಡ ನಿವಾಸಿ. ಇವರ ಭೇಟಿ ಆಗಿದ್ದು ಆಕಸ್ಮಿಕವಾದರೂ ಅವಶ್ಯಕವಾಗಿತ್ತು. ಏನೂ ಅರಿಯದ ಮುಗ್ಧರಂತೆ ಕಾಣುವ ಇವರು ಸಾಕಷ್ಟು . . .

ಬೆಂಗಳೂರು ನರಕ - ಇ-ಕಸ ಎಂಬ ಹೈಟೆಕ್ ಕಸಾಸುರ

ಬೆಂಗಳೂರು ಬೆಳೆದಂತೆಲ್ಲಾ ಐಟಿ ಉದ್ಯಮ, ಎಲೆಕ್ಟ್ರಾನಿಕ್ ಉದ್ಯಮ ಬೆಳೆಯುತ್ತಾ ಹೋಯಿತು. ಅದರ ಜೊತೆಗೆ ಈ ಉದ್ಯಮಗಳಿಂದ ಬಿಸಾಕಲ್ಪಟ್ಟ ಎಲೆಕ್ಟ್ರಾನಿಕ್ ಸಾಮಾಗ್ರಿಗಳು . . .

ನವ ವೃತ್ತಿರಂಗಭೂಮಿಯ ಜನಕ ನೀನಾಸಂ ತಿರುಗಾಟ

ರಂಗಭೂಮಿಯನ್ನು ಕಸುಬುದಾರಿಕೆ ಮಾತ್ರವಲ್ಲದೆ ಕಲೆಗಾರಿಕೆ ಸಹಾ ಎಂದು ಭಾವಿಸಿಕೊಂಡ ಹೊಸ ಪೀಳಿಗೆಯ ರಂಗಕಸುಬುದಾರರು ಮತ್ತು ಪ್ರೇಕ್ಷಕರು . . .

ರಂಗೀಲಾ

ಹೀಗೇ ನಷ್ಟ ಆದರೆ ಕಷ್ಟ

ಮತ್ತೆ ನಿರ್ಮಾಪಕರ ಸಂಘ ಬೀದಿಗಿಳಿದಿದೆ... ಕ್ಷಮಿಸಿ, ವಾಪಾಸು ಮನೆಗೆ ಹೋಗುವ ನಿರ್ಧಾರ ಮಾಡಿದೆ. ಈ ವರ್ಷ ತೆರೆಕಂಡ ಐವತ್ತು ಚಿತ್ರಗಳಲ್ಲಿ ಮೈ ಆಟೋಗ್ರಾಫ್ ಚಿತ್ರವೊಂದನ್ನು ಹೊರತುಪಡಿಸಿದರೆ ಉಳಿದೆಲ್ಲ ಫ್ಲಾಪ್ ಆಗಿರುವುದರಿಂದ ನಿರ್ಮಾಪಕರಿಗೆ . . .

ರಾಕ್‌ಲೈನ್ ಮತ್ತು ಸಿರಿವಂತ

ಕನ್ನಡ ಚಿತ್ರರಂಗಕ್ಕೆ ಪತ್ರಕರ್ತನಾಗಿ ನನ್ನ ಸೇವೆ ಸಾಕೆಂದು ಯಾರೇ ಹೇಳುವ ಮುನ್ನವೇ ನನಗೇ ಆ ಭಾವನೆ ಬಂದಿದ್ದುದರಿಂದ, ನನ್ನ ಕೆಲಸದ ಕಟ್ಟಕಡೆಯ ಕಚೇರಿಯಿಂದ ಹೊರಬಂದ ಈ ಆರು ತಿಂಗಳಲ್ಲಿ ಉದ್ಯಮದ ಅಥವಾ ಚಲನಚಿತ್ರ ಪತ್ರಿಕಾಗೆಳೆಯರ ಯಾವುದೇ ಸಂಪರ್ಕವನ್ನೂ ಇಟ್ಟುಕೊಂಡಿರಲಿಲ್ಲ. . .

ಸಿಕ್ಸರ್ ಹೊಡೆದ ರವಿಶಾಸ್ತ್ರಿ

ಕಳೆದವಾರ ರವಿಶಾಸ್ತ್ರಿ ಚಿತ್ರದ್ ಕ್ಯಾಸೆಟ್ ಬಿಡುಗಡೆ ಸಮಾರಂಭ. ಇತ್ತೀಚಿನ ದಿನಗಳಲ್ಲಿ ಕ್ಯಾಸೆಟ್ ಬಿಡುಗಡೆಯಲ್ಲಿ ಅಂಥ ಕುತೂಹಲ ಎನ್ನುವುದು ಉಳಿದೇ ಇರುವುದಿಲ್ಲ. ಅದು ಪತ್ರಕರ್ತರ ಜೊತೆ ಸೇರಲು ಇನ್ನೊಂದು ಅವಕಾಶ ಮಾತ್ರ. . .

ಅಮೆರಿಕಾದಿಂದ ರವಿ

ಅಯೋಗ್ಯರನ್ನು ಕೈಯ್ಯಾರೆ ಆರಿಸಿಕೊಂಡು ಅಭಿವೃದ್ಧಿಯಾಗಲಿಲ್ಲ ಅಂದರೆ?

ರಾಜಧಾನಿಯ ಹೊರಗೆ ಬೆಳಗಾವಿಯಲ್ಲಿ ಮೊಟ್ಟಮೊದಲ ಬಾರಿಗೆ ನಡೆದ ವಿಶೇಷ ಅಧಿವೇಶನವನ್ನು ಗಮನಿಸುತ್ತ, ಮೂರು ವರ್ಷದ ಹಿಂದೆ . . .

 

ಇಂದೇ ಚಂದಾದಾರರಾಗಿ

ವಿಕ್ರಾಂತ ಕರ್ನಾಟಕದ ಏಳನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಆರನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಐದನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ನಾಲ್ಕನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಮೂರನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ದ್ವಿತೀಯ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಪ್ರಥಮ ಸಂಚಿಕೆಯಲ್ಲಿ . . .

 

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com