ವಿಕ್ರಾಂತ ಕರ್ನಾಟಕದ
ಹದಿನೇಳನೇ ಸಂಚಿಕೆಯಲ್ಲಿ:
ಹರೆಯದ ಹೆಜ್ಜೆಗೆ ನೂರೆಂಟು ತಪ್ಪುದಾರಿಗಳು...
Ignorance is
not excusable.
ಎಂಬುದು ಕಾನೂನಿನ ಲೋಕದ ಚಿರಪರಿಚಿತ ವಾಕ್ಯ. ಈ ದೇಶದ
ಸಂವಿಧಾನ, ಕಾನೂನಿನ ಬಗ್ಗೆ ಅರಿವಿಲ್ಲದೆ, ಅಜ್ಞಾನದಿಂದ ವರ್ತಿಸುವುದು
ಕ್ಷಮಾರ್ಹವಲ್ಲ ಎಂದು ಕಾನೂನು ತಜ್ಞರು ಹೇಳುತ್ತಲೇ ಬಂದಿದ್ದಾರೆ.
ಮುಗ್ಧತೆಯನ್ನಾದರೂ ಒಂದು ಮಟ್ಟದವರೆಗೆ ಕ್ಷಮಿಸಬಹುದು,
ಅಜ್ಞಾನವನ್ನು ಕ್ಷಮಿಸುವುದು ಸಾಧ್ಯವೇ ಇಲ್ಲ; ಈ ದೇಶದ
ಕಾನೂನಿನ ಬಗ್ಗೆ ಅರಿಯುವುದು ಎಲ್ಲರ ಕರ್ತವ್ಯ ಎಂಬುದನ್ನು
ನ್ಯಾಯಾಲಯ ಮತ್ತೆ ಸಾಬೀತು ಮಾಡಿದೆ. ಸಂಜಯ್‌ದತ್ ಮಾಡಿದ
ಅಪರಾಧಗಳು ದೇಶದ್ರೋಹ ಅಲ್ಲದಿದ್ದರೂ ಶಿಕ್ಷಾರ್ಹ ಅಪರಾಧ ಎಂದು
ತೀರ್ಪು ನೀಡಿದೆ...
ಅಪಾಯದಂಚಿನಲ್ಲಿ ಕೊಡಚಾದ್ರಿ ಪರ್ವತ ಶ್ರೇಣಿ
ಸಾಮಾನ್ಯವಾಗಿ ಮನುಷ್ಯ ಕಾಲಿಡುವ ಜಾಗಗಳೆಲ್ಲಾ ಒಂದೆಲ್ಲಾ ಒಂದು
ರೀತಿಯ ಹಾನಿಗೊಳಗಾಗಿದೆ. ಮಲೆನಾಡಿನಲ್ಲಿ ಮನುಷ್ಯರು ನಿತ್ಯ
ಓಡಾಡದ ಕಡಿದಾದ ಸಾವಿರಾರು ಗುಡ್ಡಬೆಟ್ಟಗಳಿವೆ. ಅವು ಯಾವುವೂ
ಭೂ ಕೊರೆತವನ್ನು ಕಂಡಿಲ್ಲ. ಎಂಥಹಾ ಮಳೆಗೂ ಅವು ಬೆಚ್ಚದೆ
ಬೆದರದೆ ನಿಂತಿದೆ. ಕಾರಣ ಸ್ಪಷ್ಟ. ಪ್ರಕೃತಿ ಗುಡ್ಡದ ಮೇಲ್ಮಣ್ಣು
ತೊಳೆಯದಂತೆ ಹುಲ್ಲಿನ ಚಾದರ ನಿರ್ಮಿಸಿದೆ. ಕಾಡುಗಳಿದ್ದ
ಗುಡ್ಡಗಳಂತೂ ಇನ್ನೂ ಸುರಕ್ಷಿತವಾಗಿದೆ. . . .
ಸಂಜಯ್‌ದತ್‌ನ ಬದುಕೇ ಒಂದು ಸಿನಿಮಾ
ಮಾಸಿದ ಬಾಳಿನ ಉದ್ದಕ್ಕೂ ವಿವಾದ ಮತ್ತು ವಿಷಾದಗಳ ವಿವಿಧ
ಮಜಲುಗಳ ಮೆಟ್ಟಿಲೇರಿ ಬಂದರೂ ಸಂಜಯ್‌ದತ್‌ಗೆ ಹೊಸ ಬದುಕು
ಕಟ್ಟಿಕೊಳ್ಳಲಾಗಲಿಲ್ಲ. ಏಕೆ ಹೀಗಾಯ್ತು? ಎಲ್ಲರೂ ತಪ್ಪು
ಮಾಡುತ್ತಾರೆ. ಆದರೆ ಅವರಿಗದು ತಪ್ಪೆಂದು ತಿಳಿಯುವಷ್ಟರಲ್ಲಿ
ಹೊಸ ಭವಿಷ್ಯದ ಅವಕಾಶ ತಪ್ಪಿ ಹೋಗಿರುತ್ತದೆ. ಸಂಜಯ್‌ದತ್‌ನ
ಬದುಕೇ ಒಂದು ಸಿನಿಮಾ. ಅಲ್ಲಿ ೧೮ ತಿಂಗಳ ಮಧ್ಯಂತರ.
ಆರಂಭದಲ್ಲಿ ದುಃಖ, ಕೊನೆಯವರೆಗೂ ದುಃಖ ದುಃಖ ದುಃಖ! . . .
ಯಾರದೋ ಕೊಲೆ... ಇನ್ನಾರಿಗೋ ಹಣ...
ಇದೊಂದು ಕತೆಯೋ, ನಿಜ ಘಟನೆಯೋ ಎಂಬ ಚರ್ಚೆ ಬೇಡ.
