Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 28 July 2008 10:36 PM

 ವಿಕ್ರಾಂತ ಕರ್ನಾಟಕದ ಆರನೇ ಸಂಚಿಕೆಯಲ್ಲಿ:

 

6 th Issue of Vikranta Karnataka Weekly

 

ಸಂಪಾದಕೀಯ ಎಲ್ಲ ತತ್ವದ ಎಲ್ಲೆ ಮೀರಿ...

ನವೋದಯದ ಆ ಮನಸ್ಸುಗಳೇ ಹಾಗೆ. ಕಟ್ಟುವ ಕ್ರಿಯೆಯಲ್ಲಿ ತೊಡಗಿಕೊಳ್ಳುವ, ಯುವ ಚೇತನಗಳಿಗೆ ಸ್ಫೂರ್ತಿ ತುಂಬುವ ಮನಸ್ಸು. ಅಂಥ ಶ್ರೀಮಂತ ಮನಸ್ಸಿನ ಪ್ರೀತಿಯ ಕವಿ ಜಿ.ಎಸ್. ಶಿವರುದ್ರಪ್ಪನವರನ್ನು ಇಲ್ಲಿ ದಾಖಲಿಸಲು ಕಾರಣಗಳಿವೆ. . .

ಕನ್ನಡಕ್ಕೆ ಇಂಥ ದುಬಾರಿ ಪತ್ರಿಕೆ ಬೇಕೆ?

ಎರಡು ವಾರಗಳ ಹಿಂದೆ `ಮುಗಿದ ಐತಿಹಾಸಿಕ ಯುಗ? ಸಂಚಿಕೆ ಹೊರಬಿದ್ದಾಗ ನಮ್ಮ ನಿರೀಕ್ಷೆಗೂ ಮೀರಿದ ಅಚ್ಚರಿ ಬಂದುದು ಓದುಗರಿಂದ. ಡಾ. ರಾಜ್ ಮತ್ತು ಭಾರತಿಯವರ ಕಪ್ಪುಬಿಳುಪಿನ ಆ ಚಿತ್ರ ಕಂದು ಬಣ್ಣದ ಛಾಯೆಯಲ್ಲಿ ಕಂಗೊಳಿಸಿದಾಗ ಹಲವು ಓದುಗರಿಗೆ ಆ ಕಾಲದ ನೆನಪಾಗಿರಬೇಕು...

ಈ ಜನ.... ಎಂ.ವಿ.ರಾಜಶೇಖರನ್

ಆರು ದಶಕಗಳ ರಾಜಕೀಯ ಜೀವನ, ಅಪಾರ ಜೀವನಾನುಭವ, ಆಡಳಿತ ಅನುಭವ, ಅಸಂಖ್ಯಾತ ಸಂಘ - ಸಂಸ್ಥೆಗಳ ನಿರ್ದೇಶಕ, ಸದಸ್ಯ, ಸಲಹೆಗಾರ, ಅಧ್ಯಕ್ಷ ಇತ್ಯಾದಿಗಳ ಹಿನ್ನೆಲೆಯುಳ್ಳ ೭೮ ವರ್ಷಗಳ ಹಿರಿಯ ಎಂ.ವಿ. ರಾಜಶೇಖರನ್ ಗಳಿಸಿದ್ದು ಕಡಿಮೆ, ಪಡೆದದ್ದು ಕಡಿಮೆ...

ಎಲ್.ಜಿ.ಹಾವನೂರು

ಸ್ವಾತಂತ್ರ್ಯನಂತರ ದೇಶದ ಎಲ್ಲ ರಾಜ್ಯಗಳಲ್ಲೂ ಆಡಳಿತ ಮುಂದುವರಿದ ವರ್ಗಗಳ ಕಪಿಮುಷ್ಟಿಯಲ್ಲಿ ಇತ್ತು. ಕಾಂಗ್ರೆಸ್ ಪಕ್ಷದ ಐತಿಹಾಸಿಕ ವಿಭಜನೆ ನಂತರ ಕರ್ನಾಟಕದಲ್ಲಿ ಇಂದಿರಾ ಕಾಂಗ್ರೆಸ್‌ನ ಚುಕ್ಕಾಣಿ ಹಿಡಿದ ಡಿ. ದೇವರಾಜ ಅರಸು ತಮ್ಮ ಹಲವಾರು ಹೊಸ ಚಿಂತನೆಗಳ ಮೂಲಕ ಭೂ ಸುಧಾರಣೆ ಕಾನೂನು ಜಾರಿಗೆ ತಂದು ರಾಜ್ಯದ ಬಹುದೊಡ್ಡ ಸಮುದಾಯವಾದ ಹಿಂದುಳಿದವರು, ರೈತರು ಚೇತರಿಸಿಕೊಳ್ಳಲು ನೆರವಾದರು . . .

