Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 28 July 2008 10:36 PM

ಆಮ್ಮನೆಂಬ ಮಹಾನ್ ಸುಳ್ಳಿ?.!!!

 

Somu Bengalooruಸೋಮು,

ಬೆಂಗಳೂರು

navila_gari@yahoo.com

 

 

ಕಣ್ಣೊಳಗೆ ರಕ್ತ ಬರಿಸುವ ನೋವುಗಳಿದ್ದರು
ಒಳಗೊಳಗೆ ಅಳುತ್ತಾ ಅಳುತ್ತಾ
ಇಷ್ಟಗಲ ನಗುನಗುತ್ತಿದ್ದ, ಮಿನುಗುತ್ತಿದ್ದ
ಭೂಮಿ ತೂಕದ ಅಮ್ಮಾ..ನೀನು ಸುಳ್ಳಿಯಲ್ಲವೆ?
Mother and Son
ಗುಮ್ಮಾ ಬಂದಾ ಎನ್ನುತ್ತಾ
ತುತ್ತು ತುತ್ತು ಅಮೃತವನ್ನು
ಮೋಸದಿಂದ ಬಾಯಿಗಿಟ್ಟು
ತಿನಿಸಿ ತನ್ನ ನೋವ ಮರೆಯುತ್ತಿದ್ದ ನೀನು ಸುಳ್ಳಿಯಲ್ಲವೆ?

ತುತ್ತು ಅನ್ನಕ್ಕು ಗತಿಯಿಲ್ಲದಿರುವಾಗ,
ಮಾಡಿದ ಒಂದಗುಲ ಗಂಜಿಯನ್ನ
ಮಕ್ಕಳಿಗೆ ತಿನ್ನಿಸಿ ನೀನು ಮಾತ್ರ
ಯಾಕೊ ಹೊಟ್ಟೆ ನೋವು ಅಂದು
ನೋವಿನಿಂದ ಹಸಿದು ನೆಲವ ತಬ್ಬಿ
ಮಲಗುತ್ತಿದ್ದ ಅಮ್ಮ ನೀನು ಸುಳ್ಳಿಯಲ್ಲವೇನೆ?

ಕುಡುಕ ಗಂಡನ ಹಾದರವನ್ನ
ನಿನ್ನ ಸೆರಗಿನಲ್ಲಿ ಕಟ್ಟಿಕೊಂಡು
ನೋಯುತ್ತಿದ್ದ ನೀನು ಸುಳ್ಳಿಯಲ್ಲವೆ..!
ಮಗನ ಹೊಡೆಯಲು ಬಂದ ಕುಡುಕ ಗಂಡನಿಗೆ
ಸೆರಗಿನಲ್ಲೆ ಮಗನ ಬಚ್ಚಿಟ್ಟುಕೊಂಡು
ಮಗನಿಲ್ಲವೆಂದು ಮಮತೆ ತೋರಿದ ನೀನು ಸುಳ್ಳಿಯಲ್ಲವೆ..?

ಕೊರಳಿನಲ್ಲಿ ಬೆಳ್ಳಿಯ ತಾಳಿ
ಅದಕ್ಕೆ ೩ ಕಾಸಿನ ಬಂಗಾರದ ಲೇಪನ
ನಿನ್ನ ಅಕ್ಕಾ-ತಂಗಿಯರೆದುರು
ನನ್ನ ಗಂಡಾ ಮಾಡಿಸಿದ ಬಂಗಾರದ ತಾಳಿಯೆಂದು
ಎದೆಯುಬ್ಬಿಸಿ ಹೇಳಿ ಎದೆತಟ್ಟಿಕೊಂಡ ನೀನು ಸುಳ್ಳಿಯಲ್ಲವೇನೆ..?

ಅವ್ವಾ ಹುಗ್ಗಿ[ಪಾಯಸ]ಬೇಕೆಂದು
ಹಬ್ಬದ ದಿನ ಹಟ ಮಾಡಿದ ನಿನ್ನ ಮಕ್ಕಳಿಗೆ
ಅರೆಪಾವು ಗಂಜಿಗೆ ೨ ಉಂಡೆಬೆಲ್ಲವನ್ನ ಹಾಕಿ
ನಮಗೆ ಹುಗ್ಗಿಯೆಂದು ಕುಡಿಸಿ ನಲಿಸಿದ ನೀನು
ಸುಳ್ಳಿಯಲ್ಲದೆ ಮತ್ತೇನು ..??