ಮುಂಬೈನಲ್ಲಿ ಅಮಾಯಕರನ್ನು ಭೂಗತಲೋಕಕ್ಕೆ
ಕರೆದೊಯ್ಯಲು ಒಂದು ವ್ಯವಸ್ಥಿತ ದಾರಿ ಸಿದ್ಧವಾಗಿತ್ತು. ಅದು ಎಲ್ಲಿಂದ
ಆರಂಭವಾಗುತ್ತಿತ್ತು? ಎಂಬುದೇ ತಿಳಿಯದಷ್ಟು
ನಿಗೂಢವಾಗಿರುತ್ತಿತ್ತು. ಆದರೆ ಅದರ ಕೊನೆ ಮಾತ್ರ ಪಾತಕಿಗಳ
ಸೂತ್ರದಾರನಾದ ದಾವೂದ್ ಇಬ್ರಾಹಿಂ ಸಮ್ಮುಖಕ್ಕೆ ಒಯ್ಯುತ್ತಿತ್ತು.
`ಮಠ' ಚಿತ್ರದ ನಿರ್ದೇಶಕ ಗುರುಪ್ರಸಾದ್ ಒಮ್ಮೆ . . .
ಧಾರಾವಾಹಿ - ಎದೆಯ ಕೂಗನು ಮೀರಿ... ಅಧ್ಯಾಯ -೫
ರಾತ್ರಿ ೨ ಗಂಟೆ ಆಗುತ್ತ ಬಂದಿತ್ತು. ತನ್ನ ಕೆಲವು ಇಂಜಿನಿಯರಿಂಗ್
ಸಹಪಾಠಿಗಳ ಜೊತೆ ಅನು ಮತ್ತೊಂದು ರಾತ್ರಿಯನ್ನು ಬಹುಪಾಲು
ಪ್ರಯೋಗಾಲಯದಲ್ಲಿಯೇ ಕಳೆದಿದ್ದಳು. ತನ್ನ
ರೂಮ್‌ಮೇಟ್‌ಗಳನ್ನು ಎಬ್ಬಿಸಬಾರದೆಂದು ಹಗುರವಾದ ಮೆಲ್ಲನೆ
ಹೆಜ್ಜೆಗಳನ್ನು ಇಡುತ್ತಾ ಒಳಗೆ ಬಂದಳು. ಅಡಿಗೆ ಕೋಣೆಯಲ್ಲಿನ
ಟೇಬಲ್ ಮೇಲೆ ಭಾರತದ ಹೊಳೆಯುವ . . .
ಮಕ್ಕಳಿಗಾಗಿ - ಪಾಪು ಗಾಂಧಿ-೧೭ - ಊಟದ ಬ್ಯಾರಿಸ್ಟರ್
ಆ ದಿನಗಳಲ್ಲಿ, ಭಾರತ ದೇಶದಲ್ಲಿ ವಿಶೇಷ ಮನ್ನಣೆ ಗಳಿಸಿದ್ದ
ಇಂಗ್ಲೆಂಡಿನ `ಬ್ಯಾರಿಸ್ಟರ್ ಪದವಿ ಪಡೆಯುವುದು ಊಟ ಮಾಡಿದಷ್ಟೇ
ಸುಲಭದ ಕೆಲಸವಾಗಿತ್ತು. . . .
ವಾಸ್ತವ - ಆರ್.ಶರ್ಮಾ ತಲವಾಟರವರ ಕತೆ
ಅವನಿಗೆ ಮತ್ತೆ ವಿಚಿತ್ರ ಅನುಭವವಾಗತೊಡಗಿತು.
ಹೊಟ್ಟೆಯೊಳಗಿನಿಂದ ಯೊಚನೆಗಳು ಭುಗಿಲೇಳುತ್ತಿದ್ದವು.
ಅವುಗಳನ್ನು ನಿಲ್ಲಿಸುವ ಪರಿ ತಿಳಿಯದೆ ಪರದಾಡತೊಡಗಿದ. ಎದುರು
ಕುಳಿತ ಸ್ವಾಮೀಜಿಯ ಕಣ್ಣುಗಳನ್ನು ದುರುಗುಟ್ಟಿ ನೋಡಿದ. ಐದು
ನಿಮಿಷಕ್ಕೆ ಮೊದಲು ಫಲತಾಂಬೂಲ ಅರ್ಪಿಸಿ ಪಾದಕ್ಕೆ ಎರಗುವಾಗಿನ
ಮುಖಭಾವ ಈಗಿರಲಿಲ್ಲ. ಕಣ್ಣುಗಳು ಕೆಂಪೇರತೊಡಗಿದವು.
ಹೊಕ್ಕುಳಬಳ್ಳಿ ಛಳಕ್ಕೆಂದಿತು. ಗಂಟಲಿನಾಳದಿಂದ ಧ್ವನಿ
ಹೊಮ್ಮತೊಡಗಿತು. . . .
ಅಣೆಕಟ್ಟು ಎತ್ತರದ ಬಿಕ್ಕಟ್ಟು
ದೇಶದ ಅತ್ಯಂತ ಪುರಾತನ ಅಣೆಕಟ್ಟೆಗಳಲ್ಲೊಂದಾದ
ಮಲ್ಲಾಪೆರಿಯಾರ್ ಅಣೆಕಟ್ಟಿನ ಎತ್ತರವನ್ನು ಪ್ರಸ್ತುತ ೧೩೬
ಅಡಿಗಳಿಂದ ೧೪೨ ಅಡಿಗಳಿಗೇರಿಸುವ ಕುರಿತಂತೆ ಎದ್ದಿರುವ ವಿವಾದವನ್ನು
ಇತ್ಯರ್ಥಗೊಳಿಸಲು ತಮಿಳುನಾಡಿನ ಮುಖ್ಯಮಂತ್ರಿ ಎಂ. ಕರುಣಾನಿಧಿ
ಹಾಗೂ ಕೇರಳ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಅವರಿಬ್ಬರೂ
ದೆಹಲಿಗೆ ದೌಡಾಯಿಸಬೇಕಾದ ಸಂದರ್ಭ ಒದಗಿ ಬಂದಿದೆ. .
