ಕನ್ನಡತೀ...

ಪ್ರೇಮಶೇಖರ
cherryprem@rediffmail.com
ಮಂಗಳೂರಿನ ಹುಡುಗಿಯರು
ಭಾವನೆಗಳೇ ಇಲ್ಲದ ಬರಡು
ಬೇತಾಳಗಳು
ಮಲೆನಾಡ ಬೆಡಗಿಯರೋ
ಅಬ್ಬ...! ಕುದಿವ ಹಂಡೆ
ನವಭಾವಗಳು ಉಕ್ಕಿ ಹರಿವ
ಹುಚ್ಚುಹೊಳೆದಂಡೆ
ಮಹಾರಾಜರ ಮೈ
ಸೂರಿನಲ್ಲಿ ಈಗ ಮಹಾ
ರಾಣಿಯರಾರೂ ಇಲ್ಲ
ಹೆಜ್ಜೆಹೆಜ್ಜೆಗೆ ಎದುರು `ಸಿಕ್ಕು'
ವವರು ಸೋಗಲಾಡಿಯರು
ಒಳಗೊಂದು ಹೊರಗೊಂದು
ಮಾಯಾಂಗನೆಯರು
ಒಂದು ಕೇಜಿ ಹೆಣ್ತನ
ಕಸು ಮೂರು ಕಪ್
ಸಣ್ಣಗೆ ಹೆಚ್ಚಿದ ಎರಡು
ದೊಡ್ಡ ಸೈಜಿನ ನಗೆಗಳು
ಎರಡು ಚಮಚ ನಾಚಿಕೆ
ಒಂದು ಎಸಳು ಅಳು
ಚಿಟಿಕೆ ಕೋಪ
ಮುನಿಸು... ರುಚಿಗೆ ತಕ್ಕಷ್ಟು
ಶುದ್ಧ ಲವಲವಿಕೆಯಲ್ಲಿ
ಹದವಾಗಿ ಹದಿನಾರು ವರ್ಷ
ಹುರಿದರೆ... ತುಂಬುತ್ತದೆ ಕಣ್ಣು
ಧಾರವಾಡದ ಹೆಣ್ಣು
ಧಾರವಾಡದ ಹೆಣ್ಣು
ದಾಳಿಂಬೆ ಹಣ್ಣು
ಜತೆಗಿದ್ದರೆ ಈ ಬದುಕು
ಓಹ್ ಅದೆಷ್ಟು ಚೆನ್ನು!
ಇನ್ನಷ್ಟು
ಅವಳ ನೋಟ
ಚೇತನ್ ಬರೆದ ಚುಟುಕಗಳು
ನಿನ್ನ ಒಲವ
ನೆನಪಿನಲ್ಲಿ.
. .
ಜಿ.ಎಸ್.ಶಿವರುದ್ರಪ್ಪರವರ ಮೆಚ್ಚಿನ ಹತ್ತು ಕವನಗಳು
ಗೆಳೆಯನ ಮಾತು
ಭಾವನೆ-ಬವಣೆ
ಚೆಲುವೆ
ಪ್ರೇಮಿಗಳಾ ಹಬ್ಬ