ಚಿಂತಾಮಣಿ

ಮೋಹನದಾಸ ಕರಮಚಂದ್ ಗಾಂಧಿಯೆಂಬ ಪೋರ್ಬಂದರಿನ ಪೋರ ಬಾಲ್ಯದಲ್ಲಿ `ಸತ್ಯ ಹರಿಶ್ಚಂದ್ರ' ನಾಟಕವನ್ನು ನೋಡಿ ಅದರಿಂದ ವಿಪರೀತ ಪ್ರಭಾವಿತನಾದನಂತೆ. ಬ್ರಿಟಿಷರನ್ನು ಓಡಿಸಲು ನಾವೂ ಅವರಂತೆಯೇ ಬಲಿಷ್ಠರಾಗಬೇಕೆಂದು ಅಲ್ಪಸಂಖ್ಯಾತ ಹುಡುಗನೊಬ್ಬನ ಜೊತೆ ಸೇರಿ ತಾನು ಬೀಡಿ ಸೇದಿದ್ದು . . .

ನಮ್ಮ ಗಡಿ ಒಳಗೆ ನಮಗೇ ಆತಂಕ?

ಪದೇಪದೇ ಗಡಿ ವಿಷಯವನ್ನೇ ವಿನಾಕಾರಣ ಕೆದುಕುತ್ತಿರುವ ಮಹಾರಾಷ್ಟ್ರ ಸರ್ಕಾರಕ್ಕೆ ಬಲವಾದ ಸಂದೇಶ ರವಾನಿಸಲು ರಾಜ್ಯ ಸರ್ಕಾರ ಗಡಿಭಾಗ ಪ್ರದೇಶವಾದ ಬೆಳಗಾವಿಯಲ್ಲಿ ಸೆಪ್ಟೆಂಬರ್ ೨೫ರಿಂದ ನಾಲ್ಕು ದಿನಗಳವರೆಗೆ ವಿಧಾನ ಮಂಡಲದ ವಿಶೇಷ ಅಧಿವೇಶನವನ್ನು ರಾಜ್ಯ ಸರ್ಕಾರ ಹಮ್ಮಿಕೊಳ್ಳುತ್ತಿದೆ. ಇದರಿಂದ ಗಡಿನಾಡ ಕನ್ನಡಿಗರಿಗೆ ಬಹಳ ಸಂಭ್ರಮ ತಂದಿದೆ....

ಏನ್ ಜನಾ ಸಾರ್...

`ಹಾಂ... ನಂಗೊತ್ತಿತ್ತು ಅದು ನಾನಲ್ಲ ಅಂತ... ನೋಡಿ ಬೇಕಾದ್ರೆ... ನಾನು ಬಲಗೈಗೆ ವಾಚ್ ಕಟ್ಟೋದೇ ಇಲ್ಲ. ಎರಡು ಜೇಬಿರೋ ಶರ್ಟ್ ಕೂಡ ಹಾಕಲ್ಲ... ಅದು ನನ್ ಮಾತೇ ಅಲ್ಲ...? ಎಂದು ಚೆನ್ನಿಗಪ್ಪ ಕಂಡ ಕಂಡವರ ಮೇಲೆಲ್ಲ ಗೊರಗೊರ ಅಂತ ಎಗರಾಡಿದರಂತಲ್ಲ...

ಭೂ ಮಾಫಿಯಾ - ಕೇಬಲ್ ದಂಧೆ

ಪಾತಾಳ ಕಂಡರು ಕೆಲ ತಾಯಿಗ್ಗಂಡರು...

