Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Tuesday, 31 October 2006 01:30 PM

ಸಮ್ಮೋಹನ ಎಂಬ ಮಾಯೆ

 

ರಹೀಂ ಉಜಿರೆ

raheem@vikrantakarnataka.com

ಬಹುಶಃ ಸಮ್ಮೋಹನದ ಬಗ್ಗೆ ಇರುವಷ್ಟು ತಪ್ಪು ಕಲ್ಪನೆಗಳು ಇನ್ಯಾವ ವಿಷಯದ ಬಗ್ಗೆಯೂ ಇರಲಿಕ್ಕಿಲ್ಲ. ಸಮ್ಮೋಹನ ಅಥವಾ ಹಿಪ್ನಾಟಿಸಂ ಒಂದು ಬ್ರಹ್ಮವಿದ್ಯೆ, ಸಮ್ಮೋಹನ ತಜ್ಞನಿಗೆ (ಹಿಪ್ನಾಟಿಸ್ಟ್) ಅಗೋಚರ ಶಕ್ತಿ ಇರುತ್ತದೆ, ಅವನು ಯಾರನ್ನು ಬೇಕಾದರೂ ವಶೀಕರಣ ಮಾಡಿ, ತನಗಿಷ್ಟ ಬಂದಂತೆ ಅವರನ್ನು ಮಾಡಬಹುದು, ಮಾಟ-ಮಂತ್ರಕ್ಕೂ ಇದಕ್ಕೂ ವ್ಯತ್ಯಾಸವೇನಿಲ್ಲ- ಹೀಗೆ.
Hypnotism

ಮೇಲಿನ ಎಲ್ಲವೂ ಸತ್ಯಕ್ಕೆ ದೂರವಾದವೇ. ಮೊದಲನೆಯದಾಗಿ ಹಿಪ್ನಾಟಿಸಂ ಒಂದು ಮಾಮೂಲಿ ವಿದ್ಯೆ. ಈ ವಿದ್ಯೆಯನ್ನು ಯಾರು ಯಾರ ಮೇಲೆ ಬೇಕಾದರೂ ಪ್ರಯೋಗಿಸಬಹುದು. (ದೈಹಿಕವಾಗಿ ಮಾನಸಿಕವಾಗಿ ಆರೋಗ್ಯವಾಗಿರಬೇಕು) ವಶೀಕರಣ, ಮೆಸ್ಮರಿಸಂ, ಹಿಪ್ನಾಟಿಸಂ ಹೀಗೆ ಬೇರೆ ಬೇರೆ ಹೆಸರುಗಳಿಂದ ಕರೆಸಿಕೊಳ್ಳುವ ಸಮ್ಮೋಹನದಿಂದ ನಮಗೇನಾದರೂ ಲಾಭವಿದೆಯೇ? ಇದರಿಂದ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆಯೇ? ಎಂಬುದನ್ನು ನೋಡುವುದು ಇಲ್ಲಿಯ ಉದ್ದೇಶ.
 

ಹಿಪ್ನಾಟಿಸಂ ಎಂಬ ಪದ ಗ್ರೀಕ್‌ನ `ಹಿಪ್ನಾಸ್' ಎಂಬ ಶಬ್ದದಿಂದ ಬಂದಿದೆ. ಹಿಪ್ನಾಸ್ ಎಂಬುದು ಗ್ರೀಕ್ ದೇವತೆ (ನಿದ್ರಾ ದೇವತೆ)ಯ ಹೆಸರು. ಹಿಂದೆ ಗ್ರೀಕ್‌ನಲ್ಲಿ ಮಲಗುವ ದೇವಾಲಯಗಳಿದ್ದವಂತೆ. ಅಲ್ಲಿಗೆ ಬರುವ ರೋಗಿಗಳನ್ನು, ಮಾನಸಿಕ ಅಸ್ವಸ್ಥರನ್ನು ದೇವಾಲಯದ ಅರ್ಚಕ ಸಮ್ಮೋಹನಕ್ಕೊಳಪಡಿಸಿ ಅವರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದ ಎಂಬ ನಂಬಿಕೆಯಿದೆ.
 

