Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 28 July 2008 10:36 PM

ನನ್ನವಳು

ಶ್ರೀನಿಧಿ ಡಿ.ಎಸ್, ಬೆಂಗಳೂರು,

shreenidhids@gmail.com

 

 

ನನ್ನವಳ ಮೊಗದಲ್ಲಿ ಸಣ್ಣನೆಯ ಕಿರುನಗೆಯು,

ಕಾರಣವದೇನೆಂದು ಕೇಳಬಹುದೆ?

ತುಟಿಯಂಚ ನಗು ಹಿಂದೆ ಏನದೋ ತುಂಟತನ

ಮನದೊಳಗೆ ಏನಿದೆಯೋ ಅರಿಯಬಹುದೆ.

 

ಅನುನಯದ ನಡೆ ನುಡಿಯು, ತಣ್ಣನೆಯ ಮಾತುಗಳು

ಹೊಸದೇನೋ ಹುನ್ನಾರ ನಡೆಯುತಿಹುದು

ನಿತ್ಯವೂ ಇಲ್ಲದಿಹ ಬೇರೆಯದೆ ನೋಟವಿದು

ನನಗೇತಕೋ ಶಂಕೆ ಮೂಡುತಿಹುದು

 

ಹೊಸದು ಸೀರೆಯು ಬೇಕೆ, ಹಬ್ಬ ಸನಿಹದೊಳಿಲ್ಲ

ಅಮ್ಮ ಬರುವಳೆ ತವರು ಮನೆಯಿಂದ

ಚಿನ್ನದಾ ಸರಕಿನ್ನು ತಿಂಗಳೂ ಕಳೆದಿಲ್ಲ

ವಿಷಯವೇನೆಂದೊಮ್ಮೆ ಹೇಳಿದೊಡೆ ಚೆಂದ.

 

ಒಳಮನೆಯ ಗೋಡೆಯಲಿ ಕಂದನಾ ಚಿತ್ರಪಟ

ಮೊಗದಳಗದೇನದೋ ಹೊಸಬಗೆಯ ಲಜ್ಜೆ,

ಹೊಸ ಜೀವ ಬರುತಿಹುದೆ ನಮ್ಮ ಈ ಬಾಳೊಳಗೆ

ನಾಲ್ಕಿದ್ದ ಎಡೆಗೆ ಆರಾಗುವುದೆ ಹೆಜ್ಜೆ!

 

ಓ ಜೀವ ಸಖಿ ನನಗೆ ಮಾತೆ ಹೊರಡುತಲಿಲ್ಲ,

ಆನಂದ, ಆಶ್ಚರ್ಯ ಎದೆ ತುಂಬಿದೆ.

ನಿನ್ನೊಳಗ ಬಾಳ ಕುಡಿ ಚೈತನ್ಯ ತಂದಿಹುದು

ಜೀವನಕೆ ಹೊಸ ಅರ್ಥ ತಾ ಮೂಡಿದೆ.

 

ಇನ್ನಷ್ಟು

ಕವನ

ನಿನಗಾಗಿ

ಕಾರಣ (ಹನಿಗವನ)

ಪ್ರಿಯ ಗೆಳತಿ

ನಾನು-ನೀನು

ಆತ್ಮವಿಲ್ಲದವಳ ಹೇಗೆ ನೋಡಲಿ

ಕನ್ನಡತೀ...

 

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com