Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

 

Monday, 30 October 2006 11:17 AM

ನಿಮ್ಮ ಮಾಹಿತಿ ತಂತ್ರಜ್ಞಾನಕ್ಕೆ ರುಂಬ ಥ್ಯಾಂಕ್ಸ್.... ವಣಕ್ಕಂ!!

 

S.M. Anandu Editor, Vikranta Karnataka Weekly

ಸತ್ಯಮೂರ್ತಿ ಆನಂದೂರು

ಬೆಂಗಳೂರು

smanandur@vikrantakarnataka.com

 

 

ರಾಜ ಬಿಡುಗಡೆಯ ನಂತರ ಪೋಲಿಸ್
ಕಾರ್ಯಾಚರಣೆಯ ಸಕಲ ವಿವರಗಳೂ ಪ್ರತಿ
ದಿನ ಪತ್ರಿಕೆಗಳಲ್ಲಿ, ಬೇರೆ ಮಾಧ್ಯಮಗಳಲ್ಲಿ
ಬಿತ್ತರವಾಗತೊಡಗಿದವು.
ನವೆಂಬರ್ ೨೬, ೨೦೦೦

ಪೆರಿಯ ಮಂತ್ರಿ ಕೃಷ್ನ ಅವರ್‍ಗಳಿಗೆ ವಣಕ್ಕಂ

   ನಿಮ್ಮ ಕೋರಿಕೆಯಂತೆ ಪೆರಿಯವರ್ ರಾಜ್‌ಕುಮಾರ್ ಅವರುಗಳನ್ನು ರುಂಬ ಕ್ಷೇಮದಿಂದ ಕರ್ನಾಟಕ ದೇಶಕ್ಕೆ ವಾಪಸು ಕಳಿಸಿಕೊಟ್ಟಿದ್ದೇನೆ... ನೀವು ಕೊಟ್ಟ ನಲ್ಲ ಸಹಕಾರಕ್ಕೆ ರುಂಬ ಥ್ಯಾಂಕ್ಸ್. ಅದರಲ್ಲೂ ಕೆಲವು ಸೂಟ್‌ಕೇಸು ಬ್ಯಾಗುಗಳು ನಮಗೆ ರುಂಬ ಸಹಾಯವಾದವು. ಕಾಡಿನಲ್ಲಿ ನಮಗೆ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಮತ್ತೆಲ್ಲಿಗೋ ಓಡಾಡಲು ಸೂಟುಕೇಸುಗಳೇ ಇರಲಿಲ್ಲ. ನಾವು ಮತ್ತು ನಮ್ಮ ಮಿಲಿಟರಿ ಹುಲಿಗಳ ಪರವಾಗಿ ನಿಮಗೆ ರುಂಬ ಥ್ಯಾಂಕ್ಸ್.

ರಾಜ್‌ಕುಮಾರ್ ಅವರುಗಳು ಈಗ ರುಂಬ ಸಂತೋಷವಾಗಿದ್ದಾರೆಂದು ರೇಡಿಯೋದಲ್ಲಿ ಕೇಳಿ ಸಂತೋಷವಾಯ್ತು. ಪೆರಿಯವರ್‌ಗೆ ನನ್ನ ಮತ್ತು ಸೇತುಕುಳಿಯ ವಣಕ್ಕಂ. ಆ ನಾಗಪ್ಪ ನನ್ನ ಕೈಗೆ ಮುತ್ತು ಕೊಡುವಾಗ ಅವನ ಹಲ್ಲು ತಾಗಿ ಸ್ವಲ್ಪ ಗಾಯವಾಗಿದ್ದು ಈಗ ಗುಣವಾಗಿದೆ. ಡಾ.ಭಾನು ಬಂದು ಟಿಂಚರ್ ಹಚ್ಚಿದ ಮೇಲೆ ಈಗ ಕೊಂಜಮೂ ನೋವಿಲ್ಲೆ....

