ವಿಕ್ರಾಂತ ಕರ್ನಾಟಕದ
ಹನ್ನೊಂದನೇ ಸಂಚಿಕೆಯಲ್ಲಿ:

ಸಂಪಾದಕೀಯ - ಎದೆ ತುಂಬಿ ಹಾಡಿದ `ರಾಷ್ಟ್ರಕವಿ'
ಇದೇನೂ ಅಚ್ಚರಿಯ ಆಯ್ಕೆಯಾಗಿರಲಿಲ್ಲ. ರಾಷ್ಟ್ರಕವಿ ಯಾರಾಗಬಹುದೆಂಬ ಸರ್ಕಾರದ
ಆಯ್ಕೆಯ ಪ್ರಶ್ನೆ ಬಂದಾಗ ಮೊದಲು ಕೇಳಿ ಬಂದುದೇ ಡಾ. ಜಿ.ಎಸ್. ಶಿವರುದ್ರಪ್ಪನವರ
ಹೆಸರು. ಹಾಗೆ ನೋಡಿದರೆ ಆಯ್ಕೆಗೆ ಇದ್ದುದು ಎರಡೇ ಹೆಸರು. ನವೋದಯದ
ಕಾಲದಿಂದಲೂ ಕಾವ್ಯದ ಹಣತೆಯನ್ನು ಆರದ ಹಾಗೆ ಜೋಪಾನ ಮಾಡಿಕೊಂಡು ಬಂದ ಡಾ.ಜಿ.ಎಸ್.
ಶಿವರುದ್ರಪ್ಪ ಹಾಗೂ ಚೆಂಬೆಳಕಿನ ಕವಿ ಚೆನ್ನವೀರ ಕಣವಿ ಅವರದು. ಇವರಿಬ್ಬರ ಕಾವ್ಯದ
ತೂಕದಲ್ಲಿ ಗುಲಗಂಜಿಯ ಅಂತರ ಇರಬಹುದು. . .
ಓದುಗರ ಪತ್ರಗಳು
ಸತ್ಯಮೂರ್ತಿಯವರಿಗೆ ಪ್ರೀತಿಪೂರ್ವಕ ಪ್ರಣಾಮಗಳು...
ತಮ್ಮ ಆರೋಗ್ಯಕರ ಆಲೋಚನೆಯಲ್ಲಿ ಅರಳಿದ `ವಿಕ್ರಾಂತ ಕರ್ನಾಟಕ' ಪತ್ರಿಕೆ ಪ್ರಥಮ
ಸಂಚಿಕೆಯಲ್ಲೇ ಗೆದ್ದುಬಿಟ್ಟಿತು. ಈ ಕಾರಣಕ್ಕೆ ಪ್ರತಿವಾರ ನಮ್ಮ ಮನೆಯ ಪ್ರೀತಿಯ ಅತಿಥಿ
ಎಂದೇಳಲು ಖುಷಿ ಎನಿಸಿದೆ.
ಪ್ರತಿಪುಟಗಳು ಪಳ್ಳೆಂದು ಹೊಳೆಯುವುದರ ಜತೆಗೆ ವೈವಿಧ್ಯಮಯವಾಗಿ
ಸಕಾರಾತ್ಮಕವಾಗಿ ಮನಸೆಳೆಯುವ ವಿಷಯಗಳು ರಂಜಿಸಿ ಚಿಂತನೆಗೀಡು ಮಾಡುವುದರಲ್ಲಿ
ಯಶ ಸಾಧಿಸುತ್ತಿದೆ.
ಹೀಗಾಗಿ ವಿಕ್ರಾಂತ ಕರ್ನಾಟಕವನ್ನು ಕಾತುರದಿಂದ ಕಾಯುವ ಲಕ್ಷಾಂತರ ಓದುಗರಲ್ಲಿ ನಾನು
ಮೊದಲಿಗ ಎಂದರೆ ಅತಿಶಯವಲ್ಲ. ಉತ್ತಮ ಗುಣ ಮಟ್ಟದ ಜನಪರ ಕಾಳಜಿಯ ಚಿಂತನಶೀಲ
ಪತ್ರಿಕೆಯನ್ನು ನಮ್ಮ ನಾಡಿನ ಓದುಗರು ಕೈಬಿಟ್ಟಿಲ್ಲ ಎಂಬುದಕ್ಕೆ ನೀವು ಕಾಣುತ್ತಿರುವ
ಯಶಸ್ಸೇ ನೇರ ಸಾಕ್ಷಿ!
- ಸಿದ್ದಾಪುರ ಶಿವಕುಮಾರ್
ಚಳ್ಳಕೆರೆ
*
ಸಂಪಾದಕರಿಗೆ ನಮಸ್ಕಾರ.
ವಿಕ್ರಾಂತ ಕರ್ನಾಟಕಕ್ಕೆ ಶುಭಾಕಾಂಕ್ಷೆಗಳು. ಜೊತೆಗೆ ಅದನ್ನು ಸಮರ್ಥವಾಗಿ
ಮುನ್ನಡೆಸುತ್ತಿರುವ ಹೊಣೆಹೊತ್ತ ನಿಮಗೂ.
ವಾರದಿಂದ ವಾರಕ್ಕೆ ವಿಭಿನ್ನವಾಗಿ ಹೊರಬರುತ್ತಿರುವ ಸಂಚಿಕೆಗಳು ಮನಕ್ಕೆ ಮುದ
ನೀಡುವುದರೊಂದಿಗೆ, ಜ್ಞಾನ-ವೈಚಾರಿಕತೆಗಳನ್ನೂ ಬೆಳೆಸಲು ಸಹಕರಿಸುವಂತಿವೆ. ಆದರೂ,
ಇಂದಿನ ಯಾಂತ್ರಿಕತೆಯ ಬದುಕಿನಲ್ಲಿ, ಆರೋಗ್ಯದಿಂದಿರಲು `ಲಾಫ್ಟರ್ ಕ್ಲಬ್'ಗಳು ಅಲ್ಲಲ್ಲಿ
ತಲೆ ಎತ್ತಿರುವ ಪರಿಸ್ಥಿತಿಯಲ್ಲಿ ಹಾಸ್ಯರಸಕ್ಕೆ ತುಸು ಹೆಚ್ಚಿನ ಸ್ಥಾನ
ಬೇಕಿತ್ತೆನಿಸುವುದಿಲ್ಲವೇ? ವ್ಯಂಗ್ಯಚಿತ್ರ, ನಗೆಹನಿ, ವಿನೋದ ಪ್ರಬಂಧಗಳೂ ಬರಲೆಂದು
ನಮ್ರಳಾಗಿ ಆಶಿಸುತ್ತೇನೆ.
ಕುಟುಂಬದ ಎಲ್ಲ ಸದಸ್ಯರಿಗೂ ರುಚಿಸುವ ಅಡುಗೆ! ಸರಳ ಭಾಷೆಯ ಬೊಳುವಾರರ
`ಪಾಪುಗಾಂಧಿ...'ಯಂತೂ ವಿಶಿಷ್ಟ!
ಉತ್ತಮ ಪತ್ರಿಕೆಯೊಂದನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.
- ಟಿ.ಎಸ್. ಅಂಬುಜಾ
ಉಡುಪಿ
*
ಮಾನ್ಯರೆ,
`ವಿಕ್ರಾಂತ ಕರ್ನಾಟಕ'ದ ದಸರಾ ಸಂಚಿಕೆಯನ್ನು ಕೊಂಡು ಓದಿದೆ. ಪತ್ರಿಕೆ ಹಿಡಿಸಿತು. ಮುದ್ರಣ
ಸುಂದರವಾಗಿದೆ. ರಾಜ ಮಹಾರಾಜರ ಕಾಲದಲ್ಲಿ ದಸರಾ ಆಚರಣೆ ಹೇಗಿತ್ತು. ಜನ-ಸಾಮಾನ್ಯರ
ಕಾಲದಲ್ಲಿ ಹೇಗಿದೆ. ರಾಜಕೀಯವಾಗಿ ಪುಢಾರಿಗಳು ಇದನ್ನು ಹೇಗೆ ಬಳಸಿಕೊಳ್ಳುತ್ತಿದ್ದಾರೆ
ಎಂಬುದನ್ನು ಸವಿಸ್ತಾರವಾಗಿ, ಮಾರ್ಮಿಕವಾಗಿ ಹಲವು ಲೇಖಕರು ಬರೆದಿದ್ದಾರೆ.
ಮೆಚ್ಚುಗೆಯಾಯಿತು. ಇಂತಹ ಒಂದು ಪತ್ರಿಕೆಯ ಅವಶ್ಯಕತೆ ಬಹಳವಿತ್ತು. ತಾವು
ಮಾಡಿದ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಸುದ್ದಿ ವಿಶ್ಲೇಷಣೆ ನಿಷ್ಪಕ್ಷವಾಗಿರಲಿ.