ಗಗನಕ್ಕೇರಿದ ಭೂಮಿ ಬೆಲೆ
ಜನಸಂಖ್ಯೆ ಬೆಳೆಯುತ್ತಿದ್ದಂತೆ, ಆರ್ಥಿಕ ಚಟುವಟಿಕೆಗಳು
ಹೆಚ್ಚುತ್ತಿದ್ದಂತೆಯೇ ನಗರಗಳು ಇನ್ನಷ್ಟು ಬೃಹದಾಕಾರವಾಗಿ
ಬೆಳೆಯುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಚೆನ್ನೈ ನಗರಕ್ಕೆ
ಕಳೆದೊಂದು ದಶಕದಲ್ಲಿ ಸುಮಾರು ೯ ಲಕ್ಷ ಜನರು
ಸೇರ್ಪಡೆಗೊಂಡಿದ್ದಾರೆ. ಇದರಿಂದಾಗಿ ಮಹಾನಗರದ ಸುತ್ತಮುತ್ತಲಿನ
ಪ್ರದೇಶಗಳ ಭೂಮಿಯ ಬೆಲೆ ಗಗನಕ್ಕೇರುತ್ತಿದೆ. . . .
ಪೌರಾಣಿಕ ಕಥೆಗಳ ಮೇಲೆ ವಿದೇಶಿಗರ ಕಣ್ಣು
ಓದುಗರನ್ನು ಇನ್ನಷ್ಟು ಆಕರ್ಷಿಸುವಲ್ಲಿ ಪಾಶ್ಚಾತ್ಯ ರಾಷ್ಟ್ರಗಳು ಈಗ
ಪೌರಾಣಿಕ ಕಥೆಗಳನ್ನು ಯಥೇಚ್ಛವಾಗಿ ಬಳಸಿಕೊಳ್ಳಲು ನಿರ್ಧರಿಸಿವೆ.
ಹ್ಯಾರಿಪಾಟರ್, ಲಾರ್ಡ್ ಆಫ್ ದಿ ರಿಂಗ್ಸ್ ಹಾಗೂ ದಿ ಮ್ಯಾಟ್ರಿಕ್ಸ್ ನಂತರ
ವಿಶಿಷ್ಟ ಪಾತ್ರಗಳಿಂದ ಓದುಗರನ್ನು ಮತ್ತೆ ಪುಸ್ತಕಗಳತ್ತ
ಕೊಂಡೊಯ್ಯಲು ಪಾಶ್ಚಾತ್ಯ ರಾಷ್ಟ್ರಗಳಿಗೆ ಈಗ ಪೌರಾಣಿಕ ಪಾತ್ರಗಳ
ಮೇಲೆ ಕಣ್ಣು ಬಿದ್ದಿದೆ. . . .
ಗ್ರಾಮ ಪಂಚಾಯ್ತಿ ಚುನಾವಣೆ ಮುಂದೂಡಿಕೆ
ಜನವರಿ ತಿಂಗಳಲ್ಲಿ ನಡೆಯಬೇಕಿದ್ದ ಗ್ರಾಮ ಪಂಚಾಯಿತಿಯ
ಚುನಾವಣೆಗಳನ್ನು ಕ್ಷಿಪ್ರ ಬೆಳವಣಿಗೆಯೊಂದರಲ್ಲಿ ಗೋವಾ ರಾಜ್ಯ
ಸರ್ಕಾರ ಮುಂದೂಡಲು ನಿರ್ಧರಿಸಿದೆ. . . . .
ಬೆಸ್ತರಿಗೆ ವಾಕಿ-ಟಾಕಿ
ಬೆಸ್ತರ ಜೀವನ ಶೈಲಿಗೆ ಇನ್ನಷ್ಟು ಭದ್ರತೆವೊದಗಿಸಲು ರಾಜ್ಯ
ಸರ್ಕಾರ ವಾಕಿ-ಟಾಕಿಗಳನ್ನು ಬೆಸ್ತರಿಗೆ ಉಚಿತವಾಗಿ ಹಂಚಿದೆ. ಅಲ್ಲದೇ
ಬೆಸ್ತರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಹತ್ತು ಹಲವು
ಕ್ರಮಗಳನ್ನು ಕೈಗೊಳ್ಳುವುದಾಗಿ ಪುದುಚೇರಿ ಮುಖ್ಯಮಂತ್ರಿ ಎನ್.
ರಂಗಾಸ್ವಾಮಿ ಅವರು ಭರವಸೆ ನೀಡಿದ್ದಾರೆ. . . . .
ಮಾಹಿತಿ-ತಂತ್ರಜ್ಞಾನದ ಪ್ರಗತಿ
ಮುಂದಿನ ಮೂರ್‍ನಾಲ್ಕು ವರ್ಷಗಳಲ್ಲಿ ಹೈದರಾಬಾದ್ ನಗರ
ಮಾಹಿತಿ-ತಂತ್ರಜ್ಞಾನ ರಂಗದಲ್ಲಿ ನಾಲ್ಕುಪಟ್ಟು ಹೆಚ್ಚು
ವೃದ್ಧಿಯಾಗಲಿದೆ ಎಂದು ಅಂದಾಜಿಸಲಾಗಿದೆ. ಇದಕ್ಕೆ ಮುಖ್ಯ ಕಾರಣ
ಎಂದರೆ, ಇತ್ತೀಚೆಗೆ ಕೇಂದ್ರ ಸರ್ಕಾರದಿಂದ ಮಂಜೂರಾದ ಮಾಹಿತಿ
ತಂತ್ರಜ್ಞಾನದ ವಿಶೇಷ ಆರ್ಥಿಕ ವಲಯಗಳು ಬಹುತೇಕ ಎಲ್ಲವನ್ನೂ
. . . .
ಅಭದ್ರತೆಯ ಸುಳಿಯಲ್ಲಿ ಪುರುಷ?!
ಸಮಾಜದಲ್ಲಿ ಯಶಸ್ವೀ ಹುದ್ದೆಯನ್ನು ಅಲಂಕರಿಸಿಕೊಂಡು
ಮನೆಯನ್ನು ಆರಾಮವಾಗಿ ನಿಭಾಯಿಸುವ ಗುಣದಿಂದ ಮಹಿಳೆ
ಸಮಾಜದಲ್ಲಿ ಪ್ರಬಲ ಅಂಗವಾಗಿ ಮಾರ್ಪಟ್ಟಿದ್ದಾಳೆ. ಇದು ಪುರುಷನಲ್ಲಿ
ಅಸಹನೆಯನ್ನು ಹೆಚ್ಚಿಸಿದೆ. . . .
