Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

 

Monday, 28 July 2008 10:36 PM

 ವಿಕ್ರಾಂತ ಕರ್ನಾಟಕದ ಹದಿನಾರನೇ ಸಂಚಿಕೆಯಲ್ಲಿ:

 

ಸಂಪಾದಕೀಯ - ಒಂದು ಕ್ಷೇತ್ರಕ್ಕೆ ಒಂದು ನೂರು ಕೋಟಿ!

ಇದು ಅಚ್ಚರಿಯಲ್ಲ, ಉತ್ಪ್ರೇಕ್ಷೆಯೂ ಅಲ್ಲ, ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಭ್ಯರ್ಥಿಗಳು ಮಾಡುವ ಖರ್ಚು ಒಂದು ನೂರು ಕೋಟಿಯನ್ನು ಮೀರಲಿದೆಯಂತೆ! ಸಿದ್ಧರಾಮಯ್ಯನವರಿಗೆ ಇದು ಅಳಿವು ಉಳಿವಿನ ಪ್ರತಿಷ್ಠೆಯ ಪ್ರಶ್ನೆಯಾದರೆ ದೇವೇಗೌಡರ ಕುಟುಂಬಕ್ಕೆ ಇದು ಸೇಡು, ಸವಾಲಿನ ಪ್ರಶ್ನೆ. ಹಾಗಾಗಿ ಇಲ್ಲಿ ಒಂದೊಂದು ಮತವೂ ಸಾವಿರಗಟ್ಟಲೆ ಬೆಲೆ ಬರುವಷ್ಟು ಅತ್ಯಮೂಲ್ಯ! `ನಿಮ್ಮ ಅಮೂಲ್ಯ ಮತ' ಎನ್ನುವುದು ಈಗ ಅನ್ವರ್ಥ!


ಸಿಬಿಐ ಪಟ್ಟಿಯಲ್ಲಿ ನಾನೀಗಲೂ MOST WANTED!

ದುಬೈಯಲ್ಲಿದ್ದುಕೊಂಡೇ ಭಾರತದ ಭೂಗತ ಲೋಕವನ್ನು ಆಳುತ್ತಿದ್ದ ಮುತ್ತಪ್ಪ ರೈ ಮೇಲೆ ಭಾರತಕ್ಕೆ ಹಸ್ತಾಂತರಗೊಳ್ಳುವ ವೇಳೆಗೆ ಆರು ಕೇಸುಗಳಿದ್ದವು. ಅವುಗಳಲ್ಲಿ ಬನಶಂಕರಿ ಸೀನನ ಕೊಲೆ ಮತ್ತು ಸುಬ್ಬರಾಜು ಕೊಲೆ ಕೇಸುಗಳಿಗೆ ಸಂಬಂಧಿಸಿದಂತೆ ಸರಕಾರ ಅಪೀಲು ಸಲ್ಲಿಸಿದ್ದು ಬಿಟ್ಟರೆ, ಉಳಿದ ಎಲ್ಲಾ ಕೇಸಗಳಲ್ಲೂ ಮುತ್ತಪ್ಪ ರೈ ಅಕ್ವಿಟ್ ಆಗಿದ್ದಾರೆ. ಈಗ ಬಿಡದಿಯ ಸಮೀಪ ವಾಸಿಸುತ್ತಿರುವ ಮಾಜಿ ಭೂಗತ ದೊರೆಯ ಒಲವು ಸಮಾಜ ಸೇವೆಯತ್ತ ಹೊರಳಿರುವುದು ಸ್ಪಷ್ಟ. ತಮ್ಮ ಪಾತಕಲೋಕದ ಅನುಭವಗಳು, ಈಗಿನ ವ್ಯವಹಾರಗಳು, ಭವಿಷ್ಯದ ಯೋಜನೆಗಳು, ತಮ್ಮ ಕುರಿತು ಬರಲಿರುವ ಸಿನೆಮಾ, ಮುಂದೆ ವಹಿಸಿಕೊಳ್ಳಲಿರುವ ಗೌರವ ಸಂಪಾದಕ ಹುದ್ದೆ... ಹೀಗೆ ಹಲವು ವಿಚಾರಗಳನ್ನು `ವಿಕ್ರಾಂತ ಕರ್ನಾಟಕ'ದ ಪ್ರತಿನಿಧಿಯ ಮುಂದೆ ಬಿಚ್ಚಿಟ್ಟಿದ್ದಾರೆ ಮುತ್ತಪ್ಪ ರೈ. . . .


ಕಲ್ಲು ಬಂಗಲೆಗೆ ಮೈತುಂಬ ಕಣ್ಣುಗಳು!

ಒಮ್ಮೆ ಭೂಗತ ಲೋಕಕ್ಕೆ ಪ್ರವೇಶ ಪಡೆದರೆ ಮುಗಿದೇ ಹೋಯಿತು; ಪಾತಕಗಳು, ಕುಕೃತ್ಯಗಳು ತನ್ನಿಂತಾನೇ ಘಟಿಸುತ್ತಾ ಹೋಗುತ್ತವೆ. ಒಂದು ಪಾತಕ ಇನ್ನೊಂದಕೆ, ಮತ್ತೊಂದಕ್ಕೆ, ಮಗದೊಂದಕ್ಕೆ ಪ್ರೇರೇಪಿಸುತ್ತದೆ: ಪ್ರಚೂದಿಸುತ್ತದೆ. ಕೊನೆಗೆ ಅದು ಎಲ್ಲಿಂದ ಎಲ್ಲಿಗೋ ತಂದು ನಿಲ್ಲಿಸಿಬಿಡುತ್ತದೆ. . . . .


ಚಾಮುಂಡಿ ಕಾಳಗ ಯಾರ ತಲೆ ಉರುಳಲಿದೆ

ಚಾಮುಂಡೇಶ್ವರಿ ಚುನಾವಣೆ ಹಣದ ಹೊಳೆಯಲ್ಲಿ ತೇಲುತ್ತಿರುವುದೇನೋ ನಿಜ. ಆದರೆ ಬರೀ ಹಣ ಮಾತ್ರ ಇಲ್ಲಿ ಮುಖ್ಯವಾಗಿಲ್ಲ. ಜಾತಿಬಲ, ಹೆಂಡದ ಬಲ, ಹಾಗೇ ತೋಳ್ಬಲವೂ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿದೆ. ಹಾಗೆಯೇ ಎಲ್ಲ ಪಕ್ಷಗಳೂ ತಮ್ಮ ತಂತ್ರಗಾರಿಕೆಯಲ್ಲಿ ಒಂದನ್ನೊಂದು ಮೀರಿಸುತ್ತಿದೆ. ಇದೆಲ್ಲವೂ ಯಾತಕ್ಕಾಗಿ ಗೊತ್ತೆ?


