Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

 

Monday, 25 September 2006 04:35 PM

ದೇವರೇ ಇವರನ್ನು ಕ್ಷಮಿಸು.... ಯಾಕೆಂದರೆ!?

 

S.M. Anandu Editor, Vikranta Karnataka Weekly

ಸತ್ಯಮೂರ್ತಿ ಆನಂದೂರು

ಬೆಂಗಳೂರು

smanandur@vikrantakarnataka.com

 

 

ಒರಿಸ್ಸಾ ಚಂಡಮಾರುತ, ಗುಜರಾತ್

ಭೂಕಂಪದ ಬಗ್ಗೆ ಕ್ಷುಲ್ಲಕ ಮಾತನಾಡಿದ

ಸಚಿವ ಜಾನ್ ಅದಕ್ಕಾಗಿ ತಮ್ಮ ಮಂತ್ರಿ

ಪದವಿಯನ್ನು ಬಲಿಕೊಟ್ಟರು.

ಫೆಬ್ರವರಿ ೪, ೨೦೦೧

 

`ಕೊನೆಗೂ ನಮ್ಮ ಕಡೆಯ ಒಂದು ವಿಕೆಟ್ ಉರುಳಿಬಿತ್ತು'ಎಂದರು ಸಚಿವ ಶಿವಕುಮಾರ್ ಅರ್ಧ ದುಗುಡ, ಅರ್ಧ ಸಂತಸದಿಂದ.

 

ಚಾಮಿ ಕೇಳಿದ, `ಸಾರ್ ಈ ವಿಕೆಟ್ ತುಂಬಾ ವ್ಯಾಲ್ಯುಯೇಬಲ್ಲಾ...?'

ಒಂದು ಕ್ಷಣ ಯೋಚಿಸಿದ ಶಿವಕುಮಾರ್, ತಮ್ಮ ಪಿ.ಎ.ಯನ್ನು ಕರೆದು, ಕ್ಯಾಲ್ಕ್ಯುಲೇಟರ್ ಲೆಕ್ಕಹಾಕ್ರಿ... ಖಂಡಿತಾ ಕಂಡ್ರಿ... ಮೋಸ್ಟ್ ವ್ಯಾಲ್ಯುಯೇಬಲ್ ವಿಕೆಟ್!' ಎಂದು ಮತ್ತೆ ಲಾಸಿನ ಲೆಕ್ಕ ಹಾಕತೊಡಗಿದರು.

 

`ಏನ್ಸಾರ್ ಇದು! ಬೆಂಗಳೂರಲ್ಲಾಗಿದ್ದು ಸಣ್ಣ ನಡುಕ. ಈ ಭೂಕಂಪಕ್ಕೆ ಒಂದು ವಿಕೆಟ್ ಉರುಳಿದರೆ ಇನ್ನು ಗುಜರಾತ್ ಥರ ಆಗಿದ್ದಿದ್ರೆ...?

 

`ಆಥರ ಆಗಿದ್ದಿದ್ದ್ರೆ ನಮ್ಮ ಗ್ರಾನೈಟು, ಎಸ್ಟೇಟು, ಜೊತೆಗೆ ನಮ್ಮ ಕ್ಯಾಬಿನೆಟ್ಟು ಎಲ್ಲಾ ಉರುಳಿ ಹೋಗಿರೋದು...'

 

`ಜಾನ್ ಹೇಳಿದು ತಪ್ಪು ಅಂತೀರಾ ಸಾರ್....'

 

`ಕರ್ಮಣ್ಯೇ... ವಾಧಿಕಾರಸ್ತೆ... ಮಾಫಲೇಶು ಕದಾಚನ... ಅಂತ ಹಿರಿಯರು ಹೇಳಿದ್ದಾರೆ ಅಂದ್ರೆ ಅಧಿಕಾರದಲ್ಲಿದ್ದವ್ರ ಬಾಯಿಗೆ ಕದಾ ಹಾಕ್ಕೊಳ್ಳದೇ ಇದ್ದರೆ ಇಂಥ ಕರ್ಮ ಅನುಭವಿಸಬೇಕಾಗುತ್ತೆ....!'

