Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 28 July 2008 10:36 PM

 ವಿಕ್ರಾಂತ ಕರ್ನಾಟಕದ ಹನ್ನೆರಡನೇ ಸಂಚಿಕೆಯಲ್ಲಿ:

 

ಸಂಪಾದಕೀಯ - ಪುತ್ರ ವ್ಯಾಮೋಹದ ಪಿಡುಗು

 

`ನನ್ನ ಮಗನನ್ನು ಬಂಧಿಸಿ ಇಡೀ ಬೆಂಗಳೂರಿಗೇ ಪೊಲೀಸರು ಅವಮಾನ ಮಾಡಿದ್ದಾರೆ' ಎಂದು ಪ್ರಸಾದ್ ಬಿದ್ದಪ್ಪ ಎಂಬ ವ್ಯಕ್ತಿ ಹೇಳಿಕೊಂಡಿರುವುದನ್ನು ನೋಡಿದರೆ ಈ ಮನುಷ್ಯ ಬೆಂಗಳೂರು ಎಂದರೆ ತನ್ನ ಪಾಳೆಪಟ್ಟು ಎಂದು ತಿಳಿದ ಹಾಗಿದೆ. ಅಷ್ಟಕ್ಕೂ ಪ್ರಸಾದ್ ಬಿದ್ದಪ್ಪ ಯಾರು ಎಂಬುದು ಬಹುತೇಕ ಜನರಿಗೆ ಗೊತ್ತಾದದ್ದೇ ಆತನ ಪುತ್ರ ಕುಡಿದು ಪೊಲೀಸರ ಮೇಲೆ ಕೈಮಾಡಿ ಕಂಬಿ ಎಣಿಸಿದ ಮೇಲೆ. ಹಾಗೆಯೇ ಪ್ರಸಾದ್ ಬಿದ್ದಪ್ಪ ಪತ್ನಿ ಜ್ಯೂಡಿತ್ ಎಂಬಾಕೆ ಪೊಲೀಸರ ಕಾಲರ್‌ಗೆ ಕೈಹಾಕಿ ರಂಪ ಮಾಡಿದ ಘಟನೆಯಿಂದಾಗಿ. . .


ಓದುಗರ ಪತ್ರಗಳು

ವಿಕ್ರಾಂತ ಕರ್ನಾಟಕದ ಸಂಚಿಕೆ ನೋಡಿದೆ. ಸರ್ವಾಂಶ ಸುಂದರವಾಗಿ ಮೂಡಿಬಂದಿದೆ. ಮಕ್ಕಳ ಪುಟ ಅಳವಡಿಸಿದ್ದಕ್ಕಾಗಿ ಸಂತೋಷವಾಗಿದೆ. ಕಡೆಗಣಿಸಲ್ಪಟ್ಟ ಮಕ್ಕಳ ಸಾಹಿತ್ಯಕ್ಕೆ ಯುವ ಬರಹಗಾರರಿಗೆ ವಿಕ್ರಾಂತ ಕರ್ನಾಟಕ ಸದಾ ಚೇತನದ ಚಿಲುಮೆಯಾಗಲಿ.

- ಕಂಚ್ಯಾಣಿ ಶರಣಪ್ಪ
ವಿಜಾಪೂರ
*

ವಿಕ್ರಾಂತ ಕರ್ನಾಟಕವು ಹೊಸದಾಗಿ ಜನಮನ್ನಣೆ ಪಡೆಯುತ್ತಿದೆ. ಅವರ ಅಭಿಪ್ರಾಯದಂತೆ ಉತ್ತಮ ಪತ್ರಿಕೆಯಾಗಿದ್ದು ಕೇವಲ ಮಾಹಿತಿಗಷ್ಟೇ ಗಮನ ಕೊಡದೆ ಸಮಗ್ರ ವಿಚಾರದ ರಸದೌತಣ ನೀಡುತ್ತಿದೆ. ಇದರ ಪ್ರತಿಯೊಂದು ಬಣ್ಣದ ಪುಟಗಳು ಅಚ್ಚರಿಗೊಳಿಸುತ್ತವೆ. ಇದು ಕರ್ನಾಟಕದ ಉತ್ತಮ ಪತ್ರಿಕೆಯಾಗುವುದಕ್ಕೆ ಯಾವುದೇ ಸಂಶಯವಿಲ್ಲ.

- ಸಂಜೀವ್
ಕಡೂರು
*

ವಿಕ್ರಾಂತ ಕರ್ನಾಟಕ ಎಲ್ಲಾ ರೀತಿಯಿಂದಲೂ ಸುಂದರವಾಗಿ ಮೂಡಿ ಬರುತ್ತಿದೆ. ಪುಟಪುಟಗಳೂ ಕಂಗೊಳಿಸುವಂತೆ ಇದೆ.
ಹೆಚ್.ಎಸ್. ಪರಮೇಶ್
ಚಿಕ್ಕಮಗಳೂರು.
*
 

ಈ ಜನ
ಡಾ. ನಾಗಲೋಟಿ ಮಠ

 

ವೈದ್ಯರಾದವರು ಖ್ಯಾತ ವೈದ್ಯರಾಗುವುದು ರೋಗಿಗಳಿಂದ ! ವೈದ್ಯ ಉತ್ತಮ ಚಿಕಿತ್ಸೆ ನೀಡಿದರೆ ರೋಗಿ ರೋಗ ಹರಡುವುದಿಲ್ಲ, ವೈದ್ಯರ ಖ್ಯಾತಿಯನ್ನು ಹರಡುತ್ತಾನೆ. ಈ ರೀತಿ ಖ್ಯಾತಿಯನ್ನು ಹರಡಿಸಿಕೊಳ್ಳುವ ವೈದ್ಯರ ಸಂಖ್ಯೆ ಕಡಿಮೆ. ವೈದ್ಯ ರೋಗಿ ಸಂಬಂಧಗಳು ಹೆಚ್ಚಾಗಿ ಬೆಳೆದಂತೆ ಅಲ್ಲಿ ವೈದ್ಯರ ಲೋಕ ಜ್ಞಾನ ಬೆಳೆಯುತ್ತದೆ. ಹಾಗೆ ಬೆಳೆದ ಲೋಕ ಜ್ಞಾನವನ್ನು . . .


ಶ್ರುತಿ ಚಂದ್ರಶೇಖರ್

 

ಅನೇಕರು ಮೂರು ಲಕ್ಷ ರೂಪಾಯಿ ಬಂಪರ್ ಬಹುಮಾನಕ್ಕಾಗಿ ಪ್ರತೀ ತಿಂಗಳು ಲಾಟರಿ ಟಿಕೇಟು ತೆಗೆದುಕೊಂಡು ನಿರಾಸೆ ಹೊಂದುತ್ತಾರೆ. ಆದರೆ ೨೩ ವರ್ಷ ವಯಸ್ಸಿನ ಶ್ರುತಿಗೆ ಪ್ರತೀ ತಿಂಗಳು ೩ ಲಕ್ಷ ರೂಪಾಯಿಬಂಪರ್ ಬಹುಮಾನ ಸಿಗುತ್ತದೆ. ಅದಕ್ಕಾಗಿ ಶ್ರುತಿ ಲಾಟರಿ ಟಿಕೇಟ್ ಕೊಳ್ಳುವುದಿಲ್ಲ. ಅದು ಶ್ರುತಿಯ ಕೆಲಸಕ್ಕೆ ಕೊಡಲಾಗುವ ಸಂಬಳ ! ಅಷ್ಟೆ. . .