ಕುವೈತ್ ಪಾಪಕೂಪದಿಂದ ಪಾರಾದ ಗಾಯಿತ್ರಿಯ ಕತೆ

ಲೋಕಾಯುಕ್ತರ ಕಾರ್ಯವ್ಯಾಪ್ತಿ ಏನು? ಭ್ರಷ್ಟ ಅಧಿಕಾರಿಗಳನ್ನು ಹಿಡಿಯುವುದೆ? ಲಂಚದ ಸಾಮ್ರಾಜ್ಯವಾಗಿರುವ ಸರ್ಕಾರಿ ಕಚೇರಿಗಳನ್ನು ಜಾಲಾಡಿ ತಿಮಿಂಗಲಗಳಿಂದ ಸಾರ್ವಜನಿಕರಿಗೆ ರಕ್ಷಣೆ ನೀಡುವುದೇ? ಲಂಚಕೋರ ಪೊಲೀಸರು, ವೈದ್ಯರನ್ನು ಹಿಡಿದು ಸರ್ಕಾರದ ವಶಕ್ಕೆ ಒಪ್ಪಿಸುವುದೇ? ಅಥವಾ ಅದಕ್ಕಿಂತ ಮಿಗಿಲಾದದ್ದು ಬೇರೇನಾದರೂ ಇದೇಯೆ? ಅಂಥ ಒಂದು ಮಾನವೀಯ ಹಿನ್ನೆಲೆಯ ಪ್ರಕರಣವೊಂದು ಮೊದಲ ಬಾರಿಗೆ ವೆಂಕಟಾಚಲ ಅವರು ಲೋಕಾಯುಕ್ತರಾಗಿದ್ದ ಕಾಲದಲ್ಲಿ ದಾಖಲಾಯಿತು. ಲೋಕಾಯುಕ್ತರ ಕಾರ್ಯವ್ಯಾಪ್ತಿ ದೊಡ್ಡದು. . .


ಬಂಗಾರಪ್ಪ ಲೆಕ್ಕಾಚಾರವೇ ಬೇರೆ...

ಚಾಮುಂಡೇಶ್ವರಿ ಚುನಾವನೆಯಲ್ಲಿ ತಮ್ಮ ಪಕ್ಷದ ವತಿಯಿಂದ ಅಭ್ಯರ್ಥಿಯನ್ನು ಇಳಿಸುವುದರ ಮೂಲಕ ಬಂಗಾರಪ್ಪ ಅವರು ತಮ್ಮದೇ ಆದ ಸರಳ ರಾಜಕೀಯ ಲೆಕ್ಕಾಚಾರಕ್ಕೆ ಇಳಿದಿದ್ದಾರೆ ಎಂದು ರಾಜಕೀಯ ವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿದೆ. . . .


ಧಾರಾವಾಹಿ - ಎದೆಯ ಕೂಗನು ಮೀರಿ... - ಅಧ್ಯಾಯ -೩

ಪ್ರೀತಿಯ ಅಪ್ಪ,
ನೀವೆಲ್ಲರೂ ಕ್ಷೇಮ ಮತ್ತು ಆರೋಗ್ಯದಿಂದ ಇರುವಿರೆಂದು ಭಾವಿಸುತ್ತೇನೆ. ನಾನು ಅಮೇರಿಕಾಗೆ ಬಂದು ೬ ತಿಂಗಳ ದೀರ್ಘ ಕಾಲವಾಯ್ತು, ಆದರೆ ನಾನು ಕ್ಷೇಮವಾಗಿದ್ದೇನೆ. ಭಾರತದಲ್ಲಿ ನಾವು ಒಳಪಡುವ ದಂಡನಾತ್ಮಕ ವಿದ್ಯಾಕ್ರಮಕ್ಕೆ ಹೋಲಿಸಿದರೆ ಈ ಪದವಿ ವಿದ್ಯಾಭ್ಯಾಸ ಸುಲಭವಾಗಿದೆ ಮತ್ತು ಇಲ್ಲಿನ ಸ್ಪರ್ಧೆ ಅಷ್ಟೇನೂ ತೀಕ್ಷ್ಣವಾಗಿಲ್ಲ. . . .


ಮಕ್ಕಳಿಗಾಗಿ ಪಾಪು ಗಾಂಧಿ
ಸೊಗಸುಗಾರ ಪುಟ್ಸಾಮಿ

ಎಲ್ಲದಕ್ಕೂ ಕಾರಣ ಆ ನಿಲುವುಗನ್ನಡಿ. ಆದರೆ ತಪ್ಪು ಕನ್ನಡಿಯದ್ದಲ್ಲ. ಬೆಲ್ಜಿಯಂ ದೇಶದಿಂದ ತರಿಸಿ ಕೊಠಡಿಯ ಗೋಡೆಗೆ ತೂಗುಹಾಕಲಾಗಿದ್ದ ಆ ಕನ್ನಡಿ ಸ್ಫಟಿಕದಂತೆ ಪ್ರತಿಫಲಿಸುತ್ತಿತ್ತು. ಅದರೆದುರು ನಿಂತರೆ ಕಾಲವೆಂಬುದು ಕಾಲಿನ ಕಸ. . .


ಸೋಜಿಗದ ಜಗ
ಅಂತರಿಕ್ಷದಲ್ಲಿ ಗಾಲ್ಫ್!

ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಗಾಲ್ಫ್ ಆಡಿದರೆ ಹೇಗಿರಬಹುದು? ಈ ಚಿತ್ರ ನೋಡಿ! ರಷ್ಯಾದ ಗಗನಯಾತ್ರಿ ಮಿಖಾಯಿಲ್ ಬಾಹ್ಯಾಕಾಶ ಕೇಂದ್ರದಲ್ಲಿ ಗಾಲ್ಫ್ ಆಡುವ ಮೂಲಕ ವಿಸ್ಮಯ ಮೂಡಿಸಿದ್ದಾನೆ. ಆತ ಹೊಡೆದ ಚೆಂಡು ೪೮ ಬಾರಿ ಭೂಮಿಯನ್ನು ಸುತ್ತಿ, ಭಸ್ಮವಾಗಲಿದೆ ಆದರೆ ಈಗಲ್ಲ. . . .


ಟರ್ಕಿ ತುರುಕುವ ಸಂಭ್ರಮ

ನ್ಯೂಯಾರ್ಕ್‌ನಲ್ಲಿ ನಡೆದ `ಟರ್ಕಿ ಈಟಿಂಗ್ ಚಾಂಪಿಯನ್‌ಶಿಪ್'ನಲ್ಲಿ ಟರ್ಕಿಯನ್ನು ಮೆಲ್ಲುತ್ತಿರುವುದು. ಸಾವಿರಾರು ಅಮೇರಿಕನ್ನರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. . . .


ದಾಖಲೆ ಮೊಟ್ಟೆ

ಬೆಲ್ಜಿಯಂನ ಚಾಕೊಲೇಟ್ ಉತ್ಪಾದನಾ ಕಂಪೆನಿ `Guylian' ಚಾಕೊಲೇಟಿನಿಂದ ತಯಾರಿಸಿದ `ಅಂಡಾಕೃತಿ' ಇದು. ೮.೩೨ ಮೀಟರ್ ಎತ್ತರದ ಈ ಬೃಹತ್ ಚಾಕೋಲೇಟ್ ಮೊಟ್ಟೆ ಗಿನ್ನೆಸ್‌ನಲ್ಲಿ ಸ್ಥಾನ ಪಡೆದಿದೆ. . . .
 

