ವಿಕ್ರಾಂತ ಕರ್ನಾಟಕದ
ದೀಪಾವಳಿ ವಿಶೇಷ ಸಂಚಿಕೆಯಲ್ಲಿ:

ಸಂಪಾದಕೀಯ - ಹಣತೆ ಕಿರಿದಾದರೇನು ಬೆಳಕು ಕಿರಿದೆ?
ಬಂತೇ ದೀಪಾವಳಿ? ಇಷ್ಟೊಂದು ಹಣತೆಗಳಲ್ಲಿ
ಎಣ್ಣೆಯಿಲ್ಲ
ಬರೀ ಮಾತುಗಳ ಕಡ್ಡಿ ಗೀಚುವೆಯಯಲ್ಲ
ನಿನಗೆ ನಾಚಿಕೆಯಿಲ್ಲ?
ಕವಿ ಜಿಎಸ್‌ಎಸ್ ಸುಮಾರು ನಾಲ್ಕು ದಶಕದ ಹಿಂದೆ ಬರೆದ ಈ ಸಾಲುಗಳು ಪ್ರತಿ
ದೀಪಾವಳಿಯ ಸಂದರ್ಭದಲ್ಲೂ ಹೊಸ ಹೊಸ ಅರ್ಥಗಳನ್ನು
ಹೊಮ್ಮಿಸುತ್ತ ನಮ್ಮೆದೆಯಲ್ಲಿ ಪ್ರತಿಧ್ವನಿಸತೊಡಗುತ್ತದೆ;
ಕವಿಯ ಆಶಯದ ಹಲವು ಚಿಗುರುಗಳು ಭಸ್ಮವಾದ ವಾಸ್ತವದ
ಚಿತ್ರ ಕಣ್ಣೆದುರು ದೃಶ್ಯಗಳಾಗಿ ನಿಲ್ಲುತ್ತವೆ. ಮತ್ತೆ ಕರ್ನಾಟಕ
ಕರಾವಳಿಯಲ್ಲಿ ಸ್ಫೋಟಿಸಿದ ಗಲಭೆಗಳು ಕಡ್ಡೀ ಗೀಚುವವರ,
ಪ್ರಶಾಂತ ವಾತಾವರಣವನ್ನು ಕಲಕುವ ವಿಘ್ನ ಸಂತೋಷಿಗಳಿಗೆ
ಚೆಲ್ಲಾಟದ ತಾಣವಾಗಿ ಇದೀಗ ಶಾಂತ ಸ್ಥಿತಿಗೆ ತಲುಪಿದೆ. . . .
ಬೆಳಕೆಂದರೆ ಜ್ಞಾನದ ಅರಿವು - ಗುರುರಾಜ ಪೋಶೆಟ್ಟಿಹಳ್ಳಿಯವರ
ಲೇಖನ
ಮತ್ತೊಂದು ದೀಪಾವಳಿ, ಮತ್ತೊಮ್ಮೆ ಬೆಳಕಿನ ಸಡಗರ. ಕತ್ತಲು
ಚೆನ್ನಾಗಿ ತಿಳಿದಿದ್ದರೆ ಮಾತ್ರ ಈ ಹಬ್ಬ ಆಪ್ಯಾಯಮಾನ.
ಕತ್ತಲಿಲ್ಲದಿದ್ದರೆ ಆಗಸದಲ್ಲಿ ನಕ್ಷತ್ರಗಳಿರುತ್ತಿರಲಿಲ್ಲ,
ಮನೆಯಂಗಳದಲ್ಲಿ ಸಾಲುದೀಪಗಳಿರುತ್ತಿರಲಿಲ್ಲ. ಕತ್ತಲೆಯಿಲ್ಲದಿದ್ದರೆ
ರಹಸ್ಯವೇ ಇರುತ್ತಿರಲಿಲ್ಲ, ಎಲ್ಲವೂ ತೆರೆದ ಸಂಗತಿಗಳಾಗಿ
ಪೇಲವವೆನಿಸುತಿತ್ತು.
ಈ ಜಗತ್ತನ್ನು ಸುಂದರಗೊಳಿಸುವಲ್ಲಿ ಬೆಳಕಿನಷ್ಟೇ ಕತ್ತಲೆಯ
ಪಾತ್ರವೂ ಇದೆಯಲ್ಲವೇ? ಹಾಗಾಗಿ ಕತ್ತಲೆಗೆ ಕೃತಜ್ಞತೆ. ಎಲ್ಲದಕ್ಕೂ
ಮೊದಲಿಗೆ ಇದ್ದುದು ಕತ್ತಲೆಯೆ? ಬೆಳಕೆ? ಮೊದಲಿಗೆ ಕತ್ತಲೆಯೆ
ಇತ್ತು. ಅದು ಕತ್ತಲು ಎಂದು ತಿಳಿಯದಂತಹ ಸ್ಥಿತಿ. ಬೆಳಕು
ಇದ್ದರಲ್ಲವೆ ಕತ್ತಲು ಏನು ಎಂಬುದು ಅರಿವಾಗುವುದು. . .
ಜ್ಞಾನದ ಹಣತೆ ಬೆಳಗುತಿರಲಿ ಲೇಖನ- ಅರವಿಂದ ಚೊಕ್ಕಾಡಿ
ಸಣ್ಣಗೆ ಮಳೆ ಬರುವಾಗ ಎಲೆಗಳಿಂದ ತೊಟ್ಟಿಕ್ಕುವ ನೀರು, ಆಗಸದಿಂದ ಮಸಲ
ಧಾರೆಯಾಗಿ ಸುರಿವ ಮಳೆ, ಹರಿವ ನದಿ, ಭೋರ್ಗರೆವ ಜಲಪಾತ;
ಹಾಗೆ ತಾಯ ಉದರದಿಂದ ಜಾರುವ ಮಗು, ಮನುಷ್ಯನ
ವಯಸ್ಸು- ಈ ಎಲ್ಲವೂ ಇಳಿಮುಖವಾಗಿಯೇ ಇವೆ. ಹಾಗೆ ನೋಡಿದರೆ
ಜಗತ್ತಿನಲ್ಲಿ ಇಳಿಮುಖವಾಗಿರುವುದರ ಪ್ರಮಾಣವೇ ಹೆಚ್ಚು. ಆದರೆ...
ನೆನೆದವರ ಮನದಲ್ಲಿ...