ಚಿಂತಾಮಣಿ - ಭಾರತದ ಸೂಪರ್ ಕ್ಷತ್ರಿಯ

 

ನನ್ನ ಬಾಲ್ಯದ ಆದರ್ಶಪುರುಷರೆಂದರೆ ಅಳಸಿಂಗಾಚಾರ್ಯರ `ಶ್ರೀಮದ್ವಾಲ್ಮೀಕಿರಾಮಾಯಣ'ದ ರಾವಣ, ಕುಂಭಕರ್ಣ, ಇಂದ್ರಜಿತು. ರಾವಣ ಸರ್ವಾಲಂಕಾರಭೂಷಿತನಾಗಿ ಅಶೋಕವನದಲ್ಲಿದ್ದ ಸೀತೆಯ ಬಳಿ ಬಂದು, ನಿನ್ನ ಆ ರಾಮನಲ್ಲಿ ಬಿಲ್ಲುಬಾಣ ಬಿಟ್ಟರೆ ಏನಿದೆ? ಆತನ ಯೋಚನೆ ಬಿಟ್ಟು ನನ್ನ ರಾಣಿಯಾಗಿರು . . .

 

12th Issue of Vikranta Karnataka Weekly
 

ಮುಖಪುಟ ಲೇಖನ - ದಾದಾಗಿರಿಯಿಂದ ಮಂತ್ರಿಗಿರಿಯವರೆಗೆ

 

ಮೊನ್ನೆ ಸಿನಿಮಾಗಳಲ್ಲಿ ಸಿಗರೇಟು ಸೇದುವ ವಿಚಾರದಲ್ಲಿ ಅಂಬರೀಶ್ ಆಡಿರುವ ಮಾತುಗಳು ಬೇಜವಾಬ್ದಾರಿಯವು ಎಂಬುದು ಸಾರ್ವತ್ರಿಕ ಅಭಿಪ್ರಾಯ. ಬಹುಶಃ ಅಂಬರೀಶ್ ಹೇಳಿದ ಮಾತುಗಳ ಬಗ್ಗೆ ವಿಚಿತ್ರ ಪ್ರತಿಕ್ರಿಯೆಗಳು ಕೇಳಿಬರುತ್ತಿವೆ. ಎಲ್ಲವನ್ನೂ ಕ್ರೋಢೀಕರಿಸಿ ಹೀಗೆ ಹೇಳಬಹುದು. ಅಂಬರೀಶ್ ಈಗ ಬರೀ ಸಿನಿಮಾನಟರಲ್ಲ, ಅಥವಾ ಕೇವಲ ಸಂಸದರಲ್ಲ. ಈಗ ಅವರು ರಾಷ್ಟ್ರ ಮಟ್ಟದಲ್ಲಿ ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಮಂತ್ರಿ... ಸಾರ್ವಜನಿಕರನ್ನು ಹಾದಿತಪ್ಪಿಸುವ ಇಂಥ ಮಾತುಗಳನ್ನು ಹೇಳಬಾರದು. . .

ಅಂಬರೀಶ್ ಬಗ್ಗೆ ಮೂರು ಹೊಗಳಿಕೆಗಳಿವೆ: ನಿಷ್ಕಪಟಿ, ದಾನಿ ಹಾಗೂ ಒಳ್ಳೆಯ ಸಂಘಟಕ. ಮೂರು ಆರೋಪಗಳಿವೆ: ಸೋಮಾರಿ, ಹುಡುಗು ಬುದ್ಧಿ, ಹಾಗೂ ಒರಟ. ಹಾಗೆಯೇ ಅವರ ಹಿಂದೆ ಮೂರು ಘಟ್ಟಗಳಿವೆ: ಪುಂಡುಪೋಕರಿ, ರೆಬೆಲ್ ಸ್ಟಾರ್, ಸಂಸದ. . .

 

ಚಾಮುಂಡೇಶ್ವರಿಗಾಗಿ ಕಾಂಗ್ರೆಸ್ ಬುದ್ಧಿವಂತಿಕೆ

ಚಾಮುಂಡೇಶ್ವರಿ ಚುನಾವಣೆಯ ಈ ಸಂದರ್ಭದಲ್ಲಿ ಅಂಬರೀಶರನ್ನು ಮಂತ್ರಿಯಾಗಿ ಮಾಡಲು ಮೂರು ಕಾರಣಗಳಿವೆ. ಒಕ್ಕಲಿಗರ ಮತಗಳನ್ನು ಒಂದುಗೂಡಿಸುವುದು; ಗೌಡರ ಪಾಳಯವನ್ನು ಬೇರೆ ರೀತಿಯಲ್ಲಿ ಎದುರಿಸುವ ಶಕ್ತಿ ನೀಡುವುದು; ಎಲ್ಲಕ್ಕಿಂತ ಮುಖ್ಯವಾಗಿ ಈ ಚುನಾವಣೆಯಲ್ಲಿ ಒಳಗೊಳಗೇ ಹರಿದು ಹಂಚಬಹುದಾದ ಕಾಂಗ್ರೆಸನ್ನು ಒಗ್ಗೂಡಿಸುವುದು. ಕಾಂಗ್ರೆಸ್ ಉಪಚುನಾವಣೆಗಾಗಿ ನಡೆಸಿರುವ ಈ ಜಾಣ್ಮೆಯ ಪ್ರಯೋಗ ನಿಜಕ್ಕೂ ಅಪ್ರತಿಮವಾದುದು. . .


ಪುಂಡ ಪುತ್ರರು

ಸ್ವಘೋಷಿತ ಫ್ಯಾಶನ್ ತಜ್ಞ ಪ್ರಸಾದ ಬಿದ್ದಪ್ಪ ಪುತ್ರ ಆಡಂ ಬಿದ್ದಪ್ಪ ಪಬ್‌ನಲ್ಲಿ ಪೊಲೀಸರೊಂದಿಗೆ ಜಗಳಕ್ಕೆ ನಿಂತು ಬಂಧಿತನಾದ ಎರಡು ಮೂರು ದಿನಗಳಲ್ಲೇ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರ್ ಸಂಗಡಿಗರೊಂದಿಗೆ ಹೋಟೆಲೊಂದರಲ್ಲಿ ದಾಂಧಲೆ ಎಬ್ಬಿಸಿದ.

ಮೊದಲ ಘಟನೆ ಸಂಭವಿಸಿದಾಗ, ಬೆಂಗಳೂರಿನ ಮಾನ ಮೂರು ಕಾಸಿಗೆ ಹರಾಜಾಯಿತು ಎಂದು ಅಬ್ಬರಿಸಿದವರು ಪ್ರಸಾದ್ ಬಿದ್ದಪ್ಪ. ತಮ್ಮ ಪುತ್ರನ ಘಟನೆಯ ಹಿಂದೆ `ರಾಜಕೀಯ ವ್ಯಕ್ತಿಗಳ ಕೈವಾಡವಿದೆ ಎಂದನ್ನು ಎಚ್.ಡಿ. ಕುಮಾರಸ್ವಾಮಿ.'. .


ದಾರಿ ತಪ್ಪಿದ (ಸಿ ಎಂ) ಮಗ...