ಸಮ್ಮೋಹನ ಅಥವಾ ಹಿಪ್ನಾಟಿಸ್‌ಗೆ ತಜ್ಞರು ಹಲವು ವ್ಯಾಖ್ಯೆಗಳನ್ನು ನೀಡಿದ್ದಾರೆ. ಸರಳವಾಗಿ ಹೇಳುವುದಾದರೆ ಇದು ವ್ಯಕ್ತಿಯೊಬ್ಬನ ಭಾವನೆ-ಅನಿಸಿಕೆಗಳನ್ನು ಹೊಡೆದೆಬ್ಬಿಸುವ ಒಂದು ಪ್ರಕ್ರಿಯೆ ಎನ್ನಬಹುದು. ನಮ್ಮ ಸುಪ್ತ ಮನಸ್ಸಿಗೆ ಅಗಾಧ ಶಕ್ತಿಯಿರುತ್ತದೆ. ಆದರೆ ಇದನ್ನು ಹೇಗೆ, ಯಾವ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಎಂಬುದು ಸಾಮಾನ್ಯ ರಾದ ನಮಗೆ ತಿಳಿದಿರುವುದಿಲ್ಲ. ಸಮ್ಮೋಹನ ತಜ್ಞ ನಮ್ಮನ್ನು ಸಮ್ಮೋಹನಕ್ಕೊಳಪಡಿಸಿ, ನಮ್ಮ ಮನೋಸಾಮರ್ಥ್ಯವನ್ನು ಉಪಯೋಗಿಸಿಕೊಂಡು, ಸಮಸ್ಯೆಗೆ ಪರಿಹಾರ ಸೂಚಿಸುತ್ತಾನೆ; ದೈಹಿಕ-ಮಾನಸಿಕ ಅಸ್ವಸ್ಥತೆಯನ್ನು ಗುಣಪಡಿಸುತ್ತಾನೆ.
 

ಸಮ್ಮೋಹನಕ್ಕೊಳಪಡಿಸುವ ವ್ಯಕ್ತಿಯನ್ನು ತಜ್ಞರು ಸಮ್ಮೋಹನ ಸ್ಥಿತಿಗೆ ಒಯ್ದು, ಬಳಿಕ ಸೂಚನೆಗಳನ್ನು ನೀಡಿ ಸಮಸ್ಯೆಗಳನ್ನು ಪರಿಹರಿಸುವುದು ರೂಢಿಯಲ್ಲಿರುವ ಕ್ರಮ. ಸಮ್ಮೋಹನ ಸ್ಥತಿಯಲ್ಲಿ ವ್ಯಕ್ತಿ ಕಣ್ಣು ಮುಚ್ಚಿರುತ್ತಾನಾದರೂ, ಇದು ನಿದ್ರೆಯಲ್ಲ. ಈ ಸ್ಥಿತಿಯಲ್ಲಿ ವ್ಯಕ್ತಿ ಎಚ್ಚರವಾಗಿಯೇ ಇರುತ್ತಾನೆ. ಬಾಹ್ಯ ಜಗತ್ತಿನ ಬಗೆಗಿನ ಜ್ಞಾನ ಜಾಗೃತ ಸ್ಥಿತಿಯಲ್ಲಿರುತ್ತದೆ. ವಿವೇಚನಾ ಜ್ಞಾನವೂ ಇರುತ್ತದೆ. ಏನಾದರೂ ಸಲಹೆ-ಸೂಚನೆಗಳನ್ನು ನೀಡಿದರೆ, ಅದಕ್ಕೆ ಪ್ರತಿಕ್ರಿಯಿಸುವ ಸಾಮರ್ಥ್ಯ ಸಮ್ಮೋಹನಕ್ಕೊಳಪಟ್ಟ ವ್ಯಕ್ತಿಗಿರುತ್ತದೆ. ಆದರೆ ನಿದ್ರೆ ಇದಕ್ಕೆ ತದ್ವಿರುದ್ಧ. ನಿದ್ರೆಯಲ್ಲಿದ್ದಾಗ ನಮಗೆ ಹೊರ ಜಗತ್ತಿನ ಜ್ಞಾನವಿರಲು ಸಾಧ್ಯವೇಇಲ್ಲ. ವಿವೇಚನಾ ಸಾಮರ್ಥ್ಯವಂತೂ ಇರುವುದೇ ಇಲ್ಲ.
 

