Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

 

Monday, 28 July 2008 10:36 PM

 ವಿಕ್ರಾಂತ ಕರ್ನಾಟಕದ ಹದಿನೆಂಟನೇ ಸಂಚಿಕೆಯಲ್ಲಿ:

 

ಸಂಪಾದಕೀಯ ಡೆಮಾಕ್ರಸಿಯ ದಿಗ್ವಿಜಯ...

ಪ್ರಜಾತಂತ್ರದ ಅಮೃತಗಳಿಗೆ ಅದಾಗಿತ್ತು... ಕಳೆದ ಗುರುವಾರ ಡಿ. ೭ರ ಮಧ್ಯಾಹ್ನ ಹನ್ನೆರಡೂ ಮುಕ್ಕಾಲು ಗಂಟೆಯಷ್ಟೊತ್ತಿಗೆ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ನಿಚ್ಚಳಗೊಳ್ಳುತ್ತಿದ್ದಂತೆಯೇ ರಾಜ್ಯದ ಜನತೆ ಸಮಾಧಾನದ ನಿಟ್ಟುಸಿರು ಬಿಡುವಂತಾಯ್ತು. . .


ಪೇಜಾವರ ಪಾತಕಲೋಕ

ನವೆಂಬರ್ ೨೪, ೨೦೦೬ರಂದು ಬೆಂಗಳೂರಿನ ಕತ್ರಿಗುಪ್ಪೆಯಲ್ಲಿರುವ ಶ್ರೀಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನಡೆದ ಸತ್ಯ ಘಟನೆಯ ತನಿಖಾ ವರದಿ ಇದು. ಆರ್ಥಿಕ ತೊಂದರೆಗೆ ಸಿಲುಕಿದ್ದ ಶ್ರೀನಿಧಿ ಹಾಗೂ ಅವನ ಸೋದರ ಮಾವ ಕೆ.ಎಸ್. ವೆಂಕಟೇಶ್ ಇಲ್ಲಿನ ಬಲಿಪಶುಗಳು. ಶ್ರೀನಿಧಿಗೆ `ಕೆಲವು ಗಂಟೆಗಳ ಮಟ್ಟಿಗೆ ದೊಡ್ಡ ಮೊತ್ತದ ಹಣದ ನೆರವು ನೀಡಿದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳು ಆ ಹಣವನ್ನು ಕಳೆದುಕೊಂಡಿದ್ದಾರೆ. ಸಿನಿಮೀಯ ರೀತಿಯಲ್ಲಿ ಶ್ರೀನಿಧಿಯ ಗೆಳೆಯ ಗಿರೀಶ್ ಹಣ ಲಪಟಾಯಿಸಿದ್ದಾನೆ. ಗೆಳೆಯನನ್ನು ನಂಬಿದ ಶ್ರೀನಿಧಿ ವಂಚನೆಗೊಳಗಾಗಿದ್ದಾನೆ. ಇವಿಷ್ಟು ಈ ಪ್ರಸಂಗದ ಪೂರ್ವಾರ್ಧ. ಹಣದ ನೆರವು ನೀಡಿ . . . .

 


ಪಟ್ಟಭದ್ರರ ಪರಾಭವ

ಮೇಲ್ನೋಟಕ್ಕೆ ಇದು ಪ್ರಮುಖ ಪ್ರತಿಸ್ಪರ್ಧಿ ಬಣಗಳ ನಡುವಿನ ಸೆಣಸಾಟಕ್ಕೆ ದೊರೆತ ಕೂದಲೆಳೆ ಅಂತರದ ಗೆಲುವು ಎಂದು ತೋರಿದರೂ, ಈ ಫಲಿತಾಂಶ ಕರ್ನಾಟಕದ ವರ್ತಮಾನದ ರಾಜಕೀಯ ಅತಿರೇಕಗಳ ವಿರುದ್ಧ ಜನಸಾಮಾನ್ಯರ ನ್ಯಾಯ ಪ್ರಜ್ಞೆಗೆ ದೊರೆತ ದಿಗ್ವಿಜಯ ಎಂಬುದೇ ಆಳದಲ್ಲಿ ಗೋಚರಿಸುವ ವಾಸ್ತವ...


ಒಂಟಿ ದನಿಯ ದೈತ್ಯಶಕ್ತಿ!!

ಏಕಾಂಗಿನತದ ಬಲಾಢ್ಯಶಕ್ತಿ (Power of loneliness) ಎಂಬ ಅಪೂರ್ವ ಪರಿಕಲ್ಪನೆಯನ್ನು ಸಾಕಾರಗೊಳಿಸಿದ್ದಾರೆ ಜೆಡಿಎಸ್ ವರ್ಚಸ್ವೀ ನಾಯಕ ಹಾಗೂ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ...