ರಾತ್ರಿ ೩:೩೦ಗೆ ಊಟ ಕೊಡಲಿಲ್ಲ ಎನ್ನುವ ಕಾರಣಕ್ಕೆ ಹೋಟೆಲ್ ಸಿಬ್ಬಂದಿಯವರೊಂದಿಗೆ ಘರ್ಷಣೆಗಿಳಿದಾಗ ನಿಖಿಲ್ ಕುಮಾರ್ ಕಾರು ಜಖಂಗೊಂಡಿದ್ದು ಬಹುಪ್ರತಿಷ್ಠಿತರು ಬಳಸುವ `ಹಮ್ಮರ್' ಕಾರ್. ಹಮ್ಮರ್ ಕಾರನ್ನು ಬಹಳ ಕೆಲವೆ-ಕೆಲವು ಪ್ರತಿಷ್ಠಿತ ಕುಟುಂಬದವರು ಹೊಂದಿರುವ ಕಾರಿದು. ಇದನ್ನು ಹೊರದೇಶದಿಂದ ಆಮದು ಮಾಡಿಕೊಳ್ಳಬೇಕಿರುವುದರಿಂದ ಇದರ ಬೆಲೆ ಸುಂಕ ಪಾವತಿಸಿದ ನಂತರ ಸುಮಾರು ಮೂರು ಕೋಟಿ ಬೆಲೆ ಬಾಳುತ್ತದೆ. . .


ಬ್ಲಾಗರ್‍ಸ್‌ಗಳಿಗೆ ರಸಗವಳ

ಅಂತರ್ಜಾಲ ಮಾಧ್ಯಮದಲ್ಲಿ ಬ್ಲಾಗರ್‍ಸ್‌ಗೆ ವಿಶಿಷ್ಟವಾದ ಸ್ಥಾನವಿದೆ. ಇಲ್ಲಿ ಯಾವುದೇ ಮುಲಾಜಿಲ್ಲದೇ ಹಾಗೂ ಮರ್ಜಿಗೂ ಕಾಯದೇ ಅಭಿಪ್ರಾಯಗಳು ವ್ಯಕ್ತವಾಗುತ್ತಿರುತ್ತವೆ. ಕಳೆದವಾರ ನಡೆದ ಪ್ರಸಾದ್ ಬಿದ್ದಪ್ಪ ಅವರ ಪುತ್ರ ಹಾಗೂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ ಅವರು ಮಾಡಿಕೊಂಡಿರುವ ರಾದ್ಧಾಂತ ವಿಶ್ವದಾದ್ಯಂತ ಬ್ಲಾಗರ್‍ಸ್‌ಗಳಿಗೆ ಒಳ್ಳೆಯ ರಸಗವಳ ನೀಡಿದ್ದು ಸುಳ್ಳಲ್ಲ. . .


ಪಬ್ ಸಂಸ್ಕೃತಿ ಎಂದರೇನು?

ಲೈವ್ ಬ್ಯಾಂಡ್‌ನ ತದ್ರೂಪು ತಳಿಯೇ ಪಬ್ ಸಂಸ್ಕೃತಿ (ಬಹುತೇಕ ಪಬ್‌ಗಳು ಇರುವುದು ನಗರದ ಹೃದಯ ಭಾಗದಲ್ಲಿಯೇ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ) ಪಬ್‌ಗಳಲ್ಲಿ ಯುವಕ-ಯುವತಿಯರು ಅರೆ ಬೆತ್ತಲಾಗಿ ನರ್ತಿಸಲು ಅವಕಾಶ ಇರುವುದರಿಂದ ಪಬ್ ಸಂಸ್ಕೃತಿ ಯುವಜನರಲ್ಲಿ ಹೆಚ್ಚು ಜನಪ್ರಿಯ . . .


ಒಬ್ಬ ಹೀರೋ ಅಸಹನೆಗೆ ಧ್ವನಿ ಕೊಡುತ್ತಾನೆ - ಲಹರಿ

ವಿಷಯ ಯಾವುದೇ ಇರಬಹುದು, ನಾನೂ-ನೀವು ಸೇರಿದಂತೆ ವ್ಯವಸ್ಥೆಯ ಸ್ಥಿತಿಗತಿಗಳ ಬಗ್ಗೆ ಅಸಮಾಧಾನಗಳಿರುವುದು ಸಹಜ. ಯಾಕೆಂದರೆ ಪ್ರತಿಯೊಬ್ಬರಿಗೂ ಅವರದೇ ಆದ ದೃಷ್ಟಿಕೋನಗಳಿರುತ್ತವೆ ಮತ್ತು ಅದನ್ನು ಸರಿಯಾದದ್ದೆಂದೇ ನಂಬಿರುತ್ತೇವೆ. ಅದರ ಪರಣಾಮವೇ ಅಸಹನೆ. ಹಾಗೆಂದು ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ. . . .


ಸೋಜಿಗದ ಜಗ
೯ರ ಪೋರನ ಗಿನ್ನೆಸ್ ದಾಖಲೆ

ಹೆಚ್ಚೆಂದರೆ ಒಬ್ಬನಿಗೆ ಎಷ್ಟು ಸಾಮು ಹೊಡೆಯಲು ಸಾಧ್ಯ?
ಹತ್ತು, ಇಪ್ಪತ್ತು, ಐವತ್ತು, ನೂರು? ನಮ್ಮ ನಿಮ್ಮ ವಿಷಯ ಬಿಡಿ; ಪಳಗಿದ ಪಟುಗಳೂ ಒಮ್ಮೆಗೆ ನೂರು, ಹೆಚ್ಚೆಂದರೆ ಇನ್ನೂರು ಸಾಮು ಹೊಡೆಯಬಲ್ಲರು. ಆದರೆ ಚಿತ್ರದಲ್ಲಿರುವ ಬಾಲಕನಿಗಿನ್ನೂ ೯ ವರ್ಷ. ೯೨೬೩ ಸಾಮು ಹೊಡೆದ. . .


ಮೊಮ್ಮಗುವಿಗೆ ಜನ್ಮ ನೀಡಿದ ಅಜ್ಜಿ

ಇದೊಂದು ಅಪರೂಪದ ಪ್ರಸಂಗ. ಇದು ನಡೆದದ್ದು ಜಪಾನ್‌ನಲ್ಲಿ. ಮಗಳಿಗಾಗಿ ೫೦ರ ಹರಯದ ತಾಯಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ! ಈಕೆಯ ೩೦ರ ಹರೆಯದ ಮಗಳು ಕ್ಯಾನ್ಸರ್ ಪೀಡಿತೆಯಾಗಿದ್ದರಿಂದ ಅವಳ ಗರ್ಭಕೋಶ ತೆಗೆದು ಹಾಕಲಾಗಿದೆ. ಹಾಗಾಗಿ ಅವಳು ಮಗುವಿಗೆ ಜನ್ಮ ನೀಡುವಂತಿಲ್ಲ. . .


ಹೀಗೊಂದು ಪ್ರತಿಭಟನೆ!

ಈತನ ಹೆಸರು ಅಬಸ್ ಅಮಿನಿ. ಇರಾನ್‌ನ ಕುರ್ಡಿಷ್ ಕವಿ ಈತ. ಕೆಲವು ಸಮಯದ ಹಿಂದೆ ಈ ವ್ಯಕ್ತಿ ಯುಕೆಗೆ ತೆರಳಿ, ತನಗೆ ರಾಜಕೀಯ ಆಶ್ರಯ ನೀಡುವಂತೆ ಕೇಳಿಕೊಂಡ. ಆದರೆ ಅಲ್ಲಿನ ಸರಕಾರ ಅಬಸ್‌ನ ಮನವಿಗೆ ಸ್ಪಂದಿಸಿರಲಿಲ್ಲ. ಯುಕೆ ಸರಕಾರದ ಗಮನ ಸೆಳೆಯಲು ಈ . . .