ಅಂತರ -- ಜ.ನಾ. ತೇಜಶ್ರೀರವರ ಕವನ

ಅಂದು ನಿನ್ನ
ಗಟ್ಟಿಮಾತು ಕೇಳುತ್ತಿರಲಿಲ್ಲ.
ಸ್ಪಷ್ಟವಾಗಿ
ಗಾಳಿ
ಎದುರಿಂದ ಬೀಸುತ್ತಿತ್ತು
ಹೊತ್ತೊಯ್ಯುವಂತೆ
ಇಬ್ಬರನೂ . . .


`ಏರೋಬಿಕ್' ಭತ್ತದ ಬೆಳೆಯ ಸಂಶೋಧನೆ

ಇದು ಇನ್ನು ಪ್ರಾಯೋಗಿಕ ಹಂತದಲ್ಲಿ ಇದ್ದು, ಬೆಂಗಳೂರು ಕೃಷಿ ವಿದ್ಯಾಲಯದ ಜಮೀನಿನಲ್ಲಿ ಹಾಗೂ ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರಗಳ ರೈತರ ಭೂಮಿಯಲ್ಲಿ ಇದರ ಪ್ರಕ್ರಿಯೆ ನಡೆಯುತ್ತಿದೆ. ಇನ್ನು ಆರು ತಿಂಗಳಲ್ಲಿ ಅಂದರೆ ಮುಂದಿನ ವರ್ಷ ಏರೋಬಿಕ್ ವಿಧಾನದಲ್ಲಿ ಭತ್ತ ಬೆಳೆಯುವ ಕೃಷಿ ಪದ್ಧತಿ ಅಧಿಕೃತವಾಗಿ ಬಿಡುಗಡೆಯಾಗಲಿದೆ ಎನ್ನುತ್ತಾರೆ ಡಾ. ಶೈಲಜಾ ಹಿತ್ತಲಮನಿ. . . .


ಎಫ್.ಎಂ ಎಂಬ `ಬೆಕ್ಕಿನಕೊರಳಿಗೆ ಗಂಟೆ ಕಟ್ಟುವವರಾರು?'

ಇತಿಹಾಸ ಮರುಕಳಿಸುತ್ತಿದೆ. ಜನ ಮತ್ತೆ ರೇಡಿಯೋದ ಕಡೆ ವಾಲುತ್ತಿದ್ದಾರೆ. ೭೦-೮೦ರ ದಶಕದ ನಂತರ ಟಿವಿಯ ಅಬ್ಬರದಿಂದ ಮೂಲೆಗುಂಪಾಗಿ, ಹಳ್ಳಿ ಹಿರಿಯರ ಕೈ ಸೇರಿದ್ದ, ಅಟ್ಟದ ಧೂಳು ತಿನ್ನುತ್ತಿದ್ದ ರೇಡಿಯೋಗೆ ಕಾಯಕಲ್ಪವಾಗಿದೆ. ಸಂತೋಷ. ಜನ ಬಸ್ಸಲ್ಲಿ, ಕ್ಯೂನಲ್ಲಿ ಕಾಯಬೇಕಾದಾಗ ಮೊದಲಿನಂತೆ ಬೋರೆದ್ದು ಹೋಗಬೇಕಾಗಿಲ್ಲ . . .


ಬಚ್ಚನ್ ಬೆಂಬಲಕ್ಕೆ ನಿಂತ ಬೆಂಬಲಿಗರ ಬಂಧನ

ಹಿಂದಿ ಚಲನಚಿತ್ರ ರಂಗದ ಮೇರುನಟ ಅಮಿತಾಬ್ ಭಚ್ಚನ್ ಅವರ ಪುತ್ರ ಅಭಿಷೇಕ್ ಭಚ್ಚನ್ ಅವರಿಗೆ ಉತ್ತರ ಪ್ರದೇಶ ಸರ್ಕಾರ ಸನ್ಮಾನಿಸಿದ ಒಂದೆರಡು ದಿನಗಳಲ್ಲೇ ಕಾಂಗ್ರೆಸ್ ಪಕ್ಷದ ಆಡಳಿತಾರೂಢ ಗೋವಾ ಸರ್ಕಾರ ಭಚ್ಚನ್ . . . .


ಮೂಳೆಮುರಿತ ಕಾಯಿಲೆ ಬಾಲಕನ ವ್ಯಥೆ

ಚೆನ್ನೈವಾಸಿ ಹತ್ತು ವರ್ಷದ ಪೋರ ರಾಜಾರಾಮನ್ ಹುಟ್ಟಿನಿಂದಲೂ ವಿಲಕ್ಷಣ ಕಾಯಿಲೆಯಿಂದ ನರಳುತ್ತಿದ್ದಾನೆ. ಅದೇನೆಂದರೆ ಓಸ್ಟೆಯೋ ಜನೆಸಿಸ್ ಇಂಪರ್‍ಫೆಕ್ಟಾ (ಮೂಳೆಗಳಲ್ಲಿ ಪ್ರೋಟಿನಾಂಶಗಳ ಕೊರತೆ). ಇದರಿಂದಾಗಿ ಈ ಪೋರನ ಮೈಯಲ್ಲಿನ ಮೂಳೆಗಳೆಲ್ಲವೂ ಒಂದಿಲ್ಲೊಂದು ಕಾರಣದಿಂದ ದಿನದಿಂದ ಮುರಿಯುತ್ತಲೇ ಇರುತ್ತವೆ. ಮೂಳೆ ಮುರಿತ ಎಂದರೆ ನಮ್ಮ


ಕರೀಂ ನಗರದ ಚುನಾವಣೆ ರಂಗು

ತೆಲಂಗಾಣ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಕೆ. ಚಂದ್ರಶೇಖರ್ ರಾವ್ ಅವರು ರಾಜೀನಾಮೆ ನೀಡಿದ ನಂತರ ತೆರವಾಗಿರುವ ಕರೀಮ ನಗರ ಲೋಕಸಭೆ ಕ್ಷೇತ್ರದಲ್ಲಿ ಉಪಚುನಾವಣೆಯು ದಿನದಿಂದ ದಿನಕ್ಕೆ ರಂಗೇರುತ್ತಿದೆ. . . .


ಕರುಣಾಕರನ್ ಮಹಾತ್ಮೆ

ಕೇರಳ ರಾಜ್ಯ ರಾಜಕಾರಣದ ಭೀಷ್ಮ ಎಂದೇ ಕರೆಯಲ್ಪಡುವ ಮಾಜಿ ಮುಖ್ಯಮಂತ್ರಿ ಕೆ. ಕರುಣಾಕರನ್ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. . . .