ಎಂಬುದು ಖ್ಯಾತ ಕವಿ ಗೋಪಾಲಕೃಷ್ಣ ಅಡಿಗರ ಕವನದ ಒಂದು ಸಾಲು. ಭೂಮಿಯನ್ನು ತಾಯಿ ಎನ್ನುವವರೇ ಅದರ ಮೇಲೆ ಅಧಿಪತ್ಯ ಸಾಧಿಸುವ ಪರಿಯನ್ನು ಛೇಡಿಸುವುದು; ಸಾಮ್ರಾಜ್ಯ ಸ್ಥಾಪನೆಯ ಕನಸು ಕಂಡವರು ಹುಲುಮಾನವರಂತೆ ಅಧಃಪತನಗೊಳ್ಳುವುದು; ತಾಯಿನೆಲದ ಮೇಲೆ ಆಕ್ರಮಣಕಾರಿ ಧೋರಣೆ ಸರಿಯಲ್ಲವೆನ್ನುವುದು. . .

`ಕ್ರೈಂ' ಬಗ್ಗೆ ಗಣ್ಯರು ಹೇಳಿದ್ದು...

ಕಳೆದ ವಾರ ಇಡೀ ಬೆಂಗಳೂರನ್ನು ತಲ್ಲಣಿಸಿದ ಹತ್ತು ಕೊಲೆಗಳ ಪೈಕಿ ಎಂಟು ಭೂ ಮಾಫಿಯಾಗೆ ಸಂಬಂಧಿಸಿದ್ದು. ಒಂದು ಕಾಲದ ರೌಡಿಗಳು ಇವತ್ತು ಭೂ ಕಬಳಿಕೆಯ ಭಾಗವಾಗಿದ್ದಾರೆ. ಬೆಂಗಳೂರು ನೆಲಕ್ಕೆ ಚಿನ್ನದ ಬೆಲೆ ಬರುತ್ತಿದ್ದಂತೆಯೇ ಅವರ ನಡುವಿನ ಕಾಳಗವೂ ಬೀದಿಗೆ ಬರುತ್ತಿದೆ. ಮೊನ್ನೆ ಆದ ಕೊಲೆಗಳೆಲ್ಲವೂ ಇದೇ ಗ್ಯಾಂಗ್‌ವಾರ್‌ಗೆ ಸಂಬಂಧಿಸಿದ್ದು. ವಿಕ್ರಾಂತ ಕರ್ನಾಟಕ ಸಿದ್ಧಪಡಿಸಿದ ವಿಶೇಷ ಲೇಖನವಿದು . . .

ಕ್ರೈಂ ಬೆಂಗಳೂರು ನಗರದಲ್ಲಿ ಹೆಚ್ಚು-ಕಡಿಮೆ ಆಗಿದೆ ಎಂಬುದೇನೂ ಇಲ್ಲ. ೮೦ರ ದಶಕದಲ್ಲಿ ಯಾವ ರೀತಿಯ ಕ್ರೈಂ ಇತ್ತೋ ಅದು ಹಾಗೇ ಮುಂದುವರಿದಿದೆ. ಆಗ `ಸುದ್ದಿ ಸಂಗಾತಿ' ವಾರಪತ್ರಿಕೆಯಲ್ಲಿ ನಾನು ಪತ್ರಕರ್ತನಾಗಿದ್ದಾಗ ಪೆಟ್ರೋಲ್‌ಗೆ ಸೀಮೆ ಎಣ್ಣೆ ಬೆರೆಸಿ ಮಾರುವ ದಂಧೆ ಇತ್ತು. . .

ಒಂದೇ ವಾರದಲ್ಲಿ ಹತ್ತು

ಭೂಮಾಫಿಯಾ ನಗರವನ್ನು ತಲ್ಲಣಗೊಳಿಸಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ವಾರವೊಂದರಲ್ಲೇ ಒಂಬತ್ತು ಕೊಲೆಗಳಾಗಿವೆ. ಅದರಲ್ಲಿ ಏಳು ಕೊಲೆಗಳೂ ಸಹ ಒಂದಿಲ್ಲೊಂದು ಕಾರಣಕ್ಕೆ ಭೂವ್ಯವಹಾರಕ್ಕೆ ಸಂಬಂಧಿಸಿದ್ದೆಂದರೆ ಆಶ್ಚರ್ಯವಾಗಿರಬೇಕಲ್ಲವೇ . . .

