Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 28 July 2008 10:36 PM

 ವಿಕ್ರಾಂತ ಕರ್ನಾಟಕದ ಹದಿಮೂರನೇ ಸಂಚಿಕೆಯಲ್ಲಿ:

 

ಸಂಪಾದಕೀಯ - ಕಟ್ಟುನಿಟ್ಟಿನ ದಿಟ್ಟ ಕ್ರಮ

ಈ ಬಾರಿ ಹಾಗಾಗಲಿಲ್ಲ. ಪ್ರತಿವರ್ಷ ರಾಜ್ಯೋತ್ಸವ ಪ್ರಶಸ್ತಿಯ ಸಮಯದಲ್ಲಿ ಇಂಥದೊಂದು ಗದ್ದಲ ಸದಾ ಇದಿರಾಗುತ್ತಿತ್ತು. ಒಂದು ಪಟ್ಟಿ ಹೊರಬಿದ್ದ ಬೆನ್ನಲ್ಲೇ ಇನ್ನೊಂದು ಪಟ್ಟಿ ತಯಾರಾಗುತ್ತಿತ್ತು. ಅದು ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಬೇರೆಯೇ ಆಗಿ ಕೊನೆಗೊಳ್ಳುತ್ತಿತ್ತು. ಎಲ್ಲರೂ ಬಲ್ಲಂತೆ ರಾಜ್ಯೋತ್ಸವ ಪ್ರಶಸ್ತಿ ಎಂಬುದು ಹುರಿಗಾಳಿನಂತೆ ಹಂಚಲ್ಪಟ್ಟು ಅದಕ್ಕಿರುವ ಪ್ರಾಮುಖ್ಯತೆ, ಗೌರವ ಅರ್ಹತೆಯ ಮಾನದಂಡವೆಲ್ಲ ಮಣ್ಣುಪಾಲಾಗುತ್ತಿತ್ತು.


ರಾಷ್ಟ್ರಕವಿಯ ಅಂತರಂಗದ ಹಾಡು - ಜಿಎಸ್‌ಎಸ್ ಬರೆದ ವಿಶೇಷ ಲೇಖನ

ಶ್ರೀ ಕುವೆಂಪು ಅವರಂತೂ ನಿಸ್ಸಂದೇಹವಾಗಿ ನನ್ನ ಕಾವ್ಯ ಜೀವನವನ್ನು ರೂಪಿಸಿದವರು. ಜತೆಗೆ ನಾನು ಅವರಿಗೆ ಹತ್ತಿರವಾದ ವಿದ್ಯಾರ್ಥಿಕೂಡ. ನಿರಂತರವಾಗಿ ಐದು ವರ್ಷಗಳ ಕಾಲ ಮಹಾರಾಜಾ ಕಾಲೇಜಿನಲ್ಲಿ ಅವರ ವಿದ್ಯಾರ್ಥಿಯಾಗುವ ಸುಯೋಗ ನನಗೆ ಪ್ರಾಪ್ತವಾಯಿತು. ಅಷ್ಟೇ ಅಲ್ಲ ನನ್ನ ಸಂಶೋಧನ ಪ್ರಬಂಧದ ನಿರ್ದೇಶಕರೂ ಅವರೇ. . .


ರಾಷ್ಟ್ರಕವಿಯ ಮನೆ-ಮನದನ್ನೆಯ `ಚೈತ್ರ' ಕಾಲದಲ್ಲಿ... - ಕಗ್ಗೆರೆ ಪ್ರಕಾಶ್

ರಾಷ್ಟ್ರಕವಿ ಡಾ. ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ಅವರ ಮನೆ `ಚೈತ್ರ'ಕ್ಕೆ ಈಗ ನಿಜವಾಗಿಯೂ ಚೈತ್ರೋತ್ಸವದ ಕಾಲ. ಉತ್ಸಾಹ, ಲವಲವಿಕೆ ಮನೆಯ ತುಂಬ ತುಳುಕಾಡುತ್ತಿದೆ. ಅಭಿಮಾನಿಗಳ, ಹಿತೈಷಿಗಳ ಅಭಿನಂದನೆ, ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.


ಚಿಂತಾಮಣಿ - ಗಣಪತಿ ಸತ್ಯವೋ ಮಿಥ್ಯವೋ?

ನಮ್ಮ ಶಾಲಾಕಾಲೇಜು ದಿನಗಳಲ್ಲಿ ಅಧ್ಯಾಪಕರುಗಳು ನಮಗೆ ಘನಗಾಂಭೀರ್ಯದಿಂದ ಬೋಧಿಸಿದ ಅನೇಕಾನೇಕ ವಿಷಯಗಳಲ್ಲಿ ನಮ್ಮ ತಲೆಯಲ್ಲಿ ದಟ್ಟವಾಗಿ ಉಳಿದಿರುವ ಕೆಲವೇಕೆಲವುಗಳಲ್ಲಿ ಒಂದು ನಳ-ದಮಯಂತಿಯರ ಲವ್ ಸ್ಟೋರಿ. ಅದರಲ್ಲಿ ಸದ್ಯಕ್ಕೆ ಪ್ರಸ್ತುತವಾಗಿರುವುದು ದೇವತೆಗಳ ವರ್ಣನೆ.


ಮುಖಪುಟ ಲೇಖನ - ನಮ್ಮ ಜೀವಕ್ಕೆ ರಕ್ಷಣೆ ಏನು?

ಯುಗಾದಿಯ ನಿರ್ಮಾಪಕ ಪ್ರವೀಣ್ ಕುಮಾರ್ ನಟ ರವಿಚಂದ್ರನ್ ಅವರನ್ನು ಅವಾಚ್ಯವಾಗಿ ಬೈದದ್ದು, ಚಿತ್ರೀಕರಣದಿಂದ ಹೋಗದಂತೆ ಗೂಂಡಾಗಿರಿ ಮೆರೆದದ್ದು ಚಿತ್ರರಂಗವನ್ನು ತಲ್ಲಣಿಸಿದೆ. ನಿರ್ಮಾಪಕರ ಸಂಘ ನಾಯಕನಟರ ವಿರುದ್ಧ ತಳೆದಿರುವ ನಿಲುವಿಗೂ ಇಂಥ `ಚೀಪ್' ವರ್ತನೆಗೂ ಸಂಬಂಧವಿದೆಯೇ? ಇವತ್ತು ನಿರ್ಮಾಪಕರುಗಳೂ `ಅಮ್ಮ' `ಅಕ್ಕ' ಸಂಸ್ಕೃತಿಯನ್ನು ಬಿಂಬಿಸುತ್ತಿರುವುದು ಚಿತ್ರರಂಗ ಪಾತಾಳದ ಹಾದಿ ಹಿಡಿದಿರುವುದನ್ನು ತೋರಿಸುವುದಿಲ್ಲವೆ?


