|
ಎಳ್ಳು ಬೆಲ್ಲವ ತಿಂದು ಒಳ್ಳೆಯ ಮಾತನಾಡು
ತಳುಕು
ಶ್ರೀನಿವಾಸ್
ಮುಂಬಯಿ
tvsrinivas41@gmail.com
ಬಾರೆ ತಂಗಿ ಎಳ್ಳು ಬೆಲ್ಲ ಬೀರೋಣ ಬಾ
ಜರತಾರಿ ಲಂಗ ಜರತಾರಿ ಕುಪ್ಪಸ ತೊಟ್ಟು ಬಾ
ಬಣ್ಣದ ಅಂಗಿ ಚಡ್ಡಿ ತೊಟ್ಟು ನಾ ಬರುವೆ
ಅಮ್ಮ ಕೊಟ್ಟ ಎಳ್ಳು ಬೆಲ್ಲವ ಎಲ್ಲರ ಮನೆಗಳಿಗೆ ಬೀರೋಣ ಬಾ
ಬೆಳ್ಳಿಯ ಹರಿವಾಣದಲಿ ಕಸೂತಿಯ ಕರವಸ್ತ್ರ
ಬೆಳ್ಳಿಯ ಬಟ್ಟಲಲಿ ಎಳ್ಳು ಬೆಲ್ಲ ಸಮ್ಮಿಶ್ರ
ಜೊತೆಯಲಿ ಬೆಳ್ಳನೆಯ ಮೃದು ಸಕ್ಕರೆಯ ಅಚ್ಚು
ಅರಿಶಿನ ಕುಂಕುಮ ಬಾಳೆಹಣ್ಣು ಎಲಚಿಯ ಗುಚ್ಚು
ಈ ಕಡೆ ಮನೆಯವರೀವರು ಪೊಂಗಲ್ ತಿಂಡಿ
ಆ ಕಡೆ ಮನೆಯವರೀವರು ತಿಲ್‌ಗೋಳ್ ಉಂಡಿ
ಅವರ ಮನೆಯ ಗಂಗೆ ಗೌರಿಗಳ ಪೂಜಿಸೋಣ
ಗೆಳೆಯರೊಡಗೂಡಿ ಗಾಳಿಪಟ ಹಾರಿಸೋಣ
ಕೊಬ್ಬರಿ ಕಡಲೆ ಬಾಯ್ತುಂಬ ತಿನ್ನೋಣ
ಕಬ್ಬನು ಸಿಗಿದು ರಸ ಹೀರೋಣ
ಸಂಜೆ ಬೆಂಕಿಯ ಕೊಂಡವ ಹಾಯೋಣ
ಹೊಸ ಧಾನ್ಯವ ಗಾಡಿಯ ಮೇಲೆ ಹೊತ್ತು ತರೋಣ
ಎಲ್ಲರಿಗೂ ಹಂಚೋಣ ನಮ್ಮನೆಯ ಎಳ್ಳು ಬೆಲ್ಲ
ಸ್ನೇಹ ಸಂಪಾದಿಸಿ ಒಂದಾಗಿ ಬಾಳುವ ನಾವೆಲ್ಲಾ
ಸಂಕ್ರಾಂತಿಯಿಂದ ಶುಭಕ್ರಾಂತಿಯ ತರೋಣ
ನಾಡ ಕಟ್ಟೋಣ, ಎಲ್ಲರ ಕೈ ಜೋಡಿಸೋಣ
ಬಾರೆ ತಂಗಿ ಎಳ್ಳು ಬೆಲ್ಲ ಬೀರೋಣ ಬಾ
ಜರತಾರಿ ಲಂಗ ಜರತಾರಿ ಕುಪ್ಪಸ ತೊಟ್ಟು ಬಾ
ಬಣ್ಣದ ಅಂಗಿ ಚಡ್ಡಿ ತೊಟ್ಟು ನಾ ಬರುವೆ
ಅಮ್ಮ ಕೊಟ್ಟ ಎಳ್ಳು ಬೆಲ್ಲವ ಎಲ್ಲರ ಮನೆಗಳಿಗೆ ಬೀರೋಣ ಬಾ
ನಿಮ್ಮ ಅನಿಸಿಕೆಗಳನ್ನು ನಮಗೆ ಬರೆಯಿರಿ
ಇನ್ನಷ್ಟು
ಆಮ್ಮನೆಂಬ
ಮಹಾನ್ ಸುಳ್ಳಿ?.!!!
ಯಾರಿಗೆ
ಹೊಸತು
ನನ್ನಾಕೆ
ತುಂತುರುರವರ
ಹನಿಗವನಗಳು
ಪುಟ್ಟ
ಮರಿ
ನೆನಪುಗಳೆಂದರೆ
ನೆನಪುಗಳು
ಕನವರಿಕೆಯೊಳು
ಕಂಡೆ ಕಳವಳವ..!!
ಪುಟ್ಟ ಕವನ..
ಬದಲಾವಣೆ
ಕನ್ನಡ ಕಳಕಳಿ
ಇಂದಿನ
ಕನ್ನಡಾಂಬೆ...
ಕವಿಯಾದೆ ನಾನು
ಕನ್ನಡಾಂಬೆ.
. . . ನಿನ್ನ ಸ್ಥಿತಿಗೆ ಯಾರು ಹೊಣೆ
ಸೂರ್ಯಕಾಂತಿ
ಹೂವೇ...
ಪ್ರಕಾಶ ಮೂಲ್ಕಿರವರ ಚುಟುಕಗಳು
ಅಂತರಂಗ
ಜ್ಯೋತಿ
ಪಟಾಕಿ
ಪ್ರೀತಿಸಿದ
ಹುಡುಗಿ
ನನ್ನ
ಗೆಳತಿಗೆ?..
ಭ್ರಮೆಯ ನೆಪ(ನೆವ)ದಲಿ
ಚೆಲುವೆ
ಅಮ್ಮ
ಅವಳು-ಇವಳು-ನಾನು-ಪ್ರೇಮಿಗಳು
ಕೊನೆಯ ಹನಿಯಂತೆ..
|