 

ಮಾಲಿನ್ಯ ಮಂಡಳಿ ಮುಚ್ಚಿ- ಕೋರ್ಟ್ ತರಾಟೆ

ಐದು ಬೃಹತ್ ಸಂಸ್ಥೆಗಳಿಂದ ಹೊರಹೊಮ್ಮುತ್ತಿದ್ದ ಮಾಲಿನ್ಯದ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣೆ ನಡೆಸಿದ ಮುಂಬೈ ಉಚ್ಚ ನ್ಯಾಯಾಲಯದ ಗೋವಾ ವಿಭಾಗೀಯ ಪೀಠ, ಗೋವಾ ಮಾಲಿನ್ಯ ನಿಯಂತ್ರಣ ಮಂಡಳಿ ಸೂಕ್ತವಾಗಿ ಕಾರ್ಯ ನಿರ್ವಹಿಸಲು ವಿಫಲವಾದಲ್ಲಿ ಮಾಲಿನ್ಯ ಮಂಡಳಿಯೇ ಮುಚ್ಚಬೇಕಾದ ಪರಿಸ್ಥಿತಿ ಬಂದೀತು ಎಂದು ಎಚ್ಚರಿಕೆ ನೀಡಿದೆ.


ಪಾಂಡುರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆ

`ಸಂಯೋಜಿತ' ಚಿಕಿತ್ಸಾ ಪದ್ಧತಿಯ ಮೂಲಕ `ಆನೆಕಾಲು' ರೋಗಕ್ಕೆ ಯಶಸ್ವೀ ಚಿಕಿತ್ಸೆ ಕಂಡುಹಿಡಿದು ವೈದ್ಯಕೀಯ ಕ್ಷೇತ್ರದಲ್ಲೇ ಒಂದು ಸಂಚಲನ ಮೂಡಿಸಿದ ಇನ್‌ಸ್ಟಿಟ್ಯೂಟ್ ಆಫ್ ಅಪ್ಲೈಡ್ ಡರ್ಮಿಟಾಲಜಿ(ಐಎಡಿ) ಇದೀಗ ಬಿಳಿತೊನ್ನಿಗೆ ಪರಿಣಾಮಕಾರಿ ಚಿಕಿತ್ಸೆ ಕಂಡುಹಿಡಿಯುವ ಮೂಲಕ ಇನ್ನೊಂದು ಮೈಲಿಗಲ್ಲು ನೆಟ್ಟಿದೆ. . . .


ಬಾಂಬೆ ಮಸಾಲಾ
ಕುನಾಲ್

ಹೀರೋ ಆಗಬೇಕಾದರೆ ಒಳ್ಳೆಯ ಲುಕ್ ಇರಬೇಕು. ಇದು ಬಾಲಿವುಡ್‌ನಲ್ಲಿ ಮಾತ್ರ ಸಾಧ್ಯ. ಹಾಗೆ ನೋಡಿದರೆ ಬಾಲಿವುಡ್‌ನ ಬಹುತೇಕ ಹೀರೋಗಳೆಲ್ಲರೂ ಮೊದಲು ಮೋಡೆಲ್‌ಗಳಾಗಿ ಮಿಂಚಿ ಬಂದವರೆ. ಜಾನ್ ಅಬ್ರಹಾಂ, ಉಪೇನ್ ಪಟೇಲ್, ಕುನಾಲ್ ಕಪೂರ್, ದಿನೂ ಮೋರಿಯಾ ಹೀಗೆ ಪಟ್ಟಿ ದೊಡ್ಡದಿದೆ.


ನೇಹಾಳಿಗೊಂದು ನೆಪ

ಬಾಲಿವುಡ್ ಚಿತ್ರಗಳೇ ವಿಚಿತ್ರವಾಗಿರುತ್ತದೆ ಅನ್ನೋ ವಾದವೊಂದಿದೆ. ಆದರೆ ಚಿತ್ರಗಳ ಹೆಸರೇ ವಿಚಿತ್ರ ಅನ್ನುತ್ತಿದ್ದಾಳೆ ನಟಿ ನೇಹಾ ದೂಪಿಯಾ. ತನ್ನ ಮುಂದಿನ ಚಿತ್ರ `ಏಕ್ ಚಾಲೀಸ್ ಕೀ ಲಾಸ್ಟ್ ಲೋಕಲ್' ಬಗ್ಗೆ ಮಾತಾಡುವಾಗ ಈ ಮಾತು ಹೊರಬಂತು. . . .


ಕರಣ್ ಕಮಾಲ್

ಬಾಲಿವುಡ್‌ನಲ್ಲಿ ಸ್ಪೆಷಾಲಿಟಿಗೆ ಇನ್ನೊಂದು ಹೆಸರು ಕರಣ್ ಜೋಹರ್ ಅಂತಾರೆ ಕೆಲವರು. ಆದರೆ ಕರಣ್ ಏನೇ ಮಾಡಿದರು, ಹೇಗೇ ಚಿತ್ರ ತೆಗೆದರೂ ಅದರಲ್ಲೊಂದು ಅನನ್ಯ ಸರ್‍ಪ್ರೈಸ್ ಜೊತೆಗೆ ಹೊಸತನವಿರುತ್ತದೆ ಅನ್ನುವ ಮಾತನ್ನು ಅಲ್ಲಗೆಳೆಯುವ ಹಾಗಿಲ್ಲ.


`ತಾರಾ' ಲೋಕ

ಬಾಲಿವುಡ್‌ನಲ್ಲಿ ಕಾಮಿಡಿಯ ಕಮಾಲ್‌ಗೆ ಬಹುಶಃ ಬಹುತೇಕ ಎಲ್ಲ ನಟಿಯರು ಬೆರಗಾಗಿದ್ದಾರೆ ಅನ್ನಿಸುತ್ತದೆ. ಈಗ ಮಾಜಿ ವಿಶ್ವಸುಂದರಿ ಲಾರಾದತ್ತಾಳ ಸರದಿ. ಸದಾ ಸುದ್ದಿಯಲ್ಲಿರುವುದನ್ನು ಆದಷ್ಟು ಅವೈಡ್ ಮಾಡುವ ಲಾರಾದತ್ತ ಯಾವಾಗಲೂ ತಟಸ್ಥ. . . .


ಸೆಲೀನಾ ಸೆಳೆತ

ನಟಿ ಸೆಲೀನಾ ಜೆಟ್ಲಿ ಸೆಳೆಯುವುದನ್ನು ನಿಲ್ಲಿಸಿ ಈಗ ನಗಿಸಲು ಹೊರಟಿದ್ದಾಳೆ. ಸೀರಿಯಲ್ ಕಿಸ್ಸರ್ ಇಮ್ರಾನ್ ಅಶ್ಮಿಯೊಂದಿಗೆ `ಜವಾನಿ ದಿವಾನಿ'ಯಲ್ಲಿ ಹಾಟ್ ಆಗಿ ಕಾಣಿಸಿಕೊಂಡ ನಂತರ ಈವರೆಗೆ ಮಾದಕತೆಯ ಸಹವಾಸ ಸಾಕೆನಿಸಿದೆ. ಸೆಲೀನಾ ನಂತರ ನಟಿಸಿದ. . . . 


