ಫೋಬಿಯಾ ನಿಮಗೆ ಯಾವ ಭಯ?
ಸಾಮಾನ್ಯವಾಗಿ ನಮಗೆಲ್ಲರಿಗೂ ಒಂದಲ್ಲ ಒಂದು
ಫೋಬಿಯಾ ಇದ್ದೇ ಇರುತ್ತದೆ. ಉದಾಹರಣೆಗೆ ಎತ್ತರದ ಕಟ್ಟಡ
ಅಥವಾ ಬೆಟ್ಟದ ತುದಿಯಲ್ಲಿ ನಿಂತು ಕೆಳ ನೋಡಿದರೆ ಎಂಥವರಲ್ಲೂ ಭಯ
ಆವರಿಸುತ್ತದೆ. ಇಂಥ ಫೋಬಿಯಾ ನೆಗ್ಲಿಜೆಬಲ್.
ರಹೀಂ
ಉಜಿರೆ
raheem@vikrantakarnataka.com
ಫೋಬಿಯಾಗಳ ಬಗ್ಗೆ ನೀವು
ಕೇಳಿರಬಹುದು. ಮೂರು ವಿಧದ ಫೋಬಿಯಾಗಳಿವೆ. ಸಿಂಪಲ್ ಫೋಬಿಯಾ,
ಸೋಶಿಯಲ್ ಫೋಬಿಯಾ ಮತ್ತು ಅಗೊರ ಫೋಬಿಯಾ. ಕೆಲವು
ವಸ್ತುಗಳು/ಜೀವಿಗಳು ಅಥವಾ ಪರಿಸ್ಥಿತಿಯ ಬಗ್ಗೆ ವಿನಾ ಕಾರಣ ಭಯ
ಪಡುವುದು ಸಿಂಪಲ್ ಫೋಬಿಯಾದ ಲಕ್ಷಣ.
ಇತರರು ನಮ್ಮ ಬಗ್ಗೆ
ಕಾಮೆಂಟ್ ಮಾಡಬಹುದಾ ಎಂದು ಭಯ ಪಡುವುದು, ನಾಲ್ಕು ಜನರಿರುವ
ಕಡೆ ಹೋಗಲು ಭಯಪಡುವುದು-ಇತ್ಯಾದಿ ಸೋಶಿಯಲ್ ಫೋಬಿಯಾದ
ಲಕ್ಷಣ.
ದೈಹಿಕ ಅಥವಾ ಮಾನಸಿಕ ನ್ಯೂನತೆಗಳಿರುವ
ವ್ಯಕ್ತಿಗಳ ವಿನಾ ಕಾರಣದ ಭಯ ಅಗೋರ ಫೋಬಿಯಾದಡಿ ಬರುತ್ತದೆ.
ನೂರಕ್ಕೂ ಹೆಚ್ಚು ಭಯಗಳಿಂದ ಜನರು ಬದುಕುತ್ತಿದ್ದಾರೆ ಅಂತಾರೆ
ಮನಃಶಾಸ್ತ್ರ ತಜ್ಞರು.
ಸಾಮಾನ್ಯವಾಗಿ ನಮಗೆಲ್ಲರಿಗೂ
ಒಂದಲ್ಲ ಒಂದು ಫೋಬಿಯಾ ಇದ್ದೇ ಇರುತ್ತದೆ. ಉದಾಹರಣೆಗೆ
ಎತ್ತರದ ಕಟ್ಟಡ ಅಥವಾ ಬೆಟ್ಟದ ತುದಿಯಲ್ಲಿ ನಿಂತು ಕೆಳ ನೋಡಿದರೆ
ಎಂಥವರಲ್ಲೂ ಭಯ ಆವರಿಸುತ್ತದೆ. ಅದು ನೆಗ್ಲಿಜಿಬಲ್.
ಇನ್ನೊಂದು ವಿಷಯ; ಹಾವನ್ನು
ಅಕಸ್ಮಾತ್ತಾಗಿ ನೋಡಿದಾಗ ಯಾರಿಗೂ ಒಂದು ಕ್ಷಣ ಭಯವಾಗುತ್ತದೆ;
ಆದರೆ ಇದು ಫೋಬಿಯಾ ಅನ್ನಿಸಿಕೊಳ್ಳುವುದಿಲ್ಲ. ಒಂದು ವಸ್ತುವಿನ ಬಗ್ಗೆ
ಜೀವಿಯ ಬಗ್ಗೆ ಅಥವಾ ಪರಿಸ್ಥಿತಿಯ (ಉದಾ ಇರುಳು, ಯಾರೂ ಇಲ್ಲದಿರುವ
ಸ್ಥಳ ಇತ್ಯಾದಿ) ಬಗ್ಗೆ ಪದೇ ಪದೆ ಭಯಪಡುವುದು-ಅವನ್ನು ನೋಡದೆಯೂ
ನೆನೆದೇ ಭಯಪಡುವುದು-ಫೋಬಿಯಾ ಅನ್ನಿಸಿಕೊಳ್ಳುತ್ತದೆ.
