|
ನನ್ನಾಕೆ
ಶಿವಶಂಕರ್ ಹೆಚ್.ಎನ್
ಕ್ಯಾಲಿಫೋರ್ನಿಯಾ
shiv.hn@gmail.com
ನನ್ನಾಕೆ ನಡೆದರೆ
ಮೆಲ್ಲ ಬೀಸುವ ತಂಗಾಳಿ ಸುಳಿದಂತೆ
ನನ್ನಾಕೆ ಬಂದು ನಿಂತರೆ
ಸೊಬಗ ರಾಶಿಯೊಂದು ಮೂರ್ತಿವೆತಂತೆ
ನನ್ನಾಕೆ ನುಡಿದರೆ
ವೀಣೆಯೊಂದು ಉಲಿದಂತೆ
ನನ್ನಾಕೆ ನೋಟ ಬೀರಿದರೆ
ಸಾಲು ದೀಪ ಹೃದಯದಿ ಬೆಳಗಿದಂತೆ
ನನ್ನಾಕೆ ನಕ್ಕರೆ
ದುಂಡು ಮಲ್ಲಿಗೆ ಮೊಗ್ಗು ಅರಳಿದಂತೆ
ನನ್ನಾಕೆ ನಾಚಿದರೆ
ಸಂಜೆ ಸೂರ್ಯ ಕೆಂಪಾದಂತೆ
ನನ್ನಾಕೆ ಬೇಸರವಾದರೆ
ಆಕಾಶದ ನಕ್ಷತ್ರಗಳ ಬೆಳಕು ಮುಗಿದು ಮಂಕಾದಂತೆ
ನನ್ನಾಕೆ ಒಲಿದರೆ
ನೂರು ಚಂದ್ರರ ಬೆಳದಿಂಗಳ ರಾತ್ರಿಯಂತೆ
ನನ್ನಾಕೆ ಸ್ಪರ್ಶಿಸಿದರೆ
ರೋಮಾಂಚನದಿ ಮನ ಉಯ್ಯಾಲೆಯಂತೆ
ನನ್ನಾಕೆ ಬಾಹು ಬಂಧಿಸಿದರೆ
ಬಿಸಿಲ ಪಯಣಿಗ ಮರದ ತಂಪು ನೆರಳು ಸೇರಿದಂತೆ
ನನ್ನಾಕೆ ನೆನೆದರೆ
ಮುಂಗಾರ ಮಳೆಗೆ ಕಾದು ನಿಂತ ಭುವಿಯಂತೆ
ನನ್ನಾಕೆ ಬಯಸಿದರೆ
ಸಪ್ತಸಾಗರಗದ ಆಲೆಗಳು ಒಮ್ಮೆಗೆ ಉಕ್ಕಿ ಹರಿದಂತೆ
ನನ್ನಾಕೆ..
ನನ್ನ ಮೈ-ಮನಗಳ ಒಡತಿ ಆಕೆ
ನನ್ನಾಕೆ..
ನನ್ನ ಕನಸು-ನನಸುಗಳ ಶಿಲ್ಪಿ ಆಕೆ
ಇನ್ನಷ್ಟು
ಕವಿಯಾದೆ ನಾನು
ಕನ್ನಡಾಂಬೆ.
. . . ನಿನ್ನ ಸ್ಥಿತಿಗೆ ಯಾರು ಹೊಣೆ
ಸೂರ್ಯಕಾಂತಿ
ಹೂವೇ...
ಪ್ರಕಾಶ ಮೂಲ್ಕಿರವರ ಚುಟುಕಗಳು
ಅಂತರಂಗ
ಜ್ಯೋತಿ
ಪಟಾಕಿ
ಪ್ರೀತಿಸಿದ
ಹುಡುಗಿ
ನನ್ನ
ಗೆಳತಿಗೆ?..
ಭ್ರಮೆಯ ನೆಪ(ನೆವ)ದಲಿ
ಚೆಲುವೆ
ಅಮ್ಮ
ಅವಳು-ಇವಳು-ನಾನು-ಪ್ರೇಮಿಗಳು
ಕೊನೆಯ ಹನಿಯಂತೆ..
|