ಸಾವಯವ ಬೇಕು, ರಾಸಾಯನಿಕ ಬೇಡ, ಯಾಕೆ ?
ಇಲ್ಲಿದೆ ನೋಡಿ ಉತ್ತರ !
ಸಾವಯವ
ಗೊಬ್ಬರಗಳ ಒಳ್ಳೆತನ :
೧) ಶೇ.
೧೦೦ರಷ್ಟು ಕೃಷಿ ತ್ಯಾಜ್ಯ ವಸ್ತುಗಳನ್ನು ಸಾವಯವ ಮೂಲದಲ್ಲಿ ಹೊಂದಿದೆ.
೨) ಎಲ್ಲಾ ಪೋಷಕಾಂಶಗಳು
ದೊರೆಯುತ್ತವೆ.
೩) ಭೂಮಿಯ
ಸಂರಚನೆ ಉತ್ತಮಗೊಂಡು ಉತ್ಪಾದನಾ ಶಕ್ತಿ ಹೆಚ್ಚುತ್ತಾ ಹೋಗುತ್ತದೆ.
೪) ಮಣ್ಣಿನ
ತಂಪು ಮತ್ತು ಉಷ್ಣಾಂಶಗಳು ಸಮತೋಲಿತವಾಗಿ ರೋಗ ಮತ್ತು ಕೀಟಾಣುಗಳು
ಹದ್ದುಬಸ್ತಿನಲ್ಲಿರುತ್ತವೆ.
೫) ನಿಧಾನವಾಗಿ ಸ್ವಲ್ಪಸ್ವಲ್ಪವಾಗಿ
ಪೋಷಕಾಂಶಗಳನ್ನು ಗಿಡಗಳಿಗೆ ನೀಡುತ್ತವೆ. ಗೊಬ್ಬರಕ್ಕಾಗಿ ಮಾಡಿದ ಪೂರ್ಣ ಖರ್ಚಿಗೆ ಲಾಭ
ದೊರೆಯುತ್ತದೆ.
೬) ಈ
ಗೊಬ್ಬರಗಳನ್ನು ಹಾಕಿ ಬೆಳೆದ ಬೆಳೆಗಳು ಹೆಚ್ಚು ಇಳುವರಿ ಕೊಡುತ್ತದೆ. ರೋಗ ನಿರೋಧಕ
ಶಕ್ತಿ ಬೆಳೆಸಿಕೊಳ್ಳುತ್ತದೆ.
೭) ಈ
ಗೊಬ್ಬರಗಳನ್ನು ಬಳಸುವುದರಿಂದ ಪರಿಸರ ಸುಂದರವೂ ಸ್ವಚ್ಛವೂ ಆಗುತ್ತದೆ.
ರಾಸಾಯನಿಕ
ಗೊಬ್ಬರಗಳ ಕೆಟ್ಟ ಗುಣ
೧) ಇದು
ರಾಸಾಯನಿಕ ಮೂಲವಾಗಿದೆ.
೨) ೩ ಅಥವಾ ೪ ಪೋಷಕಾಂಶಗಳು
ದೊರೆಯುತ್ತವೆ.
೩) ಭೂಮಿಯ
ಸಂರಚನೆ ಕೆಡುತ್ತದೆ ಮತ್ತು ಇದರ ಬಳಕೆಯಿಂದ ಕ್ರಮೇಣ ಉತ್ಪಾದಕ ಶಕ್ತಿ
ಕುಂಠಿತಗೊಳ್ಳುತ್ತದೆ.
೪) ಭೂಮಿಯಲ್ಲಿರುವ
ಸೂಕ್ಷ್ಮ ಜೀವಾಣುಗಳು ಮತ್ತು ಎರೆಹುಳುಗಳು ಸತ್ತಹೋಗಿ ಮಣ್ಣಿನ ರಸಸಾರದಲ್ಲಿ
ಏರುಪೇರಾಗಿ ರೋಗ ಮತ್ತು ಕೀಟಗಳು ಶಕ್ತಿಯುತವಾಗುತ್ತವೆ.
೫) ಪೋಷಕಾಂಶಗಳು
ನೀರಿನಲ್ಲಿ ತಕ್ಷಣ ಕರಗಿ ಹೋಗುವುದರಿಂದ ಮತ್ತು ಸ್ವಲ್ಪ ಕಾಲದಲ್ಲಿ ಮುಗಿದು ಖರ್ಚಿನ ಪೂರ್ಣ
ಲಾಭ ದೊರೆಯುವುದಿಲ್ಲ.
೬) ಕೀಟ,
ರೋಗಬಾಧೆ ಜಾಸ್ತಿ. ಈ ಗೊಬ್ಬರ ಹಾಕಿದ ತಕ್ಷಣ ಬೆಳೆ ಅಸಾಧಾರಣವಾಗಿ
ಬೆಳೆಯುವುದರಿಂದ ಗಟ್ಟಿಮುಟ್ಟಾಗುವುದಿಲ್ಲ.
೭) ನೆಲ, ಜಲ, ವಾಯು
ಎಲ್ಲವೂ ಮಲಿನಗೊಳ್ಳುತ್ತದೆ.
(ಸಿರಿ ಸಮೃದ್ಧಿಯಲ್ಲಿ
ಪ್ರಕಟಿತ)