ವಿಕ್ರಾಂತ ಕರ್ನಾಟಕದ
ಹದಿನಾಲ್ಕನೇ ಸಂಚಿಕೆಯಲ್ಲಿ:
ಸಂಪಾದಕೀಯ - ಈ ಲಂಚಗುಳಿತನಕ್ಕೆ ಏನನ್ನುತ್ತೀರಿ?
`ಕೈ ಬಿಸಿ ಮಾಡದಿದ್ರೆ ಆಗುತ್ತ ಅಂಕಲ್... ಅದಕ್ಕೆ ಕೊಟ್ವಿ... ಅಂದಳು
ಆಕೆ'. ಕಳೆದವಾರ ರವಿಕೃಷ್ಣಾರೆಡ್ಡಿಯವರು ಲಂಚದ ಬಗ್ಗೆ ಬರೆದ
ಸಂದರ್ಭದ ಒಂದೆರಡು ವಾರದ ಹಿಂದೆ ಈ ಘಟನೆ ನಡೆಯಿತು. ಬಹಳ
ದಿನಗಳಿಂದ ಆಕೆ ಸೀಮೆಎಣ್ಣೆಗಾಗಿ ಪರದಾಡುತ್ತಿದ್ದಳು. ಒಮ್ಮೊಮ್ಮೆ
ನಲವತ್ತು ರೂಪಾಯಿ ಕೊಟ್ಟು ಒಂದು ಲೀಟರ್ ಸೀಮೆಎಣ್ಣೆ ತಂದ
ಸಂಗತಿಯನ್ನೂ ಹೇಳುತ್ತಿದ್ದಳು. . .
ಓದುಗರ ಪತ್ರಗಳು
ಬದಲಾವಣೆಗೆ ಸ್ಫೂರ್ತಿಯಾದ `ವಿಕ್ರಾಂತ ಕರ್ನಾಟಕ'
ಪತ್ರಿಕೆಯಿಂದ ಈ ತರಹದ ಒಂದು ಗೆಲುವು ಸಿಗಬೇಕಿತ್ತು ಅದು ಸಿಕ್ಕಿದೆ.
ಸಮಾಜದಲ್ಲಿ ತಂದ ಒಂದು ಬದಲಾವಣೆಗೆ ಪತ್ರಿಕೆಯ ಕೊಡುಗೆ ಇದೆ
ಎನ್ನುವುದು ಹೆಮ್ಮೆಯ ಸಂಗತಿ. ನಮ್ಮ ೯ನೇ ಸಂಚಿಕೆಯಲ್ಲಿ
ಬಂದಿದ್ದ `ಭ್ರಷ್ಟಾಚಾರದ ಬೇರುಗಳು' ಎಂಬ ಶೀರ್ಷಿಕೆಯ ಅಂಕಣಕ್ಕೆ
ಸಾರ್ಥಕತೆ ಒಲಿದಿದೆ. . .
ಮಾನ್ಯರೆ,
`ವಿಕ್ರಾಂತ ಕರ್ನಾಟಕ'ದ ೧೧ನೇ ಸಂಚಿಕೆ ತರಿಸಿ ಓದಿದೆ. ಪತ್ರಿಕೆ
ವಿಶಿಷ್ಟವಾಗಿದೆ. ಉತ್ತಮ ಹೊಳಪಿನ ಕಾಗದ, ಸುಂದರ ಮುದ್ರಣ
ಉತ್ತಮ ವಿನ್ಯಾಸದ ಸಮೃದ್ಧ ೬೪ ಪುಟಗಳ ಪತ್ರಿಕೆ ಸರ್ವಾಂಗ
ಸುಂದರವಾಗಿ ಮೂಡಿ ಬಂದಿದೆ. ಅಭಿನಂದನೆಗಳು. . . .
ಮಾನ್ಯರೆ,
`ವಿಕ್ರಾಂತ ಕರ್ನಾಟಕ' ವಾರಪತ್ರಿಕೆ ವಿಭಿನ್ನವಾಗಿ ತನ್ನದೇ ಆದ
ಸೊಬಗಿನೊಂದಿಗೆ ಮೂಡಿ ಬರುತ್ತಿದೆ. ಅಗ್ರ ಲೇಖನಗಳು ಮತ್ತು ಸ್ಥಿರ
ಶೀರ್ಷಿಕೆಗಳು ಚೆನ್ನಾಗಿರುತ್ತವೆ. ಈ ವಾರದ ಕವಿತೆ `ವದಂತಿ' ಮತ್ತು
ಆಲೂರರ ಲೇಖನಗಳು ಅರ್ಥಪೂರ್ಣವಾಗಿವೆ. . . .
ಮಾನ್ಯರೆ,
ದೀಪಾವಳಿ ಸಂಚಿಕೆ ಓದಿದೆ. ಇಷ್ಟವಾಯಿತು. ನಿಮ್ಮ ಶ್ರಮ ಅದರಲ್ಲಿ
ಕಾಣಿಸುತ್ತಿದೆ. `ಕಣ್ಣೀರ ಧಾರೆ ಇದೇಕೆ?' ತುಂಬ ಚೆನ್ನಾಗಿತ್ತು.
ಯಾರ್ರೀ ಅದು ಚೋಮ? ಚೋಮನಿಗೆ ನನ್ನ ಅಭಿನಂದನೆಗಳನ್ನು
ತಿಳಿಸಿ. ಆತ ಕುವೆಂಪು ಅವರ ಚೋಮನಾದರೆ ಚೋಮ-ಚೋಮಿಯರ
ಸರಸ ಸಲ್ಲಾಪಗಳನ್ನು ಬರೆಸಿರಿ. . . .
ಮನಕಲಕಿದ ಸೂರ್ಯಕಾಂತಿ
ಬಣ್ಣಗಳು ಬದುಕಿನಂತೆ, ಅವು ಬಿಚ್ಚಿಕೊಳ್ಳಬೇಕು... ಸ್ವೇಚ್ಛೆಯಾಗಿ
ಹರಡಿಕೊಳ್ಳಬೇಕು. ಅದಕ್ಕೆ ನಯವಂತಿಕೆಯ ಅಗತ್ಯವಿಲ್ಲ.
ಕಲಾಕೃತಿಯ ನವಿರು ಕ್ರಿಯಾಶೀಲತೆಯಲ್ಲಿರಬೇಕೇ ಹೊರತು,
ಬಣ್ಣಗಳ ಮೋಪಾದ ಲೇಪನದಿಂದಲ್ಲ. ಪ್ರಕೃತಿ ಚೆಲ್ಲುವ ಬಣ್ಣಕ್ಕೆ
ಯಾವ ನಿಯಮವಿದೆ? ಸ್ವಚ್ಛಂದ ಬಣ್ಣಗಳಲ್ಲೇ ಅಲ್ಲವೇ,
ಸೃಷ್ಟಿಕ್ರಿಯೆಯ ನಿಗೂಢ ಸೌಂದರ್ಯ ಅಡಗಿರುವುದು... ಬಣ್ಣಗಳು
ಅಂತರಂಗದ ಅಭಿವ್ಯಕ್ತಿ. . . .
ಓ
ರಂಭಾ! ಓ ತಿಲೋತ್ತಮೆ!
