ಒಸಿಡಿ ಅಂದರೆ ಗೊತ್ತಾ?
ಒಂದು ಬಟ್ಟೆ ತೊಳೆಯಲು ಒಂದಿಡೀ ಸೋಪನ್ನು
ಬಳಸುವವರು, ಕ್ಷಣಕ್ಷಣಕ್ಕೂ ಕೈ-ಕಾಲಿಗೆ ನೀರು ಹಾಕಿ
ಸ್ವಚ್ಛಗೊಳಿಸುವವರು, ಯಾವಾಗ ನೋಡಿದರೂ ಬಟ್ಟೆ
ತೊಳೆಯುತ್ತಲೇ ಇರುವವರು, ಕಸವಿಲ್ಲದಿದ್ದರೂ
ಕಸಗುಡಿಸುತ್ತಲೇ ಇರುವವರು ಓಸಿಡಿಯಿಂದ ನರಳುತ್ತಿದ್ದಾರೆಂದೇ
ಅರ್ಥ!
ಪಿ.ಯು.ಸಿ ಓದುತ್ತಿದ್ದ ಸಪ್ನಾಳಲ್ಲಿ ಒಂದು ಸಮಸ್ಯೆಯಿತ್ತು. ಅದೇನೆಂದರೆ
ಅವಳು ಪ್ರತಿದಿನ ನಾಲ್ಕೈದು ಗಂಟೆ ಬಾತ್‌ರೂಮ್‌ನಲ್ಲಿ ಕಾಲ
ಕಳೆಯುತ್ತಿದ್ದಳು! ಬಾತ್ ರೂಮ್‌ನಲ್ಲಿರುವಷ್ಟೂ ಹೊತ್ತು ಅವಳು
ತನ್ನ ಕೈಕಾಲುಗಳನ್ನು ತೊಳೆಯುತ್ತಲೇ ಇರುತ್ತಾಳೆ. ಮಗಳ ಈ
ವರ್ತನೆ ತಂದೆ-ತಾಯಿಗೆ ಮೊದಮೊದಲು ಅಸಮಾಧಾನ ತಂದರೂ, ಕೊನೆಗೆ
ಅವರೂ ಅವಳ ಈ ಅಭ್ಯಾಸಕ್ಕೆ ಹೊಂದಿಕೊಂಡರು.
ಕಾಲೇಜಿಗೆ ಹೋಗುವಾಗ ಆರಂಭವಾದ ಈ ವರ್ತನೆ ಹಾಗೆಯೇ ಮುಂದುವರೆಯಿತು.
ಕೊನೆಗೆ ಮದುವೆಯಾದ ಮೇಲೂ ಅವಳು ಗಂಟೆಗಟ್ಟಳೆ ಕೈಕಾಲು
ತೊಳೆಯುವ ತನ್ನ ಅಭ್ಯಾಸವನ್ನು ಬಿಟ್ಟಿರಲಿಲ್ಲ. ಮದುವೆಗೆ ಮೊದಲು
ಇದನ್ನೆಲ್ಲ ನಿರ್ಲಕ್ಷಿಸುತ್ತಿದ್ದ ತಂದೆ ತಾಯಿಗೆ ಈಗ ಆತಂಕ ಶುರುವಾಯಿತು.
ಗಂಡನ ಮನೆಯಲ್ಲೂ ಈ ವರ್ತನೆಯನ್ನು ಪುನರಾವರ್ತಿಸಿದರೆ
ಅವರು ಏನೆಂದುಕೊಂಡಾರು? ಮಗಳಿಗೆ ಸಾಕಷ್ಟು ಬುದ್ಧಿ ಹೇಳಿದರು.
ಉಹುಂ, ಅವಳು ಸರಿ ಹೋಗಲಿಲ್ಲ. ಗಂಡನ ಮನೆಯಲ್ಲೂ ನಾಲ್ಕೈದು
ಗಂಟೆ ಬಾತ್ ರೂಮ್‌ನೊಳಗೇ ಕಾಲ ಕಳೆಯುವುದನ್ನು
ಮುಂದುವರೆಸಿದಳು. ಮದುವೆಯಾಗಿ ಒಂದು ವರ್ಷದವರೆಗೆ
ತಾಳ್ಮೆಯಿಂದಿದ್ದ ಗಂಡ, ಒಂದು ದಿನ ಹೆಂಡತಿಯ ಈ ವರ್ತನೆಗೆ ಬೇಸತ್ತು
ಡೈವರ್ಸ್ ಕೊಟ್ಟೇಬಿಟ್ಟ!
