Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

 

Monday, 16 October 2006 12:59 PM

`ಹಿಂದಿನದು ಫೀಮೆಲ್ ಸರ್ಕಾರ;ಈಗಿನದು ಇ-ಮೇಲ್'

ಕ್ಲಿಂಟನ್ ಬಂದರೆ ಬೆಂಗಳೂರಿಗೆ ಹೋಗ ದಿರಲೆಂದು ಆಂಧ್ರದ ನಾಯ್ಡು ಮಸಲತ್ತು ನಡೆಸುತ್ತಿದ್ದಾರೆಂಬ ಗುಮಾನಿ ಹರಡಿತ್ತು. ಕಂಪ್ಯೂಟರ್ ಮುಖ್ಯಮಂತ್ರಿ ಕೃಷ್ಣ ಅವರಿಗೆ ತಲೆನೋವು ಶುರುವಾಗಿತ್ತು.

 

S.M. Anandu Editor, Vikranta Karnataka Weekly

ಸತ್ಯಮೂರ್ತಿ ಆನಂದೂರು

ಬೆಂಗಳೂರು

smanandur@vikrantakarnataka.com

 


ಟ್ರಿಣ್.... ಟ್ರಿಣ್.... ಟ್ರಿಣ್...
`ಹಲೋ..... ಯಾರು?'
`ನಾನ್ರೀ ಸಿಎಮ್ ಮಾತಾಡ್ತಿರೋದು.... ನಿಮಗೆ...'
`ಹೋ.... ಸರ್ಕ್ಯುಲೇಶನ್ ಮ್ಯಾನೇಜರಾ? ಸಾರ್..... ಇವತ್ತು ನಮ್ ಏರಿಯಾಗೆ
ಪೇಪರ್ ಲೇಟ್ ಆಗಿ ಬಂದಿದೆ ಸಾರ್....'
`ರೀ.... ನಾನ್ರೀ ಸಿಎಮ್ಮು.... ಮುಖ್ಯಮಂತ್ರಿ ಆಫ್ ಕರ್ನಾಟಕ್ ಕಂಡ್ರೀ ಮಾತಾಡ್ತಿರೋದು. ನಿಮಗೆ ಒಂದು ಲೆಟರ್ ಕಳ್ಸಿದೀನಿ.... ಸ್ಪೀಡ್ ಫೋಸ್ಟ್‌ನಲ್ಲಿ.... ಅದು ಕ್ಲಿಂಟನ್ ಅವ್ರಿಗೆ ನಾನೇ ಖುದ್ದು ಬರ್‍ದಿರೋದು. ಸ್ವಲ್ಪ ನೋಡಿ ನಿಮ್ ರಿಯಾಕ್ಷನ್ ಹೇಳಿ.... ಯಾಕಂದ್ರೆ ಆ ನಾಯ್ಡು ನಮಗೆ ಭಾರೀ ತೊಂದರೆ ಕೊಡ್ತಿದಾನೆ ಕಂಡ್ರೀ..... ಎಲ್ಲೀವರೆಗೆ ಬಂದಿದ್ದಾನೆ ಅಂದ್ರೆ ಕ್ಲಿಂಟನ್ ಸಾಹೇಬ್ರನ್ನ ಬೆಂಗಳೂರಿಗೆ ಬರದ ಹಾಗೆ ಮಾಡಿ ಬರೀ ಹೈದ್ರಾಬಾದ್‌ಗೆ ಮಾತ್ರ ಬರೋ ಹಾಗೆ ಮಾಡ್ತಿದಾನೆ.
ಇಂಟರ್‌ನ್ಯಾಷನಲ್ ಫೀಲ್ಡ್‌ನಲ್ಲಿ ನಮಗೆಷ್ಟು ಶೇಮ್ ಗೊತ್ತಾ... ಅದ್ಕೆ ಸ್ಪ್ರೈಟ್ ಆಗಿ ಬಿಲ್‌ಗೆ ಈ ಮೇಲ್ ಮಾಡಿದೀನಿ.....


ಚಾಮಿ ಅವತ್ತೆಲ್ಲಾ ಕಾದನಂತರ ಮರುದಿನ ಸಂಜೆ ಸ್ಪೀಡ್ ಪೋಸ್ಟ್ ಸ್ಪೀಡಾಗಿ ಬಂತು. ಚಾಮಿ ಓದತೊಡಗಿದ.