ಸಂದರ್ಶನ - ಅಪರಾಧ ಪ್ರಕರಣ ಕಡಿಮೆಯಾಗಿದೆ

ಕೆಲವು ವರ್ಷಗಳ ಹಿಂದೆ `ನೆಮ್ಮದಿಯ ನಗರ' ಹಾಗೂ `ಉದ್ಯಾನ ನಗರಿ' ಎಂದೆಲ್ಲಾ ಖ್ಯಾತಿಯನ್ನು ಬೆಂಗಳೂರು ಹೊಂದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಅಪರಾಧ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕದ ಛಾಯೆ ಮೂಡಿಸಿದೆ. . .

ಸೋಜಿಗದ ಜಗದಲ್ಲಿ ಹೀಗೊಂದು ಸ್ಪರ್ಧೆ!

ಇತ್ತೀಚೆಗೆ ನಡೆದ ಅಪರೂಪದ ಸ್ಪರ್ಧೆಯಿದು. ಏನಪ್ಪಾ ಅದು? ಸ್ಪರ್ಧೆಯ ಹೆಸರು `ಬೆಸ್ಟ್ ಸೆಲೆಬ್ರಿಟಿ ಬ್ರೆಸ್ಟ್ಸ್ ೨೦೦೬'. ಇನ್ನು ವಿವರಣೆಯ ಅಗತ್ಯವಿಲ್ಲ ತಾನೆ?. . .

ವಿಶೇಷ ಲೇಖನ- ಮುನ್ನಾಭಾಯಿಯ ಮಾಂತ್ರಿಕ ಅಪ್ಪುಗೆ!

ಪತ್ರಕರ್ತ, ವ್ಯಂಗ್ಯ ಚಿತ್ರಕಾರ, ಬರಹಗಾರ, ಚಿತ್ರ ನಿರ್ದೇಶಕ - ಹೀಗೆ ಹಲವು ವಲಯಗಳಲ್ಲಿ ಖ್ಯಾತರಾಗಿರುವ ಎನ್. ಎಸ್. ಶಂಕರ್ ಉತ್ತಮ ಸಿನಿಮಾ ವಿಮರ್ಶಕರು ಕೂಡ. ಇಂದಿನ ಚಲನಚಿತ್ರ ಮಾಧ್ಯಮದ ಬಗ್ಗೆ ಗಂಭೀರವಾಗಿ ಚಿಂತಿಸುವ ಶಂಕರ್ ಇಲ್ಲಿ `ಮುನ್ನಾಭಾಯಿ ಎಂಬಿಬಿಎಸ್' ಚಿತ್ರದ ಅಪ್ಪುಗೆಯ ಮಾಂತ್ರಿಕತೆಯ ಬಗ್ಗೆ ಬರೆದಿದ್ದಾರೆ. . .

ಮದುವೆಯಾಟ

ಹನನಿಗೆ ಏಳು ವರ್ಷ ತುಂಬುವ ಮೊದಲೇ ಅವನ ಮನೆಯವರು, ಅವನಿಗೊಬ್ಬಳು ಹುಡುಗಿಯನ್ನು ಆರಿಸಿ, ಮದುವೆ ಮಾಡಿಸಲು ಹುಡುಗಿಯ ಮನೆಯವರ ಜತೆಗೆ ಒಪ್ಪಂದ ಮಾಡಿಕೊಂಡಿದ್ದರು. . .

ಪಕ್ಕದಮನೆ

ತೆಲಂಗಾಣ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ, ತೆಲಂಗಾಣ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಕೆ. ಚಂದ್ರಶೇಖರ ರಾವ್ ಅವರು ತಾವು ಪ್ರತಿನಿಧಿಸುತ್ತಿದ್ದ ಕರೀಂ ನಗರ ಲೋಕಸಭಾ ಸ್ಥಾನದಿಂದ ರಾಜೀನಾಮೆ ನೀಡಿ. . .

ಅಳಿವಿನಂಚಿನಲ್ಲಿರುವ ಸುಮಾರು ನಾಲ್ಕು ಸಾವಿರ ರೆಡ್ ಇಯರ್‍ಡ್ ಸ್ಲೈಡರ್ ಟರ್ಟಲ್ ಹಾಗೂ ಸ್ಟಾರ್ ಟರ್ಟಲ್‌ಗಳನ್ನು (ಆಮೆಗಳನ್ನು) ಸಿಂಗಾಪೂರ ಹಾಗೂ ಮಲೇಷಿಯಾದಿಂದ. . .