ಸಪ್ನಾ
ಯಾಕೆ ಹಾಗೆ ವರ್ತಿಸುತ್ತಾಳೆ ಎಂಬುದು ಅವಳ ತಂದೆ ತಾಯಿಗಾಗಲೀ, ವಿಚ್ಛೇದನ
ನೀಡಿದ ಗಂಡನಿಗಾಗಲಿ ಇವತ್ತಿಗೂ ಗೊತ್ತಿಲ್ಲ. ಒಂದೇ ಒಂದು ದಿನದ ಮಟ್ಟಿಗೂ
ಅವರು ಅವಳನ್ನು ವೈದ್ಯರಲ್ಲಿಗಾಗಲೀ, ಮನಃಶಾಸ್ತ್ರಜ್ಞರಲ್ಲಿಗಾಗಲೀ
ಕರೆದೊಯ್ದಿರಲಿಲ್ಲ. ಅಸಲಿಗೆ ಅದೊಂದು ಮನೋರೋಗ ಎಂಬ ಚಿಕ್ಕ ಜ್ಞಾನವೂ
ಅವರಿಗಿರಲು ಸಾಧ್ಯವಿರಲಿಲ್ಲ. ಕಾರಣ ಎರಡೂ ಮನೆಯವರು ಅನಕ್ಷರಸ್ಥರಾಗಿದ್ದರು.
ಸ್ವಪ್ನಾಳಂಥವರು ನಮ್ಮ ದೇಶದ ಒಟ್ಟು ಜನಸಂಖ್ಯೆಯಲ್ಲಿ
ಶೇ.೨.೫ರಷ್ಟು ಮಂದಿಯಿದ್ದಾರೆ! ಈ ಸಮಸ್ಯೆಗೆ ವೈದ್ಯಕೀಯ ಪರಿಭಾಷೆಯಲ್ಲಿ
Obsessive compulsive disorder (OCD)
ಎನ್ನುತ್ತಾರೆ. ಅಂದರೆ ಮಾಡಿದ ಕೆಲಸವನ್ನೇ ಮತ್ತೆ ಮತ್ತೆ ಮಾಡಬೇಕೆಂಬ
ಬಯಕೆ ಮನದಲ್ಲಿ ಮೂಡುವುದು. ಏನನ್ನಾದರೂ ಸ್ವಚ್ಛ ಮಾಡುತ್ತಲೇ
ಇರುವುದು, ಕೈಕಾಲು ತೊಳೆಯುವುದು, ಎಣಿಸುತ್ತಲೇ
ಇರುವುದು, ಮತ್ತೆ ಮತ್ತೆ ಪರೀಕ್ಷಿಸಿ ನೋಡುವುದು- ಒಸಿಡಿಯ ಪ್ರಮುಖ
ಲಕ್ಷಣಗಳು.
`
ಕೈಯಲ್ಲಿ
ಕೊಳೆಯಾಗಿದೆಯೇನೋ? `ಗ್ಯಾಸ್
ಆನ್ ಮಾಡಿ ಇಟ್ಟಿದ್ದೇನೇನೋ? `ಗೇಟ್‌ಗೆ
ಬೀಗ ಹಾಕಿದ್ದೇನೊ ಇಲ್ಲವೋ? `ಬಟ್ಟೆಯ
ಕೊಳೆ ಹೊಗಿದೆಯೊ ಇಲ್ಲವೊ? (ಬಟ್ಟೆ
ತೊಳೆದ ಮೇಲೂ) ಮುಂತಾದ ಯೋಚನೆಗಳು ಒಸಿಡಿ
ಸಮಸ್ಯೆಯುಳ್ಳವರಿಗೆ ಆಗಾಗ ಬರುತ್ತಿರುತ್ತದೆ. (ಈ ಎಲ್ಲಾ ಯೋಚನೆಗಳು
ಒಬ್ಬರಿಗೇ ಬರಬೇಕೆಂದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಯೋಚನೆ ಬರಬಹುದು)
ಕೆಲವೊಮ್ಮೆ ಅವರ ಈ ಅತಿಯಾದ ವರ್ತನೆ ಮನೆ ಸದಸ್ಯರಿಗೆ ಅಥವಾ
