ಹಾತೊರೆಯುತ್ತಿದೆ ಜಗ ಬದಲಾವಣೆ ಬಯಸಿ
ಕ್ಷಣಕ್ಷಣವೂ ಹೊಸಹೊಸದನ್ನು ಅರಸಿ
ಪ್ರತಿದಿನವೂ ಒಂದೆ ಅಡಿಗೆ ರುಚಿಸುವುದಿಲ್ಲ
ಒಂದೇ ತರದ ಕತೆ-ಕವನಗಳಲ್ಲಿ ಯಾವುದೇ ತಿರುವಿಲ್ಲ
ಮಾಧ್ಯಮಗಳಲ್ಲೂ ಅದೇ ಬೇವು ಬೆಲ್ಲ
ಇದನ್ನೆಲ್ಲ ಪ್ರತಿನಿತ್ಯ ಮನವೊಪ್ಪುವುದಿಲ್ಲ
ಸರ್ಕಾರದ ನೀತಿ ನಿಯಮಗಳೂ ಸ್ಥಿರವಲ್ಲ
ಯಾವ ರಂಗವೂ ಇದರಿಂದ ಹೊರತಾಗಿಲ್ಲ
ಅಭಿವೃದ್ದಿ ಮಾಡ ಹೊರಟವರ ಕಾಲೆಳೆಯುವರೇ ಎಲ್ಲ
ಇದರಿಯದ ಜನರ ಪರಿಪಾಡು ಬಲ್ಲವನೆ ಬಲ್ಲ
ಕಲಿಯಲು ಕೊನೆಯೆಂಬುದಿಲ್ಲ ಈ ಜಗದಲ್ಲಿ
ಬದಲಾಗುತ್ತಿರುವ ಕಾಲಮಾನದಲ್ಲಿ
ಹೊಸತೇನಾದರೂ ಸಾಧಿಸಬೇಕೆಂಬ ಛಲದಲ್ಲಿ
ಅತ್ಯುತ್ಸಾಹದಿ ಮುನ್ನಡೆಯುವಾಗ ಎಡುವದಿರು ನೀ ಬಾಳಲ್ಲಿ
ನಿಂತಕಡೆ ಕೆಲಸ ಮಾಡಲು ಮನಸಿಲ್ಲ ದುಡಿದಷ್ಟೂ ಸಾಲದಲ್ಲ
ಮಾಡದಿರೆ ಪೈಪೋಟಿಯ ಜಗತ್ತಲ್ಲಿ ಭವಿಷ್ಯವಿಲ್ಲ
ಅಲೆದಾಡಿ ವಿವಿಧ ದೇಶ ಬಾಷೆ ಜೀವನ ಶೈಲಿಯಲ್ಲಿ
ಬಾಳುವೆವು ತಾಯಿ-ತಾಯ್ನಾಡು-ತಾಯ್ನುಡಿಯ ನೆನಪಿನಲ್ಲಿ