|
ಕೋಟಿ ತಿಂದೋನು ಕೋಲಾ ಕುಡಿಬೇಕಲ್ವೆ?
ಎಲ್ಲಿ ನೋಡಿದರೂ ಮ್ಯಾಚ್
ಫಿಕ್ಸಿಂಗ್, ಮ್ಯಾಚ್ ಬೆಟ್ಟಿಂಗ್ ಸುದ್ದಿ ಕೇಳಿ ಕೇಳಿ ರೋಸಿಹೋಗಿತ್ತು.
ಅದೆಲ್ಲಕ್ಕಿಂತ ಮುಖ್ಯವಾಗಿ ತನಿಖೆಯಿಂದಾಗಿ ತನ್ನ ಪೂಜನೀಯ
ಹೀರೋಗಳೆಲ್ಲ ಎಲ್ಲಿ ಮುಕ್ಕಾಗುವರೋ ಎಂಬ ನೋವು ಅವನನ್ನು
ಬಾಧಿಸುತ್ತಿತ್ತು

ಸತ್ಯಮೂರ್ತಿ ಆನಂದೂರು
ಬೆಂಗಳೂರು
smanandur@vikrantakarnataka.com
ಇಡೀ ದೇಶವನ್ನು ಕ್ರಿಕೆಟ್ ಮ್ಯಾಚ್
ಫಿಕ್ಸಿಂಗ್ ವಿವಾದ ಜ್ವರದಂತೆ ಕಾಡಿತು.
ಚಾಮಿಯ ತಲೆಬಿಸಿಗೂ ಕಾರಣವಿತ್ತು.
ಎಲ್ಲಿ ನೋಡಿದರೂ ಮ್ಯಾಚ್ ಫಿಕ್ಸಿಂಗ್, ಮ್ಯಾಚ್ ಬೆಟ್ಟಿಂಗ್
ಸುದ್ದಿ ಕೇಳಿ ಕೇಳಿ
ರೋಸಿಹೋಗಿತ್ತು. ಅದೆಲ್ಲಕ್ಕಿಂತ ಮುಖ್ಯವಾಗಿ ತನಿಖೆಯಿಂದಾಗಿ ತನ್ನ
ಪೂಜನೀಯ ಹೀರೋಗಳೆಲ್ಲ ಎಲ್ಲಿ ಮುಕ್ಕಾಗುವರೋ ಎಂಬ ನೋವು
ಅವನನ್ನು ಬಾಧಿಸುತ್ತಿತ್ತು. ಯಾಕೆಂದರೆ ದಿನವಿಡೀ ಕಾಲ ಮೇಲೆ ಕಾಲು
ಹಾಕಿಕೊಂಡು ಟಿವಿ ಮುಂದೆ ಕೂತೇ ರಂಜನೆ ಪಡೆಯುವ ಆಟ ಇದೊಂದೇ.
ಕಾಸಿಲ್ಲ ಕರಿಮಣಿಯಿಲ್ಲ ಎಂಬ ಮಾತು ಇದಕ್ಕೆ ಅತ್ಯಂತ ಅಚ್ಚುಕಟ್ಟಾಗಿ
ಹೊಂದಿಕೆಯಾಗುತ್ತಿತ್ತು. ಇಂಥ ಒಂದು ಪುಕ್ಕಟೆ ಮನರಂಜನೆ ಎಲ್ಲಿ
ಅಳಿಸಿ ಹೋಗುವುದೋ ಎಂಬುದೇ ಅವನ ದುಃಖಕ್ಕೆ ಮೂಲಕಾರಣ.
ಸಚಿನ್ ಮ್ಯಾನ್ ಆಫ್ ದ ಮ್ಯಾಚ್
ಆಗುವುದನ್ನು ಇನ್ನು ನೋಡಲು ಸಾಧ್ಯವೇ ಇಲ್ಲವೇ? ಕುಂಬ್ಳೆಯ
ಗೂಗ್ಲಿ ನಮ್ಮ ಕೈತಪ್ಪಿ ಹೋಯಿತೇ? ಪ್ರಸಾದ್‌ನ ಬೆಂಕಿಚೆಂಡು
ನಂದಿಹೋಗುವುದೇ? ಮೋಂಗಿಯಾನ ಆಯ್ ಗೋ ಉದ್ಗಾರ ಇನ್ನು
ಕೇಳಲು ಸಾಧ್ಯವೇ ಇಲ್ಲವೇ? ಅಜರ್ ಆಟದ ಮಧ್ಯೆ ಸಂಗೀತಾ
ಬಿಜಲಾನಿಯ ಮುಖಾರವಿಂದ ಇನ್ನು ಮುಂದೆ ಕಾಣದಾಗುವುದೇ?....