ಶೃಂಗಾರ... ಕುರ್ತಾ

ಜೀನ್ಸ್ ಪ್ಯಾಂಟ್ ಎಷ್ಟು ಆರಾಮದಾಯಕ ಉಡುಪು ಅಂತ ಗುರುತಿಸಿಕೊಂಡಿದೆಯೊ ಅದೇ ಲೆವೆಲ್‌ನಲ್ಲಿ ಆರಾಮವಾಗಿರುತ್ತದೆ ಎಂಬ ಕ್ರೆಡಿಟ್ ತಗೊಂಡಿರುವುದು ದೇಸೀ ಕುರ್ತಾ ಪೈಜಾಮ. ಯಾವುದಾದರೂ ಸಾಹಿತ್ಯ ಸಭೆಗೆ ಹೋದಾಗ ಗಮನಿಸಿದ್ದೀರಾ . . .

ಮೂರನೇ ತಲೆಮಾರಿನ ಕಾರುಬಾರು

ವಿದೇಶಾಂಗ ಸಚಿವಾಲಯದ ನೂತನ ಕಾರ್ಯದರ್ಶಿಯಾಗಿ ಶಿವಶಂಕರ್ ಮೆನನ್ ಅವರು ನೇಮಕಗೊಳ್ಳುವುದರೊಂದಿಗೆ ಕೇರಳದ ಓಟಪಳಂನ ಮೆನನ್ ಕುಟುಂಬದವರೇ ಮೂರನೇ ಬಾರಿಗೆ ವಿದೇಶಾಂಗ ಸಚಿವಾಲಯದ ಅತ್ಯುನ್ನತ ಹುದ್ದೆಯನ್ನಲಂಕರಿಸಿದ. . .

ಹೆತ್ತವರೇನು ಮಾಡಬೇಕು?

ಆರನೇ ತರಗತಿಯಲ್ಲಿ ಓದುತ್ತಿದ್ದ ಅಭಿಷೇಕ್ ಕ್ಲಿಷ್ಟಕರ ಸಮಸ್ಯೆಗಳನ್ನು (ಉದಾ : ಪದಬಂಧವಿರಬಹುದು, ರಸಪ್ರಶ್ನೆಯಿರಬಹುದು) ಬಿಡಿಸುವುದರಲ್ಲಿ ಎತ್ತಿದ ಕೈ. ಸದಾ ಕ್ರಿಯಾಶೀಲವಾಗಿರುತ್ತಿದ್ದ ಈ ಹುಡುಗನ ಯೋಚನಾ ವಿಧಾನ ಅದ್ಭುತವಾಗಿತ್ತು. ಸಹಜವಾಗಿಯೇ ಹೆತ್ತವರು. . .

ತಾಯಿಗೊಂದು, ತುತ್ತೂರಿಗೊಂದು...

ಅಂದಹಾಗೆ ಎಲ್ಲವೂ ಕ್ರಮದಂತೆ ಆಗಿದ್ದರೆ ಈಗಾಗಲೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಬೇಕಿತ್ತು. ಸಾಕ್ಷ್ಯಚಿತ್ರಗಳ ಆಯ್ಕೆಯ ವಿಚಾರದಲ್ಲಿ ನ್ಯಾಯಾಲಯದ ಮುಂದೆ ಇರುವ ಕೇಸಿನ ಕಾರಣದಿಂದ ಇನ್ನೂ ಅದು ನೆನೆಗುದಿಯಲ್ಲೇ ಇದೆ.

ದೇವೇಗೌಡ್ರು ನೋಡಿದ್ರೆ ೧೭೫ ನಾಟೌಟ್

ದೇವೇಗೌಡರು ಸಿನಿಮಾ ನೋಡುತ್ತಾರೆಯೇ? ಈಗಾಗಲೇ ಒಂದೆರಡಾದರೂ ಸಿನಿಮಾ ನೋಡಿದ್ದಾರೆಯೇ? ರಾಜಕೀಯದ ಮಧ್ಯೆ ಅಷ್ಟು ಸಮಯದ ಬಿಡುವು ಅವರಿಗೆ ಸಿಗುವುದು ಸಾಧ್ಯವೇ? . . .