ತಲೆಕೆಳಗಾದ ಲೆಕ್ಕಾಚಾರ

ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಎಲ್ಲ ಪಕ್ಷಗಳ ಅತಿರಥ-ಮಹಾರಥಿಗಳೆನಿಸಿಕೊಂಡಿದ್ದವರೆಲ್ಲ ತಮ್ಮ-ತಮ್ಮ ಲೆಕ್ಕಾಚಾರದಲ್ಲೇ ಮುಳುಗಿದ್ದರು. ಆದರೆ ಗೆದ್ದಿದ್ದು ಮಾತ್ರ ಚಾಣಾಕ್ಷ ಮತದಾರ. ಯಾಕೆಂದರೆ, ಅತಿರಥಿ-ಮಹಾರಥಿಗಳೆನಿಸಿಕೊಂಡವರೆಲ್ಲರೂ ಮಾಡಿದ್ದು ಒಂದು ದೊಡ್ಡ ತಪ್ಪೆಂದರೆ . . . .


ಭಾಜಪ ಬೀದಿರಂಪ!

ಇದಾಗದಂತೆ ತಡೆಯಲು ಯಡಿಯೂರಪ್ಪ ಅವರು ಶತಾಯಗತಾಯ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆದರೆ ಈ ಬಾರಿ ಸಂಘ ಪರಿವಾರದ ಕೋಪಕ್ಕೆ ತುತ್ತಾಗಿರುವುದರಿಂದ ಅವರ ತಂತ್ರ ಅಷ್ಟಾಗಿ ಫಲಕಾರಿಯಾಗಲಿಕ್ಕಿಲ್ಲ ಎನ್ನುವುದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ. . . .


ಎದೆಯ ಕೂಗನು ಮೀರಿ... - ಧಾರವಾಹಿ - ಅಧ್ಯಾಯ -೬
ಓಕೆ ಅನು, ಮೂವಿಗೆ ಸಿದ್ಧವೇ?

ತನ್ನ ಸ್ನೇಹಿತೆಯರು ಅಮೇರಿಕನ್ನರಾದರೂ ಆಗಿದ್ದರೆ ಚೆನ್ನಾಗಿತ್ತು. ಡೇಟ್ ಮಾಡುವಾಗ ಏನೇನು ಆಗಬಹುದು, ಏನನ್ನು ಬಯಸಬಹುದು ಎಂದು ಅವರಿಂದ ತಿಳಿದುಕೊಳ್ಳಬಹುದಿತ್ತು ಎಂದುಕೊಂಡಳು ಅನು. ಅವಳು ಡ್ಯಾನ್ ಜೊತೆ ಹೊರ . . .


ದೇಶಾವರಿ
ಹೆಣ್ಣು ಮಕ್ಕಳ ದಿನಾಚರಣೆ

ಮಾಜಿ ಪ್ರಧಾನಿ ಜವಾಹರ್‌ಲಾಲ್ ನೆಹರೂ ಜನ್ಮದಿನನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆಯಷ್ಟೆ. ಈಗ ನೆಹರೂ ಸೊಸೆ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರ ಜನ್ಮ ದಿನವನ್ನು `ರಾಷ್ಟ್ರೀಯ ಹೆಣ್ಣು ಮಕ್ಕಳ'ದಿನವನ್ನಾಗಿ ಆಚರಿಸಲು ಕೇಂದ್ರದ ಯುಪಿಎ ಸರ್ಕಾರ ನಿರ್ಧರಿಸಿದೆ. ಮಕ್ಕಳ ಬಾಯಲ್ಲಿ ನೆಹರೂ `ಚಾಚಾ' ಆದಂತೆ, ಹೆಣ್ಣು ಮಕ್ಕಳ ಬಾಯಲ್ಲಿ ಸೋನಿಯಾ ಇನ್ನು ಮುಂದೆ `ದೀದಿ ಸೋನಿಯಾ' ಆಗಲಿದ್ದಾರೆ. . . .


ಲಕ್ಷದ ಕಾರು ತಕರಾರು

ಒಂದೆರಡು ವರ್ಷದ ನಂತರ ಬರಲಿರುವ `ಟಾಟಾ' ಕಂಪೆನಿಯ ಲಕ್ಷದ ಕಾರು ಕೊಳ್ಳುವ ಕನಸನ್ನು ಜನಸಾಮಾನ್ಯರು ಕಾಣುತ್ತಿರಬಹುದು; ಆದರೆ ಲಕ್ಷ ರು ಕಾರು ಘಟಕ ಸ್ಥಾಪನೆಯಾಗಬೇಕಾದರೆ ಲಕ್ಷ ರೈತರು ಜಮೀನು ಕಳೆದುಕೊಳ್ಳಬೇಕಾಗುತ್ತದೆ. . . .