ಚಿತ್ರರಂಗ ಚಿಂದಿ ಚಿತ್ರಾನ್ನ

ನಿರ್ಮಾಪಕರ ಬಂದ್, ಕಾರ್ಮಿಕರ ಒಕ್ಕೂಟದ ಬಹಿಷ್ಕಾರ, ಈಗ ಅಶೋಕ್ ಎತ್ತಂಗಡಿಯ ಹುನ್ನಾರ-ಕನ್ನಡ ಚಿತ್ರರಂಗದ ಕುಬ್ಜತೆಗೆ ಇದಕ್ಕಿಂತ ಉದಾಹರಣೆ ಬೇರೆ ಇರಲಿಕ್ಕಿಲ್ಲ. ಒಂದು ಕಡೆ `ಡಬ್ಬಿಂಗ್ ಮಾಡ್ತೀವಿ' ಎಂದು ಕೂಗುವ ನಿರ್ಮಾಪಕರು ಯಾವ ದಾರಿಗೆ ಬೇಕಾದರೂ ತೆರಳಲು ಸಿದ್ಧರಿದ್ದಾರೆ ಎಂಬುದು ನಿಜವಲ್ಲವೆ? . . .


ಅತೃಪ್ತಿಯ ಬೆಂಕಿ

ಸಮ್ಮಿಶ್ರ ಸರ್ಕಾರದಲ್ಲಿ ಅತೃಪ್ತಿಯ ಹೊಗೆಯಾಡುತ್ತಿದೆಯೆ? ಎಂದು ಯಾರಾದರೂ ಕೇಳಿದರೆ, ಹೊಗೆಯಲ್ಲ, ಬೆಂಕಿ! ಎಂಬ ಉತ್ತರ ಬರುತ್ತದೆ. ಯಡಿಯೂರಪ್ಪನವರು ಹೇಗಾದರಾಗಲಿ ಸರ್ಕಾರ ಉಳಿದರೆ ಸಾಕು ಅಂದುಕೊಂಡರೆ ಹಾರ್ಡ್‌ಕೋರ್ ಬಿಜೆಪಿ ಆರ್‌ಎಸ್‌ಎಸ್ ಬಿಡುತ್ತಿಲ್ಲ. . . .


ಕುಮಾರ್ ಸಂಕಟ

`ಯಾವೊನಿಗ್ ಬೇಕಾಗಿದೇರಿ... ಹಾಳಾಗ್ ಹೋಗ್ಲಿ ಬಿಡಿ' ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಆಪ್ತರೊಂದಿಗೆ ಹತಾಶೆಯಿಂದ ಹೇಳಿಕೊಳ್ಳುವುದರೊಂದಿಗೆ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೂ ಸರಿಯಾಗಿಲ್ಲ ಎಂಬುದು ಖಚಿತವಾಗತೊಡಗಿದೆ. ಆದರೆ ಸರ್ಕಾರ ಬೀಳುತ್ತದೆಯೇ? ಎಂಬ ಪ್ರಶ್ನೆ ಎದುರಾದರೆ `ಬಿದ್ದರೆ ಬೀಳಲಿ ಬಿಡಿ. . .


ವಿಧಾನ ಸೌಧದೊಳಗೆ ಕನ್ನಡ ಇದೆಯೇ?

ಕನ್ನಡ ಭಾಷೆಯ ಬಗ್ಗೆ ಮಾತನಾಡುವುದು ಇಂದು ಅತ್ಯಂತ ಕ್ಲೀಷೆಯ ಸಂಗತಿಯಾಗಿದೆ. ನಿಜವಾದ ಕನ್ನಡ ಪ್ರೇಮ ಕನ್ನಡಿಗರಿಗೂ ಇಲ್ಲ, ಆಳುವ ಸರ್ಕಾರಗಳಿಗೂ ಇಲ್ಲ. ಕನ್ನಡವೇ ಸರ್ವಸ್ವವಾಗಬೇಕು ಎಂದು ಹೋರಾಡುವ ಕನ್ನಡಿಗರು ಅವರ ಮಕ್ಕಳ ಭವಿಷ್ಯವನ್ನು ಇಂಗ್ಲಿಷ್ ಮೂಲಕ ರೂಪಿಸಲು ಹೆಣಗುತ್ತಿದ್ದಾರೆ. . .


ಮಣ್ಣಿನ ರಸ್ತೆಗಳೇ ಗತಿ!

ಹಿಂದುಳಿದ ಪ್ರದೇಶ ಹೈದ್ರಾಬಾದ್ ಕರ್ನಾಟಕ- ಹೈದ್ರಾಬಾದ್ ಕರ್ನಾಟವೆಂದರೆ ಹಿಂದುಳಿದ ಪ್ರದೇಶ ಎಂದೆನ್ನಿಸುವಷ್ಟು ಅರ್ಥ ಸಮಾನತೆಯನ್ನು ಪಡೆದಿರುವ ಈ ಪ್ರದೇಶದ ಹಿಂದುಳಿದಿರುವಿಕೆ ಯಾವಾಗಿನಿಂದ ಶುರುವಾಯಿತು ಎಂಬುದನ್ನು ಹೇಳುವುದು ಕಷ್ಟ. ಆದರೆ ಇದು ಈ ಭಾಗದ ಜನಗಳ ಮನೋಧರ್ಮವೇ ಆಗಿರೋದು ಮಾತ್ರ ಸುನಿಶ್ಚಿತ. . .

 
ಅತಿಥಿ ಅಂಕಣ - ನಾಡ ಕಟ್ಟಿದ ತ್ರಿಮೂರ್ತಿಗಳು-೩
ಬೇಂದ್ರೆ ಮಾಸ್ಟರ್

ನಲ್ವತ್ತು ಸಾವಿರಕ್ಕೂ ಹೆಚ್ಚಿನ ಬೇಂದ್ರೆ ಸಂಗ್ರಹದ ಈ ಅಪರೂಪದ ವಿವಿಧ ಪುಸ್ತಕಗಳ ಪುಟಪುಟದಲ್ಲಿ ಬೇಂದ್ರೆ ತಮ್ಮ ಅಕ್ಷರಗಳಲ್ಲಿ ಮಾಡಿದ ಅವರ ಹೊಳಹಿನ ಟಿಪ್ಪಣಿಗಳಿವೆ. ಅವರ ಕವಿತೆಗಳ ಕೆಲ ಸಾಲುಗಳು ಮೂಲರೂಪದಲ್ಲಿ ಈ ಟಿಪ್ಪಣಿಗಳಲ್ಲಿ ನಮಗೆ ಸಿಗುತ್ತವೆ. ಈ ಪುಸ್ತಕಗಳನ್ನು ಈಗ ಹುಬ್ಬಳ್ಳಿಯ . . .