ಪರಶುರಾಮನನ್ನು ಕುರಿತು ಬರೆಯುವಾಗ ನಾವು ನಮ್ಮ ಬಾಲ್ಯದ
ಆದರ್ಶ ವ್ಯಕ್ತಿಗಳ ಬಗ್ಗೆ ಹೇಳುತ್ತಾ ಒಬ್ಬರೇ ಮಹಿಳಾಮಣಿಯ
ಹೆಸರನ್ನೂ ಹೇಳದಿರುವ ಬಗ್ಗೆ ಮಾನಿನಿ, ವಿಮೋಚನಾ ವಲಯಗಳಿಂದ
ತೀವ್ರಪ್ರತಿಭಟನೆ ವ್ಯಕ್ತವಾಗಿದೆಯೆಂಬುದು ನಮ್ಮ ಗಮನಕ್ಕೆ
ಬಂದಿದೆ. . . .
ರಾಶಿ ಮತ್ತು ನಗು
ಇತ್ತೀಚಿನ ದಿನಗಳಲ್ಲಿ ನಗುವುದಕ್ಕಾಗಿಯೇ ನಾವು ಕ್ಲಬ್‌ಗಳನ್ನು
ಮಾಡಿಕೊಂಡಿದ್ದೇವೆ. ಪಾರ್ಕಿಗೆ ಹೋಗಿ ಬೆಳ್ಳಂಬೆಳಗ್ಗೆ `ಹಾಹಾ... ಓಹೋ'
ಎಂದು ಕಿರುಚಾಡುವವರನ್ನೂ ನೋಡಿದ್ದೇವೆ. ಆರೋಗ್ಯಕ್ಕಾಗಿ
ನಗು-ಎಂಬ ಮೂಲಮಂತ್ರವನ್ನು ಅವರಿವರ ಬಾಯಲ್ಲಿ . . .
ಮಾಸ್ಟರ್
ಕಿಶನ್
ಇದು ನಿರೀಕ್ಷಿತವಾಗಿತ್ತು. ಆದರೂ ಇಲ್ಲಿಯವರೆಗೆ ಕಾಯಬೇಕಾಯಿತು.
ಅತ್ಯಂತ ಕಿರಿಯ ಪೋರನೊಬ್ಬ ಚಿತ್ರ ನಿರ್ದೇಶಕನಾಗಿ ಗಿನ್ನಿಸ್ ದಾಖಲೆ
ಸೇರಿದ ಖ್ಯಾತಿ ಕನ್ನಡದ ಹುಡುಗ ಕಿಶನ್ ಪಾಲಾಯಿತು. ಇದೊಂದು
ಅದ್ಭುತ ದಾಖಲೆ. . . .
ಚಾಮುಂಡೇಶ್ವರಿ
ಸೇಡು v/s
ಪ್ರತಿಷ್ಠೆ
ಚುನಾವಣೆಯ ದಿನಾಂಕ ಪ್ರಕಟವಾಗುತ್ತಿರುವಂತೆಯೇ
ಚಾಮುಂಡೇಶ್ವರಿಯಲ್ಲಿ ಧೂಳು ಆಗಸಕ್ಕೆ ಚಿಮ್ಮುತ್ತಿದೆ. ಇದಕ್ಕೆ
ಕಾರಣ ಕಾಂಗ್ರೆಸ್‌ಗೆ ಸಿದ್ಧರಾಮಯ್ಯ ಗೆಲ್ಲಲೇಬೇಕಾಗಿರುವುದು,
ಹಾಗೆಯೇ ಜನತಾದಳಕ್ಕೆ ಸಿದ್ಧರಾಮಯ್ಯ
ಸೋಲಲೇಬೇಕಾಗಿರುವುದು. ಹಾಗಾಗಿ ಇದು ಸಿದ್ಧರಾಮಯ್ಯ . . .
ಅಂಬರೀಷ್ ಜಾದೂ...
ಈ ಉಪಚುನಾವಣೆಯ ಮೂಲಕ, ಮಾಜಿ ಉಪಮುಖ್ಯಮಂತ್ರಿ
ಸಿದ್ಧರಾಮಯ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ
ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇಂದಿನವರೆಗೂ ಜಾತ್ಯತೀತ
ಜನತಾದಳದಲ್ಲೇ ಇರುವ ಶ್ರೀನಿವಾಸ ಪ್ರಸಾದ್ ಹಾಗೂ ಖ್ಯಾತ ಕನ್ನಡ
ಚಲನಚಿತ್ರ ನಟ ಅಂಬರೀಷ್ ಅವರೆಲ್ಲರೂ ಒಂದಾಗಿ ಈ ಕುಟುಂಬದ
ನಿದ್ದೆಯನ್ನು ಕೆಡಿಸಿದ್ದಾರೆ ಎನ್ನುವುದು ಗುಟ್ಟಾಗೇನೂ ಉಳಿದಿಲ್ಲ. . . .
ಸುತ್ತೂರು ತಟಸ್ಥ: ಲಿಂಗಾಯಿತರು ನಿಗೂಢ
ಚಾಮುಂಡೇಶ್ವರಿ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ
ವಹಿಸಬಹುದಾದ ಲಿಂಗಾಯಿತ ಸಮುದಾಯಕ್ಕೆ ಸೇರಿದ ಸುತ್ತೂರ
ದೇಶಿಕೇಂದ್ರ ಮಠವನ್ನು ಸಂಪೂರ್ಣವಾಗಿ ತಟಸ್ಥ ನಿಲುವು ತಾಳುವಂತೆ
ಕಾಂಗ್ರೆಸಿನಲ್ಲಿರುವ ಲಿಂಗಾಯಿತ ಸಮುದಾಯದ ನಾಯಕರುಗಳು
ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆನ್ನಲಾಗಿದೆ. . .
.
`ನಮ್ಮ ಸಹಕಾರ ಇಲ್ಲವೇ ಇಲ್ಲ'
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಡಿಸೆಂಬರ್ ೪ರಂದು ನಡೆಯಲಿರುವ
ಬಗ್ಗೆ ಮೈಸೂರಿನ ಪ್ರಾಂತ್ಯದಲ್ಲಿ ಸಂಘದ ಸ್ವಯಂ ಸೇವಕರಾದ
ಭಾಸ್ಕರ್ ಎ. ಅವರ ಸಂದರ್ಶನ. . . .
ಜಾತಿಯ ಬಲಾಬಲ
ಮೈಸೂರು ಜಿಲ್ಲೆಯಲ್ಲೇ ಅತಿದೊಡ್ಡ ವಿಧಾನಸಭೆ ಕ್ಷೇತ್ರ ಎಂದೇ
ಪರಿಗಣಿಸಲ್ಪಟ್ಟಿರುವ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಲ್ಲುತ್ತದೆ. ಈ
ಕ್ಷೇತ್ರವನ್ನು ೧೯೭೮ರಲ್ಲಿ ಮೈಸೂರು ನಗರ ಜಿಲ್ಲೆಯ ೧೪
ವಾರ್ಡ್‌ಗಳ್ಳನ್ನೊಳಗೊಂಡಂತೆ ಮೈಸೂರು ಗ್ರಾಮಾಂತರ
ಜಿಲ್ಲೆಯನ್ನೊಳಗೊಂಡ ಅತಿ ದೊಡ್ಡ ಕ್ಷೇತ್ರ. . . .