ಇತ್ಯಾದಿ ಬಾಧೆಗಳೆಲ್ಲಾ ಪುಂಖಾನು ಪುಂಖವಾಗಿ ಅವನ ಮನದಲ್ಲಿ ಹಾದು
ಹೋಗತೊಡಗಿದವು.
ಏನು ಇಂಡಿಯಾ ಟೀಮ್ ಪಾಕಿಸ್ತಾನ
ಕೈಲಿ ಒಂದೇ ಒಂದು ರನ್‌ನಲ್ಲಿ ಸೋತಷ್ಟು ದುಃಖ
ಅನುಭವಿಸ್ತಿದ್ದೀಯಾ?ಎಂದು ಬೆನ್ನಿನ ಮೇಲೆ ಮಿತ್ರ ಗುಲ್ಷನ್
ಕುಮಾರ್ ಗುದ್ದು ಹಾಕಿದಾಗಲೇ ಚಾಮಿಗೆ ಎಚ್ಚರವಾದದ್ದು.
ಅದೆಲ್ಲಾ ಕಣಯ್ಯಾ ತನಿಖೆ ಆದರೆ
ನಮ್ ಹುಡುಗರು ಎಲ್ಲಿ ಸಿಕ್ಕಿ ಬೀಳ್ತಾರೋ ಅನ್ನೋದೇ ನನ್ನ
ಹೆದರಿಕೆ.... ಎಂದ ಚಾಮಿ.
ಸಿಕ್ಕೊಳ್ಲಿ ಬಿಡು ಕೋಟಿ ತಿಂದೋನು
ಕೋಲಾ ಕುಡೀಲೇಬೇಕಲ್ವ?ಎಂದು ಗುಲ್ಷನ್ ರಾಗ ಎಳೆದ.
ಛೆ ಛೆ, ನನಗಂತೂ ಅದನ್ನು
ಯೋಚಿಸೋಕೂ ಸಾಧ್ಯ ಆಗ್ತಿಲ್ಲ ಅಷ್ಟಕ್ಕೆ ನೀನು ಇಷ್ಟೆಲ್ಲಾ ತಲೆ ಬಿಸಿ
ಮಾಡಿಕೊಂಡರೆ? ಯಾರೂ ಸಿಕ್ಕೊಳಲ್ಲ ಬೇಕಾದ್ರೆ ಬೆಟ್ಸ್....
ಹಂಡ್ರೆಡ್ ರುಪೀಸ್?
ಚಾಮಿ ಸೀರಿಯಸ್ಸಾಗಿ ಗುಲ್ಷನ್ ಮುಖ
ನೋಡಿದ.
ನೋಡು ಚಾಮಿ, ಯಾರಿಗೆ ಏನೂ
ಆಗೋದಿಲ್ಲ, ನೀನು ಈ ಥರ ದುಃಖ ಪಡೋದ್ರಲ್ಲಿ ಅರ್ಥವೇ ಇಲ್ಲ.
ನಮ್ಮಜ್ಜ ಒಂದು ಕತೆ ಹೇಳ್ತಾ ಇದ್ರು, ಅದನ್ನ ಕೇಳಿದ ಮೇಲಾದ್ರೂ
ನಿನಗೆ ಸಮಾಧಾನ ಆಗಬಹುದು ಎಂದು ಗುಲ್ಷನ್ ಕತೆ ಹೇಳಲು
ಶುರು ಮಾಡಿದ.
ಒಂದೂರಿನಲ್ಲಿ ಒಬ್ಬ ರಾಜ ಇರ್ತಾನೆ.