ವೇಶ್ಯೆಯರ ರೇಡಿಯೋ ಸ್ಟೇಷನ್

ಇತ್ತೀಚೆಗೆ ಅಮೆರಿಕಾದಲ್ಲೆಲ್ಲೋ ಕುಡುಕರ ರೇಡಿಯೋ ಸ್ಟೇಷನ್ ಪ್ರಾರಂಭವಾಗಿತ್ತು. ಬ್ರೆಜಿಲ್‌ನ ವೇಶ್ಯೆಯರು ನಾವೇನು ಕಡಿಮೆ ಎಂಬಂತೆ ಹೊಸ ರೇಡಿಯೋ ಸ್ಟೇಷನ್ ಪ್ರಾರಂಭಿಸಿದ್ದಾರೆ. ಬ್ರೆಜಿಲ್‌ನ ಸಾಲ್ವಡ್‌ನಲ್ಲಿ ಈ ರೇಡಿಯೋ ಸ್ಟೇಶನ್ ಇದೆ. ಬಹಿಯಾ ರಾಜ್ಯದ ವೇಶ್ಯೆಯರ ಸಂಘ ಹಲವು ಸಮಯದ ಬಳಿಕ ಕೊನೆಗೂ ರೇಡಿಯೋ ಸ್ಟೇಷನ್ ತೆರೆಯಲು ಅನುಮತಿ ಪಡೆದುಕೊಂಡಿತಂತೆ. . .


ಮತ್ತದೇಗಾಢಾಂಧಕಾರ - ಕಗ್ಗರೆ ಪ್ರಕಾಶ್


ದೀಪಾವಳಿಯ ಬೆಳಕು
ಮಂಕಾದ ಮೇಲೆ
ಮತ್ತದೇ ಗಾಢಾಂಧಕಾರ
ಕಗ್ಗತ್ತಲ ಕಾರ್ಮೋಡ

ದಾರಿ ಹೋಕನ ಕಣ್ಣಿಗೆ
ಅಪ್ಪಳಿಸಿದ ರಾಕೇಟ್
ಸಿಡಿಲಬ್ಬರದ ಆಟಂಬಾಂಬ್
ಬಾಲಕಿಯ ಕಿವಿ ತಮಟೆ
ಹರಿದು ನಗುತ್ತಿತ್ತು


ದೇಶಾವರಿ
ಮೊಬೈಲ್‌ನಲ್ಲಿ ವಾರಪತ್ರಿಕೆ

ಹತ್ತಾರು ಅವತಾರಗಳ ಆಗರವೆನಿಸಿದ ಮೊಬೈಲ್ ಫೋನ್, ಹೊಸತೊಂದು ಅವತಾರದಲ್ಲಿ ಕಾಣಿಸಿಕೊಳ್ಳಲಿದೆ. ಏನಪ್ಪಾ ಅದು? `ಮೀಡಿಯಾ ಕರಿ' ಎಂಬ ಹೊಸ ವಾರಪತ್ರಿಕೆ ಇನ್ನು ಮುಂದೆ ಮೊಬೈಲ್‌ನಲ್ಲಿ ಲಭ್ಯ! ಮೊಬೈಲ್‌ನಲ್ಲಿ ವಾರಪತ್ರಿಕೆಯೊಂದು ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು. `ಟೆಕ್‌ಶಾಸ್ತ್ರ ಇಂಡಿಯಾ' ಎಂಬ ಸಂಸ್ಥೆ ಈ ತಂತ್ರಜ್ಞಾನವನ್ನು ಪರಿಚಯಿಸಿದೆ. . .


ವಿವಾದಕ್ಕೆ ತೆರೆ?

ತೀವ್ರ ವಿವಾದ ಹುಟ್ಟುಹಾಕಿದ್ದ ಜಯಮಾಲ ಅಯ್ಯಪ್ಪ ಪಾದಸ್ಪರ್ಶ ಪ್ರಕರಣ ತಣ್ಣಗಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಅಯ್ಯಪ್ಪ ದೇಗುಲ ಪ್ರವೇಶಿಸಿ ಅಯ್ಯಪ್ಪನ ಪಾದಸ್ಪರ್ಶ ಮಾಡಿದ್ದಾಗಿ ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದ ಚಿತ್ರನಟಿ ಜಯಮಾಲಾರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಕೇರಳ ಸರಕಾರ ಅಚ್ಚರಿ ಮೂಡಿಸಿದೆ. . .


ಮಾಜಿ ಭೂಗತ, ಭಾವೀ ನಾಯಕ?

ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಲ್ಲವೂ ಸಾಧ್ಯ. ನಿನ್ನೆ ಮೊನ್ನೆಯ ತನಕ ಭೂಗತ ಜಗತ್ತಿನಲ್ಲಿದ್ದ ವ್ಯಕ್ತಿಗಳು ನಾಳೆ ಜನಪ್ರತಿನಿಧಿಗಳಾಗುವ ಅವಕಾಶವನ್ನು ನಮ್ಮ ಪ್ರಜಾಪ್ರಭುತ್ವ ಕಲ್ಪಿಸುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪಾತಕಗಳನ್ನೆಸಗಿ, ಸದ್ಯ ಜೈಲುಕಂಬಿ ಎಣಿಸುತ್ತಿರುವ ಅಬುಸಲೇಂ ಚುನಾವಣೆಗೆ ನಿಂತು ಸುದ್ದಿ ಮಾಡಿದ್ದಾನೆ. . .


ನಮ್ಮನ್ನಾಳುವ ಒಲವುಗಳು

ನಮಗೇ ಗೊತ್ತಿಲ್ಲದೆ ನಮ್ಮ ಬದುಕು ಸದಾ ಯಾವುದೋ ನಿಯಂತ್ರಣದಲ್ಲಿರುತ್ತದೆ; ನಾವು ಮಾಡುವ ಪ್ರತಿ ಕೆಲಸವೂ ಅದರ ಸುತ್ತಲೇ ತಿರುಗುತ್ತಿರುತ್ತದೆ; ನಮ್ಮ ಗಮನಕ್ಕೂ ಬಾರದೇ. ನಮ್ಮನ್ನು ಹೀಗೆ ನಿಯಂತ್ರಿಸುತ್ತಿರುವ ಸಂಗತಿಗಳು ಯಾವುವು? ಅದರಿಂದಾಗುವ ಪರಿಣಾಮಗಳೇನು? ಎಂಬುದನ್ನು ಮನಃಶಾಸ್ತ್ರಜ್ಞರು ಕೂಲಂಕಷವಾಗಿ ಅಧ್ಯಯನ ಮಾಡಿದ್ದಾರೆ. . .