ಕೆಲವು ಕಂಟಕಗಳು
ಉಪಚುನಾವಣೆ ದೇವೇಗೌಡರಿಗೆ ಎಷ್ಟು ಪ್ರಮುಖವಾಗಿದೆಯೋ ಅಷ್ಟೇ
ಪ್ರಮುಖವಾಗಿರುವುದು ಸಿದ್ಧರಾಮಯ್ಯನವರಿಗೆ ತಾವು
ಗೆಲ್ಲುವುದಾಗಿದೆ. ಈ ಚುನಾವಣೆಯಲ್ಲಿ ಎಲ್ಲ ರೀತಿಯಿಂದಲೂ ಸದ್ಯಕ್ಕೆ
ಸಿದ್ಧರಾಮಯ್ಯನವರಿಗೆ ಪೂರಕವಾಗಿ ಕಂಡು ಬರುತ್ತಿದ್ದರೂ, ಕೆಲವು
ಅಂಶಗಳಿಂದಾಗಿ ಮತದಾರರು ಅವರನ್ನು ತಿರಸ್ಕರಿಸಲೂ ಬಹುದೆಂಬ
ಆತಂಕ ಇಲ್ಲದಿಲ್ಲ. . . .
ಧಾರಾವಾಹಿ - ಎದೆಯ ಕೂಗು ಮೀರಿ...
ಇದೊಂದು ವಿನೂತನ ಕಾದಂಬರಿ. ಭಾರತೀಯ ಹೆಣ್ಣೊಬ್ಬಳು
ಅಮೇರಿಕೆಯಲ್ಲಿ ಕಂಡ ಭಾರತೀಯ ಹೆಣ್ಣುಗಳ ನೋವು,
ಶೋಷಣೆ, ಸಾಮಾಜಿಕ ಘರ್ಷಣೆಯಲ್ಲಿ ನಲಗುವ ಬಗೆಯನ್ನು
ಕಾದಂಬರಿಕಾರ್ತಿ ಅಸಿತಾ ಪ್ರಭುಶಂಕರ ವಿಶಿಷ್ಟ ಶೈಲಿಯಲ್ಲಿ ಓದುಗರಿಗೆ
ನೀಡಿದ್ದಾರೆ.
ಅತಿಥಿ ಅಂಕಣ
ಭಾಷೆಯೇ
ಮೊದಲ ವಿಜ್ಞಾನ - ಕೆ. ಟಿ. ಗಟ್ಟಿಯವರ ವಿಶೇಷ ಲೇಖನ
ಭಾಷೆಯನ್ನು ಯಾರೂ ವಿಜ್ಞಾನವೆಂದು ಕರೆಯುವುದಿಲ್ಲ. ಆದರೆ
ಭಾಷೆಯ ಕುರಿತಾದ ಸಂಶೋಧನೆಯನ್ನು ವಿಜ್ಞಾನ ಎಂದು
ಪರಿಗಣಿಸಲಾಗುತ್ತದೆ. ಭಾಷೆಯಿಲ್ಲದೆ ವಿಜ್ಞಾನವಿಲ್ಲ. ಭಾಷೆಯಿಲ್ಲದೆ
ಕಲಿಕೆಯೂ ಇಲ್ಲ, ಶಾಲೆಯೂ ಇಲ್ಲ. ಭಾಷೆಯಿಲ್ಲದೆ ಮನುಷ್ಯನೇ ಇಲ್ಲ.
. . .
ಸೋಜಿಗದ ಜಗ
ಉ.ಕೊರಿಯಾದಲ್ಲಿ ನಾಯಿಮಾಂಸ ಜನಪ್ರಿಯ!
ಉ.ಕೊರಿಯಾದಲ್ಲಿ ನಾಯಿಮಾಂಸ ದಿನೇದಿನೇ ಜಯಪ್ರಿಯವಾಗುತ್ತಿದೆ.
ಅದರಲ್ಲೂ ನಾಯಿಮಾಂಸ ತಿನ್ನುವ ಮಹಿಳೆಯರು ಇಲ್ಲಿ
ಹೆಚ್ಚುತ್ತಿದ್ದಾರೆ. ಕೊರಿಯಾದ ಸಂಪ್ರದಾಯವಾದಿ ನಾಯಿಮಾಂಸದ
ಭಕ್ಷ್ಯಗಳು ಚರ್ಮಕ್ಕೆ ಒಳ್ಳೆಯದು ಎಂದು ಇಲ್ಲಿಯವರು
ಭಾವಿಸುವುದೇ . . .
ವಿಶ್ವಕಪ್ ಫುಟ್‌ಬಾಲ್‌ಗೆ ೨೪ ಲಕ್ಷ ಡಾಲರ್!
ಈ
ವರ್ಷ ನಡೆದ ವಿಶ್ವಕಪ್ ಫುಟ್‌ಬಾಲ್ ಫೈನಲ್‌ನಲ್ಲಿ ಉಪಯೋಗಿಸಿದ
ಚೆಂಡನ್ನು ಕತಾರ್‌ನ ಶೇಖ್ ಮೊಹಮ್ಮದ್ ಬಿನ್ ಹಮನ್ ಅಲ್‌ತಾನಿ ೨೪
ಲಕ್ಷ ಡಾಲರ್ ತೆತ್ತು ತಮ್ಮದಾಗಿಸಿಕೊಂಡಿದ್ದಾರೆ! ವಿಶ್ವಕಪ್‌ನ ಅಂತಿಮ
ಪಂದ್ಯದಲ್ಲಿ . . .
ಹಕ್ಕಿ-ಜೇನ್ನೊಣಗಳು ಸಲಿಂಗಿಗಳು?
ಮನುಷ್ಯರ ಸಲಿಂಗ ಕಾಮದ ಬಗ್ಗೆ ಏನೇನೋ ತಪ್ಪು
ಕಲ್ಪನೆಗಳಿರಬಹುದು. ಆದರೆ, ಪ್ರಾಣಿ-ಪಕ್ಷಿಗಳಲ್ಲೂ ಸಲಿಂಗ ಕಾಮ
ಕಂಡು ಬರುವುದರಿಂದ ಇದು ಅಸಹಜ ಪ್ರವೃತ್ತಿಯೇನಲ್ಲ. . .
ಮಕ್ಕಳಿಗಾಗಿ
- ಪಾಪು ಗಾಂಧಿ- ೧೪
ಕಡಲು ದಾಟಿದರೆ ಬಹಿಷ್ಕಾರ
ಮೋಹನದಾಸನು ಮ್ಯಾಟ್ರಿಕ್ ಪರೀಕ್ಷೆ ಬರೆದು ಪಾಸಾದನು. ಗಾಂಧಿ
ಕುಟುಂಬದಲ್ಲಿ ಮೋಹನದಾಸನೇ ಮ್ಯಾಟ್ರಿಕ್ ಪರೀಕ್ಷೆ ಬರೆದು ಪಾಸಾದ
ಮೊದಲ ವ್ಯಕ್ತಿಯಾಗಿದ್ದುದರಿಂದ ಮನೆಯವರಿಗೆಲ್ಲ ಬಹಳ
ಸಂಭ್ರಮವಾಗಿತ್ತು. ತನ್ನ ಮಗ ಕಾಲೇಜು ಓದಿ ಬಿ.ಎ.
ಪದವಿಗಳಿಸಬೇಕೆಂಬ ತಾಯಿಯ ಆಸೆಯಂತೆ ಮೋಹನದಾಸನು . . .