ಶುಭವಾಗಲಿ ಎಂದು ಹಾರೈಸುತ್ತೇನೆ.
- ಕೇಶವ ಉಮರ್ಜಿ
ಜಮಖಂಡಿ
*
ಸತ್ಯಮೂರ್ತಿ ಆನಂದೂರು ಅವರಿಗೆ,
ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ೨-೩ ಸಂಚಿಕೆಗಳು ತಲುಪಿವೆ. ಓದಿದೆ.
ಕೃತಜ್ಞನಾಗಿದ್ದೇನೆ.
ಪತ್ರಿಕೆ ಪ್ರಾರಂಭವಾಗುವ ಮುನ್ನ ನೀವು ಅಭಿಪ್ರಾಯ ಕೇಳಿ ಬರೆದಿದ್ದಕ್ಕೆ ನಾನು
ಉತ್ತರಿಸಿದ್ದೆ. ಆ ಪತ್ರ ನಿಮಗೆ ಮುಟ್ಟಿದೆಯೋ ಇಲ್ಲವೋ ಗೊತ್ತಾಗಲಿಲ್ಲ.
ಪತ್ರಿಕೆಯಲ್ಲಿ ವಿವಿಧತೆ ಇದೆ. ಎಲ್ಲರಿಗೂ ಆಕರ್ಷಕ ಆಗುವ ಹಾಗೆ ಬೇರೆ ಬೇರೆ
ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಬರೆದ ಪುಟ್ಟಪುಟ್ಟ ಲೇಖನಗಳು ಚುರುಕಾಗಿ
ಹೊಸತನವನ್ನು ತೋರುತ್ತಿವೆ. ಆದುದರಿಂದಲೇ ಯಥಾ ಪ್ರಕಾರ ಪತ್ರಿಕೆಗಳ ಬದಲಾಗಿ ಇದು
ಬೇರೆ ತರಹ ಇದೆ ಎಂದು ಖಂಡಿತ ಹೇಳಬಹುದಾಗಿದೆ. ಸಂಪಾದಕೀಯಗಳು, ಅತಿಥಿ ಅಂಕಣಗಳು
ಪ್ರಸ್ತುತವಾಗಿದ್ದು ರಾಜಕೀಯ ಸಾಮಾಜಿಕ ಜೀವನಕ್ಕೆ ಸ್ಪಂದಿಸುತ್ತ ಕೃತಕೃತ್ಯವಾಗಿವೆ.
ಸಾಹಿತ್ಯಕ್ಕೆ ಸಂಬಂಧಿಸಿದ ಹಾಗೆ ಎರಡು ಮಾತು; ಅನೇಕ ಪುಸ್ತಕ
ಬಿಡುಗಡೆ-ಪ್ರಶಸ್ತಿ ಸಮಾರಂಭಗಳು ಇಂದಿನ ಕಾಲದಲ್ಲಿ ನಡೆಯುತ್ತಿವೆ. ಅಲ್ಲಿಗೆ ನಿಮ್ಮ
ಪ್ರತಿನಿಧಿಗಳನ್ನು ಕಳಿಸಿ, ಸಮಾರಂಭದ ವರದಿಯ ಜತೆಗೆ ಪುಸ್ತಕದ ಪರಿಚಯವನ್ನು
ಮಾಡಿಸಿ ಒಂದು ಬಗೆಯ featureನ್ನು
ಬರೆಸಬಹುದು. ಹಿರಿಯ ತಲೆಮಾರಿನ ಕವಿ/ಕತೆಗಾರರ ಕೃತಿಯನ್ನು ಇವತ್ತಿನ ತಲೆಮಾರಿಗೆ
ಉದಾಹರಣೆಯ ಮೂಲಕ ಪರಿಚಯಿಸಬಹುದು. ಕನ್ನಡ ಸಾಹಿತಿಯಾಗಿ ಈ ಮಾತನ್ನು ಹೇಳಿದೆ.
ಯಾರನ್ನೇ ಆಗಲಿ, ತುಂಬ ಪ್ರಶಂಸಿಸಲೂ ಬೇಡಿ, ತುಂಬ ನಿಂದಿಸಲೂ ಬೇಡಿ ಹಾಗೆ
ಮಾಡಿದಾಗ ಪತ್ರಿಕೆ ಪೀತ ಪತ್ರಿಕೆ ಆಗುತ್ತದೆ. ಅಂಥ ಸಂದರ್ಭಗಳನ್ನು ನಾವು
ನೋಡಿದ್ದೇವೆ. ಮುಂದುವರಿಯಿರಿ, ಅಭಿನಂದನೆಗಳು.
- ದೇಶಕುಲಕರ್ಣಿ
ಬೆಂಗಳೂರು.
*
ಸಾಹಿತಿಗಳ ಮಕ್ಕಳಿಗೆ ಮಾತ್ರ ಇಂಗ್ಲಿಷ್ ಕುಲಾವಿ ಬೇಕೆ?
`ಇದು ಸಾಹಿತಿಗಳ ಒಣಪ್ರತಿಷ್ಠೆ' ಅದರಲ್ಲೂ ಬೆಂಗಳೂರಿನ ಸಾಹಿತಿಗಳು ಇಂಥ
ಯಾವುದಾದರೊಂದು ಸಂಗತಿಯನ್ನು ಹಿಡಿದು ಅದೊಂದು ಭಯಂಕರ ಸಮಸ್ಯೆ ಎಂಬಂತೆ
ಹೋರಾಟ ನಡೆಸುವ ಮಾತಾಡುತ್ತಾರೆ. ಈಗ ಕನ್ನಡ ಭಾಷೆ ಬೆಂಗಳೂರಿನಲ್ಲಂತೂ ಉಳಿದಿಲ್ಲ.
ಅದು ಉಳಿದಿರುವುದು ಹಳ್ಳಿಗಾಡಿನ ಮಕ್ಕಳಲ್ಲಿ, ಆದರೆ ಅವರು ಯಾವ ರೀತಿಯಲ್ಲೂ
ಬೆಂಗಳೂರಿನ ಮಕ್ಕಳೊಡನೆ ಸ್ಪರ್ಧಿಸಲು ಸಾಧ್ಯವಿಲ್ಲ. ಈಗ ಇಂಗ್ಲಿಷ್ ವಿಚಾರವೂ ಹಾಗೇ.
ಕಡೆಯಪಕ್ಷ ಹಳ್ಳಿಯ ಮಕ್ಕಳೂ ಇಂಗ್ಲಿಷ್ ಭಾಷೆ ಕಲಿತರೆ ತಪ್ಪೇನು? . . .
ಈ-ಜನ
ಜಿ.ಆರ್. ಷಣ್ಮುಗಪ್ಪ
ನಾನು ೨೦೦೫ರ ಆಗಸ್ಟ್ ೨೦ರಂದು ಜಿ.ಆರ್. ಷಣ್ಮುಗಪ್ಪ ಅವರನ್ನು ಭೇಟಿಯದೆ, ಅವರು
ಕರ್ನಾಟಕದ ಲಾರಿ ಮಾಲೀಕರ ಒಕ್ಕೂಟದ ಅಧ್ಯಕ್ಷರು ಹಾಗೂ ಅಖಿಲ ಭಾರತ ಮೋಟಾರ್
ಕಾಂಗ್ರೆಸ್‌ನ ಉಪಾಧ್ಯಕ್ಷರು. ಈತ ಹೇಗೆ ಈ ಮಟ್ಟಿಗೆ ಬೆಳೆದರೆಂಬುದನ್ನು ನಾನು
ವಿವರಿಸುತ್ತೇನೆ. ೧೯೭೧ರಲ್ಲಿ ಎಸ್.ಎಸ್.ಎಲ್.ಸಿ. . .
ಪ್ರೊ. ಮಹಮ್ಮದ್ ಯೂನಸ್
ಅರ್ಥಶಾಸ್ತ್ರದಲ್ಲಿ ಉನ್ನತ ಶಿಕ್ಷಣ ಪಡೆದವರು ತಮ್ಮ ಪ್ರತಿಭೆಯನ್ನು ರಾಷ್ಟ್ರ, ಅಂತರ
ರಾಷ್ಟ್ರೀಯ ಮಟ್ಟದ ನಿಯತಕಾಲಿಕಗಳಲ್ಲಿ ತಮ್ಮ ಪ್ರೌಢ ಪ್ರಬಂಧವನ್ನು
ಪ್ರಕಟಿಸುತ್ತಲೋ, ಇಲ್ಲ ಸಭೆ ಸೆಮಿನಾರುಗಳಲ್ಲಿ ಭಾಷಣ ಮಾಡುತ್ತಲೋ ಮೆಚ್ಚುಗೆ,
ಪ್ರಶಸ್ತಿಗಳನ್ನು ಗಳಿಸುತ್ತಿರುತ್ತಾರೆ. . .