 

ಜಾನ್ ರಾಜೀನಾಮೆ ನೀಡಿದ ದಿನದಿಂದ ಚಾಮಿಗೆ ಅದೇ ಗುಂಪು. ಒಂದೇ ಮಾತು ಆಡಿದ್ದಕ್ಕೆ ರಾಜೀನಾಮೆ ಕೊಡಬೇಕಾ? ಹಿಂದೆಲ್ಲ ಎಂಥೆಂಥಾ ಮಂತ್ರಿಗಳು ಏನೇನೆಲ್ಲ ಮಾತಾಡಿದ್ದಾರೆ.... ಈ ಜಾನ್ ಥೇಟ್ ಹಿಂದೀ ಫಿಲಂ ಹೀರೋ ಥರ ಜಾನ್ ಜಾಯೆ... ಪರ್ ವಚನ್ ನ ಜಾಯೆ... ಅನ್ನೋಥರ ರಾಜೀನಾಮೆ ಕೊಟ್ಟೇ ಬಿಟ್ರಲ್ಲಾ...! ಹಾಗಾಗಿ ಚಾಮಿ ಜಾನ್ ಜೊತೆಗಾರರಾದ ಹಲವರನ್ನು ಭೇಟಿ ಮಾಡುತ್ತ ನಡೆದಿದ್ದ.

 

ಶಿವಕುಮಾರ್ ಅವರ `ಕರ್ಮಣ್ಯೇ... ಸಂಸ್ಕೃತ ಸುರಿಮಳೆ ಕೇಳಿದ ನಂತರ ಚಾಮಿ ಓಡಿದ್ದು ಚಿಂಚನಸೂರ್ ಎಂಬ ಇನ್ನೊಬ್ಬ ಮಂತ್ರಿಯ ಮನೆಗೆ. ಚಿಂಚನಸೂರ್ ಆಗಲೇ ಬ್ರೀಫ್ ಕೇಸ್ ರೆಡಿ ಮಾಡಿಕೊಂಡು ಹೊರಟಿದ್ದರು.

 

`ಎಲ್ಲಿಗೆ ಸಾರ್ ಡೆಲ್ಲಿಗಾ? ಚಾಮಿ ಪ್ರಶ್ನೆ.

`ಛೇ ಛೇ. ಹಂಗೇನೂ ಇಲ್ರಪ್ಪಾ... ಹೀಗೇ ವಿಧಾನಸೌಧದಲ್ಲಿ ಏನು ನಡೆದೇತಿ ಅಂತ ನೋಡೋಣು ಅಂತ...!

 

`ಏನ್ಸಾರ್ ಜಾನ್ ರಾಜಿನಾಮೆ ಸರಿಯೋ ತಪ್ಪೋ...?

`ಅದೆಲ್ಲ ಗೊತ್ತಾಂಗಗಿಲ್ರೀ... ಒಂದು ಮಾತ ಖರೆ ಹೇಳ್ತೀನಿ ಕೇಳ್ರೀ... ಬ್ರೀಫ್ ಕೇಸ್ ಭದ್ರ ಇದ್ರೆ ಸಾಲ್ದು... ಬಾಯಿನೂ ಭದ್ರ ಇರಬೇಕ್ರಿ. ಈಗ ನಾನು ನೋಡ್ರಿ ಜಪ್ಪಯ್ಯ ಅಂದ್ರೂ ಬಾಯಿ ಬಿಡವೊಲ್ಲೆ... ಅಪೋಜಿಸನ್‌ನೋರು ಏನ್ ಬೇಕಾರ ಗದ್ಲಾ ಏಳಿಸ್ಲಿ. ನಾ ಮಾತ್ರ ಉಹುಂ... ಈಗ್ಲೂ ಅಷ್ಟೇ... ನಾ ವಲ್ಲೇ...