ಜಿಮ್ ವಾರೆನ್ ಭಾವ ಬೆರಗಾಗಿಸುವ ಕಲಾವಿದ
ಕುಂಚಕ್ಕಿರುವ
ಖದರೇ ಅಂಥದ್ದು. ಅದರ ಅಂಚಿನಿಂದ ಮೂಡಿ ಬರುವ ಚಿತ್ರಗಳು ಕೇವಲ
ಇಂಚಗಲದ ಚೌಕಟ್ಟಿಗೇ ಸೀಮಿತವಾಗಿದ್ದರೆ ಅದರ ಬಗ್ಗೆ ಪ್ರಸ್ತಾಪಿಸುವ
ಅಗತ್ಯವಿರಲಿಲ್ಲ. ಕಲೆ ಅದೆಷ್ಟೋ ಜನರ ಬದುಕನ್ನು ಅರಳಿಸಿದೆ.
ಅದೆಷ್ಟೋ ಕನಸುಗಳೊಂದಿಗೆ ಕೈಗೂಡಿಸಿದೆ. ಅಂತಹ ಕನಸುಗಳಿಗೆ
ಬಣ್ಣ ತುಂಬಿದವ ಅಮೆರಿಕಾದ ಖ್ಯಾತ ಕಲಾವಿದ ಜಿಮ್ ವಾರೆನ್. . .
ಬಿಟಿಎಸ್ ಸ್ವಾರಸ್ಯಗಳು
ಸೀಟಿನ ಪಜೀತಿ
ಒಬ್ಬ ಹುಡುಗ ಲೇಡಿಸ್ ಸೀಟಿನಲ್ಲಿ ಕುಳಿತುಕೊಂಡ. ಅವನ ಪಕ್ಕದಲ್ಲಿ
ಒಬ್ಬಳು ಆಂಟಿ ಕುಳಿತಿದ್ದಳು. ಬಸ್‌ನದು ಬಸುರಿ ಹೊಟ್ಟೆಯ ಪರಿಸ್ಥಿತಿ.
ಮೈ-ಕೈ ಟಚ್ ಆಗುವುದು ಸಹಜ ತಾನೆ? ಈತನ ಭುಜ ಅವಳ
ಭುಜಕ್ಕೆ ತಗಲುತ್ತಿತ್ತು. ಆಗ ಆಂಟಿಗೆ ಮೈಯೆಲ್ಲ . . .
ಹುಡುಗರ ಚೇಷ್ಟೆ
ಲೇಡೀಸ್ ಸೀಟಿನಲ್ಲಿ ಮೂವರು ಕಾಲೇಜು ಹುಡುಗರು ಕುಳಿತ್ತಿದ್ದರು.
ಬಸ್ ಹತ್ತಿಬಂದ ಯುವತಿಯೊಬ್ಬಳು ರೀ... ಸೀಟ್ ಬಿಡ್ರಿಎಂದಳು.
ಹುಡುಗರ ಕಿವಿಯಲ್ಲಿ ಎಫ್‌ಎಂ ರೇಡಿಯೋ ಸೆಟ್ ಇತ್ತು. ಕಲ್ಲೇಟಿಗಿಂತ
ನಿನ್ನ ಕಣ್ಣೇಟು ಜೋರಾಯ್ತು. ತಾಳಮ್ಮಾ... ಸ್ವಲ್ಪ ತಾಳಮ್ಮಾ...
ಗಂಗಮ್ಮಾ....ಹುಡುಗರ ಗಾನಲಹರಿ . . .
ಚಾಣಾಕ್ಷತೆ
ಒಬ್ಬ ದಿಢೀರನೆ ಬಸ್ ಹತ್ತಿದ. ಐದು ರೂ. ಕಾಯಿನ್ ಸೀಟಿನ ಕೆಳಗೆ
ಬಿಸಾಕಿದ. ಕಾಯಿನ್ ತೆಗೆದುಕೊಳ್ಳಲು ಅವನೇ ಬಗ್ಗಿದ. ಅವನಿಗೆ ಕಾಯಿನ್
ತೆಗೆದುಕೊಡಲು ಸೀಟಿನಲ್ಲಿ ಕುಳಿತ್ತಿದ್ದವರೂ ಬಗ್ಗಿದರು. ಅವ ಕಾಯಿನ್
ಪಡೆದುಕೊಂಡು ಚಂಗನೆ ಬಸ್‌ನಿಂದ ನೆಗೆದ. ಇವ ಏಕೆ ಇಂಗೆ ಮಾಡಿದ
ಎಂದು ನೋಡಿಕೊಳ್ಳುವಷ್ಟರಲ್ಲಿ ಒಬ್ಬನ ಜೇಬಿನಿಂದ ಒಂದು ಸಾವಿರ
ರೂಪಾಯಿ . . .
ಲೇಡಿ ಕಳ್ಳಿ
ಕಂಕುಳಲ್ಲಿ ಮಗು ಇದ್ದವಳೊಬ್ಬಳು ಅವ್ವಾ ತುಸು ಜಾಗ ಕೊಡ್ರವ್ವ,
ನನ್ತಾವ ಮಗಿ ಐತೆಎನ್ನುತ್ತಾ ಚೆಂದನೆಯ ಚೆಲುವೆಯ ಪಕ್ಕ ಸೀಟ್
ಗಿಟ್ಟಿಸಿಕೊಂಡಳು. ಮಗು ಮುದ್ದಾಗಿದ್ದರಿಂದ ಆ ಸೀಟಿನಲ್ಲಿ ಕುಳಿತಿದ್ದ
ಚೆಲುವೆಗೆ ಮಗು ಮೇಲೆ ಪ್ರೀತಿ ಉಕ್ಕಿ ಬಂತು. ತಕ್ಷಣವೇ ಅವಳು
ತನ್ನ ಬ್ಯಾಗಿನಿಂದ ಬಿಸ್ಕತ್ ಕೊಟ್ಟು ಮುದ್ದಾಡ ಹತ್ತಿದಳು . . . .
ಒಳಮನಸ್ಸು
ಪಾರ್ಷಿಯಾಲಿಟಿ
ನನಗೆ ಐದೇ ವರ್ಷ ವಯಸ್ಸಾಗಿದ್ದರೂ ಕೂಡ ಅದೆಲ್ಲ ನನಗೆ
ಅರ್ಥವಾಗುತ್ತಿತ್ತು. ನಾನು ಮಾಡುತ್ತಿದ್ದ ಚಿಕ್ಕಪುಟ್ಟ
ತಪ್ಪುಗಳನ್ನೂ ಕೂಡ ತಾಯಿ ಬೊಟ್ಟು ಮಾಡಿ ತೋರಿಸುತ್ತಿದ್ದಳು.
ನಾನು ಏನು ಮಾಡಿದರೂ ತಪ್ಪಂತೆ! . . .
ದೇಶಾವರಿ
ಆಟ ಆಡು, ಎಣಿಸಿ ನೋಡು!
