Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

 

Monday, 28 July 2008 10:36 PM

 ವಿಕ್ರಾಂತ ಕರ್ನಾಟಕದ ಹದಿನೈದನೇ ಸಂಚಿಕೆಯಲ್ಲಿ:

 

ಸೇಡಿನ ರಾಜಕೀಯದ ಹೊಲಸು - ಸಂಪಾದಕೀಯ

ರಾಜಕಾರಣದಲ್ಲಿ ಪರಸ್ಪರ ಕೆಸರೆರಚುವ ಕಾರ್ಯಗಳು ನಡೆಯುವುದು ಹೊಸತೇನಲ್ಲ. ಇದೆಲ್ಲ ಒಂದು ಕಾಲದಲ್ಲಿ ಪಕ್ಷದೊಳಗಿನ ಅಭಿಪ್ರಾಯ ಭೇದ, ನಾಯಕರೊಬ್ಬರ ವೈಯಕ್ತಿಕ ಜನಪ್ರಿಯತೆಯಿಂದ ಹುಟ್ಟುವ ಅಸೂಯೆಯ ಕಾರಣದಿಂದ ನಡೆಯುತ್ತಿತ್ತು. ಮುಖ್ಯವಾಗಿ ಕಾಂಗ್ರೆಸ್ ಪಕ್ಷದಲ್ಲಂತೂ ವ್ಯಕ್ತಿ ಪ್ರತಿಷ್ಠೆಯೇ ಬೇರೊಬ್ಬ ನಾಯಕನನ್ನು ಮಣಿಸುವುದಕ್ಕೆ ಪ್ರಮುಖ ಕಾರಣವಾಗುತ್ತಿತ್ತು. . . .



ಚಿಂತಾಮಣಿ - ಕೀಚಕ ಮಾಡಿದ ತಪ್ಪೇನು?

ಭವ್ಯಭಾರತದ ಪುರಾಣ ಪುಣ್ಯಕತೆಗಳ ಬಗ್ಗೆ ನಮ್ಮ ವಿಸ್ತೃತ ಮತ್ತು ಆಳ ಸಂಶೋಧನೆಯಲ್ಲಿ ವ್ಯಕ್ತವಾಗಿರುವ ವಿಷಯವೆಂದರೆ, ಇಂದಿನ ನಾಯಕರುಗಳಂತೆಯೇ ಅಂದಿನ ಆದರ್ಶ ಪುರುಷರೆನಿಸಿಕೊಂಡವರೂ, ನಾವು ಹೇಳಿದಂತೆ ಮಾಡಿ, ನಾವು ಮಾಡಿದಂತೆ ಮಾಡಬೇಡಿಎಂಬ ಅಪ್ಪಟ ರಾಜಕಾರಣಿ ಧೋರಣೆಯನ್ನೇ ತಾಳುತ್ತಿದ್ದರೆಂಬುದು. . . .


ಈ ಜನ
ಎಚ್.ಜಿ. ರಾಧಾದೇವಿ

ಕಳೆದ ಒಂದು ವಾರದ ಅವಧಿಯಲ್ಲಿ ಕನ್ನಡದ ಇಬ್ಬರು ಜನಪ್ರಿಯ ಬರಹಗಾರರು ಅಸುನೀಗಿದರು. ಎಚ್.ಜಿ. ರಾಧಾದೇವಿ, ಕಾಕೋಳು ಸರೋಜಾರಾವ್ ಈ ಇಬ್ಬರೂ ಬಹುಪಾಲು ಏಕಲವ್ಯ ಪಂಥದವರು. ತಮ್ಮ ಪಾಡಿಗೆ ತಾವು ಬರೆದರು; ತಮ್ಮದೇ ಅಭಿಮಾನಿ . . .


ಸೂರ್ಯನಾರಾಯಣ ಚಡಗ

ಮೊದಲು ಸೂಚ ಎಂಬ ಕಾವ್ಯನಾಮದಲ್ಲಿ ಬರಹಗಳು ಪ್ರಕಟವಾಗುತ್ತಿದ್ದವು. ನಂತರ ಅವು ಸುನಾಚ ಆದವು. ಆ ನಂತರ ಸೂರ್ಯನಾರಾಯಣ ಚಡಗ ಎಂಬ ಪೂರ್ಣ ನಾಮಧೇಯ ಜನರ ಮನೆ-ಮನ ತಲುಪಿತು. . . .


ಕಾಕೋಳು ಸರೋಜಾರಾವ್

ರಾಧಾದೇವಿಯವರಷ್ಟೇ ಜನಪ್ರಿಯ ಲೇಖಕಿ ಕಾಕೋಳು ಸರೋಜಾರಾವ್. ಓದುಗರಿಗಾಗಿ, ಓದುವ ತೃಷೆ ತೀರಿಸುವ ಸಲುವಾಗಿ ಬರೆದ ಲೇಖಕಿಯರಲ್ಲಿ ಸರೋಜಾರಾವ್ ಕೂಡ ಒಬ್ಬರು. `ನಾನು ತುಂಬಾ ಓದ್ತೀನಿ' ಎಂದು ಒಮ್ಮೆ ಅವರೇ ಹೇಳಿಕೊಂಡಿದ್ದರು. ಹೌದು ಅವರ ಓದಿನ ಲೋಕವೂ ವಿಸ್ತಾರವಾಗಿತ್ತು. . . .


ಉಮಾ ಭಾರತಿ

ಬಿಜೆಪಿಯ ಸನ್ಯಾಸಿನಿ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರದು ಯಾತ್ರೆಯ ಸುದ್ದಿಯಲ್ಲ, ತೀರ್ಥಯಾತ್ರೆಯ ಸುದ್ದಿಯೂ ಅಲ್ಲ, ಬದಲಿಗೆ ಕಾಂಗ್ರೆಸ್ ಪಕ್ಷದತ್ತ ಒಲವು ತೋರಿರುವುದೇ ಈ ಸುದ್ದಿಯ ಮೂಲ. . . .


ಆ ತಹಶೀಲ್ದಾರ್ ಕೈಯಲ್ಲಿ ಚಪ್ಪಲಿ ಹಿಡಿದು ಪರಾರಿಯಾಗಿದ್ದ!

ಕಳೆದ ಐದು ವರ್ಷಗಳ ಕಾಲ ನಮ್ಮ ಆತ್ಮಸ್ಥೈರ್ಯವನ್ನು ಬಡಿದೆಬ್ಬಿಸಿದ, ಭ್ರಷ್ಟ ಕೋಟೆಗೆ ಲಗ್ಗೆ ಹಾಕಿ ರಕ್ತಬೀಜಾಸುರರನ್ನು ಜನರೆದುರು ತಂದು ನಿಲ್ಲಿಸಿದ ಲೋಕಾಯುಕ್ತ ವೆಂಕಟಾಚಲ ಈಗ `ಮಾಜಿ ಆಗಿದ್ದಾರೆ. ಆದರೆ ಅವರ ಸಾತ್ವಿಕ ಸಿಟ್ಟು ಇನ್ನೂ ತಣ್ಣಗಾಗಿಲ್ಲ. . . .


