Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 28 July 2008 10:36 PM

 ವಿಕ್ರಾಂತ ಕರ್ನಾಟಕದ ಐದನೇ ಸಂಚಿಕೆಯಲ್ಲಿ:

 

5 th Issue of Vikranta Karnataka Weekly

 

ಸಂಪಾದಕೀಯ : ಮಾಗಿದ ಮನಸ್ಸು; ಹರಯದ ಹುಮ್ಮಸ್ಸು

`ಛೆ, ಮೂವತ್ತೈದು ವರ್ಷಗಳ ಹಿಂದೆ ಬರೆಯುತ್ತಿದ್ದ ಯುವ ಕವಿಗಳಿಗೆಲ್ಲ' ಈಗ ಅರವತ್ತು ತುಂಬುತ್ತಿದೆ. . .ಎಂದು ಕವಿಗೆಳೆಯರೊಬ್ಬರು ಇತ್ತೀಚೆಗೆ ಪೇಚಾಡಿಕೊಂಡರು. ಅರವತ್ತರ ಅಂಚು ದಾಟಿದ್ದು ಒಂದು ಬಗೆಯ ವಯಸ್ಸಾದ ಸಂಕೇತ ಎಂಬುದು ಅವರ ಮಾತಿನ ಧಾಟಿ... ಅದು ತಮಾಷೆಯೋ ಸ್ವವಿಮರ್ಶೆಯೋ ಅಥವಾ ವಯಸ್ಸನ್ನು ಹಿಡಿದಿಡಲಾಗದ ತಹತಹದ ಮನಸ್ಥಿತಿಯೋ...

ಶ್ರೀಹರಿಯಿಲ್ಲದ ಕಂಬಕ್ಕೆ ನಿತ್ಯ ಗದಾಪ್ರಹಾರ?

ವೇದೋಪನಿಷತ್ತು ಪುರಾಣೇತಿಹಾಸಗಳಲ್ಲಿ ಪಾರಂಗತರಾದ ತಮಗೆ ಆದರ್ಶವಾಗಿ ನಾನಾ ಪುರುಷರುಗಳು ಇರಬಹುದು; ಸ್ತ್ರೀ ಇರಲು ಸಾಧ್ಯವಿಲ್ಲ ಏಕೆಂದರೆ ನಮ್ಮ ಬಾಲ್ಯೌವನದ ಆದರ್ಶದ ಕನಸುಗಳಿಗೆಲ್ಲಾ ಕಾರಣಳೂ ನಾಶಕಾರಳೂ . . .

ಓದುಗರ ಪತ್ರಗಳು

ಮೊದಲಿಗೆ ಕನ್ನಡದ ಹೊಚ್ಚ ಹೊಸ ವಾರಪತ್ರಿಕೆಯ ಸಂಪಾದಕರಾದ ನಿಮಗೆ ಅಭಿನಂದನೆಗಳು. ವಿಕ್ರಾಂತ ಕರ್ನಾಟಕ ಪತ್ರಿಕೆಯ ಚಂದಾದಾರ ಆಗಿದ್ದೇನೆ. ಮೊದಲ ಸಂಚಿಕೆ ನೋಡಿದೆ. . .

ಮುಖ್ಯವಾಗಿ ನಿಮ್ಮನ್ನು ಅಭಿನಂದಿಸೋಣಂತಾನೇ ಯವನಿಕಾಕ್ಕೆ ಬಂದಿದ್ದು. ನುರಿತ ಪತ್ರಕರ್ತರೂ ಒಳ್ಳೆಯ ಬರಹಗಾರರೂ ಆದ ನೀವು ಸಂಪಾದಕತ್ವ ವಹಿಸಿರುವ ವಿಕ್ರಾಂತ ಕರ್ನಾಟಕ ತುಂಬ ಚೆನ್ನಾಗಿ . . .

ಸಾಹಸಕ್ಕೆ ಹೆಸರಾದ ನಮ್ಮ ರವಿರೆಡ್ಡಿಯವರು ಪ್ರಾರಂಭಿಸಿರುವ ವಿಕ್ರಾಂತ ಕರ್ನಾಟಕ ನಮ್ಮಲ್ಲಲ್ಲ ಒಂದು ಹೊಸ ಬಗೆಯ ಉತ್ಸುಕತೆಯನ್ನು ಮೂಡಿಸಿದೆ. . .

ಈ ಜನ

ಭಾರತೀಯ ಕಲಾ ಜಗತ್ತಿನಲ್ಲಿ ತನ್ನದೇ ಆದ ವಿಶಿಷ್ಟ ಶೈಲಿಯನ್ನು ಹೊಂದಿರುವ ಕಲಾವಿದ ಮಕ್‌ಬೂಲ್ ಫೈದಾ ಹುಸೇನ್. ೧೯೧೫ರಲ್ಲಿ ಮಧ್ಯಪ್ರದೇಶದ ಇಂದೂರ್‌ನಲ್ಲಿ ಜನಸಿದ ಹುಸೇನ್ ಅವರದು ಬಡತನದ ಬದುಕು ಮೂರು ವರ್ಷಕ್ಕೆ ತಾಯಿಯನ್ನು . . .

ಸ್ಟೀವ್ ಇರ್‍ವಿನ್

ಜೀವ ಜಗತ್ತಿನಲ್ಲಿ ಯಾವುದೇ ಪ್ರಾಣಿಯೂ ಸಹ ಮನುಷ್ಯನನ್ನು ಕಂಡ ಕೂಡಲೇ ದೂರ ಸರಿಯುತ್ತವೆ. ಪ್ರಾಣಿಗಳು ತನಗೆ ಅಪಾಯ ಕಾದಿದೆ ಎಂದಾಗ ಮಾತ್ರ ಪ್ರಾಣ ರಕ್ಷಣೆಗಾಗಿ ಪ್ರತಿ ದಾಳಿ ನಡೆಸುತ್ತವೆ ಮತ್ತು ಆ ದಾಳಿ ಕರಾರುವಾಕ್ಕಾಗಿರುತ್ತದೆ. . .

ಸಿನಿಮಾ ಮಾರುವ ಹೊಸ ಟ್ರೆಂಡ್

ಇಂದ್ರಜಿತ್ ಸಿನಿಮಾಗಳೇ ಹಾಗೆ. ಒಂದೊಂದು ಚಿತ್ರದಲ್ಲಿ ಒಂದೊಂದು ವಿಶೇಷ. ಅದರಲ್ಲೂ ಪ್ರಚಾರದ ದೃಷ್ಟಿಯಿಂದ ಇಂದ್ರಜಿತ್ ಯಾವತ್ತೂ ತಮ್ಮ ಚಿತ್ರಗಳಿಗೆ ಮೋಸ ಮಾಡಿಲ್ಲ. ಈಗ ಬಿಡುಗಡೆ ಆಗುತ್ತಿರುವ ಐಶ್ವರ್ಯ ಚಿತ್ರಕ್ಕೆ . . .