ಅದಿರಲಿ, ಮುಖ್ಯ ವಿಷಯ ಎಂದರೆ ಈಗ ನೀವು ಮತ್ತು ಕಲೈವರ್ ಕರುಣಾ ನಿಧಿಯವರುಗಳು ಸೇರಿ ನಾವಿರುವ ಜಾಗಕ್ಕೆ ಪೊಲೀಸಿನವರನ್ನು ಕಳಿಸುತ್ತೀರೆಂಬ ಸುದ್ದಿ ಕೇಳಿ ರುಂಬ ಸಂತೋಷವಾಯಿತು. ಪಾಪ, ನಿಮ್ಮ ಪೊಲೀಸರಿಗೂ ಕೆಲಸವಿರಲಿಲ್ಲ. ಅಲ್ಲಿ ಇಲ್ಲಿ ತಿರುಗಾಢಿಕೊಂಡು ಕಾಲ ಕಳೆಯುತ್ತಿದ್ದೆಂದು ಕಾಣುತ್ತದೆ. ಹೆಚ್ಚು ಜನ ಅಧಿಕಾರಿಗಳಿದ್ದಾಗ ಅವರಿಗೆ ಜಾಗ ಕೊಡಿಸುವುದೂ ಕಷ್ಟವೇ. ಆ ಸಾಂಗ್ಲಿಯಾನಾ ಅವರಿಗೆ ಸುಮಾರು ವರ್ಷದಿಂದ ಸರಿಯಾದ ಜಾಗ ಕೊಡದೆ ಅಲ್ಲಿ ಇಲ್ಲಿ ಸತಾಯಿಸಿದಿರಿ. ಅಂತೂ ಕೊನೆಗೂ ಅವರ ಸರ್ವೀಸಿನ ಕೊನೆಯ ದಿನಗಳಲ್ಲಿ ಹಿಲ್ ಸ್ಟೇಷನ್‌ಗೆ ಹಾಕಿ ಒಳ್ಳೆಯದು ಮಾಡಿದಿರಿ. ಅವರೂ ಪಾಪ ಮಿಜೋರಾಂ ಕಾಡುಗಳನ್ನು ಮಾತ್ರ ನೋಡಿದವರು, ಇಲ್ಲಿನ ಕಾಡುಗಳನ್ನೂ ನೋಡಲಿ. ಆದರೆ ಶಿವಪೂಜೆಯ ಮಧ್ಯೆ ಕರಡಿ ಬಿಟ್ಟ ಹಾಗೆ ಆ ಬಿದರಿಯನ್ನೇಕೆ ಇಲ್ಲಿಗೆ ಹಾಕಿದಿರಿ, ಅದೇ ಅರ್ಥವಾಗಿಲ್ಲ. ಇನ್ನೊಬ್ಬರು ಕೆಂಪಯ್ಯ ಇಲ್ಲಿ ಕುರಿ ಜಿಂಕೆ, ಜೇನುತುಪ್ಪ ತಿಂದು ಎಂಜಾಯ್ ಮಾಡಬಹುದು.

ಒಂದಷ್ಟು ಜನ ಪೊಲೀಸರಿಗೆ ಕೆಲಸ ಕೊಟ್ಟು ಒಳ್ಳೆಯದು ಮಾಡಿದಿರಿ ಅದಕ್ಕಿಂತಲೂ ಮುಖ್ಯವಾಗಿ ಅವರಿಗೆ ವೀರಪ್ಪನ್ ಹಿಡಿಯಲು ಹೋದವರು ಎಂದು ಸಂಬಳ, ಭತ್ಯೆ ಜಾಸ್ತಿ ಮಾಡುವುದರಿಂದ ಅವರಿಗೂ ಖುಷಿಯಾಗಬಹುದು, ಇರಲಿ.