ಗೆಳೆಯರಿಗೆ ತೊಂದರೆ ನೀಡಬಹುದು. ಆದರೆ ಓಸಿಡಿಯಿಂದ
ನರಳುವವರಿಗೆ ಇದು ಅರ್ಥವಾಗುವುದೇ ಇಲ್ಲ. ಅವರನ್ನು
ಯಾವುದಾದರೂ ಒಂದು ಯೋಚನೆ ಆಳುತ್ತಲೇ ಇರುವುದರಿಂದ
ತಮ್ಮಿಂದ ಯಾರಿಗಾದರೂ ತೊಂದರೆಯಾಗಬಹುದು ಎಂಬ ಪರಿಜ್ಞಾನವೇ
ಅವರಿಗೆ ಇರುವುದಿಲ್ಲ. ಬದಲಾಗಿ ತಮಗೆ ಇಂತಹ ಯೋಚನೆಗಳು ಬಂದಾಗ
ಅದನ್ನು ಕಾರ್ಯರೂಪಕ್ಕೆ ತಾರದಿದ್ದರೆ ಅಥವಾ ತರಲಾಗದಿದ್ದರೆ
ಒಳಗೊಳಗೇ ಸಿಡಿಮಿಡಿ ಪ್ರಾರಂಭವಾಗುತ್ತದೆ; ಮಹತ್ವದ
ಕೆಲಸವೊಂದು ಬಾಕಿಯಿದೆಯೇನೋ ಎಂಬ ಚಿಂತೆ ಅವರ ಮನಸ್ಸನ್ನು
ಕಾಡತೊಡಗುತ್ತದೆ.
ಒಂದು ಬಟ್ಟೆ ತೊಳೆಯಲು ಒಂದಿಡೀ ಸೋಪನ್ನು ಬಳಸುವವರು,
ಕ್ಷಣಕ್ಷಣಕ್ಕೂ ಕೈ-ಕಾಲಿಗೆ ನೀರು ಹಾಕಿ ಸ್ವಚ್ಛಗೊಳಿಸುವವರು,
ಯಾವಾಗ ನೋಡಿದರೂ ಬಟ್ಟೆ ತೊಳೆಯುತ್ತಲೇ ಇರುವವರು,
ಕಸವಿಲ್ಲದಿದ್ದರೂ ಕಸಗುಡಿಸುತ್ತಲೇ ಇರುವವರು ಓಸಿಡಿಯಿಂದ
ನರಳುತ್ತಿದ್ದಾರೆಂದೇ ಅರ್ಥ!
ಮನೆಯಲ್ಲಿ
ಯಾರಿಗಾದರೂ ಇಂಥ `ಪುನರಾವರ್ತನೆ
ಮಾಡುವ ಅಭ್ಯಾಸವಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ಅಂತಹವರನ್ನು
ದಂಡಿಸುವುದೋ ಅಥವಾ ಅವರ ಮನನೋಯಿಸುವುದೋ ಖಂಡಿತ ಮಾಡಬೇಡಿ,
ಬದಲಾಗಿ ಅವರನ್ನು ಮನೋವೈದ್ಯರಲ್ಲಿಗೆ ಕರೆದೊಯ್ಯಿರಿ.
ಓಸಿಡಿ ಸಮಸ್ಯಯಿರುವವರಿಗೆ ಬಿಹೇವಿಯರಲ್ ಥೆರಪಿ, ಕಾಗ್ನಿಟಿವ್ ಥೆರಪಿ
ಅಥವಾ ಕಾಗ್ನೇಟಿವ್-ಬಿಹೇವಿಯರಲ್ ಥೆರಪಿ ಮೂಲಕ ಚಿಕಿತ್ಸೆ ನೀಡಲಾಗುತ್ತದೆ;
ಜತೆಗೆ ಔಷಧಿಯೂ ಇದೆ.
ಇನ್ನಷ್ಟು
ಉಸಿರಾಟ ನಿಯಂತ್ರಣ ಮತ್ತು ಅಭ್ಯಾಸದ ಅಗತ್ಯ
- ಶಾಲಿ
ವಿಜ್ಞಾನ-ಸುಜ್ಞಾನದ
ಕುರಿತು ಒಂದು ಚಿಂvನೆ
-
ಆರ್. ಪ್ರಭಾಕರ ಶೆಣೈ