ಬಿಸಿಸಿಐಯಲ್ಲಿ ಸಾಕಷ್ಟು ಹಣ ಕೊಳೆಯುತ್ತಿದೆ: ಆದರೂ ಭಾರತದ
ಕ್ರಿಕೆಟಿಗರು ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಅಲ್ಲದೆ ಬಿಸಿಸಿಐ ಹಣ
ಸದ್ಬಳಕೆಯಾಗುತ್ತಲೂ ಇಲ್ಲ ಎಂಬರ್ಥದ ಮಾತನ್ನು ಆಡುವ
ಮೂಲಕ ಐಸಿಸಿ, ಬಿಸಿಸಿಐಗೆ ಚುರುಕು ಮುಟ್ಟಿಸಿದೆ. . . .
ಬಿಹಾರದ ಯೋಚ(ಜ)ನೆ
ಇದೊಂದು ಅಪರೂಪದ ನಿರ್ಧಾರ. ಬಿಹಾರದ ಕಲ್ಯಾಣ ಇಲಾಖೆ `ಪೆಹಚಾನ್'
ಎಂಬ ಯೋಜನೆಯೊಂದನ್ನು ಆರಂಭಿಸಿದೆ. ರಾಜ್ಯದಲ್ಲಿರುವ ಸುಮಾರು
೨ ಲಕ್ಷದಷ್ಟು ಭಿಕ್ಷುಕರನ್ನು ಆಯ್ದು, ಪ್ರತಿಭಾವಂತರನ್ನು
ಗುರುತಿಸಿ, ಸರಕಾರದ ಕಾರ್ಯಕ್ರಮಗಳ ಪ್ರಚಾರಕ್ಕೆ ಅವರನ್ನು
. . .
ಬಲಹೀನತೆಯೋ, ಸಾಮರ್ಥ್ಯವೋ?
ಇದನ್ನು ಬಲಹೀನತೆ ಎನ್ನಿ; ಅಥವಾ ತಾಕತ್ತು ಎನ್ನಿ. ೨೦೦೫ರಲ್ಲಿ
ಮುಂದುವರಿದ ರಾಷ್ಟ್ರಗಳ ಪೈಕಿ ನಮ್ಮ ದೇಶ ಅತಿಹೆಚ್ಚು
ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡು ಮೊದಲ
ಸ್ಥಾನದಲ್ಲಿದೆ!
ಈ ಅವಧಿದಲ್ಲಿ ಭಾರತ ಆಮದು ಮಾಡಿಕೊಂಡ ಶಸ್ತ್ರಾಸ್ತ್ರದ ಮೊತ್ತ
೫.೪ ಶತಕೋಟಿ ಡಾಲರ್. . . .
ಬಾಂಬೆ ಮಸಾಲ
ಬೊಮಾನ್ ಭಾಯ್
ನೀವು ಸಿನಮಾ, ಸೀರಿಯಲ್ಲುಗಳ ಮಧ್ಯೆ ಬರುವ
ಜಾಹೀರಾತುಗಳನ್ನು ಬಹಳ ಗಮನವಿಟ್ಟು ನೋಡಿದರೆ ನಟ ಬೊಮನ್
ಇರಾನಿಯ ಬಗ್ಗೆ ಗೊತ್ತಿರಲೇಬೇಕು. ಕ್ರ್ಯಾಕ್ ಜ್ಯಾಕ್‌ಬಿಸ್ಕತ್ತಿನಲ್ಲಿ ನಟಿಸಿ
ಎಲ್ಲಾ ತರದ ಪಾತ್ರಗಳಿಗೆ ಸೈ ಅನಿಸಿಕೊಂಡಿದ್ದಾರೆ ಬೊಮನ್ ಇರಾನಿ. . .
.
ಮಾದ`ಕತೆ'
ಬಾಲಿವುಡ್ ಐಟಂ ಬಾಂಬ್‌ಗಳಲ್ಲಿರುವ ಮಾದಕತೆ ಸಾಲದ್ದಕ್ಕೆ ಕೆಲವು
ನಟರು ಮಾದಕ ದ್ಯವ್ಯಗಳ ವ್ಯಸನಿಗಳಾಗಿ ಬಿಟ್ಟಿದ್ದಾರೆ. ಅದರಲ್ಲಿ
ಫರ್‌ದೀನ್ ಖಾನ್ ಅಗ್ರಸ್ಥಾನದಲ್ಲಿದ್ದಾರೆ. ಐದು ವರ್ಷಗಳ ಹಿಂದೆ
ಕೊಕೇನ್ ಸೇವಿಸಿ ಕೋರ್ಟ್‌ನಿಂದ ಕೋಕ್ ಪಡೆದಿದ ಫರ್‌ದೀನ್‌ನನ್ನು
ಮಾದಕ ದ್ರವ್ಯಗಳ ವ್ಯಾಪಾರಿ ಎಂದೇ ಪರಿಗಣಿಸಲಾಗಿತ್ತು. . . .
ನಿಶಾ ಕಾ ನಶಾ
ರಾಂಗೋಪಾಲ್ ವರ್ಮಾರ ಜೇಮ್ಸ್ ಚಿತ್ರ ನೊಡಿದ್ದರೆ ನಶೆ ಹರಿಸುವ
ನಿಶಾ ಕೊಟಾರಿಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ತನ್ನ
ಮಾದಕತೆಯಿಂದ ಈಗಾಗಲೇ ಫೇಮಸ್ ಆಗಿರುವ ನಿಶಾ ಈವರೆಗೆ
ನಟಿಸಿದ ಚಿತ್ರಗಳೆಲ್ಲವೂ ರಾಂ ಗೋಪಾಲ್ ವರ್ಮಾರದ್ದೇ. . . .
ಗುರು ಮಹಾತ್ಮೆ!
ದೊಡ್ಡವರ ಮಕ್ಕಳು ಏನು ಮಾಡಿದ್ರೂ ನಡೆಯುತ್ತೆ ಅಂತಾರೆ
ನಿಜಾನಾ? ಅಲ್ಲಾ ಗುರೂ, ಮೊನ್ನೆ ಮೊನ್ನೆವರೆಗೆ ನಮ್ಮ ಸೆಕ್ಸಿ ಗಾಯ್
ಅಭಿಷೇಕ್ ಬಚ್ಚನ್ ವೆರಿ ವೆರಿ ಡೀಸೆಂಟ್ ಫೆಲೋ, ತುಂಬಾ ಸರಳ,
ಸಾಧು, ಸಜ್ಜನಿಕೆಯ ವ್ಯಕ್ತಿ ಅಂತೆಲ್ಲಾ ಬಿಂಬಿಸಿದರೂ ಅದನ್ನು
ಉಳಿಸಿಕೊಳ್ಳೋದು ಧರ್ಮ ಅಲ್ವಾ? . . .
ಅಮೃತಧಾರೆ
ಬಾಲಿವುಡ್‌ಗೆ ಬಂದವರೆಲ್ಲಾ ಬಹುತೇಕರು ಜಾಹೀರಾತಿನಲ್ಲಿ ನಟಿಸಿ ಸೈ
ಎನಿಸಿಕೊಂಡು ಬಂದವರು. ವಿದ್ಯಾ ಬಾಲನ್, ಬೊಮನ್ ಇರಾನಿ ಅಮೃತಾ ರಾವ್
ಅಂದ ಕೂಡಲೇ ನೆನಪಾಗುವ ಚಿತ್ರ ಇಷ್ಕ್ ವಿಷ್ಕ್ . . .