ಮಕ್ಕಳಿಗಾಗಿ - ಪಾಪು ಗಾಂಧಿ
ಕೆಲಸ ಖಾಲಿ ಇದೆ

ಮೋಹನದಾಸ ಕಮರಚಂದ್ ಗಾಂಧಿಯ ಬಗಲ ಚೀಲದಲ್ಲಿ ಬ್ಯಾರಿಸ್ಟರ್ ಪದವಿಯ ದಾಖಲೆಗಳು ತುಂಬಿದ್ದವು. ಆದರೆ, ಅವರ ಮೆದುಳಿನ ಚೀಲದಲ್ಲಿ ಭಾರತದ ಕಾನೂನಿನ ಜ್ಞಾನವಿರಬೇಕಾಗಿದ್ದ ಭಾಗ ಖಾಲಿಯಿತ್ತು. . . .


ಕ್ರೀಡೆ
ಬಡತನದ ಬೆಂಕಿಯಲ್ಲಿ ಅರಳುತ್ತಿರುವ ಅಕ್ಕ ತಂಗಿಯರು

ನನ್ನ ಮಕ್ಕಳು ರಾಷ್ಟ್ರೀಯ ಸೈಕಲ್ ಚಾಂಪಿಯನ್ಸ್ ಆಗಬೇಕು ಎಂಬ ಆಸೆ ನನ್ನದು. ನನ್ನ ಆಸೆಯನ್ನು ಮಕ್ಕಳು ಈಗಾಗಲೇ ಈಡೇರಿಸುವ ಹಂತದಲ್ಲಿದ್ದಾರೆ. ಹಾಗಂತ ಅವರ ಸಾಧನೆ ಇಷ್ಟೇ ಅಲ್ಲ, ಇನ್ನಷ್ಟು ಅವರು ಬೆಳೆಯಬೇಕು. ಅದಕ್ಕೆ ಅವರಿಗೆ ಆರ್ಥಿಕ ನೆರವು ಬೇಕು. ಅದನ್ನೆಲ್ಲಾ ಹೊಂದಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಈ ಮಕ್ಕಳ ಪ್ರತಿಭೆ ಅರ್ಧದಲ್ಲಿಯೇ ಮೊಟಕುಗೊಳ್ಳುತ್ತದೆ ಎಂಬ ನೋವು ನಮ್ಮನ್ನು ಸದಾ ಕಾಡುತ್ತಿದೆ . . . .


ಇಂದಿನ ಐಷಾರಾಮ ನಾಳೆಗೆ ಅನಿವಾರ್ಯ

ಇದು ತುಂಬ ವಿಚಿತ್ರವೆನ್ನಿಸಿದರೂ ಆಧುನಿಕ ಯುಗದ ವಾಸ್ತವ; ಅದೇನೆಂದರೆ ನಿನ್ನೆಯ ದಿನ ನಮಗೆ ಐಷಾರಾಮಿ ಅಂತ ಅನ್ನಿಸುತ್ತಿದ್ದ ವಸ್ತು ಇಂದು ಅದಿಲ್ಲದೆ ಬದುಕೇ ಸ್ತಬ್ಧವಾಗಿ ಬಿಡುತ್ತದೇನೋ ಅನ್ನುವಷ್ಟು ಅನಿವಾರ್ಯ ವಸ್ತುವಾಗಿ ಮಾರ್ಪಾಡಾಗುವುದು! . . .

 

ಮಿನಿ ಕಥೆ - ಈ ಬಾಳ ಪುಟದಲಿ ನೀ...

ಅವಳು, ನಾನು ನೂರಾರು ಕಿಲೋ ಮೀಟರ್ ದೂರದಲ್ಲಿ ಇದ್ದೇವೆ. ನನಗೆ ಅವಳ ಪರಿಚಯವೇ ಒಂದು ಆಕಸ್ಮಿಕ. ಅವಳ್ಯಾರೋ, ನಾನ್ಯಾರೋ ತಿಳಿಯುವ ಮೊದಲು ನಮ್ಮನ್ನು ಹತ್ತಿರ ತಂದದ್ದು ಒಂದು ಪತ್ರ. . . .