ದೇಶಾವರಿ
ಗೆಳೆಯನ ಪುತ್ರನ ವ್ಯಾಮೋಹ

ಉತ್ತರ ಪ್ರದೇಶ ಸರಕಾರ ಕೊಡಮಾಡುವ `ಯಶ್ ಭಾರತಿ' ಪ್ರಶಸ್ತಿಗೆ ಎಷ್ಟರ ಮಟ್ಟಿಗೆ ಕಿಮ್ಮತ್ತಿದೆಯೋ ಗೊತ್ತಿಲ್ಲ; ಆದರೆ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ `ಯಶ್ ಭಾರತಿ' ಪ್ರಶಸ್ತಿಯನ್ನು ತಮ್ಮ ಖಾಸಾ ದೋಸ್ತು ಬಿಗ್‌ಬಿ ಅಮಿತಾಬ್ ಬಚ್ಚನ್ ಪುತ್ರ ಅಭಿಷೇಕ್‌ಗೆ ನೀಡುವ ಮೂಲಕ ವಿವಾದವನ್ನು ಆಹ್ವಾನಿಸಿಕೊಂಡಿದ್ದಾರೆ.


ಉದ್ಯಮಿಯ ಕಾಳಜಿ

ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಉದ್ಯಮಿ ರಾಹುಲ್ ಬಜಾಜ್ ವಿನೂತನ ವಿಧೇಯಕವೊಂದನ್ನು ಮಂಡಿಸುವ ಬಗ್ಗೆ ಪ್ರಸ್ತಾಪ ಮುಂದಿಟ್ಟಿದ್ದಾರೆ. ಏನದು ವಿಧೇಯಕ? . . . .


ಏಡ್ಸ್‌ನಲ್ಲಿ ನಂ.೧

೫.೭ ಕೋಟಿ ಏಡ್ಸ್ ಪೀಡಿತರು ನಮ್ಮ ದೇಶದಲ್ಲಿದ್ದಾರೆ! ಅಷ್ಟೇ ಅಲ್ಲ, ಏಡ್ಸ್ ರೋಗಿಗಳ ಪಟ್ಟಿಯಲ್ಲಿ ಭಾರತ ನಂ.೧ ಇಂಥದೊಂದು ಆಘಾತಕಾರಿ ಅಂಶವನ್ನು ವಿಶ್ವಸಂಸ್ಥೆಯ ೨೦೦೬ನೇ ಏಡ್ಸ್ ಕುರಿತ ವರದಿ ಬಹಿರಂಗ ಪಡಿಸಿದೆ. . . .


ಸಿಯಾಲ್ ಮತ್ತೆ ಹುಕುಂ

ಕೆಲವು ವಾರಗಳ ಹಿಂದೆ ಇದೇ ಅಂಕಣದಲ್ಲಿ ಪೊಲೀಸ್ ಮಹಾನಿರ್ದೇಶಕ ಬಿ.ಎಸ್. ಸಿಯಾಲ್ ಸಾಹೇಬರು ಸುದ್ದಿ ಮಾಡಿದ್ದರು. ಈಗ ಮತ್ತೆ ಸುದ್ದಿಯಾಗುತ್ತಿದ್ದಾರೆ: ಎರಡೂ ಒಂದೇ ಕಾರಣಕ್ಕಾಗಿ. . . .


ನಮೋ ಚಾಮುಂಡೇಶ್ವರಿ - ಕಗ್ಗೆರೆ ಪ್ರಕಾಶ್‌ರವರ ಕವನ

ಚಂಡಿ- ಚಾಮುಂಡಿಗೀಗ
ಇಬ್ಬರು ಮಹಿಷಾಸುರರು
ಒಬ್ಬ ಮಹಿಷನ ಸಂಹಾರಕ್ಕೆ
ಊರುದ್ದ ಚಾಚಿದ್ದಳು ನಾಲಿಗೆ
ಚಾಮುಂಡಿ . . .


ಮಿಸ್ಟರ್ ತಿಕ್ಲಪ್ಪ! - - ಶಿ.ಜು. ಪಾಶರವರ ಕವನ

ಚಹಾ ಕುಡಿದಾದ ಮೇಲೆ
ಉಳಿದು ಬಿಡುವ
ಲೋಟ, ಸಾಸರ್,
ಇಷ್ಟಿಷ್ಟೇ ಸಿಗರೇಟು
ಸೇದಾದ ಮೇಲೆ ಸುಡದಿರುವ
ಫಿಲ್ಟರ್
ಜೊತೆಗಿಟ್ಟುಕೊಂಡು ಹೊರಟ! . . .

 

ಧಾರಾವಾಹಿ - ಜಾಣೆಯಾಗಿರು ನನ್ನ ಮಲ್ಲಿಗೆ - ಅಧ್ಯಾಯ - ೮

`ಶ್ರೀಕಂಠನ್ ಹೆಂಡತಿ ಬದುಕೇ ಇದ್ದಾರಂತೆ!' ಬೆನ್ನ ಹಿಂದೆ ಚಂಗಮ್ಮ ಹಲ್ಲು ಕಿರಿಯುತ್ತಾ ನಿಂತಿದ್ದನ್ನು ಕಂಡು ಯುಕ್ತಾ ಕೋಪ ನೆತ್ತಿಗೇರಿತು.
`ಏನಮ್ಮಾ? ಕದ್ದು ಮುಚ್ಚಿ ಇನ್ನೊಬ್ಬರ ಮಾತು ಕೇಳಬಾರದೂಂತ ಗೊತ್ತಿಲ್ವಾ? ಎಂದಳು ಗಡುಸಾಗಿ.' `ಇಲ್ಲ ಕಣಮ್ಮಾ, ನಾ ಏನೂ ಕೇಳಿಸ್ಕೊಂಡಿಲ್ಲ. ತಿಂಡಿಗೆ ಒಳಗೆ ಬರುತ್ತೀರೋ, ಮೇಲೆ ತಂದು ಕೊಡ್ಲೋ ಅಂತ ಕೇಳಕ್ಕೆ ಬಂದೆ'


ಒಳಮನಸ್ಸು
ಸ್ಕಿಜೋಫ್ರೇನಿಯಾ

ಜಗತ್ತಿನ ಒಟ್ಟು ಜನಸಂಖ್ಯೆಯ ಪೈಕಿ ಶೇ. ಒಂದರಷ್ಟು ಜನರು ಸ್ಕೀಜೋಫ್ರೇನಿಯಾ ಕಾಯಿಲೆಯಿಂದ ನರಳುತ್ತಿರುವುದಾಗಿ ಹೊಸ ಅಧ್ಯಯನವೊಂದು ಹೇಳಿದೆ. ವ್ಯಕ್ತಿಯ ಯೋಚನೆ, ಭಾವನೆ ಮತ್ತು ಕ್ರಿಯೆಯನ್ನು ಬುಡಮೇಲುಗೊಳಿಸುವ ಕಾಯಿಲೆ ಸ್ಕಿಜೋಫ್ರೇನಿಯಾ. ಈ ಕಾಯಿಲೆಯಿಂದ ನರಳುತ್ತಿರುವರು ವಾಸ್ತವ ಮತ್ತು ಕಲ್ಪನೆಯ ಮಧ್ಯೆ ಇರುವ ವ್ಯತ್ಯಾಸವನ್ನು ಗುರುತಿಸಲಾರರು; ಒಂದು ರೀತಿಯ ಭ್ರಮೆ ಅವರನ್ನು . . .