ದೀಪಾವಳಿ ಸಂಭ್ರಮದ ಹಬ್ಬ. ಬಹುಶಃ
ಇಡೀ ಭಾರತದಲ್ಲಿ ಇದರಷ್ಟು ಸಡಗರದ,
ಆತ್ಮಸಂತೋಷದ ದೊಡ್ಡಹಬ್ಬ ಬೇರಾವುದೂ
ಇರಲಾರದು. ಅಜ್ಞಾನ ಕಳೆಯುವ ಬೆಳಕಿನ
ಜ್ಞಾನದಹಬ್ಬ ಎಂಬ ಸಾಂಕೇತಿಕತೆ ಏನೇ ಇರಲಿ,
ಈ ದೀಪಗಳ ಸೊಗಸೇ ಸೊಗಸು.
ಆದರೆ ಕನ್ನಡಿಗರ ಪಾಲಿಗೆ ಇದು ರಾಜ್ ಇಲ್ಲದ
ಮೊದಲ ದೀಪಾವಳಿ. ಕುಟುಂಬಕ್ಕೆ ರಾಜನಿಲ್ಲದ
ಹಬ್ಬ. ಕಳೆದ ಐವತ್ತು ವರ್ಷಗಳಲ್ಲಿ ರಾಜ್
ತಮ್ಮ ಚಿತ್ರಗಳ ಮೂಲಕ ಅಭಿಮಾನಿಗಳಿಗೆ
ನೀಡಿದ ದೀಪಾವಳಿ ನೂರಾರು;
ಸಿಡಿದ ಸಿಡಿಮದ್ದುಗಳು ಸಾವಿರಾರು;
ಮನೆ ಮಾಡಿದ ಹೃದಯಗಳು ಕೋಟ್ಯಂತರ.
ಇವೆಲ್ಲ ನೆನಪಿನೊಂದಿಗೆ ರಾಜ್ ಆತ್ಮಕ್ಕೆ ಶಾಂತಿ
ಸಿಗಲೆಂದು ಒಂದು ಹಣತೆ ಹಚ್ಚೋಣ.
ಪ್ರೀತಿ, ವಿಶ್ವಾಸ, ಆತ್ಮಾಭಿಮಾನದ
ಸಂಕೇತವಾಗಿ ಈ ಹಣತೆ ಉರಿಯುತಿರಲಿ
ರಾಜ್ ನೆನಪು ಚಿರಕಾಲ ಉಳಿಯಲಿ.
ಇತಿ
ವಿಕ್ರಾಂತ ಕರ್ನಾಟಕ ಬಳಗ
ವೇದ ಪುರಾಣಗಳೊಂದಿಗೆ ದೀಪಾವಳಿಯ ಸಂಬಂಧ - ತಳುಕು
ಶ್ರೀನಿವಾಸ್‌ರವರ ಲೇಖನ
ನಮ್ಮ ದೇಶದಲ್ಲಿ ಅಲ್ಲದೇ ಅಕ್ಕ ಪಕ್ಕದ ದೇಶಗಳಲ್ಲೆಲ್ಲಾ ಅತ್ಯಂತ
ವಿಜೃಂಭಣೆಯಿಂದ ಆಚರಿಸಲ್ಪಡುವ ಕೆಲವೇ ಹಬ್ಬಗಳಲ್ಲಿ, ದೀಪಾವಳಿಯೂ
ಮುಖ್ಯವಾದುದು. ಇದನ್ನು ನಾಡಹಬ್ಬವಾಗಿಯೂ ಆಚರಿಸುವ
ಸಂಪ್ರದಾಯವುಂಟು. . .
ಆಶಯ - ಕವನ
ಪುಟ್ಟ ಹಣತೆ ಹೊಸಿಲಿನಲ್ಲಿ ಜಗಲಿಗಿಷ್ಟು ಬೆಳಕು,
ನಡುಮನೆಯಲಿ ಅಂಗಳದಲಿ ಮಸುಕು ಮಸುಕು ಮುಸುಕು. .
.
ಬಲಿಯ ತಲೆದಂಡ
ಪುಣ್ಯಭೂಮಿಯಾದ ನಮ್ಮ ಭರತಖಂಡ ಅಲಿಯಾಸ್ ಇಂಡಿಯಾ
ಉರುಫ್ ಹಿಂದೂಸ್ಥಾನದಲ್ಲಿ ಈಪಾಟಿ ಅವತಾರಗಳಾಗಿದ್ದರೂ ಇವತ್ತಿಗೂ
ಕಳ್ಳರು, ಸುಳ್ಳರು, ಲಫಂಗರು ಮತ್ತಿತ್ಯಾದಿಗಳೇ
ಅಧಿಕಾರಸ್ಥಾನಗಳಲ್ಲಿ ವಿಜೃಂಭಿಸುತ್ತಿರುವರಲ್ಲಾ ಏಕೆ ಎಂಬ
ಪ್ರಶ್ನೆಯೊಂದು ಹೀಗೇ ಒಂದು ದಿನ ನಮ್ಮ ಆಧುನಿಕ ಬುದ್ಧಿಜೀವಿ
ವೈಚಾರಿಕ ಕಟ್ಟೆಯಲ್ಲಿ ತತ್ವಾರ್ಥ ಜಿಜ್ಞಾಸೆ ನಡೆದಿದ್ದಾಗ
ಧುತ್ತನೆದ್ದು ನಿಂತಿತು...
ಈ ಜನ
ಕಾನ್ಶಿರಾಂ
ದೇಶದ ರಕ್ಷಣಾ ಉತ್ಪಾದನಾ ಇಲಾಖೆಯಲ್ಲಿ ಸಂಶೋಧನಾ
ಸಹಾಯಕರಾಗಿ ಕೆಲಸ ಮಾಡುತ್ತಿದ್ದ ದಲಿತ ಯುವಕ ಏಪ್ರಿಲ್ ೧೪ರ
ಅಂಬೇಡ್ಕರ್ ಜಯಂತಿ ರಜೆಗಾಗಿ ಮೇಲಧಿಕಾರಿಗಳನ್ನು
ಒತ್ತಾಯಿಸುತ್ತಾರೆ. ಅವರ ಬೇಡಿಕೆ ತಿರಸ್ಕೃತಗೊಳ್ಳುತ್ತದೆ. . .
ಕಿರಣ್ ದೇಸಾಯಿ
ಅಕ್ಟೋಬರ್ ತಿಂಗಳಿನಲ್ಲಿ ವಿಶ್ವದೆಲ್ಲೆಡೆ ಪ್ರಶಸ್ತಿಗಳ ಮಹಾಪರವೇ
ಕಾಣಬರುತ್ತದೆ. ಆಸ್ಕರ್ ಪ್ರಶಸ್ತಿಗಾಗಿ ಚಲನಚಿತ್ರ
ನಟ-ನಟಿ-ನಿರ್ದೇಶಕರುಗಳು ಚಾತಕ ಪಕ್ಷಿಗಳಂತೆ ಕಾಯುತ್ತಾ
ಕುಳಿತರೆ, ತಮಗೆ ಈ ಬಾರಿಯ ನೊಬೆಲ್ ಪ್ರಶಸ್ತಿ ಸಿಗುತ್ತದೆಯೇ
ಎಂದು ಪ್ರಪಂಚದೆಲ್ಲೆಡೆ ವಿಜ್ಞಾನಿಗಳು ಕಾದು. . .
