|
ನಿಮಗೆ ಮಲ್ಯ ಬಿಯರ್ ಇಷ್ಟ ಅಲ್ಲವೇ....?

ಸತ್ಯಮೂರ್ತಿ ಆನಂದೂರು
ಬೆಂಗಳೂರು
smanandur@vikrantakarnataka.com
ವಿಧಾನ ಪರಿಷತ್ ಚುನಾವಣೆಯಲ್ಲಿ
ಹೊರಗಿನಿಂದ ನಿಂತ ವಿಜಯ ಮಲ್ಯರಿಗೆ
ಕಾಂಗ್ರೆಸ್ ಪಕ್ಷದಿಂದ ಕ್ರಾಸ್ ಓಟ್ ಹೇಗೆ
ಬಿತ್ತು? ಎಂಬುದು ಪಕ್ಷದಲ್ಲಿ ಜಿಜ್ಞಾಸೆಯ
ಸಂಗತಿಯಾಯಿತು.
ಏಪ್ರಿಲ್ ೨, ೨೦೦೦
`ಎಕ್ಸ್‌ಕ್ಯೂಸ್ ಮಿ ಸಾರ್' ಒಂದು ದನಿ.
`ತಮ್ಮನ್ನೇ ಮಿಸ್ಟರ್! ಭಾರೀ ಗಡದ್ದಾಗಿ ಊಟ ಆದ ಹಾಗಿದೆ. ಹ್ಯಾಗಿತ್ತು
ಪಾರ್ಟಿ? ಎಲೆಕ್ಷನ್ ಮುಗಿದ ಮೇಲೆ ಬಾರಿ ತಂಪಾಗಿರೋ ಹಾಗಿದೆ....'
ಇನ್ನೊಂದು ದನಿ.
ರಾಜ್ಯಸಭೆ ಚುನಾವಣೆಯ ಗಲಾಟೆಯೆಲ್ಲಾ ಮುಗಿದಿದ್ದರಿಂದ ಚಾಮಿ
ತುಸು ಹಾಯಾಗಿ ಕಬ್ಬನ್‌ಪಾರ್ಕಿನ ಬೆಂಚಿನ ಮೇಲೆ ಕಾಲು ಚಾಚಿಕೊಂಡು
ಮಲಗಿದ್ದ. ದನಿ ಕೇಳಿ ಬೆಚ್ಚಿಬಿದ್ದು ಧಡಕ್ಕನೆ ಎದ್ದು ಕೂತು
ಸುತ್ತಮುತ್ತ ನೋಡಿದ. ತನಗೆ ಸುತರಾಂ ಗೊತ್ತಿಲ್ಲದವರಾದ್ದರಿಂದ
ಮತ್ತೆ ಮಲಗಲು ಹವಣಿಸಿದ.
ದೂರದಲ್ಲಿದ್ದವರು ಒಂದೇ ಬಾರಿಗೆ ಹತ್ತಿರ ಬಂದು `ಯಾಕ್ಸಾರ್
ನಮ್ಮ ಪರಿಚಯ ಆಗಲಿಲ್ವೇ? ವಿಧಾನಸೌಧದಲ್ಲಿ ಯಾವಾಗಲೂ
ನೋಡ್ತೇವೆ.... ನನ್ನ ಹೆಸರು ಮಿಸ್ಟರ್ ಎಕ್ಸ್ ಡಾಟ್‌ಕಾಮ್, ಇವರು
ಇವರು ಮಿಸ್ಟರ್ ವೈ ಡಾಟ್‌ಕಾಮ್ ಅಂತ...'
`ವೆರಿ ಪ್ಲೀಸ್ ಟು ಮೀಟ್ ಯೂ.... ಅಂದ್ರೆ ನೀವು ಸಿಲಿಕಾನ್ ಸಿಟಿಯ ಐಟಿ
ಡಾಟ್‌ಕಾಮ್‌ನೋರು ಅಂದ್ಹಂಗಾಯ್ತು.... ನನ್ನಿಂದ ಏನಾಗಬೇಕಿತ್ತು?'
ಎಂದು ಇಬ್ಬರ ಕೈಕುಲುಕಿದ ಚಾಮಿ.
ಇಬ್ಬರೂ ಬಂದು ಚಾಮಿಯ ಅಕ್ಕಪಕ್ಕ ಕುಳಿತುಕೊಂಡು, `ಹಾಗೇನಿಲ್ಲ
ಸುಮ್ಮನೆ ನಿಮ್ಮ ಉಭಯ ಕುಶಲೋಪರಿ ವಿಚಾರಿಸೋಣ ಅಂತ ಬಂದ್ವಿ,
ಹ್ಯಾಗಿತ್ತು ರಾಜ್ಯಸಭೆ ಎಲೆಕ್ಷನ್?'