ಧಾರಾವಾಹಿ ಜಾಣೆಯಾಗಿರು ನನ್ನ ಮಲ್ಲಿಗೆ - ಅಧ್ಯಾಯ-೬
ಯುಕ್ತಾ ಕಣ್ಮುಂದೆ ಶೂನ್ಯ ಆವರಿಸಿತ್ತು. ಕೂಗಲೂ ಸಹ ತ್ರಾಣವಿಲ್ಲದೆ,
ನಿಶ್ಚೆಷ್ಟಿತಳಾದಳು. ಮೈಮೇಲೆ ಬಿದ್ದ ವಸ್ತು ಮೆಲ್ಲನೇ ಅಲುಗಾಡಿದಾಗ
ಮಾತ್ರ ಅಪ್ರಯತ್ನ ಕೂಗೊಂದು ಹೊರಬಂತು. . .
ಶೃಂಗಾರ - ಕೇಶ ರಕ್ಷಣೆ
ತಲೆಕೂದಲು ಮನುಷ್ಯನ ಒಂದು ಭಾಗವಾಗಿದೆ. ಕಪ್ಪು, ನೀಳ,
ದಟ್ಟವಾದ ಹಾಗೂ ಗುಂಗುರು ಕೂದಲು ಸ್ತ್ರೀ ಹಾಗೂ ಪುರುಷರ
ಸೌಂದರ್ಯವನ್ನು ನಾಲ್ಕು ಪಟ್ಟು ಹೆಚ್ಚಾಗುವಂತೆ ಮಾಡುತ್ತದೆ.
ಆದ್ದರಿಂದ ಕೇಶವು ನಿಮ್ಮ ತಲೆಯಲ್ಲಿ ಸ್ಥಿರವಾಗಿಬೇಕಾದರೆ ಅಗತ್ಯ
ಪೋಷಣೆಯನ್ನು ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಕೂದಲ ಬುಡ
ದುರ್ಬಲಗೊಂಡು ಉದುರಲಾರಂಭಿಸುತ್ತದೆ. ಕೆಲವೊಮ್ಮೆ ರಕ್ತ
ಹೀನತೆಯ ಸಮಸ್ಯೆಯ ಉಲ್ಬಣಕ್ಕೆ ಕಾರಣವಾಗುತ್ತದೆ.
ನೆರೆಗೂದಲು, ಟಿಸಿಲೊಡೆಯುವುದು ಇತರ ಸಂಗತಿಗಳಿಂದ ಕೂದಲು
ಸೌಂದರ್ಯವನ್ನು ಕಳೆದುಕೊಳ್ಳುತ್ತದೆ. ಅದರಲ್ಲೂ
ನೆರೆಗೂದಲಂತೂ ಕಿರಿಕಿರಿಯ . . .
ದಯವಿಟ್ಟು ಕ್ಷಮಿಸಿ... ನಾವು ಮಾಡಿದ್ದು ವಿಜಯೋನ್ಮಾದದಲ್ಲಿ...!
ಶರದ್ ಪವಾರ್ ಅವರನ್ನು ವೇದಿಕೆಯಿಂದ ಹೊರನಡೆಯುವಂತೆ
ಆಸ್ಟ್ರೇಲಿಯನ್ ಆಟಗಾರರು ಕೈಯಿಂದ ತಳ್ಳಿದ್ದರು. ಹಿರಿಯರು,
ಗಣ್ಯವ್ಯಕ್ತಿ ಎಂಬುದನ್ನು ಮರೆತು ಶರದ್ ಪವಾರ್ ಅವರ ಭುಜ
ತಟ್ಟಿರುವುದು ಅನುಚಿತ ವರ್ತನೆಯೇ ಸರಿ. ಅದರಲ್ಲೂ ಡೇಮಿಯನ್
ಮಾರ್ಟಿನ್ ಅವರಂತೂ ತಳ್ಳಿರುವ ದೃಶ್ಯ ಸ್ಪಷ್ಟವಾಗಿ ಕ್ಯಾಮೆರಾಗಳಲ್ಲಿ
ಕಾಣಿಸುತ್ತಿತ್ತು.
ಪ್ಲಾಟ್‌ಫಾರ್ಮ್‌ನಲ್ಲಿ ಕಂಡವಳು... - ಹಂಝ ಮಲಾರ್ ರವರ
ಕಥೆ
ಮೂಲತ: ಪತ್ರಕರ್ತರಾಗಿರುವ ಹಂಝಮಲಾರ್, ಕತೆಗಾರರೂ
ಹೌದು. ಈ ತನಕ ಹನ್ನೊಂದು ಕಥಾ ಸಂಕಲನಗಳೂ ಸೇರಿದಂತೆ ೨೬
ಪುಸ್ತಕಗಳು ಪ್ರಕಟಗೊಂಡಿವೆ. ಕನ್ನಡದಲ್ಲಲ್ಲದೆ ಬ್ಯಾರಿ ತುಳು
ಭಾಷೆಯಲ್ಲೂ ಕೃತಿ ರಚಿಸಿದ ಹೆಗ್ಗಳಿಕೆ ಅವರದು. ಮುಸ್ಲಿಂ ಸಾಹಿತ್ಯ
ಪ್ರಶಸ್ತಿ, ಬ್ಯಾರಿ ಸಾಹಿತ್ಯ ಪ್ರಶಸ್ತಿ ಅವರ ಸಾಹಿತ್ಯ ಕೃಷಿಗೆ ಸಾಕ್ಷಿ.
೨೦೦೫ನೇ ಸಾಲಿನ ಲಂಕೇಶ್ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಇವರ ಒಂದು
ಕಥೆ ಈ ವಾರದ ವಿಕ್ರಾಂತ ಕರ್ನಾಟಕದಲ್ಲಿ...
ಜೀವದ ಗೆಳೆಯರು- ನಿಮ್ಮ ಬದುಕಿನಲ್ಲಿ ಅಂತಹವರು ಇದ್ದಾರೆಯೆ?
ಇಂಗ್ಲಿಷ್ ಮೂಲ - ಅಸಿತಾ ಪ್ರಭುಶಂಕರ್
ಅನುವಾದಕರು - ಡಾ.ಪ್ರಭುಶಂಕರ.
ನಮ್ಮ ತಾಯ್ನಾಡಿನಿಂದ ಹತ್ತಿರ ಹತ್ತಿರ ಎರಡು ದಶಕಗಳ ಕಾಲ
ದೂರವಿದ್ದುದರಿಂದಲೋ ಏನೋ ಸ್ನೇಹಿತ ಅಥವಾಸ್ನೇಹಿತೆ
ಎಂಬುದನ್ನು ಪದೇ ಪದೇ ಮರು ವ್ಯಾಖ್ಯಾನಕ್ಕೆ ಒಳಪಡಿಸಬೇಕಾಗಿ
ಬಂದಿದೆ. ನಾನು ಹುಟ್ಟಿ, ಬೆಳೆದು, ಪದವಿ ಪಡೆದ ಭಾರತದಲ್ಲಿ
ಸ್ನೇಹಿತರನ್ನು ಮಾಡಿಕೊಳ್ಳುವುದು ಎಂಬ ಕಲ್ಪನೆ ಇಲ್ಲ.
ಶಾಲೆಯಲ್ಲಿ, ಕಾಲೇಜಿನಲ್ಲಿ, ನೆರೆಹೆರೆಯಲ್ಲಿ ಇರುವ ಕೆಲವರು
ಸ್ನೇಹಿತರಾಗುತ್ತಾರೆ. ಅಲ್ಲದೆ ತಂದೆತಾಯಿಗಳ ಜೊತೆ
ಮನೆಯಲ್ಲಿರುತ್ತ ಕೆಲವು ಬಂಧುಗಳೂ . . .