ಎಲ್ಲಾ ಓಕೆ...

ಯುಬಿಯ ಬಗ್ಗೆ ಚಿತ್ರದಲ್ಲಿ ಏನು ಹೇಳಲಾಗುತ್ತದೆ? ಎಂಬ ಕುತೂಹಲ ಅಲ್ಲವೇ. ಆದರೆ ಚಿತ್ರದಲ್ಲಿ ಹಾಗೆಲ್ಲಾ ಬಿಯರ್ ಕುಡಿಯುವುದನ್ನು ತೋರಿಸುವ ಹಾಗಿಲ್ಲ. . .

ನಾಯಕಿಯ ಆಯ್ಕೆ ಅತ್ಯಂತ ಮುಖ್ಯವೇ ?

ಹೌದು ಎನ್ನುತ್ತಾರೆ ಇಂದ್ರಜಿತ್. ಅವರ ಸಿನಿಮಾದ ನಾಯಕಿಯರ ಆಯ್ಕೆಯ ವಿಚಾರದಲ್ಲಿ ಇಂದ್ರಜಿತ್ ತುಂಬಾ ಪರ್ಟಿಕ್ಯುಲರ್. ಮೊದಲ ಚಿತ್ರ ತುಂಟಾಟಕ್ಕೆ ರೇಖಾಳನ್ನು ಆಯ್ಕೆ ಮಾಡುವಾಗ ಅವರ ಮನಸ್ಸಿನಲ್ಲಿದ್ದುದು ಕಾಲೇಜು ಹುಡುಗರು. ಅದಾಗಲೇ ಚಿತ್ರ ಎಂಬ ಚಿತ್ರದಲ್ಲಿ ರೇಖಾ ತಾಜಾ ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡಿದ್ದರು. ಅಷ್ಟು ಬಿಟ್ಟರೆ ರೇಖಾ ಇನ್ನೂ ಜನಪ್ರಿಯ ತಾರೆಯೇನೂ ಆಗಿರಲಿಲ್ಲ. . .

ಹೆಸರಿನಿಂದಲೆ ಶುರು

ಇಂದ್ರಜಿತ್ ಲಂಕೇಶ್ ತಮ್ಮ ಚಿತ್ರಗಳಿಗೆ ಹೆಸರಿಡುವಾಗ ತುಂಬಾ ಎಚ್ಚರ ವಹಿಸುತ್ತಾರೆ. ಸಾಮಾನ್ಯವಾಗಿ ಆ ಹೆಸರು ಜನಪ್ರಿಯವಾಗಿರಬೇಕು, ಹಾಗೆಯೇ ಸರಳ ಹಾಗೂ ಜನರಿಗೆ ತಲುಪುವಂಥದ್ದಾಗಿರಬೇಕು. ಎಲ್ಲೋ ಒಂದು ಕಡೆ ಚಿತ್ರದ ಹೆಸರೇ ಜನರ ಮನದಲ್ಲಿ ಕಚಗುಳಿ ಇಡುವಂತಿರಬೇಕು, ಇಲ್ಲವೆ ಹೊಸ ಸಂವೇದನೆ ಸೃಷ್ಟಿಸುವಂತಿರಬೇಕು. . .

`ಯಾವ ಗಾಂಧಿ ಸಾರ್?'

`ಸಿದ್ರಾಮಯ್ಯ ನಂ ಪಾರ್ಟಿಗೆ ಬಂದಿದ್ದು ಲಾಭಾನೋ ನಷ್ಟಾನೋ' ಎಂದು ದಿಲ್ಲಿಯಲ್ಲಿ ಸೋನಿಯಾ ಮೇಡಂ ಕೇಳಿದ ಕೂಡಲೇ, ಖರ್ಗೆ, ಧರಂಸಿಂಗ್, ಎಚ್.ಕೆ. ಪಾಟೀಲ್, `ನೀವೇ ಹೇಳ್ರಿ...' ಅಂತ ಪರಸ್ಪರ ಪಿಸುಗುಟ್ಟಿದರಂತೆ. . .

`ಅಕ್ಕ' ಸಮ್ಮೇಳನದ ವಿಶೇಷ ಪುಟಗಳು

ಸಮ್ಮೇಳನದ ನಿಜವಾದ ಹೀರೋಗಳು!

ಅಕ್ಕ ಸಮ್ಮೇಳನ ಮುಗಿದಿದೆ. ಮಳೆ ನಿಂತು ಮರದಿಂದ ನೀರ ಹನಿ ಉದುರುವಂತೆ ಅದು ಮಾಸದ ಒಂದಷ್ಟು ನೆನಪುಗಳನ್ನು ಬಿಟ್ಟು ಹೋಗಿದೆ. ಅಮೇರಿಕಾದಲ್ಲಿ ನಡೆದದ್ದು, ನಂತರದ ಪ್ರಮುಖ ಪ್ರಕ್ರಿಯೆಗಳನ್ನು, ತಮಾಷೆಗಳನ್ನು ಕಲೆಹಾಕಿ ರವಿ ಕೃಷ್ಣಾ ರೆಡ್ಡಿ ಬರೆದ ನಾಲ್ಕು ವರದಿಗಳು ಇಲ್ಲಿವೆ . . .

ಬಸವಣ್ಣನಾಗಬೇಕೆಂದು ಬಯಸಿದ ಯಡಿಯೂರಪ್ಪ ಅಮೇರಿಕದಲ್ಲಿ ಮೂಗಬಸವನಾದದ್ದು!

ಅಮೇರಿಕಾದ `ಅಕ್ಕಾ' ಸಮ್ಮೇಳನಕ್ಕೆ ಕರ್ನಾಟಕದ ಉಪ ಮುಖ್ಯ ಮಂತ್ರಿಗಳು ಪಾದ ಬೆಳೆಸಿದ್ದು ಎಲ್ಲರಿಗು ತಿಳಿದೇ ಇದೆ. ಆದರೆ ಅಲ್ಲಿ ಭಾಗವಹಿಸಿದ ಮಂತ್ರಿ ವರೇಣ್ಯರಿಗೆ ಸಭಾಮರ್ಯಾದೆಯೂ ಗೊತ್ತಿರಲಿಲ್ಲ. ಹೋಗಲಿ `ಅಕ್ಕಾ'ದ ಕಾರ್ಯಕರ್ತರು ಹಾಕಿಕೊಟ್ಟ ಕಾರ್ಯಕ್ರಮವನ್ನು ತಿಳಿಯುವ ವ್ಯವಧಾನವೂ ಇರಲಿಲ್ಲ. . .