ಇಂಗ್ಲಿಷ್ ಕಲಿಸುವುದಕ್ಕೆ ಏನಿದೆ ಸಿದ್ಧತೆ ? - ನರೇಂದ್ರ ಪೈ

ಸರಕಾರದ ನಿರ್ಧಾರದ ಹಿಂದೆ ನಮ್ಮ ಮಕ್ಕಳಿಗೆ ಶುದ್ಧವಾದ ಇಂಗ್ಲಿಷನ್ನು ಸಮರ್ಥವಾಗಿ ಕಲಿಸುವುದಕ್ಕೆ ಅಗತ್ಯವಾದ ಯಾವುದೇ ಸಿದ್ಧತೆಗಳು ಅಗತ್ಯ ಎಂಬ ಸಾಮಾನ್ಯ ಜ್ಞಾನವಾದರೂ ಇರುವಂತೆ ಕಾಣುತ್ತಿಲ್ಲ. ಸದ್ಯ ಇರುವ ಅಧ್ಯಾಪಕರೇ ಇಂಗ್ಲಿಷನ್ನೂ ಕಲಿಸುತ್ತಾರೆ, ಬಹುಶಃ. . . .


ಇಂಗ್ಲಿಷ್ ವೃತ್ತಿಗೆ; ಕನ್ನಡ ಪ್ರವೃತ್ತಿಗೆ - ಪ್ರಶಾಂತ್ ಬೀಚಿ

ಅದೇನೆ ಇರಲಿ. ನಮಗೆ ಕನ್ನಡ ಬಹಳ ಮುಖ್ಯ, ಈ ಜನ್ಮದಲ್ಲಂತೂ ಅದನ್ನು ಬಿಟ್ಟು ಬದುಕಿರುವುದು ಅಸಾಧ್ಯವಾದ ಮಾತು. ನನ್ನಂತ ಕೋಟ್ಯಾಂತರ ಜನರಿಗೆ ಇದು ಸರಿಹೊಂದುತ್ತದೆ. ಆದರೂ ನಮಗೆ ಅನ್ನಿಸಿದೆ ಕನ್ನಡದಲ್ಲಿ ನಾವು ಬಹಳಷ್ಟು ಕಲಿತಿದ್ದೇವೆ, ನಂತರ ಇಂಗ್ಲಿಷ್ ಕೂಡ ಕಲಿತೆವು. ಇಂಗ್ಲಿಷ್ ಕಲಿತ ತಕ್ಷಣ ನಾವು ಕನ್ನಡವನ್ನು ಮರೆಯಲಿಲ್ಲ. ಎಲ್ಲವನ್ನು ಇಂಗ್ಲೀಷ್ ಮಯ ಮಾಡಲಿಲ್ಲ. ನಮಗೆ ಇಂಗ್ಲಿಷ ಒಂದು ಅನಿವಾರ್ಯವಾಯಿತು. ಹೊಟ್ಟೆ ಹೊರೆಯಲು ಅದು ಸಹಾಯ ಮಾಡಿತು. . . .


ಬಿಸಿಸಿಐಗೊಂದು ಕಾಲ ಅಜರ್‌ಗೊಂದು ಕಾಲ!

ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿ ನಿಷೇಧಕ್ಕೊಳಗಾಗಿದ್ದ ಮಾಜಿ ನಾಯಕ ಮಹಮ್ಮದ್ ಅಜರುದ್ದೀನ್‌ರಿಗೆ ಒಳ್ಳೆಯ ಕಾಲ ಬರುವಂತಿದೆ. ಕಳೆದ ನಾಲ್ಕಾರು ವರ್ಷಗಳಿಂದ ಕ್ರಿಕೆಟ್‌ನ ಆಗುಹೋಗುಗಳಿಂದ ಬಹಳ ದೂರ ಉಳಿದಿದ್ದ ಅಜರ್, ಆ ಸಮಯದಲ್ಲಿ . . .


ನೂರು ಕೋಟಿಗೊಬ್ಬ!

ಚಿತ್ರರಂಗದಲ್ಲಿ ಬಾಲಿವುಡ್ ನಟರ ದರ್ಬಾರು, ಗತ್ತು-ಗೈರತ್ತು ಏನೇ ಇರಬಹುದು; ಆದರೆ ಸಂಭಾವನೆ ವಿಷಯದಲ್ಲಿ ಮಾತ್ರ ತಮಿಳು ನಟ ಸೂಪರ್ ಸ್ಟಾರ್ ರಜನೀಕಾಂತ್‌ರನ್ನು ಮೀರಿಸಲು ಅವರಿಗೆ ಸಾಧ್ಯವಾಗಿಲ್ಲ! ಸ್ಟೈಲ್‌ಕಿಂಗ್ ರಜನೀಕಾಂತ್ ಈಗ ಏಷ್ಯಾದ ಎರಡನೇ ಅತ್ಯಧಿಕ ಸಂಭಾವನೆ ಪಡೆಯುವ ನಟ ಎನಿಸಿಕೊಂಡಿದ್ದಾರೆ. ಮೊದಲ ಸ್ಥಾನದಲ್ಲಿರುವವರು ಜಾಕಿಚಾನ್. . .


ಅಪೂರ್ವ ಸಹೋದರರು!

ಇತ್ತೀಚೆಗೆ ಅಜೀಂ ಪ್ರೇಮ್‌ಜಿಯಿಂದ ಕುಬೇರ ಪಟ್ಟ ಕಿತ್ತುಕೊಂಡು ರಿಲಯನ್ಸ್‌ನ ಮುಖೇಶ್ ಅಂಬಾನಿ ಸುದ್ದಿ ಮಾಡಿದ್ದರು. ಮುಖೇಶ್ ಭಾರತದ ನಂ. ೧ ಶ್ರೀಮಂತ ಪಟ್ಟ, ಬಳಿಕದ ಸ್ಥಾನ ಅಜೀಂ ಪ್ರೇಮ್‌ಜಿಗೆ ಅನಂತರದ ಸ್ಥಾನ ಅನಿಲ್ ಅಂಬಾನಿಗೆ ಸಿಕ್ಕಿ ಇನ್ನೇನು ತಿಂಗಳು ಕಳೆದಿಲ್ಲ. . .


ಅಪರಾಧ ಮತ್ತು ಶಿಕ್ಷೆ

ಸ್ನೇಹಿತರಿಂದ ಪಡೆದಿದ್ದ ಸಾಲದಿಂದ ಮುಕ್ತನಾದ ಬಳಿಕ, ಚಿಕ್ಕಣ್ಣ ಆ ವಿಷಯವನ್ನು ಮರೆತೇ ಬಿಟ್ಟಿದ್ದನು. ಆ ಬಗ್ಗೆ ಅವನು ಮೋಹನದಾಸನೊಂದಿಗೆ ಮತ್ತೊಮ್ಮೆ ಚರ್ಚಿಸಿದ್ದಿರಲಿಲ್ಲ. ಮೋಹನದಾಸನೂ, ಚಿಕ್ಕಣ್ಣನ ಬಂಗಾರದ ಕಡಗ ಮಾರುವ ಸಂದರ್ಭದಲ್ಲಿ ಹಾಗೆಯೇ ಭಾವಿಸಿದ್ದನು. ಕಷ್ಟವೆಲ್ಲ ಕಳೆದು ಹೋಗಿ ನಿರಾಳವಾಗಿ ಉಸಿರಾಡಬಹುದೆಂದು ನಂಬಿದ್ದನು. . . .


