ಕವನ
ಶ್ರೀನಿವಾಸ
ಮಹೇಂದ್ರಕರ್
ನಿನ್ನ ನೆನೆದು ಬರೆಯುತಿರೆ ಕವನಾ...
ಎದೆಯಲ್ಲಿ ಧಿರನ ಧಿರನ..........
ನಿನ್ನ ಅಂದ ಹೊಗಳೊ ಸಲುವಾಗಿ
ಪದಗಳಾ ನಡುವೆ ಕದನಾ..........
ಕೊಪ್ಪರಿಗೆ ಕೆಲಸ ಮುಗಿಸಿಟ್ಟು ದಣಿವ
ನನ್ನ ಮನಕೆ ಸ್ಫೂರ್ತಿಯಾ ತರುವೆ
ಮಂದಹಾಸವಾ ಮನದಿ ಬರೆಯುತ
ದಣಿವ ನೀಗಿಸುವೆ ಚೆಲುವೆ.
ಬಾಲರವಿಯ ಕೌತುಕದ ನೋಟ
ಕಣ್ಣೊಳಗೆ ಹುದುಗಿ ನಿಂದಿರುವೆ
ಆ ನೋಟದಿಂದ ಪ್ರತಿ ಘಳಿಗೆ ಮನಕೆ
ಮುಂಜಾನೆ ಸ್ಪರ್ಶವಾ ತರುವೆ.....
ನಿನ್ನ ನಗುವಿಗಾಗಿ ನುಡಿ ಮುತ್ತಿಗಾಗಿ
ಚಡಪಡಿಸಿ ಕಾದು ನಿಂದಿರುವೆ
ಅರಿತು ಅರಿಯದಾ ಜಾಣೆ ನೀನು
ಮರೆಮಾಚಿ ಯಾಕೆ ನಟಿಸಿರುವೆ?
ಬರಿ ಅಂದಕಾಗಿ ಬರಿ ಚೆಂದಕಾಗಿ
ಈ ಕವನವಲ್ಲ ಕೆಳಮ್ಮಾ
ಮನಸಿಗಾಗಿ ನಿನ್ನ ಕನಸಿಗಾಗಿ ಇದು
ಎಂಬ ನಿಜವ ನಂಬಮ್ಮ......ನೀ
ಎಂಬ ನಿಜವ ನಂಬಮ್ಮ..........
ಇನ್ನಷ್ಟು
ಕಾರಣ (ಹನಿಗವನ)
ಪ್ರಿಯ
ಗೆಳತಿ
ನಾನು-ನೀನು
ಆತ್ಮವಿಲ್ಲದವಳ ಹೇಗೆ ನೋಡಲಿ
ಕನ್ನಡತೀ...
ಬದುಕಿನ ಗುಟ್ಟು