ಪಕ್ಕದ ಮನೆ
ಅಂಧ ವೃದ್ಧನ ಮಸಾಜ್ ಬದುಕು

`ಮನಸಿದ್ದಲ್ಲಿ ಮಾರ್ಗ' ಎನ್ನುವುದು ನೋಡಲು ಹಾಗೂ ಕೇಳಲು ಬಹಳ ಚಿಕ್ಕಗಾದೆ ಮಾತಾದರೂ ಇದಕ್ಕಿರುವ ಅರ್ಥ ಮಾತ್ರ ಬಹಳ ಆಳವಾದುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಮಾತಿಗೆ ಅನ್ವರ್ಥವಾಗಿರುವ ೬೦ ವರ್ಷದ ಅಂಧ ವೃದ್ಧರಾದ ಜೈನುಲ್ ಅಬೈದಿನ್‌ರಿಂದಲೂ ನಾವೆಲ್ಲ ಕಲಿಯುವುದು ಬಹಳಷ್ಟಿದೆ.


ಸಂಚಾರಿ ಪೊಲೀಸರ ತಲೆನೋವು

ನಗರದ ಕೆಲವು ಪ್ರಮುಖ ರಸ್ತೆಗಳ ಅಗಲೀಕರಣ ಕಾರ್ಯ ಪೂರ್ಣಗೊಂಡಿದ್ದರೂ ಕೂಡ, ವಾಹನ ಸಂಚಾರ ಇನ್ನಷ್ಟು ಗೊಂದಲಮಯ ಹಾಗೂ ಅಸ್ತವ್ಯಸ್ತಗೊಂಡಿರುವುದು ತಿರುವನಂತಪುರಂ ಸಂಚಾರಿ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.


ಸದನದಲ್ಲಿ ಶವಯಾತ್ರೆ...

ರಾಜ್ಯದಲ್ಲಾಗುತ್ತಿರುವ ರೈತರ ಆತ್ಮಹತ್ಯೆಗಳ ಬಗ್ಗೆ ರಾಜ್ಯಸರ್ಕಾರ ತಾತ್ಸಾರ ಭಾವನೆ ತಾಳಿದೆ ಎಂದು ಬಿಂಬಿಸಲು ರಾಜ್ಯದ ವಿರೋಧ ಪಕ್ಷ ಭಾರತೀಯ ಜನತಾ ಪಕ್ಷ ಹಾಗೂ ಶಿವಸೇನೆಯ ಸದಸ್ಯರೆಲ್ಲರೂ ಸದನದಲ್ಲೇ ಅಣಕು ಶವಯಾತ್ರೆಯನ್ನು ನಡೆಸಿದ್ದಾರೆ.


ಕಸದ ರಾಶಿಯ ಸಮಸ್ಯೆ

ಪ್ರವಾಸೋದ್ಯಮದ ಕೇಂದ್ರಬಿಂದುವಾಗಿರುವ ಪುದುಚೇರಿ ಸರ್ಕಾರಕ್ಕೆ ಕಸ ಸಂಗ್ರಹಣೆಯೇ ಭಾರೀ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ರಸ್ತೆಬದಿಯಲ್ಲಿ ಕಸ ಹಾಕುವವರ ಮೇಲೆ ಸರ್ಕಾರ ದಂಡ ವಿಧಿಸಲು ತೀರ್ಮಾನಿಸಿದೆ.


ಕಾಂಡಕೋಶ ಕೇಂದ್ರ

ಸುಮಾರು ೧೦ ಕೋಟಿ ರೂ.ಗಳ ವೆಚ್ಚದಲ್ಲಿ ಕಾಂಡಕೋಶ (ಸ್ಟೆಮ್ ಸೆಲ್) ಸಂಶೋಧನಾ ಕೇಂದ್ರವೊಂದನ್ನು ಪ್ರಾರಂಭಿಸಲು ನಗರದ ಪ್ರತಿಷ್ಠಿತ ಶ್ರೀರಾಮಚಂದ್ರ ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ ನಿರ್ಧರಿಸಿದೆ. . . .


ಬೆಂಗಳೂರಲ್ಲೊಂದು ಮನೆ; ಇನ್ನು ಬರೀ ಕನಸು!

೧೯೯೧ರ GATT ಒಪ್ಪಂದದಿಂದಾದ ಜಾಗತೀಕರಣ ಪ್ರತಿ ಚದರ ಅಡಿಗೆ ೫ ರೂ. ಬೆಲೆಯಿಂದ ಒಮ್ಮೆಲೇ ೯೦ ರೂ, ನಂತರ ೫೦೦ ರೂ.ನಿಂದ ೧,೦೦೦ ರೂಪಾಯಿಗಳಿಗೆ ಏರುವಲ್ಲಿ ಮಹತ್ತರ ಪಾತ್ರ ವಹಿಸಿದೆ. . . .