`ನೋ' ಎನ್ನಲು ಎಷ್ಟು ಕಷ್ಟ

ಆ ಗೃಹಿಣಿಯದು ಸುಖೀ ಸಂಸಾರ. ಮದುವೆಯಾಗಿ ಏಳೆಂಟು ವರ್ಷಗಳಾಗಿವೆ. ಗಂಡ ಒಳ್ಳೆಯ ನೌಕರಿಯಲ್ಲಿದ್ದಾನೆ. ಅವರು ವಾಸವಾಗಿದ್ದ ಮನೆಯ ಇನ್ನೊಂದು ಪೋರ್ಷನ್‌ನಲ್ಲಿ ಒಬ್ಬ ವೃದ್ಧ, ತನ್ನ ಹೆಂಡತಿ, ಮಗ-ಸೊಸೆಯೊಂದಿಗೆ ವಾಸವಾಗಿದ್ದ. ವೃದ್ಧ ಮಿಲಿಟರಿಯಲ್ಲಿದ್ದು ಈಗ ನಿವೃತ್ತನಾಗಿದ್ದಾನೆ. . .


ರಾಖಿ ರಂಪಾಟ

ಈ ಕಿಸ್ಮಮ್ಮಗಳ ಕತೇನೇ ಇಷ್ಟು. ಪುಕ್ಕಟೆ ಪ್ರಚಾರ ಸಿಗೋದಾದರೆ ಪದೇ ಪದೇ ಕಾಲು ಕರೆದು ಜಗಳವಾಡಲು ಮುಂದಾಗುತ್ತಾರೆ. ಪಾರ್ಟಿಯೊಂದರಲ್ಲಿ ಪಂಜಾಬ್ ಆಲ್ಬಂ ತಾರೆ ಮಿಕಾ ಸಿಂಗ್ ಹಾಟ್‌ಗರ್ಲ್ ರಾಖಿ ಸಾವಂತ್‌ಗೆ ಸಾರ್ವಜನಿಕವಾಗಿ ತುಟಿಕಚ್ಚಿದ ಸಂಗತಿ ತೀರಾ ಹಳೇಯದಾಯಿತು.


ಅಮೀರ್ ಬನ್‌ಗಯಾ ಡೈರೆಕ್ಟರ್

`ಆಡು ಮುಟ್ಟದ ಸೊಪ್ಪಿಲ್ಲ ಅಮೀರ್ ಮಾಡದ ಕೆಲಸವಿಲ್ಲ.' ಬಾಲಿವುಡ್‌ನಲ್ಲಿ ಈ ಗಾದೆಗೆ ತುಂಬಾ ಮರ್ಯಾದೆ ಇದೆ. ಅಮೀರ್ ಚಿತ್ರಕ್ಕೆ ಸಂಬಂಧಿಸಿದಂತೆ ಏನೇ ಮಾಡಿದರೂ ಅದು ಢಿಪರೆಂಟಾಗಿರುತ್ತೆ ಅನ್ನೋದಕ್ಕೆ ಅಮೀರ್ ಚಿತ್ರಗಳೇ ಸಾಕ್ಷಿ. ಈಗ ಅಮೀರ್ ನಿರ್ದೇಶಕ!


ಶೈನಿ ಶೈನಿಂಗ್

ಎಲ್ಲದಕ್ಕೂ ನಸೀಬಿರಬೇಕು. ಈ ಹುಡುಗನನ್ನೇ ನೋಡಿ. ಈತ ಶೈನಿ ಅಹುಜಾ. ಮೊನ್ನೆ ಮೊನ್ನೆಯಷ್ಟೇ ಚಿತ್ರವೊಂದರಲ್ಲಿ ಪಾತ್ರ ಪಡೆದು ಈಗ ೧ ಕೋಟಿ ಡಿಮ್ಯಾಂಡ್ ಮಾಡುವ ಹಾಗಾಗಿದ್ದಾನೆ ಈ ಹುಡುಗ. ಶೈನಿ ಅಹುಜಾ ನಟಿಸಿದ ಎರಡು ಹಿಟ್ ಚಿತ್ರಗಳಾದ `ಗ್ರಾಂಗ್ ಸ್ಟರ್' ಹಾಗೂ `ವೋ ಲಮ್ಹೇ' ಯಿಂದ ಒಳ್ಳೆಯ ಹೆಸರು ಹಣ ಸಿಕ್ಕಿತು ನಿಜ. . .


ಐಡಿಯಲ್ ಸ್ಟಾರ್ ಅಭಿಜೀತ್

ಅಭಿಜೀತ್ ಸಾವಂತ್! ವಾಹ್! ಪ್ರಪ್ರಥಮ ಇಂಡಿಯನ್ ಐಡಲ್ ಹೆಸರು ಯಾರು ಕೇಳಿಲ್ಲ ಹೇಳಿ. ರಾತ್ರೋ ರಾತ್ರಿ ಇಡಿ ದೇಶದ ಸ್ಟಾರ್ ಆಗಿ ಹೊರ ಹೊಮ್ಮಿದ ಅಭಿಜೀತ್ ಸಾವಂತ್‌ನನ್ನು ಕೆಲವೆಡೆ ಕಡೆಗಣಿಸಲಾಗುತ್ತಿದೆ ಅನ್ನುವ ಅಪವಾದಗಳು ಹಲವೆಡೆ ಕೇಳಿ ಬರುತ್ತಿದೆ. . .


ತಾರಾ ತಾಲೀಮು

ಬಾಲಿವುಡ್ ತಾರೆ ತಾರಾ ಶರ್ಮಾಳಿಗೆ ಪರ್ತಕರ್ತರಿಂದ ಕೆಲವು ಟಿಪ್ಸ್ ಬೇಕಂತೆ ಯಾಕಂತೀರಿ? ಬೇರೇನಿಲ್ಲ ತಾರಾ ಶರ್ಮ ನೂತನ ಜೇಮ್ಸ್ ಬಾಂಡ್‌ರನ್ನು ಸಂದರ್ಶನ ಮಾಡಲಿದ್ದಾಳೆ! ಹೌದು ಕೆಲವೇ ದಿನದಲ್ಲಿ ಆಕೆ ನ್ಯೂಯಾರ್ಕ್‌ಗೆ ಹಾರಲಿದ್ದಾಳೆ. ಆದರೆ ಒಂದು ಮಾತು. ಇದು ಸಿನಿಮಾ ಅಲ್ಲ. ಖಾಸಗಿ ಚಾನೆಲ್‌ವೊಂದಕ್ಕಾಗಿ ಸಂದರ್ಶನ. . .
 

ಸೊಹ ಇನ್ ಲವ್?!

ಸೊಹ ಆಲಿ ಖಾನ್ ಗೊತ್ತಲ್ಲ. ಅದೇ ನಮ್ ಸೈಫ್ ಅಲಿ ಖಾನ್ ತಂಗಿ. ಅಯ್ಯೋ, ಅದೇರಿ ಶರ್ಮಿಳಾ ಠಾಗೋರ್ ಮಗಳು! ಆಕೆ ಈಗ ಇಷ್ಕ್‌ನಲ್ಲಿ ಬಿದ್ದಿದಾಳೆ. ಅಭಯ್ ಡಿಯೋಲ್ ಜೊತೆ ನಟಿಸಿದ್ದಾಗಿನಿಂದ ಈ ಸುದ್ದಿಗೆ ಬಲವಾದ ರೆಕ್ಕೆ ಪುಕ್ಕ ಹುಟ್ಟಿದ್ದು. ಆದರೆ ಅಭಯ್ ಡಿಯೋಲ್ ಇದನ್ನು ಸಾರಾಸಗಟಾಗಿ . . .