ಮೈಸೂರಲ್ಲೀಗ ಸರ್ವ ಪಕ್ಷಗಳ ದಸರಾ ಮೆರವಣಿಗೆ
ದಸರಾ ಹಬ್ಚದಲ್ಲಿ ಆನೆಗಳ ಸವಾರಿಯಿಂದ ಹಾರಿದ್ದ ಧೂಳು ಇನ್ನೂ ನೆಲ ಸೇರುವ ಮುನ್ನವೇ
ಮೈಸೂರಿಗೆ ಹೊಂದಿಕೊಂಡಂತಿರುವ ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಾದ್ಯಂತ ರಾಜ್ಯದ
`ಘಟಾನುಘಟಿ' ನಾಯಕರೆಲ್ಲರೂ ಉಪಚುನಾವಣೆಯನ್ನೆದುರಿಸಲು ಭರದಿಂದ ಸಿದ್ಧತೆ . . .
ಕೋರೆಗೆ ಗುಂಡೇಟು : ಹಿನ್ನೆಲೆಯೇನು ?
ಅಧಿಕಾರದ ದಾಹ ಹಾಗೂ ಮತ್ಸರ ಹೆಚ್ಚಿದಂತೆ ಹತ್ಯೆ ಮಾಡಲು ಹೇಸಲ್ಲ ಎನ್ನುವುದಕ್ಕೆ
ಕೆಲವು ತಿಂಗಳ ಹಿಂದೆಯೇ ಭಾರತೀಯ ಜನತಾ ಪಕ್ಷದ ಅಗ್ರ ನಾಯಕರಲ್ಲೊಬ್ಬರಾಗಿದ್ದ
ಪ್ರಮೋದ್ ಮಹಾಜನ್ ಅವರ ಹತ್ಯೆಗೂ ಹಾಗೂ ಈ ಬಾರಿ ದೀಪಾವಳಿ ಹಬ್ಬಕ್ಕೆ ಒಂದೆರಡು ದಿನಗಳ
ಮುಂಚೆ ನಡೆದ ಬೆಳಗಾವಿ ಜಿಲ್ಲೆಯ . . .
ಕನ್ನಡ ಹೆಸರಲ್ಲಿ ಭಾಷೆ ಕಲಿಕೆಗೆ ಅಡ್ಡಗಾಲು
ಸಿರಿವಂತರ ಮಕ್ಕಳಿಗೆ ಇಂಗ್ಲೀಷ್ ಕುಲಾವಿ ಬಡವರ ಮಕ್ಕಳಿಗೆ ಹಾಳುಬಾವಿ? ಕನ್ನಡದ ಜತೆ
ಇಂಗ್ಲಿಷನ್ನು ಭಾಷೆಯಾಗಿ ಕಲಿಯುವುದರ ಬಗ್ಗೆ ಚಂದ್ರಶೇಖರ ಪಾಟೀಲ ಮತ್ತಿತರ
ಸಾಹಿತಿಗಳು ಒಕ್ಕೊರಲಿನಿಂದ ಪ್ರತಿಭಟಿಸಿರುವುದು ಹಲವು ವಿರೋಧಾಭಾಸಗಳಿಗೆ. . .
`ಪ್ರಾಥಮಿಕ ಹಂತದಲ್ಲಿ ಇಂಗ್ಲಿಷ್ ಬೇಡ'- ಚಂಪಾ
ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಒಂದನೇ ತರಗತಿಯಿಂದ ಇಂಗ್ಲಿಷ್ ಜಾರಿ ಮಾಡಿರುವ
ಸರ್ಕಾರದ ಕ್ರಮ ಏಕಾಏಕಿ ಹಾಗೂ ತರಾತುರಿಯ ನಿರ್ಧಾರವೆಂದು ತೀವ್ರವಾಗಿ ವಿರೋಧಿಸಿರುವ
ಕನ್ನಡ ಸಾಹಿತ್ಯ ಪರಿಷತ್ತಿನ . . .
ಜನರ ಹಾದಿ ತಪ್ಪಿಸುವ ತಂತ್ರ - ಬರಗೂರು ರಾಮಚಂದ್ರಪ್ಪ
ಮತ್ತೊಂದು ಭಾಷೆಯಲ್ಲಿ ಕಲಿಸುವ ವಿಚಾರ ದಲ್ಲಿ ಯಾವ ತೊಡಕೂ ಇಲ್ಲ,
ಸಂವಿಧಾನದಲ್ಲಿಯಾಗಲಿ, ಕಾನೂನು ಪ್ರಕಾರವಾಗಲಿ ಇದು ತಪ್ಪು ಅಲ್ಲವೇ ಅಲ್ಲ. ಹಾಗಾಗಿ
ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸುವ ಸರ್ಕಾರದ ಕ್ರಮ ಸ್ವಾಗತಾರ್ಹವಾದುದು. . .
ಸಾಹಿತಿಗಳ ಗಂಟೇನು ಹೋಗುತ್ತೆ? - ಪೂರ್ಣಚಂದ್ರ ತೇಜಸ್ವಿ
ಸರ್ಕಾರದ ತೀರ್ಮಾನ ಸರಿಯಾಗೇ ಇದೆ. ನಾನಂತೂ ಅದನ್ನು ಮನಪೂರ್ವಕವಾಗಿ
ಸ್ವಾಗತಿಸುತ್ತೇನೆ. ಇದು ಯಾವತ್ತೋ ಆಗಬೇಕಿತ್ತು. ಇನ್ಫೋಸಿಸ್
ನಾರಾಯಣಮೂರ್ತಿಯವರ ವಿಚಾರಕ್ಕೂ ನಾನು ಇಂಗ್ಲಿಷ್ ಕಲಿಕೆಯನ್ನು ಬೆಂಬಲಿಸುವುದಕ್ಕೂ
ಸಂಬಂಧವೇ ಇಲ್ಲ. ಹಾಗೆ ಯಾರಾದರೂ ಅವೆರಡನ್ನೂ ಒಂದೇ ಅಂತ ಭಾವಿಸಿದರೆ ನಾನೇನೂ
ಮಾಡುವ ಹಾಗಿಲ್ಲ. . .
`ಪ್ಲೀಸ್ ನನ್ನನ್ನೇನೂ ಕೇಳಬೇಡಿ' - ಡಾ.ಕೆ.ಎಸ್. ನಿಸಾರ್ ಅಹಮದ್
`ಪ್ಲೀಸ್ ಈ ಬಗ್ಗೆ ನನ್ನಲ್ಲಿ ಏನನ್ನೂ ಕೇಳ ಬೇಡಿ. ನಾನು ಏನು ಹೇಳಲೂ ಇಷ್ಟಪಡುವುದಿಲ್ಲ'
ಎನ್ನುತ್ತಾ ಫೋನ್ ಇಟ್ಟುಬಿಟ್ಟರು. ೭೩ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ
ಆಯ್ಕೆಯಾಗಿರುವ ಡಾ.ಕೆ.ಎಸ್. ನಿಸಾರ್ ಅಹಮದ್ ಅವರು. ಈ ಮೌನಕ್ಕೇನು ಕಾರಣ.
ಕನ್ನಡದ ಅತ್ಯುನ್ನತ ಗೌರವ ಸಂದಿರುವ ನಿಸಾರ್ ಅವರೇ ಕನ್ನಡದ ಬಗ್ಗೆ ಹೀಗೆ ಹೇಳಿ
ಹೊಣೆಗಾರಿಕೆಯಿಂದ ನುಸುಳಿಕೊಂಡದ್ದು ಏಕೆ? . .
ಮಾತೃಭಾಷಾ ಶಿಕ್ಷಣವೇ ಅತ್ಯುತ್ತಮ - ಡಾ.ಜಿ.ಎಸ್.ಶಿವರುದ್ರಪ್ಪ
ಇಂಗ್ಲಿಷ್ ಬೇಡ ಎನ್ನುವವರ್‍ಯಾರು ಇಂಗ್ಲಿಷ್ ವಿರೋಧಿಗಳಲ್ಲ. ಇಂಗ್ಲಿಷ್ ಕಲಿಸಬೇಕು
ಎನ್ನುವುದು ಹೊಸ ಪ್ರಸ್ತಾಪವೂ ಅಲ್ಲ. ಈಗಾಗಲೇ ೫ನೇ ತರಗತಿಯಿಂದ ಇಂಗ್ಲಿಷ್
ಜಾರಿಯಲ್ಲಿದೆ. ಮಾತೃಭಾಷಾ ಶಿಕ್ಷಣ ಕ್ರಮವೇ ಅತ್ಯುತ್ತಮ. ಮಗುವಿನ ಹಿತದೃಷ್ಟಿಯಿಂದ
ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಕಲಿಸುವುದು ಒಳಿತಲ್ಲ. . .