ಸೋಜಿಗದ ಜಗ
ಪ್ರಾಣಿಗಳ ಕ್ರೀಡಾಕೂಟ
ದಕ್ಷಿಣ ಚೀನಾದಲ್ಲಿ ನಡೆದ ಪ್ರಾಣಿಗಳ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ
ಕೋತಿಗಳು ಸೈಕಲ್ ಸವಾರಿ ಹಾಗೂ ಹಗ್ಗದ ನಡಿಗೆಯಲ್ಲಿ
ತೊಡಗಿರುವುದು. . . .
ಪೆನ್ನು - ಹೊನ್ನು
ವಿಶ್ವವಿಖ್ಯಾತ `ಒಮಾಸ್' ಕಂಪೆನಿ ಬಿಡುಗಡೆ ಮಾಡಿದ ಪೆನ್ ಇದು.
ಇದರ ಬೆಲೆ ೧೧,೯೦೦ ರುಪಾಯಿ! ಈ ಪೆನ್ನಿನ ನಿಬ್ ೧೮ ಕ್ಯಾರೆಟ್ ಚಿನ್ನದಿಂದ
ಕೂಡಿದೆ. ೧೧,೯೦೦ ರೂಪಾಯಿಯಿಂದ ಪ್ರಾರಂಭವಾಗಿ ೨೦,೪೦೦ ರೂಪಾಯಿಗಳ
. . .
ನಾಯಿಮರಿಗೆ ಜನ್ಮ ನೀಡಿದ ಬೆಕ್ಕು?
ಬ್ರೆಜಿಲ್‌ನ ಮಹಿಳೆಯೊಬ್ಬಳು ತನ್ನ ಬೆಕ್ಕು ನಾಯಿಮರಿಗೆ ಜನ್ಮ ನೀಡಿದೆ
ಎಂದು claim
ಮಾಡಿದ್ದಾಳೆ!
ದೇಶಾವರಿ
ಪ.ಬಂಗಾಳದ ಸರದಿ!
ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕದ ಬಳಿಕ ಈಗ ಸದನದಲ್ಲಿ
ಕುಸ್ತಿ ಮಾಡುವ ಸರದಿ ಪ.ಬಂಗಾಳದ್ದು. ಇಡೀ ದೇಶವೇ ತಲೆ
ತಗ್ಗಿಸುವ ಕೆಲಸವನ್ನು ಮೊನ್ನೆ ತೃಣಮೂಲ ಕಾಂಗ್ರೆಸ್‌ನ ಶಾಸಕರು
ಸದನದಲ್ಲಿ ಮಾಡಿ ಮುಗಿಸಿದ್ದಾರೆ. ಓಸಿಪಿ ಶಾಸಕರ ರೌದ್ರಾವತಾರಕ್ಕೆ
ಈಡಾದ ಸದನದ ಮೇಜುಕುರ್ಚಿಗಳು, ಮೈಕ್‌ಗಳು . . . .
ವಸುಂಧರಾ-ಕಿರಣ್ ಕಿಸ್ ಪುರಾಣ
ಇತ್ತೀಚಿನ ದಿನಗಳಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ
ಗ್ರಹಚಾರ ಸರಿ ಇದ್ದಂತಿಲ್ಲ. ಎರಡು ಪ್ರತ್ಯೇಕ ವೇದಿಕೆಗಳಲ್ಲಿ `ಕ್ಯಾಟ್
ವಾಕ್' ಮಾಡಿ ವಿವಾದದಲ್ಲಿ ಸಿಲುಕಿದ್ದ ರಾಜವಂಶಸ್ಥೆ ವಸುಂಧರಾ, ಈಗ
ಹೊಸ ಅವತಾರದಲ್ಲಿ ಕಾಣಿಸಿಕೊಂಡು ಇನ್ನೊಂದು ವಿವಾದವನ್ನು
ಮೈಮೇಲೆಳೆದುಕೊಂಡಿದ್ದಾರೆ. . . .
ಬಿಗ್‌ಬಿ ಸ್ಥಾನಕ್ಕೆ ಎಸ್‌ಆರ್‌ಕೆ
ದೂರದರ್ಶನ ಚಾನೆಲ್‌ಗಳ ಚರಿತ್ರೆಯಲ್ಲೇ ಅತ್ಯಂತ ಜನಪ್ರಿಯ
ಕಾರ್ಯಕ್ರಮವಾಗಿ ಹೊರಹೊಮ್ಮಿದ್ದ `ಕೌನ್ ಬನೇಗಾ ಕರೋಡ್‌ಪತಿ'
ಕಾರ್ಯಕ್ರಮವನ್ನು ಇನ್ನು ಮುಂದೆ ಬಿಗ್‌ಬಿ ಬದಲು ಎಸ್‌ಆರ್‌ಕೆ
ನಡೆಸಿಕೊಡುತ್ತಾರೆ. . . .