ಉಪ ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ತಮ್ಮ ಭಾಷಣ ಮಾಡಿ ಮುಗಿಸುವ ತುರ್ತಾದರೆ, ಉಳಿದಂತೆ ಕಟ್ಟಾ ಮುಂತಾದವರಿಗೆ ಇದೊಂದು ಮಾಮೂಲಿ ಪತ್ರಕಾಗೋಷ್ಠಿ ಅನ್ನುವಂತಾಗಿತ್ತು. ಏನೇ ಅಂದರೂ ಮಂತ್ರಿಗಳ ಮಾತು ಮನರಂಜನೆಯ ಕಾರ್ಯಕ್ರಮಗಳಿಗಿಂತ ಮಜವಾಗಿತ್ತು. . .

AKKAನಿಗೊಂದು ಲೆಟ್ರು...

ಪ್ರೀತಿಯ ಅಕ್ಕನಿಗೆ ಸಾಷ್ಟಾಂಗ ನಮಸ್ಕಾರಗಳು...

ನೀ ಅಲ್ಲೆಲ್ಲೋ ವಿದೇಶದಲ್ಲಿದ್ಕೊಂಡು ನಮ್ ಭಾಷೆ ಕನ್ನಡಕ್ಕೋಸ್ಕರ ಬಹಳ ದುಡಿತಾ ಇದ್ಯ ಅಂತ ಕೇಳಿ ಬಹಳ ಖುಷಿ ಆಯ್ತು ಕಣಕ್ಕ.... ವೆಬ್ ಸೈಟ್‌ಗಳಲ್ಲಿ ಎಲ್ಲಾ ಒದ್ತಾ ಇರ್ತೀನ್ ಅಕ್ಕ.. ಚಾಚು ತಪ್ದೆ ಪ್ರತಿ ಅಂಕಣಾನು ಒದ್ತೀನಿ ನಿನ್ ಬಗ್ಗೆ. . .

ನಟರಿಂದ ಪೊಲೀಸರಿಗಾಗಿ...

ಪೊಲೀಸ್ ಪಾತ್ರದಲ್ಲಿ ನಟಿಸುವ ಸಿನೆಮಾ ನಟರು ನಿಜವಾದ ಪೊಲೀಸರ ಬಳಿ ಹೋಗಿ ಒಂದಷ್ಟು ಟಿಪ್ಸ್ ಪಡೆದುಕೊಂಡು ಬಳಿಕ ಸಿನೆಮಾದಲ್ಲಿ ನಟಿಸುವುದು ಸಾಮಾನ್ಯ. ಆದರೆ ನಿಜವಾದ ಪೊಲೀಸರೇ `ರೀಲ್' ಪೊಲೀಸರ ಬಳಿ ತರಬೇತಿ ಪಡೆದುಕೊಂಡರೆ ಹೇಗಿರುತ್ತೆ? . . .

ಹಾವಿನ ಮಹಿಮೆ

ಉತ್ತರ ಪ್ರದೇಶದ ದಧೋರ್‌ಪುರ ಎಂಬ ಹಳ್ಳಿಯನ್ನು ಯಾರೂ ಕೂಡ ತಿರುಗಿ ನೋಡಿದವರಲ್ಲ. ದೇಶದ ಲಕ್ಷಾಂತರ ಹಳ್ಳಿಯಂತೆ ಅದೂ ಒಂದು ಹಳ್ಳಿ ಅಷ್ಟೇ. ಆದರೆ ಇತ್ತೀಚೆಗೆ ಈ ಹಳ್ಳಿಯ ಅದೃಷ್ಟ ಖುಲಾಯಿಸಿದೆ. ಯಾಕೆ? ಯಾಕೆಂದರೆ ಇಲ್ಲಿಗೆ ಹಾವು ಬಂದಿದೆ!

ಅಪಾಯ ಬಂದಾಗ ಮೊಬೈಲ್‌ಗೆ ಮೆಸೇಜ್!

ಬೆಂಗಳೂರಿನ ನಾಗರಿಕರು ಇನ್ನು ಮುಂದೆ ತಮ್ಮ ಭದ್ರತೆಗಾಗಿ ಪೊಲೀಸರನ್ನು ಕಾದು ಕುಳಿತುಕೊಳ್ಳಬೇಕಾಗಿಲ್ಲ. ಇಸ್ರೇಲ್ ದೇಶದ `೨೧ ಸೆಂಚುರಿ ಸೆಕ್ಯುರಿಟಿ ಸಂಸ್ಥೆ'ಯೇ ಎಲ್ಲಾ ವಿವಿಧ ಭದ್ರತೆಯನ್ನು ಒದಗಿಸಲಿದೆ. ಎಂಥ ಭದ್ರತೆ?

ಮಾರಾಟವಾಗಿದ್ದ ಜಾಕಿಚಾನ್!

ತನ್ನ ಆಕ್ಷನ್‌ಗಳಿಂದ ವಿಶ್ವದಾದ್ಯಂತ ಯುವ ಜನಾಂಗವನ್ನು ರೋಮಾಂಚನಕ್ಕೀಡು ಮಾಡುತ್ತಿರುವ ಜಾಕಿಚಾನ್ ಈಗ ಕುಬೇರರ ಸಾಲಿನಲ್ಲಿದ್ದಾನೆ. ಈತ ಏಶ್ಯಾದಲ್ಲೇ ಅತ್ಯಧಿಕ ಸಂಭಾವನೆ ಪಡೆಯುವ . . .

೬ ಕೋಟಿಯ ಮೊಬೈಲ್?

ಪ್ರಸಿದ್ಧ ಸ್ವಿಸ್ ಕಂಪನಿ `ಗೋಲ್ಡ್‌ವಿಶ್' ಇತ್ತೀಚೆಗೆ ತಯಾರಿಸಿರುವ ಈ ಮೊಬೈಲ್‌ನ ಬೆಲೆ ಕೇವಲ ೧೦ ಲಕ್ಷ ಯೂರೋಗಳು; ಅಂದರೆ ೬ ಕೋಟಿ ರೂಪಾಯಿಗಳು, ಅಷ್ಟೇ . . .

ಹರಳು ಪುರಾಣ

ಬಿಜಾಪುರ ಕಿಡ್ನಿ ಫೌಂಡೇಶನ್‌ನ ವೈದ್ಯ ಎಸ್.ಬಿ. ಪಾಟೀಲಪ್ಪ ಇತ್ತೀಚೆಗೆ ವಿಶಿಷ್ಟ ದಾಖಲೆಯೊಂದನ್ನು ಮಾಡಿದ್ದಾರೆ; ರೈತನೊಬ್ಬನ ಮೂತ್ರಪಿಂಡದಲ್ಲಿದ್ದ ೧೪೨೪ ಹರಳುಗಳನ್ನು ಹೊರತೆಗೆಯುವ ಮೂಲಕ . . .

ಜಾಕ್‌ಪಾಟ್ ಅಂದ್ರೆ ಇದು!