 

ಅತಿಥಿ ಅಂಕಣದಲ್ಲಿ ಜಯಂತ ಕಾಯ್ಕಿಣಿ - ನಾಡ ಕಟ್ಟಿದ ತ್ರಿಮೂರ್ತಿಗಳು-೨

೨೫೦ಕ್ಕಿಂತಲೂ ಹೆಚ್ಚಿನ ಪುಸ್ತಕಗಳು, ವಿಶ್ವಕೋಶಗಳು, ವಿಜ್ಞಾನ ಪುಸ್ತಕಗಳು, ನಾಟಕಗಳು, ಯಕ್ಷಗಾನ, ಶಬ್ದಕೋಶ, ಪ್ರವಾಸ, ಪತ್ರಿಕೋದ್ಯಮ, ಸಿನಿಮಾ ಹೀಗೆ ಒಬ್ಬ ವ್ಯಕ್ತಿ ಹತ್ತು ಆ ವಯಸ್ಸಿನಲ್ಲಿ ಮಾಡಬಹುದಾದ್ದನ್ನು ಮಾಡಿದ ಅದ್ಭುತ ಸೋಜಿಗ ಶಿವರಾಮ ಕಾರಂತ. ಅವರು ತಮ್ಮ ಅರವತ್ತು ವಯಸ್ಸಿನ ನಂತರವೇ ಹಣದ ಮುಖ ಕಂಡವರು. ಅಜಂತಾ, ಎಲ್ಲೋರಾ, ಸಾರನಾಥದ ಗುಹೆಗಳನ್ನು ಕಾಲ್ನಡಿಗೆಯಲ್ಲೇ ಅಲೆಮಾರಿಯಾಗಿ ಸುತ್ತಿದವರು. . .


ಮುಂಬೈ ಅಭಿವೃದ್ಧಿಗೆ ೨೫ ಸಾವಿರ ಕೋಟಿ ಸಾಲ

ಮುಂಬರುವ ದಶಕದಲ್ಲಿ ಮುಂಬೈ ನಗರದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸುಮಾರು ೨೫,೦೦೦ ಕೋಟಿ ರೂಪಾಯಿಗಳಷ್ಟು (೫ ಬಿಲಿಯನ್ ಡಾಲರ್) ರಾಜ್ಯ ಸರ್ಕಾರಕ್ಕೆ ಸಾಲ ನೀಡಲು ವಿಶ್ವಬ್ಯಾಂಕ್ ಮುಂದೆ ಬಂದಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್ ಅವರು ತಿಳಿಸಿದ್ದಾರೆ. . .


ಕಡಲು ತೀರ ಅಭಿವೃದ್ಧಿ ಮಂಡಳಿ

ಬಂದರುಗಳ ನವೀಕರಣಕ್ಕೆ ಅನುಕೂಲವಾಗುವಂತೆ ಆಂಧ್ರಪ್ರದೇಶ ಸರ್ಕಾರ ವಿಶೇಷ ಕಡಲು ತೀರ ಅಭಿವೃದ್ಧಿ ಮಂಡಳಿಯೊಂದನ್ನು ಸ್ಥಾಪಿಸಲು ಸಿದ್ಧತೆ ನಡೆಸಿದೆ. ಈ ಸಂಬಂಧ ಈಗಾಗಲೇ ರಾಜ್ಯ ಸರ್ಕಾರ ಹೊಸ ಕಾನೂನೊಂದನ್ನು ರೂಪಿಸಲು ಅನುವು ಮಾಡಿಕೊಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ದೇಶದಲ್ಲೇ ಅತ್ಯಂತ ಹಳೆಯದಾದ ಗುಜರಾತ್ . . .


ಗ್ರಾಮೀಣ ಸ್ಥಿತಿ ಅಧ್ಯಯನಕ್ಕೆ ಹೊಸ ಕೋರ್ಸ್

ಗ್ರಾಮೀಣ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಹಾಗೂ ಗ್ರಾಮೀಣ ಜನ ಜೀವನದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ಅನುಕೂಲವಾಗುವಂತೆ ಸದ್ಯದಲ್ಲೇ ವಿಶ್ವವಿದ್ಯಾಲಯಗಳ ಅನುದಾನ ಆಯೋಗ (University Grants Commission) ಪಠ್ಯಕ್ರಮಗಳನ್ನು ಸಿದ್ಧಪಡಿಸಲು ಪಾಂಡೀಚೇರಿ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ವಹಿಸಿದೆ ಎಂದು ವಿವಿ ಅನುದಾನ ಆಯೋಗದ ಸದಸ್ಯರಾಗಿರುವ ಕ್ಸೇವಿಯರ್ ಅಲ್ಫಾನ್ಸೊ ಅವರು ಹೇಳಿದ್ದಾರೆ.


ಸ್ಮಶಾನ ಭೂಮಿ ಸಮಸ್ಯೆ

ರಾಜ್ಯದ ಪ್ರಮುಖ ಪಟ್ಟಣವಾಗಿದ್ದ ಮಂಡಗಾವ್ ವಾಸಿಗಳಿಗೆ ಸ್ಮಶಾನಭೂಮಿಯನ್ನು ಒದಗಿಸುವುದೇ ರಾಜ್ಯ ಸರ್ಕಾರಕ್ಕೆ ದೊಡ್ಡ ತಲೇನೋವಾಗಿ ಪರಿಣಮಿಸಿದೆ. ಇದಕ್ಕೆ ಮುಖ್ಯಕಾರಣಗಳೆಂದರೆ, ಮಡಗಾಂವ್ ಹೊರವಲಯಕ್ಕೆ ಹೊಂದಿಕೊಂಡಿರುವ ಖಾಲಿ ಜಾಗವನ್ನು ಮೂರು ಪ್ರಮುಖ. . .


ಗಾಂಜಾ ಮೇಲೆ ಹದ್ದಿನ ಕಣ್ಣು

ಕಾನೂನು ಬಾಹಿರವಾಗಿ ಬೆಳೆಯುತ್ತಿರುವ ಗಾಂಜಾ ಬೆಳೆಯ ಮೇಲೆ ಹದ್ದಿನ ಕಣ್ಣಿಡಲು, ಕೇರಳ ರಾಜ್ಯದ ಅರಣ್ಯ ಇಲಾಖೆ ಸದ್ಯದಲ್ಲೇ ಬಾಹ್ಯಾಕಾಶ ತಂತ್ರಜ್ಞಾನದ ಮೊರೆ ಹೋಗಲಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿರುವ ಆರ್.ಆರ್. ಶುಕ್ಲಾ ಅವರು ತಿಳಿಸಿದ್ದಾರೆ. . .


ಬಾಬು-ವಿಷ್ಣು ಭಾಯಿಭಾಯಿ

ಯುದ್ಧ ಮತ್ತು ಪ್ರೇಮದಲ್ಲಿ ಏನು ಬೇಕಾದರೂ ಆಗಬಹುದು... ಇಲ್ಲಿ ಯಾವುದೇ ತರ್ಕಕ್ಕೂ ಆಸ್ಪದವಿಲ್ಲ ಅನ್ನುವ ಹಳೆಯ ಮಾತಿದೆ. ನೀವೇನೇ ಹೇಳಿ ಈ ಮಾತು ಪದಶಃ ಅನ್ವರ್ಥವಾಗುವುದು ಕನ್ನಡ ಚಿತ್ರರಂಗಕ್ಕೆ. ಇಲ್ಲಿ ಹಿಂದಿನ ದಿನವಷ್ಟೇ ಕತ್ತಿನಪಟ್ಟಿ ಹಿಡಿದು ಜಗಳವಾಡಿದವರು ಮಾರನೇ ದಿನವೇ. . .