ನಿನ್ನಂಥ ಹುಡುಗಿ ಇದ್ದರೇನೇ ಹಬ್ಬ - ಟಿ.ಎಲ್. ಸುಬ್ರಹ್ಮಣ್ಯ
ಅಡಿಗರವರ ಕವನ
ನಿನ್ನಂಥ ಹುಡುಗಿ ಇದ್ದರೇನೇ ಹಬ್ಬ
ಊರಿಗೆ ತೇರು ಜಾತ್ರೆ ಹುಣ್ಣಿಮೆ
ತುಂಬಿದ ಕೆರೆಗೆ ಕೆಂದಾವರೆ ಚಂದ
ರಸಕವಿ ಕಾವ್ಯಕೆ ನೀನುಪಮೆ
ನಿನ್ನಂಥ ಹುಡುಗಿ ಇದ್ದರೇನೇ ಮನೆಗೆ
ಸಾಲು ಹಣತೆ ಹಚ್ಚಿದಂಥ ಸೊಬಗು
ಮೂಡಲಬಾನು ರಂಗೇರುವ ಹಾಗೆ
ಶೋಭಾಯಮಾನ ನಿನ್ನ ಮುಂಬೆಳಗು
ಯಾವುದು? - ಡಾ.ಕೆ.ವಿ. ಚಂದ್ರಣ್ಣಗೌಡರವರ ಕವನ
ಚುಂಬಿಸುವ
ಕೆಂದುಟಿಗಳಿಂದ
ಕೆಂಪು `ಹನಿ
ನೆಲಕ್ಕೆ ಉದುರುವ
ಭಯ - ಭೀತಿಯಿಂದ
ನೆಕ್ಕಿ; ಚಪ್ಪರಿಸಿ
ಧಾರಾವಾಹಿ - ಜಾಣೆಯಾಗಿರು ನನ್ನ ಮಲ್ಲಿಗೆ - ಅಧ್ಯಾಯ -೯
ತೇಜನ್ ವಿರುದ್ಧವೇ ಕಂಪ್ಲೇಂಟ್? ತೇಜನ್ ಮುಖದಲ್ಲಿ ಆಂದೋಲನ
ಕಂಡು ಬಂದಿತು. ಯುಕ್ತಾ, ಬೇಜಾರ್‍ಮಾಡಿಕೊಳ್ಳಬೇಡ, ಆದ್ರೂ
ಕೇಳಲೇಬೇಕಾಗಿದೆ. ಶ್ರೀಕಂಠನ್ ಅಂಕಲ್‌ಗೆ ನಿಮ್ತಾಯಿ ಒಬ್ಬರೇ ಹೆಂಡ್ತಿ
ತಾನೇ?. . . . .
ಶೃಂಗಾರ - ಗರಿಗರಿ! ಉಗುರಿಗಾಗಿ...
ಹೊಳೆಯುವ ಗುಲಾಬಿಬಣ್ಣದ ಉಗುರು ಕೈಬೆರಳ ಸೌಂದರ್ಯವನ್ನು
ಹೆಚ್ಚುಸುತ್ತದೆ. ಕತ್ತರಿಸಿದ, ಮುರಿದ, ನಿಸ್ತೇಜನಗೊಂಡ ಉಗುರು
ಅನಾರೋಗ್ಯದಿಂದ ಉಂಟಾದರೆ, ಕೆಲವೊಮ್ಮೆ ಇಂತಹ ಪರಿಸ್ಥಿತಿಗೆ ನಮ್ಮ
ನಿರ್ಲಕ್ಷ್ಯವೂ ಕಾರಣವಾಗುತ್ತದೆ ಎಂಬುದನ್ನು . . . .
ಹೇಳತೇನ ಕೇಳೋ ಗೆಳೆಯ...
ಮೂಲತಃ ಕವಿಯಾದ ಡಾ. ಚಂದ್ರಶೇಖರ ಕಂಬಾರರು ಕನ್ನಡ
ಸಾಹಿತ್ಯದಲ್ಲಿ ತಮ್ಮ ಹೆಸರನ್ನು ವಿಶಿಷ್ಟವಾಗಿ ಛಾಪಿಸಿದವರು. ಇವರ
ಬಹುಮುಖ ಪ್ರತಿಭೆಗೆ ರಾಜ್ಯ ಸಾಹಿತ್ಯ, ನಾಟಕ, ಜಾನಪದ ಮತ್ತು
ಯಕ್ಷಗಾನ ಅಕಾಡೆಮಿ ಪ್ರಶಸ್ತಿಗಳು ಸಂದಿವೆ. ರಾಜ್ಯೋತ್ಸವ,
ಮಾಸ್ತಿ, ಶಿರಸಂಗಿಯ ಶ್ರೀಕಾಳಿ, ವರ್ಧಮಾನ ಪ್ರಶಸ್ತಿಗಳೂ ಇವರ
ಅರಸಿ ಬಂದಿವೆ. ಕೇರಳದ ಆಶಾನ್, ಪ್ರತಿಷ್ಠಿತ ಕಬೀರ್ ಸಮ್ಮಾನ್,
ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿಗಳಲ್ಲದೆ, ಪ್ರತಿವರ್ಷ
ಭಾಷೆಗಾಗಿ ದುಡಿದ ದೇಶದ ಒಬ್ಬ ಕವಿಗೆ ಕೊಡುತ್ತಿರುವ
ಆಂಧ್ರಪ್ರದೇಶದ `ಜಶ್ವ ಪ್ರಶಸ್ತಿ' ಕಂಬಾರರಿಗೆ ಈ ಬಾರಿ ಸಂದಿದೆ.
ಭಾರತ ಸರ್ಕಾರದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಯೂ ದೊರೆತಿದೆ.
ಮುಂದಿನ ಜ್ಞಾನಪೀಠ ಪ್ರಶಸ್ತಿಗೆ ಕೇಳಿ ಬರುತ್ತಿರುವ ಹೆಸರಿನಲ್ಲಿ
ಕಂಬಾರರ ಹೆಸರೂ ಚಾಲ್ತಿಯಲ್ಲಿದೆ. ಜಾನಪದ ಸೊಗಡಿನ ಮೋಡಿಗಾರ
ಕವಿ, ನಾಟಕಕಾರ ಡಾ. ಚಂದ್ರಶೇಖರ ಕಂಬಾರರ ಜೊತೆ ನಡೆಸಿದ
ಒಂದು ಆತ್ಮೀಯ ಸಂದರ್ಶನವಿದು. . . .
ನೀವು ನೀವಾಗಿರಿ, ನಮ್ಮನ್ನು ನಾವಾಗಿರಲು ಬಿಡಿ
ಸಾವಿರಾರು ಮಾವಿನ ಮರದ ಮಧ್ಯೆ ಬೇವಿನ ಬೀಜ ಹಾಕಿದರೆ, ಅದರಲ್ಲಿ
ಬೇವಿನ ಮರವೆ ಹುಟ್ಟುವುದು. ನನ್ನ ಸುತ್ತಾ ಮುತ್ತ ಮಾವಿನ
ಮರಗಳಿವೆ ಎಂದು ಬೇವಿನ ಬೀಜದಿಂದ ಮಾವಿನ ಮರ
ಬೆಳೆಯುವುದಿಲ್ಲ. . . .