ಕೋಲ್ಕತಾ ಮೂಲದ ಜೈಪ್ರಕಾಶ್ ಜೈಸ್ವಾಲ್ ಎಂಬುವರು ಭಾರತೀಯ ಲಾಟರಿ ಇತಿಹಾಸದಲ್ಲೆ ಗರಿಷ್ಠ ಜಾಕ್‌ಪಾಟ್ ವಿಜೇತ. ೪೭ ವರ್ಷ ವಯಸ್ಸಿನ ಜೈಸ್ವಾಲ್‌ರಿಗೆ ಹೊಡೆದ ಲಾಟರಿ ಮೊತ್ತ ಬರೀ ೧೭.೨೯ ಕೋಟಿ . . .

ಇಡೀ ಜಗವೇ ಈಗ ಹೆಬ್ಬೆಟ್ಟು ಒತ್ತುತ್ತಿದೆ..!

ಮೊಬೈಲ್ ಎಂಬುದೇ ಒಂದು ವಿಭಿನ್ನ ಲೋಕ. ಸಾಕ್ಷರತೆ ಎಂಬ ಕಲ್ಪನೆಗೆ ಬೇರೆಯೇ ವ್ಯಾಖ್ಯೆ ಕೊಟ್ಟಿರುವ ತಂತ್ರಜ್ಞಾನ ಮೊಬೈಲ್ ಲೋಕವನ್ನು ನಮ್ಮ ಮುಂದಿಟ್ಟಿದೆ. ಅಬ್ಬಬ್ಬಾ ಇದು ಬಿಜಿ ಯುಗವಪ್ಪ ! ಫುಟ್‌ಪಾತ್‌ನಲ್ಲಿ ನಡೆಯುವ ಹುಡುಗ ಹುಡುಗಿಯರನ್ನು ಗಮನಿಸಿ . ಕಿವಿಗೊಂದು ಇಯರ್ ಫೋನ್ ಸಿಕ್ಕಿಸಿಕೊಂಡು ಜೋರಾಗಿ ನಗುತ್ತಿರುತ್ತಾರೆ. ನಡೆಯುತ್ತಾ ನಡೆಯುತ್ತಾ ಅಲ್ಲೇ ನಿಂತು ಯಾರಿಗೋ ಜೋರಾಗಿ ಬೈಯ್ಯುತ್ತಿರುತ್ತಾರೆ. . .

ಪೂಜೆಗೆ ಹೂ ಬೇಕಿತ್ತು. ರಸ್ತೆಯಲ್ಲಿ ಮಲ್ಲಿಗೆ ಹೂವೇ ಎಂಬ ಕೂಗು ಕೇಳಿಸುತ್ತಾ ಅಂತ ಸ್ವಲ್ಪ ಗಮನವನ್ನು ಅತ್ತ ಹರಿಬಿಟ್ಟಿದ್ದೆ. ಮಲ್ಲಿಗೆ...ಶ್ಯಾವಂತಿಗೆ... ಕೂಗು ಕೇಳಿದ್ದೇ ಗೇಟ್ ಬಳಿ ಬಂದೆ. . .

ಅಳುವಿನ ಕಾರಣ

ಒಂದು ರವಿವಾರದ ದಿನ, ಮಧ್ಯಾಹ್ನದ ಹೊತ್ತು ಅಂಗಳದಲ್ಲಿ ಒಂಟಿಯಾಗಿ ಕುಳಿತ್ತಿದ್ದ ಮೋಹನನು ಕಣ್ಣೀರು ಸುರಿಸುತ್ತಿದ್ದನು. ಅದನ್ನು ನೋಡಿದ ರಲಿತಕ್ಕ, ಮನೆಯೊಳಗೆ ಹೋಗಿ ಅಡುಗೆ ಕೋಣೆಯಲ್ಲಿದ್ದ ತಾಯಿಯನ್ನು ಕರೆದುಕೊಂಡು ಅಂಗಳಕ್ಕೆ ಬಂದಳು. . .

ಭಾರತದ ಮಹಿಳೆ : ಈಗೆಷ್ಟು ಸಬಲೆ?

ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಸಂವಿಧಾನ ಎಲ್ಲ ಪ್ರಜೆಗಳಿಗೂ ಸಮಾನ ಹಕ್ಕು, ಅವಕಾಶ, ಸ್ವಾತಂತ್ರ್ಯ, ಸಮಾನತೆ ನೀಡಿದೆ. ಲಿಂಗ, ಜಾತಿ, ಪ್ರದೇಶ, ಧರ್ಮಗಳ ನೆಲೆಯಲ್ಲಿ ಭಿನ್ನ ಭೇದವನ್ನು ನಿರಾಕರಿಸುತ್ತದೆ. ಆದರೆ ವಾಸ್ತವ ಪರಿಸ್ಥಿತಿ, ಸಂದರ್ಭಗಳು ಬೇರೆಯೇ ಆಗಿದೆ. . .

`ಓಣಂ' ವೈಶಿಷ್ಟ್ಯ

ಬಹುಶಃ ಜಾತಿ-ಕುಲ-ಮತ ಎಂಬ ಯಾವುದೇ ಭಾವನೆಗಳಿಲ್ಲದೆ ಆಚರಿಸುವ ಏಕೈಕ ಹಬ್ಬವೆಂದರೆ ಅದು `ತಿರು ಓಣಂ' ಅಥವಾ `ಓಣಂ' ಎಂದರೆ ತಪ್ಪಾಗಲಾರದು. . .

ನಾಯ್ಡುಗೆ ಹೊಸ ಅಸ್ತ್ರ

ಇಡೀ ರಂಗಾರೆಡ್ಡಿ ಜಿಲ್ಲೆಯ ರೈತರು ನೈತಿಕವಾಗಿ ಬೆಂಬಲಿಸಿದ್ದರಿಂದ, ಈ ರೈತರು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಆರ್. ರೆಡ್ಡಿ ಅವರಿಗೆ ಭಾರಿ ತಲೆನೋವಾಗಿ ಪರಿಣಮಿಸಿದೆ . . .

ಉದರ ದರ್ಶಕ ಚಿಕಿತ್ಸೆ

ಉದರ ದರ್ಶಕ ಚಿಕಿತ್ಸೆ (ಲ್ಯಾಪ್ರೋಸ್ಕೋಪಿ) ಯನ್ನು ವೈದ್ಯಕೀಯ ವಿದ್ಯಾರ್ಥಿಗಳಿಗೆ ಪರಿಚಯಿಸುವ ದೃಷ್ಟಿಯಿಂದ, ಕೊಯಮತ್ತೂರಿನ ಜೆಮ್ ಆಸ್ಪತ್ರೆ ರಾಜ್ಯದ ದೂರ ಶಿಕ್ಷಣ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಪ್ರಕಾರ . . .

