ಪಟಾಕಿ
ಪೂರ್ಣಿಮ
ಸುಬ್ರಹ್ಮಣ್ಯ
ವರ್ಜೀನಿಯಾ, ಯು ಎಸ್ ಎ
poornimakh@hotmail.com
ಬಂದಿತು ಮತ್ತೆ ದೀಪಾವಳಿ
ಎಲ್ಲಾ ಕಡೆ ಪಟಾಕಿ ಹಾವಳಿ.
ಪಟಾಕಿ ಹಬ್ಬ ಬಂದರೆ ಸಾಕು
ಎಲ್ಲರ ಕಣ್ಣಲೂ ಹೂಕುಂಡ.
ಚಿಟ ಪಟ ಸಿಡಿಯುವ ಪುಟಾಣಿಗಳು
ಅವರೇ ಚುರುಕು ಚಿನಕುರಳಿಗಳು.
ಸದಾ ಸಿಡಿಮಿಡಿ ಎನ್ನುವ ಹೆಂಡತಿ
ಫೇಲೇ ಆಗದ ಲಕ್ಷ್ಮೀ ಪಟಾಕಿ!
ಢಂ ಢಮಾರ್ ಜೋರಿನ ಮನೆ ಯಜಮಾನ
ಆಟಂಬಾಂಬ್‌ಗೆ ಬಹಳ ಸಮಾನ.
ತುಸ್ ಪುಸ್ ಅನ್ನುವ ಮೆತ್ತನೆ ಮುದುಕಿ
ಸಾಟಿಯೇ ಅದಕೆ ಕುದುರೆ ಪಟಾಕಿ?.
ಅರಳು ಮರುಳು ಆಗಿಹ ತಾತ
ಆಗಾಗ ಸಿಡಿಯುವ ಆನೆ ಪಟಾಕಿ.
ಅತ್ತೆ-ಸೊಸೆ ಮಾತಿನ ಕತ್ತಿ
ತೆಪ್ಪಗಾಯಿತು ಸುರುಸುರು ಬತ್ತಿ.
ಸಾಮಾನು ಪಟ್ಟಿ ಉದ್ದವ ನೋಡಿ,
ಸುತ್ತಿದ ಹನುಮಂತ ತನ್ನ ಬಾಲ.
ಏರಿದ ಬೆಲೆಗಳ ಎತ್ತರ ನೋಡಿ
ಸುಮ್ಮನೆ ನೆಲಕೆ ಕುಸಿಯಿತು ರಾಕೆಟ್.
ಹೆಚ್ಚಿದ ಸೈಟಿನ ಬೆಲೆಯನು ನೋಡಿ
ಗರ ಗರ ತಿರುಗಿತು ಭೂಚಕ್ರ.
ಬೇಕೇ ನಮಗೆ ಬೇರೆ ಪಟಾಕಿ?
ಈ ಹಾವಳಿಯಲ್ಲಿ, ನೀವೇ ಹೇಳಿ?
ಇನ್ನಷ್ಟು
ಅವಳು-ಇವಳು-ನಾನು-ಪ್ರೇಮಿಗಳು
ಕೊನೆಯ ಹನಿಯಂತೆ..
ದೇವರು
ನನ್ನವಳು
ಕವನ
ನಿನಗಾಗಿ
ಕಾರಣ (ಹನಿಗವನ)
ಪ್ರಿಯ
ಗೆಳತಿ
ನಾನು-ನೀನು
ಆತ್ಮವಿಲ್ಲದವಳ ಹೇಗೆ ನೋಡಲಿ
ಕನ್ನಡತೀ...
ಬದುಕಿನ ಗುಟ್ಟು
ನಿನ್ನ
ಮನೋಹರ ನೇತ್ರ!
ಹೃಶಿಕೇಶದಲ್ಲಿ ಗಂಗೆ
ಹೃದಯದೊಡತಿ