ಧಾರಾವಾಹಿ - ಜಾಣೆಯಾಗಿರು ನನ್ನ ಮಲ್ಲಿಗೆ - ಅಧ್ಯಾಯ-೫

ಯುಕ್ತಾಳ ಭೀತಿಯ ಆಕ್ರಂದನದಿಂದ ಬೆಚ್ಚಿದ ಆದಿತ್ಯ, ಒಂದಡಿ ಹಿಂದೆ ಎಗರಿದ. ಅವನ ಕೈಯಲ್ಲಿದ್ದ ಪಿಸ್ತೂಲು ಹಾರಿ ನೆಲದ ಮೇಲೆ ಬಿದ್ದಿತು. ನೋ ಮಿ|| ಆದಿತ್ಯಾ ನನಗೇನೂ ಮಾಡಬೇಡಿ. . . ಯುಕ್ತಾ ಮತ್ತೊಮ್ಮೆ ಕೂಗಿದಳು. ಆದಿತ್ಯ ಅಚ್ಚರಿಯಿಂದ ಅವಳತ್ತ ನೋಡಿದ. ನಂತರ ಕೆಳಗೆ ಬಗ್ಗಿ ಪಿಸ್ತೂಲ್ ಎತ್ತಿಕೊಂಡು. . .


ವಾಟರ್ ಪ್ರೂಫ್ ಮೇಕಪ್

ಸೌಂದರ್ಯ ಪ್ರಸಾಧನಗಳಿಂದ ಸಾಲಂಕೃತ ರಾಗಿರುವ ಮಾನಿನಿಯರಿಗೆ ಬೇಸಿಗೆಯಿಂದ ಅಥವಾ ಮಳೆಯಿಂದ ತಮ್ಮ ಮೇಕಪ್ ಹಾಳಾದರೆ ಎಂಬ ಭಯ ಸದಾ ಕಾಡು ತ್ತಿರುತ್ತದೆ. ಯಾವುದೇ ಬೇಸರ, ಬಳಲಿಕೆ ಇತ್ಯಾದಿಗಳಿಂದ ಮುಖದ ಮೇಲಿನ ಸೌಂದರ್ಯ ಮಾಸದಂತೆ, ವದನದ ಪ್ರಸನ್ನತೆ ಕಾಪಾಡುವಂತಹ ಮೇಕಪ್ ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ. . . .


ಹೊಸ ದೋಸ್ತಿಗಳ ಚರ್ಚೆ

ಸ್ಥಳೀಯ ಚುನಾವಣೆಗಳು ಹತ್ತಿರವಾಗುತ್ತಿ ದ್ದಂತೆಯೇ ಮಹಾರಾಷ್ಟ್ರದಲ್ಲಿ `ಹೊಸ ದೋಸ್ತಿಗಳ' ಬಗ್ಗೆ ಈಗಲೇ ಸಾಕಷ್ಟು ಚರ್ಚೆಗಳಾಗುತ್ತಿವೆ. ಅಂತಹದ್ದೇ ಬೆಳವಣಿಗೆಯೊಂದರಲ್ಲಿ `ಮಾಜಿ' ಭೂಗತ ದೊರೆ ಅರುಣ್‌ಗಾವ್ಲಿ ಈಗ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆಯೊಂದಿಗೆ ಕೈಜೋಡಿಸಲು ಸಿದ್ಧ ಎಂದು ಘೋಷಿಸಿದ್ದಾರೆ. . .


ಎಂಟರ ಪೋರ ಠಾಣಾಧಿಕಾರಿ

ನಗರದ ಪ್ರತಿಷ್ಠಿತ ಪೊಲೀಸ್ ಠಾಣೆಯೊಂದಕ್ಕೆ ಎಂಟು ವರ್ಷದ ಪೋರ ಠಾಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುವ ಸದವಕಾಶವನ್ನು ಆಂಧ್ರಪ್ರದೇಶದ ಪೊಲೀಸರು ಮಹತ್ ಕೋಠಾರಿ ಎಂಬ ಪೋರನಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಆದರೆ ಪೋರ ಪೊಲೀಸ್ ಠಾಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದು ಎರಡು ಗಂಟೆಯವರೆಗೆ ಮಾತ್ರ ಎನ್ನುವುದು ವಿಶೇಷ. . .

 
ಕೇಂದ್ರದ ಕಟ್ಟೆಚ್ಚರ

ರಾಜ್ಯದಲ್ಲಿ ಪ್ರವಾಸಿಗರು ಆಗಮಿಸಲು ಆರಂಭವಾಗುತ್ತಿದ್ದಂತೆಯೇ ಹಾಗೂ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಗೋವಾ ರಾಜ್ಯ ಅಣಿಗೊಳ್ಳುತ್ತಿದ್ದಂತೆಯೇ, ಕೆಲವು ಭಯೋತ್ಪಾದಕ ಸಂಘಟನೆಗಳು ಕೆಲವು ವರ್ಷಗಳ ಹಿಂದೆ ಇಂಡೋನೇಷಿಯಾದ ದ್ವೀಪದಲ್ಲಿ ಬಾಂಬ್‌ಗಳನ್ನು ಸ್ಫೋಟಗೊಳಿಸಿದಂತೆಯೇ ಇಲ್ಲಿಯೂ ಸ್ಫೋಟಿಸುವ ಬಗ್ಗೆ ಕೇಂದ್ರ ಬೇಹುಗಾರಿಕಾ ದಳಕ್ಕೆ ದೊರೆತಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಕಟ್ಟೆಚ್ಚರ ವಹಿಸಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ನಿರ್ಧರಿಸಿವೆ.


ಉಪವಾಸ ಸತ್ಯಾತ್ರಹ

ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ವೈಜಾಗಿಜಂ ಬಂದರು ಕಾಮಗಾರಿ ಯೋಜನೆಗೆ ಆದಷ್ಟು ಬೇಗನೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕೆಂದು ಆಗ್ರಹಿಸಿ, ಜನಕ್ರಾಂತಿ ಪಕ್ಷದ ೨೫ ಜನ ಕಾರ್ಯಕರ್ತರು ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಅದರ ನೇತೃತ್ವವನ್ನು ಹಿರಿಯ ಗಾಂಧಿವಾದಿಗಳಾದ ಕೆ.ಇ. ಮೊಮ್ಮೆನ್ ಅವರು ವಹಿಸಿಕೊಂಡಿದ್ದು ವಿಶೇಷವಾಗಿತ್ತು.