ಪ್ರೀತಿಯ ಕ್ಲಿಂಟನ್ ಅವರಿಗೆ,
ಕರ್ನಾಟಕ ಸ್ಟೇಟ್ ಆಫ್ ಇಂಡಿಯಾದ ಚೀಫ್ ಮಿನಿಸ್ಟರ್ ಕಿಷನ್ ಮಾಡುವ ಅನಂತಾನಂತ ವಂದನೆಗಳು. ನಾನು, ಪ್ರೇಮ ಕ್ಷೇಮ, ಹಿಲರಿಯವರಿಗೂ ನಿಮ್ಮ ಮುದ್ದು ಪುಟ್ಟಿ ಚೆಲ್ಸಿಗೂ ನಮ್ಮ ನೆನಪುಗಳನ್ನು ತಿಳಿಸಿ.

ಅಂದ ಹಾಗೆ ನಾನು ಹಿಂದೆ ಹಲವು ಬಾರಿ ಅಮೆರಿಕೆಗೆ ಬಂದಿದ್ದೆ. ಆದರೆ ದುರ್ದೈವವಶಾತ್ ಆಗ ನೀವು ಅಧಿಕಾರದಲ್ಲಿ ಇರಲಿಲ್ಲ. ಅದಕ್ಕೆ ಈಗಲೂ ನನಗೆ ದುಃಖವಿದೆ, ಇರಲಿ. ಇತ್ತೀಚೆಗೆ ನೀವು ವಾಯುಮಾರ್ಗವಾಗಿ ನಮ್ಮ ದೇಶಕ್ಕೆ ಬಂದು ಹೋಗುವ ವಿಷಯ ತಿಳಿದು ಅತೀವ ಸಂತಸಪಟ್ಟವರಲ್ಲಿ ನಾನೂ ಒಬ್ಬ, ಯಾಕೆಂದರೆ ಅಮೆರಿಕ ಮತ್ತು ಅದರ ಅಧ್ಯಕ್ಷರ ಘನತೆ ಗೌರವಗಳು
ಏನೆಂಬುದು ನನಗೆ ಚೆನ್ನಾಗಿ ಗೊತ್ತಿದೆ. ಬೇರೆ ಎಲ್ಲಾ ವಿಚಾರಗಳೂ ಹಾಗಿರಲಿ, ಕಂಪ್ಯೂಟರ್ ಕ್ಷೇತ್ರದಲ್ಲಿ ನೀವು ಸಾಧಿಸಿದ ಸಾಧನೆ ಇನ್ನೂ ನೂರು ವರ್ಷಗಳವರೆಗೆ ನಿಲ್ಲುವಂಥದು.

ಹಾಗೆಯೇ ನಾನು ಹೆಗ್ಗಳಿಕೆಗೆಂದು ಹೇಳುತ್ತಿಲ್ಲ. ನಾನು ಚೀಫ್ ಮಿನಿಸ್ಟರ್ ಆಗಿ ಅಧಿಕಾರ ವಹಿಸಿಕೊಂಡು ಕೇವಲ ನಾಲ್ಕು ತಿಂಗಳೂ ಕಳೆದಿಲ್ಲ. ಆದರು ಕರ್ನಾಟಕ ಇವತ್ತು ಕಂಪ್ಯೂಟರ್ ಕ್ಷೇತ್ರದಲ್ಲಿ ಅಮೆರಿಕದ ಪಕ್ಕದಲ್ಲಿ ನಿಲ್ಲುತ್ತಿದೆ ಎಂದು ಸಿಂಗಪೂರ್ ಪತ್ರಿಕೆಗಳು ನಮ್ಮ ಕ್ಯಾಪಿಟಲ್‌ನಿಂದ ವರದಿ ಮಾಡಿವೆ. ನಾನೀಗ ನಿಮಗೆ ಈಮೇಲ್ ಮಾಡುವುದನ್ನು ಕಲಿತದ್ದೂ ಕೇವಲ ಒಂದು ತಿಂಗಳ ಹಿಂದೆಯಷ್ಟೇ.

ನೀವು ಇಂಡಿಯಾಕ್ಕೆ ಬಂದಾಗ ನಮ್ಮ ಕ್ಯಾಪಿಟಲ್ ಸಿಟಿಯಾದ, ಭವಿಷ್ಯದ ಸಿಂಗಪೂರ್ ಎಂದು ಕರೆಯಿಸಿಕೊಳ್ಳುತ್ತಿರುವ ಬ್ಯಾಂಗಲೂರ್‌ಗೆ ಬಂದೇ ಬರುತ್ತೀರೆಂಬ ವಿಶ್ವಾಸ ನಮಗಿದೆ. ಕೊನೆಯ ಪಕ್ಷ ನಮ್ಮ ಐಟಿ ಪಾರ್ಕ್ ನೋಡಲಾದರೂ ನೀವು ಬರಲೇಬೇಕು. ಅಷ್ಟೊಂದು ಸಮೃದ್ಧವಾದ ಡೆವಲಪ್‌ಮೆಂಟ್ ನಮ್ಮಲ್ಲಿ ಆಗಿದೆ.