 

ಚಿಂಚನಸೂರ್‌ರಂಥವರೇ ಇಷ್ಟು ಖಡಾಖಂಡಿತವಾಗಿ ಬಾಯಿಮುಚ್ಚಿಕೋಬೇಕಾದ್ರೆ ಕಾಂಗ್ರೆಸ್‌ನಲ್ಲಿ ಬಾಯಿಗೆ ತುಂಬಾ ಮಹತ್ವ ಎನ್ನುವುದು ಚಾಮಿಗೆ ನಿಧಾನವಾಗಿ ಬಗೆಹರಿಯತೊಡಗಿತು. ಹಾಗೆಯೇ ಮೊದಲೇ ಮಾತನಾಡದಿದ್ದ ಚಿಂಚನಸೂರ್ ಇನ್ನು ಮುಂದೆ ಖಂಡಿತಾ ಮೂಗಬಸವಣ್ಣ ಎಂಬುದು ಖಚಿತವಾಯಿತು. ಚಾಮಿ ಸೀದಾ ನಫೀಸಾ ಫಜಲ್ ಎಂಬ ಮತ್ತೊಬ್ಬ ಅಲ್ಪಸಂಖ್ಯಾತರ ನಾಯಕಿ ಹಾಗೂ ಸಚಿವೆಯ ಮನೆಗೆ ಹೋದರು.

 

`ಆಯಿಯೇ ಚಾಮಿ... ಭಾಳಾ ದಿನ ಆಯ್ತು... ನಾವೆಲ್ಲ ನಿಮಗೆ ಜಾನಿ ದುಶ್ಮನ್ ಆಗಿಬಿಟ್ವಾ...? ಎಂದರು ಫಜಲ್. ಚಾಮಿಗೆ ಒಂದೆರಡು ಹಿಂದಿ ಹಾಡು ಬಿಟ್ಟರೆ ಬೇರೆ ಹಿಂದಿ ಬರುತ್ತಿರಲಿಲ್ಲ. ಹಾಗಾಗಿ `ಸದ್ಯ ನೀವಾದ್ರೂ ಜಾನ್ ಬಗ್ಗೆ ಮಾತಾಡಿ... ಎಂದ.

 

`ಜಾನ್! ವಾಟ್ ಜಾನ್! ಯು ಮೀನ್ ಜಾನ್ ಜಾನಿ ಜನಾರ್ಧನ್? ಅದೇ ರಜನೀಕಾಂತ್ ಮಾಡಿದ್ದರಲ್ಲ... ದ್ಯಾಟ್ ಮೂವಿ?

 

`ಓ... ಜಾನ್!

`ಅಲ್ಲ ಮೇಡಂ ಓ ಅಲ್ಲ ಟಿ. ಜಾನ್... ಅದೇ ಮೇಡಂ ಕೇರಳ ಕಳ್ಳಭಟ್ಟೀಲಿ ಬಹಳಷ್ಟು ಜನ ಸತ್ತಾಗ... ಇವರ ಹೆಸ್ರು ಪೇಪರ್‌ನಲ್ಲಿ ಬಂದಿತ್ತಲ್ಲ!

 

`ಅದೇ ಕಂಡ್ರೀ... ಜಾನ್... ಗೊತ್ತಿದೆ ಕೇರಳಕ್ಕೂ ಇವರಿಗೂ ಸಂಬಂಧವೇ ಇಲ್ಲ ಕಂಡ್ರೀ... ಕೊಡಗಿಗೇ ಸಪ್ಲೈ ಮಾಡಕ್ಕೆ ಅವ್ರಿಗೆ ಆಗ್ತಾ ಇಲ್ಲ... ನೀವು ಕೇರಳಕ್ಕೆ ಹೋದ್ರಿ... ನೋ... ಅದೆಲ್ಲ ಫಾಲ್ಸು!