ಗಾಳಿಯೇ ಜೀವಾಮೃತ ಎನುವರು. . . - ಕತೆ

ಇದೊಂದು ಪತ್ತೇದಾರಿ ಮಿಶ್ರಿತ ರೋಚಕ ಕತೆ. ಆಧುನಿಕ ಸಮಾಜ, ನಮ್ಮೊಳಗೆ ಬೆರೆತಿರುವ ಅತೃಪ್ತ ಬಯಕೆಗಳು ಕ್ರೌರ್ಯಕ್ಕೆ ದಾರಿ ಮಾಡಿಕೊಡುವ ವಿಚಿತ್ರ ಹಿನ್ನೆಲೆ ಇಲ್ಲಿದೆ. ನಗರ ನಾಗರಿಕತೆಯ ಬದುಕಿನಲ್ಲಿ ಎಲ್ಲವೂ ವಿಷವಾಗುವ ವಿಚಿತ್ರ ಎಳೆಯ ಜತೆ, ಹಿಂಸೆಯ ಇನ್ನೊಂದು ಮುಖದ ತಣ್ಣನೆಯ ಕ್ರೌರ್ಯದ ಒಳದನಿಯಿದೆ. ಇಲ್ಲಿ ಕತೆಯ ಕಟ್ಟುವಿಕೆಗಿಂತ ಈ ಅಂಶಗಳತ್ತ ಒತ್ತು ನೀಡಲಿದ್ದಾರೆ.

ನೀರು ಹಂಚಿಕೆಗೆ ಸಾಫ್ಟ್‌ವೇರ್

ಬಹುಶಃ ಇನ್ನು ಮುಂದೆ ನೀರು ಹಂಚಿಕೆ ವಿವಾದ ತಲೆದೋರುವುದಿಲ್ಲ. ಕಾರಣ ನೀರು ಹಂಚುವ ಸಾಫ್ಟ್‌ವೇರ್ ಈಗ ರೆಡಿಯಾಗಿದೆ. ಅಂತರರಾಷ್ಟ್ರೀಯ ಖ್ಯಾತಿಯ `ಜಲ ಮೌಲ್ಯಮಾಪನ ಹಾಗೂ ಯೋಜನೆ' ಎಂಬ ಸಾಫ್ಟ್‌ವೇರ್ ಈಗಾಗಲೇ ಸಿದ್ಧಗೊಂಡಿದ್ದು, ನೀರು ಹಂಚಿಕೆ ವಿವಾದವನ್ನು ಇತ್ಯರ್ಥಪಡಿಸಲು ಇದನ್ನು ಬಳಸಬಹುದೆಂದು ಗೊತ್ತಾಗಿದೆ. . .

ಇದೇನ್ ಶಿವಾ..?

`ಡಿಫರೆಂಟ್ ಡೈರೆಕ್ಟರ್' ಅಂತಲೇ ಕರೆಸಿಕೊಳ್ಳುವ ರಾಮ್‌ಗೋಪಾಲ್ ವರ್ಮರ ಇತ್ತೀಚಿನ ಬ್ಯುಜಿ ಓಡಾಟ ನೋಡಿದ್ರೆ ಈ ವಯ್ಯಾ ಸಿನಿಮಾ ಪ್ರಚಾರಕ್ಕಿಳಿದ್ದಾರೆ ಅಂತ ಯಾರಾದ್ರೂ ಅಂದುಕೊಂಡರೆ ಅದರಲ್ಲೇನೂ ಆಶ್ಚರ್ಯವಿಲ್ಲ ಬಿಡಿ.

ರಾಮ್‌ಗೋಪಾಲ್ ವರ್ಮಾರ ಸ್ಟೈಲ್ ಅಂದ್ರೆ ಅದೇ. . .

ಇಶಾ ಬಸಂತೀರೇ . . .