ಬಾಂಬೆ ಮಸಾಲಾ
ಶಾರುಕ್ ಬನ್‌ಗಯಾ ಕರೋಡ್‌ಪತಿ!?
ಬರೀ ಕೋಟಿಗಳಲ್ಲಿ ಕನಸು ಕಾಣುವ ಕಾಲವೊಂದಿತ್ತು. ಹಿರಿಯ ನಟ
ಅಮಿತಾ ಬಚ್ಚನ್ ಅದರ ಸೂತ್ರಧಾರ. ಹೌದು. ಕೆಲವು ವರ್ಷಗಳ ಹಿಂದೆ
`ಕೌನ್ ಬನೇಗಾ ಕರೋಡ್ ಪತಿ' ಕಾರ್ಯಕ್ರಮ ಜನಪ್ರಿಯವಾದ
ಪರಿಯನ್ನು ಹೇಳಿ . . .
ಕೈ ಕೊಟ್ಟ `ಪ್ರೀತಿ'
ಬಾಲಿವುಡ್ ಕೆನ್ನೆ ಗುಳಿ ನಟಿ ಪ್ರೀತಿ ಜಿಂಟಾ ಶಾಕ್ ನೀಡೋದರಲ್ಲಿ ಎತ್ತಿದ
ಕೈ! ಈ ಹಿಂದೆ ತನಗೆ ಭೂಗತ ಪಾತಕಿಗಳಿಂದ ಬೆದರಿಕೆಯ
ಕರೆಗಳು ಬಂದಿದ್ದವು ಎಂದು ಬಾಂಬ್ ಹಾಕಿದ್ದಳು. ಆದರೆ ಈಗ ನೀಡಿದ
ಶಾಕ್ ಇಂಥದ್ಯಾವುದೂ ಅಲ್ಲ. ತನಗ್ಯಾರೂ ಬಾಯ್‌ಫ್ರೆಂಡ್ ಇಲ್ಲ ಎಂದು
ಎಲ್ಲರನ್ನು ಅಚ್ಚರಿಗೊಳಿಸಿದ್ದಾಳೆ. . . .
ಫೈನ್ ಆಕ್ಟರ್
ಆಂಗ್ರಿ ಆಕ್ಟರ್ ಅಜಯ್ ದೇವಗನ್ ಸುದ್ದಿಯಲ್ಲೇ ಇಲ್ವಾ? ಹಾಗೇನಿಲ್ಲ.
`ಗೋಲ್‌ಮಾಲ್' ಚಿತ್ರದ ನಂತರ ಸಣ್ಣದೊಂದು ವಿರಾಮ ಅಷ್ಟೆ.
ಕೈತುಂಬಾ ಆಫರ್‌ಗಳಿವೆ. ಮುಂದಿನ ವರ್ಷಕ್ಕೆ ಡೇಟ್‌ಗಳು ಈಗಾಗಲೇ
ಫಿಕ್ಸ್ ಆಗತೊಡದೆ. ಈ ನಡುವೆ ಪತ್ನಿ . . .
ನೋ ಫ್ಲ್ಯಾಶ್ ಬ್ಯಾಕ್!
ಕರಿಶ್ಮಾ ಕಪೂರ್ ಮತ್ತೆ ನಟಿಸಲಿದ್ದಾರಂತೆ ಹೌದಾ? ಹೀಗೊಂದು ಸುದ್ದಿ
ಬಾಲಿವುಡ್‌ನಲ್ಲಿ ದಟ್ಟವಾಗಿ ಈ ಹಿಂದೆ ಹರಡಿತ್ತು. ಕರಿಶ್ಮಾ ಬಣ್ಣ ಹಚ್ಚದೆ
ವರ್ಷಗಳಾಗಿದ್ದವು. ಮತ್ತೆ ಚಿತ್ರರಂಗಕ್ಕೆ ಬರುವುದೇ ಇಲ್ಲ ಅಂತಲೂ
ಬಿಂಬಿಸಲಾಗಿತ್ತು. ಆದರೆ ಅದು ನಿಜ ಎಂದು ಖುದ್ದಾಗಿ ಕರಿಶ್ಮಾಳೇ ಬಾಯ್ಬಿಟ್ಟು
ಹೇಳಿದ್ದಾಳೆ.
ಜಾಕ್‌ಪಾಟ್!
ಸದ್ಯದ ಮಟ್ಟಿಗೆ ಕೈ ತುಂಬಾ ಸಿನಿಮಾ ಹಿಡಿದುಕೊಂಡು ಸುದ್ದಿಯಿಲ್ಲದೆ
ಕುಳಿತವಳು ಬಹುಶಃ ಕತ್ರೀನಾ ರೈಫ್ ಅನ್ನಬಹುದೇ? ಮುಂಬರುವ
ಹೊಸ ವರ್ಷ ಕತ್ರೀನಾಳಿಗೆ ಹೊಸ ಹುರುಪಿನ ಜೊತೆ ಜಾಕ್‌ಪಾಟ್
ಹೊಡೆಯಲಿದೆ ಅಂದರೆ ತಪ್ಪಿಲ್ಲ. ಮುಂದಿನ ವರ್ಷ ಆಕೆ-ನಮಸ್ತೆ . .
. .
ಸೀರಿಯಸ್ ಕಿಸ್ಸರ್
`ಈ ಬಾಲಿವುಡ್ ಅನ್ನೇ ನಂಬಿ ಕುಂತರೆ ಇದೇ ಕತೆ ಆಗೋದು'
ಸೀರಿಯಲ್ ಕಿಸ್ಸರ್ ಇಮ್ರಾನ್ ಅಶ್ಮಿ ಹೀಗೊಂದು ಹೇಳಿಕೆ ನೀಡಿರುವುದರ
ಹಿಂದೆ ಬಲವಾದ ಕಾರಣವಿದೆ. . . .
