ಚೆಲುವೆ
ಶ್ರೀನಿವಾಸ ಮಹೇಂದ್ರಕರ್, ಬೆಂಗಳೂರು
srinivasa.mahendrakar@wipro.com
ಮೆಚ್ಚಿ ನಿನ್ನ ಮೊಗ
ಅಚ್ಚು ಮಾಡಿರಲು
ಹಚ್ಚ ಹಸುರಿನ ಆಸೆ ಮೂಡಿರಲು
ಚುಚ್ಚಿ ಕೊಲ್ಲುವಾ ಮೌನವೇತಕೆ ಚೆಲುವೆ?
ನಿನ್ನ ಮಾತಿಗಾಗಿ ಕಾದು ನಿಂತಿರುವೆ
ನಿನ್ನ ನಗುವಿಗಾಗಿ ಬಿಡದೆ ತಪಿಸಿರುವೆ.
ಪ್ರೀತಿ ಕಡಲಲ್ಲಿ ಹಾಯಿ ನಡೆದಿರಲು
ನಿನ್ನಾ ತೀರದಾ ದಾರಿ ಹಿಡಿದಿರಲು
ದೂರ ದೂರಕೆ ಯಾಕೆ ಓಡಿರುವೆ ಚೆಲುವೇ?
ನಿನ್ನ ಕೋಪದಲೆಗೇ ಸಿಲುಕಿ ನಲುಗಿರುವೆ
ನಿನ್ನ ಕಾಣದಾಗಿ ಮನದಿ ನೊಂದಿರುವೆ.
ಬೆಟ್ಟದ ತುದಿಯಲ್ಲಿ ನಾನು ಇಹೆನೆಂದು
ನನ್ನ ನೋಡಲು ಹತ್ತಿ ಬಾ ಎಂದು
ಹೇಳಿ ಯಾತಕೆ ಯಾತಕೆ ಮಾಯವಾದೆ ನೀ ಚೆಲುವೇ?
ಸುಖವನೆಲ್ಲ ತೊರೆದು ಏರಿ ಬಂದಿರುವೆ
ನಿನ್ನ ಮೊಗವ ಹುಡುಕೇ ಅಲೆದು ದಣಿದಿರುವೆ
ನಿನ್ನ ಕಾಣದೇ ಬಾಳೇ ಕತ್ತಲು
ಕರುಣೆ ತೋರಿ ಬಾ ಬೆಳಕ ಚೆಲ್ಲಲು
ಉಸಿರು ಉಸಿರಲು ನಿನ್ನ ಕರೆದಿರುವೆ ಚೆಲುವೇ
ನನ್ನ ಉಸಿರ ಉಸಿರು ನೀನೆಯಲ್ಲವೇ?
ನೀನಿರದ ಬದುಕು ಬದುಕೆಯಲ್ಲವೇ.....
ಇನ್ನಷ್ಟು
ಅಮ್ಮ
ಅವಳು-ಇವಳು-ನಾನು-ಪ್ರೇಮಿಗಳು
ಕೊನೆಯ ಹನಿಯಂತೆ..
ದೇವರು
ನನ್ನವಳು
ಕವನ
ನಿನಗಾಗಿ
ಕಾರಣ (ಹನಿಗವನ)
ಪ್ರಿಯ
ಗೆಳತಿ
ನಾನು-ನೀನು
ಆತ್ಮವಿಲ್ಲದವಳ ಹೇಗೆ ನೋಡಲಿ
ಕನ್ನಡತೀ...
ಬದುಕಿನ ಗುಟ್ಟು
ನಿನ್ನ
ಮನೋಹರ ನೇತ್ರ!
ಹೃಶಿಕೇಶದಲ್ಲಿ ಗಂಗೆ
ಹೃದಯದೊಡತಿ