ಕಣ್ಣೀರ ಧಾರೆ ಇದೇಕೆ... ಇದೇಕೆ...?
ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿ, ಹಾಲಿ ಜಾತ್ಯತೀತ ಜನತಾದಳದ
ಪ್ರೆಸಿಡೆಂಟು ದೇವೇಗೌಡರು ಯಾವಾಗ ನಗುತ್ತಾರೆ, ಯಾವಾಗ
ಅಳುತ್ತಾರೆ ಎಂಬುದು ಚೋಮನಿಗೆ ಪುರಾತನ ಕಾಲದಿಂದಲೂ ಕಾಡಿದ
ಪ್ರಶ್ನೆ. ಆ ಕಾಲದಿಂದಲೂ ದೇವೇಗೌಡರು ನಕ್ಕಾಗ ಅತ್ತಂತೆಯೂ,
ಅತ್ತಾಗ ಸಿಡಿಮಿಡಿಗೊಂಡಂತೆಯೂ. . .
ನಿತ್ಯ ದೀಪಾವಳಿ - ಬಿ. ಆರ್. ಲಕ್ಷ್ಮಣರಾವ್‌ರವರ ಕವಿತೆ
ನನ್ನ ಮನೆಯಲ್ಲಿ
ನಿತ್ಯ ದೀಪಾವಳಿ:
ನನ್ನಾಕೆಯ ಕಣ್ಣಲ್ಲೇ ಇದೆ
ಬಣಬಣ್ಣದ ಮತಾಪು,
ಹೂಬಾಣ;
ಕಿರುನಗೆಯಲ್ಲೇ ಇದೆ
ನನ್ನನ್ನು ಮುಗಿಲಿಗೇರಿಸುವ
ರಾಕೆಟ್ಟು;
ಆದರೆ ಬಂದಾಗ ಸಿಟ್ಟು
ನನ್ನಾಕಿ
ಡಂಡಂ ಪಟಾಕಿ. . . .
ಸೋಜಿಗದ ಜಗ
ದ್ವೀಪ ಮಾರಾಟಕ್ಕಿದೆ
`ಅಂಗಡಿ ಮಾರಾಟಕ್ಕಿದೆ', `ಕಾರು ಮಾರಾಟಕ್ಕಿದೆ', `ಸೈಟು
ಮಾರಾಟಕ್ಕಿದೆ' ಈ ಪಟ್ಟಿಗೆ ಈಗ ಹೊಸ ಸೇರ್ಪಡೆ `ದ್ವೀಪ
ಮಾರಾಟಕ್ಕಿದೆ'. ಹೌದು, ಫಿಜಿಯ ವಟು ವರ . . .
ಐದು ವರ್ಷ ನಂತರ ಶವಪತ್ತೆ
ವ್ಯಕ್ತಿಯೊರ್ವ ಸತ್ತು ಐದು ವರ್ಷಗಳ ಬಳಿಕ ಆತನ ಶವ
ಬೆಡ್‌ರೂಂನಲ್ಲಿ ಪತ್ತೆಯಾಯಿತೆಂದು ವಿಯೆನ್ನಾದ ಪತ್ರಿಕೆಯೊಂದು
ಹೇಳಿದೆ. ಶವ ಪತ್ತೆಯಾದ ವ್ಯಕ್ತಿಗೆ ಸಾಯುವಾಗ ೮೦
ವರ್ಷವಾಗಿತ್ತಂತೆ. ಆತ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಪ್ರತಿ
ತಿಂಗಳು ಅವನ ಬ್ಯಾಂಕ್‌ನಿಂದಲೇ ಬಾಡಿಗೆ ಜಮೆಯಾಗುವ
ವ್ಯವಸ್ಥೆಯಿದ್ದುದರಿಂದ ಮನೆಯ . . .
ಕಾರು ಖರೀದಿಸಿದ ಪೋರ
ಮೂರು ವರ್ಷದ ಈ ಪೋರ ತನ್ನ ತಾಯಿಯ ಕಂಪ್ಯೂಟರ್ ಬಳಸಿ,
ಇಂಟರ್‌ನೆಟ್ ಮೂಲಕ ಒಂಬತ್ತು ಸಾವಿರ ಡಾಲರ್ ಬೆಲೆಯುಳ್ಳ ಕಾರು
ಖರೀದಿಸಿದ್ದಾನೆ! . . .
ರೆಬೆಲ್ ನಾಯಿ
`ಭಾರಿ ವಾಹನಗಳಿಗೆ ಪ್ರವೇಶವಿಲ್ಲ', `ಆಟೋಗಳಿಗೆ ಪ್ರವೇಶವಿಲ್ಲ' ಎಂಬ
ಬೋರ್ಡುಗಳು ಕೆಲವೆಡೆ ಕಾಣಿಸುತ್ತವೆ. ಅಂತಹದ್ದೇ ಬೋರ್ಡು
ನಾಯಿಗಳಿಗೂ . . .
ಇನ್‌ಡೋರ್ ಬೀಚ್
ಒಳಾಂಗಣದಲ್ಲಿ ಟೆನಿಸ್ ಕೋರ್ಟ್, ವಾಲಿಬಾಲ್ ಕೋರ್ಟ್, ಕೊನೆಗೆ ಕ್ರಿಕೆಟ್
ಮೈದಾನ ಸಹ ಈಗ ಹಳೆಯ ಮಾತು. ಜಪಾನೀಯರು ಒಳಾಂಗಣದಲ್ಲಿ
ಮಾನವ ನಿರ್ಮಿತ ಬೀಚ್ ಮಾಡಿದ್ದಾರೆ! ಜಗತ್ತಿನ ಏಕೈಕ ಮನುಷ್ಯ
ನಿರ್ಮಿತ ಇಂಡೋರ್ ಬೀಚ್ ಇದು. . .