ಕಲ್ಯಾಣ ಸಚಿವರ ಕಲ್ಯಾಣ ಗುಣ

ಕೇಂದ್ರ ಸರ್ಕಾರ ಮಹಿಳಾ ಕೌಟುಂಬಿಕ ದೌರ್ಜನ್ಯಗಳಿಗೆ ತಡೆ ಕಾಯಿದೆಯನ್ನು ಅನುಷ್ಠಾನಕ್ಕೆ ತರುತ್ತಿದ್ದಂತೆಯೇ, ಪುದುಚೇರಿಯ ಸಮಾಜ ಕಲ್ಯಾಣ ಸಚಿವ ಪಿ. ಅಂಗಳನ್ ಅವರ ಮೇಲೆ ಎರಡನೆಯ ಪತ್ನಿ ಕವಿಪ್ರಿಯಾ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. . .


ಹೀಗೊಂದು ಪ್ರೇಮ ಕಥೆ - ಪ್ರೇಮಶೇಖರ ರವರ ಕಥೆ

ಸನ್ನಿವೇಶ ಸಂಜೆಯ ಸಮಯ. ನದೀತೀರ. ಅಲೆಗಳು ಕುಲುಕಿ ಬಳುಕಿ ಒನಪು ವಯ್ಯಾರದಿಂದ ಉರುಳಾಡುತ್ತಾ ಸಾಗಿವೆ. ಸಂಜೆಯ ಸೂರ್ಯನ ಹೊಂಗಿರಣಗಳು ಅಲೆಗಳ ಮೇಲೆ ಚಿನ್ನಾಟವಾಡುತ್ತಿವೆ. ಗಾಳಿ ಬೀಸಲೋ ಬೇಡವೋ ಎಂಬಂತೆ ಮೆಲ್ಲಮೆಲ್ಲನೆ ಸುಳಿದಾಡುತ್ತಿದೆ. ನದಿಯಾಚೆ ಪುಟ್ಟದೊಂದು ಹಳ್ಳಿಯ ತುಣುಕುಗಳು ನೋಟಕ್ಕೆ ನಿಲುಕುತ್ತಿವೆ. ಬೆನ್ನಹಿಂದೆ ಒಂದೆರಡು ಫರ್ಲಾಂಗ್ ದೂರದಲ್ಲಿ ಹಳ್ಳಿಯೂ ಅಲ್ಲದ ಪಟ್ಟಣವೂ . . .


ಗಿರೀಶ್ ಕೌಶಿಕ್ ಹತ್ತರ ಪೋರ ವಿಶ್ವ ಯೂತ್ ಚಾಂಪಿಯನ್

ಕರ್ನಾಟಕದ ಚೆಸ್ ಇತಿಹಾಸದಲ್ಲಿ ಗಿರೀಶ್ ಹೊಸ ಅಧ್ಯಾಯವನ್ನೇ ದಾಖಲಿಸಿದ್ದಾನೆ. ಸುವರ್ಣ ಕರ್ನಾಟಕ ಸಂಭ್ರಮದಲ್ಲಿರುವ ರಾಜ್ಯಕ್ಕೆ ಸಾಂಸ್ಕೃತಿಕ ನಗರಿಯ ಹುಡುಗ ಮತ್ತೊಂದು ಗರಿ ಮೂಡಿಸಿದ್ದಾನೆ. ಮೈಸೂರಿನ ವಿಶ್ವೇಶ್ವರ ನಗರದ ಸೇಂಟ್ ಥಾಮಸ್ ಶಾಲೆಯ ನಾಲ್ಕನೇ ತರಗತಿಯ ಚೋಟುದ್ದದ ಹುಡುಗನ ಸಾಧನೆ ನಿಜಕ್ಕೂ ಬೆರಗು, ಅಚ್ಚರಿ ಮೂಡಿಸುತ್ತದೆ. . .


ಅನಂತ್‌ರ ಜಾಣ ಮೌನ

ಇದಿಷ್ಟು ಯಡಿಯೂರಪ್ಪ ಅವರು ಅನುಭವಿಸುತ್ತಿರುವುದಾದರೆ, ಅದೇ ಪಕ್ಷದ ಇನ್ನೋರ್ವ ಮುಖಂಡರಾದ ಕುಶಾಗ್ರಮತಿ ರಾಜಕಾರಣಿ ಎಂದೇ ಹೆಸರು ಮಾಡಿರುವ ಅನಂತ್ ಕುಮಾರ್ ಅವರು ಧ್ವನಿಯೂ ಕೇಳದೆ ಬಹಳವೇ ದಿನಗಳಾಗಿ ಹೋಗಿವೆ. ಅಷ್ಟೇ ಅಲ್ಲ ಸಮನ್ವಯ ಸಮಿತಿಯ ಸಭೆಯಲ್ಲೂ ಸಹ ಪಾಲ್ಗೊಳ್ಳುತ್ತಿಲ್ಲ. ಹಾಗೆಂದ ಮಾತ್ರಕ್ಕೆ, ಅನಂತ್ ಕುಮಾರ್ ಅವರಿಗೆ ಅಧಿಕಾರದಲ್ಲಿರಬೇಕೆಂಬ ಆಸೆ ಇಲ್ಲ ಅಂತ ಅಲ್ಲ. . . .


ದತ್ತ ಪೀಠದ ನೆಪ

ಕಳೆದ ಹತ್ತು ತಿಂಗಳ ಹಿಂದೆ ಭಾರತೀಯ ಜನತಾಪಕ್ಷ ಜಾತ್ಯತೀತ ಜನತಾ ದಳದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ರಚಿಸಿದಾಗ ಮತ್ತು ಆರಂಭದ ದಿನಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ಸಂತಸದಿಂದಲೇ ಯಡಿಯೂರಪ್ಪನವರನ್ನು ಬೆಂಬಲಿಸಿದ್ದರು. ಆದರೆ ಇತ್ತೀಚಿನ ಕೆಲವು ಬೆಳವಣಿಗೆಗಳಿಂದ ಸಂಘಟನವರೂ ಕೂಡ ಅಸಂತುಷ್ಟರಾಗಿದ್ದಾರೆನ್ನುವುದು ಪಕ್ಷದ ಮೂಲಗಳಿಂದ ಗೊತ್ತಾಗಿದೆ. . .


ಟ್ರೈನಿಂಗ್ ಕ್ಯಾಂಪ್

ಭಾರತೀಯ ಜನತಾ ಪಕ್ಷಕ್ಕೆ ಈವರೆಗೆ ರಾಜ್ಯದಲ್ಲಾಗಲೀ ಅಥವಾ ಬೇರೆ ರಾಜ್ಯಗಳ್ಳಲ್ಲಾಗಲೀ ಒಂದು ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಿರುವ ಅನುಭವ ಸಾಕಷ್ಟಿದೆ. . .