ಕನ್ನಡ ಉಳಿಸಿ, ಇಂಗ್ಲಿಷ್ ಕಲಿಸಿ - ಡಾ. ಹಂಪ ನಾಗರಾಜಯ್ಯ
ಭಾಷೆಯನ್ನು ನಾವು ಕೇವಲ ಭಾವ ನಾತ್ಮಕವಾಗಿ ನೋ ಡ ದೆ ಬದುಕನ್ನಾಗಿಸಿ ಕೊಳ್ಳುವ
ನಿಟ್ಟಿನಲ್ಲಿ ಆಲೋಚಿಸಬೇಕು. ಆಗ ನಮಗೆ ಇಂಗ್ಲಿಷನ್ನು ಒಂದನೇ ತರಗತಿಯಿಂದ ಕಲಿಸುವುದು
ಸೂಕ್ತ ಎಂಬ ಮನವರಿಕೆ ಆಗುತ್ತದೆ. ವಾಸ್ತವಿಕ ಪ್ರಜ್ಞೆಯ ಅರಿವು ನಮಗಿರಬೇಕಷ್ಟೇ. .
.
ಕೋರ್ಟಿನ ಮೊಕದ್ದಮೆಗೂ ಸರ್ಕಾರದ ನಿರ್ಧಾರಕ್ಕೂ ಸಂಬಂಧವೇ ಇಲ್ಲ - ಡಾ. ಕಮಲಾ
ಹಂಪನಾ
ಇಂಗ್ಲಿಷ್ ಬೇಡ ಎನ್ನುವ ಮಂದಿ, ಕೋರ್ಟಿನಲ್ಲಿ ಮೊಕದ್ದಮೆ ಇದೆ. ಇದರ ಅಂತಿಮ ತೀರ್ಪು
ಬರುವತನಕ ಸರ್ಕಾರ ಕಾಯಬೇಕು. ಅಲ್ಲಿಯವರೆಗಾದರೂ ಸರ್ಕಾರದ ನಿರ್ಧಾರವನ್ನು
ತಡೆಹಿಡಿಯಬೇಕು ಎಂಬ ವಾದದಲ್ಲಿ ಯಾವುದೇ ಹುರುಳಿಲ್ಲ.
ಇವರೆಲ್ಲ ಮಿಸ್‌ಗೈಡ್ ಮಾಡುತ್ತಿದ್ದಾರೆ. . . .
ಚಿಂತಾಮಣಿ - ಪಂದ್ಯದಲ್ಲಿ ಗೆದ್ದದ್ದು ಭಿಕ್ಷೆ ಹೇಗಾಯಿತು?
ನೀವು ವಿಚಾರವಾದಿಯೋ ಅಥವಾ ಧರ್ಮಸಿಂಗ್ ಪ್ರಣೀತ ಆಷಾಢಭೂತಿಯೋ ಎಂಬುದು ನಮಗೆ
ಬೇಕಿಲ್ಲದ ವಿಷಯ. ಏಕೆಂದರೆ ನಾವಿಲ್ಲಿ ಪ್ರಸ್ತಾಪಿಸಲಿರುವುದು ಕೇವಲ ಕೆಲವು ಲಾಜಿಕಲ್
ಪ್ರಶ್ನೆಗಳನ್ನ ಮಾತ್ರ. ಸಿನಿಮಾದಲ್ಲೇ ಆಗಲೀ ಸಾಹಿತ್ಯದಲ್ಲೇ ಆಗಲೀ ಮುಖ್ಯವಿಷಯಗಳು
ಪುನರುಕ್ತಿಯೆನಿಸದ ರೀತಿಯಲ್ಲಿ ಪುನರುಕ್ತಿಯಾಗಬೇಕು, ಏಕೆಂದರೆ. . . .
ಸೋಜಿಗದ ಜಗ
ಬೆತ್ತಲೆಗೊಂಡ ಪ್ರೊಫೆಸರ್
ಕಲೆ ಅಂದ್ರೆ ಈ ಪ್ರೋಫೆಸರ್‌ನದು! ಕಲಾ ವಿಷಯದ ಪಾಠ ಮಾಡುತ್ತಾ ಚೈನಾದ
ಪ್ರೊಫೆಸರ್ ಭೂಪ ವಿದ್ಯಾರ್ಥಿಗಳೆದುರೇ ಬಟ್ಟೆ ಕಳಚಿ ಮಕ್ಕಳನ್ನು ದಿಗ್ಭ್ರಮೆಗೊಳಿಸಿಬಿಟ್ಟ!
೫೬ರ ಹರೆಯದ ಪ್ರೊಫೆಸರ್, ದೇಹಕ್ಕಿರುವ `ಸಾಮರ್ಥ್ಯ'ದ ಬಗ್ಗೆ ಬೋಧಿಸುತ್ತಾ
ಬೆತ್ತಲೆಗೊಂಡ. . . . .
೧೪ ರ ಬಾಲಕ ೧೨ ಮದುವೆಯಾದ!
ಜಗತ್ತಿನ `ಕಿಟಕಿ' ಇಂಟರ್‌ನೆಟ್ ಇನ್ನೇನೇನು ಅನಾಹುತ ತರಲಿದೆಯೋ?
ಚೈನಾದ ೧೪ರ ಬಾಲಕ ಇಂಟರ್‌ನೆಟ್ ಮೂಲಕ ೧೨ ನೇ ಮದುವೆಯಾಗಿ ಪೋಷಕರನ್ನು
ದಿಗ್ಭ್ರಮೆಗೊಳಿಸಿದ್ದಾನೆ! ಇಂಟರ್‌ನೆಟ್ ಸರ್ಫ್ ಮಾಡುವುದು ಈ ಬಾಲಕನಿಗೊಂದು ಹುಚ್ಚು.
ದಿನವೊಂದಕ್ಕೆ ಏನಿಲ್ಲವೆಂದರೂ ಹತ್ತು ಹನ್ನೆರಡು ಗಂಟೆಗಳ ಕಾಲ. . .
ಆರೋಗ್ಯದ ಗುಟ್ಟು
ಲಕ್ನೋ ನಿವಾಸಿ ೮೦ರ ಹರೆಯದ ರಾಮ್‌ರತಿ ಎಂಬಾಕೆ ಕುತೂಹಲಕಾರಿ ಅಂಶವೊಂದನ್ನು
ಹೊರಗೆಡವಿದ್ದಾರೆ. ಏನಪ್ಪಾ ಅದು? ಏನೆಂದರೆ, ತನ್ನ ಆರೋಗ್ಯದ ಗುಟ್ಟು ಮರಳು ಎಂದು
ಹೇಳುವ ಮೂಲಕ ವೈದ್ಯರೇ ಹುಬ್ಬೇರಿಸುವಂತೆ ಮಾಡಿದ್ದಾರೆ. . . .
ಆರೋಗ್ಯ - ಹೊನಗೊನ್ನೆ ಸೊಪ್ಪು
ಹೊನಗೊನ್ನೆ-ಹೊನ್ನಿನಂತೆ ಔಷಧೀಯ ಗುಣವಿರುವ ಸೊಪ್ಪು, ಸಾಮಾನ್ಯವಾಗಿ ಎಲ್ಲಾ ತರಹದ
ಮಣ್ಣಿನಲ್ಲಿ ಹರಡಿಕೊಂಡು ಬೆಳೆಯುತ್ತದೆ. ಮಾರುಕಟ್ಟೆಯಲ್ಲಿ ಸಿಕ್ಕುವುದು
ಅಪರೂಪವಾದರೂ, ಗ್ರಾಮಾಂತರ ಪ್ರದೇಶಗಳಲ್ಲಿ ಹೇರಳವಾಗಿ ಹೊಲಗದ್ದೆಯಲ್ಲಿ
ಬೆಳೆಯುತ್ತದೆ. ಕೆಂಪು ಹೊನಗೊನ್ನೆಯನ್ನು ಪಾರ್ಕು, ಮನೆ ಅಂಗಳದಲ್ಲಿ ಅಲಂಕಾರಕ್ಕಾಗಿ
ಬೆಳೆಯುತ್ತಾರೆ. . . .