ರಂಗಿಲಾ

ತಂಗಿಯನ್ನು ಮೆಚ್ಚಿದ್ದು ಹೇಗೆ

ಹೀಗೇ ದರ್ಶನ್ ಒಂದು ಬಾರಿ ಚೆನ್ನೈಗೆ ಹೋಗಿದ್ದರು. ಬೇರಾವ ಕಾರಣದಿಂದಲ್ಲ. ಸುಮ್ಮನೆ ಬೇಸರ ಕಳೆಯಲು ಹಾಗೆ ಹೋಗಿದ್ದರು. ಅಲ್ಲಿ ಒಂದು ಚಿತ್ರಮಂದಿರದಲ್ಲಿ ತಿರುಪ್ಪಾಚಿ ಚಿತ್ರ ನಡೆಯುತ್ತಿತ್ತು. ಚೆನ್ನೈಗೆ ಹೋದಾಗಲೆಲ್ಲ ಯಾವುದಾದರೊಂದು ಒಳ್ಳೆಯ ಚಿತ್ರ ನೋಡುವುದು ದರ್ಶನ್‌ಗೆ ರೂಢಿಯಂತೆ. . .

ಡಬ್ಬಿಂಗ್‌ಗೆ ಮೊದಲು ಕಂಡೀಷನ್?

ಆದರೆ ಇತ್ತೀಚೆಗೆ ದರ್ಶನ್ ಒಂದು ವಿಚಾರವನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರಂತೆ. ಅದೇನಪ್ಪ ಅಂದರೆ, ಅವರ ಚಿತ್ರಗಳಿಗೆ ಆರಂಭಿಕ ಪ್ರಚಾರವೇ ಕಡಿಮೆ ಆಗುತ್ತಿದೆಯಂತೆ. ಚಿತ್ರ ಆರಂಭವಾಗಿ ಅದು ಬಿಡುಗಡೆಯ ಹಂತಕ್ಕೆ ಬರುವವರೆಗೂ ಪ್ರಚಾರವೇ . . .

ಮಲ್ಲಿಗೆ ಬದಲು ಟ್ಯುಲಿಪ್

ತಂಗಿಗಾಗಿ ಚಿತ್ರವೂ ಫಾರಿನ್‌ಗೆ ಹೋಗಬೇಕೆ? ಈ ರೀತಿ ದರ್ಶನ್ ಅವರೇ ಕರಾರು ಹಾಕಿದರಾ? ಅಂದರೆ ನಿರ್ಮಾಪಕರು ಇಲ್ಲ ಅಂತಾರೆ. . .

ಬ್ರಾಹ್ಮಣ ಬರೋದು ಗ್ಯಾರಂಟಿ

ರವಿಶಾಸ್ತ್ರಿ ಅನ್ನೋ ಚಿತ್ರಕ್ಕೆ ಮೊದಲು ಬ್ರಾಹ್ಮಣ ಅಂತ ಹೆಸರಿತ್ತು. ಅದೇ ಸಮಯಕ್ಕೆ ಸರಿಯಾಗಿ `ಮಾಸ್ತಿ' ಗಲಾಟೆ ಶುರುವಾಯ್ತು, `ಮಾಸ್ತಿ'ಯ ಹೆಸರು ಬದಲಾಯಿಸುವ ಪ್ರಮೇಯ ಬಂದಿದ್ದರಿಂದ ಹಲವು ನಿರ್ಮಾಪಕರು . . .

ಅಭಿಮಾನಿಗಳ ಜೊತೆ ಹುಟ್ಟುಹಬ್ಬ

ಇತ್ತೀಚೆಗೆ ಸುದೀಪ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಅದೇನೂ ದೊಡ್ಡ ವಿಚಾರ ಅಲ್ಲ ಬಿಡಿ. ಯಾಕೆಂದರೆ ಪ್ರತಿವರ್ಷ ಸುದೀಪ್ ಹುಟ್ಟುಹಬ್ಬ ನಡೆದೇ ನಡೆಯುತ್ತದೆ. ಆದರೆ ಸಾಮಾನ್ಯವಾಗಿ ಹೆಚ್ಚು ಮೋಜು ಮಾಡದ ಸುದೀಪ್ . . .

ತಂಗಿಯರ ಭಾರಿ ಸೋಲು ತಂಗಿಯರ ಕಾಲ ಮುಗಿಯಿತೆ?

ಹಾಗನ್ನುತ್ತಿದೆ ಗಾಂಧಿನಗರ. ಯಾಕೆಂದರೆ ಇತ್ತೀಚಿನ ತಂಗಿಯ ಸೆಂಟಿಮೆಂಟ್ ಚಿತ್ರಗಳೆಲ್ಲ ಯರ್ರಾಬಿರ್ರಿಯಾಗಿ ಸೋಲನ್ನಪ್ಪುತ್ತಿವೆ; ಅದರ ಲೇಟೆಸ್ಟ್ ಉದಾಹರಣೆ ಎಂದರೆ ಕೆ.ಮಂಜು ನಿರ್ಮಾಣದ ಒಡಹುಟ್ಟಿದವಳು. ಈ ಚಿತ್ರದ ಸೋಲನ್ನು ಕಂಡವರು ಇನ್ನುಮುಂದೆ `ತಂಗಿ'ಯ ಸಹವಾಸವೇ ಬೇಡ ಅನ್ನತೊಡಗಿದ್ದಾರೆ. . .

ನಗೆಯ ಹಾಯಿ ದೋಣಿ

ಬೇಯೇರಿಯ ನಿವಾಸಿಯಾದ ಜ್ಯೋತಿ, ಹಲವಾರು ವರ್ಷದಿಂದಲೂ ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ. ಕನ್ನಡ ಪುಸ್ತಕ ಭಂಡಾರದ ಸಂಚಾಲಕಿ, ವಾರ್ಷಿಕ ಸಂಚಿಕೆ ಸಂಪಾದಕಿ, ಮನರಂಜನಾ ಸಮಿತಿಯ ಸದಸ್ಯೆ ಹೀಗೆ ಹಲವಾರು ಪಾತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅನಿವಾಸಿ ಮಕ್ಕಳಿಗೆ ಕನ್ನಡ ಕಲಿಸುವ ಕಾರ್ಯಕ್ರಮದಲ್ಲಿ ತೊಡಗಿದ್ದಾರೆ. ಸಾಫ್ಟ್‌ವೇರ್ ಕ್ಷೇತ್ರದಲ್ಲಿ ವೃತ್ತಿಯಲ್ಲಿರುವ ಜ್ಯೋತಿಯವರ ಹವ್ಯಾಸಗಳು ಹಾಡು, ನಟನೆ, ಚಿತ್ರ ರಚನೆ, ಕಥೆ, ಕವನ, ಇವುಗಳನ್ನೊಳಗೊಂಡಿದೆ. . .