`ಪಲಾಯನವಾದಿಗಳು ಯಾರೂ ನಾಯಕರಾಗಲ್ಲ'

ರಾಜ್ಯದ ಸಮ್ಮಿಶ್ರ ಸರ್ಕಾರದ ಅಂಗಪಕ್ಷವಾಗಿ ಭಾರತೀಯ ಜನತಾಪಕ್ಷದ ಆಡಳಿತ ಪಕ್ಷದ ನಾಯಕರಾಗಿರುವ ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈಗ ಮೌನಿ. ತಮ್ಮಷ್ಟಕ್ಕೆ ತಾವೇ ಒಂದು `ಲಕ್ಷ್ಮಣರೇಖೆ' ಎಳೆದುಕೊಂಡಿದ್ದಾರೆ. ಅದಕ್ಕೆ ಅವರು ಕೊಡುವ ಬಹುಮುಖ್ಯ ಕಾರಣ ಎಂದರೆ . . .


ಯುಗಾದಿ ಬೇವು

ಈ ವರ್ಷ ಯಾವುದೇ ಹೊಸ ಸಿನಿಮಾ ಸೈನ್ ಮಾಡುವುದಿಲ್ಲ ಎಂದಿದ್ದಾರೆ ರವಿಚಂದ್ರನ್. ಹಾಗಾದರೆ ಈ ಎರಡು ತಿಂಗಳಲ್ಲಿ ಅವರು ಏನು ಮಾಡುತ್ತಾರೆ? ಒಪ್ಪಿಕೊಂಡ ಸಿನಿಮಾಗಳನ್ನು ಮುಗಿಸಿ ಅವರು ತೂಕ ಇಳಿಸಿಕೊಳ್ಳುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಹಾಗಾದರೆ ಅವರ ತೂಕ ಎಷ್ಟು ಎಂದು ಕೇಳುವುದು ತಪ್ಪು ತಪ್ಪು. ಹಿರಿಯ ನಟರ ತೂಕ ಮತ್ತು ಸಂಭಾವನೆಯನ್ನು ಕೇಳಕೂಡರು, ಯಾರೂ ಹೇಳಕೂಡದು!


ವಿಜಿ ಪರಿಣಯ

ಆತ್ಮಹತ್ಯೆ ಖ್ಯಾತಿಯ ನಾಗಮಂಡಲದ ಹುಡುಗಿ ವಿಜಯಲಕ್ಷ್ಮೀ ಮದುವೆಯಾಗುತ್ತಿದ್ದಾರೆ. ಅವರು ಮದುವೆ ಆಗುತ್ತಿರುವುದು ಸೃಜನ್ ಲೋಕೇಶ್‌ರನ್ನು. ಆಗಲೇ ಎಂಗೇಜ್‌ಮೆಂಟ್ ಕೂಡ ಮುಗಿದಿದೆ ಎನ್ನುತ್ತದೆ ಸುದ್ದಿ. ಮೂರು ತಿಂಗಳ ನಂತರ ಮದುವೆಯಂತೆ.


ಅಶೋಕಾಯಣ...

ನಟ ಅಶೋಕ್ ಸುದ್ದಿಪ್ರಿಯರು. ಒಂದಲ್ಲ ಒಂದು ಪ್ರಕರಣ ಇಟ್ಟುಕೊಂಡು ಸುದ್ದಿಯಲ್ಲಿರುವುದು ಅವರ ಜನಪ್ರಿಯ ಹವ್ಯಾಸ. ಗುಪ್ತಗಾಮಿನಿ ಸೀರಿಯಲ್‌ನಲ್ಲಿ ಅವರ ಪಾತ್ರ ಮುಗಿದ ನಂತರ ಅಶೋಕ್‌ಗೆ ಯಾಕೋ ಐಡೆಂಟಿಟಿ ಕ್ರೈಸಿಸ್ ಕಾಡುತ್ತಿರುವಂತೆ ಕಾಣಿಸುತ್ತಿದೆ. ಈ ಕಾರಣದಿಂದಲೇ ಅವರು . . .


ನಾರಾಯಣ ರಾಮಾಯಣ

ಜಗತ್ತಿನಲ್ಲಿರೋದು ಮೂರೇ ಮೂರು ಕನ್ನಡ ನಿರ್ಮಾಪಕರು ಎಂದು ನಾರಾಯಣ್ ಹೇಳಿದ್ದಕ್ಕೆ ನಿರ್ಮಾಪಕರ ಸಂಘಕ್ಕೆ ಶ್ಯಾನೆ ಬೇಜಾರಾಗಿದೆ. ಮುಖ್ಯವಾಗಿ ಮಂಜು, ಕುಮಾರ್ ಮುಂತಾದವರು ಸಿಕ್ಕಾಪಟ್ಟೆ ಬೇಜಾರು ಮಾಡಿಕೊಂಡಿದ್ದಾರೆ. ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತ ನಾರಾಯಣ್ ಕನ್ನಡ ನಿರ್ಮಾಪಕರು ಎಂದರೆ ವಜ್ರೇಶ್ವರಿ ಕಂಬೈನ್ಸ್ ರಾಕ್‌ಲೈನ್ ಪ್ರೊಡಕ್ಷನ್ ಮತ್ತು ಕುಮಾರಸ್ವಾಮಿಯವರ ಚೆನ್ನಾಂಬಿಕ ಪ್ರೊಡಕ್ಷನ್ಸ್ ಎಂದು ಹೇಳಿದ್ದಾರಂತೆ. . . .


ಹುಬ್ಬಳ್ಳಿ ಸಾಂಬರ್

`ಹುಬ್ಬಳ್ಳಿ' ಚಿತ್ರದ ಕುರಿತು ಓಂಪ್ರಕಾಶ್ ರಾವ್‌ಗೆ ಎಲ್ಲಿಲ್ಲದ ನಂಬಿಕೆ. ಮುಂದಿನ ವಾರ ಬಿಡುಗಡೆ ಕಾಣಲಿರುವ `ಹುಬ್ಬಳ್ಳಿ' ಚಿತ್ರ ತಮಿಳಿನ `ಗಜನಿ' ಚಿತ್ರದಿಂದ ಸ್ಫೂರ್ತಿ ಪಡೆದಿದೆ ಎನ್ನುವುದು ಗಾಂಧೀನಗರದ ಲೆಕ್ಕಾಚಾರ. ಆದರೆ `ಗಜನಿ'ಯ ಉಪಕತೆಯನ್ನು ಎಗರಿಸಿ ಇಂದ್ರಜಿತ್ ಲಂಕೇಶ್ `ಐಶ್ವರ್ಯ' ಮಾಡಿದ್ದಾಗಿದೆ. ಹಾಗಾದರೆ ಓಂಪ್ರಕಾಶ್ ರಾವ್ ಅದನ್ನೇ ಮಾಡುವುದು ಹೇಗೆ? ಇಂಥದ್ದರಲ್ಲೆಲ್ಲ ಸಾಮಾನ್ಯವಾಗಿ ಓಂ ಬುದ್ಧಿವಂತರು. ತೆಲುಗಿನ ಸೊಪ್ಪು, ತಮಿಳಿನ ಬೇಳೆ ಮತ್ತು ಕನ್ನಡದ ಕಾವೇರಿ ನೀರು ಸೇರಿಸಿ . . .


