|
ಗೆಳೆಯನ ಮಾತು
ಪ್ರಶಾಂತ್
ಪಿ.ಎಂ
ಬೆಂಗಳೂರು.
pm.prashanth@siemens.com
ನನ್ನ ಗೆಳೆಯನ
ಜೊತೆಯ ಮಾತು
ಎಂದೂ ಮರೆಯಲಾಗದ
ಸವಿಯ ಮುತ್ತು.
ಇಂದು ನನಗೆ ಆ ಮಾತಿನ
ನೆನಪು ಬಂತು,
ಮನಸ್ಸು ಹಿಡಿತವಿಲ್ಲದೇ
ಹಿಂದಕ್ಕೆ ಸಾಗಿತ್ತು.
ಆ ಚೆಂದದ ದಿನಗಳ
ನೆನಪು,
ಮತ್ತೇ ತರುತ್ತಿವೆ
ಕಳೆದುಹೋದ ಅನುಭವದ ಓನಪು.
ಅಂದು ಕಳೆದ
ಕ್ಷಣಗಳ ಸೊಂಪು,
ಇಂದು ತರುತ್ತಿದೆ
ಅಂದಿನ ಪ್ರತಿಕ್ಷಣದ ಸವಿಸವಿ ಇಂಪು.
ಆ ದಿನದ ಮುಗಿಯದಂಥ
ಮಾತುಗಳು,
ಈ ದಿನವು ಮುಕ್ತಾಯದ
ಸೀಮಿತದ ಮಾತುಗಳು.
ಕಾರಣವಿಲ್ಲದ ಅಂದಿನ
ಅನುಚಿತ ಮಾತುಗಳು,
ಇಂದು ಕಾರಣವಿದ್ದರೂ,
ಮೂಕಭಾಷೆಯ `ಈ'-ಮೇಲಿನ ಮಾತುಗಳು.
ಅಂದಿನ ಸಹಜ ಗೇಲಿಯ-ಆಟದ-ಪಾಠದ
ಮಾತುಗಳು,
ಇಂದಿನ ಕೃತಕ ಪೋಲಿಯ-ಮೋಜಿನ-ಹಾಸ್ಯದ
`ಈ'-ಮೇಲಿನ ಮಾತುಗಳು.
ಎಲ್ಲಿಗೆ ಸಾಗಿದೆ ಈ ನನ್ನ-ಗೆಳೆಯನ
ಮಾತುಗಳು,
ಕಾಣದ ನಾಗರಿಕ ಸಮಾಜದ
ಪ್ರಜೆಗಳೆಂಬ ಪುರಸ್ಕೃತಕೋ, ಉದಾಸೀನದ ಭವ್ಯ ಸಾಮ್ರಾಜ್ಯದ ಆಧಿಪತ್ಯಕೋ?
-ಪಿ. ಎಂ. ಪ್ರಶಾಂತ್. |