Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 28 July 2008 10:36 PM

ನಿನ್ನ ಮನೋಹರ ನೇತ್ರ!

ವಿಜಯಶೀಲ

mavipra@gmx.de

 

 

ದಟ್ಟಡವಿಯಲಿ ಹರಡಿದ್ದವು ಕೋಟಿ ಮರಗಿಡಗಳು

ಆದರೂ ನಾನೊಂದು ವೃಕ್ಷವ ಮೋಹಿಸಿ ಮೆಚ್ಚಿದ್ದೆ

ಅಲ್ಲಿದ್ದವು ಚಿತ್ರ ವಿಚಿತ್ರ ವಿವಿಧ ಪಕ್ಷಿ ಸಂಕುಲಗಳು

ಆದರೂ ನಾನೊಂದು ಮುದ್ದು ಗಿಳಿಯ ಕಂಡು ಹುಚ್ಚಾದೆ!

ಎದ್ದಾಡುತ್ತಿದ್ದವು ಪರಿಪರಿಯ ನೂರಾರು ಪ್ರಾಣಿಗಳು

ಆದರೂ ನಾನೊಂದು ಚೆಲುವ ಜಿಂಕೆಗೆ ಮನವಿಟ್ಟಿದ್ದೆ

 

ಅಂತ್ಯವಿಲ್ಲದ ಅನಂತಾನಂತ ಆಗಸದೊಳು

ಕೋಟಿ ಕೋಟ್ಯಾಂತರ ತಾರೆಗಳು

ಆದರೂ ನನ್ನ ಹೃದಯವ ಗೆದ್ದದ್ದು

ಒಂದೇ ಒಂದು ದಿವ್ಯ ನಕ್ಷತ್ರ

ಎನ್ನ ಸೆಳೆದು ಮನ ಮೋಹಿಸಿ ಮಿಂಚಿದ್ದದ್ದು

ನಿನ್ನ ಮನೋಹರ ನೇತ್ರ!

 

ಇಳೆಯಮೇಲೆ ಹರಡಿ ಹಾರಾಡುತ್ತಿವೆ

ಕೋಟಿಕೋಟ್ಯಾಂತರ ಶ್ರವ್ಯದ ದನಿ

ಆದರೂ ನಾನಿನಿಸುವೆನು ತೀರ ತಲ್ಲೀನನಾಗಿ

ನಿನ್ನ ಬಲು ಮುದ್ದಿನ ಧ್ವನಿ!

 

ಇಹಲೋಕದಲಿ ನಮ್ಮ ನಾಡಿನಲಿ

ಅಸಂಖ್ಯ ಮುಗ್ಧ ಸ್ವಪ್ನಸುಂದರಿಯರು

ಆದರೂ ನನ್ನೊಳ ಪ್ರೇಮಮಂದಿರವಾಕ್ರಮಿಸಿ

ನಿನ್ನ ಪ್ರೀತಿಯನೇ ಬಯಸಿ ಬಲುಜೋರು!

 

ಗಳಿಗೆಗಳಿಗೆಗೂ ದಿನದಿನವೂ ಪ್ರೇಮಪ್ರಳಯರಾಸಿ

ತೀರ ನರಳಿ ನೊಂದಿರುವೆ ನಾನು

ಬಳಿಗೆ ಬಂದು ಎನ್ನತಾವು ಮನೋಹರಿ ಪ್ರೇಮಿಸಿ

ತೋರೆನಗೆ ವಿಶ್ವಾಸದ ಪ್ರೀತಿ ನೀನು!

 

ಇಲ್ಲದಿರೆ ನಿನ್ನ ಪ್ರೀತಿ ಎನಗಾಗಿ

ಉರಿದು ಸುಡುವುದೆನ್ನ ಮನ ಪ್ರೇಮಕಾಮದ ದಗೆ

ಉಸುರಾಡಲಾಗದು ಸರ್ವಸಾಮಾನ್ಯನಾಗಿ

ಮುರಿದು ಪಂಚೇಂದ್ರಿಯಗಳ ತನ ಕುಸಿದ ಬಗೆ!

 

ತನುವಿನ ಚತುರತೆಯು ಛಿದ್ರಚೂರಾಗಿ

ಇರುವಾಗ ಎನ್ನ ಪ್ರೇಮದ ಹುಚ್ಚು ಜೋರಾಗಿ

ಆದರೂ ಆಗ ಬಯಸುವೆ ಇನ್ನೂ ಹೆಚ್ಚಾಗಿ

ಉಳಿದ ಜಗವೆನಗಾಗ ನಿರ್ಲಕ್ಷ್ಯವಾಗಿ

ನಿನ್ನ ಮೆಚ್ಚಿಗೆಯ ಪ್ರೇಮದಾಲಿಂಗನ!

ಅಂದೆನಗೆ ಸಂತೋಷದ ಪುನರ್ಜೀವನ!

 

ಇನ್ನಷ್ಟು

ಅವಳ ನೋಟ

ಚೇತನ್ ಬರೆದ ಚುಟುಕಗಳು

ನಿನ್ನ ಒಲವ ನೆನಪಿನಲ್ಲಿ. . .

ಜಿ.ಎಸ್.ಶಿವರುದ್ರಪ್ಪರವರ ಮೆಚ್ಚಿನ ಹತ್ತು ಕವನಗಳು

ಗೆಳೆಯನ ಮಾತು 

ಭಾವನೆ-ಬವಣೆ

ಚೆಲುವೆ

ಪ್ರೇಮಿಗಳಾ ಹಬ್ಬ

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com