ಮುಖಪುಟ ಲೇಖನ - `ತಾಕತ್ತಿದ್ರೆ ಅರೆಸ್ಟ್ ಮಾಡಿ'

ಡಿ.ಕೆ. ಶಿವಕುಮಾರ್ ಗೌಡರ ಕುಟುಂಬಕ್ಕೆ ತಿರುಗೇಟು ನೀಡಿದ್ದಾರೆ. ತಮಗೆ ಸಂಬಂಧಿಸಿದ್ದು ಎನ್ನಲಾದ ಗಣಿ ಕಂಪನಿಗಳ ಮೇಲೆ ಸರ್ಕಾರಿ ಅಧಿಕಾರಿಗಳು ಮಾಡಿರುವ ದಾಳಿಗೆ ಶಿವಕುಮಾರ್ ತಣ್ಣಗೆ ಉತ್ತರ ನೀಡಿದ್ದಾರೆ. ಗಣಿಗೆ ಕೈಹಾಕಿದರೆ ಏನಾಗುವುದೆಂದು ಅರಿಯಲಿಎಂದು ಮುಖ್ಯಮಂತ್ರಿಗಳು ಹೇಳಿದ ಮಾತಿಗೆ ಸಾಧ್ಯವಿದ್ದರೆ...


ಇಬ್ಬರು ಕುಮಾರರ `ಗಣಿ' ಮುತ್ತುಗಳು

ಅಕ್ರಮ ಗಣಿ ಅವ್ಯವಹಾರದಲ್ಲಿ ಶಿವಕುಮಾರ್ ಕುಟುಂಬ ಭಾಗಿ ಎಂದು ಪತ್ರಿಕೆಗಳಲ್ಲಿ ಅಚ್ಚಾಗುತ್ತಿದ್ದಂತೆಯೇ, ಮುಖ್ಯಮಂತ್ರಿ ಕುಮಾರ ಸ್ವಾಮಿ ಹಾಗೂ ಶಿವಕುಮಾರ್ ಅವರಿಬ್ಬರೂ ಪ್ರತ್ಯೇಕ ಪತ್ರಿಕಾಗೋಷ್ಠಿಗಳನ್ನು ನಡೆಸಿದರು. . .


ಚಾಮುಂಡೇಶ್ವರಿ ಲಿಂಗಾಯಿತ ಓಟಿಗೆ ದಳದ ಶಿವಬಸಪ್ಪ?

ಚಾಮುಂಡೇಶ್ವರಿ ರಾಜಕೀಯ ಚದುರಂಗದಾಟಕ್ಕೆ ಕಾಂಗ್ರೆಸ್ ಅಭ್ಯರ್ಥಿ ಸಿದ್ಧರಾಮಯ್ಯ ಅವರ ವಿರುದ್ಧ ಜಾತ್ಯತೀತ ಜನತಾದಳ ಹಾಗೂ ಭಾರತೀಯ ಜನತಾ ಪಕ್ಷದ `ಒಮ್ಮತದ' ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ೬೯ ವರ್ಷದ ಶಿವಬಸಪ್ಪ ಅವರೊಂದು ದಾಳವಾಗಿದ್ದಾರೆ. . . .

 
ಧಾರಾವಾಹಿ - ಎದೆಯ ಕೂಗನು ಮೀರಿ... - ಅಧ್ಯಾಯ - ೨

ಧಾವಂತ ಮತ್ತು ಗಡಿಬಿಡಿಯ ಬೆಂಗಳೂರಿನಿಂದ ೮೦ ಮೈಲು ದೂರದಲ್ಲಿರುವ ಶಾಂತ ನಗರ ಮೈಸೂರಿನಲ್ಲಿ ಯಾವತ್ತೂ ತುಂಬ ಬಿಸಿಯಾಗಲಿ ಚಳಿಯಾಗಲಿ ಅನ್ನಿಸಿದ್ದಿಲ್ಲ. ಭೋಜನ ಮುಗಿಸಿದ ನಂತರ ಪ್ರತಿರಾತ್ರಿಯೂ ಅನುಳ ಕುಟುಂಬ. . . .


ವಿಹ್ವಲ - ಬಸವರಾಜ ಸೂಳಿಭಾವಿರವರ ಕವನ

ಎಲ್ಲೋ ಉರಿವ
ಕಾಡ್ಗಿಚ್ಚು
ನಾ ನಡೆವ
ಅಂಗಳಕ್ಕೂ ನಾಲಿಗೆ
ಚಾಚಿದಾಗ
ದಿಕ್ಕು ತಪ್ಪಿತು

 

Vikranta Karnataka Weekly


ಸೋಜಿಗದ ಜಗ
ಇದೆಂಥಾ ಡ್ರೆಸ್ಸು?

ಫ್ಯಾಶನ್ನೆಂದರೆ ಮಹಿಳೆ: ಮಹಿಳೆ ಎಂದರೆ ಫ್ಯಾಶನ್. ಇದು ಫ್ಯಾಶನ್ ಯುಗ ಬೇರೆ. ದಿನಕ್ಕೊಂದು ಫ್ಯಾಶನ್ ಧರೆಗೆ ಅಪ್ಪಳಿಸುತ್ತಲೇ ಇರುತ್ತದೆ; ಕನ್ಯಾಮಣಿಗಳ ಮೂಲಕ. ಇದು ಎಲ್ಲಿಯವರೆಗೆಂದರೆ, ಆಯಕಟ್ಟಿನ ಸ್ಥಳದಲ್ಲಿ ಬಟ್ಟೆ ಅಕಸ್ಮಾತ್ ಹರಿದಿದ್ದರೂ ಅದನ್ನು ಕೇಳಿದರೆ, ಅದು ಫ್ಯಾಶನ್ ಎಂದುತ್ತರ ನೀಡಿ ಜಾರಿಕೊಳ್ಳುವ ದಿನ ಇದು! ಇರಲಿ; ವಿಷಯಕ್ಕೆ ಬರೋಣ.


ಸಹವಾಸ ದೋಷ

ಚೈನಾದ ಸುದ್ದಿ ಸಂಸ್ಥೆಯನ್ನು ನಂಬುದುದೇ ಆದರೆ, ಅಲ್ಲಿಯ ಪ್ರಾಣಿ ಸಂಗ್ರಹಾಲಯದಲ್ಲಿರುವ ಈ ಚಿಂಪಾಜಿ ಪ್ರವಾಸಿಗರನ್ನು ನೋಡಿ ನೋಡಿಯೇ ಸಿಗರೇಟು ಸೇದುವುದನ್ನು ಕಲಿತುಕೊಂಡಿದೆ!


ಮುತ್ತಿನ ಮಲ್ಲರು

ಗಿನ್ನಿಸ್‌ನಲ್ಲಿ ದಾಖಲಾಗಿರುವ `ಮುತ್ತಿ'ನ ದಾಖಲೆಯನ್ನು ಮುರಿಯಲು ಪ್ಯಾರಿಸ್‌ನಲ್ಲಿ ನಡೆದ `ಆಪರೇಷನ್ ಬಿಗ್ ಕಿಸ್'ನಲ್ಲಿ ಪಾಲುಗೊಂಡ ಮುತ್ತಿನ ಮಲ್ಲರಿವರು!