 

ಶೃಂಗಾರ
ದೇಹಸ್ವಾಸ್ಥ್ಯ ಮತ್ತು ಸೌಂದರ್ಯ

ಮುಖದ ಸೌಂದರ್ಯದ ಜೊತೆಜೊತೆಗೆ ದೇಹದ ಸ್ವಾಸ್ಥ್ಯದೆಡೆಗೂ ಹೆಚ್ಚು ಗಮನವನ್ನು ನೀಡಬೇಕಾಗಿರುವುದು ಅತ್ಯಗತ್ಯ. ಸಣ್ಣಪುಟ್ಟ ಶಾರೀರಿಕ ಅಸ್ವಸ್ಥತೆಯೂ ವದನವನ್ನು ಕಳಾಹೀನಗೊಳಿಸುತ್ತದೆ. ಯಾವ ಪ್ರಸಾಧನಗಳಿಂದಲೂ ಅಂದವನ್ನು ಹಿಡಿದಿಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸೌಂದರ್ಯ ಕೇವಲ ಕಾಸ್ಮೆಟಿಕ್‌ಗಳಿಂದ ಉಂಟಾಗುವುದಿಲ್ಲ. ಬದಲಿಗೆ ಉತ್ತಮ ಆರೋಗ್ಯದಿಂದ ಮಾತ್ರ ನಿಗಿನಿಗಿಸಲು ಸಾಧ್ಯ! ಜೊತೆಗೆ ಆಕರ್ಷಕ ವ್ಯಕ್ತಿತ್ವದೆಡೆಗೆ ಗಮನವಿತ್ತರೆ ನೀವು ಸಮಾಜದಲ್ಲಿ ವಿಶೇಷ ಸ್ಥಾನವನ್ನು ನಿಸ್ಸಂಶಯವಾಗಿ ಗಳಿಸಿಕೊಳ್ಳುವಿರಿ. . . .


ಕೊಡಗಿನಲ್ಲಿ ಹೀಗೊಂದು ಪ್ರವಾಸೀ ತಾಣ

ವೀರಭೂಮಿ ಜನರನ್ನು ಆಕರ್ಷಿಸಿರುವುದು ತನ್ನ ವಿಭಿನ್ನತೆಯಿಂದಲೇ ಪುಟ್ಟಪುಟ್ಟ ಅರಮನೆಗಳಂತಿರುವ ಕುಟೀರಗಳ ಹೆಸರನ್ನು ಕೇಳಿ... ಕದಂಬ, ಚಾಲುಕ್ಯ, ವಿಜಯನಗರ, ರಾಷ್ಟ್ರಕೂಟ, ಪುಲಿಕೇಶಿ... ಒಟ್ಟಾರೆ ವೀರಭೂಮಿ ನಾಡಿನ ಸಂಸ್ಕೃತಿಯನ್ನು ಮೈತುಂಬ ತುಂಬಿಕೊಂಡು ನಿಂತಿದೆ. ಸುತ್ತಲೂ ಜಾನಪದದ ಪರಿಮಳವನ್ನು ಹರಡಿದೆ. . . .


ಮೋಡಿಗಾರ - ಪ್ರೇಮಶೇಖರ್‌ರವರ ಕತೆ

ಮೂರು ದಿನಗಳ ಕಾನ್‌ಫರೆನ್ಸಿಗೆಂದು ಮೊಟ್ಟಮೊದಲ ಬಾರಿಗೆ ಈ ಅಪರಿಚಿತ ಊರಿಗೆ ಬಂದಿದ್ದೆ. ಮೊದಲ ದಿನದ ಕಾರ್ಯಕ್ರಮಗಳು, ರಾತ್ರಿಯ ಊಟ ಮುಗಿದದ್ದೇ ಹೋಟೆಲ್ ಕೋಣೆ ಸೇರಿಕೊಂಡೆ. ಎರಡು ದಿನಗಳ ರೈಲು ಪ್ರಯಾಣ, ಇಡೀ ದಿನದ ಚರ್ಚೆಗಳಿಂದಾಗಿ . . .


ನನ್ನ ಬಾಳು ಹಸಿರಾಗಲು ನಾಟಕರಂಗವೇ ಕಾರಣ

ಪ್ರೇಕ್ಷಕರಿಂದ `ನಾಟ್ಯಭೂಷಣ' ಎಂಬ ಬಿರುದನ್ನೂ ಪಡೆದಿರುವ ಬಾಳಪ್ಪನವರು ನವರಸಗಳನ್ನೂ ಕರಗತ ಮಾಡಿಕೊಂಡಿದ್ದ ನಟ. ಇವರು ನಿರ್ವಹಿಸಿದ ಪಾತ್ರಗಳೂ ಹಲವು ಬಗೆಯವು. `ಬಸವೇಶ್ವರ' ನಾಟಕದಲ್ಲಿ ಮುಖ್ಯಪಾತ್ರಧಾರಿಯಾದರೆ, ಹರಿಶ್ಚಂದ್ರ ನಾಟಕದಲ್ಲಿ ಚಂದ್ರಮತಿಯ ಪಾತ್ರ. . . .

 

ದೋಹಾ ಮತ್ತು ಒಲಂಪಿಕ್ಸ್

ದೋಹಾ... ಮರುಭೂಮಿ ಮತ್ತು ಸಮುದ್ರ ದಂಡೆಯ ಸುಂದರ ನಗರ. ಜತೆಗೆ ಐತಿಹಾಸಿಕ ಹಿನ್ನಲೆ ಇರುವ ಕತಾರ್‌ನ ರಾಜಧಾನಿ ಕೂಡ. ಮೂರು ನಾಲ್ಕು ದಶಕಗಳ ಹಿಂದೆ ಮರುಭೂಮಿಯಲ್ಲಿ ಮರೀಚಿಕೆಯಾಗಿದ್ದ ದೋಹಾ, ಈಗ ಗಲ್ಫ್ ರಾಷ್ಟ್ರದ ಶ್ರೀಮಂತ ನಗರ. ಅಷ್ಟೇ ಯಾಕೆ, ವಿಶ್ವದಲ್ಲಿಯೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರಗಳ ಪೈಕಿ ಇದೂ ಅಗ್ರಸ್ಥಾನದಲ್ಲಿದೆ. . . .