ಇತ್ತೀಚೆಗೆ ನಿಮ್ಮ ಮಾಹಿತಿ ತಂತ್ರಜ್ಞಾನದ ದೊಡ್ಡ ಸಂತೆ ನಡೆಯಿತೆಂದು ತಮಿಳುನಾಡಿನಿಂದ ಬಂದ ನಮ್ಮ ವರದಿಗಾರರು ಹೇಳಿದರು. ಎಲ್ಲಿಂದ ಎಲ್ಲಿಗೆ ಬೇಕಾದರೂ ಮಾಹಿತಿ ಪಡೆಯಬಹುದೆಂದು ನಮಗೆ ತಿಳಿಸಿದರೆ ನಮಗೂ ಈಗ ನೀವು ಅತ್ಯಂತ ಗುಟ್ಟಾದ ಮಾಹಿತಿಗಳನ್ನು ನಾನು ಕೂತಲ್ಲಿಗೆ ತಿಳಿಸುತ್ತಿರುವುದಕ್ಕೆ ವಂದನೆಗಳು. ಅದರಲ್ಲೂ ಈ ವಾರದಲ್ಲಿ ನೀವು ಎಸ್‌ಟಿಎಫ್ ಪಡೆಯನ್ನು ಕಾಡಿಗೆ ಬಿಡಲು ನಿರ್ಧಾರ ಮಾಡಿದ್ದು, ಅದಕ್ಕಾಗಿ ಸಾಂಗ್ಲಿಯಾನಾ ರೀತಿಯ ಫೇಮಸ್ ಜನರನ್ನು ನೇಮಿಸಿದ್ದು, ಅವರ ಜೊತೆ ಕೆಂಪಯ್ಯ ಮತ್ತು ಶಂಕರ ಬಿದರಿಯವರನ್ನು ಕಳಿಸಿದ್ದು, ಪ್ರತಿ ದಿನ ನಿಮ್ಮ ಕಾರ್ಯಾಚರಣೆ ಏನೇನು ಎಂಬುದನ್ನು ಪತ್ರಿಕೆಗಳಲ್ಲಿ ರೇಡಿಯೋ ಸಂತೋಷವಾಗಿದೆ.

ಈಗಾಗಲೇ ಸಾಂಗ್ಲಿಯಾನಾ ಅವರು ಕಾಡಿಗೆ ಬಂದು ಇಲ್ಲಿಯೇ ಪಿಡಬ್ಲ್ಯೂಡಿ ಗೆಸ್ಟ್‌ಹೌಸ್‌ನಲ್ಲಿ ತಂಗಿರುವುದಾಗಿ ನಿಮ್ಮ ರೇಡಿಯೋ ರಿಪೋರ್ಟರ್ ಹೇಳಿದ್ದಾರೆ. ಇಷ್ಟರಲ್ಲೇ ಅವರನ್ನು ಭೇಟಿಮಾಡುವ ಸಂದರ್ಭ ಒದಗಿ ಬರಲೂಬಹುದು. ಅದಿರಲಿ, ಈಗ ನೀವು ಒದಗಿಸುತ್ತಿರುವ ಮಾಹಿತಿಗಳನ್ನು ಮುಂದೆಯೂ ಒದಗಿಸುತ್ತೀರೆಂಬ ನಂಬಿಕೆ ನಮಗಿದೆ. ಅಲ್ಲಿಗೆ ಬರುತ್ತಿರುವ ಪೊಲೀಸರು, ಅವರ ಹತ್ತಿರ ಇರುವ ಆಯುಧಗಳು, ಅವರಿಗಿರುವ ಸಲಕರಣೆಗಳು ಇತ್ಯಾದಿ ಮಾಹಿತಿಗಳನ್ನು ನಿಮ್ಮ ತಂತ್ರ ಜ್ಞಾನದ ಮೂಲಕ ಅದಷ್ಟು ಶೀಘ್ರ ನಮಗೆ ತಲುಪುವ ಹಾಗೆ ಮಾಡಿದರೆ ಅದರಿಂದ ನಮಗೆ ತುಂಬಾ ಉಪಕಾರವಾಗುತ್ತದೆ. ಹಿಂದಿನಿಂದಲೂ ಇದೇ ಬಗೆಯ ಸಹಕಾರ ನೀಡಿರುವ ನೀವು ಇನ್ನು ಮುಂದೆಯೂ ನಮಗೆ ಅದೇ ಬಗೆಯ ಸಹಕಾರ ನೀಡುತ್ತೀರೆಂದು ನಂಬಿದ್ದೇವೆ.

ಕೊನೆಯದಾಗಿ, ಇತ್ತೀಚೆಗೆ ಪಾತಾಳದಲ್ಲಿದ್ದರೂ ವೀರಪ್ಪನ್‌ನನ್ನು ಹುಡುಕಿ ತೆಗೆಯುವ ಯಂತ್ರಗಳು ಬಂದಿವೆ ಎಂದು ಮೊನ್ನೆ ವಿಧಾನಸಭೆಯಲ್ಲಿ ಆದ ಚರ್ಚೆಯ ಸುದ್ದಿ ನಮಗೆ ತಿಳಿದಿದೆ. ಅದರ ಬಗೆಗೆ ನಮಗೆ ಇನ್ನೂ ಪತ್ರಿಕೆಗಳಲ್ಲಾಗಲೀ, ಟಿವಿ ರೇಡಿಯೋಗಳಲ್ಲಾಗಲೀ ಮಾಹಿತಿ ತಲುಪಿಲ್ಲ. ಶೀಘ್ರ ಕಳಿಸುವುದು.