ಗೆಲುವೀಗ ಭಾರತಕ್ಕೆ ಮರೀಚಿಕೆ
ಭಾರತದ ಸೋಲಿಗೆ ನಾಯಕ ರಾಹುಲ್ ದ್ರಾವಿಡ್ ಮತ್ತು
ತರಬೇತುದಾರ ಗ್ರೆಗ್ ಚಾಪೆಲ್ ಅವರನ್ನು ಟೀಕೆ ಮಾಡಿ, ದೂರಿ
ಪ್ರಯೋಜನವಿಲ್ಲ. ದ್ರಾವಿಡ್ ಸೇರಿದಂತೆ ತಂಡದ ಎಲ್ಲ ಆಟಗಾರರು
ಫಾರ್ಮ್ ಕಳೆದುಕೊಂಡಿದ್ದಾರೆ. . . . .
ಮೌಲ್ಯ ಮೆಲುಕು
ಶಿಬಿರದ ಬಳಿಕ ವಿದ್ಯಾರ್ಥಿಗಳೇ ಒಂದು ವಿಚಾರವೇದಿಕೆ ಮಾಡಿಕೊಂಡು
ವಾರಕ್ಕೊಮ್ಮೆ ಸಭೆ ಸೇರುತ್ತಿದ್ದರು. ಸ್ಪೋರ್ಟ್ಸ್, ಪಾಲಿಟಿಕ್ಸ್,
ಕಲ್ಚರ್, ಲಿಟರೇಚರ್ ಯಾವುದೂ ಇರಬಹುದು,
ಯಾವುದಾದರೊಂದು ವಿಚಾರದ ಬಗ್ಗೆ ಒಬ್ಬ ಬರೆದುಕೊಂಡು
ಬರುವುದು ಅಥವಾ ಹೇಳುವುದು, ಆಮೇಲೆ ಅದರ ಬಗ್ಗೆ ಗಂಭೀರ
ಚಿಂತನ-ಮಂಥನ ಸಭೆಯಲ್ಲಿ ನಡೆಯುತ್ತಿತ್ತು.
ಮಾಯಾಲೋಕದ ಮಹಾತ್ಯಾಗಿ ಫಾಲ್ಕೆ
ಚಲನ ಚಿತ್ರರಂಗದ ಮಾಯಾಲೋಕವನ್ನು ಭಾರತೀಯ ಜನತೆಗೆ
ಇತ್ತವರು ಶ್ರೀಯುತ ದಾದಾಸಾಹೇಬ್ ಫಾಲ್ಕೆ. ಚಲನಚಿತ್ರರಂಗದ
ಆವಿಷ್ಕಾರಕ್ಕಾಗಿ ತಮ್ಮ ಜೀವನವನ್ನೇ ತೇಯ್ದ ಮಹಾತ್ಯಾಗಿ ದಾದಾ
ಸಾಹೇಬ್ ಫಾಲ್ಕೆ ಅವರಿಗೊಂದು ನಮನ. . .
ರಂಗೀಲಾ
ರಮ್ಯ ಹಬ್ಬ
ಬರ್ತ್‌ಡೇಗಳ ವಿಷಯದಲ್ಲೂ ನಟಿ ರಮ್ಯ ಚಂಚಲೆ ಎನ್ನುವುದು
ಸಾಬೀತಾಗಿದೆ. ಚಿತ್ರೋತ್ಸವಕ್ಕೆ ಹೋಗುವ ಮೊದಲು ಗೋವಾದಲ್ಲಿ
ಹುಟ್ಟುಹಬ್ಬ ಆಚರಿಸಿಕೊಳ್ಳುವುದಾಗಿ ರಮ್ಯ ಹೇಳಿದ್ದರು. ಗೋವಾದಲ್ಲಿ
ಕುಳಿತು ಈ ವರ್ಷ ಹುಟ್ಟಿದ ಹಬ್ಬ ಆಚರಿಸಿಕೊಳ್ಳುವುದೇ ಇಲ್ಲ ಎಂದು
ಪ್ರಮಾಣ ಮಾಡಿದ್ದರು. ಆದರೆ ಕೊನೆಗೂ ರಮ್ಯ
ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. . . .
ನಮ್ ಚೈತ್ರಾ ಮದುವೆಯಂತೆ
ಚೈತ್ರಾ ಹಳ್ಳಿಕೇರಿ ಮದುವೆಯಾಗುತ್ತಿದ್ದಾರೆ! ಐಶ್ವರ್ಯ ರೈ
ಮತ್ತು ಅಬಿಷೇಕ್ ಬಚ್ಚನ್ ಮದುವೆ ನಡೆಯುತ್ತದೋ ಇಲ್ಲವೋ
ಎಂದು ಇಂಡಿಯಾ ಪಾಕಿಸ್ತಾನ ಕ್ರಿಕೆಟ್ ಮ್ಯಾಚಿನಂತೆ ಟೀವಿ ಎದುರು
ಕುಳಿತು ನೋಡುತ್ತಿರುವವರಿಗೆ ಇದು ಅಂಥ ಮುಖ್ಯ ಸುದ್ದಿಯಾಗಿ
ಕಾಣದೇ ಹೋಗಬಹುದು. ಏಕೆಂದರೆ ಚೈತ್ರಾ ಹಳ್ಳಿಕೇರಿ ಅಷ್ಟು
ಪ್ರಸಿದ್ಧ ನಟಿಯೇನಲ್ಲ. . . .
ಹೂವಿಡುವ ಹೂವಿನಂಥ ಹುಡುಗಿ
ಪ್ರೇಮ್‌ರ ರೀಲ್ ನಾಯಕಿಯ ಕುರಿತು ಆಸಕ್ತಿ ಇದೆಯೇ? ಇಲ್ಲಿ
ನೋಡಿ. ಆಕೆಯ ಹೆಸರು ರೋಹಿಣಿ. ಅನಿವಾಸಿ ಭಾರತೀಯೆ.