ನಾವೀಗ ಇಡೀ ರಾಜ್ಯದ ವ್ಯವಹಾರವನ್ನು ಕಂಪ್ಯೂಟರ್ ಮೂಲಕವೇ ಮಾಡುತ್ತಿದ್ದೇವೆ. ನೀರಿನ ಬಿಲ್ ಮತ್ತು ಕರೆಂಟ್ ಬಿಲ್‌ಗಳನ್ನೂ ಕಂಪ್ಯೂಟರ್ ಮೂಲಕವೇ ಜನರಿಗೆ ಕಳಿಸಿಕೊಡುತ್ತಿದ್ದೇವೆ. ಮೊನ್ನೆ ಒಂದು ಕಂಪನಿ ಸರಿಯಾಗಿ ಕರೆಂಟ್ ಬಿಲ್ ಕಟ್ಟಿಲ್ಲವೆಂದು ನೋಟಿಸನ್ನೂ ಕಂಪ್ಯೂಟರ್ ಮೂಲಕವೇ ಕಳಿಸಿದ್ದೇವೆ. ಬಿಲ್ ಅಂದ ತಕ್ಷಣ ನಿಮ್ಮ ಹೆಸರಿನ ಕಾರಣವಾಗಿ ನೀವು ಅಪಾರ್ಥಮಾಡಿಕೊಳ್ಳಬಾರದಾಗಿ ಮತ್ತೊಮ್ಮೆ ವಿನಂತಿ.

ನಮ್ಮ ಸ್ಟೇಟ್‌ನಲ್ಲಿ ಇತ್ತೀಚೆಗೆ ಒಂದು ಜೋಕ್ ಕೇಳ್ತಾ ಇದೆ. ಇದು ಇಡೀ ಕರ್ನಾಟಕದಾದ್ಯಂತ ಸರ್ಕ್ಯುಲೇಟ್ ಆಗ್ತಿದೆ. ಹಿಂದಿನದು ಫೀಮೇಲ್ ಸರ್ಕಾರ ಆಗಿತ್ತು. ಈಗಿನದು ಈಮೇಲ್ ಸರ್ಕಾರ ಅಂತ. ಅಂದರೆ ಐಟಿನಲ್ಲಿ ನಾವು ಎಷ್ಟು ಮುಂದುವರಿದಿದ್ದೀವಿ ಅನ್ನೋದು ಗೊತ್ತಾಗುತ್ತೆ. ನಮ್ಮ ಇಂಟರ್‌ನೆಟ್‌ನಲ್ಲೆಲ್ಲಾ ಇದೇ ಜೋಕು.

ಇದೆಲ್ಲಾ ನಿಮಗೇ ಗೊತ್ತಿಲ್ಲದೇ ಇಲ್ಲ, ಆದರೂ ಬಾಯಿ ಮಾತಿನ ಪ್ರಸ್ತಾವನೆಗಾಗಿ ಹೇಳುತ್ತಿದ್ದೇನೆ. ಅಷ್ಟೆ, ಅನ್ಯಥಾ ಭಾವಿಸಬಾರದು.

ಇಷ್ಟೆಲ್ಲಾ ಇದ್ದರೂ ನಮ್ಮ ಸ್ಟೇಟ್‌ನ ಇಂಪ್ರೂವ್‌ಮೆಂಟ್ ಕಂಡು ಹೊಟ್ಟೆಕಿಚ್ಚು ಪಡುವ ಮಂದಿಗೇನೂ ಕೊರತೆಯಿಲ್ಲ. ಕಂಪ್ಯೂಟರ್ ಇದ್ದ ಮೇಲೆ ವೈರಸ್ ಇರಲೇ ಬೇಕಲ್ಲವೇ? ಹಾಗೆ. ಇದು ನಿಮಗೂ ತಿಳಿಯದ ಸಂಗತಿಯೇನಲ್ಲ. ನಮ್ಮ ನೇಬರ್ ಒಬ್ಬರು ನಾಯ್ಡು ಅಂತ ಇದ್ದಾರೆ. ಅವರು ನಿಮಗೆ ನಮ್ಮ ಬಗ್ಗೆ ರಾಂಗ್ ರಿಪೋರ್ಟ್ ಕೊಟ್ಟಿದ್ದಾರೆಂದು ನಮ್ಮ ಇಂಟೆಲಿಜೆನ್ಸ್‌ನಿಂದ ತಿಳಿದು ಬಂದಿದೆ.