ಅಮೆರಿಕ ವಿಶ್ವದಲ್ಲೇ ಮಾಲಿನ್ಯಕಾರಕ ದೇಶ!

ಹಿರಿಯಣ್ಣ, ಸೂಪರ್ ಪವರ್ ಮುಂತಾದ ವಿಶೇಷಣಗಳನ್ನು ಹೊಂದಿರುವ ಅಮೆರಿಕ ಜಗತ್ತಿನ ಮಾಲಿನ್ಯಕಾರಕ ದೇಶಗಳಲ್ಲೇ ಮಂಚೂಣಿಯಲ್ಲಿದೆ! . . .


ಅತಿ ದೊಡ್ಡ ಸಮಸ್ಯೆ

ಜಗತ್ತಿನ ಅತಿ ದೊಡ್ಡ ಸಮಸ್ಯೆ ಏನಿರಬಹುದು ಊಹಿಸಿದ್ದೀರಾ? ಕ್ಯಾನ್ಸರ್, ಏಡ್ಸ್? ಉಹೂಂ, ಇದ್ಯಾವುದೂ ಅಲ್ಲ. ವಿಶ್ವಸಂಸ್ಥೆಯ ಹೊಸ ಸಮೀಕ್ಷೆಯ ಪ್ರಕಾರ ಜಗತ್ತನ್ನು ಕಾಡುತ್ತಿರುವ ಅತಿದೊಡ್ಡ ಸಮಸ್ಯೆ ಹಸಿವು! ಇದೊಂದು . . .


ಹೀಗೊಂದು ರೆಸ್ಟುರಾ!

ಚೀನಾದಲ್ಲಿ ಆರಂಭವಾದ ವಿಕ್ಷಿಪ್ತ ರೆಸ್ಟೋರಂಟ್‌ನ ಚಿತ್ರವಿದು. ಟಾಯ್ಲೆಟ್‌ನ ಕಮೋಡ್‌ಗಳನ್ನು ಹೋಲುವ ಆಸನದಿಂದ ಹಿಡಿದು, ತಿಂಡಿಯ ಹೆಸರು, ಸ್ವರೂಪ . . .


ಕೈಗಳಿರುವ ಡಾಲ್ಫಿನ್

ಜಪಾನಿನ ಮೀನುಗಾರರಿಗೆ ಇತ್ತೀಚೆಗೆ ಸಿಕ್ಕಿದ ನಾಲ್ಕು ಈಜು ರೆಕ್ಕೆಗಳಿರುವ ಡಾಲ್ಫಿನ್ ಮೀನಿದು. ಡಾಲ್ಫಿನ್‌ಗಳಿಗೆ ಸಾಮಾನ್ಯವಾಗಿ ಎರಡು ಈಜು ರೆಕ್ಕೆ ಮಾತ್ರ ಇರುತ್ತವೆ. ಆದರೆ ಈ ಡಾಲ್ಫಿನ್‌ಗೆ ಮನುಷ್ಯನ ಕೈಯನ್ನು . . .


ಗೋರಿಲ್ಲಾಗೂ ಎಚ್‌ಐವಿ

ಎಚ್‌ಐವಿಯನ್ನು ಹೋಲುವ ಒಂದು ರೀತಿಯ ವೈರಸ್ ಆಫ್ರಿಕಾದ ಗೋರಿಲ್ಲಾಗಳಿಗೆ ತಗಲಿರುವುದು ಬೆಳಕಿಗೆ ಬಂದಿದೆ. ಏಡ್ಸ್‌ಗೆ ಕಾರಣವಾಗುವ ಇಂತಹ ವೈರಸ್ ಮನುಷ್ಯರು ಮತ್ತು ಚಿಂಪಾಂಜಿಯ ನಂತರ ಈಗ ಗೋರಿಲ್ಲಾಗಳಿಗೆ ತಗುಲಿದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. . .


ಮಕ್ಕಳಿಗಾಗಿ - ಪಾಪು ಗಾಂಧಿ-೧೫

ಸ್ನೇಹದ ಕಡಲಲ್ಲಿ

ಹಡಗಿನ ಪ್ರಯಾಣದ ಮಜವನ್ನು ಅನುಭವಿಸಿಯೇ ಅರಿಯಬೇಕು. ಅದೆಷ್ಟು ವಿವರಿಸಿದರೂ ಅದು ವಿಶಾಲವಾದ ಸಮುದ್ರದಿಂದ ಒಂದು ತಂಬಿಗೆ ನೀರನ್ನು ತಂದು ತೋರಿಸಿ ಇದೇ ಕಡಲು ಎಂದಂತಾದೀತು. . . .


ಅತಿಥಿ ಅಂಕಣದಲ್ಲಿ ಅರವಿಂದ ಚೊಕ್ಕಾಡಿ

ಆ ಬಣ್ಣದ ಲೋಕವನ್ನು ಕಂಡುಕೊಳ್ಳಬೇಕು

ಬಣ್ಣದ ಲೋಕವನ್ನು ಕಂಡುಕೊಳ್ಳಬೇಕಾದರೆ ಸ್ಥಳೀಯವಾಗಿರುವ ಭಾರತದ ಇತಿಹಾಸಗಳನ್ನು ನಿರೂಪಿಸುವ ಕೆಲಸ ನಡೆಯಲೇ ಬೇಕಾಗಿದೆ. ಆಗ ಬರೆಯಲು ವಿಷಯಗಳಿರುತ್ತವೆ. ಹೇಳಲು ಭರವಸೆಗಳಿರುತ್ತವೆ. . . .


ಸಮಾಜದ ಹೊರಗಿನ ಸುಡುಗಾಡು ಸಿದ್ಧರು

ಸುಡುಗಾಡ ಸಿದ್ಧರು ಊರೂರು ಅಲೆಯುವ ಅಲೆಮಾರಿಗಳು. ಕರ್ನಾಟಕದ ಬಹಳಷ್ಟು ಬುಡಕಟ್ಟು ಜನಾಂಗದಂತೆ ಈ ಸಿದ್ಧರಿಗೂ ಇರಲು ವಸತಿಯಿಲ್ಲ, ದುಡಿಮೆಗೆ ನಿಶ್ಚಿತ ಕೆಲಸವಿಲ್ಲ; ಅದಿರಲಿ, ನಾಗರಿಕ ಸಮಾಜ ಅವರನ್ನು ಈ ಮಣ್ಣಿನವರು ಎಂದೇ ಪರಿಗಣಿಸುವುದಿಲ್ಲ. ಊರೂರು ತಿರುಗಿ ಭವಿಷ್ಯ ಹೇಳುವ ಇವರ ಭವಿಷ್ಯವೇ ಅಯೋಮಯವಾಗಿದೆ. . . .