 

ನಿಮ್ಮ ಅನಿಸಿಕೆಗಳನ್ನು ನಮಗೆ ಬರೆಯಿರಿ

ಹೆಸರು/ Name:

ಇ ಮೈಲ್/ Email:

ಅಭಿಪ್ರಾಯ / Comments:

ಓದುಗರ ಅನಿಸಿಕೆಗಳು

ತ.ವಿ.ಶ್ರೀನಿವಾಸ ಮುಂಬಯಿ

ಬಡತನ ಏನೆಲ್ಲಾ ಮಾಡಿಸುತ್ತದೆ. ಮಕ್ಕಳ ಒಳಿತಿಗಾಗಿ, ಮನೆಯಲ್ಲಿನ ಹರುಕು ಜೀವನವನ್ನು ತೇಪೆ ಹಚ್ಚಿ ಯಾರಿಗೂ ತಿಳಿಯದಂತೆ ಕಾಪಾಡುವ ಆ ತಾಯಿಯ ಬಗ್ಗೆ ಶ್ರೀಯುತ ಸೋಮು ಬಹಳ ಚೆನ್ನಾಗಿ ವರ್ಣಿಸಿದ್ದಾರೆ.


  ಮಕ್ಕಳು ಎಷ್ಟೇ ದೊಡ್ಡವರಾದರೂ ತಾಯಿಗೆ ಅವರಿನ್ನೂ ಚಿಕ್ಕವರೇ. ಸಶಕ್ತರಾಗಿ ಜೀವನದ ಬಂಡಿಯನ್ನು ಎಳೆಯುವಂತಾದರೂ ಅದನ್ನು ಅರಿಯದ ತಾಯಿ ಮಕ್ಕಳಿನ್ನೂ ಹಸುಳೆಗಳೆಂದು ಮುಚ್ಚಟೆ ಮಾಡುವಳು. ಇಂತಹ ಸಂದರ್ಭದಲ್ಲಿ ಕವಿ ತನ್ನ ಮನದಳಲನ್ನು ಬಹಳ ಸೊಗಸಾಗಿ ಓದುಗರ ಮನಸ್ಸಿಗೆ ತಾಕುವಂತೆ ಬಣ್ಣಿಸಿದ್ದಾರೆ.

ಇಂತಹ ಸೊಗಡಿನ ಕವಿಗಳ ಸಂತತಿಯು ಇನ್ನೂ ಹೆಚ್ಚು ಹೆಚ್ಚಾಗಿ ಬೆಳೆಯಲಿ ಎಂದು ಆಶಿಸುವೆ.

*

 

ಪ್ರೇಮಶೇಖರ
I read this poem in the afternoon itself. I liked it immensely as it depicts positive duality in the attitude of poor mothers in general and Indian mothers in particular. I was deeply touched by the naked poverty we see here and mother's desperate struggle to keep her children comfortable. Good poem indeed.
*

 

ವಿಜಯೇಂದ್ರ
ಅದ್ಭುತ ಸಾರ್... ನಿಮ್ಮ ಕವನದಲ್ಲಿ ತಾಯ ಬಾಳಲ್ಲಿ ಬರುವ ಪ್ರತಿಯೊಂದು ಸನ್ನಿವೇಶವನ್ನೂ ನಿಮ್ಮ ಕವನದ ಧಾಟಿಗೆ ಬಳಸಿದ್ದೀರಿ...

*

ಪ್ರಹ್ಲಾದ್
ಬಹಳ ಚೆನ್ನಾಗಿದೆ ಮತ್ತು ಅರ್ಥ ಗರ್ಭಿತವಾಗಿದೆ.

*

ವೈಶಾಲಿ
ಚೆನ್ನಾಗಿದೆ ನಿಮ್ಮ ಕವಿತೆ. You are a good observer..

*

ಪ್ರಭಾಕರ
ಕವನ ತುಂಬಾ ಚೆನ್ನಾಗಿದೆ ಸೋಮು... ಇದನ್ನೆ ಮುಂದುವರಿಸಿದರೆ ತುಂಬಾ ಒಳ್ಳೆಯ ಹೆಸರು ಬರುತ್ತೆ....
*

ವಿಜಯ್
ಇದು ಜೀವನದಲ್ಲಿ ನಡೆಯುವ ನಿಜವಾದ ಘಟನೆ.. ಈ ಕವಿತೆಯಲ್ಲಿ "ತಾಯಿ ನೀನು ಸುಳ್ಳಿ ಅಲ್ಲವೆ?" ಅಂತ ಹೇಳುವಾಗ ಓದುಗರಿಗೆ ಮುಗುಳ್ನಗೆ... ಅದಕ್ಕೆ ತಾಯಿ ಇರೊದೇ ತನ್ನ ಮಕ್ಕಳ ನೋಡಿಕೊಂಡು ಕಾಪಾಡೋಕೆ ಎಂದೆಂದಿಗೂ .."ಸುಳ್ಳಿ ಅಲ್ಲವೇ" ಅಂದಾಗ ಪ್ರೀತಿ ಉಕ್ಕಿ ಬರೋದು ಇನ್ನೂ ಹೆಚ್ಚು.. somu has expressed his feelings of a mother's love to her beloved ones in a better way one can realise..good one somu keep it going and thanqs!
*