ನಿಮಗೆ ಅಂತ್ರೊಪೋ ಫೋಬಿಯಾ
(ಜನರೊಂದಿಗೆ ಬೆರೆಯಲು-ಮಾತನಾಡಲು ಭಯಪಡುವುದು)
ಇದ್ದರೆ ಹಿಂಜರಿಯುವ ಬದಲು ಜನರೊಂದಿಗೆ ಹೆಚ್ಚು ಹೆಚ್ಚು ಬೆರೆಯಲು-ಮಾತನಾಡಲು
ಪ್ರಯತ್ನಿಸಿ. ಹೀಗೆ ಮಾಡುತ್ತಿದ್ದರೆ ಒಂದು ದಿನ ನಿಮ್ಮ ಅಂತ್ರೊಪೋಫೋಬಿಯಾ
ಹೊರಟು ಹೋಗುತ್ತದೆ ಅನ್ನುತ್ತಾರೆ ಮನಃಶಾಸ್ತ್ರಜ್ಞರು. ಹಾಗೆಯೇ
ನಿಮಗೆ ಕತ್ತಲೆಯ ಭಯ ಇದ್ದರೆ, ಕತ್ತಲಿಗೆ ಹೆಚ್ಚು ಹೆಚ್ಚು ಮುಖಾಮುಖಿಯಾಗುವ
ಮೂಲಕ ಈ ಭಯವನ್ನು ಹೋಗಲಾಡಿಸಬಹುದು.
ಕ್ಷುಲ್ಲಕ ಫೋಬಿಯಾಗಳ
(ಉದಾ: ಅಂತೋಫೋಬಿಯಾ-ಹೂವಿನ ಭಯ!) ಬಗ್ಗೆ
ತಲೆಕೆಡಿಸಿಕೊಳ್ಳಬೇಕಿಲ್ಲ. ಆದರೆ ಕೆಲವು ರೀತಿಯ ಸೋಶಿಯಲ್ ಫೋಬಿಯಾ
(ಉದಾ: ಜನರೊಂದಿಗೆ ಬೆರೆಯಲು ಭಯ) ಗಳನ್ನು ಗೆಲ್ಲದಿದ್ದರೆ
ಅದರಿಂದ ನಮಗೇ ನಷ್ಟ.
ಹೆಚ್ಚಿನ ಫೋಬಿಯಾಗಳು
ನಿರ್ಲಕ್ಷಿಸುವಂಥವುಗಳೇ. ಅವುಗಳ ಪೈಕಿ ತಮಾಷೆ ಅನ್ನಿಸುವ
ಕೆಲವೊಂದನ್ನು ಇಲ್ಲಿ ನೀಡಲಾಗಿದೆ.
ಅಬ್ಲುಟೋ ಫೋಬಿಯಾ (Ablutophobia)
ಅಂದರೆ ಹೂವಿಗೆ ಭಯಪಡುವುದು!
ಬಿಬಿಲಿಯೋಫೋಬಿಯಾ(Bibiliophobia)
ಪುಸ್ತಕಕ್ಕೆ ಭಯಪಡುವುದು.
ಕ್ಯಾಲಿಜೀನ್ ಫೋಬಿಯಾ(Caligynephobia)
-ಸುಂದರ ಹುಡುಗಿ/ಮಹಿಳೆಯನ್ನು ನೋಡಿ ಭಯಪಡುವುದು.
ಡೆಂಟೋಫೋಬಿಯಾ(Dentophobia)-ದಂತ
ವೈದ್ಯರಿಗೆ ಭಯಪಡುವುದು (ಭಯ ಪಡಬೇಕಾದದ್ದೇ
ಅಂತೀರೇನೋ)
ಎಕೋಫೋಬಿಯಾ(Ecophobia)-ಮನೆಗೆ
ಹೆದರುವುದು (ಮದುವೆಯಾದ ಗಂಡಸರಿಗೆ ಈ ಭಯವಿರಬಹುದೇ?)
ಇರೋಟೋಫೋಬಿಯಾ(Erotophobia)-ಪ್ರೇಮದ
ಭಯ!
ಗಮೋಫೋಬಿಯಾ(Gamophobia)-ಮದುವೆಯ
ಭಯ (ಇರಬೇಕಾದದ್ದೇ?)
ಫಿಲೆಮೆಟೊಫೋಬಿಯಾ(Phiematophobia)-ಮುತ್ತಿನ
ಭಯ.
ಸೆಲೆನೊಫೋಬಿಯಾ(Selenophobia)-ಚಂದ್ರನ
ಭಯ.
ಔರೊಫೋಬಿಯಾ(Aurophobia)-ಚಿನ್ನದ
ಬಗ್ಗೆ ಭಯ.
ಚಿರಾಪ್ಟೊಫೋಬಿಯಾ(Chiraptophobia)-ಸ್ಪರ್ಶಿಸಿಕೊಳ್ಳುತ್ತೇನೋ
ಎಂಬ ಭಯ.
ಗೆಲಿಯೊಫೋಬಿಯಾ(Geliophobia)-ನಗುವಿಗೆ
ಭಯಪಡುವುದು.
ಲ್ಯೂಕೊಫೋಬಿಯಾ(Leukophobia)-ಬಿಳಿ
ಬಣ್ಣಕ್ಕೆ ಭಯಪಡುವುದು!
ತಮಾಷೆಯಾಗಿದೆಯೇ?
ಇನ್ನಷ್ಟು