ಪಕ್ಕದಮನೆ
ಸುಧಾರಿತ ತಳಿಗೆ ವಿರೋಧ

ಸುಧಾರಿತ ತಳಿಗಳ ಬೆಳೆಯನ್ನು ಪ್ರಾಯೋಗಿಕವಾಗಿ ಬೆಳೆಸುವ ತಮಿಳುನಾಡು ಸರ್ಕಾರದ ಯೋಜನೆಗೆ ತಮ್ಮ ತೀವ್ರ ವಿರೋಧವಿದೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಎಲ್. ಗಣೇಶನ್ ಅವರು ತಿಳಿಸಿದ್ದಾರೆ. . . .


ತಾಯಿಯ ರಕ್ಷಣೆಗೆ ಪೋರನ ಸಾಹಸ

ಹತ್ತು ವರ್ಷದ ಪೋರ ತನ್ನ ತಾಯಿಯ ಮೇಲೆ ತಂದೆ ಹಾಗೂ ಅಜ್ಜ-ಅಜ್ಜಿ ಮಾಡುತ್ತಿದ್ದ ದೌರ್ಜನ್ಯವನ್ನು ಸಹಿಸಲಾಗದೇ ತಂದೆ ಹಾಗೂ ಇತರೆ ಸಂಬಂಧಿಕರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ. . . .


ಬಾಲ್ಯ ವಿವಾಹ ಜೀವಂತ

ಹಲವಾರು ದಶಕಗಳಿಂದಲೂ ಬಾಲ್ಯ ವಿವಾಹದ ವಿರುದ್ಧ ಹೋರಾಡುತ್ತಲೇ ಬಂದಿದ್ದರೂ ಇನ್ನೂ ಈ ಪಿಡುಗು ಬೆಳೆಯುತ್ತಲೇ ಇದೆ. ಅದಕ್ಕೆ ಉತ್ತಮ ನಿದರ್ಶನ ಎಂದರೆ ಆಂಧ್ರ ಪ್ರದೇಶದ ನೆಲಗೊಂಡ ಜಿಲ್ಲೆಯಲ್ಲಿ ಈ ಅನಿಷ್ಟ ಪದ್ಧತಿ ಇನ್ನೂ ಜಾರಿಯಲ್ಲಿರುವುದು. . .


ವಿಪತ್ತು ಪರಿಹಾರ ಯೋಜನೆ

ದೇಶದ ಕಡಲು ತೀರದಲ್ಲಾಗುವ ವೈಪರೀತ್ಯಗಳನ್ನು ಹಾಗೂ ಹವಾಮಾನದಲ್ಲುಂಟಾಗುವ ವೈಪರೀತ್ಯಗಳ ಬಗ್ಗೆ ಸೂಕ್ತ ನಿಗಾ ಇರಿಸಲು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಒಂದು ವರ್ಷದೊಳಗಾಗಿ ರಾಷ್ಟ್ರೀಯ ವಿಪತ್ತು ಪರಿಹಾರ ಯೋಜನೆಯನ್ನು ಕಾರ್ಯರೂಪಕ್ಕಿಳಿಸಲಿದೆ. . . .


ಸೂಪರ್ ಬಂಪರ್ ಲಾಟರಿ

ರಾಜ್ಯದಲ್ಲಿ ಕ್ರೀಡಾ ಮೂಲಭೂತ ಸೌಕರ್ಯಗಳನ್ನು ಉನ್ನತ ದರ್ಜೆಗೇರಿಸುವ ಉದ್ದೇಶದಿಂದ ಕೇರಳ ರಾಜ್ಯ ಸರ್ಕಾರ ಕೇರಳ ಸ್ಪೋರ್ಟ್ಸ್ ಸೂಪರ್ ಬಂಪರ್ ಲಾಟರಿಯೊಂದನ್ನು ಸದ್ಯದಲ್ಲೇ ಆರಂಭಿಸಲಿದೆ. . . .


ಜೈಲಿನಲ್ಲಿ ಮೂಲ ಸೌಕರ್ಯ

ಸರ್ವೋಚ್ಚ ನ್ಯಾಯಾಲಯ ನಿರ್ದೇಶಿಸಿದಂತೆ ಪುದುಚೇರಿ ಸರ್ಕಾರ ತಕ್ಷಣದಿಂದಲೇ ಕೇಂದ್ರಾಡಳಿತ ಪ್ರದೇಶದಲ್ಲಿರುವ ಎಲ್ಲ ಕಾರಾಗೃಹಗಳಲ್ಲಿ ಸೂಕ್ತ ಮೂಲಭೂತ ಸೌಕರ್ಯಗಳನ್ನೊದಗಿಸಬೇಕೆಂದು ಪುದುಚೇರಿ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ. . . .


ನೀಲ ಗಗನದಲ್ಲಿ ತೇಲಿದ ಅಪ್ಸರೆ

ಇರಾನ್‌ನ ರಾಜಧಾನಿ ಟೆಹರಾನ್. ಅಲ್ಲಿ ಒಬ್ಬ ಪುಟ್ಟ ಬಾಲಕಿ ಇದ್ದಳು. ಅವಳಿಗೆ ರಾತ್ರಿ ಆಯಿತು ಎಂದರೆ ಸಾಕು, ಆಕಾಶದಲ್ಲಿ ನಕ್ಷತ್ರಗಳು ಮಿನುಗುವುದನ್ನು ಎವೆಯಿಕ್ಕದೆ ಕುತೂಹಲದಿಂದ ವೀಕ್ಷಿಸುವುದೇ ಹವ್ಯಾಸ. . . .


ಬಾಂಬೆ ಮಸಾಲ

ಅಕ್ಷಯ್ ಎಂಜಾಯ್...

ಒಂದು ಐಟಂ ಸಾಂಗ್‌ನಲ್ಲಿ ಎಷ್ಟು ಜನ ಹೀರೋಯಿನ್‌ಗಳು ಕುಣಿಯಬಹುದು? ಇಬ್ಬರು, ಮೂವರು... ಬೇಡ ನಾಲ್ಕು ಜನ. ಇಪ್ಪತ್ತು ಮಂದಿ ಒಂದೇ ಹಾಡಿಗೆ ಕುಣಿಯಬಹುದಾ? ಹೌದು ಅಂತಾ ತೋರಿಸಲು ಹೊರಟವರು ಸಾಜಿದ್. . . .


ರಾಜಿಯಾದ ರಾಣಿ

ಘಟನೆ ನಡೆದದ್ದು ವಾರಣಾಸಿಯಲ್ಲಿ. ಈ ನಟಿ ರಾಣಿ ಮುಖರ್ಜಿಯ ಚಿತ್ರೀಕರಣದ ಸಂದರ್ಭದಲ್ಲಿ ನೂಕು ನುಗ್ಗಲು. ನೆರೆದಿದ್ದ ಆ ರಾಣಿ ಅಭಿಮಾನಿಗಳಿಗೆ ಆಕೆಯೊಂದಿಗೆ ಮಾತನಾಡುವ ಆಸೆ. ರಾಣಿಯೋ ಚಿತ್ರೀಕರಣದಲ್ಲಿ ಬ್ಯುಜಿ. ಪರಿಸ್ಥಿತಿ ಕೈಮೀರಿದಾಗ ಜನ ಮುಗಿ ಬೀಳುತ್ತಾರೆ. ಪ್ರತಿಯಾಗಿ ರಾಣಿಯ ಅಂಗರಕ್ಷಕರೊಂದಿಗೆ ಅಭಿಮಾನಿಗಳ ಜಟಾಪಟಿ. ಎಲ್ಲಾ ನಡೆದದ್ದು ಕ್ಷಣಾರ್ಧದಲ್ಲಿ. . . .