ಜೈಜೈ ಮದನ

ಮದನ ಎಂಬುವುದು ಜೈಜಗದೀಶ್ ನಿರ್ದೇಶನದ ಮೊದಲ ಚಿತ್ರ. ಇದುವರೆಗೆ ನಿರ್ಮಾಣದಲ್ಲಿ, ನಟನೆಯಲ್ಲಿ ತೊಡಗಿದ್ದ ಜೈ ಈಗ ನಿದೇಶನಕ್ಕೆ ಕೈ ಹಾಕಿದ್ದಾರೆ. ಮೊನ್ನೆ ಕ್ಯಾಸೆಟ್ ಬಿಡುಗಡೆಯ ದಿನವಂತೂ ಜೈಜಗದೀಶ್ ಮುಖದಲ್ಲಿ ಅದನ್ನು ಪೂರ್ಣಗೊಳಿಸಿದ ತೃಪ್ತಿ ಮಾತ್ರವಲ್ಲ, ಚೆನ್ನಾಗಿ ಮಾಡಿದ್ದೇನೆ ಎಂಬ ಆತ್ಮವಿಶ್ವಾಸವೂ ತುಳುಕುತ್ತಿತ್ತು. . .

 
ವಿಷ್ಣು ಹೇಳಿದ ಕತೆ

ಪಾಲ್-ಬಾಬು ಒಂದೇ ವೇದಿಕೆಯಲ್ಲಿ ಕೂತಿದ್ದಕ್ಕಿಂತ ವಿಷ್ಣು-ಬಾಬು ಒಂದೇ ವೇದಿಕೆಯನ್ನು ಅಲಂಕರಿಸಿದ್ದು ಮಾತ್ರ ವರ್ಷದ ಸೋಜಿಗ ಎಂಬಷ್ಟು ವಿಚಿತ್ರವಾಗಿತ್ತು. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಬಾಬು ಬಾಯಿಂದ ವಿಷ್ಣು ಬಗ್ಗೆ ಸಿಡಿಯುವ ಮಾತುಗಳು ಬಂದಿದ್ದವೇ ವಿನಃ ಯಾರೂ ಈ ಇಬ್ಬರು ಒಟ್ಟಗಿದ್ದುದನ್ನು ನೋಡಿರಲಿಲ್ಲ. . .


ದೇಸಾಯಿ ಕ್ಷಣಗಣನೆ ವಿಷ್ಣು ಹಣಗಣನೆ

ಹೀಗೊಂದು ಅರ್ಥಾತ್ ಸಂಬಂಧವಿಲ್ಲದ ಸಿನಿಪದ ಆರಂಭವಾಗಿರುವುದು ದೇಸಾಯಿ ಎಂಬ ದೀರ್ಘಕಾಲದ ನಿರ್ದೇಶಕರ `ಕ್ಷಣಕ್ಷಣ' ಎಂಬ ಚಿತ್ರ ಎಂಬತ್ತಾರು ದಿನಗಳ ಚಿತ್ರೀಕರಣವನ್ನು ದಾಟಿ ಮುನ್ನುಗ್ಗಿದ ಮೇಲೆ. ಸಾಮಾನ್ಯವಾಗಿ ದೇಸಾಯಿ ಚಿತ್ರ ಎಂದಕೂಡಲೆ. . .


ಗಾಂಧಿನಗರ್ ಟು ಗೋವಾ

ಈ ಬಾರಿಯ ಚಿತ್ರೋತ್ಸವಕ್ಕೆ ವಿಶೇಷ ಕಳೆಯಿದೆ! ಅದರಲ್ಲೂ ಕನ್ನಡ ಚಿತ್ರರಂಗಕ್ಕೆ ಈ ಚಿತ್ರೋತ್ಸವ ಸಾಕಷ್ಟು ಸಂತಸ ತಂದಿದೆಯಂತೆ! ನವೆಂಬರ್ ೨೩ರಿಂದ ಡಿಸೆಂಬರ್ ೩೦ರವರೆಗೆ ಗೋವಾದಲ್ಲಿ ನಡೆಯಲಿರುವ ಈ ಚಿತ್ರೋತ್ಸವದಲ್ಲಿ ಭಾಗವಹಿಸಲು ಗಾಂಧಿನಗರ ನಾಮುಂದೆ ತಾಮುಂದೆ ಎಂದು ಹೊರಡಲು ಸಜ್ಜಾಗುತ್ತಿದೆ. . .


ಜಾಣೆಯಾಗಿರು ನನ್ನ ಮಲ್ಲಿಗೆ - ಅಧ್ಯಾಯ ೪

ಯುಕ್ತಾ ಸಣ್ಣಗೇ ಕಡ್ಡಿಯಂತಿದ್ದವನನ್ನು ದೃಷ್ಟಿಸಿ ನೋಡಿದಳು. ಹದಿನೈದು ಹದಿನಾರರ ವಯಸಿದ್ದಿರಬಹುದು ಆ ಹುಡುಗನಿಗೆ. ಗಿಳಿ ಮೂತಿಯಂತಹ ಚೂಪು ಮುಖದಲ್ಲಿ ಈಗಷ್ಟೇ ಮೀಸೆ ಮೂಡುತ್ತಿತ್ತು. . .


ಬಾಂಬೆ ಮಸಾಲ
ಒಂದಾಗೋಣ ಬಾ...

ಪಾಪ. ಜಾನ್ ಅಬ್ರಹಾಂಗೀಗ ತನ್ನ ಹಳೇ ಗೆಳತಿಯ ಪಾದವೇ ಗತಿ. ಇಷ್ಟುದಿನ ರೋಮಿಯೋ ತರಾ ಸುತ್ತಾಡುತ್ತಾ ಅವರಿವರ ಜೊತೆ ಮೋಜು ಮಸ್ತಿ ಮಾಡುತ್ತಾ ಕಾಲ ಕಳೆದಿದ್ದ ಜಾನ್ ತನ್ನ ಬಲು ಹತ್ತಿರದ ಗೆಳತಿ ಬಿಪಾಶಾ ಬಸು ಜೊತೆ ಹೊಸದೊಂದು ಚಿತ್ರ ಮಾಡಲು ಹೊರಟಿದ್ದಾನೆ.
ಲೆಕ್ಕ ಪ್ರಕಾರ ಇವರಿಬ್ಬರು ಒಟ್ಟಿಗೆ ನಟಿಸದೆ ಮೂರು ವರ್ಷವೇ ಕಳೆದಿದೆ. ಅದ್ಯಾವ ಮರದ ಕೆಳಗೆ ಕೂತರೋ? ಯಾವಾಗ ಜ್ಞಾನೋದಯವಾಯಿತೋ ತಿಳಿಯದು. ಅಂತೂ ಅವರಿಬ್ಬರು ಒಂದಾಗಿದ್ದಾರೆ ಎಂದು ತೀರಾ ಇತ್ತೀಚಿಗಿನ ಫೋಟೋ ನೋಡಿ ಒಪ್ಪಿಕೊಳ್ಳಬಹುದು. . . .