ಗೋವಾದಲ್ಲಿ ಕೊಂಕಣಿ ಧ್ವನಿ-ಪ್ರತಿಧ್ವನಿ

ಗೋವಾದಲ್ಲಿ ಅಂತರ ರಾಷ್ಟ್ರೀಯ ಚಿತ್ರೋತ್ಸವ ಆರಂಭವಾಗಿದೆ. ಕನ್ನಡಿಗರ ದೊಡ್ಡ ಗುಂಪೇ ಅಲ್ಲಿ ನೆರೆದಿದೆ. ನಿರ್ಮಾಪಕರು, ನಿರ್ದೇಶಕರು, ಪತ್ರಕರ್ತರು ಹಾಗೂ ನಟಿಯರು ಗೋವಾದ ಸಂಭ್ರಮದಲ್ಲಿದ್ದಾರೆ. ಆದರೆ ಗೋವಾದ ತುಂಬಾ ಚಿತ್ರರಂಗದವರಿಗಿಂತ ಹೆಚ್ಚು ಪೊಲೀಸರೇ ಸೇರಿದ್ದಾರೆ ಎಂಬುದು ಪ್ರಮುಖ ವಿಚಾರ. ಕಾರಣ ವಿಐಪಿಗಳ ರಕ್ಷಣೆ. ಸೆಕ್ಯೂರಿಟಿಯ ದೃಷ್ಟಿಯಿಂದ ಗೋವಾವನು . . .


ಕಾಸರವಳ್ಳಿ ಆದ್ರೆ ಕಾಸೇ ಬೇಡ

ರಮ್ಯ ಬರ್ತ್‌ಡೇ ಬೇಡವೆಂದು ಹೇಳಿದ್ದು ಸುದ್ದಿಯಾಯಿತು. ತುಸು ನಿರಾಸೆಯೂ ಆಯಿತು. ಗೋವಾದಂಥ ಸುಂದರ ಊರಲ್ಲಿ ಚೆಲುವೆ ಕನ್ನಡತಿಯ ಜೊತೆ ಪುಟ್ಟ ಸಮಾರಂಭ ಮಿಸ್ ಆಯಿತಲ್ಲ ಎಂಬುದು ತುಸು ಬೇಸರ ತರಿಸಿದರೂ ರಮ್ಯ ಮಾಡಿದ ಇನ್ನೊಂದು ಸುದ್ದಿ ನಿಜಕ್ಕೂ ಎಲ್ಲರಲ್ಲೂ ಸಂಭ್ರಮ ಮೂಡಿಸಿತು. . . .


ನೋ ಮೋರ್ ಬರ್ತ್‌ಡೇ

ಇಡೀ ಚಿತ್ರೋತ್ಸವದಲ್ಲಿ ಎರಡು ದಿನ ಪುಟಪುಟನೆ ಚಿಗರೆಯಂತೆ ಓಡಾಡಿಕೊಂಡು, ಅವರಿವರನ್ನು ತಮಾಷೆ ಮಾಡಿಕೊಂಡಿದ್ದವಳು ನಟಿ ರಮ್ಯಾ. ಆದರೆ `ತನನಂ' ಚಿತ್ರ ಪ್ರದರ್ಶನದ ನಂತರ ಕಾಣಿಸಿಕೊಳ್ಳಲೇ ಇಲ್ಲ. `ಅಷ್ಟೆಲ್ಲ ಒಳ್ಳೆಯ ಚಿತ್ರಗಳಿದ್ದವು . . .


ತನನಂ... ಅದ್ಭುತ ನಿರಾಶೆ

ಕನ್ನಡದ ಚಿತ್ರಗಳಲ್ಲಿ ಈ ಬಾರಿ ಪ್ರದರ್ಶನವಾದ `ತನನಂ ತನನಂ' ಚಿತ್ರಕ್ಕೆ ನಿರೀಕ್ಷೆಗಿಂತಲೂ ಹೆಚ್ಚಿನ ಆಸಕ್ತರಿದ್ದರು. ಈಗಾಗಲೇ ದೇವೀರಿ, ಅಲೆಮಾರಿ, ಪ್ರೀತಿ ಪ್ರೇಮ ಪ್ರಣಯ, ಬಿಂಬ ಚಿತ್ರಗಳ ಮೂಲಕ ಗಮನ ಸೆಳೆದಿರುವ ನಿರ್ದೇಶಕಿ ಕವಿತಾ ಲಂಕೇಶ್ ಅವರ `ತನನಂ' ಪ್ರದರ್ಶನಕ್ಕೆ ಕನ್ನಡದವರು ಮಾತ್ರವಲ್ಲ ಎಲ್ಲ ಚಿತ್ರರಂಗದ ಜನರೂ ಅತ್ಯಂತ ಕುತೂಹಲದಿಂದ ಕಾದಿದ್ದರಂತೆ. ಆದರೆ ಚಿತ್ರ ಪ್ರದರ್ಶನ ಮುಗಿಯುವ ಮುಂಚೆಯೇ ಜನ ಖಾಲಿಯಾಗತೊಡಗಿದ್ದರು. . . .


ಕನ್ನಡದ ಕಂದನತ್ತ ಒಲವುLeelavati and Vinodh Raj

ಈವಾರ ಬಿಡುಗಡೆಯಾದ ಚಿತ್ರಗಳು ನಾಲ್ಕು. ನಿಮಗೆ ನೆನಪಿರಬಹುದು, ಕೇರ್ ಆಫ್ ಫುಟ್‌ಪಾತ್ ಎಂಬ ಚಿತ್ರಕ್ಕೆ ಚಿತ್ರಮಂದಿರ ಸಿಗದೆ ಸಣ್ಣ ಗದ್ದಲ ಎದ್ದಿತ್ತು. ನಿರ್ಮಾಪಕ ಶ್ರೀಕಾಂತ್ ಈ ಬಗ್ಗೆ ಪತ್ರಿಕಾಗೋಷ್ಠಿ ಕರೆದು ಚಿತ್ರಮಂದಿರಗಳ ಗೊಂದಲವನ್ನು ಜನರೆದುರು ಇಟ್ಟಿದ್ದರು. ಅದಲ್ಲದೆ ಚಿತ್ರಮಂದಿರಕ್ಕಾಗಿ ಅಂಬರೀಶ್ ಮುಂತಾದವರ ಮೊರೆ ಹೋಗಿದ್ದರು. ಕಡೆಗೂ ಅಂಬರೀಶ್ ಮಧ್ಯಸ್ಥಿಕೆಯಿಂದಾಗಿ `ಕೇರ್ ಆಫ್...' ಗೆ ಚಿತ್ರಮಂದಿರ ಸಿಕ್ಕಿತ್ತು. . . .

 

ಲೇಟ್ ಸಿದ್ಧಲಿಂಗಯ್ಯ

ಗೋವಾದಲ್ಲಿ ಒಂದು ವಿಶೇಷ ಕಾರ್ಯಕ್ರಮ. ಅದು ಚಿತ್ರೋತ್ಸವದಲ್ಲಿ ಡಾ. ರಾಜ್‌ಕುಮಾರ್ ಅವರಿಗೆ ಶ್ರದ್ಧಾಂಜಲಿ. ಬಹುಶಃ ಇದೊಂದು ಅತ್ಯುತ್ತಮ ಗೌರವ ಎಂದೇ ಹೇಳಬೇಕು. ಅವತ್ತು ರಾಘವೇಂದ್ರ ರಾಜ್‌ಕುಮಾರ್ ಬಂದಿದ್ದರು. ವಿಮಾನದ ಕಾರಣದಿಂದಾಗಿ ಅವರ ಆಗಮನ ಅರ್ಧಗಂಟೆ ತಡವೂ ಆಗಿತ್ತು. ಶ್ರದ್ಧಾಂಜಲಿ ಕಾರ್ಯಕ್ರಮವೇನೋ ಸುಸೂತ್ರವಾಗಿ ನಡೆಯುವಷ್ಟು ಸಿದ್ಧತೆಗಳೆಲ್ಲ ಆಗಿದ್ದವು. ಆದರೆ ಶ್ರದ್ಧಾಂಜಲಿಯ ಬಳಿಕ ರಾಜ್ ಅಭಿನಯದ ಬಂಗಾರದ ಮನುಷ್ಯ ಚಿತ್ರ ಪ್ರದರ್ಶನವಿತ್ತು. . . .