ಗೋಲ್ಡನ್ ಹಿಟ್ ಚಿತ್ರ `ಶೋಲೆ' ಮತ್ತೆ ಹೊಸರೂಪ ತಾಳಿ ಬರಲಿದೆ ಅನ್ನೋ ಸುದ್ದಿ ಆಗಲೇ ಹಳೆಯದಾಗಿದೆ. ನಿರ್ದೇಶಕ ರಾಮ್ ಗೋಪಾಲ್ ವರ್ಮ ನಿರ್ದೇಶಿಸಲಿರುವ `ಶೋಲೆ'ಯಲ್ಲಿ ನಟಿ ಇಶಾ ಡಿಯೋಲ್ ಪಾತ್ರದ ಬಗ್ಗೆ ಡೌಟ್ ಇತ್ತು. ಆದರೆ ಈಗ ಅದು ಕ್ಲಿಯರ್ ಆಗಿದೆ. . .

ದೀಪಾವಳಿ ಸಂಚಿಕೆ

ಇದೊಂದು ಸಂತಸದ ಸಂಗತಿ.

`ವಿಕ್ರಾಂತ ಕರ್ನಾಟಕ' ವಾರಪತ್ರಿಕೆಗೆ ಈ ಬಗೆಯ ಯಶಸ್ಸು ಸಿಗಬಹುದೆಂದು ಯಾರೂ ಊಹಿಸಿರಲಿಲ್ಲ. ಕನ್ನಡದ ಓದುಗರ ಮುಂದೆ ಸದಭಿರುಚಿಯ, ಸುಂದರ ವಾರಪತ್ರಿಕೆಯೊಂದನ್ನು ಸಿದ್ಧಪಡಿಸಿ ನೀಡಿದ ತೃಪ್ತಿ ನಮ್ಮದು. ನಮ್ಮ ಕನಸನ್ನು ಸಾಹಸವನ್ನು ಬೆನ್ನು ತಟ್ಟಿದ ಸದಾಶಯ ನಿಮ್ಮದು. ಈಗ `ವಿಕ್ರಾಂತ ಕರ್ನಾಟಕ' ಬೆಳಕಿನ ಹಬ್ಬದ ಸಡಗರವನ್ನು ಸಂಭ್ರಮಿಸಲು ವಿಶೇಷ ಸಂಚಿಕೆಯೊಂದನ್ನು ರೂಪಿಸುತ್ತಿದೆ. ಕರ್ನಾಟಕದ ಪರಂಪರಾಗತ ಚೆಲುವು, ಸಾಂಸ್ಕೃತಿಕ ಸಿರಿವಂತಿಕೆಯನ್ನು, ಸಾರಸ್ವತ ಲೋಕದ ಹಿರಿಮೆಯನ್ನು ದಾಖಲಿಸುವ ಪ್ರಯತ್ನ ನಮ್ಮದು. . .

ಫಾರ್ಮುಲಾ-೧ ಚಕ್ರವರ್ತಿ ಶುಮಿ ವಿದಾಯ ...!

ಮೋಟಾರ್ ರೇಸ್ ಪ್ರಿಯರ ಹೃದಯಗೆದ್ದ ಜರ್ಮನಿಯ ಮೈಕೆಲ್ ಶುಮಾಕರ್ ಇನ್ನೇನು ಕೆಲವೇ ದಿನಗಳಲ್ಲಿ ವಿದಾಯ ಹೇಳಲಿದ್ದಾರೆ. ಒಂದು ದಶಕಕ್ಕೂ ಹೆಚ್ಚುಕಾಲ ಜನರ ಹೃದಯ ಬಡಿತವನ್ನು ಏರಿಳಿಸುತ್ತಿದ್ದ ಶುಮಾಕರ್ ಸಾಧನೆ ದಾಖಲೆಯಾಗಿ ನಿಲ್ಲುವಂಥದು. . .

ಯಾರು ಶ್ರೇಷ್ಠರು... ಫ್ಯಾಂಜಿಯೋ- ಶುಮಾಕರ್

ಫ್ಯಾಂಜಿಯೋ... ಜುವಾನ್ ಮ್ಯಾನುವೆಲ್ ಫ್ಯಾಂಜಿಯೋ ಅರ್ಜೆಂಟೀನಾದವರು. ೫೦ರ ದಶಕ ಕಂಡ ಶ್ರೇಷ್ಠ ಫಾರ್ಮುಲಾ-೧ ಡ್ರೈವರ್. ಕೇವಲ ಎಂಟು ವರ್ಷಗಳ ಕಾಲ ಫಾರ್ಮುಲಾ-೧ ರೇಸ್‌ನಲ್ಲಿದ್ದ ಫ್ಯಾಂಜಿಯೋ ಐದು ಬಾರಿ ವಿಶ್ವ ಚಾಂಪಿಯನ್ ಆಗಿದ್ದರು. ಅವರ ದಾಖಲೆಯನ್ನು ೨೦೦೨ರಲ್ಲಿ ಶುಮಾಕರ್ ಸಮಗೊಳಿಸಿದರೆ, ೨೦೦೩ರಲ್ಲಿ ಅಳಿಸಿ ಹಾಕಿದ್ದರು. . .