ಹಿಮೇಶ್ ಹೀಗ್ಯಾಕಾದ?

ಪ್ರೀತಿಗೆ ದೇಶ, ಕಾಲ, ವಯಸ್ಸಿನ ಮಿತಿ ಇಲ್ಲ ಅಂತಾರೆ ನಿಜಾನಾ? ನಮ್ಮ ಸಿಂಗರ್ ಹಿಮೇಶ್ ರೆಶಾಮ್ಮಿಯಾರನ್ನು ಕೇಳಿದರೆ ಹೌದೆನ್ನುತ್ತಾರೆ. ಅದಕ್ಕೆ ಕಾರಣವಿದೆ. ಹಿಮೇಶ್ ಇಸ್ ಇನ್ ಲವ್!
ಹೌದು. ಹುಡುಗಿ ಸೌನಿಯಾ ಕಪೂರ್ ಅಂತ. ಈಕೆ ಟಿವಿ ಸೀರಿಯಲ್ಲುಗಳಲ್ಲಿ ನಟಿಸುತ್ತಾಳೆ. ಇವರಿಬ್ಬರದು ಭಾರಿ ಡೀಪ್ ಒಡನಾಟ. . . .


ಶಹಬ್ಬಾಸ್ (ಗಾಂಧಿ)ಗಿರಿ!

ಫಿಲಂ ಅಂದ್ರೆ ಹೀಗಿರಬೇಕು. ಏನ್‌ಕತೆ, ಏನ್ ಕಾಮಿಡಿ, ಅದೇನ್ ಕಾಸ್ನೆಪ್ಟು ಅಬ್ಬಾ! ಸಕತ್ತಾಗಿದೆ ಮಗಾ! ಹೀಗಂತ ನಮ್ ಪಡ್ಡೇ ಹುಡುಗರು ಈಗ ಆಡೋಕ್ ಶುರು ಮಾಡಿದ್ದಾರೆ. ಆದ್ರೆ ನಮ್ಮ ಕನ್ನಡ ಸಿನಿಮಾ ನೋಡಿ ಅಲ್ಲ. ದೇಶದ ಮೂಲೆ ಮೂಲೆಯಲ್ಲಿ ಕೇಳಿ ಬರುತ್ತಿರೋ ಗಾಂಧಿಗಿರಿ ಚಿತ್ರ ಲಗೇ ರಹೋ ಮುನ್ನಾಭಾಯ್. . . .


ಮಲ್ಲಿಕಾಗೇ ಮರ್ಡರ್ರಾ?

ಮರ್ಡರ್ ಖ್ಯಾತಿಯ ಮಲ್ಲಿಕಾ ಮರ್ಡರ್‌ಗೆ ಸ್ಕೆಚ್ ಹಾಕಿದ್ದು ಇಡಿ ಬಾಲಿವುಡ್ ಬೆಚ್ಚಿಬೀಳುವಂತೆ ಮಾಡಿದೆ. ಸೆಕ್ಸ್ ಬಾಂಬ್ ಎಂದೇ ಖ್ಯಾತಿಯಾಗಿದ್ದ ಮಲ್ಲಿಕಾ ಶೆರಾವತ್‌ಳನ್ನು ಕೊಲ್ಲಲು ಹೊರಟವ ಪಂಜಾಬ್‌ನ ರಾಜೇಶ್ ದಲಾಲ್. . . .


ದಿಲ್ `ದಿಯಾ'

ದಿಯಾ ಮಿರ್ಜಾ ದಿಲ್ಲೊಳಗೆ ಯಾರಿದ್ದಾರೆ? ಕುನಾಲ್ ಕಪೂರ್! ಹಾಗಂತಾ ಖುದ್ದಾಗಿ ದಿಯಾಳೇ ಹೇಳಿರುವಾಗ ನಾವೇನು ಹೇಳೋದು? ಆದರೆ ಡೈರೆಕ್ಟಾಗಿ ದಿಯಾ ಎಲ್ಲಾ ಬಾಯಿ ಬಿಟ್ಟಿಲ್ಲ. ಇವರಿಬ್ಬರದ್ದು ಗಾಢ ಸ್ನೇಹ. . . .


ಕೋಗಿಲೆಗೆ ವಸಂತ ಕಾಲ

ಗಾನ ಕೋಗಿಲೆಗೆ ಈಗ ವಸಂತಕಾಲ. ಫ್ರಾನ್ಸ್‌ನ ಅತ್ಯುಚ್ಚ ನಾಗರಿಕ ಪ್ರಶಸ್ತಿ ಹಾಡುಹಕ್ಕಿ ಲತಾ ಮಂಗೇಶ್ಕರ್‌ರನ್ನು ಅರಸಿ ಬಂದಿದೆ. ಸಿನಿಮಾ ಕ್ಷೇತ್ರಕ್ಕೆ ನೀಡಿದ ಅಪೂರ್ವ ಕೊಡುಗೆಯನ್ನು ಲಕ್ಷಿಸಿ ಲತಾ ಅವರಿಗೆ `ನೈಟ್ ಆಫ್ ದ ಲೀಜನ್' ಪ್ರಶಸ್ತಿ ನೀಡಲಾಗಿದೆ. . . .


ಬಾಬಿ ಜಿಂದಾಲ್

ಅಮೆರಿಕಾ ಸೆನೆಟ್‌ಗೆ ಆಯ್ಕೆಯಾದ ಭಾರತೀಯ ಸಂಜಾತ ಅಮೆರಿಕನ್ ಬಾಬಿ ಜಿಂದಾಲ್ ಲೂಸಿಯಾನದ ಗವರ್ನರ್ ಹುದ್ದೆಗೆ ಉಮೇದುವಾರಿಕೆ ಸಲ್ಲಿಸಲು ಉತ್ಸುಕರಾಗಿದ್ದಾರೆ. ಲುಸಿಯಾನ ಗವರ್ನರ್ ಹುದ್ದೆಗೆ ಸ್ಪರ್ಧಿಸಲು ಬೇಕಾದ ಅಗತ್ಯ ತಯಾರಿ ನಡೆಸುವಲ್ಲಿ ಜಿಂದಾಲ್ ಈಗ ಮಗ್ನರಾಗಿದ್ದಾರೆ. . . .


ಜೂನಿಯರ್ ಹೀರೋ

ಜಗತ್ತಿನ ಅತಿ ಕಿರಿಯ ಸಿಇಒ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕನ್ನಡಿಗ ಸುಹಾಸ್ ಗೋಪಿನಾಥ್, ಶಾಂಘೈ ಮೂಲದ ಸಂಸ್ಥೆಯೊಂದನ್ನು ಖರೀದಿಸುತ್ತಿದ್ದಾರೆ; ತಮ್ಮ ಸಂಸ್ಥೆಯ ವಿಸ್ತರಣೆಗಾಗಿ ನಾಲ್ಕು ದಶಲಕ್ಷ ಡಾಲರ್ ಕ್ರೋಡೀಕರಿಸಲು ಹೂಡಿಕೆದಾರರ ಜತೆ ಮಾತುಕತೆ ನಡೆಸಿದ್ದಾರೆ. . . .