ಸಮ್ಮೋಹನಕ್ಕೊಳಪಡುವ ವ್ಯಕ್ತಿಗೆ ಹಿಪ್ನಾಟಿಸ್ಟ್ ಮೊದಲು ನಿದ್ದೆಗೆ ಜಾರಲು ಸೂಚನೆಗಳನ್ನು ನೀಡುತ್ತಾನೆ. ಸೂಚನೆಗೆ ಸ್ಪಂದಿಸುವ ವ್ಯಕ್ತಿ ಕ್ರಮೇಣ ಕಣ್ಣನ್ನು ಮುಚ್ಚುತ್ತಾನೆ. ಸಮ್ಮೋಹನ ಸ್ಥಿತಿಗೆ ತಲುಪಿದ ಅನ್ನುವಾಗ ಒಂದು ವಿಧದ ಸುಪ್ತ ಸಂವಾದ ಪ್ರಾರಂಭವಾಗುತ್ತದೆ. ತುಂಬ ಖಾಸಗಿಯಾದ ಮುಕ್ತ ಸಂವಾದ ಇದು. ಈ ಹಂತದಲ್ಲಿ ಮನಸ್ಸಿನ ಮೇಲೆ ಯಾವುದೇ ಪರದೆಗಳಾಗಲೀ ಮುಖವಾಡಗಳಾಗಲೀ ಇರುವುದಿಲ್ಲ. ಈ ಸ್ಥಿತಿಯಲ್ಲಿ ಏನನ್ನು ಫೀಡ್ ಮಾಡಿದರೂ ಅದನ್ನು ಮನಸ್ಸು ಹಿಡಿದಿಟ್ಟುಕೊಳ್ಳುತ್ತದೆ. ಆ ವ್ಯಕ್ತಿಯ ಸಮಸ್ಯೆಗಳೇನು? ಸಮಸ್ಯೆಯ ಮೂಲವಿರುವುದೆಲ್ಲಿ? ಅದಕ್ಕೆ ಬೇಕಾದ ಪರಿಹಾರವೇನು? ಇತ್ಯಾದಿಗಳನ್ನವಲಂಭಿಸಿ, ಹಿಪ್ನಾಟಿಸ್ಟ್ ಸೂಚನೆಗಳನ್ನು ನೀಡುತ್ತಾನೆ. ಎಷ್ಟೇ ಪ್ರಸಿದ್ಧ ಹಿಪ್ನಾಟಿಸ್ಟ್ ಆದರೂ, ಅವರು ಮಾಡಬಹುದಾದ ಕೆಲಸ ಇಷ್ಟೇ.
 

ಕೊನೆಗೆ ವ್ಯಕ್ತಿಯನ್ನು ಸಮ್ಮೋಹನ ಸ್ಥಿತಿಯಿಂದ ಹೊರತರಲಾಗುತ್ತದೆ. ಈಗ ಅವನ ಮನಸ್ಸು ಜಾಗೃತ. ಸಮ್ಮೋಹನದ ಸಂದರ್ಭದಲ್ಲಿ ಅವನ ಮನದಲ್ಲಿ ದಾಖಲಾದ ವಿಚಾರಗಳು ಭದ್ರವಾಗಿರುತ್ತವೆ. ಸಮ್ಮೋಹನ ತಜ್ಞ ನೀಡುವ ಸೂಚನೆಗಳಿಗೆ ಸ್ಪಂದಿಸಲೇಬೇಕೆಂಬ ನಿಯಮವೇನಿಲ್ಲ. ಇಲ್ಲಿ ಸಮ್ಮೋಹನಕ್ಕೊಳಪಡುವವರ ಸಹಕಾರವೇ ಅತೀ ಅಗತ್ಯ. ಹಿಪ್ನಾಟಿಸಂ ಬಗ್ಗೆ ನಂಬಿಕೆಯೇ ಇಲ್ಲದವರ ಮೇಲೆ ಈ ವಿದ್ಯೆ ಪ್ರಯೋಗಿಸುವುದು ಸಾಧ್ಯವಿಲ್ಲ ಎಂಬುದನ್ನು ತಜ್ಞರೇ ಒಪ್ಪಿಕೊಳ್ಳುತ್ತಾರೆ. ಅಲ್ಲದೇ ಒತ್ತಾಯಪೂರ್ವಕವಾಗಿ ಯಾರನ್ನೂ ಸಮ್ಮೋಹನಕ್ಕೋಳಪಡಿಸಲಾಗದು.
 

ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗಿರುವವರನ್ನು, ಈ ವಿದ್ಯೆಯ ಮೇಲೆ ನಂಬಿಕೆ ಇರುವವರನ್ನು ಮಾತ್ರ ಸಮ್ಮೋಹನಕ್ಕೊಳಪಡಿಸಬಹುದು. ಕಾಯಿಲೆಯಿರುವವರಿಗೆ, ಮಾನಸಿಕ ಅಸ್ವಸ್ಥರಿಗೆ ತಮ್ಮ ಮನಸ್ಸನ್ನು ಕೇಂದ್ರೀ ಕರಿಸುವ ಶಕ್ತಿಯಿರುವುದಿಲ್ಲವಾದ್ದರಿಂದ ಅವರ ಮೇಲೆ ಸಮ್ಮೋಹನ ವಿದ್ಯೆ ಪರಿಣಾಮ ಬೀರದು. ಆರೋಗ್ಯವಂತ ವ್ಯಕ್ತಿಯೊಬ್ಬನ ಸರಾಸರಿ ಬುದ್ಧಿಮತ್ತೆ (Iಕಿ) ನೂರರಿಂದ ೧೨೦ರಷ್ಟಿರುತ್ತದೆ. ಕೆಲವರದು ೯೦ರಿಂದ ೭೦ರಷ್ಟಿರಬಹುದು. ಇಂಥವರನ್ನು ಸಮ್ಮೋಹನಕ್ಕೊಳಪಡಿಸುವುದು ತುಸು ಕಷ್ಟವೇ. ಇದಕ್ಕೂ ಕಡಿಮೆ Iಕಿ ಇರುವವರನ್ನು ಇನ್ನೂ ಕಷ್ಟ. ಬುದ್ಧಿಮತ್ತೆ ತೀರಾ ಕಡಿಮೆ ಇರುವ ವ್ಯಕ್ತಿಗಳಿಗೆ ಸೂಚನೆಗಳಿಗೆ ಸ್ಪಂದಿಸುವ ಸಾಮರ್ಥ್ಯವಿರುವುದಿಲ್ಲ. ಮೊದಲೇ ಹೇಳಿದಂತೆ ಆರೋಗ್ಯವಂತ ವ್ಯಕ್ತಿಗಳು ಹಿಪ್ನಾಟಿಸ್ಟ್ ನೀಡುವ ಸೂಚನೆಗಳನ್ನು ಸ್ವೀಕರಿಸಲೇಬೇಕೆಂದಿಲ್ಲ. ಅದನ್ನು ನಿರಾಕರಿಸುವ ಅಥವಾ ವಿರೋಧಿಸುವ ಅವಕಾಶವೂ ಅವರಿಗಿದೆ.

ಪ್ರಯೋಜನಗಳೇನು?

ಜಾಗತಿಕ ಯುದ್ಧಗಳಲ್ಲಿ ಪಾಲ್ಗೊಂಡು ಮನೋದೌರ್ಬಲ್ಯಕ್ಕೀಡಾದ ಹಲವು ಸೈನಿಕರನ್ನು ಸಮ್ಮೋಹನಕ್ಕೊಳಪಡಿಸಿ, ಅವರ ಮನಸ್ಸಿನಲ್ಲಿ ಬೇರೂರಿದ ಭಯಗಳನ್ನು ನಿವಾರಿಸಲಾಗಿತ್ತು. ಅಮೆರಿಕಾದಂತಹ ದೇಶಗಳಲ್ಲಿ ರೋಗಿಗಳನ್ನು ಸಮ್ಮೋಹನಕ್ಕೊಳಪಡಿಸಿ ಶಸ್ತ್ರ ಚಿಕಿತ್ಸೆ ನಡೆಸುವ ಪದ್ಧತಿ ಚಾಲ್ತಿಯಲ್ಲಿದೆ. ಹೆರಿಗೆಯ ಸಂದರ್ಭದಲಿ, ಗರ್ಭಪಾತ ಸಂದರ್ಭದಲ್ಲಿ ಸಮ್ಮೋಹನ ವಿದ್ಯೆಯನ್ನು ಬಳಸಲಾಗುತ್ತಿದೆ.
 

ಮಾದವಸ್ತು ಸೇವನೆ, ಸಿಗರೇಟು ಮುಂತಾದ ಚಟಗಳನ್ನು ಬಿಡಿಸಲು, ಆತಂರಿಕ ಭಯ ಹೋಗಲಾಡಿಸಲು, ಆತ್ಮವಿಶ್ವಾಸ ವೃದ್ಧಿಸಲು, ಕೀಳರಿಮೆಯನ್ನು ಕಿತ್ತು ಹಾಕಲು, ನೆನಪಿನ ಶಕ್ತಿಯನ್ನು ಹೆಚ್ಚಿಸಲು, ಮಾನಸಿಕ ಸಮಸ್ಯೆಗಳನ್ನು ಹೋಗಲಾಡಿಸಲು, ಲೈಂಗಿಕ ಸಮಸ್ಯೆಗಳಿಂದ ಹೊರಬರಲು - ಹಿಪ್ನಾಟಿಸಂ ಹೆಚ್ಚು ಬಳಕೆಯಲ್ಲಿದೆ.
 