ಕಡಲು ನೆಲ ಮಳೆ ಮತ್ತು ಗಾಳಿ - ಚೀಮನಹಳ್ಳಿ ರಮೇಶ್‌ಬಾಬುರವರ ಕವನ
ಸದಾ ಚಿಗುರ ಬಯಸುವ ನೆಲಕ್ಕೆ
ಒಡಲ ಫಲವತ್ತತೆಯ ಕಾಪಾಡಿಕೊಳ್ಳುವ ಅನಿವಾರ್ಯತೆ;
ನಿರಂತರ ಮೊರೆವ ಕ್ಷಾರ ಕಡಲ
ಹೊರದೂಡುವ ಪ್ರಯತ್ನ
ಆದರೂ ಬಿಡಿಸಲಾಗದ ನಂಟು
ತನ್ನ ಅಸ್ತಿತ್ವ ಕಡಲೊಳಗೂ ಉಂಟು. . . .
ದೇಶಾವರಿ
ಮುಖೇಶ್ ಭಾರತದ ಕುಬೇರ ನಂ. ೧
ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿಗೆ
ಈಗ ಭಾರತದ ನಂ.೧ ಶ್ರೀಮಂತ ಪಟ್ಟ. ಈ ಹಿಂದೆ ವಿಪ್ರೋ ಸಂಸ್ಥೆಯ ಅಜೀಂ ಪ್ರೇಂಜೀಗೆ ಈ
ಕುಬೇರ ಪಟ್ಟ ಇತ್ತು. ಪ್ರೇಮ್‌ಜೀಯನ್ನು ಸೈಡು ಹೊಡೆದಿರುವ ಮುಖೇಶ್, ತಮ್ಮ
ಒಟ್ಟಾರೆ ಗಳಿಕೆಯನ್ನು ಎಪ್ಪತ್ತು ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಿಕೊಂಡಿದ್ದಾರೆ. . .
ಜೈಲ್ ಇಂಟರ್‌ವ್ಯೂ!
ಕಾಲೇಜು-ಯೂನಿವರ್ಸಿಟಿಗಳ ಕ್ಯಾಂಪಸ್‌ಗಳಿಗೆ ತೆರಳಿ, ಕೆಲಸಕ್ಕೆ ಅಭ್ಯರ್ಥಿಗಳನ್ನು
ನೇಮಿಸಿಕೊಳ್ಳುವ ಪರಿಪಾಠ ಹಿಂದಿನಿಂದಲೂ ಇದೆ. ಫಾರ್ ಎ ಚೇಂಜ್, ಹೈದರಾಬಾದ್ ಮೂಲದ ಸಾರಿಗೆ
ಕಂಪೆನಿಯೊಂದು, ತಿಹಾರ್ ಜೈಲ್‌ಗೆ ತೆರಳಿ ಕ್ಯಾಂಪಸ್ ಇಂಟರ್‌ವ್ಯೂ ಮಾಡಿದೆ! ಅಷ್ಟೇ ಅಲ್ಲ
ಈತನಕ ಇಬ್ಬರು ಕೈದಿಗಳು `ಸೆಲೆಕ್ಟ್' ಆಗಿದ್ದಾರೆ ಕೂಡ. ದೇಶದ ಅತಿದೊಡ್ಡ ಜೈಲೆಂಬ
ಹೆಗ್ಗಳಿಕೆಯಿರುವ . . .
೨೦೧೨ಕ್ಕೆ ವೈರ್‌ಲೆಸ್ ವಿದ್ಯುತ್
ಎಲ್ಲ ಕ್ಷೇತ್ರದಲ್ಲೂ ವೈರ್‌ಲೆಸ್ ತಂತ್ರಜ್ಞಾನ ಕಾಲಿಟ್ಟಿದ್ದು, ಈಗ ವಿದ್ಯುತ್ ಕ್ಷೇತ್ರದ ಸರದಿ.
೨೦೧೨ರಲ್ಲಿ ಭಾರತಕ್ಕೆ ಆಕಾಶದಿಂದ ವಿದ್ಯುತ್ ಸರಬರಾಜಾಗುತ್ತದೆ; ವೈರ್ ಇಲ್ಲದೆಯೇ! ಈಗ
ನಾಲ್ಕಾರು ಮೂಲದಿಂದ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಜಲವಿದ್ಯುತ್, ಉಷ್ಣವಿದ್ಯುತ್, ಅಣುವಿದ್ಯುತ್
ಹೀಗೆ. ಇನ್ನುಮುಂದೆ ಸೂರ್ಯನ ಕಿರಣಗಳಿಂದ ವಿದ್ಯುತ್ ಉತ್ಪಾದಿಸುವ ಪ್ರಕ್ರಿಯೆ ನಡೆದಿದೆ. .
. .
ಬಹುಮುಖ ಪ್ರತಿಭಾವಂತ-ಪರಿಚಯ
ಕೋಲಾರ ಜಿಲ್ಲೆಯ ಅಷ್ಟಗ್ರಾಮದವರಾದ ವೈ.ಎಸ್. ಕೃಷ್ಣಮೂರ್ತಿರವರು ವೃತ್ತಿಯಲ್ಲಿ
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಗುಮಾಸ್ತರಾಗಿದ್ದು ಪ್ರವೃತ್ತಿಯಲ್ಲಿ ಕವಿ, ಗಾಯಕ
ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕ. ರಂಗ ಕಲಾವಿದರಾಗಿ ಕನ್ನಡ
ಸಾರಸ್ವತ ಲೋಕದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡು ಸದಾ ಚಟುವಟಿಕೆಯಿಂದ
ಇರುವ ಅಪರೂಪದ ವ್ಯಕ್ತಿ. . . .
ಓದಿಗೊಂದು ಪುಸ್ತಕ - `ಸಾರಿ ಐ ಅಮ್ ಎ ಬಾರ್ನ್ ಫೂಲ್'
ಇಲ್ಲಿ ಅಕ್ಷರಗಳು ಅಕ್ಷರಶಃ ಮೌನ! ಮಾರುದ್ದ ಟಿಪ್ಪಣಿಗಿಂತ ಇಲ್ಲಿ ಮಾಗಿದ ರೇಖೆಗೆ ಬೆಲೆ
ಜಾಸ್ತಿ. ಪ್ರಶಾಂತ ಬಿಳಿ ಹಾಳೆಯ ಮಧ್ಯೆ ದಟ್ಟನೆ ಹರಡಿಕೊಂಡಿರುವ ರೇಖೆಗಳನ್ನು
ನೋಡುತ್ತಿದ್ದಂತೆಯೇ ಅವು ಆಪ್ತವೆನಿಸಿ ಬಿಡುತ್ತವೆ. . . . .
ಮಾನವೀಯತೆ - ಟಿ ಆರೂರು ಲಕ್ಷ್ಮಣ್‌ಶೇಟ್‌ರವರ ಕತೆ
ಏಳೆಂಟು ಕಾರುಗಳು ಧೂಳೆಬ್ಬಿಸುತ್ತಾ ಸಭಾಂಗಣದತ್ತ ಧಾವಿಸಿ ಬಂದು ಗಕ್ಕನೆ ನಿಂತವು.
ಜನಸಂದಣಿ ದಟ್ಟೈಸುತ್ತಿದ್ದಂತೆ ಪೊಲೀಸರು ಚುರುಕಾದರು. ನುಗ್ಗಾಟ, ತಳ್ಳಾಟ ಹೆಚ್ಚಿದಾಗ
ಸಮವಸ್ತ್ರಧಾರಿಗಳು ಲಾಠಿ ಬೀಸತೊಡಗಿದರು. ಆದರೂ ಅಭಿಮಾನಿಗಳು ಜಪ್ಪೆನ್ನಲಿಲ್ಲ.
ಸಮೀಪ ದರ್ಶನದ ಪೈಪೋಟಿ ನಿಲ್ಲಲಿಲ್ಲ. . . . .
ನೆನಪು `ಸ್ವಾಮಿಯೊಂದಿಗೆ ಮಾತು'
ಭಾರತೀಯ ಇಂಗ್ಲಿಷ್ ಬರಹಗಾರರಲ್ಲಿ ಅತಿ ಪ್ರಮುಖರು ಆರ್.ಕೆ. ನಾರಾಯಣ್. ಅವರ
ಮಾಲ್ಗುಡಿ ಭಾರತದ ಯಾವುದೇ ಹಳ್ಳಿಯಾಗಬಹುದು; ಅವರ ಪಾತ್ರಗಳೂ ಅಷ್ಟೇ.