ಆಶಾ ಆಸೆ ಕೊನೆಗೂ ನಿರಾಸೆ

ಹೊಸ `ಶೋಲೆ' ಚಿತ್ರ ಈ ಪರಿ ಗುಡುಗುತ್ತಿರುವುದು ನೋಡಿದ್ರೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಏನೋ ಖಡಕ್ಕಾದ ಪ್ಲಾನ್ ಮಾಡಿಕೊಂಡಿರುವ ಹಾಕಿದೆ. ಮೊದಲು ಇಡೀ ತಾರಾಗಣವನ್ನೇ ಬುಡಮೇಲು ಮಾಡಿಬಿಟ್ಟಿದ್ದರು. ನಿಮಗೂ ಗೊತ್ತಿದೆ. ಈ ಶೋಲೆ ಚಿತ್ರದಲ್ಲಿ ಹಳೆಯ ಚಿತ್ರದ ಹುಲಿ ಬಿಗ್ ಬಿ ಮಾತ್ರ. ಉಳಿದರೆ . . .


ಕಾಸ್ ಬಾತ್

`ಕಾಸಿದ್ದೋನೇ ಬಾಸ್!' ಇದು ಬಾಲಿವುಡ್‌ನ ಹೊಸ ಖಾಸ್‌ಬಾತ್. ಒಂದು ಕಾಲಕ್ಕೆ ಅಮಿತಾ ಬಚ್ಚನ್ ೮ ಕೋಟಿ ಸಂಭಾವನೆ ಪಡೆಯುತ್ತಿದ್ದುದೇ ದೊಡ್ಡ ಸುದ್ದಿ ಶಾರುಖ್ ಖಾನ್ ೬ ಕೋಟಿ ಪಡೆದರೆ ಅದೇ ಫೈನಲ್ ಆಗಿತ್ತು. ಇವರೆಲ್ಲರನ್ನು ಸದ್ದಿಲ್ಲದಂತೆ ಮೀರಿಸಿ ಮುಂದೆ ಬಂದು ನಿಂತಿದ್ದಾನೆ ಹೃತಿಕ್ ರೋಷನ್!. . .


ಮಲ್ಲಿಗೀಗ ಮೂವತೈದು!

ಯಕ್ಕೋ.... ನಿನ್ ವಯಸ್ಸೆಷ್ಟು? ಅಂತಾ ಇಲ್ಲೊಬ್ರನ್ನು ಕೇಳಿದ್ರೆ. `ಓಹ್! ನಂದಾ ಹತ್ತು ಮತ್ತೊಂದು' ಅಂತಾ ತನ್ನ ಅಂಗಾಂಗಳಿಂದ ತಾನಿನ್ನೂ ಯಂಗ್ ಅಂತಾ ತೊರಿಸಿಕೊಳ್ಳೋಕೆ ಪ್ರಯತ್ನಿಸುತ್ತಿದ್ದಾರೆ. ಆದರೆ `ಒಳಗಿನ ಸತ್ಯವನ್ನು ಎಷ್ಟು ದಿನ ಅಂತಾ ಮುಚ್ಚಿಡೋದು ಹೇಳಿ. ಮಲ್ಲಿಕಾ ಶೆರಾವತ್ ವಯಸ್ಸು ೩೫ ಅಂತಾ ಸುದ್ದಿ ಗೊತ್ತಾದಾಗ ಸದ್ದಿಲ್ಲದೆ ಮಲ್ಲಿಕಾ ಸೈಲೆಂಟಾಗಿದ್ದಾಳೆ.'. . .
 

ರಿಯಲ್ ಗಾಸಿಪ್!

ಗಾಸಿಪ್ಪುಗಳ ಗುಂಡಿನ ಸುರಿಮಳೆಯಿಂದ ತತ್ತರಿಸಿ ಹೋಗಿರುವ ಐಶ್ ಬೇಬಿಯ ಮದುವೆ ಕೊನೆಗೂ ಫಿಕ್ಸ್ ಆಗಿದೆ. ಐಶ್ -ಅಭಿಷೇಕ್ ಮದುವೆ ಆಗೋದು ಗ್ಯಾರಂಟಿ. ಮದುವೆಯ ಸುದ್ದಿಯ ಬಗ್ಗೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತಾಡುತ್ತಿದ್ದ ಐಶ್ ಒಂದೊಮ್ಮೆ ಮದುವೆಯ ವಿಷಯ ದೇವರಿಗೆ ಬಿಟ್ಟಿದ್ದು ಎಂದು ಹೇಳಿ ದೇವರನ್ನೇ ಇಕ್ಕಟ್ಟಿಗೆ ಸಿಕ್ಕಿಸಿ ಹಾಕಿದ್ದಳು. . .


ನಖ ಶಿಖದ ಸೌಂದರ್ಯ ರಕ್ಷಣೆ

ಅಲಂಕಾರ ಇತ್ತೀಚೆಗೆ ಉದ್ಭವವಾದ ಪ್ರಕ್ರಿಯೆಯಲ್ಲ; ಮನುಷ್ಯನೊಂದಿಗೆ ತನ್ನ ಇರುವಿಕೆಯನ್ನು ತೋರಿಸಿಕೊಟ್ಟ ವಿಶೇಷ ಕ್ರಿಯೆ. ಬಳಸುತ್ತಿದ್ದ ವಸ್ತುಗಳಲ್ಲಿ ವ್ಯತ್ಯಾಸವಿದ್ದರೂ ಎಲ್ಲ ಕಾಲದಲ್ಲಿರುವ ಉದ್ದೇಶವೊಂದೇ. ಇರುವ ರೂಪವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವುದು. . .


ಬೇರು - ಮಂಗಳಾಕುಮಾರ್‌ರವರ ಕತೆ

ಇಬ್ಬರು ದಂಪತಿಗಳು ಹದಿನೈದು ವರ್ಷಗಳಿಗಿಂತ ಜಾಸ್ತಿ ಜೊತೆಯಾಗಿದ್ದವರು. ಸೊಸೈಟಿಯ ಅಧ್ಯಕ್ಷರಾದ ಶರ್ಮ ಮತ್ತು ಇತರೆ ಕಾರ್ಯಕಾರಿ ಸಮಿತಿಯವರು ನಿನ್ನೆ ನಡೆಸಿದ ಮೀಟಿಂಗ್ ಇದೇ ವಿಷಯದ ಬಗ್ಗೆ. ಅಮೆರಿಕಾದಲ್ಲಿ ನೆಲೆಸಿರುವ ನಮ್ಮ ಭಾರತೀಯರ ದಾಂಪತ್ಯ ಜೀವನ ಏಕೆ ಅಮೇರಿಕಾ ಜೀವನ ಶೈಲಿಗೆ ಬಲಿಯಾಗುತ್ತಿದೆ? . . .


ಶಾಂತ ಮೈಸೂರನ್ನು ಕದಡಿದ `ಟೆರರಿಸಂ'

ಮೈಸೂರಿನಲ್ಲಿ ಸಿಕ್ಕಿಬಿದ್ದ ಉಗ್ರಗಾಮಿಗಳಿಂದ ಹಲವು ಸಂಗತಿಗಳು ಬಯಲಾಗಿವೆ. ಈ ದೇಶದಲ್ಲಿ ಯಾವುದೂ ಸುರಕ್ಷಿತವಲ್ಲ. ಅಲ್ಲದೆ, ಜನ ಸಾಮಾನ್ಯರ ಬದುಕು ಹದಗೆಡುವಷ್ಟು ಟೆರರಿಸಂ ಈ ನಾಡಿನೊಳಗೆ ಚಾಚಿಕೊಂಡ ಅಂಶ ಈಗ ಸ್ಪಷ್ಟವಾಗಿ ಗೋಚರವಾಗುತ್ತಿದೆ. ನಾಗರಿಕರ ಜೀವನದ ಮೇಲೆ ಬರೆ ಎಳೆಯುತ್ತಿರುವ ಸರ್ಕಾರ, ಪೋಲೀಸ್ ವ್ಯವಸ್ಥೆ ಇದಕ್ಕೇನು ಹೇಳುತ್ತದೆ? . . .