`ಬೊಂಬಾಟಾಗಿತ್ತು. ಒಂದೈದು ಓಟು ಆ ಕಡೆ ಈ ಕಡೆ ಆಗಿದಿದ್ರೆ ಮಲ್ಯ
ಡೆಫನೆಟ್ ವಿನ್! ಸ್ವಲ್ಪದಲ್ಲಿ ಮಿಸ್ ಆಯ್ತು ನೋಡಿ...'
ಮಿ.ಎಕ್ಸ್ ವೈಯ ಕಿವಿಯಲ್ಲಿ ಪಿಸುಗುಟ್ಟುತ್ತಾ `ಕರೆಕ್ಟ್ ಆಸಾಮಿ.
ಚೆನ್ನಾಗಿ ಗ್ರಿಲ್ ಮಾಡಿ ಇವತ್ತೇ ಸಾಹೇಬ್ರಿಗೆ ರಿಪೋರ್ಟ್
ಕೊಡಬೇಕು...'
`ನೀವೇನೋ ನಿಮ್ಮೊಳಗೆ ಮಾತಾಡಿಕೊಳ್ತೀದೀರಲ್ಲ...?' ಚಾಮಿ ತುಸು
ಅನುಮಾನ ಬಂದು ಕೇಳಿದ.
`ಛೆ, ಛೆ ಹಾಗೇನಿಲ್ಲ. ನೀವು ತುಂಬಾ ಚೆನ್ನಾಗಿ ಅನಲೈಸ್ ಮಾಡಿದ್ರೀ,
ಅದನ್ನೇ ಮಾತಾಡಿಕೊಂಡ್ವು.... ಸಾರ್ ನೀವು ಅವತ್ತು ಅಲ್ಲೇ ಇದ್ರಲ್ಲಾ
ಸಾರ್'
`ಹೌದ್ರಿ ನಾವು ಬರ್‍ಲೇ ಬೇಕಲ್ಲ... ಡ್ಯೂಟಿ ಮಾಡ್ಲೇ ಬೇಕಲ್ಲ....'
`ಸಾರ್ ನಿಮ್ಮ ಜುಬ್ಬಾ ತುಂಬಾ ಚೆನ್ನಾಗಿದೆ.... ಎಲೆಕ್ಷನ್‌ನಲ್ಲಿ ಹೊಲಿಸಿದ್ದಾ?
ಒಳ್ಳೇ ಖಡಕ್ ಐರನ್. ಹಾಗೆ ಮಿರ ಮಿರ ಬೆಳ್ಳಗೆ ಹೊಳೀತಾ ಇದೆ.
ಅಂದಹಾಗೆ ಎಲ್ಲಿ ಇಸ್ತ್ರೀ ಮಾಡಿಸಿದ್ರೀ... ಎಲ್ಲೆಚ್‌ನಲ್ಲಾ?'
`ನಿಮ್ಮಗ್ಯಾಕ್ರಿ ಅವೆಲ್ಲಾ ತಲೆ ಹರಟೆ... ಯಾವಾಗಾದ್ರೂ ಹೊಲಿಸ್ತೀನಿ,
ಎಲ್ಲಾದ್ರೂ ಇಸ್ತ್ರೀ ಮಾಡಿಸ್ತೀನಿ....'
`ಕೋಪ ಮಾಡ್ಕೋಬೇಡಿ ಸಾರ್. ತಾವು ಕೊಂಚ ಬಿಯರ್ ಸೇವಿಸಿದ
ಹಾಗಿದೆ... ಅದ್ಕೆ ತಾನೇ ಈ ಕೋಪ... ಅಂದ ಹಾಗೆ ತಮ್ಮ ಬ್ರಾಂಡ್
ಯಾವ್ದು ಅಂತ ಕೇಳಬೌದೇ? ಯಾಕಂದ್ರೆ ನಮ್ಗೂ ಬಿಯರ್ ಅಂದ್ರೆ
ತುಂಬಾ ಇಷ್ಟ...'
ಚಾಮಿ ಮಾತಾಡಲಿಲ್ಲ. ಕಾಗದದಲ್ಲಿ ನೋಟ್ ಮಾಡಿಕೊಳ್ಳುತ್ತಿದ್ದ
ಮಿಸ್ಟರ್ ವೈ `ಸಾರ್ ನನಗ್ಗೊತ್ತು ತಮ್ಮ ಬ್ರಾಂಡ್ ಯುಬಿ ಅಲ್ವೇ? ಈ
ಸರ್ಕಾರದವ್ರು ಬಿಯರ್ ರೇಟ್ ಜಾಸ್ತಿ ಮಾಡಿ ತುಂಬಾ ಅನ್ಯಾಯ
ಮಾಡಿದ್ರು ಅಲ್ವಾ ಸಾರ್?'