ನಮ್ಮ ರಾಜ್ಯದಲ್ಲಿ ಕೊಜೆಂಟ್ರಿಕ್ಸ್ ಕಂಪನಿಗೆ ಅವಮಾನ ಮಾಡಿರುವುದಾಗಿಯೂ, ಎಫ್‌ಕೆಸಿ ಎಂಬ ಅದ್ಭುತ ರುಚಿಯ ಕೋಳಿ ಅಂಗಡಿಯನ್ನು ನಮ್ಮ ರಾಜ್ಯದಲ್ಲಿ ಧ್ವಂಸ ಮಾಡಲಾಯಿತಾದ್ದರಿಂದ ರಕ್ಷಣೆಯ ಸಮಸ್ಯೆಯಿದೆಯೆಂದೂ, ಬೀಜಗಳಲ್ಲಿ ರಾಜಬೀಜವಾದ ಮಾನ್ಸಾಂಟೋ ಬೀಜವನ್ನು ನಾವು ಧಿಕ್ಕರಿಸಿದ್ದೇವೆಂದೂ, ಇದರಿಂದ ನಮ್ಮ ಸ್ಟೇಟ್‌ಗೆ ಬರುವುದು ಬೇಡವೆಂದೂ ಅವರು ನಿಮಗೆ ಕಿವಿ ಕಚ್ಚಿರುವುದಾಗಿ ನಮಗೆ ತಿಳಿದುಬಂದಿದೆ.

ಇದೆಲ್ಲಾ ಶುದ್ಧ ಸುಳ್ಳು, ನಾನೇ ಮೊನ್ನೆ ಎಫ್‌ಕೆಸಿಯಿಂದ ಚಿಕನ್ ತರಿಸಿದ್ದೆ. ಬಾಯಲ್ಲಿ ಇಟ್ಟ ತಕ್ಷಣ ಕರಗಿಹೋಯ್ತು. ನಮ್ಮಲ್ಲಿ ಚಿಕನ್ ಬಿರಿಯಾನಿ ತಿಂದರೆ ಇಡೀ ದಿನ ಹೊಟ್ಟೆ ಭಾರವಾಗಿರುತ್ತೆ. ಅಂಥಾದ್ರಲ್ಲಿ ನಿಮ್ಮೋರು ಅದೆಷ್ಟು ಚೆನ್ನಾಗಿ ಮಾಡ್ತೀರಪ್ಪ! ಇರಲಿ. ಅಂಥ ಎಫ್‌ಕೆಸಿಯನ್ನು ನಮ್ಮ ಫಾರ್‍ಮಸ್ ಯಾಕೆ ಒಡೆದುಹಾಕಿ ಕೈಯಾರೆ ಚಿಕನ್ ತಿನ್ನೋದನ್ನ ಹಾಳುಮಾಡಿಕೊಂಡರು. ಯಾರೋ ಒಬ್ರು ಪ್ರೋಫೆಸರ್ ಇಂಥ ದುಷ್ಟ ಕ್ರಿಯೆಗಳಲ್ಲಿ ತೊಡಗಿರುವ ಸುದ್ದಿಯನ್ನು ನಮ್ಮ ಇಂಟೆಲಿಜೆನ್ಸ್ ವರದಿ ಮಾಡಿದೆ. ಬೀಜದ ವಿರುದ್ಧವೂ ಅವರದೇ ಕಿತಾಪತಿಯಂತೆ. ಅವರ ಬೀಜದ ಬಗ್ಗೆ ನಾನು ಕಂಪ್ಯೂಟರ್‌ನಲ್ಲಿ ಅಗಾಧವಾಗಿ ತಿಳಿಯಬೇಕಿದೆ.

ಆದರೆ ಇವೆಲ್ಲಾ ನೆಡೆದದ್ದು ಹಿಂದಿನ ಫೀಮೇಲ್ ಗೌರ್‍ನ್‌ಮೆಂಟ್ ಇದ್ದಾಗ ಈಗ ಎಲ್ಲವೂ ಸರಿಯಾಗಿದೆ. ಹಾಗಾಗಿ ನೀವು ಅದಕ್ಕೆಲ್ಲಾ ಭಯಪಡಬೇಕಿಲ್ಲ. ದಯವಿಟ್ಟು ತಾವು ಸುಳ್ಳುಸುದ್ದಿಗಳಿಗೆ ಕಿವಿಗೊಡಬೇಡಿ. ಖಂಡಿತಾ ಬರಲೇಬೇಕೆಂದು ಪ್ರಾರ್ಥನೆ. ಆ ನಾಯ್ಡು ವಿಚಾರ ಏನು ಅನ್ನುವುದನ್ನು ನೀವು ಬಂದಾಗ ಖುದ್ದಾಗಿ ತಿಳಿಸುತ್ತೇನೆ. ಆತನ ಬೆಲೆ ಏನು ಎಂಬುದಕ್ಕೆ ಆತ ಕಟ್ಟಿಸಿರುವ ಕಳಪೆ ಫ್ಲೈ ಓವರ್‌ಗಳೇ ಸಾಕ್ಷಿ.