ಕ್ರೀಡಾ ಕ್ಷೇತ್ರದಲ್ಲಿ ಹೆಸರು ಮಾಡಿದ ಅನೇಕ ಕ್ರೀಡಾಳುಗಳು, ನಟರು, ಬೇರೆ ಬೇರೆ ಕ್ಷೇತ್ರದಲ್ಲಿ ಹೆಸರು ಮಾಡಿದವರು ಸಮ್ಮೋಹನದ ಪ್ರಯೋಜನ ಪಡೆದುಕೊಂಡಿದ್ದನ್ನು ಒಪ್ಪಿಕೊಂಡಿದ್ದಾರೆ. ಅಷ್ಟೇ ಏಕೆ, ಜೀವಿತಾವಧಿಯಲ್ಲಿ ಸಾವಿರಾರು ಗಂಟೆಗಳ ಕಾಲ ನಾವು ನಮಗರಿವಿಲ್ಲದೇ ಸಮ್ಮೋಹನ ಸ್ಥಿತಿಯಲ್ಲಿರುತ್ತೇವಂತೆ!
 

ನಮ್ಮ ಮನೋ ಸಾಮರ್ಥ್ಯದ ಶೇ. ೧೦ರಷ್ಟನ್ನೂ ನಾವು ಉಪಯೋಗಿಸಿರುವುದಿಲ್ಲ.

ಸಮ್ಮೋಹನದಿಂದ ನಮ್ಮ ಮನೋ ಸಾಮರ್ಥ್ಯವನ್ನು ಗರಿಷ್ಠ ಪ್ರಮಾಣದಲ್ಲಿ ಉಪಯೋಗಿಸಬಹುದು. ಆತ್ಮ ಸಮ್ಮೋಹನ ಇದಕ್ಕಿರುವ ಅತ್ಯುತ್ತಮ ದಾರಿ. ಆತ್ಮ ಸಮ್ಮೋಹನವೆಂದರೆ, ನಮ್ಮ ಮೇಲೆ ನಾವೇ ಸಮ್ಮೋಹನ ವಿದ್ಯೆಯನ್ನು ಪ್ರಯೋಗಿಸುವುದು. ಹಾಗೆ ನೋಡಿದರೆ, ಆತ್ಮ ಸಮ್ಮೋಹನವೇ ಹೆಚ್ಚು ಪರಿಣಾಮಕಾರಿ ಕೂಡ. ಏಕಾಗ್ರತೆ ಸಾಧಿಸಲು, ಆತ್ಮವಿಶ್ವಾಸ ಹೆಚ್ಚಿಸಲು, ಕೆಟ್ಟ ಚಟಗಳನ್ನು ತ್ಯಜಿಸಲು ಸಮಸ್ಯೆಗಳಿಂದ ಹೊರಬರಲು, ಗುರಿ ಸಾಧಿಸಲು ಆತ್ಮಸಮ್ಮೋಹನ ಅತ್ಯುತ್ತಮ ವಿಧಾನ. ಆತ್ಮ ಸಮ್ಮೋಹನದ ಬಗ್ಗೆ ಆಸಕ್ತಿ ಇದ್ದರೆ ಸಂಬಂಧಪಟ್ಟ ತಜ್ಞರನ್ನು ಮಾತನಾಡಿಸಿ, ಅವರ ಸಲಹೆ- ಅನುಮತಿ ಪಡೆದು ನಂತರವೇ ಮುಂದುವರಿಯಿರಿ ಎಂಬುದನ್ನು ಒತ್ತಿ ಹೇಳಬಯಸುತ್ತೇನೆ.
 

ಇನ್ನಷ್ಟು

ಆರೋಪಿಯ ಬಾಯಿಂದ ಸತ್ಯ ಹೊರಡಿಸಬಹುದೆ?

ಖಾಯಿಲೆಯಲ್ಲದ ಖಾಯಿಲೆ, ಕೀಳರಿಮೆ

ಒಸಿಡಿ ಅಂದರೆ ಗೊತ್ತಾ?

ಉಸಿರಾಟ ನಿಯಂತ್ರಣ ಮತ್ತು ಅಭ್ಯಾಸದ ಅಗತ್ಯ - ಶಾಲಿ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com