ಅಂದಿನ `ಸುದ್ದಿ ಗೆಳತಿಯೊಂದಿಗೆ ಒಂದಷ್ಟು ಮಾತು-ಕತೆ!
ಅಂದಿನ ಆಕಾಶವಾಣಿಯ ಅಶರೀರವಾಣಿಯಾಗಿದ್ದ ನಾಗಮಣಿ ನಾಡಿನ
ಜನತೆಗೆ `ಸುದ್ದಿ ಗೆಳತಿ!' ಅವರ ಮಧುರ ಶಾರೀರ ಹಾಗೂ
ಲಯಬದ್ಧವಾದ ವಿಶಿಷ್ಟ ಸುದ್ದಿ ವಾಚನ ಶೈಲಿ ಜನಮನದಲ್ಲಿ
ಅವರಿಗೊಂದು `ತಾರಾಮೌಲ್ಯ' ಕಲ್ಪಿಸಿತ್ತು.
ವಿಕ್ಷಿಪ್ತ ಪ್ರೀತಿ - - ಸುಜಾತ ಕುಮಟರವರ ಕವನ
ಗವ್ವನೆಯ ರಾತ್ರಿಯಲಿ ನಿಯಾನ್
ದೀಪಗಳೆಲ್ಲ ಗಾಢ ವಿಷಾದವ ಚೆಲ್ಲಿ
ಮುದುಡುತ್ತದೆ ಮನ ಮೌನದ
ಗೂಡೊಳಗೆ ಅರ್ಥ ಹೊಮ್ಮದ ಪದ
ಗೋಜಲು ಬೆಸುಗೆ
ಜೋಕ್ಸ್
ಕಾಯಿತ್ತಿದ್ದೇನೆ
ಸಂತಾ ಮತ್ತು ಬಂತಾ ಪೇಟೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ
ಸಂತಾ ಸಿಂಗ್‌ನ ಗರ್ಲ್ ಫ್ರೆಂಡ್ ಒಬ್ಬ ದಡಿಯನ ಜತೆ
ಹೋಗುತ್ತಿದ್ದುದ್ದನ್ನು ನೋಡಿದರು. ಸಂತಾ ನೋಡಿಯೂ
ನೋಡದವನಂತೆ ನಟಿಸಿ ಮುಂದೆ ನಡೆದ. ಆದರೆ ಬಂತಾ ಬಿಡಲಿಲ್ಲ:
ಅವನು ಸಂತಾ ಜತೆ ಹೇಳಿದ: ಅಲ್ಲ, ನಿನ್ನ ಗರ್ಲ್ ಫ್ರೆಂಡ್ . .
ಸಾವು-ನೋವು
ತಮ್ಮ ಸಾವು ಹೇಗಿರಬೇಕೆಂಬ ಚರ್ಚೆಯಲ್ಲಿದ್ದರು ಸಂತಾ ಮತ್ತು
ಬಂತಾ. ಸಂತಾ ಹೇಳಿದ: `ನನ್ನ ತಾತನಿಗೆ ಬಂದಂತಹ ಶಾಂತವಾದ ಸಾವು
ಬರಬೇಕೆಂಬ ಆಸೆ ನನಗೆ. ಆದರೆ ಅದೇ. . .
ಫಾರಿನರ್
ಲಂಡನ್‌ನಿಂದ ಭಾರತಕ್ಕೆ ಮರಳಿದ ಸರ್ದಾರ್ಜಿ, ಹೆಂಡತಿಯ ಜತೆ
`ನಾನು ಫಾರಿನರ್ ಥರ ಕಾಣ್ತೀನಾ?' ಅಂತ ಕೇಳಿದ. ಅದಕ್ಕೆ ಆಕೆ
`ಇಲ್ವಲ್ಲ' ಅಂದಳು. . .
ರಂಗೀಲಾ
ಪ್ರೇಮ್ ಕಹಾನಿ
ಪ್ರೇಮ್‌ನ ಸಿನಿಮಾ ಪ್ರಕರಣ ಮತ್ತು ಪ್ರೇಮ ಪ್ರಕರಣ ದಿನದಿಂದ
ದಿನಕ್ಕೆ ನಿಗೂಢವಾಗುತ್ತಾ ಸಾಗುತ್ತಿದೆ. ಮುಹೂರ್ತವಾಗಿ ಎರಡೇ
ದಿನಕ್ಕೆ ನಿಂತೇ ಹೋಗಿದ್ದ `ಪ್ರೀತಿಯೇಕೆ ಭೂಮಿ ಮೇಲಿದೆ?' ಈಗ
ಪುನಃ ಚಿತ್ರೀಕರಣ ಆರಂಭಿಸಿದೆ. ಚಿತ್ರೀಕರಣ ನಡೆಯುತ್ತಿರುವುದು
ಈಜಿಪ್ಟ್, ಗ್ರೀಸ್‌ನಂಥ ದೇಶಗಳಲ್ಲಿ.
ರಕ್ಷಿತಾ ಅಸುರಕ್ಷಿತಾ!
ಸಿನಿಮಾಕ್ಕೆ ರಕ್ಷಿತಾ ನಾಯಕಿಯಾಗುವುದು ಅಸುರಕ್ಷಿತ.
ವಿದೇಶದಲ್ಲಿ ಚಿತ್ರೀಕರಣ ಇದ್ದರಂತೂ ಇನ್ನೂ ಅಸುರಕ್ಷಿತ!
ಇಂಥದ್ದೊಂದು ಮಾತು ಗಾಂಧೀನಗರದ ಗಲ್ಲಿ ಗಲ್ಲಿಗಳಲ್ಲಿ
ಚಾಲ್ತಿಯಲ್ಲಿದೆ. ಇದಕ್ಕೆ ಪ್ರೇಮ್ ಪ್ರಕರಣವೇ ಕಾರಣ ಎನ್ನುವುದು
ಎಲ್ಲರಿಗೂ ಗೊತ್ತು. ಈ ಹಿನ್ನೆಲೆಯಲ್ಲಿ ರಕ್ಷಿತಾ ನಾಯಕಿ ಎಂದರೆ
ನಾಯಕರೂ ನಿರ್ಮಾಪಕರೂ ನಿರ್ದೇಶಕರೂ ಏಕಕಾಲಕ್ಕೆ ಬೆಚ್ಚಿ
ಬೀಳುತ್ತಿದ್ದಾರೆ. . . .
ಮೊಗ್ಗಿನ ಜಡೆ
ರಾಮದಾಸ್ ನಾಯ್ಡು ಹೊಸದೊಂದು ಚಿತ್ರ ಮಾಡುತ್ತಿದ್ದಾರೆ. ಈ ಸಲ
ಅವರು ಮಾಡುತ್ತಿರುವುದು ಮಕ್ಕಳ ಚಿತ್ರ. ಇದು ಇರಾನಿ
ಚಿತ್ರದಂತೆ, ಜಪಾನಿ ಚಿತ್ರದಂತೆ, ಚೀನಾದ ಚಿತ್ರದಂತೆ ಭಿನ್ನವಾಗಿರುತ್ತದೆ
ಎಂದಿದ್ದಾರೆ ನಾಯ್ಡು. ಚಿತ್ರಕ್ಕೆ ಅವರು ಇಟ್ಟ ಹೆಸರು ಮೊಗ್ಗಿನ ಜಡೆ. .