ಸಂಸ್ಕೃತಿ ಗೋರಿಯ ಮೇಲೆ - ಡಾ. ದೊಡ್ಡರಂಗೇಗೌಡರವರ - ಕವಿತೆ


ಕಲಾಸಿಪಾಳ್ಯದಲ್ಲಿ ಕೊಳಚೆ ಸಾಗರ
ಅಂಟು ಜಾಡ್ಯದೋಗರ,
ಎತ್ತ ತಿರುಗಲಿ ಎಲ್ಲೇ ಹೋಗಲಿ
ಮೆರೆದಿದ್ದಾನೆ ಮಾಲಿನ್ಯಾಸುರ!

ಗಡದ್ದು ನಿದ್ದೆ ಹೊಡೆದಿದ್ದಾನೆ
ಮಹಾನಗರ ಸಭೆಯ ನೈರ್ಮಲ್ಯದ
ನೇತಾರ ಗುಮಡೋದರ! . . .


ಧಾರಾವಾಹಿ - ಜಾಣಿಯಾಗಿರು ನನ್ನ ಮಲ್ಲಿಗೆ - ಅಧ್ಯಾಯ ೧೦

ಬೋಪಣ್ಣ ಈಸ್ ನೋ ಮೋರ್...

`ಯುಕ್ತಾ' ತೇಜನ್ ಕರೆದ. ಯುಕ್ತಾ ಬೆಚ್ಚಿ ಗಲಿಬಿಲಿಯಿಂದ ಅವನತ್ತ ನೋಡಿದಳು. ತೇಜನ್ ಯೋಚಿಸುತ್ತಾ, `ನನಗನಿಸುತ್ತೆ, ಆದಿತ್ಯ ನಮ್ಮ ಸುತ್ತ ಆದೃಶ್ಯ ಬಲೆ ಹೆಣೆದಿದ್ದಾನೇಂತ. ನಮಗೆ ಗೊತ್ತಿಲ್ಲದೆಯೇ ನಾವು ಅದರಲ್ಲಿ ಸಿಕ್ಕಿಬಿದ್ದಿದ್ದೀವೀಂತ' ಎಂದು ಹೇಳಿದ. . . .

 

ಶೃಂಗಾರ
ಬೇಡವಾದ ಕೇಶ ನಿವಾರಣೆಗೆ

ವಿಶ್ವದ ಅಗ್ರಮಾನ್ಯ ಸೌಂದರ್ಯರಾಶಿಯೆಂಬ ಹೆಗ್ಗಳಿಕಯನ್ನು ಪಡೆದಿದ್ದ ಕ್ಲಿಯೋಪಾತ್ರ ತನಗಿದ್ದ ಅನವಶ್ಯಕ ಕೂದಲನ್ನು ಹೋಗಲಾಡಿಸಲು ಸಾಕಷ್ಟು ವಿಧಾನಗಳನ್ನು ಬಳಸುತ್ತಿದ್ದಳಂತೆ. ಅವೆಲ್ಲವೂ ಒತ್ತೊಟ್ಟಿಗಿರಲಿ; ಈಗಂತೂ ಈ ಸಮಸ್ಯೆಯ ನಿವಾರಣೆಗೆಂದು ಬಹಳಷ್ಟು . . . .

 

ಭಾರತದಲ್ಲಿರುವವರೆಲ್ಲ ಬ್ರಾಹ್ಮಣರು! - ಅರವಿಂದ ಚೊಕ್ಕಾಡಿರವರ ಲೇಖನ

ನಮ್ಮ ವಿಚಾರವಾದಿಗಳೆಲ್ಲ, ಬ್ರಾಹ್ಮಣರು ಯಾವಾಗಲೂ ಬೇರೆಯವರ ಬಳಿ ಕೆಲಸ ಮಾಡಿಸುತ್ತಾರೆ ಹೊರತು ಅವರು ಕೆಲಸ ಮಾಡುವುದಿಲ್ಲ ಎಂದು ವಾದಿಸುತ್ತಾರೆ. (ಜನತಾ ನ್ಯಾಯಾಲಯದಲ್ಲಿ!) ಈ ದೃಷ್ಟಿಯಿಂದ ಕೂಡ ಭಾರತದಲ್ಲಿವುವವರೆಲ್ಲ ಬ್ರಾಹ್ಮಣರು. . . .