`ಅಲ್ ಬದ್ರ್' ಉಗ್ರಗಾಮಿ ಸಂಘಟನೆಯ ಬಗ್ಗೆ ಒಂದಿಷ್ಟು....


ನಾಯಿ ಕೊಡೆಗಳಂತೆ ಉಗ್ರಗಾಮಿ ಸಂಘಟನೆಗಳು ಹುಟ್ಟಿಕೊಳ್ಳುತ್ತಿವೆ. ದಿನಕ್ಕೊಂದು ಹೊಸ ಉಗ್ರ ಸಂಘಟನೆಗಳ ಹಾವಳಿ ಬಗ್ಗೆ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಮೊನ್ನೆ ಮೈಸೂರಿನಲ್ಲಿ ಆತಂಕವಾದಿಗಳು ಸೆರೆ ಸಿಕ್ಕುವವರೆಗೂ `ಅಲ್ ಬದ್ರ್' ಸಂಘಟನೆಯ ಹೆಸರು ಕನ್ನಡಿಗರಿಗೆ ಅಪರಿಚಿತವಾಗಿಯೇ ಇತ್ತು.


ಗೋಹತ್ಯೆ, ಗೋಪಾಲಕರು ಮತ್ತು ಹಿಂದೂ ಮೂಲಭೂತವಾದಿಗಳು

ಗೋಮಾಂಸ ಭಕ್ಷಣೆ ಹಾಗೂ ಹಿಂದೂ ಮುಸ್ಲಿಂ ಗಲಭೆಯ ಬಗ್ಗೆ ನಿರಂತರವಾದ ಒಂದು ಸಂಬಧವಿದೆ. ಹಾಗೆಯೇ ಮುಸ್ಲಿಮರು ಗೋಹತ್ಯೆ ನಡೆಸುತ್ತಾರೆ ಎಂಬ ಕಾರಣವೇ ಈ ಗಲಭೆಗೆ ಹಿನ್ನೆಲೆಯೂ ಕೇಳಿಬರುವುದು. ಹಾಗಾಗಿ ಜಾಗತಿಕವಾಗಿ ಹಾಗೂ ಭಾರತೀಯ ಸಮಾಜದಲ್ಲಿ ಗೋವುಗಳ ಬಗ್ಗೆ, ಗೋಹತ್ಯೆಯ ಬಗ್ಗೆ, ಗೋಮಾಂಸ ಭಕ್ಷಣೆಯ ಬಗ್ಗೆ ಇಲ್ಲಿ ಸಮಗ್ರವಾಗಿ ಚರ್ಚಿಸಲಾಗಿದೆ. ಅಲ್ಲದೆ ಎಲ್ಲವನ್ನೂ ಭಾವನಾತ್ಮಕಗೊಳಿಸುವ ಮೂಲಭೂತವಾದದ ಪೊಳ್ಳುತನದ ಬಗ್ಗೆಯೂ ಇಲ್ಲಿ ವಿವರಿಸಲಾಗಿದೆ. . .


ರ್‍ಯಾಗಿಂಗ್ ಪೀಡೆಗೆ ಕಾಲು ಕಳೆದುಕೊಂಡ

ರ್‍ಯಾಗಿಂಗ್ ಪಿಡುಗು ಮಾಯವಾಯಿತು ಅನ್ನುತ್ತಿರುವಂತೆಯೇ ಅದು ಇನ್ನಷ್ಟು ಹಿಂಸಾಚಾರದಲ್ಲಿ ಪ್ರತ್ಯಕ್ಷವಾಗುತ್ತಿದೆ. ಒರಿಸ್ಸಾದ ಹುಡುಗನೊಬ್ಬ ರ್‍ಯಾಗಿಂಗ್ ಹಿಂಸೆಗೆ ಬಲಿಯಾಗಿ ತನ್ನೆರಡು ಕಾಲುಗಳನ್ನೂ ಕಳೆದುಕೊಳ್ಳುವ ಸ್ಥಿತಿ ತಲುಪಿದ್ದಾನೆ. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಶಂಕರ್ ಆಶ್‌ನ ದಾರುಣ ಸ್ಥಿತಿಯ ಚಿತ್ರಣವಿದು. . .


ತಿರುಗು ಬಾಣವಾದ ಪ್ರಯೋಗಗಳು

ಸದ್ಯದ ಪರಿಸ್ಥಿತಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಹಾಗೂ ಫಾರ್ಮ್ ಕಳೆದುಕೊಂಡ ಆಟಗಾರರಿಗೆ `ಶಾಕ್ ಟ್ರಿಟ್‌ಮೆಂಟ್' ನೀಡಲೇಬೇಕು. ಅಂದರೆ, ವಿಶ್ರಾಂತಿಯ ನೆಪದಲ್ಲಿ ತಂಡದಿಂದ ಸ್ವಲ್ಪ ದಿನ ಹೊರಗಿಡಬೇಕು. ಈ ಭಾರತ ಕ್ರಿಕೆಟ್ ತಂಡದ ಹಣೆಬರ ಹೀಗೆಯೇ. . .


ಅಮೆರಿಕಾದಿಂದ ರವಿ

ನೀವು ಪ್ರಾಮಾಣಿಕರಾಗಿದ್ದರೆ ಇನ್ನು ಲಂಚ ಕೊಡಬೇಕಾಗಿಲ್ಲ!

ನನ್ನ ಪ್ರಕಾರ ಲಂಚದಲ್ಲಿ ಎರಡು ವಿಧ. ಒಂದು, ಕಾನೂನುಬದ್ಧವಾಗಿ ಯಾವುದೇ ತಕರಾರಿಲ್ಲದೆ ಆಗಬೇಕಾದ ಕೆಲಸಕ್ಕೆ ಕೊಡುವ ಲಂಚ; ಉದಾಹರಣೆಗೆ, ಜನನಮರಣ ಪತ್ರಕ್ಕೆ, ಚಾಲಕ ಪರವಾನಿಗೆ ಪಡೆಯಲು, ರೇಷನ್ ಕಾರ್ಡ್ ಪಡೆಯಲು, ವಿದ್ಯುತ್ ಸಂಪರ್ಕ ಪಡೆಯಲು, ಜಾತಿ ಪ್ರಮಾಣ ಪತ್ರ, ಇತರೆ. . .

 

ಇಂದೇ ಚಂದಾದಾರರಾಗಿ

ವಿಕ್ರಾಂತ ಕರ್ನಾಟಕದ ಹನ್ನೊಂದನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ದೀಪಾವಳಿ ವಿಶೇಷ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಒಂಬತ್ತನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಎಂಟನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಏಳನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಆರನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಐದನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ನಾಲ್ಕನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಮೂರನೇ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ದ್ವಿತೀಯ ಸಂಚಿಕೆಯಲ್ಲಿ . . .

ವಿಕ್ರಾಂತ ಕರ್ನಾಟಕದ ಪ್ರಥಮ ಸಂಚಿಕೆಯಲ್ಲಿ . . .

 

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com