. . .
ಸವಿ ಸವಿ ಹುಡುಗಿ
ಸೆವೆನೋಕ್ಲಾಕ್ ಖ್ಯಾತಿಯ ಸಂತೋಷ್ ಪಾತಾಜೆ `ಸವಿ ಸವಿ ನೆನಪು
ಹೆಸರಲ್ಲಿ ಹೊಸ ಚಿತ್ರ ನಿರ್ದೇಶಿಸಲಿರುವುದು ಹಳೆ ಸುದ್ದಿ. ಹೊಸ
ಸುದ್ದಿ ಎಂದರೆ ಅವರು ಈಗ ತಮ್ಮ. . .
ಸಖತ್ ದುನಿಯಾ
ಸೂರಿ ನಿರ್ದೇಶನದ `ದುನಿಯಾ' ಚಿತ್ರದ ಕುರಿತು ಇನ್ನಿಲ್ಲದ
ಕುತೂಹಲ ಹುಟ್ಟಿಕೊಂಡಿದೆ. ಕೇರಾಫ್ ಫುಟ್‌ಪಾತ್‌ಗಳ
ಆತ್ಮಕತೆಯಂತೆ ಕಾಣಿಸುವ ಈ ಚಿತ್ರದ ಟ್ರೇಲರ್‌ಗಳ ಕುರಿತು
ಜನರಿಂದ . . .
ಹುಬ್ಬಳ್ಳಿ ಚರಿತ್ರೆ
ಫಸ್ಟ್ ಹಾಫು ಸೂಪರ್ರು. ಸೆಕೆಂಡ್ ಹಾಫ್ ಪಾಪರ್ರು! ಇದು
`ಹುಬ್ಬಳ್ಳಿ' ಚಿತ್ರದ ಒನ್‌ಲೈನ್ ವಿಮರ್ಶೆ. ಈ ವಿಮರ್ಶೆಯನ್ನು
ನಿರ್ದೇಶಕರಾದ ಓಂ ಪ್ರಕಾಶ್‌ರಾವ್ ಸ್ವತಃ ಒಪ್ಪಿಕೊಳ್ಳುತ್ತಾರೆ.
ಏಕೆಂದರೆ ಸೆಕೆಂಡ್ ಹಾಫ್‌ನಲ್ಲಿ ಚಿತ್ರವನ್ನು ಸ್ಟಂಟ್ ಮಾಸ್ಟರ್
ಓವರ್‌ಟೇಕ್ ಮಾಡಿಬಿಟ್ಟಿದ್ದಾರೆ.
ಸಾಮ್ರಾಟ್ ಅಶೋಕ
ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಅಶೋಕ್ ಅವರನ್ನು ಏನಾದರೂ ಮಾಡಿ
ಮೂಲೆಗುಂಪು ಮಾಡಬೇಕು ಎಂದು ನಿರ್ಮಾಪಕರ ಸಂಘ ಹಟ
ತೊಟ್ಟಂತಿದೆ. ನಿರ್ಮಾಪಕರೆಲ್ಲ ಒಟ್ಟಾಗಿ ಅಶೋಕ್ ವಿರುದ್ಧ ತಿರುಗಿ
ಬಿದ್ದಿದ್ದಾರೆ. ಇನ್ನೊಂದೆಡೆ ಅಶೋಕ್ ದಿನದಿಂದ ದಿನಕ್ಕೆ ಕಾರ್ಮಿಕರ
ವಲಯದಲ್ಲಿ ಸಾಮ್ರಾಟರಾಗಿ ಗಟ್ಟಿಯಾಗುತ್ತಿದ್ದಾರೆ. ಹೀಗಿದ್ದರೂ
ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಮಿಕರೊಂದಿಗೆ ಮಾಡಿಕೊಂಡಿದ್ದ . . .
ಕೆಂಪೇಗೌಡ್ರು
`ಕೆಂಪೇಗೌಡ' ಹೆಸರಿನ ಚಿತ್ರವೊಂದರಲ್ಲಿ ಉಪೇಂದ್ರ ನಟಿಸಬೇಕಿತ್ತು.
ಅದನ್ನು ಸೂರಪ್ಪ ಬಾಬು ನಿರ್ಮಿಸಬೇಕಿತ್ತು. ನಡುವೆ ಏನೋ ಆಯಿತು.
ಸೂರಪ್ಪ ಬಾಬು ಮತ್ತು ಉಪೇಂದ್ರ ಕಿತ್ತಾಡಿಕೊಂಡರು. ಸಂಗೀತ
ನಿರ್ದೇಶಕರಾಗಿ ಗುರುಕಿರಣ್ ಕೆಲಸ ಶುರುಮಾಡಿದ್ದ ಚಿತ್ರ. . .
ಅಮೇರಿಕಾದಿಂದ ರವಿ
ಬುಷ್ ಹಲ್ಲು ಕಿತ್ತ ಅಮೆರಿಕನ್ನರು
ಕಳೆದ ಹದಿನೈದು ವರ್ಷಗಳಿಂದ ನಾನು ನನ್ನೂರಿನ ಗ್ರಾಮ
ಪಂಚಾಯಿತಿಯಿಂದ ಹಿಡಿದು ದೇಶದ ಲೋಕಸಭಾ ಚುನಾವಣೆಗಳ ತನಕ
ಅತೀವ ಆಸಕ್ತಿಯಿಂದ, ಭಯದಿಂದ, ಆಶಾವಾದದಿಂದ ನೋಡುತ್ತ
ಬಂದಿದ್ದೇನೆ. ಈ ಚುನಾವಣೆಗಳಲ್ಲಿ ಗೆದ್ದು ಬರುತ್ತಿದ್ದ ರೌಡಿಗಳಂತಿದ್ದ
ಕೆಲವು ಅಭ್ಯರ್ಥಿಗಳನ್ನು, ಅವರ ಪಕ್ಷಗಳನ್ನು, ಅದರ
ಮುಖಂಡರುಗಳನ್ನು ನೋಡುತ್ತಿದ್ದಾಗ ಮೊದಮೊದಲು ಇದೇನು
ಶಿವನೆ, ಇವರ ಅಧಿಕಾರಾವಧಿಯಲ್ಲಿ ಜನ ಬದುಕಲು ಸಾಧ್ಯವೆ,
ಸಹನೀಯ ಜೀವನ ಸಾಧ್ಯವೆ, ಭವಿಷ್ಯವುಂಟೆ ಎಂದೆಲ್ಲ . . . .
ಇಂದೇ ಚಂದಾದಾರರಾಗಿ
ವಿಕ್ರಾಂತ ಕರ್ನಾಟಕದ
ಹದಿಮೂರನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಹನ್ನೆರಡನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಹನ್ನೊಂದನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ದೀಪಾವಳಿ ವಿಶೇಷ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಒಂಬತ್ತನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಎಂಟನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಏಳನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಆರನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಐದನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ನಾಲ್ಕನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಮೂರನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ದ್ವಿತೀಯ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ ಪ್ರಥಮ ಸಂಚಿಕೆಯಲ್ಲಿ
. . .