ಬಾಂಬೆ ಮಸಾಲಾ
ಮಹಾರಾಣಿ ಮನೀಷಾ

ಬಾಲಿವುಡ್ ಬದುಕಿನಿಂದ ದೂರ ಉಳಿದರೂ ಮೋಹಕ ತಾರೆ ಮನೀಷಾ ಕೊಯಿರಾಲಾ ಅಲ್ಲಲ್ಲಿ ಸುದ್ದಿಯಲ್ಲಿರುತ್ತಾಳೆ. ತನ್ನ ತಮ್ಮ ಬಾಲಿವುಡ್‌ನ `ಅನ್ವರ್' ರೂಪದಲ್ಲಿ ಪಾದಾರ್ಪಣೆ ಮಾಡುತ್ತಿರುವ ಬೆನ್ನಲ್ಲೇ ಮನೀಷಾ ಮಹಾರಾಣಿಯಾಗುವ ಯೋಗ ಕೂಡಿ ಬಂದಿದೆ. ಅನ್ನೋ ಸುದ್ದಿಯ ಹಕ್ಕಿಗೆ ರೆಕ್ಕೆಪುಕ್ಕ ಬೆಳೆಯತೊಡಗಿದೆ.


ಸಂಜೂ ಸಂಗೀತ

ವಿವಾದದ ಸುಳಿಯಲ್ಲಿ ಸಿಲುಕಿ ಬೇಸತ್ತು ಹೋಗಿರುವ `ಸಂಜುದಾದಾ' ನೋವು ಮರೆಯಲು ಹಾಡಿನ ಮೊರೆಹೋಗಿದ್ದಾನೆ. ಆಶಾ ಭೋಂಸ್ಲೆ ಜೊತೆ `ಆಶಾ ಭೋಂಸ್ಲೇ ಅಂಡ್ ಫ್ರೆಂಡ್ಸ್' ಎಂಬ ಆಲ್ಬಮ್‌ಗೆ ಸಂಜು ಹಾಡಿದ್ದಾನೆ.


ಪ್ರಯೋಗಶೀಲತೆಯ ಅಪರೂಪದ ಕಲಾವಿದ

ಶ್ರೇಷ್ಠ ಕಲಾವಿದ ಆರ್.ಎಂ. ಹಡಪದ ಅವರ ಕಲೆಯ ಗರಡಿಮನೆ ಕೆನ್ ಕಲಾಶಾಲೆಯಲ್ಲಿ ಸೋಮವರದ ಪಳಗಿದವರು. ಕಲಾಮೇಳ, ಕಲಾ ಜಾತ್ರೆ, ದಸರಾ ಮೈಸೂರು, ಪಂಚರಂಗು, ಒಡನಾಡಿ, ಕಲಾವಿದರ ಹಾಗೂ ಕಲಾಬೋಧಕರ ಚಿತ್ರವಾಹಿನಿಯಲ್ಲೂ ಇವರ ಕಲಾಕೃತಿಗಳು ಪ್ರದರ್ಶನಗೊಂಡು ಪ್ರಶಂಸೆಗೆ ಪಾತ್ರವಾಗಿವೆ. `ಚಂದ್ರಿಕೆ' ಎಂಬ ಪತ್ರಿಕೆಯ ಸಹ ಸಂಪಾದಕರಾಗಿಯೂ ಅನುಭವ ಪಡೆದಿರುವ ಇವರು `ಸೊಬಗು ಸೃಜನಶೀಲ' ಬಳಗದ ಸಂಸ್ಥಾಪಕ ಕೂಡ. ಮಂಡ್ಯದಲ್ಲಿರುವ ಇವರ `ಅಮೂರ್ತ ಆರ್ಟ್ ಸೆಂಟರ್' ಈಗ ಸಾಂಸ್ಕೃತಿಕ ಚಟುವಟಿಕೆಗಳ ಕ್ಷೇತ್ರವಾಗಿದೆ.
 

ವಾರದ ಸಿನಿಮಾ
`ತೆನಾಲಿ ರಾಮನ' ಕಾಮಿಡಿ ಎಕ್ಸ್‌ಪ್ರೆಸ್

ಒಬ್ಬ ಬಿ.ಕಾಂ. ಫಸ್ಟ್‌ಕ್ಲಾಸ್. ಇನ್ನೊಬ್ಬ ಎಸ್.ಎಸ್.ಎಲ್.ಸಿ... ಚಿಟಕಿ ಹೊಡೆಯುತ್ತ ಅರಳು ಹುರಿದಂತೆ ಮಾತಾಡುವವನು . . .


ಸಾಹಿತ್ಯ ಸಮ್ಮೇಳನದ ಅಸಾಹಿತ್ಯ ಗ್ರಹಿಕೆಗಳು...