ತುಮುಲ - ಶೇಖರ್ ಕಶ್ಯಪ್‌ರವರ ಕತೆ
ಎಂಥಾ ವಿಪರ್ಯಾಸ! ಆ ಹುಡುಗಿ ತನ್ನ ಬಳಿ ಬಂದಿರುವುದೇ ವೈದ್ಯಳಾದ
ನನ್ನಿಂದ ಸಿಗುವ ಸಹಾಯಕ್ಕಾಗಿ! ಆದರೆ ನಾನವಳನ್ನು ಹೀಯಾಳಿಸಿ
ಮಾತನಾಡಿದೆ. ಆದರೆ ಆಕೆಯ ಪರಿಸ್ಥಿತಿಗೆ ಕಾರಣರಾಗಿರುವವರು
ಯಾರು ಎಂದು ತಿಳಿದಾಗ ನಾನೇಕೆ ಪರಿತಪಿಸುವಂತಾಯಿತು?. . .
ಹೇಳಲಾಗದ್ದು - ಮೀರಾ ರಾಜಗೋಪಾಲ್‌ರವರ ಕವನ
ಎಷ್ಟು ಕನಸುಗಳಿವೆ ನಿನಗೆ?
ಎಂದು ಕೇಳಿದರು.
ಗೊತ್ತಿಲ್ಲ ಎಂದೆ.
ನನ್ನ ಅಸಂಖ್ಯ ಕನಸುಗಳ
ಲೆಕ್ಕವಿಡಬಹುದೆಂದು
ಅನ್ನಿಸಿರಲೇ ಇಲ್ಲ. . . .
ಆರೋಗ್ಯ - ಸಬ್ಬಸಿಗೆ
ವರ್ಣನೆ: ಕನ್ನಡದಲ್ಲಿ ಸಬ್ಬಸಿಗೆ-ಸದಾಪೆ ಎಂತಲೂ; ಸಂಸ್ಕೃತ:
-ಶತಪುಷ್ಪ, ಮಧುರಾ, ಕಾರವೀ; ಹಿಂದಿ: ಸೋಯಾ,
ಸುವಾ-ವನಸೌಂಡ್; ತೆಲಗು: ಪೆದ್ದಸದಾಪಚೆಟ್ಟು, ಸದಾಪ; ತಮಿಳು:
ಕಡಾಕುರೈ, ಶದಕುಪ್ಪಿ; ಮಲೆಯಾಳ: ಚಿತಕುಪ್ಪ; ಇಂಗ್ಲಿಷ್:
DILL,
DILLSEEDS, DILL LEAF ಎಂತಲೂ ವ್ಯವಹರಿಸಲ್ಪಡುತ್ತದೆ.
ಸುಳ್ಳನೊಬ್ಬನ ಕಣ್ಣ ಹನಿಗಳು - ಮಾಲಾ ರಾವ್‌ರವರ ಕತೆ
ನಮ್ಮ ನಂಬಿಕೆಗಳು ಎಷ್ಟು ಬೇಗ ಬದಲಾಗುತ್ತಿವೆ. ಒಂದು ಕಾಲದಲ್ಲಿ
ಮಕ್ಕಳಿಗೆ ಕತೆ ಹೇಳುವುದೇ ನಮ್ಮ ಜಾನಪದ ಸಂಸ್ಕೃತಿಯ
ಒಂದು ಭಾಗ. ಆ ಯಕ್ಷ, ಆ ಯುಕ್ಷಿ, ಆ ರಾಕ್ಷಸ, ಭೂತ... ಹೀಗೆ
ಎಷ್ಟೊಂದು ವರ್ಣರಂಜಿತ ಕತೆಗಳನ್ನು ಅಜ್ಜಿಯಿಂದ ಕೇಳುತ್ತಿದ್ದ ಆತ,
ಅದೇ ಕತೆಯನ್ನು ತನ್ನ ಮಕ್ಕಳಿಗೆ ಹೇಳಿದರೆ ಅದು ದೊಡ್ಡ
ಸುಳ್ಳಾಗಬೇಕೆ? ಕೆಲವೇ ವರ್ಷಗಳ ಅಂತರದಲ್ಲಿ ಎರಡು
ಸಂಸ್ಕೃತಿಗಳ ನಡುವೆ ಇಂಥದೊಂದು ತಿಕ್ಕಾಟ ಸಂಭವಿಸುವುದೆ?. .
.
ಮನದ ಕತ್ತಲಿನ ಬೆಳಕು - ಕಗ್ಗೆರೆ ಪ್ರಕಾಶ್‌ರವರ ಕವನ
ತುಂತುರು ಮಳೆಹನಿ ಮುತ್ತುಗಳು
ಬವಣೆಯ ಬೆವರಿನ ಮಣ್ಣಿಗೆ
ಹೆಜ್ಜೇನಿನ ಬುಗ್ಗೆಯ ಕಾರಂಜಿಗಳು . . .
ಒಂದು ಗ್ರಾಂ ಬಂಗಾರ ಝಗಮಗದ ಸಿಂಗಾರ
ಈಗ ಕಾಲ ಬದಲಾಗಿದೆ. ಎಲ್ಲ ನಮೂನಿ ಚಿನ್ನದ ವ್ಯಾಪಾರಗಳೂ
ಸ್ಫಟಿಕದಂತೆ ಪಾರದರ್ಶಕ. ಚಿನ್ನ ಅಪ್ಪಟವಾಗಿದೆಯೇ ಎಂದು
ಅಳೆಯುವುದಕ್ಕೂ ತಂತ್ರಜ್ಞಾನ ಬಂದಿದೆ. ಮೆಷಿನೊಂದು ಗ್ರಾಹಕರಿಗೆ
ಚಿನ್ನದ ಅಸಲಿ ವಿಚಾರವನ್ನು ಬಹಿರಂಗಪಡಿಸುತ್ತದೆ.
ಚಿನ್ನದ ಮೇಲಿನ ವ್ಯಾಮೋಹ ಹೆಂಗಸರಿಗೆ ಮಾತ್ರವಿದೆ ಅನ್ನೋದು ತುಂಬಾ
ಅನ್ಯಾಯ ಅಂತ ಹಲವು ಬಾರಿ ಅನಿಸುವುದುಂಟು. ಯಾಕೆಂದರೆ ಚಿನ್ನ
ಯಾವತ್ತಿದ್ದರೂ ಆಪದ್ಧನ ಅಂತ ಹಿರಿಯರು ಹೇಳುತ್ತಿದ್ದರು. ಅದು
ಆರ್ಥಿಕ ಆಪತ್ತು. ಈ ಆರ್ಥಿಕ ಆಪತ್ತನ್ನು ಎದುರಿಸುತ್ತಿದ್ದುದು ಹಿಂದಿನ
ಕಾಲದಲ್ಲಿ ಗಂಡಸರೇ ಎಂದಾದ ಮೇಲೆ ಚಿನ್ನದಿಂದ ಲಾಭ ಹೆಂಗಸರಿಗೆ
ಮಾತ್ರ ಎಂಬುದು ಸುಳ್ಳಲ್ಲವಾ? ವಾದ ಹಾಗಿರಲಿ ಬಿಡಿ. . .