ಬರಗಾಲ ಪ್ರವಾಹ ಬಡತನ ಇದ್ರೂ ಸುಭಿಕ್ಷವಾದ ರಾಜ್ಯ. ರಾಜನಿಗೋ
ಕುಸ್ತಿ ಖಯಾಲಿ, ತನ್ನ ಅರಮನೆಯ ಆವರಣದಲ್ಲೇ ಹತ್ತಾರು
ಉಸ್ತಾದರುಗಳನ್ನು ತಯಾರು ಮಾಡಿದ್ದ. ಬೇರೆ ರಾಜ್ಯದಿಂದ
ಯಾರಾದರೂ ಪೈಲ್ವಾನರು ಕುಸ್ತಿಗೆ ಬಂದರೆ ಇವರನ್ನು ಅಖಾಡಕ್ಕೆ
ಇಳಿಸುತ್ತಿದ್ದ, ಹಾಗೇ ಗೆದ್ದವರಿಗೆ ಸಾಕಷ್ಟು ವರಹಗಳ
ಬಹುಮಾನವನ್ನೂ ನೀಡುತ್ತಿದ್ದ. ಒಂದೊಂದು ಸಲ ಮಹಾರಾಣಿಯೋ
ಅಥವಾ ರಾಜಕುಮಾರಿಯೋ ಗೆದ್ದ ಪೈಲ್ವಾನ್ ವೀರರಿಗೆ ಮುತ್ತಿನ
ಹಾರಗಳನ್ನು ಕೊಡುವಂತೆ ಮಾಡುತ್ತಿದ್ದ. ಒಟ್ಟಿನಲ್ಲಿ ಕುಸ್ತಿ
ಪಟುಗಳು ರಾಜ್ಯದ ಹೀರೋಗಳಾಗಿದ್ದರು.
ಒಂದು ಸಲ ಏನಾಯಿತೆಂದರೆ ಪಕ್ಕದ
ರಾಜ್ಯದ ಕುಸ್ತಿವೀರನೊಬ್ಬ ರಾಜ್ಯಕ್ಕೆ ಆಗಮಿಸಿದ.
ಏಳುಸಮುದ್ರದಾಚೆಯ ಕೀಳು ಸಮುದ್ರವನ್ನೊಳಗೊಂಡಿರುವ
ಸಮಸ್ತ ಭೂಪ್ರದೇಶವನ್ನು ತಾನು ಗೆದ್ದು ಬಂದಿರುವುದಾಗಿಯೂ ಈ
ರಾಜ್ಯದ ಕುಸ್ತಿವೀರನನ್ನು ಗೆದ್ದು ತಾನು ಗೆದ್ದು ತಾನು ಜಗದೇಕ
ಕಿಲಾಡಿ ಎಂಬ ಹೆಸರಿಗೆ ಪಾತ್ರನಾಗುವುದಾಗಿಯೂ ಸಾರಿದ.
ರಾಜನಿಗೆ ತಲೆಬಿಸಿಯಾಯಿತು. ತನ್ನ
ರಾಜ್ಯದ ಕುಸ್ತಿ ಪಟುಗಳನ್ನು ಹುರಿದುಂಬಿಸತೊಡಗಿದ. ರಾಜ್ಯದಲ್ಲಿ
ಒಂದು ಪ್ರಶಸ್ತ ದಿನ ನೋಡಿ ಪರರಾಜ್ಯದ ವೀರನೊಂದಿಗೆ ಕುಸ್ತಿ
ಪಂದ್ಯವನ್ನು ಅಣಿಗೊಳಿಸಿದ ಅಂದು ಮಹಾರಾಣಿ, ರಾಜಕುಮಾರಿ,
ಆಸ್ಥಾನದ ಸಮಸ್ತ ಹಿರಿಯರೂ ಕುಸ್ತಿ ಪಂದ್ಯಕ್ಕೆ ಆಗಮಿಸಿದರು. ರಾಜ
ಗೆದ್ದವರಿಗೆ ಹತ್ತು ಸಾವಿರ ವರಹಗಳನ್ನು ಅಲ್ಲೆ ಘೋಷಿಸಿದ. ರಾಣಿ
ಒಂದು ಮುತ್ತಿನ ಹಾರ ಘೋಷಿಸಿದರೆ, ರಾಜಕುಮಾರಿ ಒಂದು ವಜ್ರದ
ಉಂಗುರ ಘೋಷಿಸಿದಳು.