ಚಾಮಿ ತಲೆ ಅಲ್ಲಾಡಿಸುತ್ತ, `ಹೌದು ಮಿಸ್ಟರ್ ವೈ. ಬಿಯರ್ ರೇಟ್
ಅಷ್ಟೊಂದು ಜಾಸ್ತಿ ಮಾಡಬಾರದಿತ್ತು.'
`ತಮಗೆ ಷರೀಫ್ ಸಾಹೇಬ್ರು ಗೊತ್ತಾ ಸಾರ್?'
`ನವಾಜ್ ಷರೀಫಾ? ಅವ್ರೆಲ್ಲಿ, ಈಗ ಜೈಲಲ್ಲಿದಾರಲ್ಲ. ನಾನು ಟೀವಿಯಲ್ಲಿ
ನೋಡಿದೀನಿ.'
`ಛೇ, ಅವ್ರಲ್ಲಾ ಸಾರ್, ನಮ್ಮ ಶಿವಾಜಿ ನಗರದ ಜಾಫರ್ ಷರೀಫ್.
ಅದೇ ಈಗ ಒಂಚೂರು ಗಲಾಟೆ ಮಾಡ್ತಿದಾರಲ್ಲ, ಕಾಂಗ್ರೆಸ್‌ನಲ್ಲಿ....
ನಿಮಗೆ ಚೆನ್ನಾಗೆ ಪರಿಚಯ ಇರಬೇಕಲ್ಲ...'
`ಹಾಂ.... ಪರಿಚಯ ಏನೋ ಇದೆ... ಸುಮಾರು ಸಾರಿ ಪಾರ್ಟಿ
ಕೊಟ್ಟಿದ್ದಾರೆ. ಪ್ರೆಸ್ ಮೀಟ್ ಕರ್‍ದಿದ್ದಾರೆ.... ನಾನೂ ಹೋಗಿದ್ದೆ.'
`ತಮಗೆ ಭಾರೀ ಭಾರೀ ದೊಡ್ಡ ಮನುಷ್ಯರೆಲ್ಲಾ ಗೊತ್ತಿರೋ ಹಾಗಿದೆ.
ವಿಜಯ ಮಲ್ಯ ಗೊತ್ತಾ ಸಾರ್, ಅದೇ ಎಲೆಕ್ಷನ್ನು?..... ಯುಬಿ
ಬಿಯರ್ ಕಂಪನಿ...?'
`ಅವ್ರು ಗೊತ್ತಿಲ್ದೇ ಏನು? ಅವರ್‍ದೂ ಪಾರ್ಟಿಗಳನ್ನು ನಾನು ಅಟೆಂಡ್
ಮಾಡಿದ್ದೀನಿ. ತುಂಬಾ ಸ್ಮಾರ್ಟ್ ಫೆಲೋ....'
`ಆದ್ರೂ ಎಲೆಕ್ಷನ್‌ನಲ್ಲಿ ಗೆಲ್ಲೋಕೆ ಸಾಧ್ಯ ಆಗಲಿಲ್ಲ ನೋಡಿ,
ಕಾಂಗ್ರೆಸ್‌ನಿಂದ ಒಟ್ಟು ಎಷ್ಟು ಓಟು ಬಿದ್ದಿರಬಹ್ದು ಸಾರ್....'
`ಎಂಟರಿಂದ ಹತ್ತಂತೂ ಗ್ಯಾರಂಟಿ.... ನೀವೇ ಲೆಕ್ಕಾ ಹಾಕಿ....'
`ಅಷ್ಟು ಬಂದ್ರೂ ಏನು ಪ್ರಯೋಜನ ಹೇಳಿ? ಗೆಲ್ಲೋಕಂತೂ ಆಗಲಿಲ್ಲ.'
`ಏನು ಮಾಡೋಕಾಗುತ್ತೆ? ಕೆಲವರಿಗೆ ಹಣ ಮುಖ್ಯ, ಕೆಲವರಿಗೆ ಜಾತಿ
ಮುಖ್ಯ ಇನ್ನೂ ಕೆಲವರಿಗೆ ಪಾರ್ಟಿ ಮುಖ್ಯ.'
`ತಮಗೆ ಯಾವ್ದು ಮುಖ್ಯಾ ಸಾರ್?'
`ನನಗ್ಯಾಕ್ರೀ ಅದೆಲ್ಲಾ ಮುಖ್ಯಾ ಆಗ್ಬೇಕು? ಏನೋ ಒಳ್ಳೆ ಜನಗಳ
ಥರ ಕಾಣ್ತೀರಿ ಅಂತಾ ಮಾತಾಡಿದ್ರೆ... ಬಾಯಿಗೆ ಬಂದ ಹಾಗೆ
ಮಾತಾಡ್ತೀರಲ್ರೀ?'