ಬಾಂಬೆ ಮಸಾಲ
ಕತ್ರೀನಾ ಕಿಕ್‌ಡ್ ಔಟ್
ಕತ್ರೀನಾ ಕೈಫ್ ಸ್ಕರ್ಟ್ ವಿವಾದ ಕೊನೆಗೊಳ್ಳುತ್ತಿರುವ ಬೆನ್ನಲ್ಲೇ
ನಿರ್ದೇಶಕ ರಾಮ್ ಗೋಪಾಲ್ ವರ್ಮ ಆಕೆಗೊಂದು ದೊಡ್ಡ ಶಾಕ್
ಕೊಟ್ಟಿದ್ದಾರೆ. ವರ್ಮಾರ ಬಹು ನಿರೀಕ್ಷೆಯ ಚಿತ್ರ `ಶೋಲೆ'ಯಿಂದ
ಕತ್ರೀನಾ ಕಿಕ್ ಔಟ್! ಏನಾಯ್ತಮ್ಮಾ? . . .
ರೇಖಾ ಉವಾಚ
`ನೀವು ಮಾತನಾಡುತ್ತಿರುವ ಮರುಕ್ಷಣ ಏನಾಗುತ್ತದೆ ಎನ್ನುವುದು
ನಿಮಗೆ ಗೊತ್ತಿರುವುದಿಲ್ಲ. ಈ ಬದುಕೇ ಹೀಗೆ. ಎಲ್ಲವನ್ನೂ ಅನುಭವಿಸಿ
ಅವೆಲ್ಲವನ್ನೂ ಅವಿತಿಟ್ಟುಕೊಂಡೇ ಬಾಳಬೇಕು ಬದುಕಿನ ಪ್ರತಿದಿನವೂ
ಮಳೆಯ ಸಂತೆ. ಅದರ ಪ್ರತಿ ಹನಿಯನ್ನು ಅನುಭವಿಸಬೇಕು.
ದಟ್ಸ್ ಲೈಫ್! . . .
`ಗ್ಲಾಮರಸ್ ಗೊಂಬೆ'
`ಗ್ಲಾಮರಸ್' ಗೊಂಬೆಯಾಗಿ ಕಾಣಿಸಿಕೊಂಡರೆ ಸಾಲದು. ನಟಿಸುವ
ಪಾತ್ರಕ್ಕೆ ಪೂರ್ತಿ ನ್ಯಾಯ ಒದಗಿಸಿಕೊಡಬೇಕು' ಈ ಒಕ್ಕಣೆಗೂ ಐಶ್
ಬೇಬಿಯ ಚಿತ್ರಕ್ಕೂ ಏನು ಸಂಬಂಧ ಅಂದುಕೊಂಡಿರಾ? ಅದು ಆಕೆಯ
ಹೊಸ ಪಾತ್ರಕ್ಕೆ ನೀಡಲಾದ ಸಲಹೆ! . . .
ಗೊತ್ತುಗುರಿಯಿಲ್ಲದ ಮರೆಯಲಾಗದ ಪ್ರವಾಸ - ಬಿ.
ಚಂದ್ರೇಗೌಡರವರ ಲೇಖನ
ಕನ್ನಡದ ಅತ್ಯುತ್ತಮ ಕತೆಗಾರ ಕೆ. ಸದಾಶಿವ ರಾಮನ ಸವಾರಿ
ಸಂತೆಗೆ ಹೋದದ್ದು ಎಂಬ ಕತೆ ಬರೆದಾಗ ಅದು ಹುಟ್ಟಿಸಿದ ಬೆರಗು
ರೋಮಾಂಚನ ಅಪ್ರತಿಮವಾದದ್ದು. ಹಳ್ಳಿಯ ಸಂತೆಯೊಂದನ್ನು
ಡಿಸ್ನಿಲ್ಯಾಂಡಿನಂತೆ ಅಕ್ಷರಗಳಲ್ಲಿ ಹಿಡಿದಿದ್ದರು ಸದಾಶಿವ. ಚಂದ್ರೇಗೌಡರ
ಈ ಪ್ರವಾಸ ಲಹರಿ ಆ ಕತೆಯನ್ನು ನೆನಪಿಸಲು ಹಲವು ಕಾರಣಗಳಿವೆ.
ಇವತ್ತಿನ ಹಳ್ಳಿಗಳಲ್ಲಿ ಇಣುಕು ಹಾಕಿರುವ ರಾಜಕೀಯ, ಅವರ ಬಗಲಲ್ಲೇ
ಹರಿಯುತ್ತಿರುವ ಹಣ ಜನರ ಶಿಸ್ತಿನ ಬದುಕನ್ನೇ ನಾಶ
ಮಾಡತೊಡಗಿದೆ. ಬಡತನ ಒಂದೇ ಕೊರಗಾಗಿದ್ದ ಊರು, ಈಗ ನಾನಾ
ಕೊರಗುಗಳ ಆವಾಸಸ್ಥಾನವಾಗಿದೆ. ಹೀಗೆ ವಿಭಿನ್ನ ದುರಂತಗಳ ಒಂದು
ಉತ್ತಮ ದೃಶ್ಯ ಈ ಲಹರಿಯಲ್ಲಿದೆ.
ಲೇಖಕ ಬಿ. ಚಂದ್ರೇಗೌಡ ನಮ್ಮ ಸಾಂದರ್ಭಿಕ ಅತ್ಯುತ್ತಮ ಲೇಖಕ
ಕತೆಗಾರ. ಅದರಲ್ಲೂ ನಾಗಮಂಗಲದ ಭಾಷೆಯ ಸೊಗಡು,
ಚಂದ್ರೇಗೌಡರ ಹಾಸ್ಯದ ಚೌಕಟ್ಟಿಗೆ ಅದ್ಭುತವಾಗಿ ದಕ್ಕಿದೆ.
ಈ ಪ್ರವಾಸ ನಿಜವಾದ ಪ್ರವಾಸ ಕಥನವಲ್ಲ. ಆದರೆ ಲಂಗು ಲಗಾಮಿಲ್ಲದ,
ಗೊತ್ತು ಗುರಿಯಿಲ್ಲದ ಒಂದು ವಿಕ್ಷಿಪ್ತ ಅಲೆದಾಟದ ಈ ಪ್ರಸಂಗ
ನಗಿಸುತ್ತಲೇ ಅವನತಿಯ ಸೂಕ್ಷ್ಮವನ್ನು ವಿವರಿಸುವ ಅದ್ಭುತ
ಗದ್ಯ. . .