ಕುಸ್ತಿ ಆರಂಭವಾಯಿತು. ಇಬ್ಬರೂ
ಮಲ್ಲರು ತೊಡೆ ತಟ್ಟಿಕೊಳ್ಳುತ್ತ ಗೂಳಿಗಳಂತೆ ಬುಸುಗುಟ್ಟುತ್ತ,
ಇನ್ನೊಂದು ಒಬ್ಬರನ್ನೊಬ್ಬರು ಸಿಗಿದೇ ಹಾಕುವವರಂತೆ
ಉರಿಯತೊಡಗಿದರು. ಒಂದನೇ ಸುತ್ತಿನಲ್ಲಿ ತಮ್ಮ ರಾಜ್ಯದ ಮಲ್ಲನೇ
ಮೇಲುಗೈ ಪಡೆದದ್ದರಿಂದ ಎಲ್ಲರಿಗೂ ಸಂತಸವಾಗಿತ್ತು. ಆನರ
ಹರ್ಷೋದ್ಗಾರ ಮುಗಿಲು ಮುಟ್ಟಿತು. ಮಲ್ಲನಿಗೆ ಬಾಯಾರಿಕೆಗೆಂದು
ನೀರು ಹಾಗೂ ಮೈ ಬೆವರು ಒರೆಸಿಕೊಳ್ಳಲು ವಸ್ತ್ರಗಲನ್ನು ನೀಡಲು
ಪರಿಚಾರಕ ಓಡೋಡಿ ಹೋದ. ಹೋದವನೇ ಅವನ ಕಿವಿಯಲ್ಲಿ ಏನೋ
ಪಿಸುಗುಟ್ಟಿದ.
ಸರಿ ಇದಾದನಂತರ ಎರಡನೆ
ಸುತ್ತಿನಲ್ಲಿ ಮಲ್ಲ ಹೈರಾಣಾಗಿ ಬಿದ್ದು ಬಿಟ್ಟ ಮೂರು ನಾಲ್ಕನೇ ಸುತ್ತಿನ
ಹೊತ್ತಿಗೆ ನೆಲದಿಂದ ಮೇಲೇಳಲು ಸಾಧ್ಯವಾಗದಷ್ಟು ನಿತ್ರಾಣಗೊಂಡ.
ಹಳೆಯ
ರಗಳೆಗಳು
`ಹಿಂದಿನದು ಫೀಮೆಲ್
ಸರ್ಕಾರ;ಈಗಿನದು ಇ-ಮೇಲ್'
ನಿಮಗೆ
ಮಲ್ಯ ಬಿಯರ್ ಇಷ್ಟ ಅಲ್ಲವೇ....?
ದೇವರೇ ಇವರನ್ನು ಕ್ಷಮಿಸು.... ಯಾಕೆಂದರೆ!?
ನಬೀ... ಯೇ ಸಬೀ ಕ್ಯಾ ಹೆ...
ಅಯೋಧ್ಯೆಯಲ್ಲಿ ಪಾರ್ಕು ಕಟ್ಟಿಸಿದ್ರೆ ಯುವಕರು ಅಡ್ಡದಾರಿ ಹಿಡೀತಾರೆ!!!
ಪ್ರೀತಿ,
ಪ್ರೇಮಕೆ ಜೈ ಜೈ! ಸನ್ಯಾಸತ್ವಕೆ ಗುಡ್ ಬೈ!!
`ದುಡ್ಡು ತಗೊಂಡ್ರೆ ಅದು ಲಂಚ ಅಲ್ಲ'
ಎಲ್ಲಿ? ಬಾಯಿ ತೆಗೇರಿ....
ಚೆನ್ನಾಗಿರೋ ಕತೆ ಬೇಕಂದ್ರೆ ಚೆನ್ನೈಯೇ ಸರಿ...!
ಯಾರ್ರೀ ಬೆಂಗ್ಳೂರ್....ರಾಂಡಿ ಹೈದರಾಬಾದ್
ಪರಿಹಾರ ಸತ್ತೋರಿಗಾ....ಇದ್ದೋರಿಗಾ ?
ಹೃತಿಕ್ ಮದುವೇಲಿ ನನ್ನ ತಾಯಿ ಅಂತ
ಕರೀತಿಯೇನೋ?!
|