ನಾವು-ನೀವು ಅಥವಾ ನಮ್ಮ-ನಿಮ್ಮ ನಡುವೆ ಇರುವ ಇನ್ನೊಬ್ಬ. ಹಾಗೆಯೇ `ಸ್ವಾಮಿಕೂಡ:
ದೂರದರ್ಶನದಲ್ಲಿ `ಮಾಲ್ಗುಡಿ ಮತ್ತು `ಸ್ವಾಮಿ' ಹುಟ್ಟಿಸಿದ ರೋಮಾಂಚನಕ್ಕೆ,
ಶಂಕರ್‌ನಾಗ್, ಮಾಸ್ಟರ್ ಮಂಜುನಾಥ್‌ರ ಪ್ರತಿಭಾವಂತಿಕೆಗೆ ಹಿನ್ನೆಲೆಯಾಗಿ ನಿಂತಿದ್ದು
ಆರ್‌ಕೆಯವರ ನವಿರಾದ ಕತೆಗಳು. ನಾರಾಯಣ್ ಅವರ ಜನ್ಮ ಶತಾಬ್ಧಿಯ ವರ್ಷದಲ್ಲಿ
ಒಂದು ನೆನಪು. . .
ಧಾರಾವಾಹಿ - ಜಾಣೆಯಾಗಿರು ನನ್ನ ಮಲ್ಲಿಗೆ - ಅಧ್ಯಾಯ-೩
ಆದಿತ್ಯನ ಮುಖ ಗಂಭೀರವಾಯಿತು. ಎಚ್ಚರಿಕೆ ಕೊಡುವಂತೆ ಹೇಳಿದ, `ನೀವು ಈ ಊರಿಗೆ
ಹೊಸಬರು. ಆದ್ರಿಂದ ಧೈರ್ಯವಾಗಿ ಗ್ರೀನ್‌ಲ್ಯಾಂಡ್ ಲಾಡ್ಜ್‌ನಲ್ಲಿ ಇಳಿದುಕೊಂಡಿದ್ದೀರಾ.' ನಿಜ
ಏನೂಂದ್ರೆ, ಇತ್ತೀಚೆಗೆ ಆ ಲಾಡ್ಜ್ ನ ರೂಮಿನಲ್ಲಿ ಒಂದು ಕೊಲೆಯಾಗಿತ್ತು. ಆಮೇಲೆ ಅಲ್ಲಿ ಉಳಿದು
ಕೊಳ್ಳುವುದಕ್ಕೆ ಯಾರೂ ಮುಂದೆ ಬರುತ್ತಿಲ್ಲ. ಜನ ಏನೇನೋ ಮಾತಾಡ್ಕೊಳ್ತೀದ್ದಾರೆ,
ಭಯ ಪಡ್ತೀದಾರೆ. ನೀವು ಅಲ್ಲಿ ರಾತ್ರಿ ಕಳೆಯುವುದು ಸರಿ ಅಲ್ಲ ಅನ್ಸುತ್ತೆ. ಹೌದು
ಕಣಮ್ಮಾ ನಿಜವೇ ಶೇಷಮ್ಮ ಸಾಕ್ಷಿ ಹೇಳುವಂತೆ ತಲೆಯಾಡಿಸಿದರು. . .
ವೈವಿಧ್ಯಮಯ ಸೂಪುಗಳು
ಮೊಳಕೆ ಬರಿಸಿದ ಹೆಸರುಕಾಳಿನ ಸೂಪ್
ಒಂದು ಕಪ್ ಮೊಳಕೆ ಬರಿಸಿದ ಹೆಸರು ಕಾಳುಗಳನ್ನು ಚೆನ್ನಾಗಿ ತೊಳೆದು, ಹದವಾಗಿ
ಮೃದುವಾಗುವವರೆಗೆ ಬೇಯಿಸಿ. ನಂತರ ತರಿತರಿಯಾಗಿ ಕಿವುಚಬೇಕು. ಒಂದು
ದಪ್ಪತಳದ ಪಾತ್ರೆಯಲ್ಲಿ ೩ ಚಮಚ ಬೆಣ್ಣೆ ತೆಗೆದುಕೊಂಡು ಬಿಸಿಮಾಡಿ ಅದರಲ್ಲಿ ಹೆಸರು
ಕಾಳಿನ ಪೇಸ್ಟನ್ನು ಸೇರಿಸಿ ಸ್ವಲ್ಪ ಹೊತ್ತು ಹುರಿಯಬೇಕು. ನಂತರ ೩ ಕಪ್ ನೀರು ಸೇರಿಸಿ
ಚೆನ್ನಾಗಿ ಕುದಿಸಬೇಕು. ಕೊನೆಯಲ್ಲಿ ಉಪ್ಪು, ಸಕ್ಕರೆ, ಮೆಣಸಿನ ಕಾಳಿನ ಪುಡಿಯನ್ನು
ಸೇರಿಸಬೇಕು. . . .
ಒಳಮನಸ್ಸು - ಸ್ಟಾಕರ್‌ಗಳಿದ್ದಾರೆ ಎಚ್ಚರ!
ಆಕೆ ಮನೆಯಿಂದ ಹೊರಬಿದ್ದರೆ ಸಾಕು; ಎರಡು ಕಣ್ಣುಗಳು ಅವಳನ್ನು ಹಿಂಬಾಲಿಸುತ್ತಿದ್ದವು.
ಮನೆಯಿಂದ ಕಾಲೇಜಿನ ತನಕ; ಕಾಲೇಜಿನಿಂದ ಮನೆಯತನಕ! ಹಿಂಬಾಲಿಸುವ ಹುಡುಗ
ಅವಳಿಗೆ ಅಪರಿಚಿತನೇನಲ್ಲ. ಅವಳ ಕಾಲನಿಯಲ್ಲೇ ವಾಸಿಸುತ್ತಿದ್ದಾನೆ. ನೋಡಿ ಪರಿಚಯವಿರುವ
ಹುಡುಗ. ವಯಸ್ಸಿನಲ್ಲಿ ಅವಳಿಗಿಂತ ನಾಲ್ಕಾರು ವರ್ಷ ದೊಡ್ಡವನು. . .
ಬಾಂಧವ್ಯ ಬೆಸೆಯುವ ಕಲ್ಲು ಕುಟಿಗರು
ನಮ್ಮ ದೇಶದಲ್ಲಿ ಎಲ್ಲರಿಗೂ ಸಮಾನತೆಯ ಹಕ್ಕು ನೀಡಲಾಗಿದ್ದರೂ, ಆವಾಗಾವಾಗ ಜಾತಿ
ಜಾತಿಗಳ ಮಧ್ಯೆ ಜಗಳಗಳು ನಡೆಯುತ್ತಲೇ ಇವೆ. ಕಳೆದ ಸುಮಾರು ತೊಂಭತ್ತು
ವರ್ಷಗಳ ಕಾಲ ಪವಿತ್ರ ಬಸವಣ್ಣ ಮೂರ್ತಿ (ನಂದಿ) ಲಿಂಗಗಳು, ಗದ್ದುಗೆ ಮುಂತಾದ
ಕೆತ್ತನೆಯ ಕಾಯಕದಲ್ಲಿ ತೊಡಗಿದ ಮುಸ್ಲಿಂ ಜನಾಂಗದವರ ಕೆಲಸ ನಿಜವಾಗಿಯೂ
ಸ್ತುತ್ಯಾರ್ಹವಾದುದು. . . .
ಹೊಳೆ ಹೊಳೆಯುವ ತ್ವಚೆಗಾಗಿ!
ಅಸಂಖ್ಯಾತ ತೈಲ ಹಾಗೂ ಸ್ವೇದ ಗ್ರಂಥಿಗಳನ್ನು ಪಡೆದಿರುವ ಮುಖದ ತ್ವಚೆಯು ದೇಹದ
ಇತರ ಭಾಗದ ಚರ್ಮಕ್ಕಿಂತಲೂ ಸೂಕ್ಷ್ಮಾತಿಸೂಕ್ಷ್ಮ ರಚನೆಯಿಂದಾಗಿದೆ. ವಾತಾವರಣದ
ಏರುಪೇರು ಕ್ಷಿಪ್ರಗತಿಯಲ್ಲಿ ಪ್ರಭಾವ ಬೀರುವುದರಿಂದ ಸಮಸ್ಯೆಗಳು ವದನದ
ತ್ವಚೆಯನ್ನೇ ಹೆಚ್ಚಾಗಿ ಬಾಧಿಸುತ್ತವೆ.