ಮರಳುವಿರಾ ಹೂಗಳೆ ಊರಿಗೆ - ಮಂಜುನಾಥ್ ಲತಾರವರ ಕವನ
ನಿಮ್ಮೊಡಲಂತಾಗಿ ನವಿರು ಲಯಕೆ ತಲೆಬಾಗಿ
ನಿಮ್ಮಂತಿರುವೆನೆಂದರೆ ಬೆಳಗೂ ನಿದ್ದೆಕೊಡವು
ಕೋಕಾ ಬಾಟಲಲಿ ಬಚ್ಚಿಟ್ಟುಕೊಂಡ ರಾತ್ರಿಗಳು
ಬಾಟಲಿ ಚೂರುಗಳು ಕುಯ್ದು ಗಾಯದುರಿತಗಳು
ಸತ್ತು ಬಿದ್ದಿರುವ ಬಣ್ಣದ ಗರಿಯ ನವಿಲುಗಳ ಹೆಣಗಳು. . .
ಪಕ್ಕದ ಮನೆ
ಏಡ್ಸ್‌ಗೆ ಹೊಸ ಮಾತ್ರೆ
ದೇಶದ ಪ್ರಸಿದ್ಧ ಔಷಧ ಕಂಪೆನಿ ಸಿಪ್ಲಾ, ಏಡ್ಸ್ ರೋಗಿಗಳಿಗೆ ಸಿಹಿ ಸುದ್ದಿ
ತಂದಿದೆ: ಏಡ್ಸ್ ರೋಗ ನಿವಾರಿಸುವ ವೈರಾಡೆ ಮಾತ್ರೆಯನ್ನು
ಸಿದ್ಧಪಡಿಸಿರುವ ಮೂಲಕ. ಸಿಪ್ಲಾ ಸಿದ್ಧಪಡಿಸಿರುವ ವೈರಾಡೆ
ಮಾತ್ರೆಯೊಂದರ ಬೆಲೆ ೧೬೭ ರೂ. ಏಡ್ಸ್ ರೋಗಿಗಳು ದಿನಕ್ಕೆ
ಒಂದರಂತೆ ಈ ಮಾತ್ರೆ . . .
ಅಮಾನತು ಮತ್ತು ಅವಮಾನ
`ಮೈ ಭಾರ' ಹೆಚ್ಚಿಸಿಕೊಂಡ ನಟಿಯರನ್ನು ಪ್ರೇಕ್ಷಕರು
ತಿರಸ್ಕರಿಸುವುದು ರೂಢಿ. ಆದರೆ ಇಂಡಿಯನ್ ಏರ್‌ಲೈನ್ಸ್‌ನ ೪೦
ಗಗನಸಖಿಯರು ಮೈ`ಭಾರ' ಮಾಡಿಕೊಂಡಿದ್ದಕ್ಕಾಗಿ
ಅಮಾನತುಗೊಂಡಿದ್ದಾರೆ. ಅವರೇನು ಸುಮ್ಮನಿರುತ್ತಾರೆಯೇ? . . .
ಭಾರತೀಯ ಲೇಖಕಿಗೆ ಬೂಕರ್
ಭಾರತೀಯ ಮೂಲದ ಲೇಖಕಿ ಕಿರಣ್ ದೇಸಾಯಿ ಈ ಬಾರಿಯ ಪ್ರತಿಷ್ಠಿತ
ಬೂಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದರೊಂದಿಗೆ ಬೂಕರ್ ಪ್ರಶಸ್ತಿ
ಗಳಿಸಿದ ಮೂರನೇ ಭಾರತೀಯರೆಂಬ ಹೆಗ್ಗಳಿಕೆಗೆ ಅವರು
ಪಾತ್ರರಾಗಿದ್ದಾರೆ. `ದಿ ಇನ್‌ಹೆರಿಟೆನ್ಸ್ ಆಫ್ ಲಾಸ್ ಕಿರಣ್ ದೇಸಾಯಿಗೆ
ಅಂತಾರಾಷ್ಟ್ರೀಯ ಪ್ರಶಸ್ತಿ ತಂದುಕೊಟ್ಟ ಕಾದಂಬರಿ. ಇದು ಈ ಲೇಖಕಿಯ
ಎರಡನೇ ಕಾದಂಬರಿ. ಪ್ರಶಸ್ತಿ ೫೦,೦೦೦ ಪೌಂಡ್. . .
ಬಲಹೀನ ಮನಸ್ಸು ಮತ್ತು ಆತ್ಮಹತ್ಯೆ - ಆರೋಗ್ಯ
ಆತ್ಮಹತ್ಯೆಯ ನಿರ್ಧಾರವೇ ವಿಚಿತ್ರ.
ನಿನ್ನೆಯ ದಿನ ಜೀವನೋತ್ಸಾಹಿಯಂತೆ ಕಂಡ ಹುಡುಗ/ಗಿ, ಇಂದು
ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಬರುತ್ತದೆ; ವಿದ್ಯಾರ್ಥಿಗಳಿಗೆ
ಶ್ರದ್ಧೆಯಿಂದ ಪಾಠ ಹೇಳಿ ಕೊಡುತ್ತಿದ್ದ ಉಪನ್ಯಾಸಕ ಇದ್ದಕ್ಕಿದ್ದಂತೆ
ಆತ್ಮಹತ್ಯೆ ಮಾಡಿಕೊಂಡು ಎಲ್ಲರಲ್ಲೂ ಪ್ರಶ್ನೆ ಉಳಿಸಿ ಹೋಗುತ್ತಾನೆ;
ಹಲವು ಜನರ ಎದೆಯಲ್ಲಿ ನಡುಕ ಹುಟ್ಟಿಸಿ ಮೆರೆದ ಪೊಲೀಸ್. . .
ಜಾಣೆಯಾಗಿರು ನನ್ನ ಮಲ್ಲಿಗೆ - ಧಾರವಾಹಿ - ಅಧ್ಯಾಯ ೨
ಯುಕ್ತಾಗೆ ಆದಿತ್ಯನ ಕಟುಮಾತು ಜೀರ್ಣಿಸಿಕೊಳ್ಳಲು ಕಷ್ಟವಾಯಿತು.
ಕಷ್ಟದಿಂದ ಉಸಿರಾಡುತ್ತಾ,
``ನಿಮಗೆ ದೂರದೃಷ್ಟಿ, ಸಮೀಪ ದೃಷ್ಟಿಯ ಸಮಸ್ಯೆ ಇಲ್ಲ ತಾನೇ?