ಸರ್ವಶಕ್ತ ಇಲ್ಲಿ ಕಾವಲುಗಾರ

ಬೆಂಗಳೂರು ಗಲೀಜಾಗಿದೆ ಅಂತಾ ಈ ಮುಂಚೆನೇ ತೋರಿಸಿದ್ದರೂ. ಈ ಬಾರಿ ಅದಕ್ಕೆ ಪೂರಕವಾಗಿ ಕಲುಷಿತಗೊಂಡಿರುವ ಬೆಂಗಳೂರಿಗರ ಚಿತ್ರಣ ನೀಡುವ ಪ್ರಯತ್ನ ಇಲ್ಲಿದೆ. `ಇಲ್ಲಿ ಗಲೀಜು ಮಾಡಬಾರದು; ಮಾಡಿದರೆ ಶಿಕ್ಷೆಗೆ ಗುರಿಪಡಿಸಲಾಗುವುದು' ಎಂದು ಗೋಡೆ ಮೇಲೆ ಬರೆದು ಬರೆದು ನಮ್ಮ ಜನಕ್ಕೆ ಸಾಕಾಗಿ ಹೋಗಿದೆ. . . .


ಧಾರಾವಾಹಿ - ಜಾಣೆಯಾಗಿರು ನನ್ನ ಮಲ್ಲಿಗೆ - ಅಧ್ಯಾಯ-೭

ಶ್ವೇತ ಮಹಲ್‌ಗೆ ತೇಜನ್ ಆಗಮನ...

ಶೇಷಮ್ಮ ತೆರೆದ ಮುಂಬಾಗಿಲಿನಿಂದ ಒಳಗೆ ಬರುತ್ತಿದ್ದರು. ಆದಿತ್ಯ ಅವರು ಹತ್ತಿರ ಬರುವ ತನಕ ಕಾದ. ಅವರು ಯುಕ್ತಾಳನ್ನು, ಆದಿತ್ಯನನ್ನು ಗಮನಿಸುತ್ತಲೇ ಹಾದು ಒಳಗೆ ಹೋಗುವ ಹಂತದಲ್ಲಿ ತಡೆದು ನಿಲ್ಲಿಸಿ ಕೇಳಿದ . . .


ಶೃಂಗಾರ
ವದನ ಸೊಬಗು

ಸಾಮಾನ್ಯವಾಗಿ ಎಲ್ಲರೂ ಏಕ ರೀತಿಯ ಮುಖದ ರಚನೆಯನ್ನು ಪಡೆದಿರುವುದಿಲ್ಲ. ಇವುಗಳನ್ನು ನಾಲ್ಕು ಬಗೆಗಳಾಗಿ ವಿಂಗಡಿಸಲಾಗಿದೆ. ಅದರಲ್ಲಿ ೧) ದುಂಡನೆಯ ೨) ಕೋಲು ೩) ಚಪ್ಪಟೆ ೪) ಅಂಡಾಕಾರ. ಕೆಲವರು ಗಿಡ್ಡನೆಯ ಕತ್ತನ್ನು ಹೊಂದಿದ್ದರೆ ಒಂದಷ್ಟು ಹೆಣ್ಮಕ್ಕಳು ನೀಳ, ದಪ್ಪ ಕುತ್ತಿಗೆಯನ್ನು ಪಡೆದಿರುತ್ತಾರೆ. ಅದೇ ಬಗೆಯಲ್ಲಿ ಮೂಗಿನ ಆಕಾರವೂ ಭಿನ್ನವಾಗಿರುತ್ತದೆ. ಅದರಲ್ಲಿ ಉದ್ದ, ಅಗಲ, ಚಿಕ್ಕ ಹಾಗೂ ದಪ್ಪ. ಈ ರೀತಿಯ ರಚನೆಯನ್ನು ಪೆಡೆದವರಿಗೆ ಯಾವ ಬಗೆಯ ಅಲಂಕಾರ ಒಡವೆ ಮತ್ತು ಹೇರ್‌ಸ್ಟೈಲ್ ಹೊಂದುತ್ತದೆ ಎಂಬುದನ್ನು ಕೆಳಗೆ ತಿಳಿಸಿದೆ. ಅದರಂತೆ ನಡೆದರೆ ಇರುವ ನ್ಯೂನತೆಯನ್ನು ಮುಚ್ಚಿ ಸುಂದರವಾಗಿ ಆತ್ಮವಿಶ್ವಾಸದಿಂದ ಬದುಕನ್ನು ನಡೆಸಬಹುದು.


ಕನ್ನಡದಲ್ಲಿ ಬರೆಯಲು `ಕ್ವಿಲ್ ಪ್ಯಾಡ್'

'http://quillpad.in/kannada' ವಿಳಾಸವನ್ನು ಇಂಟರ್ನೆಟ್ ತೆರೆದು ಟೈಪ್ ಮಾಡಿದರೆ ಸಾಕು, ನೀಲಿ-ಬಿಳಿ ಬಣ್ಣದ ಒಂದು ಪರದೆ ತೆರೆದುಕೊಳ್ಳುತ್ತದೆ. ಪರದೆಯ ಮಧ್ಯದಲ್ಲಿ, ಎರಡು ಆಯತಾಕಾರದ ಪುಟ್ಟ ಬಾಕ್ಸ್‌ಗಳು. ಕೆಳಗಿನ ಆಯತದಲ್ಲಿ ಟೈಪ್ ಮಾಡಿ ಎಂದು ತೋರಿಸಲು ಮೌಸ್ ಪಾಯಿಂಟರ್‌ನ . . .


ಕೂಗು - ಪ್ರೇಮಾಭಟ್‌ರವರ ಕಥೆ

ಕಿನ್ನರಿ ಹಿಡಿದು ಊರೂರು ತಿರುಗಿ, ಮನೆಮನೆಗೆ ಅಲೆದು ಸಂಪ್ರದಾಯದ ಹಾಡುಗಳನ್ನು ಹಾಡುತ್ತ ತನ್ನ ಜೋಳಿಗೆಯನ್ನು ಮುಂದೆ ಚಾಚುತ್ತಿದ್ದ ಜೋಗಪ್ಪ. ಅವನ ಹೆಸರು ಏನೆಂದು ಅವನ ಊರು ಯಾವುದೆಂದು ನಮಗಾರಿಗೂ ತಿಳಿಯದು. . . .