ನಿಸರ್ಗದ ಮುಂದೆ ಸೋಲದ ರೋಗ ಇಲ್ಲ

ಎಚ್‌ಐವಿ ಇದ್ದರೇನು ನಾನು ಬದುಕಲು ಸಾಧ್ಯ ಎಂದು ಜಗತ್ತಿನ ಮುಂದೆ ಎದ್ದು ನಿಲ್ಲಲು ನಿರ್ಧರಿಸಬೇಕಾದರೆ ನನ್ನ ಕುಟುಂಬದ ಸದಸ್ಯರು, ಬಂಧು ಮಿತ್ರರು, ಜನಸಾಮಾನ್ಯರು ಕಾರಣ. ಎಲ್ಲರೂ ನನ್ನ ಪ್ರೀತಿಯಿಂದ ಸ್ವೀಕರಿಸಿದ್ದಾರೆ. ವೀಣಕ್ಕಎಂದು ಕರೆದು ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದ್ದಾರೆ. . .

ಹೊಸ ಫ್ಯಾಷನ್‌ಗೆ ಟೀವಿ ಮೂಲ

ಭಾರತದಲ್ಲಿ ಸಂಪ್ರದಾಯ ಶೈಲಿಗಳೇ ಒಂದಲ್ಲ ಒಂದು ರೀತಿಯಲ್ಲಿ ಹಿಟ್ ಅನಿಸಿಕೊಳ್ಳುತ್ತವೆ. ಹುಡುಗಿಯರಾಗಲಿ ಮಹಿಳೆಯರಾಗಲಿ ಹೊಸ ಫ್ಯಾಷನ್‌ನ್ನು ಒಪ್ಪಿಕೊಳ್ಳುವಾಗ ಅಲ್ಲಿ ಯಾವುದೇ ಕಿರಿಕ್ ಇಲ್ಲದೇ ಇರಲಿ ಅಂತ ನಿರೀಕ್ಷಿಸುತ್ತಾರೆ. . .

ಕಿರುಕಸಾಲೆ ಸೊಪ್ಪು

ಮಕ್ಕಳ ಉತ್ತಮ ಬೆಳವಣಿಗೆಗೆ, ವೃದ್ಧಾಪ್ಯವನ್ನು ತಡೆಗಟ್ಟುವಲ್ಲಿ ಅದ್ಭುತ ಔಷಧೀಯ ಗುಣವಿರುವುದು. ವರ್ಣನೆ: ಕನ್ನಡದಲ್ಲಿ ಕಿರುಕಸಾಲೆಯೆಂತಲೂ, ಸಂಸ್ಕೃತ: ತುಂಡಲೀಯ, ಮೇಘನಾದ, ಅಲ್ಪ, ಮಾರಿಷ, ಹಿಂದಿ: ಚೌಲಾಯಿ ಕಾಸಾಗ್, ಚವಡಾಯ, ಚವಲಾಯಿ ತಮಿಳು: ಮುಲಕ್ಕೀರ ಮಲಯಾಳಂ: ಚಿರು ಚೀರಾ ತೆಲಗು: ಮೋಲಾಕೀರಾ ಇಂಗ್ಲಿಷ್: ಅಮರಾಂತಸ್

ಗುಣ: ಕಿರುಕಸಾಲೆಯ ತರಕಾರಿ ಸೊಪ್ಪು, ಮಕ್ಕಳ ಕುಂಠಿತ ಬೆಳವಣಿಗೆಯನ್ನು ನಿವಾರಿಸಲು, ವೃದ್ಧಾಪ್ಯವನ್ನು ತಡೆಗಟ್ಟಲು ಅದ್ಭುತ ಔಷಧೀ ಗುಣಗಳನ್ನು ಹೊಂದಿರುತ್ತದೆ. ಹರಿವೆಸೊಪ್ಪು ಮುಳ್ಳು ಹರಿವೆ ಸೊಪ್ಪು, ದಂಟಿನ ಸೊಪ್ಪು. . .

ಅಮೃತಾ ಅನ್ನೋ ಐಟಂ

ಈಗೇನಿದ್ರೂ ಬಾಲಿವುಡ್‌ನಲ್ಲಿ ಐಟಂಗಳದ್ದೇ ಕಾರುಬಾರು. ಐಟಂ ಸಾಂಗು, ಐಟಂ ಡ್ಯಾನ್ಸು, ಐಟಂ ಸೀನು ಹೀಗೆ ಎಲ್ಲವೂ ಐಟಂಮಯ. ಇಲ್ಲಿ ಮೈಮೇಲೆ ಉಡುಗೆ ಕಡಿಮೆಯಾಗುತ್ತಾ ಹೋದರೆ ಮಾತ್ರಾನೇ ಸಂಭಾವನೆಯ ಮೊತ್ತದ ಮುಂದೆ ಸೊನ್ನೆಗಳು ಜಾಸ್ತಿಯಾಗೋದು! . . .

ಕಿಮ್-ಯುವರಾಜ್ ಮದುವೆ!

ನಟಿ ಕಿಮ್ ಶರ್ಮ ಕೊನೆಗೂ ಮದುವೆಯಾಗಲಿದ್ದಾಳೆ. ಹುಡುಗ ಯಾರು ಗೊತ್ತಾ? ನಮ್ಮ ಸ್ಟೈಲಿಶ್ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್! ನಿಜ. ಹೀಗೊಂದು ಸುದ್ದಿ ಹಕ್ಕಿಜ್ವರದ ಹಾಗೆ ಬಾಲಿವುಡ್‌ನಲ್ಲೆಲ್ಲಾ ಹಬ್ಬಿಬಿಟ್ಟಿದೆ. ಆದರೆ ಯುವರಾಜ್‌ನ ತಾಯಿಗೆ ಈ ಸಂಬಂಧ ಸುತರಾಂ ಇಷ್ಟವಿಲ್ವಂತೆ. ಯುವರಾಜ್ ಇನ್ನೂ ಸಣ್ಣ ಹುಡುಗ. ಅವನಿನ್ನೂ . . .

ಹುಷಾರು ಸಮೀರಾ...

ಒಂಚೂರು ಯಾಮಾರಿದರೆ ನಟಿ ಸಮೀರಾ ಇಲ್ಲ! `ನಕ್ಷಾ' ಸಿನಿಮಾ ಶೂಟಿಂಗ್ ವೇಳೆ ನದಿಯಲ್ಲಿ ರ್‍ಯಾಫ್ಟಿಂಗ್ ಮಾಡುವ ದೃಶ್ಯವನ್ನು ನ್ಯೂಜಿಲ್ಯಾಂಡ್‌ನ ಒಂದು ಕಿರಿದಾದ ಹೊಳೆಯಲ್ಲಿ ಚಿತ್ರಿಸಲಾಗುತ್ತಿತ್ತು. ಒಂದು ಪರ್ಫೆಕ್ಟ್ ಶಾಟ್‌ಗಾಗಿ ವಾರಗಟ್ಟಲೆ ಕಾಯಬೇಕಾಯಿತು. . .