`ಹೋಗ್ಲಿ ಬಿಡಿ ಸಾರ್, ಕೋಪ ಮಾಡ್ಕೋಬೇಡಿ, ನಿಮಗೆ ಬಿಯರ್ ಇಷ್ಟ,
ಅದರಲ್ಲೂ ಯುಬಿ ಇಷ್ಟ. ಬಿಯರ್ ಬೆಲೆ ಜಾಸ್ತಿ ಮಾಡಿದ್ದು ಸರಿಯಲ್ಲ,
ಷರೀಫ್ ಜೊತೆ ಪ್ರೆಸ್ ಮೀಟ್ ಮಾಡಿದ್ದೀರ, ಮಲ್ಯ ಅಂದ್ರೆ ತುಂಬಾ
ಸ್ಮಾರ್ಟ್ ಫೆಲೋ.... ಇಷ್ಟೆಲ್ಲಾ ಕ್ಲೂ ಕೊಟ್ಟಿದ್ದಕ್ಕೆ ಥ್ಯಾಂಕ್ಸ್
ಸಾರ್....' ಎಂದ ಮಿಸ್ಟರ್ ಎಕ್ಸ್. ಕೂಡಲೇ `ಮಿಸ್ಟರ್ ವೈ
ಮೊಬೈಲ್ನಲ್ಲಿ ಕೂಡ್ಲೆ ಸಾಹೇಬ್ರನ್ನ ಕಾಂಟ್ಯಾಕ್ಟ್ ಮಾಡಿ ರಿಪೋರ್ಟ್
ಕೊಡು.'
ಚಾಮಿಗೆ ಏನೊಂದು ತಿಳಿಯದಾಯ್ತು. ಅಷ್ಟರಲ್ಲಿ ರಿಪೋರ್ಟ್ ಬರೆದು
ಕೊಳ್ಳುತ್ತಿದ್ದ ಮಿಸ್ಟರ್ ವೈ ತನ್ನ ಮೊಬೈಲ್‌ನಲ್ಲಿ
ಮಾತಾಡತೊಡಗಿದ: `ಮಲ್ಯಾಗೆ ಕ್ರಾಸ್ ಓಟ್ ಮಾಡಿದ ಒಂದು ಆಸಾಮಿ
ಸಿಕ್ಕಿದೆ. ಎಲ್ಲಾ ಕೂಲಂಕಷವಾಗಿ ಇನ್ವೆಸ್ಟಿಗೇಟ್ ಮಾಡಿದ ಮೇಲೆ ಪೂರ್ತಿ
ಕ್ಲಿಯರ್ ಆಗಿದೆ, ಎಂಟು ಜನರಲ್ಲಿ ಅವ್ರೂ ಒಬ್ರು ಅಂತಾ.... ವಿ ವಿಲ್ ಸಬ್ಮಿಟ್
ಎಂಟಾಯರ್ ರಿಪೋರ್ಟ್ ಟುಡೇ ಇವನಿಂಗ್. ನೀವು ಕೆಪಿಸಿಸಿನಲ್ಲಿ ಆಕ್ಷನ್
ತಗೋಬೌದು.... ಓವರ್!
ಕಾಂಗ್ರೆಸ್ ಸರ್ಕಾರದ ಗೂಢಚಾರರನ್ನು ಕಂಡು ಚಾಮಿ ದಂಗಾದ.
ಹಳೆಯ
ರಗಳೆಗಳು
ನಬೀ... ಯೇ ಸಬೀ ಕ್ಯಾ ಹೆ...
ಅಯೋಧ್ಯೆಯಲ್ಲಿ ಪಾರ್ಕು ಕಟ್ಟಿಸಿದ್ರೆ ಯುವಕರು ಅಡ್ಡದಾರಿ ಹಿಡೀತಾರೆ!!!
ಪ್ರೀತಿ,
ಪ್ರೇಮಕೆ ಜೈ ಜೈ! ಸನ್ಯಾಸತ್ವಕೆ ಗುಡ್ ಬೈ!!
`ದುಡ್ಡು ತಗೊಂಡ್ರೆ ಅದು ಲಂಚ ಅಲ್ಲ'
ಎಲ್ಲಿ? ಬಾಯಿ ತೆಗೇರಿ....
ಚೆನ್ನಾಗಿರೋ ಕತೆ ಬೇಕಂದ್ರೆ ಚೆನ್ನೈಯೇ ಸರಿ...!
ಯಾರ್ರೀ ಬೆಂಗ್ಳೂರ್....ರಾಂಡಿ ಹೈದರಾಬಾದ್
ಪರಿಹಾರ ಸತ್ತೋರಿಗಾ....ಇದ್ದೋರಿಗಾ ?
ಹೃತಿಕ್ ಮದುವೇಲಿ ನನ್ನ ತಾಯಿ ಅಂತ
ಕರೀತಿಯೇನೋ?!
|