ಹರಿಯುವ ನೀರಿಗೆ ಯಾವ ತಡೆ
ಕೆಲ ವರ್ಷಗಳ ಹಿಂದೆ ವಿಧವಾ ಸ್ತ್ರೀಯರ ಜೀವನದ ಕಥೆ ಆಧಾರಿತ ಚಿತ್ರ `ವಾಟರ್' ನ್ನು
ನಿರ್ಮಿಸಿ ನಿರ್ದೇಶಿಸಲು ಹೊರಟ ಖ್ಯಾತ ನಿರ್ದೇಶಕಿ ದೀಪಾ ಮೆಹ್ತರವರಿಗೆ ಹಿಂದೂ ಸಂಪ್ರದಾಯ
ವಾದಿಗಳಿಂದ ಅನೇಕ ರೀತಿಯಲ್ಲಿ ಅಡೆ ತಡೆಗಳು ಏರ್ಪಟ್ಟವು. ಆದರೆ ದೀಪಾ ಅವೆಲ್ಲಕ್ಕೂ
ಎದೆಗುಂದದೆ ಶ್ರೀಲಂಕಾದಲ್ಲಿ ಚಿತ್ರೀಕರಣವನ್ನು ನಡೆಸಿ ಯಶಸ್ವಿಯಾದರು. ಅಂದು ವಿವಾದದ
ಸುಳಿಗೆ ಸಿಕ್ಕಿದ `ವಾಟರ್' ಚಿತ್ರ ಇಂದು ಜಗತ್ತಿನ ಚಲನಚಿತ್ರ ರಂಗಕ್ಕೆ ನೀಡಲಾಗುವ
ಅತ್ಯುನ್ನತ ಬಿರುದಾದ `ಆಸ್ಕರ್ ಪ್ರಶಸ್ತಿ'ಯನ್ನು ಪಡೆಯುವತ್ತ ಹೆಜ್ಜೆಹಾಕಿದೆ. . .
ಅತಿಥಿ ಅಂಕಣದಲ್ಲಿ ಜಯಂತ ಕಾಯ್ಕಿಣಿ
ಕುವೆಂಪುಗೆ ಮೌನವೇ ನಿಜವಾದ ಭಾಷೆ
ಕುವೆಂಪು, ಶಿವರಾಮ ಕಾರಂತ, ಬೇಂದ್ರೆ, ಕನ್ನಡದ ಮನಸ್ಸನ್ನೂ,
ಆತ್ಮಸ್ಥೈರ್ಯವನ್ನೂ ಕಟ್ಟಿ ಅದರ ಸೀಮೆಗಳನ್ನು ವಿಸ್ತರಿಸಿದ ಈ ತ್ರಿಮೂರ್ತಿಗಳ ಕುರಿತು
ತಲಾ ಮೂವತ್ತು ಕಂತಿನ ಸಂದರ್ಶನ ಸರಣಿಯೊಂದನ್ನು ಟೆಲಿವಿಜನ್ ವಾಹಿನಿಯೊಂದಕ್ಕೆ ರೂಪಿಸಿ
ನಡೆಸಿಕೊಡುವ ಸುಯೋಗವೊಂದು ನನ್ನ ಪಾಲಿಗೆ ಬಂದಿತ್ತು. ಈ ಮೇರು ಸಾಹಿತಿಗಳ ಕೃತಿಗಳ
ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ, ಬರವಣಿಗೆ ಆಗಿದ್ದರಿಂದ- ಮಾನವೀಯ ಆಸಕ್ತಿಯ
ಕಣ್ಣುಗಳಿಂದಲೇ (Human Interest
Angle) ಇವರ ವ್ಯಕ್ತಿತ್ವವನ್ನು ತಿಳಿಯುವ ಯತ್ನ ಮಾಡಿದೆ. . .
ನಮ್ಮ ಕಾಲದ ದ್ರೋಣರು
ಜಿಎಸ್‌ಎಸ್ ಮೇಷ್ಟ್ರು. ಕುವೆಂಪು, ಬೇಂದ್ರೆ ಕೂಡಾ. ನಾವೆಲ್ಲ ಮಾಸ್ತರರೇ. ಆದರೆ
ಕನ್ನಡಕ್ಕೆ ಕೆಲವರು ದ್ರೋಣರಿದ್ದಾರೆ. ನಮ್ಮ ಕಾಲದ ದ್ರೋಣರೆಂದರೆ ಜಿಎಸ್‌ಎಸ್
ಎನ್ನಬಹುದು. ಕನ್ನಡದಲ್ಲಿ ಹೊಸ ರೀತಿಯ ಚಿಂತನೆ ಎದ್ದಿದೆ. ಕೆಲವು ಯೂನಿವರ್ಸಿಟಿಗಳಿಗೆ
ಇಂತಹ ಚಿಂತನೆಗಳನ್ನು ಕಂಡು ಈ ಯುವಕರೇನೋ ಅಧಿಕಪ್ರಸಂಗ ಮಾಡುತ್ತಿದ್ದಾರೆ,
ಇವರಿಗೆ ಯಾವ ಜಾಗವನ್ನೂ ಕೊಡಬಾರದು ಎನ್ನುವ ಧೋರಣೆ ಇದೆ. . . . .
ತಲ್ಲಣಗೊಂಡ ಕ್ರಿಕೆಟ್ ಜಗತ್ತು
ಕ್ರಿಕೆಟ್ ಜಗತ್ತು ತಲ್ಲಣಗೊಂಡಿದೆ. ಸದಾ ಒಂದಲ್ಲ ಒಂದು ವಿವಾದ, ಆರೋಪ, ಸಮಸ್ಯೆಗಳು
ಬೆಂಬಿಡದೆ ಕಾಡುತ್ತಿವೆ. ಮ್ಯಾಚ್ ಫಿಕ್ಸಿಂಗ್, ಚೆಂಡು ವಿರೂಪಗೊಳಿಸಿದ ಪ್ರಕರಣ, ದೂಸ್ರಾ,
ಜಾತೀಯತೆ, ಐಸಿಸಿಯ ದ್ವಂದ ನೀತಿ, ಬೆಟ್ಟಿಂಗ್ ಹಗರಣ, ಐಸಿಸಿ ಮತ್ತು ಬಿಸಿಸಿಐನ ಜಟಾಪಟಿ ಹೀಗೆ
ನಾನಾ ಜಂಜಾಟ, ಸಮಸ್ಯೆಗಳಿಗೆ ಮುಕ್ತಿ ಹಾಡುವ ಹಾದಿಯಲ್ಲಿರುವಾಗಲೇ ಈಗ ಮತ್ತೊಂದು
ಸುದ್ದಿ ಸಿಡಿಲಿನಂತೆ ಅಪ್ಪಳಿಸಿದೆ. ಅದೂ, ಉದ್ದೀಪನಾ ದ್ರವ್ಯ ಸೇವನೆ. . . . .
ಬಾಂಬೆ ಮಸಾಲ
ಸೋನಿಯಾ ಸಿನಿಮಾ
ಬಾಲಿವುಡ್‌ನಲ್ಲಿ ಹೊಸ ಟ್ರೆಂಡ್‌ಗಳಿಗೇನೂ ಕಮ್ಮಿ ಇಲ್ಲ. ರಾಜಕಾರಣಿಗಳ ಮೇಲೆ ಚಿತ್ರ
ತೆಗೆಯೋ ಹೊಸ ಟ್ರೆಂಡ್ ಈಗ ಶುರುವಾಗಿದೆ. ಹಿಂದೆ ಲಾಲೂ ಪ್ರಸಾದ್ ಯಾದವ್. ಈಗ
ಸೋನಿಯಾ ಗಾಂಧಿ!
ಡೇರ್ ಡೆವಿಲ್!
`ಧೈರ್ಯ ಅನ್ನೋದು ಇನ್ನೊಬ್ಬರನ್ನು ನೋಡಿ ಕಲಿತುಕೊಂಡರೆ ಬರೋದಿಲ್ಲ. ಅದು
ಹುಟ್ಟಿನಿಂದಲೇ ಮೈಗೂಡಿಸಿಕೊಂಡಿರಬೇಕು, ಹೀಗಂದದ್ದು ಯಾರಂದು ಕೊಂಡಿರಿ? ಬಾಲಿವುಡ್‌ನ
`ಬಿಚ್ಚು' ಮನಸ್ಸಿನ ಹೊಸ ತಾರೆ ದೀಪಾಲಿ ಶಾ. ತಾನು ಬೋಲ್ಡ್ ಆಗಿರೋದಕ್ಕೇ, ಇವತ್ತಿಗೆ
ಬಾಲಿವುಡ್‌ನಲ್ಲಿ ತನಗೊಂದು ಸ್ಥಾನ ಸಿಕ್ಕಿರುವುದಾಗಿ ದೀಪಾಲಿ ಹೇಳುತ್ತಾಳೆ. . . .