ಇಂಗ್ಲಿಷ್ ಮರುಳಿನಲ್ಲಿ ನಡೆಯುತ್ತಿರುವ ಕನ್ನಡದ ಸುವರ್ಣೋತ್ಸವ

ಕನ್ನಡದ ಪ್ರಮುಖ ಚಿಂತಕರಲ್ಲಿ ಡಿ.ಎಸ್. ನಾಗಭೂಷಣ ಪ್ರಮುಖರು. ಲೋಹಿಯಾ, ಗಾಂಧಿ, ಅಂಬೇಡ್ಕರ್ ವಿಚಾರಧಾರೆಯಿಂದ ಜಾಗತೀಕರಣದ ದುಷ್ಪರಿಣಾಮದವರೆಗೆ ಖಚಿತ ನಿಲುವಿನಲ್ಲಿ ಚಿಂತಿಸಬಲ್ಲ ಡಿ.ಎಸ್. ನಾಗಭೂಷಣ . . .


ಒಳಮನಸ್ಸು - ಆಟಿಸಂ

ಈ ಜಗತ್ತಿನಲ್ಲಿ ಅತ್ಯಂತ ಕಷ್ಟದ, ಸವಾಲಿನ ಕೆಲಸ ಅಂತ ಏನಾದರೂ ಇದ್ದರೆ ಅದು ದೊಡ್ಡ ಸಾಧನೆ ಮಾಡುವುದೋ, ಸಮಾಜದಲ್ಲಿ ಗೌರವ ಸ್ಥಾನ ಪಡೆದುಕೊಳ್ಳುವುದೋ ಅಲ್ಲ. ಬದಲಾಗಿ ಮಕ್ಕಳನ್ನು ಸಾಕುವುದುಎಂಬ ಮಾತಿದೆ. . . .


ಮಹಿಳೆಯರ ಮುಷ್ಕರ, ಕಿವುಡು ಸರ್ಕಾರ `ಸಾರಾಯಿ ತೊಲಗಿಸಿ'

ಸರ್ಕಾರದ ಬ್ರಾಂದಿಗಿರಿಯ ಮುಂದೆ ಮಹಿಳೆಯರು ಗಾಂಧಿಗಿರಿ ನಡೆಸಿರುವ ಪ್ರಕರಣ ಟಿ.ದಾಸರಹಳ್ಳಿಯ ಮಂಜುನಾಥನಗರದಲ್ಲಿ ನಡೆದಿದೆ, ನಡೆಯುತ್ತಲೇ ಇದೆ. ಎಲ್ಲ ನೀತಿ ನಿಯಮಾವಳಿ ಮೀರಿ ಮೂರು ಸಾರಾಯಿ ಅಂಗಡಿಗೆ ಪರವಾನಗಿ ಕೊಟ್ಟ ಅಬಕಾರಿ . . .


ಉಪ ಮುಖ್ಯಮಂತ್ರಿ ಮಾತಿಗೂ ಬೆಲೆಯಿಲ್ಲ

ಆಗತಾನೇ ಶಾಲೆ ಬಿಟ್ಟ ನಂತರ ಶಾಲಾ ಕೆಲವು ಮಕ್ಕಳೊಂದಿಗೆ ಬಂದು ಸೇರಿಕೊಂಡ ವಿಜಯಶ್ರೀ ಶಾಲಾ ಮಂಡಳಿಯ ಕಾರ್ಯದರ್ಶಿಗಳಾದ ಹನುಮಂತಪ್ಪ ಅವರಂತೂ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದ್ದು ಹೀಗೆ; . . .


ಅಂದು ಕೊಲೆಗಾರ ಇಂದು ಚೆಸ್ ಪ್ರವೀಣ

ಕೊಲೆಯ ಕಾರಣದಿಂದ ಜೈಲು ಸೇರಿದ ಸೋಹೇಲ್‌ನನ್ನು ಜೈಲಿನಲ್ಲಿ ಆಕರ್ಷಿಸಿದ್ದು ಚದುರಂಗದಾಟ. ಈಗಾಗಲೇ ರಾಜ್ಯ ಮಟ್ಟದ ಚೆಸ್ ಟೂರ್ನಿಗಳಲ್ಲಿ ಗಮನ ಸೆಳೆದಿದ್ದ ಸೋಹೇಲ್ ರಾಷ್ಟ್ರೀಯ, ಅಂತರರಾಷ್ಟ್ರೀಯ ಪಂದ್ಯಗಳತ್ತ ಗಮನಹರಿಸಿದ್ದಾನೆ. . . .


`ಶ್ರೀಮತಿ'ಯ ಹೊಸ ಅವತಾರ

`ಜನನಿ', `ಚದುರಂಗ', `ಸ್ತ್ರೀ' ಮತ್ತು `ಸೂರ್ಯಶಿಕಾರಿ' ಧಾರಾವಾಹಿಗಳ ಮೂಲಕ ಟಿ.ವಿ. ವೀಕ್ಷಕರ ಮನೆಸೂರೆಗೊಂಡು, ಪಾಪ ಪಾಂಡುವಿನಿಂದ `ಹಾಸ್ಯರಾಣ' ಪಟ್ಟ ಅಲಂಕರಿಸಿ `ಶ್ರೀಮತಿ' ಅಂತ ಮನೆಮಾತಾದ ಶಾಲಿನಿ ದೂರದರ್ಶನ, ರಂಗಭೂಮಿ ಕ್ಷೇತ್ರದಲ್ಲಿ ಸುಪರಿಚಿತ. . . .


`ಮುತ್ತು'ಗೆ ಬೆಂಕಿ

ಶಿವರಾಜ್‌ಕುಮಾರ್ ಅವರ ಮುತ್ತು ಸ್ಟುಡಿಯೋಗೆ ಮೊನ್ನೆ ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಬೆಂಕಿ ಬಿದ್ದಿತು. ಅದೆಷ್ಟು ಬೇಗ ಅಗ್ನಿಯ ಜ್ವಾಲೆಗಳು ಸ್ಟುಡಿಯೋವನ್ನು ಆಕ್ರಮಿಸಿಕೊಂಡವೆಂದರೆ ಅಲ್ಲಿದ್ದ ಟೇಪುಗಳು, ಸಿನಿಮಾ ರೀಲುಗಳು, ಫೈಲು ಇನ್ನಿತರ ವಸ್ತುಗಳೆಲ್ಲ ಬೆಂಕಿಗೆ ಬಲಿಯಾದವು.


ದಿನಕರವೃತ್ತಿ

ದರ್ಶನ್ ತಮ್ಮ ದಿನಕರ್ ಇನ್ನೊಂದು ಸಿನಿಮಾ ಮಾಡುವುದು ಖಚಿತವಾಗಿದೆ. ಆ ಚಿತ್ರಕ್ಕೆ ದರ್ಶನ್ ಅವರೇ ಹೀರೋ. ರಮ್ಯಾ ಹೀರೋಯಿನ್. ಚಿತ್ರ ಫೆಬ್ರವರಿ ಹದಿನಾರರಂದು ಪ್ರಾರಂಭವಾಗುತ್ತದೆ. ಕತೆಯನ್ನು ಸ್ವತಃ ದಿನಕರ್ ಬರೆದಿದ್ದಾರೆ. . . .


ತೆಲಗು ಗುರೂ!