ದಶಕದ ಹಿಂದೆ ಶೂದ್ರ-ವೈದಿಕ, ಎಡಪಂಥೀಯ-ಬಲಪಂಥೀಯ, ದೇಶ-ಪರದೇಶ, ಪ್ರಾದೇಶಿಕ-ರಾಷ್ಟ್ರೀಯತೆಯೆಂಬ ವ್ಯಾಪಕ ನೆಲೆಗಟ್ಟಿನ ಮೇಲೆ ಸಮ್ಮೇಳನಗಳಲ್ಲಿ ಚರ್ಚೆ ನಡೆದು ಜನರ ವಿವೇಚನೆಯ ದಿಕ್ಕು ದೆಸೆಗೆ ದಾರಿ ಸಿಗುತ್ತಿತ್ತು. ಸಾಹಿತ್ಯ ಪರಿಷತ್ತಿಗೆ ಶತಮಾನದ ಸಾಂಸ್ಕೃತಿಕ-ಸಾಹಿತ್ಯಿಕ ಚರಿತ್ರೆಯಿದೆ. ಶುದ್ಧ ಮನಸ್ಸಿನ ಸಾಹಿತ್ಯ ಸೃಷ್ಟಿ ಕ್ರಿಯೆಯೊಂದನ್ನು ಕಾಯಕವೆಂದು ಭಾವಿಸಿದ್ದ ಪ್ರಬುದ್ಧ ತಿಳುವಳಿಕೆ, ಗಂಭೀರ ಸಾಂಸ್ಕೃತಿಕ ಕಾಳಜಿಯ ಹಿರಿಕಿರಿಯ ಸಾಹಿತಿ ಕಲಾವಿದರನ್ನೊಳಗೊಂಡ ಅಖಿಲ ಭಾರತ ಕನ್ನಡ ಸಮ್ಮೇಳನದ ಚಿತ್ರಣಗಳು ಇತ್ತೀಚಿನ ದಿನಗಳಲ್ಲಿ ಮಸುಕಾಗುತ್ತಿವೆ. . . .


ರಂಗೀಲಾ
ಮಾಂಡ್ರೆ ಮನೆಯ ಶರ್ಮಿಳಾ

ಭಾರತೀಯ ಚಿತ್ರರಂಗದಲ್ಲಿ ಬೆಂಗಳೂರಿನ ಚಿತ್ರವಿತರಕ ಆರ್.ಎನ್. ಮಾಂಡ್ರೆ ಅವರದ್ದು ದೊಡ್ಡ ಹೆಸರು. ಈಗ ಅವರ ಹೆಸರನ್ನು ಉಳಿಸಿಕೊಂಡು ಹೋಗುತ್ತಿರುವವರು ಪುತ್ರ ದಯಾನಂದ ಮಾಂಡ್ರೆ . .


ತನನಂ... ತನನಂ... ಸಂತೋಷ

ಎನ್.ಎಂ. ಸುರೇಶ್‌ಗಾಗಿ ಕವಿತಾ ಲಂಕೇಶ್ ನಿರ್ದೇಶಿಸಿದ `ತನನಂ... ತನನಂ...' ಚಿತ್ರ ಒಂದೇ ವಾರದಲ್ಲಿ ಗಾಂಧಿನಗರದ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದೆ. . . .