ಬೆಂಗಳೂರು ನರಕದಲ್ಲಿ...

`ಯಾಕ್ರಿ ಹಿಂಗೆ ಸಿಕ್ಕಿದ ಕಡೆ ಗಲೀಜು ಮಾಡ್ತೀರ' ಅಂತ ಕೇಳಿದರೆ, `ಏನು ಮಾಡೋದು ಅರ್ಜೆಂಟ್ ಆದಾಗ ಸಿಕ್ಕಿದ ಕಡೆ ಉಯ್ಯಬೇಕಾಗುತ್ತೆ' ಅಂತ ಜನ ಹೇಳ್ತಾರೆ. ಈಗ ನಗರದ ನಾನಾ ಕಡೆ `ನಿರ್ಮಲ ಬೆಂಗಳೂರು' ಶೌಚಾಲಯಗಳಿವೆ. ಸುಮಾರು ವರ್ಷದಿಂದ ಸುಲಭ್ ಶೌಚಾಲಯಗಳು ಬಾಗಿಲು ತೆಗೆದುಕೊಂಡು ಕಾದು ಕುಂತಿವೆ. ಆದ್ರೂ ನಮ್ ಜನ ದುಡ್ಡು ಕೊಟ್ಟೆ ಮೂತ್ರ ಮಾಡೋದಾ. . .

ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ

ಇದು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಬಿ.ವಿ. ಕಾರಂತರ ಸ್ಮರಣೆಯ ರಾಷ್ಟ್ರೀಯ ನಾಟಕೋತ್ಸವ ಮತ್ತು ವಿಚಾರ ಸಂಕಿರಣದ ಶೀರ್ಷಿಕೆ. ಬಾಬುಕೋಡಿ ವೆಂಕಟರಮಣ ಕಾರಂತರು ಬದುಕಿದ್ದರೆ ಈಗ ಅವರಿಗೆ ೭೮ ವರ್ಷಗಳಾಗಿರುತ್ತಿತ್ತು. ಭಾರತೀಯ ರಂಗಭೂಮಿಯ ದಿಗ್ಗಜರಾದ ಇವರ ಸ್ಮರಣೆಯಲ್ಲಿ ನಾಲ್ಕು ನಾಟಕಗಳು ಪ್ರದರ್ಶನಗೊಂಡವು. . .

ಗೃಹ ಖಾತೆಯೆನ್ನುವುದು ಒಂದಿದೆಯೆ?

ಕರ್ನಾಟಕ ರಾಜ್ಯದ ಗೃಹ ಸಚಿವರಾದ ಎಂ.ಪಿ. ಪ್ರಕಾಶ್`ಈ ವರ್ಷವೂ ಯಾವುದೇ ಕಾರಣಕ್ಕೂ ಬಾಬಾಬುಡನ್‌ಗಿರಿಯ ಶೋಭಾಯಾತ್ರೆಗೆ ಅವಕಾಶ ಕೊಡುವುದಿಲ್ಲ, ಅದನ್ನು ನಿಷೇಧಿಸುತ್ತೇವೆ' ಎಂದು ಪತ್ರಕರ್ತರಿಗೆ ಹೇಳಿಕೆ ಕೊಡುತ್ತಾರೆ. . .

ಮತ್ತಷ್ಟು ಲೇಖನಗಳು ನಿಮ್ಮನ್ನು ಕಾಯುತ್ತಿವೆ.

 

ಇಂದೇ ಚಂದಾದಾರರಾಗಿ

ವಿಕ್ರಾಂತ ಕರ್ನಾಟಕದ ಐದನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ನಾಲ್ಕನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಮೂರನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ದ್ವಿತೀಯ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಪ್ರಥಮ ಸಂಚಿಕೆಯಲ್ಲಿ . . .

 

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com