ಒಂದೇ ಸಲಕ್ಕೆ ಕನ್ನಡದ ಸಂಗೀತ ನಿರ್ದೇಶಕ ಗುರುಕಿರಣ್ ತೆಲುಗಿನಲ್ಲಿ ಪ್ರಸಿದ್ಧರಾಗಿ ಬಿಟ್ಟಿದ್ದಾರೆ. ಮಾರುತಿಚಿತ್ರಕ್ಕೆ ಅವರು ಕೊಟ್ಟ ಸಂಗೀತ ಅಲ್ಲಿ ಸೂಪರ್ ಹಿಟ್. ಈಗಾಗಲೇ ಅಲ್ಲಿನ ರೇಡಿಯೋ ಚಾನೆಲ್‌ಗಳೂ ಗುರುಕಿರಣ್ ಮಾತುಗಳನ್ನು ದಾಖಲಿಸಿಕೊಂಡು ಬಿತ್ತರಿಸಿದ್ದೂ ಆಗಿದೆಯಂತೆ. . . .
 

ಗುಣ ಅವಗುಣ

ನಿರ್ಮಾಪಕ ಯರ್ರ ಸ್ವಾಮಿ ಅಲಿಯಾಸ್ ವೆಂಕಟೇಶ್‌ಗೆ ಮೂಡ್ ಬಂದರೆ ಕಾರ್ಮಿಕರ ಒಕ್ಕೂಟ, ನೃತ್ಯಕಲಾವಿದರ ಒಕ್ಕೂಟ ಹೊತ್ತಿಕೊಂಡು ಉರಿಯುತ್ತದೆ! ಈ ಯರ್ರಸ್ವಾಮಿ ಯಾರೆಂದು ಕೇಳುತ್ತೀರಾ? ಈತ ಸ್ವಯಂ ಘೋಷಿತ ದಾದಾ ಕಮ್ ನಿರ್ಮಾಪಕ ಕಮ್ ನಾಯಕ ನಟ. ಇಲ್ಲಿ ಬಳಸಿರುವುದು ಹಿಂದಿ ಭಾಷೆಯ . . . .


ಉತ್ಸವಗಳ ಕಾಲ

ಈಗ ಚಲನಚಿತ್ರೋತ್ಸವಗಳ ಕಾಲ. ಕೋಲ್ಕತ್ತಾ ಚಲನ ಚಿತ್ರೋತ್ಸವ ಮುಗಿಯುತ್ತಲೇ ಬೆಂಗಳೂರಿನಲ್ಲಿ ಇಂಡೋ ಜರ್ಮನ್ ಚಿತ್ರೋತ್ಸವ ಆರಂಭವಾಗಿದೆ. ಅದು ಮುಗಿಯುವ ದಿನ ಪಣಜಿಯಲ್ಲಿ ಅಂತಾ ರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗುತ್ತದೆ. . .


ಜೀವಕ್ಕೆ ಬೆಲೆ ಕೊಡಿ

ವಿಷ್ಣು ನಾಯಕತ್ವದ ಸಿರಿವಂತ ಕಡೆಗೂ ೫೦ ದಿನಗಳನ್ನು ಪೂರೈಸಿದೆ. ವಿಷ್ಣುವರ್ಧನ್ ಚಿತ್ರಬದುಕಿನಲ್ಲೇ ಅತ್ಯಂತ ವಿಭಿನ್ನವಾದ ಈ ಚಿತ್ರ ಹೆಂಗರುಳಿಗೆ ಹಾಗೆ ಹೆಂಗರುಳ ಗಂಡಸರಿಗೂ ಸಾಕಷ್ಟು ಕಣ್ಣೀರು ತರಿಸಿರುವುದು ಹಳೆಯ ಸಂಗತಿ. . . .


ಕಳ್ಳಿ ರಮ್ಯ ಕುಳ್ಳಿ

ರಮ್ಯ ಈಗ ಕನ್ನಡದ ಲಕ್ಕಿ ಸ್ಟಾರ್. ಆಕೆ ಮುಟ್ಟಿದ್ದೆಲ್ಲವೂ ಚಿನ್ನ. `ಸೇವಂತಿ ಸೇವಂತಿ ಸೋಲುತ್ತದೆ ಅಂದುಕೊಂಡರೆ ಅದು ಗೆದ್ದಿದೆ. ಇನ್ನೊಂದೆಡೆ `ಜೊತೆಜೊತೆಯಲಿ' ಸೋಲುತ್ತದೆ ಎಂದು ಎಲ್ಲರೂ ಭವಿಷ್ಯ ನುಡಿದಿದ್ದರೂ ಅದೂ ಗೆದ್ದಿದೆ. ಅದಕ್ಕೂ ಮೊದಲು `ಅಮೃತಧಾರೆ' ಸೂಪರ್ ಹಿಟ್. . . .


 

ಅಮೇರಿಕಾದಿಂದ ರವಿ

The name is Bond, ?Money? Minting Bond!

 

ಇದೇ ನವೆಂಬರ್ ೧೭ರಂದು ಹೊಸ ಜೇಮ್ಸ್ ಬಾಂಡ್ ಚಲನಚಿತ್ರ ಕೆಸೀನೊ ರಾಯೇಲ್ ವಿಶ್ವದಾದ್ಯಂತ ಬಿಡುಗಡೆಯಾಯಿತು. ಈ ಚಿತ್ರ ಜೇಮ್ಸ್ ಬಾಂಡ್ ಚಿತ್ರಪರಂಪರೆಯಲ್ಲಿ ಅನೇಕ ಕಾರಣಗಳಿಗಾಗಿ ವಿಶಿಷ್ಟವಾದುದು. ೨೧ನೇ ಜೇಮ್ಸ್ ಬಾಂಡ್ ಚಿತ್ರ; ಆದರೆ, ಇಯಾನ್ ಫ್ಲೆಮಿಂಗ್ ಬರೆದ ಜೇಮ್ಸ್ ಬಾಂಡ್ ಕಾದಂಬರಿ ಸರಣಿಯಲ್ಲಿಯ ಮೊಟ್ಟಮೊದಲ ಕಾದಂಬರಿಯ ಮೇಲೆ ಆಧಾರಿತವಾದ ಚಿತ್ರ. ಕಳೆದ ನಾಲ್ಕು ಬಾಂಡ್ ಚಿತ್ರಗಳಲ್ಲಿ ಬಾಂಡ್ ಆಗಿದ್ದ ಪಿಯರ್ಸ್ ಬ್ರಾಸ್ನನ್ ಈ ಚಿತ್ರದಲ್ಲಿ ಇಲ್ಲ. . . .

 

ಇಂದೇ ಚಂದಾದಾರರಾಗಿ

ವಿಕ್ರಾಂತ ಕರ್ನಾಟಕದ ಹದಿನಾಲ್ಕನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಹದಿಮೂರನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಹನ್ನೆರಡನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಹನ್ನೊಂದನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ದೀಪಾವಳಿ ವಿಶೇಷ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಒಂಬತ್ತನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಎಂಟನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಏಳನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಆರನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಐದನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ನಾಲ್ಕನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಮೂರನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ದ್ವಿತೀಯ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಪ್ರಥಮ ಸಂಚಿಕೆಯಲ್ಲಿ . . .

 

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com