ಜಾನೇಮನ್‌ಗೆ ಜಾಗ ಬಿಡಿ
ಸಲ್ಲು ಮಾಮಾ ಈಗ ಸೈಲೆಂಟಾಗಿದ್ದಾನಾ? ಹಾಗೇನಿಲ್ಲಾರೀ. ಅವನು ಮೊದಲಿನಿಂದಲೂ ಸೈಲೆಂಟ್
ಬಾಯ್ ಎಂದರೆ ಬಾಲಿವುಡ್ ಒಪ್ಪುತ್ತಾ? ಏನೇ ಇರಲಿ ಸಲ್ಲು ಈಗ `ಜಾನ್-ಎ-ಮೆನ್'
ಗುಲ್ಲಿನಲ್ಲಿದ್ದಾನೆ. ಚಿತ್ರದ ಕತೆ ಚೆನ್ನಾಗಿದೆಯಂತೆ. ಸಲ್ಲು ಕೂಡಾ ಪಾತ್ರಕ್ಕೆ ಎಷ್ಟು ಬೇಕೋ
ಅಷ್ಟೇ ನಟನೆ ಮಾಡಿದ್ದಾನೆ. . . .
ತನು ಮನ ಧನ!
ಧೋನಿ ಧಮಾಕ ಕೇವಲ ಕ್ರಿಕೆಟ್‌ನಲ್ಲಿ ಮಾತ್ರವಲ್ಲ! ಇದೀಗ ಬಾಲಿವುಡ್‌ನಲ್ಲೂ! ಈಗ
ಬಾಲಿವುಡ್ ಬೆಡಗಿಯೊಬ್ಬಳು ಧೋನಿ ಬೆನ್ನು ಬಿದ್ದಿದ್ದಾಳೆ. ಆಕೆ ಮತ್ಯಾರು ಅಲ್ಲಿ `ಆಶಿಕ್ ಬನಾಯಾ
ಆಪ್‌ನೇ' ಖ್ಯಾತಿಯ ತನುಶ್ರೀ ದತ್ತ! ಫೆಮಿನಾ ಮಿಸ್ ಯುನಿವರ್ಸ್ ತನು ಈಗ ಫುಲ್
ಜೂಮಿನಲಿದ್ದಾಳೆ. . . . .
ರಂಗಿಲಾ
ಹುಬ್ಲಿ ಬಿಡುಗಡೆಗೆ ಕಾಸಿಲ್ಲ
ಹುಬ್ಳಿ ಅಥವಾ ಹುಬ್ಬಳ್ಳಿ ಎಂಬ ಚಿತ್ರವನ್ನು ಫೈವ್‌ಸ್ಟಾರ್ ನಿರ್ದೇಶಕ ಓಂಪ್ರಕಾಶ್‌ರಾವ್ ನಿರ್ಮಾಣ,
ನಿದೇರ್ಶನ ಮಾಡುತ್ತಿದ್ದ ಸಂಗತಿಯನ್ನು ಹಲವರು ಮರೆತಿರಬಹುದು. ಯಾಕೆಂದರೆ
ಹುಬ್ಬಳ್ಳಿಯ ವಿಚಾರ ಈಗ ಮರೆಯುವಷ್ಟು ಹಳತಾಯಿತು ಎನ್ನುವುದು ಸುಳ್ಳಂತೂ ಅಲ್ಲ.
ಸುಮಾರು ಒಂದು ವರ್ಷದ ಹಿಂದೆಯೇ ಹುಬ್ಬಳ್ಳಿಗೆ ಮುಹೂರ್ತ ಕಾರ್ಯ ನಡೆದಿತ್ತು. ಆದರೆ
ಚಿತ್ರ ಎಲ್ಲಿ, ಎಷ್ಟು, ಹೇಗೆ ನಡೆಯುತ್ತದೆ? ಎಂಬ ಬಗ್ಗೆ ಬಲವಾದ ಸುದ್ದಿಗಳೇನೂ ಇರಲಿಲ್ಲ. . .
ಬಾಬು ಹೊಸ ಷರತ್ತು
ರಾಜೇಂದ್ರಸಿಂಗ್ ಬಾಬು ಅವರಿಗೆ ಸದಾ ಒಂದಿಲ್ಲೊಂದು ಹೊಸ ಐಡಿಯಾಗಳು ತಲೆ ಒಳಗೆ
ನುಗ್ಗುತ್ತಲೇ ಇರುತ್ತವೆ. ಒಮ್ಮೆ ಅವರು ರಿಮೇಕ್ ಚಿತ್ರಗಳನ್ನು ತಮ್ಮ ಬ್ಯಾನರ್
ಅಡಿಯಲ್ಲಿ ಮಾಡಿಸುತ್ತಲೇ ಸ್ವಮೇಕ್ ಚಿತ್ರದ ಬಗ್ಗೆ ಹೇಳಿದ್ದರು. ಹಾಗೇಯೇ ಹೊರ
ರಾಜ್ಯದಲ್ಲಿ ಶೂಟಿಂಗ್ ಮಾಡುವ ಬಗ್ಗೆಯೂ ಅವರೇ ಮೊದಲು ಸರ್ಕಾರದ ಮುಂದೆ ಬೇಡಿಕೆ
ಇಟ್ಟಿದ್ದು. . . .
ಡಕೋಟಾ ಬ್ರದರ್‍ಸ್
ಡಕೋಟ ಎಕ್ಸ್‌ಪ್ರೆಸ್ ನೆನಪಿದೆಯಲ್ಲವೇ? ಒಂದೇ ಬಸ್ಸಿನಲ್ಲಿ ರಾಕ್‌ಲೈನ್, ಓಂಪ್ರಕಾಶ್ ರಾವ್
ಪಜೀತಿಪಡುವ ತಮಾಷೆ ಚಿತ್ರ ಡಕೋಟ ಎಕ್ಸ್‌ಪ್ರೆಸ್. ಈ ಕಡಿಮೆ ಬಜೆಟ್ಟಿನ ಚಿತ್ರ ಭಾರೀ ಲಾಭ
ಗಳಿಸಿರುವುದೇ ಅದರ ಮುಂದುವರಿದ ಇನ್ನೊಂದು ಭಾಗ ಬರಲು ಕಾರಣವಾಗಿದೆಯಂತೆ. ಅದರ
ಹೆಸರು ಡಕೋಟಾ ಬ್ರದರ್ಸ್. . . .
ಘಜನಿ ಹುಡುಗಿ ಶಾಂತಿ ನಿವಾಸಕ್ಕೆ
ಈ ಹುಡುಗಿ ಬೆಂಗಳೂರಿನ ಕನ್ನಡಿಗರಿಗೆಲ್ಲ ಗೊತ್ತು ಅಂತ ಗಾಂಧಿ ನಗರ ಎದೆ ತಟ್ಟಿ
ಹೇಳಿಕೊಳ್ಳುತ್ತಿದೆ. ಯಾಕೆಂದರೆ `ಬೆಂಗಳೂರ ಕನ್ನಡಿಗರು ಮಾತ್ರ ತಮಿಳು ಚಿತ್ರ
ನೋಡೋದು' ಎಂಬ ಬಗ್ಗೆ ಖಾತ್ರಿ ಇರುವುದರಿಂದಲೇ ಅವರು ಪ್ರಮಾಣ ಕೂಡ ಮಾಡಲು
ಹಿಂಜರಿಯುವುದಿಲ್ಲ. . .
ಅಮೆರಿಕಾದಿಂದ ರವಿ- ದೇಶಪ್ರೇಮ ಎಂದರೆ ಸ್ವಮತಪ್ರೇಮವೆ?
ಹೀಗೊಂದು ಸಭೆ:
ಅಕ್ಕ ಸಮ್ಮೇಳನಕ್ಕೆ ಬಂದಿದ್ದ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಸ್ಯಾನ್ ಫ್ರಾನ್ಸಿಸ್ಕೋದ
ಸಿಲಿಕಾನ್ ಕಣಿವೆಗೂ ಬಂದಿದ್ದರು. ಆ ಪ್ರಯುಕ್ತ ಸ್ಥಳೀಯ ಕನ್ನಡ ಕೂಟ ಅವರೊಂದಿಗೆ
ಸಂವಾದ ಕಾರ್ಯಕ್ರಮ ಏರ್ಪಡಿಸಿತ್ತು. ಹಿಂದುಗಳು ಪೂಜಿಸುವ ಧರ್ಮಸ್ಥಳದ
ಮಂಜುನಾಥ. . .
ಇಂದೇ ಚಂದಾದಾರರಾಗಿ
ವಿಕ್ರಾಂತ ಕರ್ನಾಟಕದ
ದೀಪಾವಳಿ ವಿಶೇಷ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಒಂಬತ್ತನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಎಂಟನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಏಳನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಆರನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಐದನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ನಾಲ್ಕನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಮೂರನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ದ್ವಿತೀಯ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ ಪ್ರಥಮ ಸಂಚಿಕೆಯಲ್ಲಿ
. . .