ರೀ ರೀ ರೀಮೇಕ್

ರೀಮೇಕ್ ಮೇಷ್ಟ್ರು ರವಿಚಂದ್ರನ್ ತಮ್ಮ ವರಸೆ ಬದಲಾಯಿಸಿದ್ದಾರೆ. ರೀಮೇಕ್ ಸಿನಿಮಾ ಮಾಡುತ್ತಿರುವುದೇ ಕನ್ನಡ ಚಿತ್ರೋದ್ಯಮದ ನಿಜವಾದ ಸಮಸ್ಯೆ ಎಂದಿದ್ದಾರೆ ಅವರು. ಇದರಿಂದಾಗಿ ಸಿನಿಮಾ ಪ್ರೀತಿ ಇಲ್ಲದವರೆಲ್ಲ ಸಿನಿಮಾ ಮಾಡುವಂತಾಗಿದೆ ಎನ್ನುವುದು ಅವರ ಬೇಸರ. ಜೊತೆಯಲ್ಲಿ ರೀಮೇಕ್ ಚಿತ್ರಗಳು ಇನ್ನು ಕನ್ನಡದಲ್ಲಿ ಓಡುವುದಿಲ್ಲ ಎಂದೂ ಅವರಿಗೆ ಅನಿಸಿದೆ. ಮಲ್ಲ, ನೆನಪಿರಲಿ, ಜೋಗಿ, ಆಕಾಶ್‌ದಂಥ ಸ್ವಮೇಕ್‌ಗಳೇ ಗೆಲ್ಲುತ್ತಿರುವಾಗ . . .


ರಕ್ಷಿತಾ ಕಿರಿಕ್

ನಾಯಕಿ ಜೀವನದ ಮುಸ್ಸಂಜೆಯಲ್ಲಿ ನಿಂತಿರುವ ನಾಯಕಿ ರಕ್ಷಿತಾ ಕೊನೆಯಲ್ಲೊಂದು ಗಲಾಟೆ ಮಾಡಿಕೊಂಡಿದ್ದಾರೆ. `ತಾಯಿಯ ಮಡಿಲು' ಚಿತ್ರೀಕರಣಕ್ಕೆ ಗ್ರೀಸ್ ದೇಶಕ್ಕೆ ಬರಲಾಗುವುದಿಲ್ಲ ಎನ್ನುವುದು ಆಕೆಯ ತಕರಾರು. ಪ್ರೇಮ್ ಹೆಂಡತಿಯಾಗುವ ನಾನು ಗ್ರೀಸ್‌ಗೆ ಬಂದು ಶಿವರಾಜ್‌ಕುಮಾರ್ ಜೊತೆ ಸೊಂಟ ಕುಣಿಸಿದರೆ ಏನು ಚೆನ್ನಾಗಿರುತ್ತದೆ ಎಂಬುದು ಆಕೆಯ ಪ್ರಶ್ನೆ. ಇದರಿಂದ ನಿರ್ಮಾಪಕ, ನಿರ್ದೇಶಕ ಎಸ್. ನಾರಾಯಣ್ . . .



`ಭಾಷೆ ಬೆಳೆಸಲು ಕರೆ ಯಾಕೆ? ಕೂಗು ಯಾಕೆ?'- ಕೆ.ಟಿ.ಗಟ್ಟಿ

ಕರ್ನಾಟಕದ ವಿವಿಧ ಕ್ಷೇತ್ರಗಳ ಪ್ರಮುಖರನ್ನು, ಅವರ ಅನಿಸಿಕೆಗಳನ್ನು ಪರಿಚಯಿಸುವ ವಿಶೇಷ ಅಂಕಣ ಈ ವಾರದಿಂದ ಪ್ರಾರಂಭವಾಗುತ್ತಿದೆ. ಕನ್ನಡದ ಹೆಸರಾಂತ ಚಿಂತಕ, ಕಾದಂಬರಿಕಾರ, ಕೆ.ಟಿ. ಗಟ್ಟಿ ಈ ವಾರದ ಅಂಕಣದಲ್ಲಿ ಮನದ ಮಾತುಗಳನ್ನು ತೆರೆದಿಟ್ಟಿದ್ದಾರೆ. . .

 
ಬೆಳಕು - ಜ.ಹೊ. ನಾರಾಯಣಸ್ವಾಮಿರವರ ಕವನ


ಬೆಳಕಿನೊಳಗಿನ ಬೆಳಕು
ಗಾಳಿಯೊಳಗಿನ ಗಾಳಿ
ಮಾಡುತಿದೆ ಏಕೋ ಕಾಣೆ
ಎದೆಗೆ ದಾಳಿ!

ಹಕ್ಕಿ ಕಲರವ ಕೇಳಿ
ಉಕ್ಕು ಹೂಗಳ ಪಾಳಿ
ಜುಂ ಎನುತಲಿದೆ ಮೈಲಿ
ಯಾರ ಶೈಲಿ!


ಇದು ಲಂಚಕ್ಕಿಂತ ಪವರ್‌ಫುಲ್ ಕಣ್ರಿ! - ಅಮೇರಿಕಾದಿಂದ ರವಿ

ಲಂಚ ಕೊಡಬೇಡಿ. ದಯವಿಟ್ಟು RTA ಬಳಸಿ. RTA is more powerful than giving bribe. ಬೇರೆಯವರಿಗೂ ಅದರ ಬಗ್ಗೆ ಹೇಳಿ. ಈಗಿನ RTA ಕಮಿಷನರ್ ಈ ಕಾಯ್ದೆಯನ್ನು ತೆಳುಮಾಡಲು, ಅದರ ಹಲ್ಲು ಕಿತ್ತುಹಾಕಲು ಪ್ರಯತ್ನಿಸುತ್ತಿದ್ದಾರೆ. ಮಾಜಿ ಬ್ಯೂರೋಕ್ರಾಟ್ ಆಗಿರುವ ಪ್ರಧಾನಿ ಮನಮೋಹನ್ ಸಿಂಗ್‌ರ ಬೆಂಬಲವೂ ಅಂತಹ ಪ್ರಯತ್ನಗಳಿಗೆ ಇದ್ದಂತಿದೆ. ನೀವು, ಇಲ್ಲಿರುವ NRIಗಳು, ಭಾರತದ ಪ್ರಧಾನಿಗೆ, ಸೋನಿಯಾ ಗಾಂಧಿಗೆ, ರಾಷ್ಟ್ರಪತಿ ಕಲಮ್‌ರಿಗೆ ದಯವಿಟ್ಟು ಇಮೇಯ್ಲ್ ಮಾಡಿ. . . .

 

ಇಂದೇ ಚಂದಾದಾರರಾಗಿ

ವಿಕ್ರಾಂತ ಕರ್ನಾಟಕದ ಹನ್ನೆರಡನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಹನ್ನೊಂದನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ದೀಪಾವಳಿ ವಿಶೇಷ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಒಂಬತ್ತನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಎಂಟನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಏಳನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಆರನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಐದನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ನಾಲ್ಕನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಮೂರನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ದ್ವಿತೀಯ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಪ್ರಥಮ ಸಂಚಿಕೆಯಲ್ಲಿ . . .

 

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com