ಸರಿಯಾಗಿ ನೋಡಿ ಹೇಳಿ" ಎಂದಳು. ``ನಂದೂ ಹದ್ದಿನ ಕಣ್ಣು. ಈ
ಕುರ್ಚಿಯಲ್ಲಿ ಕುಳಿತು, ಎಸ್ಟೇಟ್ ಮೂಲೆ ಮೂಲೆ ನೋಡಬಲ್ಲೇ"
ಆದಿತ್ಯ ಮುಗುಳ್ನಕ್ಕ. . .
ಸ್ಲಿಂ ಅಂಡ್ ಟ್ರಿಂ
ದೀಪಿಕಾ ಹೇಗಿದ್ದಾಳೆ? ಎಂದು ಯಾರನ್ನಾದರೂ ಕೇಳಿದರೆ ಬರುವ
ಉತ್ತರ ಒಂದೇ; `ಕಬ್ಬಿನ ಜಲ್ಲೆಯಂತಿದ್ದಾಳೆ!' ಹೌದು, ಕಬ್ಬಿನ
ಜಲ್ಲೆಯಂತೆ ಕಣ್ಣಿಗೆಲ್ಲ ಅಂದ ನೀಡುತ್ತ ಮನಸ್ಸು ತುಂಬಿಕೊಳ್ಳುವ
ಹುಡುಗಿ ದೀಪಿಕಾ. ಈ ಹುಡುಗಿಯನ್ನು ಕನ್ನಡದ ತೆರೆಗೆ ತರುವ
ಮನಸ್ಸು ಮಾಡಿದ ಇಂದ್ರಜಿತ್ ಅವರ ಸಾಹಸದ ಹಿನ್ನೆಲೆಯಾದರೂ
ಏನು? ಅಂಥದ್ದೇನಿಲ್ಲ. ಇಂದ್ರಜಿತ್ ನಾಯಕಿಯರನ್ನು. . .
ಮುಂಗಾರು ಮಳೆಯಲ್ಲಿ ಪಲ್ಲಕ್ಕಿ ಏರಿದವರು
ಕಾಲವೇ ಎಲ್ಲಕ್ಕೂ ಉತ್ತರಿಸುತ್ತದೆ ಎಂಬ ನಾಣ್ಣುಡಿಗೆ ಅದೆಷ್ಟು ಮಾನ್ಯತೆ
ಇದೆಯೋ ಗೊತ್ತಿಲ್ಲ. ಆದರೆ ಈ ಇಬ್ಬರು ಹುಡುಗರ ವಿಷಯದಲ್ಲಿ ಕಾಲ
ಸಕಾಲದಲ್ಲಿ ಉತ್ತರಿಸಿದೆ. ಕೊಂಚ ಹಿಂದಾದರೂ ಅದು ಪಕ್ವವಾಗುತ್ತಿರಲಿಲ್ಲ,
ತಡವಾಗಿದ್ದರೂ ಅದಕ್ಕೆ ಬೆಲೆಯಿರುತ್ತಿರಲಿಲ್ಲ. ಪ್ರೇಮ್‌ಕುಮಾರ್
ಮತ್ತು ಗಣೇಶ್ ಈಗ ಬೆಳ್ಳಿತೆರೆಯಲ್ಲಿ ಬಲವಾದ ಕಾಲೂರಿರುವ ಯಂಗ್
ಎನರ್ಜಿಟಿಕ್ ನಾಯಕರು. . .
`...ತನನಂ' ವರೆಗೆ ಐದು ಗಾವುದ ದೂರ...
ಮೊದಲ ಚಿತ್ರ `ದೇವೀರಿ'ಯಲ್ಲೇ ಪ್ರಶಸ್ತಿ ಪಡೆದ ಕನ್ನಡದ ಈಗಿನ
ಏಕೈಕ ನಿರ್ದೇಶಕಿ ಕವಿತಾ ಲಂಕೇಶ್ ತಮ್ಮ ಐದು ಚಿತ್ರಗಳ ಪಯಣದ
ಅನುಭವವನ್ನು ಚಿತ್ರಿಸಿದ್ದಾರೆ. ಅಲೆಮಾರಿ, ಬಿಂಬ, ಪ್ರೀತಿ ಪ್ರೇಮ
ಪ್ರಣಯ ಹಾಗೂ ಇನ್ನೂ ಬಿಡುಗಡೆಯಾಗಬೇಕಿರುವ ತನನಂ
ತನನಂ ವರೆಗೆ. . .
ಡ್ಯಾಮ್ ಲಕ್ಕಿ
ಎರಡು ವರ್ಷಗಳ ಹಿಂದೆ ಮಾನ್ಯ ವಿಷ್ಣುವರ್ಧನ್ ಜೊತೆ `ವರ್ಷಾ'
ಚಿತ್ರದಲ್ಲಿ ನಟಿಸಲು ಬಂದಾಗ ಈ ಪೀಚು ಹುಡುಗಿಗೆ ಕನ್ನಡದಲ್ಲಿ
ಮಾನ್ಯತೆ ಸಿಗಬಹುದೆ? ಅಥವಾ ಈಗಾಗಲೇ ಬಂದಿರುವ ಹತ್ತು ಜನರ
ಪೈಕಿ ಹನ್ನೊಂದನೆಯವಳಾಗಿ ವಾಪಾಸಾಗಬಹುದೇ ಎಂದು
ಸಂಶಯಿಸಿದವರೇ ಬಹಳ ಮಂದಿ. ಆದರೆ ಮಾನ್ಯ ತುಂಬಾ ಲಕ್ಕಿ...
ಈ ವರ್ಷ ನಿಮಗೆ ಹೇಗೆ?
ಪ್ರಿಯ ಓದುಗ ಮಹಾಶಯರೇ, ಮಹಾಮಹಿಮನಾದ ರಾಶಿ
ಅಧಿಪತಿಯು ನಿಮಗೆಲ್ಲರಿಗೂ ಧೈರ್ಯ, ಶಾಂತಚಿತ್ತ ಕರುಣಿಸಲಿ. ಈ
ವರ್ಷ ಹೇಗೆ, ಏನು, ಎತ್ತ, ಯಾಕೆ, ಯಾವುದು, ಯಾರದು,
ಯಾರು, ಯಾವಾಗ, ಎಲ್ಲಿ ಇತ್ಯಾದಿ ಭವಿಷ್ಯ ಓದಿ ತಾವೆಲ್ಲ
ಚಿಂತಾಕ್ರಾಂತರಾಗುವ ಸಂಭವವಿದೆ. ಪ್ರತಿನಿತ್ಯ ದಿನಪತ್ರಿಕೆ
ಓದುವವರಿಗೆ ಇದೆಲ್ಲ ಹೊಸತಲ್ಲ.