ಮಠಗಳೆಂಬ ನವಶ್ರೀಮಂತ ಕಂಪನಿಗಳು

ಬೆಂಗಳೂರಿನ ಹೊರ ವಲಯದ ಕೆಂಗೇರಿಯ ಗುರು eನಾಶ್ರಮದ ಸ್ಥಾಪಕರಾದ ಚಂದ್ರಶೇಖರನಾಥ ಸ್ವಾಮೀಜಿಗಳಿಗೆ `ಗುರುವಂದನೆ' ಕಾರ್ಯಕ್ರಮ ನಡೆಯುತ್ತದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕುಟುಂಬ ಈ ಕಾರ್ಯಕ್ರಮದ ಹಿಂದಿನ ಪ್ರೇರಕ ಶಕ್ತಿ . ರಾಜ್ಯದ ಪ್ರಭಾವಿ ಮಠಗಳಲ್ಲೊಂದಾದ ಆದಿಚುಂಚನಗಿರಿ ಮಠಕ್ಕೆ ಪರ್ಯಾಯ ಮಠವನ್ನಾಗಿ ಗುರುeನಾಶ್ರಮವನ್ನು ರೂಪಿಸುವುದು ದೇವೇಗೌಡರ ಉದ್ದೇಶ ಎಂದು ಬಾಲಗಂಗಾಧರನಾಥ ಸ್ವಾಮಿ ಬಹಿರಂಗವಾಗಿಯೇ ಟೀಕಿಸಿದ್ದಾರೆ. ಚುಂಚನಗಿರಿ ಮಠ ಒಂದು ಬೃಹತ್ ಬಂಡೆ ; ಅದಕ್ಕೆ ಯಾರು ಬೇಕಾದರೂ ತಲೆ ಚಚ್ಚಿಕೊಳ್ಳಬಹು ದೆನ್ನುವುದು ಸ್ವಾಮೀಜಿ ಟೀಕಾಸ್ತ್ರ. ಸರಿತಪ್ಪುಗಳನ್ನು ಜನತೆಯೇ ತೀರ್ಮಾನಿಸಲಿ ಎನ್ನುವುದು ದೇವೇಗೌಡರ ಪ್ರತಿಕ್ರಿಯೆ. ಇಂಥದೊಂದು ಸಂಘರ್ಷಮಯ ಸಂದರ್ಭದಲ್ಲಿ ನವ ವಸಾಹತುಶಾಹಿಗಳಾಗಿ ಮಠಗಳು ಬೆಳೆಯುತ್ತಿರುವ ಕುರಿತೊಂದು ವಿಶ್ಲೇಷಣೆ. . .


ಹೊಸವರ್ಷದ ಆಶಯ

ನಿನ್ನೆ ರಾತ್ರಿಯ ಕನಸಿನಲ್ಲಿ ಹೊಸವರ್ಷ ಬಂದಿತ್ತು. ನಾನು ಸುಳ್ಳು ಹೇಳ್ತಿದೀನಿ, ನಾಟಕ ಮಾಡ್ತಿದೀನಿ ಅಂದ್ಕೊಂಡ್ರೇನು? ಇಲ್ರೀ, ನಿಜವಾಗಿಯೂ ಬಂದಿತ್ತು. ನನಗೆ ಆನಂದಾಶ್ಚರ್ಯಗಳು ಒಟ್ಟಿಗೇ ಆದ್ವು. ಒಂಥರಾ ದಿಗ್ಭ್ರಮೆ. ಇದೇನು ನನಸೋ ಕನಸೋ ಅಂತ ಗೊಂದಲ.


ಅಮೆರಿಕದಿಂದ ರವಿ
ಅಮೆರಿಕ ಎಂದರೆ ಭೂಲೋಕದ ಸ್ವರ್ಗವಲ್ಲ

ಐಪಾಡ್ ಎಂಬ ಸಂಗೀತ ಕೇಳಿಸುವ ಪುಟ್ಟ ಡಿಜಿಟಲ್ ಪ್ಲೇಯರ್, ಆಪಲ್ ಕಂಪನಿಯನ್ನು ಮತ್ತೆ ಲಾಭಕ್ಕೆ ತಂದಿದ್ದೆ ಅಲ್ಲದೆ ಪರೋಕ್ಷವಾಗಿ ಆಪಲ್ ಕಂಪ್ಯೂಟರ್‌ನ ಮಾರಾಟ ಹೆಚ್ಚಾಗುವುದಕ್ಕೂ ಕಾರಣವಾಯಿತು. ಇಂದು ಐಪಾಡ್‌ನಷ್ಟು ಪ್ರಸಿದ್ಧವಾದ, ಲಾಭದಾಯಕವಾದ ಇನ್ನೊಂದು ಉತ್ಪನ್ನವಿಲ್ಲವೇನೊ! ಇಂತಹ ಉತ್ಪನ್ನಗಳನ್ನು ಬ್ಯುಸಿನೆಸ್ ಪರಿಭಾಷೆಯಲ್ಲಿ Killer Product ಎನ್ನುತ್ತಾರೆ. . . .

ಇಂದೇ ಚಂದಾದಾರರಾಗಿ

ವಿಕ್ರಾಂತ ಕರ್ನಾಟಕದ ಹದಿನೇಳನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಹದಿನಾರನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಹದಿನೈದನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಹದಿನಾಲ್ಕನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಹದಿಮೂರನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಹನ್ನೆರಡನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಹನ್ನೊಂದನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ದೀಪಾವಳಿ ವಿಶೇಷ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಒಂಬತ್ತನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಎಂಟನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಏಳನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಆರನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಐದನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ನಾಲ್ಕನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಮೂರನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ದ್ವಿತೀಯ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಪ್ರಥಮ ಸಂಚಿಕೆಯಲ್ಲಿ . . .

 

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com