 

`ಅಲ್ಲ ಮೇಡಂ ಅವರೀಗ ರಾಜೀನಾಮೆ ಕೊಟ್ಟಿದಾರಲ್ಲ...

`ಪೂರ್ ಫೆಲೋ... ಸ್ಲಿಪ್ ಆಫ್‌ದ ಟಂಗ್ ಏನೋ ಮಾತಾಡಿದಾರೆ... ನಮಗೆಲ್ಲ ತುಂಬ ಯೂಸ್‌ಫುಲ್ ಮಿನಿಸ್ಟ್ರು... ಪಾಪ ಕಷ್ಟ ಆಗಬಾರ್ದು ಅಂತ ರೆಸಿಗ್ನೇಷನ್ ಕೊಟ್ಟಿದಾರೆ... ಏನು ಮಾಡೋದು ಹೇಳಿ... ಪಾಪ ಜಾನ್ ಜಾಯೆ ಪರ್ ಕಿಷನ್‌ನ ಜಾಯೆ ಅಲ್ವ... ಕ್ರಿಷ್ಣಾ ಅವ್ರಿಗೆ ತೊಂದ್ರೆ ಆಗುತ್ತೆ ಅಂತ ಕೊಟ್ಟಿದ್ದಾರೆ. ಪಾಪ... ಸಾರಿ... ನೋ ಕಾಮೆಂಟ್ಸ್!

 

ಚಾಮಿ ಸೀದಾ ಜಾನ್ ಅವರ ಮನೆಗೇ ಹೋದ. ಜಾನ್ ಆಗತಾನೆ ಪ್ರಾರ್ಥನೆ ಮುಗಿಸಿ ಬಂದಿದ್ದರು.


`ಏನ್ಸಾರ್ ಒಂದೇ ಏಟಿಗೆ ರಾಜೀನಾಮೆ ಕೊಟ್ಬಿಟ್ರಿ...

`ಹೌದು ಮಾತಿಗೆಲ್ಲ ರಾಜಕೀಯ ಇದೆ ಅಂತ ಗೊತ್ತಿರ್‍ಲಿಲ್ಲ... ಅದೇನಿದ್ರೂ ಹಣದಲ್ಲಿ ಮಾತ್ರ ಅಂದ್ಕೊಂಡಿದ್ದೆ... ಅದು ತಪ್ಪಾಯ್ತು... ನಾನೇನೂ ಹೇಳಲ್ಲ. ಒಂದೇ ಮಾತು ಹೇಳ್ತೀನಿ... ದೇವರೇ ಅವರನ್ನು ಕ್ಷಮಿಸು...

 

`ಯಾರನ್ನ ಸಾರ್?

`ಯಾರು ತಪ್ಪು ಮಾಡಿದಾರೋ ಅವರನ್ನ. ಈಗ ನೋಡಿ ಎಲ್ಲ ಕಡೆ ತಪ್ಪು ಮಾಡ್ದೋರಿಗೆಲ್ಲ ಭಾರಿ ಶಿಕ್ಷೆ ಆಗ್ತಾ ಇದೆ. ಒರಿಸ್ಸಾದಲ್ಲಾಯ್ತು...

 

ಗುಜರಾತಲ್ಲಾಗಿದೆ... ಅದರ ಫಲ ಸಿಗ್ತಾ ಇದೆ...

`ಹಂಗೆಲ್ಲ ಹೇಳಬೌದಾ ಸಾರ್ ನೀವು? ಅಕಸ್ಮಾತ್ ಒಂದು ಆಕ್ಸಿಡೆಂಟ್ ಆಗುತ್ತೆ ಅನ್ನಿ...

`ಹೌದು... ಅದು ಅವನ ಪಾಪದ ಫಲ...

`ಕೇರಳದಲ್ಲಿ ಕಳ್ಳಭಟ್ಟಿ ಕುಡಿದು ಸತ್ತರಲ್ಲ ಸಾರ್?