ಹಾಟ್ ಬಾಯ್ ಸಲ್ಲು ಜೊತೆ ನಾಲ್ಕು ಮಾತು

ನೀವು ಮುಂಗೋಪಿ ಅಂತಾ ಗುರುತಿಸಲ್ಪಟ್ಟಿದ್ದೀರಿ. ಆದರೆ ನಿಮ್ಮ ಚಿತ್ರದಲ್ಲಿ ಹಾಸ್ಯವೇ ಜಾಸ್ತಿ ಇದೆಯಲ್ಲ. - ಹೌದು ನಾನು ಮುಂಗೋಪಿ. ಆದರೆ ಇದು ಕೇವಲ ಗಾಳಿಸುದ್ದಿ. ವಾಸ್ತವವೇ ಬೇರೆ. . .

ಬದಲಾದ ತವರು

ಕಳೆದ ಸಂಚಿಕೆಯ `ನಾವು ಹುಡುಗಿಯರೇ ಹೀಗೆ' ಎಂಬ ಮುಖಪುಟ ಲೇಖನದ ಅಭಿಪ್ರಾಯಗಳಿಗೆ ಪೂರಕವಾಗಿ ಹಾಗೆಯೇ ಸಂವಾದಿಯಾಗಿ ರೇಣುಕಾ ಮಂಜುನಾಥ್ ಅವರ ಈ ಲೇಖನ. ಇಲ್ಲಿ ಮಹಿಳಾ ಸ್ವಾತಂತ್ರ್ಯದ ಜತೆಗೆ ತನ್ನ ಜವಾಬ್ದಾರಿಯ ಸಣ್ಣ ವಾಹಿನಿಯೂ ಇದೆ. ಆದರೆ ಇಂದಿನ ಆಧುನಿಕ ಮಹಿಳೆಯರು, ತಂತ್ರಜ್ಞಾನದ ಜೊತೆ ಬೆಳೆಯುತ್ತಿರುವ ಈ ಶತಮಾನದ ಹೆಣ್ಣಿನ ಇನ್ನೊಂದು ಮುಖ ಇಲ್ಲಿದೆ. ಅದರೊಂದಿಗೆ ತವರು ಮನೆ ಎಂಬ ಕಲ್ಪನೆಯೇ ಈಗ ಬದಲಾಗಿದೆ ಅಲ್ಲವೇ? . . .

ಮುಕ್ತ ಮುಕ್ತಾಯ ಇನ್ನು ಒಲವೇ ನಮ್ಮ ಬದುಕು

ಇನ್ನು `ಮುಕ್ತ' ಇಲ್ಲ. ಆ ಜಾಗದಲ್ಲಿ `ಒಲವೇ ನಮ್ಮ ಬದುಕು' ಎಂಬ ಹೊಸ ಧಾರಾವಾಹಿ ಇದೇ ೧೮ರಿಂದ ಪ್ರಸಾರವಾಗಲಿದೆ. ಇದು ನಾಗತಿಹಳ್ಳಿ ಚಂದ್ರಶೇಖರ್ ನಿರ್ಮಿಸುತ್ತಿರುವ ಎಂಟನೇ ಧಾರಾವಾಹಿ. . .

ಸರಿಸುಮಾರು ಏಳುನೂರರ ಗಡಿಗೆ ಬಂದು, ಮುಕ್ತ ಧಾರಾವಾಹಿ ಈಗ ಮುಕ್ತಾಯವಾಗುತ್ತಿದೆ. ಟಿ.ಎನ್. ಸೀತಾರಾಂ ಅವರ ಗ್ರಹಿಕೆ, ಸೂಕ್ಷ್ಮತೆ, ಮಾತುಗಾರಿಕೆ, ಸಂಭಾಷಣೆಯ ಕುಸುರಿ ಎಲ್ಲವೂ ಇದ್ದ ಮುಕ್ತ ಹಲವು ಸಂದರ್ಭಗಳಲ್ಲಿ ನೋಡುಗರ ಉಸಿರು . . .

ಗೆಳೆಯ... ಲಕ್ಷ್ಮಣ

ಬಿ.ಆರ್. ಲಕ್ಷ್ಮಣರಾವ್ ನಮ್ಮ ನಾಡಿನ ಪ್ರತಿಭಾವಂತ ಕವಿಗಳಲ್ಲಿ ಒಬ್ಬನಾಗಿದ್ದಾನೆ. ಎಲ್ಲರಂಥವನಲ್ಲ ಇವನು. ಸಾಮಾನ್ಯವಾಗಿ ಎಲ್ಲರಲ್ಲೂ ಸಿಕ್ಕದ ಅಪರೂಪದ ಗುಣಗಳು ಇವನಲ್ಲಿವೆ. ಒಳ್ಳೆಯ ಸ್ನೇಹಿತ, ಒಳ್ಳೆಯ ಗಾಯಕ, ಒಳ್ಳೆಯ ಕವಿ, ರಸಿಕ ಹಾಗೂ ಇನ್ನೂ ಹಲವು ಗುಣಗಳು ಸೇರಿವೆ. ಒಳ್ಳೆಯ ಕವಿಯಾಗಿರಬಹುದು . . .

ಲಕ್ಷ್ಮಣರಾವ್ ಜೊತೆಗೇ ಕಾವ್ಯಕ್ಷೇತ್ರಕ್ಕೆ ಒಡ್ಡಿಕೊಂಡವರು ಅವರ ಗೆಳೆಯ ವ್ಯಾಸರಾವ್. ಮೊದಲ ಕಾವ್ಯ ವಾಚನದ ದಿನವೇ ಇವರಿಬ್ಬರೂ ಏಕ ವಚನದ ಗೆಳೆಯರಾದರು. ಕಾವ್ಯ ಕೃಷಿಯಲ್ಲಿ ತಮ್ಮದೇ ದಾರಿ ಹುಡುಕತೊಡಗಿದರು. ಗೆಳೆಯನ ೬೦ರ ಸಂಭ್ರಮವನ್ನು ಎಂ.ಎನ್.ವ್ಯಾಸರಾವ್ ಇಲ್ಲಿ ಹಂಚಿಕೊಂಡಿದ್ದಾರೆ. . .

ಬೊಂಗಳೂರು ನರಕದಲ್ಲಿ...

ಪ್ಲೇವಿನ್ ಜೊತೆಗೆ ಇತರ ಪ್ಲೇ ಗಳಿಗೂ ಪರವಾನಿಗೆ ದೊರೆಕಿತೆ?

ಇದರ ಜೊತೆಗೆ ಇಲ್ನೋಡಿ ಇನ್ನೊಂದು ಪ್ಲೇ ಶುರುವಾಗಿದೆ. ಹಾದಿ ಬೀದಿಯಲ್ಲಿ ಜೂಜಾಡುವವರ ಸಂಖ್ಯೆ ಹೆಚ್ಚಾಗಿದೆ. ಹಾಡು ಹಗಲಲ್ಲೇ ನಗರದ ಪ್ರಮುಖ ರಸ್ತೆಗಳ ತಿರುವುಗಳಲ್ಲಿ, ಫ್ಲೈ ಓವರ್ ಕೆಳಗೆ, ಸಿಗ್ನಲ್ ಜಂಕ್ಷನ್‌ನಲ್ಲಿ . . .