ಪತ್ರಿಕೆಯ ಕೆಲವರು ನಮ್ಮ ಭಾನು ಡಾಕ್ಟರಮ್ಮನ ಬಗೆಗೆ ತುಂಬಾ ಕೀಳಾಗಿ ಬರೆಯುತ್ತಿದ್ದಾರಂತೆ. ಅವರ ಗ್ರಾನೈಟ್ ವ್ಯವಹಾರವನ್ನು ಕಿಂಡಲ್ ಮಾಡಿದ್ದಾರಂತೆ. ಇದು ತಪ್ಪು ಎಂದು ನೀವು ಸ್ಪಷ್ಟವಾಗಿ
ಪೇಪರ್‌ನವರಿಗೆ ಹೇಳಬೇಕು. ನಮ್ಮ ನಕ್ಕೀರನ್ ಗೋಪಾಲ್ ಥರ ಇರಲು ಅವರಿಗೇನು ದಾಡಿ? ಇವತ್ತು ಭಾನುಗೆ ತೊಂದರೆ ಕೊಟ್ಟವರು ನಾಳೆ ಕೃಷ್ಣ ಅವರಿಗೂ ಕರುಣಾನಿಧಿ ಅವರಿಗೂ ತೊಂದರೆ ಕೊಡಬಹುದು ಎಂಬುದನ್ನು ಮರೆಯಬೇಡಿ... ಇನ್ನು ಹೆಚ್ಚಿನ ವಿಶೇಷವಿಲ್ಲ.
ನಿಮ್ಮ ಮಾಹಿತಿ ತಂತ್ರಜ್ಞಾನ ಹೀಗೇ ಮುಂದುವರಿಯಲಿ ಎಂದು ಆಶಿಸುತ್ತೇನೆ.
ವಣಕ್ಕಂ
ವೀರಪ್ಪನ್

 

 ಹಳೆಯ ರಗಳೆಗಳು

ಕೋಟಿ ತಿಂದೋನು ಕೋಲಾ ಕುಡಿಬೇಕಲ್ವೆ?

`ಹಿಂದಿನದು ಫೀಮೆಲ್ ಸರ್ಕಾರ;ಈಗಿನದು ಇ-ಮೇಲ್'

ನಿಮಗೆ ಮಲ್ಯ ಬಿಯರ್ ಇಷ್ಟ ಅಲ್ಲವೇ....?

ದೇವರೇ ಇವರನ್ನು ಕ್ಷಮಿಸು.... ಯಾಕೆಂದರೆ!?

ನಬೀ... ಯೇ ಸಬೀ ಕ್ಯಾ ಹೆ...

ಅಯೋಧ್ಯೆಯಲ್ಲಿ ಪಾರ್ಕು ಕಟ್ಟಿಸಿದ್ರೆ ಯುವಕರು ಅಡ್ಡದಾರಿ ಹಿಡೀತಾರೆ!!!

ಪ್ರೀತಿ, ಪ್ರೇಮಕೆ ಜೈ ಜೈ! ಸನ್ಯಾಸತ್ವಕೆ ಗುಡ್ ಬೈ!!

`ದುಡ್ಡು ತಗೊಂಡ್ರೆ ಅದು ಲಂಚ ಅಲ್ಲ'

ಎಲ್ಲಿ? ಬಾಯಿ ತೆಗೇರಿ....

ಚೆನ್ನಾಗಿರೋ ಕತೆ ಬೇಕಂದ್ರೆ ಚೆನ್ನೈಯೇ ಸರಿ...!

ಯಾರ್ರೀ ಬೆಂಗ್ಳೂರ್....ರಾಂಡಿ ಹೈದರಾಬಾದ್

ಪರಿಹಾರ ಸತ್ತೋರಿಗಾ....ಇದ್ದೋರಿಗಾ ?

ಹೃತಿಕ್ ಮದುವೇಲಿ ನನ್ನ ತಾಯಿ ಅಂತ ಕರೀತಿಯೇನೋ?!

 

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com