ಮೇಷ, ವೃಷಭ ಇತ್ಯಾದಿ ರಾಶಿಗೆ ಈ ವರ್ಷವೂ ಯಾವ ಯಾವ ಗ್ರಹ
ಅಟಕಾಯಿಸಿಕೊಂಡಿದೆ ಎಂಬುದನ್ನು ನೋಡೋಣ. ಮೊದಲಿಗೆ ದೀಪಾವಳಿ ಹಬ್ಬದ
ಶುಭಾಶಯಗಳನ್ನು ಹೇಳುತ್ತಾ ರಾಶಿ ಪುರುಷನ ಪಥ ಯಾವ
ದಿಕ್ಕಿಗಿದೆ ಎಂದು ನೋಡೋಣ.
ಮೂರು ಕಾಲು ಒಂದು ರೆಕ್ಕೆಯ ನೇರಳೆ ಬಣ್ಣದ ಅಶ್ವವನ್ನೇರಿ
ರಾಶಿಪುರುಷನು ಈ ವರ್ಷದ ಆದಿಯಲ್ಲಿ ಆಗ್ನೇಯ ಮತ್ತು ದಕ್ಷಿಣ
ದಿಕ್ಕುಗಳ ನಡುವೆ ಹಾದು ಮಂಗಳೂರಿನ ಮೇಲೆ ಹೋಗುವಾಗ
ಕೋಮುದಳ್ಳುರಿಯ ಹೊಗೆ ಘಾಟು ಮೂಗಿಗೆ ಬಡಿಯಲಿದೆ. ರಾಶಿ
ಪುರುಷನಿಗೆ ಕೆಮ್ಮು ಪ್ರಾರಂಭವಾಗಿ ಕೆಮ್ಮುತ್ತಾ ಕೆಮ್ಮುತ್ತಾ
ಕೆಮ್ಮಣ್ಣುಗುಂಡಿ, ದತ್ತಪೀಠ ಮೂಲಕ ಹಾದು ಹೋಗುತ್ತಾನೆ- ಅಲ್ಲಿ
ಮತ್ತೂ ಬಿಸಿಗಾಳಿ ತಟ್ಟಿ ಆತನ ಪೃಷ್ಠ ಭಾಗಕ್ಕೇ ಬಡಿದು ರಾಶಿ
ಪುರುಷನು ಕಾಬೂಲಲ್ಲಿ ಬಂದು ಬೀಳಲಿದ್ದಾನೆ. ಮುಂದೆ ಅವನ ಭವಿಷ್ಯ
ಏನೂಂತ -ಹೇಳಲು ದುಃಖವಾಗುತ್ತಿದೆ. ಓದುಗ ಮಹಾಶಯರೇ,
ಇರಲಿ, ಅವನ ಭವಿಷ್ಯಕ್ಕಿಂತ ಮೊದಲು ಈ ವರ್ಷ ಕರ್‍ನಾಟಕದ
ಭವಿಷ್ಯವೇನು ಎಂದು ನೋಡೋಣ. . .
ಶಿಲೆ - ಮಂಗಳಾ ಕುಮಾರ್‌ರವರ ಕತೆ
ಓಹೊ,
ಈಗ ನನ್ನೆಡೆಗೆ ಬರುತ್ತಿರುವ ಮನುಷ್ಯನನ್ನು
ನೋಡಿ.ಪಾದರಕ್ಷೆಗಳನ್ನು ಇಲ್ಲಿ ಬಿಡಿ ಎಂದು ನನ್ನ ಎಡಪಕ್ಕಕ್ಕೆ
ಐವತ್ತು ಮಾರು ದೂರದಲ್ಲೇ ಬೋರ್ಡು ಹಾಕಿದ್ದರೂ ಇವನು
ಮಾತ್ರ ಯಾವಾಗಲೂ ದೇವಸ್ಥಾನದ ಹತ್ತಿರವೇ ಚಪ್ಪಲಿ
ಬಿಡುವುದು. ಇಲ್ಲಿನ ಭಾರತೀಯರೆಲ್ಲ ಸೇರಿ ಕಟ್ಟಿಕೊಂಡಿರುವ
ಸಂಘಕ್ಕೆ ಇವನೇ ಅಧ್ಯಕ್ಷ. . .
ಅಮೇರಿಕಾದಿಂದ ರವಿ
ಕೊಂದವನ ಮನೆಯವರಿಗೆ ಪ್ರೀತಿ ತೋರಿದವರು
ಆಮಿಷ್ ಜನರ ಹಿನ್ನೆಲೆ: ೧೭ನೇ ಶತಮಾನದಲ್ಲಿ ಜೇಕಬ್ ಅಮ್ಮನ್‌ನಿಂದ
ಯೋರೋಪ್‌ನಲ್ಲಿ ಆರಂಭವಾದದ್ದು ಅಮಿಷ್ ಚಳವಳಿ. ಇದಕ್ಕೆ ಮೂಲ
ಮೆನ್ನೊನೈಟ್ಸ್ ಎಂಬ ಮತ್ತೊಂದು ಕ್ರಿಶ್ಚಿಯನ್ ಚಳವಳಿ.
ಮೆನ್ನೊನೈಟ್ಸ್ ಆಧುನಿಕರಣಗೊಳ್ಳುತ್ತಿದೆ ಎನ್ನಿಸಿದಾಗ ಮತ್ತೆ ಅದರ
ಮೂಲ ಕಟ್ಟುಪಾಡುಗಳನ್ನು ಯಾವುದೇ ರಾಜಿಯಿಲ್ಲದೆ
ಉಳಿಸಿಕೊಳ್ಳಬೇಕು ಎಂದು ಹುಟ್ಟಿದ್ದು ಆಮಿಷ್ ಗುಂಪು. ೧೮ನೇ
ಶತಮಾನದ ಆರಂಭದಲ್ಲಿ ಕೆಲವು ಆಮಿಷ್ ಜನ ಅಮೇರಿಕಕ್ಕೆ ವಲಸೆ
ಬಂದರು. ಹೀಗೆ ಬಂದವರು ಈಗ ಈ ದೇಶದ ೨೨ ರಾಜ್ಯಗಳಲ್ಲಿ ಅಲ್ಲಲ್ಲಿ
ವಾಸಿಸುತ್ತಿದ್ದಾರೆ. ಅಧಿಕೃತವಾಗಿ . . .

ಇಂದೇ ಚಂದಾದಾರರಾಗಿ
ವಿಕ್ರಾಂತ ಕರ್ನಾಟಕದ
ಒಂಬತ್ತನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಎಂಟನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಏಳನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಆರನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಐದನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ನಾಲ್ಕನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಮೂರನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ದ್ವಿತೀಯ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ ಪ್ರಥಮ ಸಂಚಿಕೆಯಲ್ಲಿ
. . .