|
ನೆನಪುಗಳೆಂದರೆ
ಎಸ್.ಎಲ್.ಸುರೇಂದ್ರ ಕುಮಾರ್
slskkumar@indiainfo.com
ಮರೆಯಬೇಕೆಂಬ ನೆನಪುಗಳೆ ಹೀಗೆ
ಮತ್ತೆ ಮತ್ತೆ ಎದ್ದು ಬಂದು ಬಿಡುವವು
ಬಿಡವು ಮನದೊಳಗಿನ ಮೂಲೆಯನು
ಮುಸ್ಸಂಜೆಯಲಿ ಮೂಡಿದ ಚುಕ್ಕಿಗಳಂತೆ
ಎದುರಾಗುವವು ನಿಂತರು ಕುಂತರು
ಹಗಲಿರುಳೆಂಬ ಬೇದ ಭಾವವಿಲ್ಲ
ಮಡಿ ಮೈಲಿಗೆಯೆಂಬ ಆಚಾರವಿಲ್ಲ
ವಿಚಾರಿಸಲು ಇದು ಕೈಗೆ ಸಿಗುವುದಿಲ್ಲ
ಸರಿ ತಪ್ಪುಗಳೆಂಬ ನೀತಿ ನಿಯಮವಿಲ್ಲ
ನೆನಪುಗಳಿಗೆ ಯಾರದು ಭಯವಿಲ್ಲ
ಪಯಣದಾದಿಯಲ್ಲಿ ಗುರಿಯ ಅರಿವಿದ್ದರು
ಮಧ್ಯದಲಿ ಹೊಯ್ದಾಟ ತಿರುವುಗಳೆದುರಾದರೆ
ಯಾರು ಏನು ಮಾಡುವುದು ತಿಳಿಯಲಾಗದು
ಬದುಕಿನೊಳಗಿನವುಗಳೆಲ್ಲ ಅನಿಸುವವು ಭಯಗಳಂತೆ
ಬದುಕಿಲ್ಲ ಬದುಕಿನ ನೆನಪುಗಳ ಬಿಟ್ಟು
ಇನ್ನಷ್ಟು
ಕವಿಯಾದೆ ನಾನು
ಕನ್ನಡಾಂಬೆ.
. . . ನಿನ್ನ ಸ್ಥಿತಿಗೆ ಯಾರು ಹೊಣೆ
ಸೂರ್ಯಕಾಂತಿ
ಹೂವೇ...
ಪ್ರಕಾಶ ಮೂಲ್ಕಿರವರ ಚುಟುಕಗಳು
ಅಂತರಂಗ
ಜ್ಯೋತಿ
ಪಟಾಕಿ
ಪ್ರೀತಿಸಿದ
ಹುಡುಗಿ
ನನ್ನ
ಗೆಳತಿಗೆ?..
ಭ್ರಮೆಯ ನೆಪ(ನೆವ)ದಲಿ
ಚೆಲುವೆ
ಅಮ್ಮ
ಅವಳು-ಇವಳು-ನಾನು-ಪ್ರೇಮಿಗಳು
ಕೊನೆಯ ಹನಿಯಂತೆ..
|