ಸಾಧಕರು

ಲಿಯಾಂಡರ್ ಪೇಸ್

ಭಾರತದ ಲಿಯಾಂಡರ್ ಪೇಸ್ ಪ್ರಶಸ್ತಿಯ ಬರ ನೀಗಿಸಿಕೊಂಡಿದ್ದಾರೆ; ಐದು ವರ್ಷಗಳ ಬಳಿಕ ಡಬಲ್ಸ್ ಕಿರೀಟ ಗೆಲ್ಲುವ ಮೂಲಕ.ಈ ಬಾರಿಯ ಯುಎಸ್ ಓಪನ್ ಸೆಣಸಾಟ ತೀವ್ರ ಪೈಪೋಟಿಯಿಂದಲೇ ಕೂಡಿತ್ತು. ಜೆಕ್ ಗಣರಾಜ್ಯದ ಮಾರ್ಟಿನ್ ಡ್ಯಾಮ್ ಮತ್ತು ಪೇಸ್ ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿ . . .

ಣ-ಶರ್ಟ್, ಐಶ್ವರ್ಯ ಗ್ಲಾಸ್

ಇಂದ್ರಜಿತ್ ಈಗ ಕ್ರಿಶ್, ಸ್ಪೈಡರ್‌ಮೆನ್ ರೀತಿಯಲ್ಲಿ ಐಶ್ವರ್ಯ ಟಿ-ಶರ್ಟ್, ಐಶ್ವರ್ಯ ಗ್ಲಾಸ್, ಮುಂತಾದ ಮಕ್ಕಳ ಆಕರ್ಷಕ ವಸ್ತುಗಳನ್ನು ಮಾರುವ ವ್ಯವಸ್ಥೆ ಮಾಡಲಿದ್ದಾರೆ. . .

ದಾರಿ ತಪ್ಪಿದ ಮಗ

ಜಗತ್ತಿನ ಬಹುತೇಕ ದೇಶಗಳ ಸುಮಾರು ಎರಡು ಸಾವಿರ ವಿಜ್ಞಾನಿಗಳು ಸೇರಿದ್ದರು. ಅವರೆಲ್ಲಾ ಸೇರಿ ಒಂದು ಚಿಕ್ಕ ನಿರ್ಣಯವನ್ನು ಕೈಗೊಳ್ಳಲಿದ್ದರು. ಆ ನಿರ್ಣಯದಿಂದ ಭೌತಿಕವಾಗಿ ಈ ಚರಾಚರ ಜಗತ್ತಿನಲ್ಲಿ ಯಾವುದೇ ಬದಲಾವಣೆ ಆಗದಿದ್ದರೂ ಲಕ್ಷಾಂತರ ಜನರ ಮನಸ್ಸಿನಲ್ಲಿ ವಿಚಿತ್ರ ಭಾವನೆಯನ್ನು ಉಂಟು ಮಾಡುವಂತಿತ್ತು. . .

ಅಮೇರಿಕಾದಿಂದ ರವಿ : ಭೈರಪ್ಪನವರ ಬೈರಿಗೆ

ಸಮ್ಮೇಳನದಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಇದ್ದಿದ್ದರಲ್ಲಿ ಪರವಾಗಿಲ್ಲ ಎಂಬಷ್ಟು ಜನ ಇದ್ದದ್ದು ಭೈರಪ್ಪನವರೊಂದಿಗೆ ಇದ್ದ ಸಂವಾದದ ಕಾರ್ಯಕ್ರಮದಲ್ಲಿ. ಅಮೇರಿಕಾದಲ್ಲಿನ ಕನ್ನಡ ಓದುಗರಲಿಯೂ ಭೈರಪ್ಪ ಜನಪ್ರಿಯ ಸಾಹಿತಿ. ಇದಕ್ಕೆ ಮುಖ್ಯ ಕಾರಣ, ತಮ್ಮ ೨೦-೩೦ರ ವಯಸ್ಸಿನ ಆಸುಪಾಸಿನಲ್ಲಿ . . .

ಮಾಧ್ಯಮಗಳ ಭೂಗೋಳ ಜ್ಞಾನ!

ಕಾರ್ಯಕ್ರಮ ಮುಗಿಯುವುದಕ್ಕೆ ಇನ್ನೂ ೧೨ ಗಂಟೆಗಳ ಸಮಯ ಇದೆ ಎನ್ನುವಾಗಲೇ ಬೆಂಗಳೂರಿನಲ್ಲಿ ಕನ್ನಡ ದಿನಪತ್ರಿಕೆಗಳು ಅಕ್ಕ ಸಮ್ಮೇಳನಕ್ಕೆ ತೆರೆಎಂದು ಮುದ್ರಣಗೊಳ್ಳುತ್ತಿದ್ದವು. ಗುರುಕಿರಣರ ರಸಮಯ ಸಂಗೀತ ಕಾರ್ಯಕ್ರಮದೊಂದಿಗೆ . . .

ಅಕ್ಕ ಸಮ್ಮೇಳನದ ಬಗ್ಗೆ ಒಂದು ಪತ್ರ

ಮಾನ್ಯ ಸಂಪಾದಕರಿಗೆ,

ಅಮೆರಿಕಾದ ಬಾಲ್ಟಿಮೋರಿನಲ್ಲಿ ನಡೆಯುತ್ತಿರುವ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ನಿಮ್ಮ ಪತ್ರಿಕೆ ಸಂಯಮದಿಂದ ವರ್ತಿಸುತ್ತಿರುವುದು ಮೆಚ್ಚಿಗೆ ತಂದಿತು. ಇಲ್ಲಿ ನಡೆಯುತ್ತಿರುವ ವಿಶ್ವಕನ್ನಡ ಸಮ್ಮೇಳನ ಒಂದು ರೀತಿಯಲ್ಲಿ ಹೊಟ್ಟೆ ತುಂಬಿದವರ ಜಾತ್ರೆ. ಹೆಂಗಸರಿಗೆ ತಮ್ಮ ಅಲಂಕಾರ ಪ್ರದರ್ಶಿಸಲು ಒಂದು ಪಾರ್ಟಿ . . . (ಈ ಪತ್ರದ ಪೂರ್ತಿ ಓದಿಗೆ - ರೊಕ್ಕಸ್ಥರ ಅಕ್ಕ ಸಮ್ಮೇಳನವಿದು)

ಮತ್ತಷ್ಟು ಲೇಖನಗಳು ನಿಮ್ಮನ್ನು ಕಾಯುತ್ತಿವೆ.

 

ಇಂದೇ ಚಂದಾದಾರರಾಗಿ

ವಿಕ್ರಾಂತ ಕರ್ನಾಟಕದ ನಾಲ್ಕನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಮೂರನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ದ್ವಿತೀಯ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಪ್ರಥಮ ಸಂಚಿಕೆಯಲ್ಲಿ . . .

 

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com