ಕನ್ನಡಿಗರಿಗೆ ಏಕಿಲ್ಲ ಕನ್ನಡದ ಕಳಕಳಿ?
ಕನ್ನಡದಲ್ಲಿ ವ್ಯವಹರಿಸಲು ಇವರಿಗೇಕೆ ಕಸಿವಿಸಿ?
ಬೆಂಗಳೂರಿನ ಬೆಡಗಿಯರಿಗೆ ಆಂಗ್ಲ ಭಾಷೆಯ ಮೋಹ
ಬೆಳಗಾವಿಯ ಬಂಧುಗಳಿಗೆ ಮರಾಠಿ ಭಾಷೆಯ ಸ್ನೇಹ
ಕೊಂಕಣದವರಿಗೆ ಕೊಂಕಣಿ ಭಾಷೆಯಂತೆ
ಮಂಗಳೂರಿಗರಿಗೆ ತುಳು ಪ್ರೀತಿಯಂತೆ
ರಾಯಚೂರು ಬಳ್ಳಾರಿಯವರಿಗೆ ತೆಲುಗೇ ಸರಿಯಂತೆ
ಯಾರಿಗಿಹುದು ಕನ್ನಡದ ಚಿಂತೆ?
ಇರಲಿ ಪ್ರೇಮ ಎಲ್ಲಾ ಭಾಷೆಗೂ
ಸಲ್ಲಲಿ ಗೌರವ ನಿಮ್ಮ ಮಾತೃ ಭಾಷೆಗೂ!