`ಅದೂ ಅಷ್ಟೇ... ಪಾಪದ ಫಲವೇ...

`ಸಾರ್ ಈಗ ನಿಮ್ಮ ಮಿನಿಸ್ಟ್ರಿ ಹೋಗಿದ್ದು...?

`ಛೇ ಹೋಗಿದ್ದಲ್ಲ... ನಾನೇ ಬಿಟ್ಟಿದ್ದು... ಅದೇನೇ ಇರಲಿ... ನಾನೇನೂ ಹೇಳುವುದಿಲ್ಲ.

 

ಹೇಳುವುದಿಷ್ಟೇ, ದೇವರೇ ಅವರನ್ನು ಕ್ಷಮಿಸು. ಅವರೇನು ತಪ್ಪು ಮಾಡುತ್ತಿದ್ದಾರೆಂದು ಅವರಿಗೆ ಗೊತ್ತಿಲ್ಲ.

`ಸಾರ್... ಈಗ ಯಾರು ತಪ್ಪು ಮಾಡಿದ್ದು ಸಾರ್?

`ನಾನು ಯಾರನ್ನು ಕ್ಷಮಿಸು ಅಂದೇನೋ ಅವರು... ನಾನೇನೂ ಹೇಳುವುದಿಲ್ಲ. ದೇವರೇ...

`ನೀವು ಹೇಳ್ತಾ ಇರೋದು ಕೃಷ್ಣ ಸರ್ಕಾರನಾ ಸಾರ್?

`ದೇವರೇ... ಅವರನ್ನೂ...

ಅಷ್ಟರಲ್ಲಿ ಅಲ್ಲಿದ್ದ ಒಬ್ಬ ಚಾಮಿಯನ್ನು ತಿವಿದು `ಖಂಡಿತಾ ಹೌದು ಕಂಡ್ರಿ ಎಂದು ಪಿಸುಗುಟ್ಟಿದ.

`ಯಾಕೆ?

`ಯಾಕೆಂದ್ರೆ ಜಾನ್ ಅವರದ್ದು ಪೇಮೆಂಟ್ ಸೀಟು! ಅದು ಪರ್ಮನೆಂಟಾಗಿರೋಕೆ ಸಾಕಷ್ಟು ರಿಲೀಫ್ ಫಂಡ್ ಕೊಟ್ಟಿದ್ದಾರೆ!!

 

 ಹಳೆಯ ರಗಳೆಗಳು

ನಬೀ... ಯೇ ಸಬೀ ಕ್ಯಾ ಹೆ...

ಅಯೋಧ್ಯೆಯಲ್ಲಿ ಪಾರ್ಕು ಕಟ್ಟಿಸಿದ್ರೆ ಯುವಕರು ಅಡ್ಡದಾರಿ ಹಿಡೀತಾರೆ!!!

ಪ್ರೀತಿ, ಪ್ರೇಮಕೆ ಜೈ ಜೈ! ಸನ್ಯಾಸತ್ವಕೆ ಗುಡ್ ಬೈ!!

`ದುಡ್ಡು ತಗೊಂಡ್ರೆ ಅದು ಲಂಚ ಅಲ್ಲ'

ಎಲ್ಲಿ? ಬಾಯಿ ತೆಗೇರಿ....

ಚೆನ್ನಾಗಿರೋ ಕತೆ ಬೇಕಂದ್ರೆ ಚೆನ್ನೈಯೇ ಸರಿ...!

ಯಾರ್ರೀ ಬೆಂಗ್ಳೂರ್....ರಾಂಡಿ ಹೈದರಾಬಾದ್

ಪರಿಹಾರ ಸತ್ತೋರಿಗಾ....ಇದ್ದೋರಿಗಾ ?

ಹೃತಿಕ್ ಮದುವೇಲಿ ನನ್ನ ತಾಯಿ ಅಂತ ಕರೀತಿಯೇನೋ?!

 

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com