|
ಏಕೋ ಬುದ್ಧ ನೆನಪಾಗುತ್ತಿದ್ದಾನೆ...
ಪೂರ್ಣಿಮಾ, ಬೆಂಗಳೂರು
poornimakh@hotmail.com
ಏಕೋ ಬೇಡವೆನಿಸುತ್ತದೆ
ಈ ಎಲ್ಲ ಸುಖ ಸವಲತ್ತು
ದುಡ್ಡು ದರ್ಪ ದೌಲತ್ತು,
ನಾನು ನಾನೆಂಬ ಗತ್ತು.
ಒಂದು ಕೂದಲೂ ಅಲ್ಲಾಡದೆ
ಕೂತಲ್ಲೇ ಕೂತು ಎಣಿಸಿದ್ದು,
ಎಲ್ಲಾ ನನಗೇನಾ ಸೇರಿದ್ದು?
ಕತ್ತು ಹಿಸುಕುವ ಪ್ರಶ್ನೆ.
ಉತ್ತರ ಯಾರಿಗೆ ಗೊತ್ತು?
ಹುಡುಕುವ ಹಂಬಲವೆಲ್ಲಿ?
ಏಕೋ ಬುದ್ಧ ನೆನಪಾಗುತ್ತಿದ್ದಾನೆ!!
ಎಂದೋ ಓದಿದ, ನೋಡಿದ
ಕೂಲಿ ಹುಡುಗನ ನೆನಪಾಗಿ
ಹನಿಗೂಡುವುದು ಕಣ್ಣು.
ಬಯಸಿದ್ದೆಲ್ಲಾ ಸಿಕ್ಕ ಮೇಲೆ
ಇನ್ನೇನು ಬೇಕು, ಮಣ್ಣು;
ಎಲ್ಲಾ ಇದ್ದರೆ ಗೆಲ್ಲಲೇನಿದೆ ?
ಆದರೂ ಅವನ ದನಿಯಷ್ಟೇ
ಕಿರಿ, ನನ್ನ ಅನುಭವ
ಎಂದೆನಿಸಿ ಕುಗ್ಗುತ್ತಿದ್ದೇನೆ.
ಎಲ್ಲಾ ಬಿಟ್ಟು ಬೀದಿಗಿಳಿಯಲೇ?
ಏಕೋ ಬುದ್ಧ ನೆನಪಾಗುತ್ತಿದ್ದಾನೆ!!
ನಿಮ್ಮ ಅನಿಸಿಕೆಗಳನ್ನು ನಮಗೆ ಬರೆಯಿರಿ
ಇನ್ನಷ್ಟು
ಆಮ್ಮನೆಂಬ
ಮಹಾನ್ ಸುಳ್ಳಿ?.!!!
ಯಾರಿಗೆ
ಹೊಸತು
ನನ್ನಾಕೆ
ತುಂತುರುರವರ
ಹನಿಗವನಗಳು
ಪುಟ್ಟ
ಮರಿ
ನೆನಪುಗಳೆಂದರೆ
ನೆನಪುಗಳು
ಕನವರಿಕೆಯೊಳು
ಕಂಡೆ ಕಳವಳವ..!!
ಪುಟ್ಟ ಕವನ..
ಬದಲಾವಣೆ
ಕನ್ನಡ ಕಳಕಳಿ
ಇಂದಿನ
ಕನ್ನಡಾಂಬೆ...
ಕವಿಯಾದೆ ನಾನು
ಕನ್ನಡಾಂಬೆ.
. . . ನಿನ್ನ ಸ್ಥಿತಿಗೆ ಯಾರು ಹೊಣೆ
ಸೂರ್ಯಕಾಂತಿ
ಹೂವೇ...
ಪ್ರಕಾಶ ಮೂಲ್ಕಿರವರ ಚುಟುಕಗಳು
ಅಂತರಂಗ
ಜ್ಯೋತಿ
ಪಟಾಕಿ
ಪ್ರೀತಿಸಿದ
ಹುಡುಗಿ
ನನ್ನ
ಗೆಳತಿಗೆ?..
ಭ್ರಮೆಯ ನೆಪ(ನೆವ)ದಲಿ
ಚೆಲುವೆ
ಅಮ್ಮ
ಅವಳು-ಇವಳು-ನಾನು-ಪ್ರೇಮಿಗಳು
ಕೊನೆಯ ಹನಿಯಂತೆ..
|