ಸವಿತಾ ನಾಗರಾಜ್
ಈ ಕವನದ ಹೆಸರು ನೋಡಿ ಕೋಪ ಬಂತು. ಅಮ್ಮ ಯಾಕೆ ಸುಳ್ಳು ಹೇಳ್ತಾಳೆ ಅನ್ನಿಸ್ತು. ಆದರೆ ಓದಿದ ಮೇಲೆ ತುಂಬಾ ಇಷ್ಟ ಆಯ್ತು, ತುಂಬಾ ಚೆನ್ನಾಗಿದೆ.
*


ಸಚಿನ್
ಆಯ್ತು, ತುಂಬಾ ಚೆನ್ನಾಗಿದೆ. Thanks for giving wonderful kavithe..its really good tooo good
*


ಸಮೀರ್ ಗಂಗೂರ್
MMM i would rate this poem above average but there still some maturity missing in it. Must say a good attempt to present the sacrifice of a mother. Bravo. Keep it up
*


ಗುರು ಪ್ರಸಾದ್
ಬಹಳ ಚೆನ್ನಾಗಿದೆ.
*


ಕೊಟ್ರಸ್ವಾಮಿ ಮರಿಗೌಡ
ಆಪ್ಪಟ ಬಂಗಾರ ಸೋಮುವಿಗೆ ಆತ್ಮೀಯ ನಮಸ್ಕಾರಗಳು,
ನಿಮ್ಮ `ಮಹಾನ್ ಸುಳ್ಳಿ'ಯನ್ನು ಒದಿದೆ! ಭಾರತದ ಬಹುಪಾಲು `ಮಹಾನ್ ಸುಳ್ಳಿ' ಆಮ್ಮಂದಿರ ದಿನದ ಬದುಕು ಅತ್ಯಂತ ಸರಳ ಆದರೆ ಮನಸ್ಸಿಗೆ ಹತ್ತಿರವಾಗಿ ಭಾವ ತನ್ತುವನ್ನು ಮಿಡಿದು ಕ್ಷಣ ಕಾಲವಾದರೂ ಅಮ್ಮನ ಸೆರಗಿನಲ್ಲಿ ಬಚ್ಚಿಟ್ಟುಕೊಂಡ ನೆನಪನ್ನು ಉದ್ದೀಪಿಸುವಂತೆ ಬರೆದ ನಿಮ್ಮ ಕವಿತಾ ಶಕ್ತಿಗೆ ಅನಂತ ಅಭಿನಂದನೆಗಳು.

 

ಶಾರದಾ

ಮೊದಲು ಈ ಕವನದ ಹೆಸರನ್ನು ನೋಡಿ ಓದಬಾರ್ದು ಅಂದುಕೊಂಡಿದ್ದೆ. ಆದರೆ ಒದಿದ ಮೇಲೆ ಸಮಾಧಾನವಾಯ್ತು.... ತುಂಬ ತುಂಬಾ ಒಳ್ಳೆ ಕವಿತೆ. ನಿಜಕ್ಕೂ ನಮ್ಮ ಜೀವನದಲ್ಲಿ ನಡೆದಿದ್ದನ್ನೆ ಸೊಮು ಕಡಿಮೆ ಪದಗಳಲ್ಲಿ ನಮಗೆ ಅರ್ಥವಾಗುವ ರೀತಿಯಲ್ಲಿ ಬರೆದಿದ್ದಾರೆ. ಇದು ಎಲ್ಲರ ಮನೆಯ ಕವಿತೆ ಕೂಡ ಹೌದು. ತುಂಬ ಒಳ್ಳೆಯ ಕವಿತೆ ಕೊಟ್ಟಿದ್ದಕ್ಕೆ.. thankz to vikrantakarnataka and somu...

 

ಇನ್ನಷ್ಟು

ಕವಿಯಾದೆ ನಾನು

ಕನ್ನಡಾಂಬೆ. . . . ನಿನ್ನ ಸ್ಥಿತಿಗೆ ಯಾರು ಹೊಣೆ

ಸೂರ್ಯಕಾಂತಿ ಹೂವೇ...

ಪ್ರಕಾಶ ಮೂಲ್ಕಿರವರ ಚುಟುಕಗಳು

ಅಂತರಂಗ ಜ್ಯೋತಿ

ಪಟಾಕಿ

ಪ್ರೀತಿಸಿದ ಹುಡುಗಿ

ನನ್ನ ಗೆಳತಿಗೆ?..

ಭ್ರಮೆಯ ನೆಪ(ನೆವ)ದಲಿ

ಚೆಲುವೆ

ಅಮ್ಮ

ಅವಳು-ಇವಳು-ನಾನು-ಪ್ರೇಮಿಗಳು

ಕೊನೆಯ ಹನಿಯಂತೆ..

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com