 

ಸ್ಟಾಲಿನ್‌ನಿಂದ... ಧೂಮ್‌ಗೆ

ಮತ್ತೆ ನಿರ್ಮಾಪಕರಿಗೆ ತಲೆನೋವು ಕಾಡತೊಡಗಿದೆ. ಬಹುಶಃ ಈ ಗಲಾಟೆಗೆಲ್ಲ ಕಾರಣವಾಗಿದ್ದು ಸ್ಟಾಲಿನ್ ಎಂಬ ಚಿತ್ರ. ಪರಭಾಷಾ ಚಿತ್ರವೊಂದು ಕರ್ನಾಟಕದ ಒಳಕ್ಕೆ ಬರಬೇಕಾದರೆ ಇಂತಿಷ್ಟೇ ಪ್ರಿಂಟ್‌ಗಳು ಬರಬೇಕೆಂಬ ನಿಯಮವಿದೆ. ಅಂದರೆ ಕನ್ನಡ ಚಿತ್ರವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಎರಡು ವರ್ಷದ ಹಿಂದೆ ಆದ ಪ್ರತಿಭಟನೆಯ ನಂತರ ಚೇಂಬರ್‌ನಲ್ಲಿ ಆದ ಒಪ್ಪಂದ ಇದು. ಯಾವುದೇ ಚಿತ್ರ ಏಳು ಪ್ರಿಂಟ್‌ಗಿಂತ ಹೆಚ್ಚು ಕರ್ನಾಟಕದೊಳಕ್ಕೆ ಬರಬಾರದು ಎಂಬುದು. . . .


`ಹುಬ್ಬಳ್ಳಿ' ಈಗ ಎಕ್ಸ್‌ಪ್ರೆಸ್

ಮೊದಲ ವಾರದಲ್ಲಿ ಹಿಗ್ಗಾಮುಗ್ಗಾ ಮುಗ್ಗರಿಸಿದ `ಹುಬ್ಬಳ್ಳಿ' ಚಿತ್ರ ಈಗ ಯರ್ರಾಬಿರ್ರಿ ಹಿಟ್ ಆಗುತ್ತಿದೆ. ಅಂತೂ ಸುದೀಪ್, ಓಂಪ್ರಕಾಶ್‌ರಾವ್ ಕಾಂಬಿನೇಶನ್ ಮತ್ತೆ ಕೆಲಸ ಮಾಡಿದೆ. ಉದ್ಯಮದಲ್ಲಿ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ವಿಶೇಷ ಎಂದರೆ ಈ ವರ್ಷದ ಆರಂಭದಲ್ಲಿ ಸುದೀಪ್‌ರ . . .


ರಾಯಣ್ಣ - ಹುಲಿಯಣ್ಣ

ಏನಿದು ರಾಯಣ್ಣ ಹುಲಿಯಣ್ಣ? ಅಂತ ಅಚ್ಚರಿಯೇ? ಹೌದು ಸಂಗೊಳ್ಳಿ ರಾಯಣ್ಣ ಅನ್ನುವ ಒಬ್ಬ ವ್ಯಕ್ತಿಯಿದ್ದ. ಆತ ದೇಶಪ್ರೇಮಿಯಾಗಿದ್ದ. ಕಿತ್ತೂರು ಸಂಸ್ಥಾನ ಉಳಿಸಲು ಬ್ರಿಟಿಷರ ಎದುರು ಗೆರಿಲ್ಲಾ ವಾರ್ ರೀತಿಯಲ್ಲಿ ಯುದ್ಧ ಮಾಡಿ ಉತ್ತರ ಕರ್ನಾಟಕದಾದ್ಯಂತ ಮಿಂಚಿನ ಸಂಚಾರವಾಗುವಂತೆ ಮಾಡಿದ್ದ ಎಂದರೆ ಇತ್ತೀಚಿನ ಪೀಳಿಗೆಯವರಿಗೆ ಅರಿವಾಗುವುದೇ ಕಷ್ಟ. ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮುಂತಾದವರೆಲ್ಲ ಈಗ ಜನಮಾನಸದ ನೇಪಥ್ಯದಿಂದಲೂ ದೂರ ಸರಿಯತೊಡಗಿದ್ದಾರೆ. ಯಾರಿಗೂ ಈಗ ಅಂಥವರನ್ನು ನೆನೆಯುವ ಅಗತ್ಯವೂ ಕಾಣುತ್ತಿಲ್ಲ. . . . .


ಶಿರವಿಲ್ಲದವರು ಮಾತ್ರ ಶಿರಸ್ತ್ರಾಣ ಬೇಡವೆನ್ನುತ್ತಾರೆ!

ಆ ಮುದುಕನ ಹೆಸರು ಜಾರ್ಜ್ ವೆಲ್ಲರ್ ಎಂದು. ೨೦೦೩ನೆ ಇಸವಿಯಲ್ಲಿ ಆತನ ವಯಸ್ಸು ೮೬ ವರ್ಷ. ಆ ಮುಪ್ಪಾತಿಮುಪ್ಪಿನಲ್ಲೂ ತನ್ನ ಕಾರನ್ನು ತಾನೆ ಓಡಿಸುತ್ತಿದ್ದ! ಕ್ಯಾಲಿಫೋರ್ನಿಯ ರಾಜ್ಯದ ಸಾಂಟಾ ಮೋನಿಕ ಅವನ ಊರು. ೨೦೦೩ರ ಜುಲೈ ತಿಂಗಳ ೧೬ ರಂದು ಆ ಊರಿನಲ್ಲಿ ವಾರಕ್ಕೊಂದು ದಿನ ನಡೆಯುವ ರೈತರ ಸಂತೆ ನಡೆಯುತ್ತಿತ್ತು. . . .

 

ಇಂದೇ ಚಂದಾದಾರರಾಗಿ

ವಿಕ್ರಾಂತ ಕರ್ನಾಟಕದ ಹದಿನೈದನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಹದಿನಾಲ್ಕನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಹದಿಮೂರನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಹನ್ನೆರಡನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಹನ್ನೊಂದನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ದೀಪಾವಳಿ ವಿಶೇಷ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಒಂಬತ್ತನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಎಂಟನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಏಳನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಆರನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಐದನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ನಾಲ್ಕನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಮೂರನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ದ್ವಿತೀಯ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಪ್ರಥಮ ಸಂಚಿಕೆಯಲ್ಲಿ . . .

 

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com