ಅಮೆರಿಕಾದಲ್ಲಿ ಇದ್ದವಳು. ಅಲ್ಲೇ ಮನಶ್ಶಾಸ್ತ್ರ ಮತ್ತು ಬಿಸಿನೆಸ್
ಮ್ಯಾನೇಜ್‌ಮೆಂಟ್ ಓದಿದವಳು. ಇದೆಲ್ಲ ಮುಗಿಸಿ ಬ್ಯಾಂಕ್‌ನಲ್ಲಿ
ಕೆಲಸಕ್ಕಿದ್ದಳು. . . .
ಪಣಜಿಯಲ್ಲಿ ಹೋದ ಮಾನ
ಗೋವಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ
ಚಿತ್ರೋತ್ಸವದಲ್ಲಿ ಸದಾ ಕಾಲ ಕನ್ನಡ ಸುದ್ದಿಯಲ್ಲಿತ್ತು.
ಮೊದಲು ಸುದ್ದಿ ಮಾಡಿದವರು ಕವಿತಾ ಲಂಕೇಶ್. ಅನಂತರ
ಸುದ್ದಿಯಾಗಿದ್ದು ರಾಜ್ಕುಮಾರ್ ಛಾಯಾಚಿತ್ರ ಪ್ರಕರಣ
ಮತ್ತು . . .
ಪ್ರೀತಿ ಪ್ರಚಾರ ಇಲಾಖೆ
ಚಿತ್ರಕ್ಕೆ ಪ್ರಚಾರ ಪಡೆಯುವುದು ಹೇಗೆ? ಈ ವಿಷಯದಲ್ಲಿ
ಕನ್ನಡದಲ್ಲಿ ಇಬ್ಬರಿಗೆ eನೋದಯವಾಗಿದೆ. ಒಬ್ಬರು:
ಇಂದ್ರಜಿತ್ ಲಂಕೇಶ್. ಇನ್ನೊಬ್ಬರು: ಅಶ್ವಿನಿ ರಾಮ್ಪ್ರಸಾದ್.
`ಮೊನಾಲಿಸಾ' ಚಿತ್ರಕ್ಕೆ ಇಂದ್ರಜಿತ್ ಅತಿ ಹೆಚ್ಚು ಸಂಖ್ಯೆಯಲ್ಲಿ
ಪತ್ರಿಕಾಗೋಷ್ಠಿ ನಡೆಸಿದ್ದು ಹಲವರ ಹುಬ್ಬೇರಿಸಿತ್ತು.
ಅನಂತರ ಐಶ್ವರ್ಯ. . . .
ಯುಗೇಯುಗೇ
ಐತಿಹಾಸಿಕ ಚಿತ್ರ ಮಾಡಿ ಈಗ ಎಲ್ಲ ರೀತಿಯಿಂದ ಸುಸ್ತಾಗಿರುವ
ನಿರ್ದೇಶಕ ನಾಗಾಭರಣ ಅವರ ಮುಂದಿನ ಚಿತ್ರವೇನು?
`ಯುಗೇ ಯುಗೇ' ಎನ್ನುತ್ತದೆ ನಾಗಾಭರಣ ಅವರ ತಂಡ. ಈ
ಚಿತ್ರವನ್ನು ಅವರು ನಿರ್ಮಿಸುತ್ತಿರುವುದು ರಾಕ್ಲೈನ್
ಸಂಸ್ಥೆಗಾಗಿ. . . .
ಅಮೇರಿಕಾದಿಂದ ರವಿ
೬೦ ಜನಕ್ಕೆ ಒಬ್ಬನ ಬಳಿ
AK-47
ಇಲ್ಲಿನ ನ್ಯಾಷನಲ್ ಪಬ್ಲಿಕ್ ರೇಡಿಯೋ (ಎನ್.ಪಿ.ಆರ್.) ಅಮೇರಿಕದ
ಪ್ರಗತಿಪರ, ಉದಾರವಾದಿ ಧೋರಣೆಯ, ಪಬ್ಲಿಕ್ ರೇಡಿಯೊ
ಸ್ಟೇಷನ್‌ಗಳ ಸದಸ್ಯತ್ವ ಹೊಂದಿರುವ ಸ್ವತಂತ್ರವಾದ, ಲಾಭರಹಿತ
ರೇಡಿಯೊ ಸಂಸ್ಥೆ. ಇಂತಹದೊಂದು ರೇಡಿಯೊ ನಮ್ಮ ದೇಶದಲ್ಲಿ
ಬರಲು ಯಾವ ಕಾಲವಾಗುತ್ತದೊ ಗೊತ್ತಿಲ್ಲ. ಆದರೆ ಇಂತಹ
ರೇಡಿಯೊದ ಅವಶ್ಯಕತೆ ಮಾತ್ರ ಪ್ರತಿ ದೇಶಕ್ಕೂ ಇದೆ. ಪ್ರಸ್ತುತ
ವಿಷಯಗಳ ಬಗ್ಗೆ ಆಸಕ್ತಿ ಇರುವ ಇಲ್ಲಿನ ಕೆಲವು ಭಾರತೀಯರೂ
ತಾವು ಕಾರು ಚಲಾಯಿಸುವಾಗ ಇದನ್ನು ಆಲಿಸಲು ಬಯಸುತ್ತಾರೆ. . .
.
ಇಂದೇ ಚಂದಾದಾರರಾಗಿ
ವಿಕ್ರಾಂತ ಕರ್ನಾಟಕದ
ಹದಿನೇಳನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಹದಿನೈದನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಹದಿನಾಲ್ಕನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಹದಿಮೂರನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಹನ್ನೆರಡನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಹನ್ನೊಂದನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ದೀಪಾವಳಿ ವಿಶೇಷ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಒಂಬತ್ತನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಎಂಟನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಏಳನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಆರನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಐದನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ನಾಲ್ಕನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಮೂರನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ದ್ವಿತೀಯ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ ಪ್ರಥಮ ಸಂಚಿಕೆಯಲ್ಲಿ
. . .