ನಿನ್ನ ಒಲವ ನೆನಪಿನಲ್ಲಿ. . .
ಪ್ರೀತಿಸುವ ಹುಡುಗ ಅಥವ ಹುಡುಗಿ ಮೋಸ ಹೊದಾಗ ತಮ್ಮ ಪ್ರೀತಿಯನ್ನ
ನೆನೆಸಿಕೊಂಡು ತಮ್ಮ ತಮ್ಮಲ್ಲೇ ಮಾತಾಡಿಕೊಳ್ಳುವ, ಕೊರಗುವ ಕಲ್ಪನೆ ಮಾಡಿಕೊಂಡು ಮತ್ತೊಂದು ಕವಿತೆಯನ್ನ ಬರಿಯಲಿಕ್ಕೆ ಪ್ರಯತ್ನ
ಪಟ್ಟಿದ್ದಾನೆ... ಇದನ್ನ ಹುಡುಗಾ ಕೂಡ ತನ್ನದೇ ಕವಿತೆ ಅಂತ ಓದಬಹುದು. ಮತ್ತೆ ಹುಡುಗಿ
ಕೂಡ! ಇಬ್ಬರಿಗು ಅನ್ವಯವಾಗುವಂತೆ ಬರಿಯಲಿಕ್ಕೆ ಪ್ರಯತ್ನಿಸುತ್ತಿದ್ದಾನೆ.
ಸೋಮು,
ಬೆಂಗಳೂರು
navila_gari@yahoo.com
ಸಾವಂತ ಸಾವಿಗೂ ಹೆದರಿರಲಿಲ್ಲ ನಾನು
ಹಾಗೆ ನಡುಮನೆಯಲ್ಲಿ ನಿಂತು ಕಣ್ಣಿನಲ್ಲೇ ಹೆದರಿಸಿ
ಆಚೆಗೆ ಕಳುಹಿಸಿದ ಹಾಗೆ ಕನಸ ಕಂಡಿದ್ದಿದೆ!
ನಾನು ನಿನಗೆ ನೆನಪಾಗಲಿಲ್ಲ ಎಂಬ ಒ೦ದೇ ಕಾರಣಕ್ಕೆ
ಬಿಕ್ಕಿ ಬಿಕ್ಕಿ ಅತ್ತಿದ್ದೂ ಇದೆ!
ನನ್ನಾ ನಿನ್ನ ನಡುವೆ ಸಾವಿರ ಮೌನಗಳಿದ್ದಾಗ್ಯು
ಆ ಮೌನದೊಳಗೆ ನಿನಗಾಗಿ ಸಾವಿರ ಮಾತುಗಳನ್ನಾಡಿದ್ದಿದೆ!
ನಿನ್ನ ಕಣ್ಣಾಲೆಗಳಲ್ಲಿ ನನ್ನ ಹೆಸರಿಲ್ಲದ್ದನ್ನ ನೋಡಿ
ನಾ ಮತ್ತೆ ಕಣ್ಣೀರಾಗಿದ್ದು ಇದೆ!
ನಾನು ಕತ್ತಲೆಯಲ್ಲಿರುವಾಗ ನೀ ನನಗೆ
ಬೆಳಕಾದೆ ಎ೦ದು ಲಲ್ಲೆಗರೆದಿದ್ದ ಮರೆತಿಲ್ಲ!
ಕತ್ತಲೆಯಲ್ಲಿದ್ದೇನೆ.. ನಾನೀಗ.. ನೀ ನನಗೆ ಪುಟಾಣಿ ಹಣತೆಯೂ
ಆಗಲಿಲ್ಲವೆಂಬ ನೋವ ನನ್ನಿಂದ ಮರೆಯಲಾಗುತ್ತಿಲ್ಲ!
ನಾನೇನು ನಿನ್ನ ಜೀವನವನ್ನೇ ಕೇಳಿರಲಿಲ್ಲ.. ಅತಿ ಆಸೆಯಿ೦ದ!
ಆದರೇ ಬರಡಾಗಿದ್ದ ಈ ಹೃದಯಕ್ಕೆ ನಿನ್ನ ಪ್ರೀತಿಯ
ಎರಡು ಹನಿಯನ್ನಾದರೂ ಹಂಚಬಹುದಿತ್ತಲ್ಲವೆ!
ಭಯವಾಗುತ್ತಿದೆ..ಅದೆಷ್ಟು ದೂರ!
ಒಂಟಿಯಾಗಿ ಜಯಿಸಬೇಕಂತೆ ಜೀವನದ ಹಾದಿ
ಜೀವನ ೩ ದಿನ ಅಂದವರ.....ಕೈ ಹಿಡಿದು ಕೇಳಬೇಕಿದೆ...
ನನಗಿಲ್ಲಿ ಕ್ಷಣ ಕ್ಷಣವು ಯುಗಯುಗದ ಸಮಾನ
ಒಂದಡಿ ಮುಂದಿಟ್ಟರೆ ನೋಯುತ್ತಿದೆ ಹೃದಯ.. ಜೊತೆ ನೀನಿಲ್ಲ!
ಏನೂ ತೊಚದಾದಾಗ ನಿನ್ನ ನೆನೆನೆನೆದೆ
ಎರಡು ಚಂದನೆಯ ಕವಿತೆ ಬರೆದಿದ್ದಿದೆ!
ಆದರೆ ನಿನ್ನ ಬಾಳಪುಟಗಳಲ್ಲಿ ನನ್ನ ಹೆಸರೇ ಇಲ್ಲವ೦ತೆ...
ನೋಯದೇ ಇದ್ದೀತೆ ಹೃದಯ!
ನೋವಿರಲಿ ಬಿಡು ನನಗೆ
ನೋವು-ನಲಿವಾಗೋದು
ನಲಿವು-ನೋವಾಗೋದು
ಇವೆಲ್ಲವು ಬಾಳ ಹಾದಿಯಲ್ಲಿನ ಎರೆಡು ಮುಖಗಳಿದ್ದ ಹಾಗೆ
ಆದರೆ ನನ್ನ ನೋವು ನಲಿವಾಗೋದು ಸಾಧ್ಯವ? ನಿನ್ನ ಒಲವಿಲ್ಲದೆ!