ನೀವು ಬಂದಾಗ ಒಂದು ರೌಂಡ್ ಫ್ಲೈ ಓವರ್ ಮೇಲೆ ಸುತ್ತಾಡೋಣ ಹಿಲರಿಯವರನ್ನೂ ಕರೆತನ್ನಿ. ಮೋನಿಕಾ ವಿಷಯ ಎಲ್ಲಿಗೆ ಬಂತು. ಇರಲಿ, ಆ ಬಗ್ಗೆ ಅಪಪ್ರಚಾರ ಹಬ್ಬಿದ್ದು ಕೇಳಿ ತುಂಬಾ ದುಃಖವಾಯ್ತು. ಕೆಲವಾರು ವರ್ಷಗಳ ಹಿಂದೆ ಒಬ್ಬ ಆಕ್ಟ್ರೆಸ್ ಹೆಸರೊಂದಿಗೆ ನನ್ನ ಬಗ್ಗೆಯೂ ಇಂಥದೇ ಅಪಪ್ರಚಾರವಾಗಿತ್ತು. ಅದನ್ನು ಅದಷ್ಟು ಬೇಗ ಬಗೆಹರಿಸಿಕೊಳ್ಳಿ.

ಬಾಕಿ ವಿಷಯ ಮುಖತಃ ಭೇಟಿಯಲ್ಲಿ.

ವಿ.ಸೂ: ನಾಯ್ಡು ಬಗ್ಗೆ ಕೆಲವು ರಹಸ್ಯಗಳಿವೆ. ಅದನು ಈ ಪತ್ರದಲ್ಲಿ ಬಹಿರಂಗವಾಗಿ ಬರೆಯುವ ಹಾಗಿಲ್ಲ. ಏನಿದ್ದರೂ ಮುಖತಃ

ಇತಿ ನಿಮ್ಮ ಅತೀವ ನಿರೀಕ್ಷೆಯ ಆಗಮನಾಭಿಲಾಷಿ,
ಕಿಷನ್
ಚೀಫ್ ಮಿನಿಸ್ಟರ್ ಆಫ್ ಕರ್ನಾಟಕ ಸ್ಟೇಟ್ ಆಫ್ ಇಂಡಿಯಾ.
 

 ಹಳೆಯ ರಗಳೆಗಳು

ನಿಮಗೆ ಮಲ್ಯ ಬಿಯರ್ ಇಷ್ಟ ಅಲ್ಲವೇ....?

ದೇವರೇ ಇವರನ್ನು ಕ್ಷಮಿಸು.... ಯಾಕೆಂದರೆ!?

ನಬೀ... ಯೇ ಸಬೀ ಕ್ಯಾ ಹೆ...

ಅಯೋಧ್ಯೆಯಲ್ಲಿ ಪಾರ್ಕು ಕಟ್ಟಿಸಿದ್ರೆ ಯುವಕರು ಅಡ್ಡದಾರಿ ಹಿಡೀತಾರೆ!!!

ಪ್ರೀತಿ, ಪ್ರೇಮಕೆ ಜೈ ಜೈ! ಸನ್ಯಾಸತ್ವಕೆ ಗುಡ್ ಬೈ!!

`ದುಡ್ಡು ತಗೊಂಡ್ರೆ ಅದು ಲಂಚ ಅಲ್ಲ'

ಎಲ್ಲಿ? ಬಾಯಿ ತೆಗೇರಿ....

ಚೆನ್ನಾಗಿರೋ ಕತೆ ಬೇಕಂದ್ರೆ ಚೆನ್ನೈಯೇ ಸರಿ...!

ಯಾರ್ರೀ ಬೆಂಗ್ಳೂರ್....ರಾಂಡಿ ಹೈದರಾಬಾದ್

ಪರಿಹಾರ ಸತ್ತೋರಿಗಾ....ಇದ್ದೋರಿಗಾ ?

ಹೃತಿಕ್ ಮದುವೇಲಿ ನನ್ನ ತಾಯಿ ಅಂತ ಕರೀತಿಯೇನೋ?!

 

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com