|
ಕನ್ನಡಾಂಬೆ. . . . ನಿನ್ನ ಸ್ಥಿತಿಗೆ ಯಾರು ಹೊಣೆ
ತಳುಕು
ಶ್ರೀನಿವಾಸ್
ಮುಂಬಯಿ
tvsrinivas41@gmail.com
ಐದು ಕೋಟಿ ಮಕ್ಕಳ ತಾಯಿ ಕನ್ನಡಮ್ಮ
ಇವಳ ಸ್ಥಿತಿಯ ನಾನೇನೆಂದು ಹೇಳಲಮ್ಮ
೫೦ ವಸಂತಗಳ ಕಳೆಯುತಿಹ ತಾಯಿ
ಇವಳ ಬಹು ಮಕ್ಕಳದು ಬರಿಯ ಬಡಾಯಿ
ಬೆರಳೆಣಿಕೆಯ ಮಕ್ಕಳಿಗಷ್ಟೇ ಗೊತ್ತು ಇವಳ ಪಾಡು
ಬಹು ಮಕ್ಕಳು ಸೇರಿಹರು ಬೆಚ್ಚನೆ ಗೂಡು
ಇವಳ ಸೆರಗಂಚೆಲ್ಲಾ ಹರಿದು ಹಂಚಿದೆ
ನೋಡಿದಲ್ಲೆಲ್ಲಾ ತೇಪೆ ಹಚ್ಚಿದೆ
ಪರರ ಮಕ್ಕಳು ಊಳಿದಿಹ ಸೀರೆ ಹರಿಯುತಿಹರು
ಬಹು ಮಕ್ಕಳೆಲ್ಲಾ ಸುಮ್ಮನೆ ನೋಡುತಿಹರು
ಪರರ ಮಕ್ಕಳದೇ ಎಲ್ಲಾ ಕಾರುಬಾರು
ಬಹು ಮಕ್ಕಳೆಲ್ಲಾ ಇವರ ದಾಸರು
ಕೆಲ ಮಕ್ಕಳಷ್ಟೇ ತಾಯ ಮಾನ ಕಾಪಾಡಹತ್ತಿಹರು
ಆಗಲಿ ಇವರ ಕೈ ಬಲ ಪಡಿಸುವುದಕ್ಕೆ ನಮ್ಮ ಕರಾರು
ಇಂದಿನ ಕನ್ನಡದ ಸ್ಥಿತಿ ನೋಡಿಯೂ ನೋಡದಂತಿರುವವರೇ ಬಹು
ಮಕ್ಕಳು
ಅವಳ ಕಷ್ಟವರಿತು ಕಾಪಾಡಲು ಮುಂದೆ ಬಂದಿರುವವರೇ ಕೆಲ
ಮಕ್ಕಳು
ಇನ್ನಷ್ಟು
ಪ್ರಕಾಶ ಮೂಲ್ಕಿರವರ ಚುಟುಕಗಳು
ಅಂತರಂಗ
ಜ್ಯೋತಿ
ಪಟಾಕಿ
ಪ್ರೀತಿಸಿದ
ಹುಡುಗಿ
ನನ್ನ
ಗೆಳತಿಗೆ?..
ಭ್ರಮೆಯ ನೆಪ(ನೆವ)ದಲಿ
ಚೆಲುವೆ
ಅಮ್ಮ
ಅವಳು-ಇವಳು-ನಾನು-ಪ್ರೇಮಿಗಳು
ಕೊನೆಯ ಹನಿಯಂತೆ..
|